ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು. ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿ...

Friday, March 27, 2026

ರಾಮರಾಜ್ಯ

ನಮ್ಮನ್ನು ನಡೆಸುತ್ತಿರೋದು ರಾಮನೆ ರಾವಣನೆ?

ಶ್ರೀ ರಾಮನವಮಿಯ ಶುಭಾಶಯಗಳು
ರಾಮರಾಜ್ಯದ ಕನಸಿನಲ್ಲಿ ಮುಂದೆ ನಡೆಯುತ್ತಿರುವ ಭಾರತದಲ್ಲಿ  ಸಾಕಷ್ಟು ರಾಮರುಗಳು ಶ್ರಮಪಟ್ಟರೂ ಅಷ್ಟೇ ರಾವಣರ ಜನ್ಮಗಳಾಗುತ್ತಿವೆ.
ರಾಮರಾವಣರ ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಮಾನವರಿಗಿದ್ದರೆ ರಾಮ ಯಾರು ರಾವಣ ಯಾರೆಂಬುದು ಕಣ್ಣಿಗೆ ಕಾಣುತ್ತಿತ್ತು.ಅದನ್ನು ಶಿಕ್ಷಣದಲ್ಲಿಯೇ ಗುರುತಿಸದಂತೆ ಮಾಡಿಕೊಂಡು ಆಳಿಕೊಂಡಿರುವ ರಾಜಕೀಯ ಶಕ್ತಿಯ ಮುಂದೆ ಯಾವುದೇ ರಾಮನ ಗುಡಿ ಗೋಪುರ ರಾಮನ ತತ್ವವನ್ನು ತಿಳಿಸಲಾರದು.ಆದರೂ ಅಂತಹ ಸ್ಥಾನಮಾನವನ್ನು  ಕೊಟ್ಟಿರುವಾಗ ಶ್ರೀ ರಾಮನ ರಕ್ಷಣೆ ಇದ್ದೇ ಇರುತ್ತದೆ.
ಭಕ್ತಿಯೋಗದ ಮುಂದೆ ಯಾವ ರಾಜಕೀಯ ಶಕ್ತಿ ನಿಲ್ಲದು.
ಒಗ್ಗಟ್ಟು  ತತ್ವದೊಳಗಿದ್ದರೆ ಶಾಂತಿ.ತಂತ್ರವೇ ಮೇಲೆದ್ದರೆ ಕ್ರಾಂತಿ. 
ಕ್ರಾಂತಿಯ ನಂತರ ಶಾಂತಿ ನೆಲೆಸಬಹುದೆ?
ಹಿಂದೆ ಯುದ್ದಗಳಾದವು ಸಾಕಷ್ಟು  ಜೀವ ಪ್ರಾಣ ಹೋದವು. ನಂತರ ಸೃಷ್ಟಿ ಬೆಳೆಯಿತು. ಜನಸಂಖ್ಯೆಸ್ಪೋಟವೂ ಆಯಿತು. ಇಷ್ಟಾದರೂ ಒಳಗಿರುವ ತತ್ವಜ್ಞಾನ ಹಿಂದುಳಿದಿದೆ ಎಂದರೆ ನಮ್ಮ ಸ್ವಾರ್ಥ ಅಹಂಕಾರ ಪೂರಿತ ರಾಜಕೀಯ ದೆಡೆಗೆ ನಮ್ಮ ಮನಸ್ಸು ಹರಿದು ಹೊರನಡೆಯಿತೇ ಹೊರತು ನಮ್ಮ ಸ್ವಂತ ಬುದ್ದಿ ಜ್ಞಾನವನ್ನು ಬೆಳೆಸುವ ಶಿಕ್ಷಣ ಕೊಡದೆ ಆಳಿದವರನ್ನು  ಇಂದು ದ್ವೇಷ ಮಾಡುತ್ತೇವೆ. ಆದರೆ ನಮ್ಮ ಜೀವನ ನಡೆದಿರೋದೆ  ಅದೇ ಶಿಕ್ಷಣದಲ್ಲಿ ಎಂದರೆ  ದ್ವೇಷದಿಂದ ರಾಮನ ಕಾಣಬಹುದೆ? ರಾವಣನನ್ನೆ?
ಸೀತೆಯ ಅಪಹರಣಕ್ಕೆ  ಕಾರಣವಾಗಿದ್ದ ರಾವಣನ ಹಿಂದಿನ ದ್ವೇಷದಿಂದ  ದೊಡ್ಡ ಯುದ್ದವೇ ನಡೆಯಿತು. ಆದರೂ ರಾವಣನ ಶಿವಭಕ್ತಿ ಶ್ರೀ ರಾಮಚಂದ್ರನಂತಹ ಧರ್ಮಾತ್ಮನನ್ನೇ ಅಲ್ಲಾಡಿಸುವಂತಿತ್ತು. ಕೊನೆಯಲ್ಲಿ ಶ್ರೀ ರಾಮ ಶಿವನನ್ನು ಪೂಜಿಸಿ  ರಾವಣನ ವಧೆ ಮಾಡಬೇಕಾಯಿತೆನ್ನುವುದು ಪುರಾಣ ಸತ್ಯ.
ಸತ್ಯ ದ ಹಿಂದಿನ ಯೋಗವನ್ನು ಅರ್ಥ ಮಾಡಿಕೊಳ್ಳಲು ‌ಜ್ಞಾನ‌ಬೇಕಿದೆ. ಅಂದರೆ  ದೇವಾನುದೇವತೆಗಳಿಗೂ  ಈ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಲು  ಜನಬಲ ಅಧಿಕಾರ ಬಲದ ಜೊತೆಗೆ ಜ್ಞಾನದ ಬಲ ಅಗತ್ಯವಿತ್ತು. 
ಅಜ್ಞಾನದ ವಶದಲ್ಲಿ ಓಡುತ್ತಿರುವ‌ಮನಷ್ಯನ‌ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಯೋಗ ಶಕ್ತಿಯಿಲ್ಲದೆ ಭೋಗದೆಡೆಗೆ  ವೈಭವದ  ಆಚರಣೆಗಳನ್ನು  ಮಾಡಿದರೆ ದೈವತ್ವದೆಡೆಗೆ  ಸಾಗಬಹುದೆ?

ಕಲಿಕೆಯಲ್ಲಿ  ಭೌತಿಕದ ಸತ್ಯ ತಿಳಿಸಬಹುದು.ಆದರೆ ಆಧ್ಯಾತ್ಮಿಕ ಶಕ್ತಿಯನ್ನು ಗುರುತಿಸದಿದ್ದರೆ  ವ್ಯರ್ಥ.
ಇದು ಶ್ರೀ ರಾಮನಂತಹ ಮಹಾತ್ಮನನ್ನು ಧರ್ಮಾತ್ಮನನ್ನು, ಪರಮಾತ್ಮನನ್ನು  ಪ್ರಜಾಪಾಲಕನನ್ನು  ಮಹಾರಾಜನನ್ನು  ಕೇವಲ ಒಬ್ಬ  ಮನುಷ್ಯರೂಪದ ವ್ಯಕ್ತಿ ಎಂದು ಕಾಣದೆ  ಮಹಾಶಕ್ತಿ  ವಿಷ್ಣುವಿನವತಾರ ಪುರುಷ ಪರಮಾತ್ಮನೆಂದು  ಕಂಡು  ಆರಾಧಿಸಿದ ದಾಸರ  ಸಾಲಿನಲ್ಲಿ  ನಿಲ್ಲಿಸಬಹುದೆ?

