ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತಿ ಯನ್ನರಿತ ಪೋಷಕರನ್ನು ಕೇಳದಿರೋದೆ ಪರಿಸ್ಥಿತಿ ಹಾಳಾಗಲು ಕಾರಣ. ಇಷ್ಟಕ್ಕೂ ಮನೆಯೊಳಗಿನ ಸಮಸ್ಯೆಗೆ ಮಕ್ಕಳಾದರೂ ಏನು ಮಾಡಲು ಸಾಧ್ಯ. ಪೋಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ ಎನ್ನಬಹುದು. ನಮ್ಮಲ್ಲಿರುವ ದೋಷಗಳನ್ನು ನಾವೇ ಕಂಡುಕೊಳ್ಳಲು ಸಾಧ್ಯವಾದರೆ ಪ್ರಯತ್ನಪಡಬೇಕಷ್ಟೆ. ಅದೂ ಸಾಧ್ಯವಾಗದಿದ್ದರೆ ಬೇರೆಯವರನ್ನು ಸರಿಪಡಿಸಲಾಗದೆಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರೆ ತಿಳಿಸಿದ್ದಾರಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರಕ್ಕೆ ಬಂದೂ ಸಂನ್ಯಾಸಿಗಳಾಗಿದ್ದರು. ಇಂದು ಸಂನ್ಯಾಸಿಗಳಾಗಿದ್ದು ಸಂಸಾರಿಗಳ ಋಣದಲ್ಲಿರುವವರು ಬಹಳ ಮಂದಿ ಇದ್ದಾರೆ. ಮಕ್ಕಳ ವಿಚಾರ ಪೋಷಕರಿಗೇ ಅರ್ಥ ವಾಗದಿದ್ದರೆ ಹೊರಗಿನ ಗುರುಗಳಾದರೂ ಏನೂ ಮಾಡಲಾಗದು.
ಎಲ್ಲರೂ ದೇಶದ ಪ್ರಜೆಗಳಾಗಿ ದೇಶದ ಶಿಕ್ಷಣದ ಬಗ್ಗೆ ಚಿಂತನೆ ನಡೆಸಲು ಅಧಿಕಾರ ಬೇಕೆ? ದೇಹದೊಳಗೆ ದೇಶೀಯ ಶಿಕ್ಷಣವಿಲ್ಲದೆ ವಿದೇಶಿ ಶಿಕ್ಷಣ ನೀಡಿ ಸರ್ಕಾರದ ವಿರುದ್ದ ನಿಂತು ಬೇಡುವವರಿದ್ದರೆದೇಶ ಮುಂದೆ ನಡೆಯಲು
ಸಾಧ್ಯವೆ? ವಿದೇಶಿಗಳೆ ಮುಂದೆ ಬರುತ್ತಾರಷ್ಟೆ. ಮನೆಯೊಳಗೆ ವಿದೇಶಿಗರನ್ನು ಬೆಳೆಸೋ ಶಿಕ್ಷಣದಿಂದ ಪೋಷಕರೆ ಪರದೇಶಿಗಳಾಗಿದ್ದರೆ ಅವರಿಗೆ ಸರ್ಕಾರ ಸಹಾಯ ಮಾಡಿ
ಸಾಕೋವಷ್ಟು ಮುಂದೆ ಬರದಿದ್ದರೆ ಸರಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿದ್ದ ಸಾಮಾನ್ಯಜ್ಞಾನ
ತಿರಸ್ಕರಿಸಿ ನಡೆದ ಪರಿಣಾಮವೆ ಇಂದಿನ ಕೊರೊನ
ಎನ್ನಬಹುದೆ?
ಔಷಧ ದೇಹಕ್ಕೆ ಸೇರಿಸಬಹುದು.ಆತ್ಮಕ್ಕೆ ಔಷಧ ಬೇಡವೆ?. ಆತ್ಮ ಅನಾರೋಗ್ಯದಲ್ಲೇ ಹೋದರೆ ಮತ್ತೆ ಹುಟ್ಟಿದಾಗ ರೋಗವೂ ಇರುತ್ತದೆ ಅಲ್ಲವೆ? ಈ ವಿಚಾರಒಂದು ವರ್ಷ
ದಿಂದಲೂ ತಿಳಿಸುತ್ತಿದ್ದರೂ ಈಗಲೂರಾಜಕೀಯಬಿಡದಿದ್ದರೆ
ಪರಿಹಾರವಿಲ್ಲ. ಆತ್ಮ ಸಾಯಲು ಸಾಧ್ಯವೆ?
