ಭೂ ಗ್ರಹದ ರಕ್ಷಣೆ

ಭಾಗವತದಲ್ಲಿ ಬರುವ ಒಂದು ವಿಷಯ, ಭೂಮಿಯನ್ನು ನೀರಿನಲ್ಲಿ ಮುಳುಗಿಸಿದ ಅಸುರರಿಂದ ಸಂಕಷ್ಟಗಳಾಗಿ ಬ್ರಹ್ಮನಿಗೆ ಸೃಷ್ಟಿ ಕಾರ್ಯಕ್ಕೆ ಅಡಚಣೆಗಳಾದಾಗ ಬ್ರಹ್ಮನ  ಮೂಗಿನ ಹೊಳ್ಳೆಯ...

Saturday, March 7, 2026

ಭೂ ಗ್ರಹದ ರಕ್ಷಣೆ

ಭಾಗವತದಲ್ಲಿ ಬರುವ ಒಂದು ವಿಷಯ, ಭೂಮಿಯನ್ನು ನೀರಿನಲ್ಲಿ ಮುಳುಗಿಸಿದ ಅಸುರರಿಂದ ಸಂಕಷ್ಟಗಳಾಗಿ ಬ್ರಹ್ಮನಿಗೆ ಸೃಷ್ಟಿ ಕಾರ್ಯಕ್ಕೆ ಅಡಚಣೆಗಳಾದಾಗ ಬ್ರಹ್ಮನ  ಮೂಗಿನ ಹೊಳ್ಳೆಯಿಂದ ಭಗವಂತನು ವರಾಹಾವತಾರದಲ್ಲಿ ಹೊರಬಂದು ಬೃಹದಾಕಾರದಿಂದ ಬೆಳೆದು  ನಿಂತು  ಸಮುದ್ರದೊಳಗೆ ಹೊಕ್ಕಿ  ಭೂಮಿಯನ್ನು ಎತ್ತಿ ಸ್ವಸ್ಥಾನದಲ್ಲಿರಿದನೆಂದಿದೆ. ಆ ಸಮಯದಲ್ಲಿ  ಹಿರಣ್ಯಾಕ್ಷನ ಉಪಟಳ  ತ್ರಿಲೋಕದವರೆಗೂ ಸಹಿಸಲಾಗದ ಪರಿಸ್ಥಿತಿಯಲ್ಲಿ  ಹಿರಣ್ಯಾಕ್ಷನನ್ನು  ಭಗವಂತ ಕೊಂದನೆಂದಿದೆ.
ಅಂದರೆ  ಭೂಮಿ ಇಲ್ಲವಾದಾಗಲೂ   ದೇವಾಸುರರು  ಜೀವಿಸುತ್ತಿದ್ದರೆಂದಾಯಿತು. ಸಪ್ತ ಲೋಕವೆಂಬುದಿದೆ ಅದರಲ್ಲಿ  ಅನ್ಯ ಜೀವಿಗಳಿವೆ.ಎಲ್ಲವನ್ನೂ  ತನ್ನ ಹತೋಟಿಯಲ್ಲಿಟ್ಟುಕೊಂಡಿರುವ ಮೂಲ ಶಕ್ತಿ ಒಂದೇ ಆಗಿದೆ. ಮೂಲಪುರುಷನೇ ಅವನಾಗಿದ್ದಾನೆ. ಅವನಿಂದಲೇ  ಜನ್ಮ ಪಡೆದ ದೇವಾಸುರರು,ಮಾನವರು,ಜೀವ ಜಂತು ಚರಾಚರಗಳೂ  ತಮ್ಮದೇ ಆದ  ದಾರಿಯಲ್ಲಿ ನಡೆದರೂ  ಮೂಲದಿಂದ ‌ಬೇರೆಯಾಗದು. 
ಹೀಗಾಗಿ ಆಧ್ಯಾತ್ಮ ಆದಿ ಆತ್ಮ ಆದಿ ದೇವ,ಆದಿ ಪುರುಷ ಶಕ್ತಿಯೆಡೆಗೆ‌  ನಡೆಯುವುದು ಅಧ್ಯಾತ್ಮವಾಗಿದೆ.‌

ಎಷ್ಟೋ ಪುರಾಣಗಳ ಕಥೆಯಲ್ಲಿ  ಆಧ್ಯಾತ್ಮ ಆದಿ ಭೌತಿಕ ಗಳ  ಸಮಾಗಮವಾಗಿದೆ. ಅದರ ಅರಿವು ಅಲ್ಪ ಸ್ವಲ್ಪ ಮಾನವ ಅರಿತು ನಡೆದು ಮಹಾತ್ಮರಾಗಿರುವರು. 
ಅಮಾನುಷ ಶಕ್ತಿ‌  ಜಗತ್ತನ್ನು ಆಳುತ್ತದೆ.‌ಆಳುವಾಗ  ಧರ್ಮ ಸೂಕ್ಮವಾಗಲಿ ಸತ್ಯವಾಗಲಿ  ತಪ್ಪಿದ್ದರೆ‌  ಆಳಾಗಿ ಜನಿಸೋದನ್ನು ತಪ್ಪಿಸಲಾಗದು. 
ಈಗಲೂ ನಾವೆಲ್ಲರೂ ಆಳುಗಳೇ ಆಗಿದ್ದರೂ ಅರಸರಾಗುವ ಕನಸನ್ನು ಕಾಣುತ್ತಾ‌ ಜೀವ ಹೋಗುತ್ತದೆ‌ ಮತ್ತೆ ಬರುತ್ತದೆ.ಕಾಲಮಾನಕ್ಕೆ ತಕ್ಕಂತೆ ಕೆಲವುಬದಲಾವಣೆ ಭೂಮಿಯಲ್ಲಾದರೂ  ಅನ್ಯಗ್ರಹದಲ್ಲಾಗಿರದು.‌