ಪರಮಸತ್ಯ ಧರ್ಮ ಕ್ಕೆ ಶರಣಾದವರು ದಾಸರಾದವರು ಕೇವಲ ಶ್ರೀ ರಾಮ ಜಪದಿಂದಲೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡರೆಂದರೆ  ಶ್ರೀ ರಾಮ ವ್ಯಕ್ತಿಯಲ್ಲ ಮಹಾಶಕ್ತಿ.
ಈಗಲೂ ರಾಮನ ಭಕ್ತರ ಶಕ್ತಿ  ಯೋಗದಿಂದ ಕೂಡಿದರೆ ರಾಮರಾಜ್ಯವಾಗುತ್ತದೆ. ಯಾವಾಗಿದು ಭೋಗಕ್ಕೆ ಎಳೆಯುವುದೋ ಅದೇ  ರಾವಣನೆಡೆಗೆ ನೆಡೆಸುತ್ತದೆ.
ರಾವಣನಂತಹ ಮಹಾಜ್ಞಾನಿ  ಈಗಿಲ್ಲ. ಆದರೂ ಅವನನ್ನು ದ್ವೇಷ ಮಾಡುವ  ರಾಜಕೀಯವಿದೆ. 
ದೇಶವನ್ನು ಸ್ಮಾರ್ಟ್ ಮಾಡಲು  ಹಣ ಬೇಕು. ಅದೇ ದೇಶವನ್ನು  ಧರ್ಮದಿಂದ ರಕ್ಷಣೆ ಮಾಡಲು ಸತ್ಯಜ್ಞಾನದ ಶಿಕ್ಷಣ ಕೊಡಬೇಕು.
ಸತ್ಯವೇ ದೇವರೆಂದರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ ತೋರಿಸಲಾಗದು.ಕಾರಣ ಒಳಗೇ ಅಡಗಿರುವ ಸತ್ಯವನ್ನು  ಸದ್ಬಳಕೆ ಮಾಡಿಕೊಳ್ಳಲು  ಅಂತರಂಗದ ಶುದ್ದಿ ಅಗತ್ಯವಿದೆ. ಅಂತರ ಬೆಳೆಸಿರುವ ಈ ರಾಜಕೀಯದ ಅಗತ್ಯವಿಲ್ಲ.
ಇರಲಿ ಈಗಲೂ ನಮ್ಮಲ್ಲಿ ರಾಮನಿದ್ದಾನೆ ರಾವಣನೂ ಇರುವನು. ನಮ್ಮ ಜೀವನಕ್ಕೆ ಶಾಂತಿ ಬೇಕೆಂದರೆ ರಾಮನ ತತ್ವದೆಡೆಗೆ ಸಾಗಬೇಕು.
ಅಂದಿನ ರಾಜಪ್ರಭುತ್ವದ ಪ್ರಕಾರ  ರಾಜನಂತೆ ಪ್ರಜೆ.
ಈಗಿನ‌ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಂತೆ ರಾಜಕಾರಣಿಗಳಿದ್ದಾರೆ.
ಯಾರು ಸರಿ ಯಾರು ತಪ್ಪು ಎನ್ನುವ  ಪ್ರಶ್ನೆ ಹಾಕುತ್ತಾ ವಾದ ವಿವಾದಗಳಿಗೆ ಸಹಕರಿಸುತ್ತಾ ಮಧ್ಯವರ್ತಿಗಳು ಅಂತರವನ್ನು ಬೆಳೆಸಿ ಜನರ ಹಣವನ್ನು ಸಮಯವನ್ನು ಜ್ಞಾನವನ್ನು  ನಿರ್ಲಕ್ಷ್ಯ ಮಾಡಿರುವ ಶಿಕ್ಷಣವನ್ನು ‌ಬೆಳೆಸುತ್ತಾ ಲಕ್ಷ ಕೋಟಿ ಗಳಿಸಿದ್ದರೂ  ನಿಜವಾದ ಶಾಂತಿ ಸಿಗಲಿಲ್ಲ ಎಂದರೆ ನಮ್ಮ ಲಕ್ಷ್ಯ  ಹಣದತ್ತ  ಜ್ಞಾನದತ್ತವಿಲ್ಲ ಎಂದರ್ಥ.
ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲಕರಾಗಲಿ, ಪ್ರಜಾಪರಿಪಾಲಕರಾಗಲಿ  ತ್ರೇತಾಯುಗದ ನಂತರ  ಬಂದಿಲ್ಲ.ಶ್ರೀ ಕೃಷ್ಣಾವತಾರವೇ  ಬೇರೆ ರೀತಿಯಲ್ಲಿ ತ್ತು. ಆದರೆ ಕಾಲಮಾನಕ್ಕೆ ತಕ್ಕಂತೆ ಕೆಲವು ಬದಲಾದರೂ ಸತ್ಯ ಒಂದೇ. ಧರ್ಮ ಅದರೊಂದಿಗೆ ನಡೆಯಬೇಕೆನ್ನುವುದೇ ಸನಾತನ ಧರ್ಮ ತಿಳಿಸುವುದು.
ಯಾರೋ ಒಬ್ಬರಿಂದ ರಾಮರಾಜ್ಯವಾಗದು.ಅದರಲ್ಲೂ ಇಂದಿನ ಪ್ರಜಾಪ್ರಭುತ್ವ ದಲ್ಲಿ  ಪ್ರಜಾಶಕ್ತಿಯು  ರಾಮನ ರಾಜಯೋಗದೆಡೆಗೆ  ನಡೆದಾಗಷ್ಟೆ ಯೋಗವಾಗುತ್ತದೆ. ಎಷ್ಟು ಹೊರಗೆಳೆದು ಅಲಂಕಾರ ಮಾಡಿದರೂ  ಸಾಲದು.ಸಾಲವೇ ಅದಾಗಿರುತ್ತದೆ.
ಹಣದಿಂದ ರಾಮನ್ನು ಕಂಡವರಿಗೆ  ಹಣವೇ ಸರ್ವಸ್ವ.
ಅದೇ ರೀತಿಯಲ್ಲಿ ಸುಜ್ಞಾನದಿಂದ ರಾಮಧ್ಯಾನ ಮಾಡುತ್ತಾ ಭಕ್ತರಾದವರಿಗೆ  ಜ್ಞಾನೋದಯವಾಗಿದೆ ಎಂದರೆ ಶ್ರೀ ರಾಮ ಇರೋದೆಲ್ಲಿ?
ಎಲ್ಲೆಡೆಯೂ  ಹರಡಿರುವ ಶ್ರೀ ರಾಮನನ್ನು ಒಂದೆಡೆ ನಿಲ್ಲಿಸಿ ನೋಡಲು ಧ್ಯಾನದಿಂದ ಮಾತ್ರ ಸಾಧ್ಯ.
ದೇವಸ್ಥಾನದಲ್ಲಿ ವಿಗ್ರಹದ ಮೂಲಕ ದರ್ಶನ ಮಾಡಬಹುದು.
ನಂತರ ಮನೆಗೆ ಬಂದ ಮೇಲೆ  ಯಥಾ ಪ್ರಕಾರ  ನಮ್ಮ ‌ಮನಸ್ಸು ಹರಿದಾಡುತ್ತದೆ. ಹಾಗಾದರೆ ಮನಸ್ಸಿನಲ್ಲಿಯೇ ರಾಮನನ್ನು ನಿಲ್ಲಿಸಿಕೊಂಡು  ದಾಸರಾದವರನ್ನು ರಾಮದಾಸ ಎನ್ನಬಹುದು. ಈಗ ಎಲ್ಲಿರುವರು ? 
ಕಣ್ಣಿಗೆ  ದಾಸ್ಯತ್ವ  ಹೆಚ್ಚಾಗಿ ಕಾಣುತ್ತಿದೆ ಎಂದರೆ ನಮ್ಮ ನಡೆ ರಾಮನ ಕಡೆಗಿಲ್ಲವೆ? ನುಡಿ ಕೃಷ್ಣನ ಕಡೆಗಿಲ್ಲವೆ?
ಪ್ರಚಾರದಲ್ಲಿ ಮಧ್ಯೆ ನಿಂತಿರುವ ಇದನ್ನು ಸರಿಯಾಗಿ ನಡೆದು ನುಡಿದರೆ ರಾಮಕೃಷ್ಣರು ಒಳಗೇ ಕಾಣುವರು. ಅವರ ಕೃಪೆ ಇಂದಿಗೂ ಸನಾತನ ಧರ್ಮ ನಡೆಯಲು ಕಾರಣವಾಗಿದೆ. ಆದರೆ ಇದನ್ನು ಜನಸಾಮಾನ್ರೊಳಗೆ  ತತ್ವಜ್ಞಾನದಿಂದ ತುಂಬುವ ಕೆಲಸದಲ್ಲಿ ನಿಧಾನವಾಗಿರುವ ಕಾರಣ ರಾವಣಶಕ್ತಿ ಮಿತಿಮೀರಿದೆ. ಯುದ್ದವಾದರೂ  ಧರ್ಮಕ್ಕೆ ಜಯ ಇದು ಶತಸಿದ್ದ.
ಒಟ್ಟಿನಲ್ಲಿ ಇತಿಹಾಸ ಪುರಾಣ ಮರುಕಳಿಸಲು ಕಾರಣ ಅದರ ಪ್ರಚಾರವಾಗಿರುತ್ತದೆ.ಪ್ರಚಾರದಲ್ಲಿ ಯೋಗವಿದ್ದರೆ ಜ್ಞಾನ.ಭೋಗವೇ ಮುಖ್ಯವಾಗಿ ಹಣವೇ ಸರ್ವಸ್ವ ಎಂದರೆ ಕ್ರಾಂತಿ. ಎಲ್ಲಾ ಭಗವಂತನ ಪ್ರೇರಣೆಯೇ ಆಗಿರುವುದರಿಂದ
ನಮ್ಮ ಪಾತ್ರವನ್ನು ಸರಿಯಾಗಿ ತಿಳಿದು ವಹಿಸಿಕೊಂಡು  ಮುಂದೆ ನಡೆಯುವುದೇ ವಿಜ್ಞಾನ. ವಿಜ್ಞಾನ ಎಂದರೆ ವಿಶೇಷ ಜ್ಞಾನ. ಇದು ಆಧ್ಯಾತ್ಮ ವಾದರೆ ಆತ್ಮಜ್ಞಾನದಿಂದ  ಆತ್ಮಸಂಶೋಧನೆ. ಇಲ್ಲವಾದರೆ ಭೌತ ವಿಜ್ಞಾನದ ಶೋಧನೆ.