ರಕ್ತ ಸಂಬಂಧ ದೊಡ್ಡದೋ ಋಣ ಸಂಬಂಧ ವೋ?
ಮಾನವನ ಜನ್ಮವಾಗೋದು ರಕ್ತ ಸಂಬಂಧ ದಿಂದ.
ಜನ್ಮದಾರಭ್ಯದಿಂದ ಹಿಡಿದು ಮರಣದವರೆಗೂ ಬೆಳೆಯುವ ಋಣ ಸಂಬಂಧ ವನ್ನು ಈವರೆಗೆ ಯಾರೂಪೂರ್ಣಪ್ರಮಾಣ
ದಲ್ಲಿ ತೀರಿಸಲಾಗಿಲ್ಲ. ಹೀಗಾಗಿ ಜನ್ಮ ಜನ್ಮಗಳ ಸಂಬಂಧ ಗಳು ಮಾನವನಿಗೆ ಬಿಡಿಸಲಾಗದಕಗ್ಗಂಟಾಗುತ್ತಿದೆ.
ಋಣ ಎಂದರೆ ಸಾಲ. ಇಲ್ಲಿ ಸಂಸಾರ ಹಾಗು ಸಮಾಜದ ಸಾಲವನ್ನು ತೀರಿಸಲು ಜೀವಾತ್ಮಭೂಮಿಗೆ ಬಂದಿರುವಾಗ
ಅದನ್ನು ತೀರಿಸಲು ಬೇಕು ಸತ್ಯಜ್ಞಾನ.
ಮಿಥ್ಯಜ್ಞಾನದಿಂದ ವ್ಯವಹಾರ ನಡೆಸಬಹುದು. ವ್ಯವಹಾರದಿಂದ. ಹಣ,ಅಧಿಕಾರ ಪಡೆದು ಸಮಾಜದ ಋಣ ತೀರಿಸಬಹುದು. ಯಾವಾಗಅಜ್ಞಾನ ಹೆಚ್ಚಾಗುವುದೋ ಆಗ
ಇನ್ನಷ್ಟು ಅಧರ್ಮಕ್ಕೆತಲೆಬಾಗಿ ಋಣವನ್ನು ಹೆಚ್ಚಿಸಿಕೊಂಡು
ಸಮಾಜವನ್ನುದಾರಿ ತಪ್ಪಿಸುವವರು ಬೆಳೆಯುತ್ತಾರೆ.
ಹಿಂದಿನ ಕಾಲದಲ್ಲಿ ಈ ಕಾರಣಕ್ಕಾಗಿಯೇ ಪ್ರಾಥಮಿಕ
ಶಿಕ್ಷಣವನ್ನು ಮೂಲ ಧರ್ಮ,ಕರ್ಮ,ಭಾಷೆ, ಸಂಸ್ಕೃತಿ
ಬಿಡದೆ ನೀಡುತ್ತಿದ್ದರು. ಇದರಿಂದಾಗಿ ಮಕ್ಕಳಲ್ಲಿ ನೈತಿಕತೆ
ಬೆಳೆಸೋ ಸಮಾನತೆಯ ಶಿಕ್ಷಣ ಅಗತ್ಯವಿದೆ. ಆದರೆ ಕಾಲದ ಪ್ರಭಾವ ಮಿತಿಮೀರಿದ ಅಜ್ಞಾನದಲ್ಲಿ, ಸಮಾನತೆಯ ಹೆಸರಲ್ಲಿ ರಾಜಕೀಯತೆಯನ್ನು ಬೆಳೆಸಿ ಮಾನವೀಯ
ಮೌಲ್ಯಗಳನ್ನು ಮೂಲೆಗೆ ತಳ್ಳಿದರೆ ಇಲ್ಲಿ ಬಕಣ್ಣಿಗೆ ಕಾಣೋ
ವ್ಯವಹಾರಿಕ ಸಂಬಂಧ ವೇ ಮುಖ್ಯ.
ವ್ಯವಹಾರದಲ್ಲಿ ರಕ್ತ ಸಂಬಂಧ ವೂ ಇಲ್ಲ.ಋಣ ಸಂಬಂಧ ವೂ ಇಲ್ಲ. ಕೇವಲ ಲಾಭ ನಷ್ಟಗಳ ಲೆಕ್ಕಾಚಾರವಷ್ಟೆ. ಹಣದಿಂದ ಲಾಭವಾದರೆ ಜ್ಞಾನದಿಂದ ನಷ್ಟ. .
ಜ್ಞಾನದಿಂದ ಲಾಭವಾದರೆ ಹಣದ ನಷ್ಟ ಕಷ್ಟ.