ಸಂಶೋಧನೆ  ಮೊದಲಿದ್ದದ್ದನ್ನೇ ಮತ್ತೆ ಮತ್ತೆ  ಶೋಧಿಸಿಕೊಂಡಿರೋದಷ್ಟೆ. ನಮ್ಮ ಅಜ್ಞಾನದೊಳಗಿರುವ ಜ್ಞಾನದೆಡೆಗೆ  ನಡೆಯೋದು. ಇದು ಹೊರಗೆ ಮಾಡುವ ಮೊದಲು ಒಳಗೆ  ಮಾಡುವುದೇ ಸಂಸ್ಕಾರ. ಆತ್ಮಸಂಸ್ಕಾರ ಆಗದೆ  ದೇಹಶುದ್ದಿ ಮಾಡಿದರೂ ತಾತ್ಕಾಲಿಕ ವಷ್ಟೆ.
ಆತ್ಮಶುದ್ದವಾಗಿದ್ದರೂ ಮನಸ್ಸಿನ  ಕಲ್ಮಶಗಳು  ಮುಚ್ಚಿ ಹಾಕಿರುತ್ತದೆ.
ಹಾಗೆ ದೈವತ್ವದೆಡೆಗೆ ಸಾಗದೆ ದೇವರನ್ನು ಪೂಜಿಸಿದರೂ ದೇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಇದಕ್ಕೆ ಕಾರಣವೇ ಕಲಿಕೆಯಾಗಿದೆ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನವಾಗಬಹುದು.
ದೇವಾಸುರರ ಮಧ್ಯೆ ಇರುವ ಮಾನವನಿಗೆ ಈ ಕಡೆ ಸ ತ್ಯ ಜ್ಞಾನ ಮತ್ತೊಂದು ಕಡೆ ಮಿಥ್ಯಜ್ಞಾನ ಎಳೆದಾಡುತ್ತಲೇ ಇರುತ್ತದೆ. ಯಾವ ಕಡೆ  ಹೋಗಬೇಕೆಂಬ ಸಾಮಾನ್ಯ ಜ್ಞಾನ ನಮ್ಮಲ್ಲಿದ್ದರೆ  ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ. ಇಲ್ಲವೆಂದರೆ ಅತೃಪ್ತ ಆತ್ಮಗಳಾಗಿ  ಜೀವನದ ಗುರಿ ಹೋರಾಟ ಹಾರಾಟ ಮಾರಾಟವೇ  ಪ್ರಧಾನ ಎನ್ನುತ್ತದೆ. 
ಬರೋವಾಗ ಏನು ಹೊತ್ತು ತಂದರೂ ಅದರಿಂದ ಬಿಡುಗಡೆ ಪಡೆಯುವ ಯೋಗ   ಶಿಕ್ಷಣ ಅಗತ್ಯವಿದೆ.ಯೋಗವೆಂದರೆ ಸೇರುವುದು.ಸತ್ಯ ಸತ್ಯ ಸೇರಬೇಕು. ಧರ್ಮ ಧರ್ಮ ವನ್ನು ಸೇರಬೇಕು.ವಿರುದ್ದ ಸೇರಿದಷ್ಟೂ ಸಂಕಷ್ಟ ತಪ್ಪಿದ್ದಲ್ಲ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸರಿ.ಕೊಳಚೆಗೆ  ಸೇರಿಸಿದರೆ 
ಅನರ್ಥ ಗಳಾಗುತ್ತದೆ. 
ಪರಮಾತ್ಮ‌ಕೊಟ್ಟಿರುವ ಅಲ್ಪಾಯುಷ್ಯವನ್ನು ಅಲ್ಪ ಜ್ಞಾನದಿಂದ  ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋ ಸ್ವಾತಂತ್ರ್ಯ ಇಂದಿನ‌ಪ್ರಜಾಪ್ರಭುತ್ವದಲ್ಲಿತ್ತು. ಆದರೆ ವಿಪರ್ಯಾಸವೆಂದರೆ  ಪ್ರಜೆಗಳ ದಾರಿತಪ್ಪಿಸಿ ಆಳುವವರಿಗೆ ಪ್ರಜೆಗಳ ಸಹಕಾರವಿರುವಾಗ  ನಮ್ಮ ಅಜ್ಞಾನಕ್ಕೆ ತಕ್ಕಂತೆ ಫಲ ಕೊಡೋನು  ಪರಮಾತ್ಮನೇ ಆಗಿರುವನು. ಏನು ಕೇಳಿದರೂ ಕೊಡುವನು ಆದರೆ ಜ್ಞಾನ ಕೇಳೋರು ವಿರಳ. ಹೀಗಾಗಿ ಅಜ್ಞಾನಿಗಳು ಮಿತಿಮೀರಿ ಬೆಳೆದು ಜನಸಂಖ್ಯೆ ಸ್ಪೋಟ ವಾಗಿ ಯುದ್ದದಲ್ಲಿ  ಪೂರ್ಣ ವಾಗುತ್ತಿದೆ.ಪ್ರಕೃತಿ ತನ್ನ ಕೆಲಸ ಮಾಡೋದನ್ನು ಬಿಡದು. ಹಾಗೆ ಸೃಷ್ಟಿ ಸ್ಥಿತಿ ಲಯ ಕಾರ್ಯ. ಭೂಮಿ ತಿರುಗೋದನ್ನು ವಿಜ್ಞಾನಿಗಳು ತಡೆಯಲಾಗದೆಂದರೆ ನಮ್ಮ ಶಕ್ತಿ ಅಲ್ಪ ಎಂದರ್ಥ . ಆದರೂ ಅಲ್ಪ ಸ್ವಲ್ಪ ಬುದ್ದಿ ಜ್ಞಾನದಿಂದ  ಸ್ಥಿತಪ್ರಜ್ಞಾವಂತರಾಗಬಹುದು.
ಇಷ್ಟಕ್ಕೂ  ನಾವ್ಯಾರು? ರಾಮನೆಲ್ಲಿ?
ಹೀಗೇ ಮುಂದುವರಿದರೆ  ಮುಂದಿನ ಪೀಳಿಗೆಗೆ ಇತಿಹಾಸದ ಪುಸ್ತಕದಲ್ಲಿ  ನರೇಂದ್ರರನ್ನು ಇಂದ್ರನೆಂದು ಸಿದ್ದರಾಮರನ್ನು ರಾಮನೆಂದು, ಶಿವಕುಮಾರರನ್ನು ಶಿವನೆಂದು, ಕುಮಾರಸ್ವಾಮಿಯನ್ನು ಸುಭ್ಮಮಣ್ಯನೆಂದು ಪೂಜಿಸಬಹುದು.  ಕಾರಣ ಹಿಂದಿನ ಪುರಾಣ ಇತಿಹಾಸವೂ ತಮ್ಮ ಮನಸ್ಸಿಗೆ ಬಂದಂತೆ ತಿರುಚಲಾಗಿದೆ. ಅದನ್ನು ಓದಿಕೊಂಡು  ಬಂದಿರುವ ನಮಗೆ  ಸತ್ಯ ತಿಳಿಯದೆ ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. 
ಒಳಗೇ ಇದ್ದ ದೈವತ್ವವನ್ನು   ನಮ್ಮವರೆ ಗುರುತಿಸದೆ ತಡೆದರೆ ಹೊರಗಿನವರು ಆಳೋದರಲ್ಲಿ ತಪ್ಪಿಲ್ಲ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ಇಂದಿಗೂ ಕನಸೇ ಆಗಿರೋದಕ್ಕೆ ಕಾರಣವೆಂದರೆ ನಮ್ಮೊಳಗಿನ‌ವಿವೇಕ ಜಾಗೃತ ಮಾಡದಿರುವ ಶಿಕ್ಷಣ. ಓದಿ ತಿಳಿದವರು ಪ್ರಸಿದ್ದರಾದರು.
ನಿಜವಾದ ಸಿದ್ದರು ಹಿಂದುಳಿದರು. ಇದಕ್ಕೆ ಸಿದ್ದರಾಮಯ್ಯನವರಿಗೆ  ಅಧಿಕಾರ ಸಿಗುತ್ತಿದೆ ಎಂದರೂ ಪ್ರಜೆಗಳ ಸಹಕಾರವಿದೆ ಎಂದರ್ಥ. ಹಾಗೆಯೇ ಎಲ್ಲಾ ರಾಜಕಾರಣಿಗಳು ಹಣದಿಂದ ಜನರನ್ನು  ಗೆಲ್ಲಬಹುದಷ್ಟೆ. ಜನರ ಜ್ಞಾನದ ಗತಿ  ಏನಾಗಬಹುದು ? ಇದರಿಂದ ಕಷ್ಟ ನಷ್ಟ ಯಾರಿಗೆ? ಜನರಿಗೇ ಅಲ್ಲವೆ? ನಮಗೆ ನಾವೇ ಮೋಸ ಹೋದಾಗ ರಾಮನಾದರೂ ಏನು ಮಾಡಬಹುದು? ದೇವರೆಡೆಗೆ ದೈವತ್ವದೆಡೆಗೆ ನಡೆಯದಿದ್ದರೆ  ದೇವರು ಏನು ಮಾಡಬಹುದು?  ನಮ್ಮಲ್ಲಿ ಅಡಗಿರುವ ರಾಮ ರಾವಣರಲ್ಲಿ ನಮಗೆ ಪ್ರಿಯವಾದವರು ಯಾರು?

Sunday, March 22, 2026

ಜೀವನ್ಮುಕ್ತಿ ರಾಜಕೀಯದಲ್ಲಿಲ್ಲ.


ಮಾನವ ಎಷ್ಟು ರಾಜಕೀಯವನ್ನು ಒಳಗೆಳೆದುಕೊಂಡು  ಹೋರಾಟ ನಡೆಸಿದರೂ  ಜೀವನ್ಮುಕ್ತಿ ಸಿಗೋದಿಲ್ಲ. ಕಾರಣ ರಾಜಕೀಯ ಹೊರಗಿದೆ. ಜೀವ ಒಳಗಿದೆ. ಜೀವಾತ್ಮನನ್ನು ಪರಮಾತ್ಮನೆಡೆಗೆ  ಸೇರಿಸಲು  ರಾಜಕೀಯತೆ  ಅಡ್ಡಲಾಗಿ ಮಲಗಿದೆ. ನಮ್ಮ ಜನ್ಮದ ಮೂಲ ಧರ್ಮ ಕರ್ಮ ಬಿಟ್ಟು ದೂರ ನಡೆದವರ ಹಿಂದೆ ನಡೆದರೆ ಅತಂತ್ರ ಜೀವನವೆ ಗತಿಯಾಗಿದೆ.ಇಂದಿನ ಅರಸ   ಮುಂದಿನ  ಆಳಾಗಬಹುದು.
ಆಳು ಅರಸನಾಗಬಹುದು. ಸರಸ್ವತಿ ಯನ್ನು ಲಕ್ಮಿಯಾಗಿಸೋದು  ಮಾನವನ  ರಾಜಕೀಯ. ಮೂಲ ಸ್ವರೂಪ ಬದಲಾಗೋದಿಲ್ಲ.
ವಿಪರ್ಯಾಸವೆಂದರೆ, ಭಾರತೀಯರು  ಜ್ಞಾನದಲ್ಲಿ ಶ್ರೀಮಂತ ರಾಗಿ ಪರಮಾತ್ಮನ ಹತ್ತಿರ ಹೋದವರನ್ನು ಬಡವರೆಂಬ ಪಟ್ಟಿ ಕಟ್ಟಿ  ಹೊರಗಿನ ರಾಜಕೀಯಕ್ಕೆ ಎಳೆದು ಸಾಲ,ಸೌಲಭ್ಯ
ಗಳನ್ನು ಉಚಿತವಾಗಿ ನೀಡಿ  ಈಗ ಅವರುಗಳೆ ಸರ್ಕಾರದ ವಿರುದ್ದ ನಿಂತರೆ ?
ಇಲ್ಲಿ ರಾಜಯೋಗವೆಂದರೆ ರಾಜಕೀಯ ನಡೆಸೋದು ಎನ್ನುವ ಅಜ್ಞಾನವೇ ಮಾನವನಿಗೆ  ದಾರಿ ತಪ್ಪಿಸಿದೆ.ಈ ಪರಿಸ್ಥಿತಿಯಲ್ಲಿ ಜೀವನ ನಡೆಸೋ  ಹಾಗಾಗಿರೋದಕ್ಕೆ ಕಾರಣವೆ  ಶಿಕ್ಷಣದಲ್ಲಿರುವ ರಾಜಕೀಯ ವಿಚಾರ. ಅಂದರೆ
ರಾಜ ಮಹಾರಾಜರ  ಇತಿಹಾಸ,ಪುರಾಣಗಳ  ರಾಜಕೀಯತೆ ಮಕ್ಕಳನ್ನು  ಬೌತಿಕ ಜಗತ್ತಿನಲ್ಲಿ ಬೆಳೆಸಿ,ಅದು ಮಕ್ಕಳು ಮೊಮ್ಮಕ್ಕಳವರೆಗೂ‌ ಮುಂದುವರೆಯಿತು. 
ಬೌತಿಕಾಸಕ್ತಿ    ಬೆಳೆದಂತೆ ಹೊರಗಿನ‌   ಶಿಕ್ಷಣವನ್ನು ಒಳಗೆಳೆದುಕೊಂಡು ಒಳಗಿದ್ದ  ಸಾತ್ವಿಕ ಜ್ಞಾನವನ್ನು ಬಿಟ್ಟು ನಡೆದ ಜೀವಕ್ಕೆ  ಮನರಂಜನೆ ಸಿಕ್ಕರೂ ಆತ್ಮವಂಚನೆಯ
ದು:ಖ ತಪ್ಪಿಲ್ಲ. ಆತ್ಮಜ್ಞಾನವನ್ನು  ಓದಿ,ಕೇಳಿ, ಪ್ರಚಾರಮಾಡಿ
ಸಮಾಜ ಸುಧಾರಣೆ ಮಾಡುವ ಮಧ್ಯವರ್ತಿಗಳು  ಅನುಭವ
ಜ್ಞಾನವಿಲ್ಲದೆ  ಇತರರನ್ನು ಆಳಲು ಹೊರಟರೆ  ಅರಸನಂತೆ
ಜೀವನ ನಡೆಸಬಹುದು.ಆದರೆ ಆಳಾಗಿ ಹಾಳಾಗಿ ಹೋದವರ ಆತ್ಮಕ್ಕೆ ಶಾಂತಿ ಸಿಗದಿದ್ದರೆ ಅದೇ ದೊಡ್ಡ ಸಮಸ್ಯೆ
ಯಾಗಿ  ತಿರುಗಿ ಬರೋವಾಗ‌ ಸತ್ಯ ಕಾಣೋದಿಲ್ಲ. ಇಲ್ಲಿ ಎಷ್ಟು
ಸುಳ್ಳು, ಮೋಸ,ವಂಚನೆ,ಭ್ರಷ್ಟಾಚಾರ ದ ರಾಜಕೀಯ  ತಮ್ಮ
ಬೌತಿಕ   ಜಗತ್ತನ್ನು  ಬೆಳೆಸಿತೋ ಅಷ್ಟೇ  ಧಾರ್ಮಿಕ ಜಗತ್ತು
ಹಿಂದುಳಿಯಿತು. ಕಾಲಚಕ್ರ ತಿರುಗಿದಾಗಲೇ ಮೇಲಿನದ್ದು
ಕೆಳಗೆ ಬರೋದು. ಬರೋವಾಗ ಮಧ್ಯದಲ್ಲಿ  ಸತ್ಯ ತಡೆದರೆ
ಕಷ್ಟ ನಷ್ಟ. ಜೀವವೆ ಅನುಭವಿಸುವುದೆನ್ನುವ ಸಾಮಾನ್ಯಜ್ಞಾನ
ಮಾನವನಿಗಿದ್ದರೆ ಮಾತ್ರ ಸತ್ಯಕ್ಕೆ  ಶರಣಾಗಿ ಧರ್ಮದ ಕಡೆಗೆ
ಬರಬಹುದು. ಸಾಮಾನ್ಯಜ್ಞಾನವಿಲ್ಲದೆ ರಾಜಕೀಯ ನಡೆಸಿದರೆ  ಅದೇ ಮುಂದೆ  ಆತ್ಮಹತ್ಯೆಯವರೆಗೆ ಎಳೆಯಬಹುದು. ಇತ್ತೀಚಿನ ದಿನಗಳಲ್ಲಿ ಎಷ್ಟೋ ಪ್ರತಿಭಾವಂತರೂ ,ಶ್ರೀಮಂತ ರೂ  ಆತ್ಮಹತ್ಯೆಗೆ  ಬಲಿಯಾಗುತ್ತಿದ್ದಾರೆ.ಎಂದರೆ ಅವರಿಗೇ ತಿಳಿಯದೆ ಅಧರ್ಮ
ಮಿತಿಮೀರಿದಾಗ ಒಳಗೇ ಅಡಗಿದ್ದ  ಜೀವಾತ್ಮನಿಗೆ ತಡೆದುಕೊಳ್ಳಲು ಕಷ್ಟವಾಗಿ  ಆತ್ಮಹತ್ಯೆಗೆ ಪ್ರಚೋಧನೆ ನೀಡಿ
ದೇಹದಿಂದ ಬಿಡುಗಡೆ ಪಡೆಯುತ್ತದೆ. ಇಲ್ಲಿ  ಮಾನವನ ಮನಸ್ಸು  ಬದಲಾಗಬಹುದು.ಆತ್ಮ ಬದಲಾಗೋದಿಲ್ಲ.
ಮನಸ್ಸನ್ನು ಆತ್ಮವೆಂದು ತಿಳಿಯುವುದು  ಅಸತ್ಯ. ಮನಸ್ಸನ್ನು
ತಡೆಹಿಡಿಯುವುದೆಂದರೆ  ಅಧರ್ಮ,ಅಸತ್ಯದಿಂದ  ದೂರ ಇರುವುದು. ಆದರೆ, ತಿಳಿಯದೆ  ಯಾವಾಗ ಅದರೊಂದಿಗೆ
ವ್ಯವಹಾರ ನಡೆಸಿ ಮುಂದೆ ಬಂದ ಮನಸ್ಸಿಗೆ ಒಮ್ಮೆ  ಸತ್ಯ
ತಿಳಿಯುವುದೋ ತಿರುಗಿ ಬರಲಾಗದೆ ಜೀವವನ್ನು ತೆಗೆದುಕೊಳ್ಳುವ ಮಟ್ಟಿಗೆ  ಬುದ್ದಿ ಓಡುತ್ತದೆ. ಹೀಗಾಗಿ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನಸ್ಸನ್ನು  ತನ್ನ ಹತೋಟಿಯಲ್ಲಿ
ಇಟ್ಟುಕೊಳ್ಳಲು ಕಲಿಸಬೇಕಿದೆ. ಸತ್ಯದ ದಾರಿ ತೋರಿಸಿದರೆ
ಧರ್ಮವೂ ಬರುತ್ತದೆ. ಅಸತ್ಯದ ದಾರಿ ತೋರಿಸಿದರೆ ಅಧರ್ಮ ಜೊತೆಯಾಗುತ್ತದೆ. ಇರೋದು ಎರಡೇ ಮಾರ್ಗ
ಇವೆರಡರ ನಡುವೆ‌  ನಿಂತರೆ ಜೀವನವೆ ಅತಂತ್ರವಾಗುತ್ತದೆ.
ಸ್ವತಂತ್ರ ವಾಗಿರುವ ಸತ್ಯಜ್ಞಾನ, ಸ್ವೇಚ್ಚಾಚಾರದ  ಮಿಥ್ಯಜ್ಞಾನದ ಮಧ್ಯೆ ನಿಂತ  ತಂತ್ರಜ್ಞಾನದಿಂದ  ಮಾನವನಿಗೆ
ಮುಕ್ತಿ ಮೋಕ್ಷದ ಅರ್ಥ ತಿಳಿಯುತ್ತಿಲ್ಲವೆನ್ನಬಹುದೆ?
ಕಣ್ಣಿಗೆ ಕಂಡ ಹಾಗೆ ಭ್ರಷ್ಟಾಚಾರ  ಇದ್ದರೂ ಹೇಳದ ಸ್ಥಿತಿಗೆ ಜೀವ ನಿಂತಿದೆ ಎಂದರೆ ಋಣಭಾರ. ಯಾರನ್ನು ಸರಿ ಎಂದು ನಂಬಿ ನಡೆದೆವೋ ಅವರೆ ಸರಿಯಿಲ್ಲವೆಂದಾಗ ವಿರೋಧಿಸುವ ಅಧಿಕಾರವಿಲ್ಲ.ಕಾರಣ ನಮ್ಮ ಸಹಕಾರದ
ಪ್ರತಿಫಲ. ಹಾಗಂತ ಜೀವಮಾನವಿಡೀ  ಅವರ ಹಿಂದೆ ಇದ್ದರೆ
ತಪ್ಪು ದಾರಿ ದೊಡ್ಡದಾಗಿ ಶಿಕ್ಷೆ ಖಚಿತ. 
ಹಿಂದಿನ ರಾಜರ ಕಾಲದಲ್ಲಿದ್ದ  ರಾಜಧರ್ಮ ಇಂದಿಲ್ಲ. ರಾಜನೆ