ಸಮಾಜದ ಋಣ ಸಂಸಾರದೊಳಗಿದ್ದರೂ ಸಂಸಾರದ
ಋಣ ಸಮಾಜದ ಕಡೆಗೆ ಬಂದಾಗ ಸಾಲಮಯ ಜಗತ್ತು
ಅದರೊಳಗಿರುವ ಮಾನವ ಋಣಮುಕ್ತರಾಗೋದಕ್ಕೆ
ಬಹಳ ಕಷ್ಟ. ಹೀಗಾಗಿ ಋಣವನ್ನು ಕಳೆದುಕೊಳ್ಳಲು
ಧಾರ್ಮಿಕ ಕಾರ್ಯ ಹೆಚ್ಚಾಯಿತು. ಧಾರ್ಮಿಕ ಕಾರ್ಯ
ರಾಜಕೀಯದ ಕಡೆ ನಡೆದಾಗಲೆ ಅಜ್ಞಾನ ಪ್ರಾರಂಭ.
ಎಲ್ಲಿಯವರೆಗೆ ಧಾರ್ಮಿಕ ಕ್ಷೇತ್ರದಲ್ಲಿ ಅಸಮಾನತೆ, ಅಸಹಕಾರ,ಸ್ವಾರ್ಥ,ಅಹಂಕಾರ,ಅಸತ್ಯ,ಅನ್ಯಾಯ
ಭ್ರಷ್ಟಾಚಾರಕ್ಕೆ ಬೆಲೆ ಇರುವುದೋ ಅಲ್ಲಿಯವರೆಗೆ
ಧರ್ಮ ರಕ್ಷಣೆ ಕಷ್ಟ. ಈ ಸಂಬಂಧಗಳಿಂದ ಬಿಡುಗಡೆ
ಪಡೆಯಲು ಯೋಗಿಗಳಿಂದ ಸಾಧ್ಯವೆನ್ನುತ್ತಾರೆ.
ಈಗ ಕೆಲವು ಯೋಗಿಗಳೇ ಭೋಗ ಜೀವನಕ್ಕಾಗಿ ಹೊರ
ಬಂದು ರಾಜಕೀಯ ಸೇರಿದಾಗ ರೋಗಗ್ರಸ್ತ ಸಮಾಜ
ಹೆಚ್ಚಾಗುತ್ತದೆ. ಸಂನ್ಯಾಸ ಎಂದರೆ ಎಲ್ಲವನ್ನೂ ಬಿಡುವುದು.
ಇದರಲ್ಲಿ ಕೇವಲ ಸಂಸಾರದಿಂದ ದೂರ ಇರುವುದು ಒಂದಾದರೆ, ಸಂಸಾರಿಗಳಿಂದಲೇ ದೂರ ಇರೋದು ಇನ್ನೊಂದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಋಣ ದೇಶದ
ತುಂಬಾ ತುಂಬಿದ್ದರೂ, ದೇಶದ ಋಣ ತೀರಿಸಲು ಪ್ರಜೆಗಳಿಗೆ ಕಷ್ಟವಾಗಿದೆ. ಸಣ್ಣ ದಾದ ರಕ್ತ ಸಂಬಂಧದ ಋಣವನ್ನೇ
ತೀರಿಸಲಾಗದೆ ಸಮಾಜದ ಋಣ ಏರಿಸಿಕೊಂಡು ಅದನ್ನು ತೀರಿಸಲಾಗದೆ ದೇಶವನ್ನೇ ಸಾಲಕ್ಕೆ ತಳ್ಳಿ,ವಿದೇಶದ ಋಣವನ್ನು ಹೆಚ್ಚಿಸಿ ಅವರನ್ನೇ ದೇಶದೊಳಗೆ ಕರೆತಂದು
ಭೂಮಿಯನ್ನೇ ಬಿಟ್ಟು ಪರಾವಲಂಬನೆ ಗೆ ಒಳಗಾಗಿರುವಾಗ ಸ್ವಾತಂತ್ರ್ಯಯಾರ ಪಾಲಾಯಿತು? ಯಾರ ಋಣಬಾರದಿಂದ
ಯಾರಿಗೆ ಲಾಭವಾಯಿತು?
ರಕ್ತವನ್ನು ದಾನಮಾಡುವಷ್ಟು ವಿಜ್ಞಾನ ಜಗತ್ತು ಬೆಳೆದಿದೆ.
ರಕ್ತಹಂಚಿಕೊಂಡು ಹುಟ್ಟಿ ಬೆಳೆದ ಹತ್ತಿರದ ಸಂಬಂಧ
ಬಂಧನ ವಾದರೆ ಅಜ್ಞಾನವಲ್ಲವೆ?
ಯಾರಿಗೆ ಯಾರೂ ಶತ್ರುವಲ್ಲ.ಮಿತ್ರರಲ್ಲ ಎನ್ನುವುದಾದರೆ
ಸಮಾಜದ ಋಣ ತೀರಿಸಲು ಕಷ್ಟವಿಲ್ಲ. ಪರಮಾತ್ಮನು
ಎಲ್ಲರಲ್ಲಿಯೂ ಇದ್ದಾನೆಂದ ಮೇಲೆ ಯಾರೂ ಬೇರೆಯಲ್ಲ
ಆದರೆ, ಅವರವರ ಹಿಂದಿನ ಜನ್ಮದ ಧರ್ಮ ಕರ್ಮಗಳ
ಮೇಲೆ ನಿಂತಿರುವ ಋಣವನ್ನು ಯಾರೂ ಅರ್ಥ ಮಾಡಿ
ಕೊಳ್ಳಲಾಗದೆ ಮನುಕುಲವು ಅತಂತ್ರಸ್ಥಿತಿಗೆ ತಲುಪಿದೆ.
ಕೊರೊನ ರೋಗವೂ ಜೀವಕ್ಕೆ ಸವಾಲಾಗಿ ನಿಂತಿದ್ದರೂ
ಅದರೊಳಗೂ ರಾಜಕೀಯತೆ ಪ್ರದರ್ಶನ ಮಾಡುತ್ತಾ ವ್ಯವಹಾರ ನಡೆಸಿದರೆ ಈ ರೋಗದ ಋಣವನ್ನು ದೇಹ
ಅನುಭವಿಸಲೇಬೇಕಲ್ಲವೆ?
ವರ್ಷದ ಹಿಂದೆ ಆವರಿಸಿದ ಕೊರೊನ ಮತ್ತೆ ತನ್ನ ಹಿಂದಿನ ಪ್ರಭಾವ ತೋರಿಸುತ್ತಿದೆ ಎಂದರೆ, ಮಾನವನು
ಎಚ್ಚೆತ್ತುಕೊಳ್ಳದೆ ಮತ್ತೆ ಹಿಂದಿನ ಹಾಗೆ ಭ್ರಷ್ಟಾಚಾರ ದಲ್ಲಿ
ಹೊರಗೆ ಬಂದಿದ್ದಾನೆಂದರ್ಥ.
ರೋಗದ ಪ್ರಾರಂಭದಲ್ಲಿ ಎಲ್ಲಾ ಹೆದರಿ ಮೂಲೆ ಸೇರಿ
ಧಾರ್ಮಿಕ ಕ್ಷೇತ್ರವೇ ತಣ್ಣಗಾಗಿತ್ತು.ಆದರೆ ಔಷಧ ಬಂದ
ಮೇಲೆ ಯಥಾಪ್ರಕಾರ ಸ್ವೇಚ್ಚಾಚಾರಕ್ಕೆ ಇಳಿಯುತ್ತಿರುವ
ಜನರಿಗೆ ಮತ್ತೆ ಎಚ್ಚರಿಕೆಯ ಗಂಟೆ ಹೊಡೆಯುತ್ತಿರುವುದರ ಉದ್ದೇಶ ಒಂದೇ, ಜೀವ ಇದ್ದರೆ ಜೀವನ. ಜೀವನ ಎಂದರೆ ಜೀವಿಗಳ ವನ.ಒಗ್ಗಟ್ಟು ಇದ್ದರೆ ಶಕ್ತಿ. ಈ ಸೂಕ್ಷ್ಮ ವಿಚಾರಗಳು ಜನಸಾಮಾನ್ಯರಿಗೆ ಅರ್ಥ ವಾದರೂ ಎತ್ತರಕ್ಕೆ ಏರಿದವರಿಗೆ
ಅರ್ಥ ಆಗದೆ ಜನರನ್ನು ರಾಜಕೀಯಕ್ಕೆಳೆದು ತಮ್ಮ
ಅಧಿಕಾರವನ್ನುಚಲಾಯಿಸಿದರೆ ಸಂಬಂಧ ಗಳಲ್ಲಿ ಯಾವ
ಸಾತ್ವಿಕತೆ ಇರೋದಿಲ್ಲ.
ರಕ್ತಸಂಬಂಧವಾಗಲಿ,ಋಣ ಸಂಬಂಧ ವಾಗಲಿ ಯಾರೂ ಕಣ್ಣಿನಿಂದ ನೋಡಿ ತೀರಿಸಲಾಗದು.