ದೇವರು ಎಂಬುದಿಲ್ಲ. ಆದರೆ  ರಾಜಕೀಯತೆ ಕಡೆಗೆ ಮುಖ
ಮಾಡಿಕೊಂಡು ರಾಜಯೋಗಿಗಳೆಂದರೆ ತಪ್ಪು. ಯಾರಲ್ಲಿ
ಇದನ್ನು ನಾವು ಕಾಣುವೆವೋ ಅವರಿಂದ ದೂರವಿರುವ ಸ್ವಾತಂತ್ರ್ಯ ನಮಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಇದ್ದರೂ
ಅವರಿಗೆ ಸಹಕರಿಸುತ್ತಾ  ನನಗೇನೂ ಸಾಧ್ಯವಿಲ್ಲ ಎನ್ನುವ
ಪ್ರಜೆಗಳಿಂದಲೇ ಭ್ರಷ್ಟಾಚಾರ ಮುಗಿಲುಮುಟ್ಟಿರೋದು.
ಇಷ್ಟಕ್ಕೂ ನಾವು ನೀಡುವ ಸಹಕಾರದಿಂದ ಯಾವ ಧರ್ಮ ಉಳಿದಿದೆ? ಸತ್ಯ ಎಲ್ಲಿದೆ?
ಬದಲಾವಣೆ ಜಗದ ನಿಯಮ. ಬದಲಾವಣೆಗೆ ಸ್ಪಂದಿಸೋದು ಮಾನವ ಧರ್ಮ . ದೇವರನ್ನು ಗುಡಿ ಗೋಪುರಗಳಲ್ಲಿ ಇಟ್ಟು  ಪೂಜಿಸಿದರೆ  ದೈವಶಕ್ತಿ ಬರುವುದೆ?
ದೈವಗುಣವನ್ನು ಬೆಳೆಸಿಕೊಂಡರೆ  ಸಾಧ್ಯ. ದೇವರ ಹೆಸರಿನಲ್ಲಿ
ರಾಜಕೀಯತೆ ನಡೆಸಿದರೆ  ಅಸುರರನ್ನು ಸೃಷ್ಟಿ ಮಾಡಿದಂತೆ.
ಭೂಮಿತಾಯಿಯ ಋಣ ತೀರಿಸಲು ಬಂದ‌ ಜೀವಕ್ಕೆ ಇನ್ನೂ
ಋಣವನ್ನು  ಹೆಚ್ಚಿಸಿರೋದು ರಾಜಕೀಯ. ಇದರಿಂದ ಹೊರ
ಬರಲು ಬೇಕಿದೆ  ಕಾಯಕವೆ ಕೈಲಾಸವೆಂಬ ಮಂತ್ರ.ನಾಮಜಪದಿಂದಲೇ ಕಾಯಕ ಮಾಡಿ. ಒಳಗೇ ಇದ್ದ ಪರಮಾತ್ಮನೆಡೆಗೆ  ಸತ್ಯಜ್ಞಾನದಿಂದ ಹತ್ತಿರವಾಗೋದಕ್ಕೆ  ಮನಸ್ಸು ಮನೆಯೊಳಗಿದ್ದರೆ ಉತ್ತಮ. 
ಶಾಂತಿ ಒಳಗಿದೆ. ಕ್ರಾಂತಿ ಹೊರಗಿದೆ."ಯಾವುದಯ್ಯಾ ದಾರಿ
ವೈಕುಂಟಕ್ಕೆ" ಎನ್ನುವ ಹಾಗೆಯೇ ಯಾವುದಯ್ಯಾ ದಾರಿ ಕೈಲಾಸಕ್ಕೆ?" ಎನ್ನಬಹುದಲ್ಲವೆ?
ಶಿವಶಕ್ತಿಯ ಸಮಾನತೆಯಿಂದಲೇ ಭೂಮಿ  ನಡೆದಿರುವುದು.
ಅಸಮಾನತೆಯಿಂದ  ರಾಜಕೀಯತೆ ಬೆಳೆದಿರೋದು.
ಸಂನ್ಯಾಸಿ ಯ ಹತ್ತಿರ ಹೋಗಿ ಸಂಸಾರದ ನೆಮ್ಮದಿ ಕೇಳಿದರೆ
ಸಂಸಾರಬಿಟ್ಟು ಹೊರಡು ಎನ್ನಬಹುದು. ಸಂಸಾರಿಯ ಕಷ್ಟ
ಸಂಸಾರಿಗಷ್ಟೆ ಅನುಭವಕ್ಕೆ ಬಂದಾಗ  ಅವರವರ ಕಷ್ಟ ನಷ್ಟಕ್ಕೆ ಅವರೆ ಕಾರಣವೆನ್ನುವುದೇ ಆಧ್ಯಾತ್ಮ ಸತ್ಯ. ಸತ್ಯ ಧರ್ಮದ. ಮಾರ್ಗದಿಂದ ಮಾತ್ರ ಬಿಡುಗಡೆ ಎಂದಾಗ ಬೌತಿಕ
ಸತ್ಯವನ್ನು  ಇದೇ ಧರ್ಮ ಎಂದು ಮೂಲ ಬಿಟ್ಟು ನಡೆದರೆ
ತಾತ್ಕಾಲಿಕ ವಷ್ಟೆ. ಈಗ ಕೊರೊನ ಹೇಗೆ ತಿರುಗಿ ಬಂದಿದೆಯೋ  ಹಾಗೆಯೇ  ಮಾಡಿದ ತಪ್ಪಿಗೆ ಶಿಕ್ಷೆಯಿದೆ. ಇಲ್ಲಿ
ಯಾರೂ ಪರಿಪೂರ್ಣರಲ್ಲ. ಹೀಗಾಗಿ ನಮ್ಮ ನಮ್ಮ ಮೂಲ
ನಮಗೆ ಶ್ರೀ ರಕ್ಷೆ. ಕಷ್ಟ  ಎರಡೂ ಕಡೆಯಿದೆ. ಕಷ್ಟ ಪಟ್ಟರೆ ಸುಖವಿದೆ. ಎಲ್ಲಿಂದ ಬಂದಿತೋ ಜೀವ ಅಲ್ಲಿಗೆ ಹೋಗೋವರೆಗೂ  ಕಷ್ಟ ನಷ್ಟ ತಪ್ಪಿದ್ದಲ್ಲ.ಇದಕ್ಕೆ ರಾಜಕೀಯ
ಬಿಟ್ಟು ರಾಜಯೋಗದೆಡೆಗೆ ನಡೆಯುತ್ತಿದ್ದರು ಹಿಂದಿನ ಮಹಾತ್ಮರುಗಳು. ಈಗಿನವರಲ್ಲಿ  ಕೊನೆ ಉಸಿರಿರುವವರೆಗೂ
ರಾಜಕೀಯದ ದಾಹ ಬಿಡುತ್ತಿಲ್ಲ.ಇದಕ್ಕೆ ಕಾರಣ ಸಹಕಾರ.
ಇದು ಧಾರ್ಮಿಕ ಕ್ಷೇತ್ರದಲ್ಲಿಯೂ ಇರುವುದು ದೇಶದ ಧರ್ಮ
ರಕ್ಷಣೆಗೆ  ತೊಡಕಾಗಿದೆ.ಪ್ರಜಾ ಧರ್ಮವೆ ಶ್ರೇಷ್ಠ.
ಪರಧರ್ಮದವರ   ಶಿಕ್ಷಣ, ವ್ಯವಹಾರ,ಸಾಲ,ತಂತ್ರಜ್ಞಾನ, ವಿಜ್ಞಾನ ಎಲ್ಲಾ  ಬೇಕು.ಅವರು ಬೇಡ ಎಂದರೆ?
ಹಾಗೆ  ಭಾರತದ ನೆಲ ಜಲ ವ್ಯವಹಾರ,ಶಿಕ್ಷಣ,ಪ್ರಜಾಸರ್ಕಾರ
ಎಲ್ಲಾ ಪಡೆದು ಭಾರತವನ್ನೇ ಆಳಲು ಹೊರಟರೆ?
ನಾವೆಲ್ಲರೂ ಎಲ್ಲಿ ಸೋತಿರುವುದು? ಗೆದ್ದವರು ಯಾರು?
ಧರ್ಮ ಯಾವುದು? ಅಧರ್ಮ ಎಲ್ಲಿದೆ? ಸಾಲಗಾರರು ಯಾರು? ತೀರಿಸುವುದು ಹೇಗೆ? ಎಲ್ಲಾ ನಮ್ಮ ಜ್ಞಾನದಲ್ಲಿದೆ.
ಸರ್ಕಾರ ಏನೂ ಮಾಡಲಾಗದು. ನಮ್ಮ ಸಹಕಾರ ಸತ್ಯಕ್ಕೆ
ಇದ್ದರೆ  ಸಾಲಮನ್ನಾ ಪರಮಾತ್ಮನೆ ಮಾಡಬಹುದು. ಇಲ್ಲವಾದರೆ ಪರದೇಶಿಗಳಾಗಿ  ಹಿಂದೆ ನಿಲ್ಲುವುದಷ್ಟೆ  ಹಿಂದೂ
ಧರ್ಮ ವಾಗಬಹುದು. ಹಿಂದುಳಿದವರು ಯಾರು?
ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟು ಮುಖ್ಯ. ವಿಶ್ವದಲ್ಲಿ ಅಲ್ಪಸಂಖ್ಯಾತರು ಯಾರು? ಹೊರಗಿನಿಂದ  ಪರರನ್ನು ಒಳಗೆ ಕರೆದು ಒಳಗಿದ್ದವರನ್ನು ಹೊರಗೆ ದೂಡಿದರೆ ಆಳೋರು ಯಾರು? ಇದು ನಮ್ಮ ಒಳಗಿನ ಜ್ಞಾನಕ್ಕೆ ತಿಳಿಸಿರುವುದಾಗಿದೆ.
ಮೂಲ ಜ್ಞಾನ ಬೆಳೆಸಿಕೊಂಡು ಹೊರಗಿನ ಜ್ಞಾನ  ತಿಳಿಯಬಹುದು. ಕಾಲದ ಪ್ರಭಾವವಷ್ಟೆ.ಅನುಭವಿಸಿದ ಮೇಲೆ ಅರ್ಥ ಆಗಬೇಕು. ಕೆಲವರಿಗೆ ಮೊದಲೇ ತಿಳಿಯುತ್ತದೆ.ಕೆಲವರಿಗೆ ಹೇಳಿ ಕೇಳಿದ ಮೇಲೆ ,ಮತ್ತೆ ಕೆಲವರಿಗೆ  ದಾರಿಯಿಲ್ಲದೆ ಇದ್ದಲ್ಲೇ ಇರುತ್ತಾರೆ. ಕೆಲವರು ಮತ್ತೂ ದಾರಿ ತಪ್ಪಿಸಿ  ನಡೆಸುತ್ತಾರೆ. ಪರಮಾತ್ಮನೆ ಎಲ್ಲರನ್ನೂ ನಡೆಸಿದರೂ ಅವರವರ ಕರ್ಮಕ್ಕೆ ತಕ್ಕಂತೆ ಜೀವ
ನಡೆಯುತ್ತದೆ. ಸಮಸ್ಯೆಗಳು ಬೆಳೆದಿರೋದೆ ರಾಜಕೀಯದಿಂದ. ರಾಜಕಾರಣಿಗಳನ್ನು  ಮುಂದಿಟ್ಟುಕೊಂಡು  ಮಧ್ಯವರ್ತಿಗಳು ನಡೆಸುತ್ತಿರುವ  ವ್ಯವಹಾರದಲ್ಲಿ ಧರ್ಮ ಎಲ್ಲಿದೆ? ಪ್ರಜಾಧರ್ಮ  ಎಲ್ಲರಿಗೂ
ಒಂದೇ  ಅಲ್ಲವೆ?