ಇದಕ್ಕೆ ಜ್ಞಾನದ ಚಕ್ಷುವಿನ ಅಗತ್ಯವಿದೆ. ಜ್ಞಾನ ಒಳಗಿದೆ.
ಕಣ್ಣು ಹೊರಗಿದೆ. ಆಂತರಿಕ ಕಣ್ಣನ್ನು ತೆರೆಸಲು ಕೊರೊನ
ಬಂದಿದೆ. ಇದನ್ನು ವ್ಯವಹಾರದಿಂದ ಹೋಗಲಾಡಿಸಲು
ಕಷ್ಟವಿದೆ. ಧರ್ಮದಿಂದ, ಸತ್ಯಜ್ಞಾನದಿಂದ ಸಾಧ್ಯವಿದೆ.
ಸತ್ಯ ನಮ್ಮೊಳಗಿದೆ. ಸತ್ಯವೇದೇವರಾಗಿದೆ.
ಆತ್ಮಾವಲೋಕನ ಅಗತ್ಯವಾಗಿದೆ.
ಅಣುಗಾತ್ರದ ಒಂದು ವೈರಸ್ ಮನುಕುಲಕ್ಕೆ ಸವಾಲಾಗಿ
ನಿಂತಿರುವಾಗ ಅಸಂಖ್ಯಾತ ಅಣು ಪರಮಾಣುಗಳ ಹಿಂದೆ ನಿಂತು ತನ್ನ ರಾಜಕೀಯ ಪ್ರಭಾವಕ್ಕೆ ತಿಳಿಯದೆ
ವಶವಾಗಿರುವ ಮನುಕುಲದ ಒಳಿತು ವೈಚಾರಿಕತೆಯಲ್ಲಿ
ಅಡಗಿದೆ. ವೈಜ್ಞಾನಿಕ ಜಗತ್ತು ಇದನ್ನು ವಿರೋಧಿಸಿದರೆ ವೈರಸ್ ಇನ್ನಷ್ಟು ಉಗ್ರರೂಪ ತಾಳುವುದಿಲ್ಲವೆ?
ವಾದ ವಿವಾದಕ್ಕೆ ಸಿಲುಕದ ಇದನ್ನು ಆತ್ಮಜ್ಞಾನದಿಂದ ತಿಳಿಯೋ ಬದಲು ವಿಜ್ಞಾನದಿಂದ ಓಡಿಸಲು ಕಷ್ಟ.
ಯಾಕೆ ಭಾರತ ಹೀಗಾಯಿತು? ಇದಕ್ಕೆ ಸ್ವದೇಶಿಗಳು ಪರಕೀಯರನ್ನು ಆಶ್ರಯಿಸಿದ್ದು ಕಾರಣವೆ?
ಅಥವಾ ನಮ್ಮ ಅಜ್ಞಾನದ ಶಿಕ್ಷಣದ ರಾಜಕೀಯ ಕಾರಣವೆ?
ಮಾಧ್ಯಮಗಳು ಈ ವಿಚಾರದಲ್ಲಿ ಚರ್ಚೆ ನಡೆಸಿದರೆ ಉತ್ತಮ.
ಚರ್ಚೆ ನಡೆಸುವುದಕ್ಕೂ ಇವರಿಗೆ ಮನೆಯಿಂದ ಹೊರಗಿರುವ ಪ್ರತಿಷ್ಠಿತರೆ ಆಗಬೇಕಾದರೆ ಯಾವ ಉಪಯೋಗವಿಲ್ಲ. ಅನುಭವವಿಲ್ಲದ ವಿದ್ಯೆಗಿಂತ ಅನುಭವದ ಜ್ಞಾನವೇ ದೊಡ್ಡದು. ಅದು ಪೋಷಕರಲ್ಲಿದೆ. ದೇಶದ ಸಾಮಾನ್ಯ ಪ್ರಜೆಗಳಲ್ಲಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಸಾಮಾನ್ಯಜ್ಞಾನದಿಂದಲೇ ಬದಲಾವಣೆ ಸಾಧ್ಯವಿದೆ. ಇದನ್ನು ಮಾಧ್ಯಮದವರು ತಿಳಿದಾಗಲೆ ಬದಲಾವಣೆ ಸಾಧ್ಯವೆನ್ನಬಹುದು. ಯಾರನ್ನೋ ಯಾರೋ ಆಳಲು ಇದು
ರಾಜಪ್ರಭುತ್ವವಲ್ಲ. ಧರ್ಮ ವೂ ಅಲ್ಲ.
No comments:
Post a Comment