Tuesday, March 17, 2026

ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?


ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತಿ ಯನ್ನರಿತ ಪೋಷಕರನ್ನು ಕೇಳದಿರೋದೆ ಪರಿಸ್ಥಿತಿ  ಹಾಳಾಗಲು ಕಾರಣ. ಇಷ್ಟಕ್ಕೂ  ಮನೆಯೊಳಗಿನ  ಸಮಸ್ಯೆಗೆ  ಮಕ್ಕಳಾದರೂ ಏನು ಮಾಡಲು ಸಾಧ್ಯ. ಪೋಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ ಎನ್ನಬಹುದು. ನಮ್ಮಲ್ಲಿರುವ ದೋಷಗಳನ್ನು ನಾವೇ ಕಂಡುಕೊಳ್ಳಲು ಸಾಧ್ಯವಾದರೆ ಪ್ರಯತ್ನಪಡಬೇಕಷ್ಟೆ. ಅದೂ ಸಾಧ್ಯವಾಗದಿದ್ದರೆ ಬೇರೆಯವರನ್ನು ಸರಿಪಡಿಸಲಾಗದೆಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರೆ ತಿಳಿಸಿದ್ದಾರಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರಕ್ಕೆ ಬಂದೂ ಸಂನ್ಯಾಸಿಗಳಾಗಿದ್ದರು. ಇಂದು  ಸಂನ್ಯಾಸಿಗಳಾಗಿದ್ದು ಸಂಸಾರಿಗಳ ಋಣದಲ್ಲಿರುವವರು ಬಹಳ ಮಂದಿ ಇದ್ದಾರೆ. ಮಕ್ಕಳ ವಿಚಾರ ಪೋಷಕರಿಗೇ ಅರ್ಥ ವಾಗದಿದ್ದರೆ   ಹೊರಗಿನ  ಗುರುಗಳಾದರೂ ಏನೂ ಮಾಡಲಾಗದು.
ಎಲ್ಲರೂ    ದೇಶದ ಪ್ರಜೆಗಳಾಗಿ ದೇಶದ ಶಿಕ್ಷಣದ ಬಗ್ಗೆ ಚಿಂತನೆ ನಡೆಸಲು ಅಧಿಕಾರ ಬೇಕೆ?  ದೇಹದೊಳಗೆ ದೇಶೀಯ ಶಿಕ್ಷಣವಿಲ್ಲದೆ ವಿದೇಶಿ ಶಿಕ್ಷಣ ನೀಡಿ  ಸರ್ಕಾರದ  ವಿರುದ್ದ ನಿಂತು ಬೇಡುವವರಿದ್ದರೆದೇಶ ಮುಂದೆ ನಡೆಯಲು 
ಸಾಧ್ಯವೆ? ವಿದೇಶಿಗಳೆ ಮುಂದೆ ಬರುತ್ತಾರಷ್ಟೆ. ಮನೆಯೊಳಗೆ ವಿದೇಶಿಗರನ್ನು ಬೆಳೆಸೋ  ಶಿಕ್ಷಣದಿಂದ   ಪೋಷಕರೆ ಪರದೇಶಿಗಳಾಗಿದ್ದರೆ ಅವರಿಗೆ ಸರ್ಕಾರ ಸಹಾಯ ಮಾಡಿ
ಸಾಕೋವಷ್ಟು  ಮುಂದೆ  ಬರದಿದ್ದರೆ ಸರಿ. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳಿಗಿದ್ದ ಸಾಮಾನ್ಯಜ್ಞಾನ
ತಿರಸ್ಕರಿಸಿ  ನಡೆದ ಪರಿಣಾಮವೆ ಇಂದಿನ ಕೊರೊನ
ಎನ್ನಬಹುದೆ?
ಔಷಧ  ದೇಹಕ್ಕೆ ಸೇರಿಸಬಹುದು.ಆತ್ಮಕ್ಕೆ ಔಷಧ ಬೇಡವೆ?. ಆತ್ಮ ಅನಾರೋಗ್ಯದಲ್ಲೇ ಹೋದರೆ ಮತ್ತೆ ಹುಟ್ಟಿದಾಗ ರೋಗವೂ ಇರುತ್ತದೆ ಅಲ್ಲವೆ? ಈ ವಿಚಾರಒಂದು ವರ್ಷ
ದಿಂದಲೂ  ತಿಳಿಸುತ್ತಿದ್ದರೂ  ಈಗಲೂರಾಜಕೀಯಬಿಡದಿದ್ದರೆ  
ಪರಿಹಾರವಿಲ್ಲ. ಆತ್ಮ‌ ಸಾಯಲು ಸಾಧ್ಯವೆ?

ರಕ್ತ ಸಂಬಂಧ ದೊಡ್ಡದೋ ಋಣ ಸಂಬಂಧ ವೋ?
ಮಾನವನ ಜನ್ಮವಾಗೋದು ರಕ್ತ ಸಂಬಂಧ ದಿಂದ.
ಜನ್ಮದಾರಭ್ಯದಿಂದ ಹಿಡಿದು ಮರಣದವರೆಗೂ ಬೆಳೆಯುವ ಋಣ ಸಂಬಂಧ ವನ್ನು ಈವರೆಗೆ ಯಾರೂಪೂರ್ಣಪ್ರಮಾಣ
ದಲ್ಲಿ ತೀರಿಸಲಾಗಿಲ್ಲ. ಹೀಗಾಗಿ ಜನ್ಮ ಜನ್ಮಗಳ ಸಂಬಂಧ ಗಳು  ಮಾನವನಿಗೆ  ಬಿಡಿಸಲಾಗದಕಗ್ಗಂಟಾಗುತ್ತಿದೆ. 
ಋಣ ಎಂದರೆ ಸಾಲ. ಇಲ್ಲಿ ಸಂಸಾರ ಹಾಗು ಸಮಾಜದ ಸಾಲವನ್ನು ತೀರಿಸಲು ಜೀವಾತ್ಮಭೂಮಿಗೆ  ಬಂದಿರುವಾಗ 
 ಅದನ್ನು ತೀರಿಸಲು ಬೇಕು ಸತ್ಯಜ್ಞಾನ.
 ಮಿಥ್ಯಜ್ಞಾನದಿಂದ ವ್ಯವಹಾರ ನಡೆಸಬಹುದು. ವ್ಯವಹಾರದಿಂದ. ಹಣ,ಅಧಿಕಾರ ಪಡೆದು  ಸಮಾಜದ ಋಣ ತೀರಿಸಬಹುದು. ಯಾವಾಗಅಜ್ಞಾನ ಹೆಚ್ಚಾಗುವುದೋ  ಆಗ  
ಇನ್ನಷ್ಟು ಅಧರ್ಮಕ್ಕೆತಲೆಬಾಗಿ  ಋಣವನ್ನು ಹೆಚ್ಚಿಸಿಕೊಂಡು
 ಸಮಾಜವನ್ನುದಾರಿ ತಪ್ಪಿಸುವವರು ಬೆಳೆಯುತ್ತಾರೆ. 
ಹಿಂದಿನ ಕಾಲದಲ್ಲಿ ಈ ಕಾರಣಕ್ಕಾಗಿಯೇ ಪ್ರಾಥಮಿಕ
ಶಿಕ್ಷಣವನ್ನು  ಮೂಲ ಧರ್ಮ,ಕರ್ಮ,ಭಾಷೆ, ಸಂಸ್ಕೃತಿ
ಬಿಡದೆ  ನೀಡುತ್ತಿದ್ದರು. ಇದರಿಂದಾಗಿ ಮಕ್ಕಳಲ್ಲಿ ನೈತಿಕತೆ
ಬೆಳೆಸೋ ಸಮಾನತೆಯ ಶಿಕ್ಷಣ ಅಗತ್ಯವಿದೆ. ಆದರೆ ಕಾಲದ ಪ್ರಭಾವ ಮಿತಿಮೀರಿದ ಅಜ್ಞಾನದಲ್ಲಿ, ಸಮಾನತೆಯ ಹೆಸರಲ್ಲಿ   ರಾಜಕೀಯತೆಯನ್ನು ಬೆಳೆಸಿ   ಮಾನವೀಯ 
ಮೌಲ್ಯಗಳನ್ನು ಮೂಲೆಗೆ ತಳ್ಳಿದರೆ ಇಲ್ಲಿ ಬಕಣ್ಣಿಗೆ ಕಾಣೋ 
ವ್ಯವಹಾರಿಕ ಸಂಬಂಧ ವೇ ಮುಖ್ಯ.
ವ್ಯವಹಾರದಲ್ಲಿ ರಕ್ತ ಸಂಬಂಧ ವೂ ಇಲ್ಲ.ಋಣ ಸಂಬಂಧ ವೂ ಇಲ್ಲ. ಕೇವಲ ಲಾಭ ನಷ್ಟಗಳ ಲೆಕ್ಕಾಚಾರವಷ್ಟೆ. ಹಣದಿಂದ  ಲಾಭವಾದರೆ ಜ್ಞಾನದಿಂದ ನಷ್ಟ. .
ಜ್ಞಾನದಿಂದ ಲಾಭವಾದರೆ ಹಣದ ನಷ್ಟ ಕಷ್ಟ.
ಸಮಾಜದ ಋಣ ಸಂಸಾರದೊಳಗಿದ್ದರೂ  ಸಂಸಾರದ
ಋಣ ಸಮಾಜದ ಕಡೆಗೆ  ಬಂದಾಗ  ಸಾಲಮಯ  ಜಗತ್ತು
ಅದರೊಳಗಿರುವ ಮಾನವ ಋಣಮುಕ್ತರಾಗೋದಕ್ಕೆ
ಬಹಳ ಕಷ್ಟ. ಹೀಗಾಗಿ  ಋಣವನ್ನು ಕಳೆದುಕೊಳ್ಳಲು
ಧಾರ್ಮಿಕ ಕಾರ್ಯ ಹೆಚ್ಚಾಯಿತು. ಧಾರ್ಮಿಕ ಕಾರ್ಯ
ರಾಜಕೀಯದ ಕಡೆ ನಡೆದಾಗಲೆ ಅಜ್ಞಾನ ಪ್ರಾರಂಭ.
ಎಲ್ಲಿಯವರೆಗೆ ಧಾರ್ಮಿಕ ಕ್ಷೇತ್ರದಲ್ಲಿ  ಅಸಮಾನತೆ, ಅಸಹಕಾರ,‌ಸ್ವಾರ್ಥ,ಅಹಂಕಾರ,ಅಸತ್ಯ,ಅನ್ಯಾಯ
ಭ್ರಷ್ಟಾಚಾರಕ್ಕೆ  ಬೆಲೆ ಇರುವುದೋ ಅಲ್ಲಿಯವರೆಗೆ
ಧರ್ಮ  ರಕ್ಷಣೆ ಕಷ್ಟ. ಈ ಸಂಬಂಧಗಳಿಂದ ಬಿಡುಗಡೆ
ಪಡೆಯಲು ಯೋಗಿಗಳಿಂದ ಸಾಧ್ಯವೆನ್ನುತ್ತಾರೆ.
ಈಗ ಕೆಲವು ಯೋಗಿಗಳೇ ಭೋಗ ಜೀವನಕ್ಕಾಗಿ ಹೊರ
ಬಂದು ರಾಜಕೀಯ ಸೇರಿದಾಗ  ರೋಗಗ್ರಸ್ತ ಸಮಾಜ
ಹೆಚ್ಚಾಗುತ್ತದೆ. ಸಂನ್ಯಾಸ ಎಂದರೆ ಎಲ್ಲವನ್ನೂ ಬಿಡುವುದು.
ಇದರಲ್ಲಿ ಕೇವಲ ಸಂಸಾರದಿಂದ  ದೂರ ಇರುವುದು ಒಂದಾದರೆ, ಸಂಸಾರಿಗಳಿಂದಲೇ ದೂರ ಇರೋದು ಇನ್ನೊಂದು. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಋಣ ದೇಶದ 
ತುಂಬಾ ತುಂಬಿದ್ದರೂ, ದೇಶದ ಋಣ ತೀರಿಸಲು ಪ್ರಜೆಗಳಿಗೆ  ಕಷ್ಟವಾಗಿದೆ. ಸಣ್ಣ ದಾದ  ರಕ್ತ  ಸಂಬಂಧದ ಋಣವನ್ನೇ 
ತೀರಿಸಲಾಗದೆ  ಸಮಾಜದ ಋಣ ಏರಿಸಿಕೊಂಡು  ಅದನ್ನು  ತೀರಿಸಲಾಗದೆ ದೇಶವನ್ನೇ ಸಾಲಕ್ಕೆ ತಳ್ಳಿ,ವಿದೇಶದ ಋಣವನ್ನು ಹೆಚ್ಚಿಸಿ ಅವರನ್ನೇ ದೇಶದೊಳಗೆ  ಕರೆತಂದು
 ಭೂಮಿಯನ್ನೇ ಬಿಟ್ಟು  ಪರಾವಲಂಬನೆ ಗೆ ಒಳಗಾಗಿರುವಾಗ ಸ್ವಾತಂತ್ರ್ಯಯಾರ ಪಾಲಾಯಿತು? ಯಾರ ಋಣಬಾರದಿಂದ
 ಯಾರಿಗೆ ಲಾಭವಾಯಿತು? 
ರಕ್ತವನ್ನು ದಾನಮಾಡುವಷ್ಟು ವಿಜ್ಞಾನ ಜಗತ್ತು ಬೆಳೆದಿದೆ.
ರಕ್ತಹಂಚಿಕೊಂಡು ಹುಟ್ಟಿ ಬೆಳೆದ ಹತ್ತಿರದ ಸಂಬಂಧ
ಬಂಧನ ವಾದರೆ  ಅಜ್ಞಾನವಲ್ಲವೆ?
ಯಾರಿಗೆ ಯಾರೂ ಶತ್ರುವಲ್ಲ.ಮಿತ್ರರಲ್ಲ ಎನ್ನುವುದಾದರೆ
ಸಮಾಜದ ಋಣ ತೀರಿಸಲು  ಕಷ್ಟವಿಲ್ಲ. ಪರಮಾತ್ಮನು
ಎಲ್ಲರಲ್ಲಿಯೂ ಇದ್ದಾನೆಂದ ಮೇಲೆ ಯಾರೂ ಬೇರೆಯಲ್ಲ
ಆದರೆ, ಅವರವರ ಹಿಂದಿನ ಜನ್ಮದ ಧರ್ಮ ಕರ್ಮಗಳ
ಮೇಲೆ ನಿಂತಿರುವ ಋಣವನ್ನು  ಯಾರೂ  ಅರ್ಥ ಮಾಡಿ
ಕೊಳ್ಳಲಾಗದೆ  ಮನುಕುಲವು ಅತಂತ್ರಸ್ಥಿತಿಗೆ ತಲುಪಿದೆ.
ಕೊರೊನ ರೋಗವೂ  ಜೀವಕ್ಕೆ ಸವಾಲಾಗಿ ನಿಂತಿದ್ದರೂ
ಅದರೊಳಗೂ ರಾಜಕೀಯತೆ ಪ್ರದರ್ಶನ ಮಾಡುತ್ತಾ ವ್ಯವಹಾರ ನಡೆಸಿದರೆ  ಈ ರೋಗದ ಋಣವನ್ನು ದೇಹ
ಅನುಭವಿಸಲೇಬೇಕಲ್ಲವೆ?
ವರ್ಷದ ಹಿಂದೆ ಆವರಿಸಿದ ಕೊರೊನ ಮತ್ತೆ ತನ್ನ ಹಿಂದಿನ ಪ್ರಭಾವ ತೋರಿಸುತ್ತಿದೆ ಎಂದರೆ, ಮಾನವನು
ಎಚ್ಚೆತ್ತುಕೊಳ್ಳದೆ ಮತ್ತೆ ಹಿಂದಿನ ಹಾಗೆ ಭ್ರಷ್ಟಾಚಾರ ದಲ್ಲಿ
ಹೊರಗೆ ಬಂದಿದ್ದಾನೆಂದರ್ಥ.
ರೋಗದ ಪ್ರಾರಂಭದಲ್ಲಿ  ಎಲ್ಲಾ ಹೆದರಿ ಮೂಲೆ ಸೇರಿ
ಧಾರ್ಮಿಕ ಕ್ಷೇತ್ರವೇ ತಣ್ಣಗಾಗಿತ್ತು.ಆದರೆ  ಔಷಧ ಬಂದ
ಮೇಲೆ ಯಥಾಪ್ರಕಾರ ಸ್ವೇಚ್ಚಾಚಾರಕ್ಕೆ ಇಳಿಯುತ್ತಿರುವ
ಜನರಿಗೆ ಮತ್ತೆ  ಎಚ್ಚರಿಕೆಯ ಗಂಟೆ ಹೊಡೆಯುತ್ತಿರುವುದರ ಉದ್ದೇಶ ಒಂದೇ, ಜೀವ ಇದ್ದರೆ ಜೀವನ. ಜೀವನ ಎಂದರೆ ಜೀವಿಗಳ ವನ.ಒಗ್ಗಟ್ಟು ಇದ್ದರೆ ಶಕ್ತಿ. ಈ ಸೂಕ್ಷ್ಮ ವಿಚಾರಗಳು  ಜನಸಾಮಾನ್ಯರಿಗೆ  ಅರ್ಥ ವಾದರೂ ಎತ್ತರಕ್ಕೆ ಏರಿದವರಿಗೆ 
ಅರ್ಥ ಆಗದೆ  ಜನರನ್ನು ರಾಜಕೀಯಕ್ಕೆಳೆದು  ತಮ್ಮ 
ಅಧಿಕಾರವನ್ನುಚಲಾಯಿಸಿದರೆ  ಸಂಬಂಧ ಗಳಲ್ಲಿ ಯಾವ
 ಸಾತ್ವಿಕತೆ ಇರೋದಿಲ್ಲ. 
ರಕ್ತಸಂಬಂಧವಾಗಲಿ,ಋಣ ಸಂಬಂಧ ವಾಗಲಿ ಯಾರೂ ಕಣ್ಣಿನಿಂದ ನೋಡಿ ತೀರಿಸಲಾಗದು.
ಇದಕ್ಕೆ ಜ್ಞಾನದ ಚಕ್ಷುವಿನ‌ ಅಗತ್ಯವಿದೆ. ಜ್ಞಾನ ಒಳಗಿದೆ.
ಕಣ್ಣು ಹೊರಗಿದೆ. ಆಂತರಿಕ ಕಣ್ಣನ್ನು ತೆರೆಸಲು ಕೊರೊನ
ಬಂದಿದೆ. ಇದನ್ನು ವ್ಯವಹಾರದಿಂದ ಹೋಗಲಾಡಿಸಲು
ಕಷ್ಟವಿದೆ. ಧರ್ಮದಿಂದ, ಸತ್ಯಜ್ಞಾನದಿಂದ ಸಾಧ್ಯವಿದೆ.
ಸತ್ಯ ನಮ್ಮೊಳಗಿದೆ. ಸತ್ಯವೇ‌ದೇವರಾಗಿದೆ.
ಆತ್ಮಾವಲೋಕನ ಅಗತ್ಯವಾಗಿದೆ.
ಅಣುಗಾತ್ರದ ಒಂದು ವೈರಸ್‌ ಮನುಕುಲಕ್ಕೆ ಸವಾಲಾಗಿ
ನಿಂತಿರುವಾಗ  ಅಸಂಖ್ಯಾತ  ಅಣು ಪರಮಾಣುಗಳ ಹಿಂದೆ  ನಿಂತು  ತನ್ನ ರಾಜಕೀಯ ಪ್ರಭಾವಕ್ಕೆ  ತಿಳಿಯದೆ
ವಶವಾಗಿರುವ  ಮನುಕುಲದ ಒಳಿತು ವೈಚಾರಿಕತೆಯಲ್ಲಿ
ಅಡಗಿದೆ. ವೈಜ್ಞಾನಿಕ  ಜಗತ್ತು ಇದನ್ನು ವಿರೋಧಿಸಿದರೆ ವೈರಸ್ ಇನ್ನಷ್ಟು  ಉಗ್ರರೂಪ ತಾಳುವುದಿಲ್ಲವೆ?
ವಾದ ವಿವಾದಕ್ಕೆ ಸಿಲುಕದ  ಇದನ್ನು ಆತ್ಮಜ್ಞಾನದಿಂದ ತಿಳಿಯೋ ಬದಲು  ವಿಜ್ಞಾನದಿಂದ ಓಡಿಸಲು ಕಷ್ಟ.
ಯಾಕೆ ಭಾರತ ಹೀಗಾಯಿತು? ಇದಕ್ಕೆ ಸ್ವದೇಶಿಗಳು ಪರಕೀಯರನ್ನು  ಆಶ್ರಯಿಸಿದ್ದು ಕಾರಣವೆ? 
ಅಥವಾ ನಮ್ಮ ಅಜ್ಞಾನದ ಶಿಕ್ಷಣದ ರಾಜಕೀಯ ಕಾರಣವೆ?
ಮಾಧ್ಯಮಗಳು ಈ ವಿಚಾರದಲ್ಲಿ ಚರ್ಚೆ ನಡೆಸಿದರೆ ಉತ್ತಮ.
ಚರ್ಚೆ ನಡೆಸುವುದಕ್ಕೂ  ಇವರಿಗೆ ಮನೆಯಿಂದ ಹೊರಗಿರುವ  ಪ್ರತಿಷ್ಠಿತರೆ  ಆಗಬೇಕಾದರೆ ಯಾವ ಉಪಯೋಗವಿಲ್ಲ. ಅನುಭವವಿಲ್ಲದ ವಿದ್ಯೆಗಿಂತ ಅನುಭವದ ಜ್ಞಾನವೇ ದೊಡ್ಡದು. ಅದು ಪೋಷಕರಲ್ಲಿದೆ. ದೇಶದ‌ ಸಾಮಾನ್ಯ ಪ್ರಜೆಗಳಲ್ಲಿದೆ. ಪ್ರಜಾಪ್ರಭುತ್ವ  ದೇಶದಲ್ಲಿ ಪ್ರಜೆಗಳ ಸಾಮಾನ್ಯಜ್ಞಾನದಿಂದಲೇ ಬದಲಾವಣೆ ಸಾಧ್ಯವಿದೆ. ಇದನ್ನು ಮಾಧ್ಯಮದವರು ತಿಳಿದಾಗಲೆ  ಬದಲಾವಣೆ ಸಾಧ್ಯವೆನ್ನಬಹುದು. ಯಾರನ್ನೋ ಯಾರೋ ಆಳಲು ಇದು
ರಾಜಪ್ರಭುತ್ವವಲ್ಲ. ಧರ್ಮ ವೂ ಅಲ್ಲ.

Saturday, March 7, 2026

ಭೂ ಗ್ರಹದ ರಕ್ಷಣೆ

ಭಾಗವತದಲ್ಲಿ ಬರುವ ಒಂದು ವಿಷಯ, ಭೂಮಿಯನ್ನು ನೀರಿನಲ್ಲಿ ಮುಳುಗಿಸಿದ ಅಸುರರಿಂದ ಸಂಕಷ್ಟಗಳಾಗಿ ಬ್ರಹ್ಮನಿಗೆ ಸೃಷ್ಟಿ ಕಾರ್ಯಕ್ಕೆ ಅಡಚಣೆಗಳಾದಾಗ ಬ್ರಹ್ಮನ  ಮೂಗಿನ ಹೊಳ್ಳೆಯಿಂದ ಭಗವಂತನು ವರಾಹಾವತಾರದಲ್ಲಿ ಹೊರಬಂದು ಬೃಹದಾಕಾರದಿಂದ ಬೆಳೆದು  ನಿಂತು  ಸಮುದ್ರದೊಳಗೆ ಹೊಕ್ಕಿ  ಭೂಮಿಯನ್ನು ಎತ್ತಿ ಸ್ವಸ್ಥಾನದಲ್ಲಿರಿದನೆಂದಿದೆ. ಆ ಸಮಯದಲ್ಲಿ  ಹಿರಣ್ಯಾಕ್ಷನ ಉಪಟಳ  ತ್ರಿಲೋಕದವರೆಗೂ ಸಹಿಸಲಾಗದ ಪರಿಸ್ಥಿತಿಯಲ್ಲಿ  ಹಿರಣ್ಯಾಕ್ಷನನ್ನು  ಭಗವಂತ ಕೊಂದನೆಂದಿದೆ.
ಅಂದರೆ  ಭೂಮಿ ಇಲ್ಲವಾದಾಗಲೂ   ದೇವಾಸುರರು  ಜೀವಿಸುತ್ತಿದ್ದರೆಂದಾಯಿತು. ಸಪ್ತ ಲೋಕವೆಂಬುದಿದೆ ಅದರಲ್ಲಿ  ಅನ್ಯ ಜೀವಿಗಳಿವೆ.ಎಲ್ಲವನ್ನೂ  ತನ್ನ ಹತೋಟಿಯಲ್ಲಿಟ್ಟುಕೊಂಡಿರುವ ಮೂಲ ಶಕ್ತಿ ಒಂದೇ ಆಗಿದೆ. ಮೂಲಪುರುಷನೇ ಅವನಾಗಿದ್ದಾನೆ. ಅವನಿಂದಲೇ  ಜನ್ಮ ಪಡೆದ ದೇವಾಸುರರು,ಮಾನವರು,ಜೀವ ಜಂತು ಚರಾಚರಗಳೂ  ತಮ್ಮದೇ ಆದ  ದಾರಿಯಲ್ಲಿ ನಡೆದರೂ  ಮೂಲದಿಂದ ‌ಬೇರೆಯಾಗದು. 
ಹೀಗಾಗಿ ಆಧ್ಯಾತ್ಮ ಆದಿ ಆತ್ಮ ಆದಿ ದೇವ,ಆದಿ ಪುರುಷ ಶಕ್ತಿಯೆಡೆಗೆ‌  ನಡೆಯುವುದು ಅಧ್ಯಾತ್ಮವಾಗಿದೆ.‌

ಎಷ್ಟೋ ಪುರಾಣಗಳ ಕಥೆಯಲ್ಲಿ  ಆಧ್ಯಾತ್ಮ ಆದಿ ಭೌತಿಕ ಗಳ  ಸಮಾಗಮವಾಗಿದೆ. ಅದರ ಅರಿವು ಅಲ್ಪ ಸ್ವಲ್ಪ ಮಾನವ ಅರಿತು ನಡೆದು ಮಹಾತ್ಮರಾಗಿರುವರು. 
ಅಮಾನುಷ ಶಕ್ತಿ‌  ಜಗತ್ತನ್ನು ಆಳುತ್ತದೆ.‌ಆಳುವಾಗ  ಧರ್ಮ ಸೂಕ್ಮವಾಗಲಿ ಸತ್ಯವಾಗಲಿ  ತಪ್ಪಿದ್ದರೆ‌  ಆಳಾಗಿ ಜನಿಸೋದನ್ನು ತಪ್ಪಿಸಲಾಗದು. 
ಈಗಲೂ ನಾವೆಲ್ಲರೂ ಆಳುಗಳೇ ಆಗಿದ್ದರೂ ಅರಸರಾಗುವ ಕನಸನ್ನು ಕಾಣುತ್ತಾ‌ ಜೀವ ಹೋಗುತ್ತದೆ‌ ಮತ್ತೆ ಬರುತ್ತದೆ.ಕಾಲಮಾನಕ್ಕೆ ತಕ್ಕಂತೆ ಕೆಲವುಬದಲಾವಣೆ ಭೂಮಿಯಲ್ಲಾದರೂ  ಅನ್ಯಗ್ರಹದಲ್ಲಾಗಿರದು.‌