ನಮ್ಮನ್ನು ನಡೆಸುತ್ತಿರೋದು ರಾಮನೆ ರಾವಣನೆ?
ಶ್ರೀ ರಾಮನವಮಿಯ ಶುಭಾಶಯಗಳು
ರಾಮರಾಜ್ಯದ ಕನಸಿನಲ್ಲಿ ಮುಂದೆ ನಡೆಯುತ್ತಿರುವ ಭಾರತದಲ್ಲಿ ಸಾಕಷ್ಟು ರಾಮರುಗಳು ಶ್ರಮಪಟ್ಟರೂ ಅಷ್ಟೇ ರಾವಣರ ಜನ್ಮಗಳಾಗುತ್ತಿವೆ.
ರಾಮರಾವಣರ ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಮಾನವರಿಗಿದ್ದರೆ ರಾಮ ಯಾರು ರಾವಣ ಯಾರೆಂಬುದು ಕಣ್ಣಿಗೆ ಕಾಣುತ್ತಿತ್ತು.ಅದನ್ನು ಶಿಕ್ಷಣದಲ್ಲಿಯೇ ಗುರುತಿಸದಂತೆ ಮಾಡಿಕೊಂಡು ಆಳಿಕೊಂಡಿರುವ ರಾಜಕೀಯ ಶಕ್ತಿಯ ಮುಂದೆ ಯಾವುದೇ ರಾಮನ ಗುಡಿ ಗೋಪುರ ರಾಮನ ತತ್ವವನ್ನು ತಿಳಿಸಲಾರದು.ಆದರೂ ಅಂತಹ ಸ್ಥಾನಮಾನವನ್ನು ಕೊಟ್ಟಿರುವಾಗ ಶ್ರೀ ರಾಮನ ರಕ್ಷಣೆ ಇದ್ದೇ ಇರುತ್ತದೆ.
ಭಕ್ತಿಯೋಗದ ಮುಂದೆ ಯಾವ ರಾಜಕೀಯ ಶಕ್ತಿ ನಿಲ್ಲದು.
ಒಗ್ಗಟ್ಟು ತತ್ವದೊಳಗಿದ್ದರೆ ಶಾಂತಿ.ತಂತ್ರವೇ ಮೇಲೆದ್ದರೆ ಕ್ರಾಂತಿ.
ಕ್ರಾಂತಿಯ ನಂತರ ಶಾಂತಿ ನೆಲೆಸಬಹುದೆ?
ಹಿಂದೆ ಯುದ್ದಗಳಾದವು ಸಾಕಷ್ಟು ಜೀವ ಪ್ರಾಣ ಹೋದವು. ನಂತರ ಸೃಷ್ಟಿ ಬೆಳೆಯಿತು. ಜನಸಂಖ್ಯೆಸ್ಪೋಟವೂ ಆಯಿತು. ಇಷ್ಟಾದರೂ ಒಳಗಿರುವ ತತ್ವಜ್ಞಾನ ಹಿಂದುಳಿದಿದೆ ಎಂದರೆ ನಮ್ಮ ಸ್ವಾರ್ಥ ಅಹಂಕಾರ ಪೂರಿತ ರಾಜಕೀಯ ದೆಡೆಗೆ ನಮ್ಮ ಮನಸ್ಸು ಹರಿದು ಹೊರನಡೆಯಿತೇ ಹೊರತು ನಮ್ಮ ಸ್ವಂತ ಬುದ್ದಿ ಜ್ಞಾನವನ್ನು ಬೆಳೆಸುವ ಶಿಕ್ಷಣ ಕೊಡದೆ ಆಳಿದವರನ್ನು ಇಂದು ದ್ವೇಷ ಮಾಡುತ್ತೇವೆ. ಆದರೆ ನಮ್ಮ ಜೀವನ ನಡೆದಿರೋದೆ ಅದೇ ಶಿಕ್ಷಣದಲ್ಲಿ ಎಂದರೆ ದ್ವೇಷದಿಂದ ರಾಮನ ಕಾಣಬಹುದೆ? ರಾವಣನನ್ನೆ?
ಸೀತೆಯ ಅಪಹರಣಕ್ಕೆ ಕಾರಣವಾಗಿದ್ದ ರಾವಣನ ಹಿಂದಿನ ದ್ವೇಷದಿಂದ ದೊಡ್ಡ ಯುದ್ದವೇ ನಡೆಯಿತು. ಆದರೂ ರಾವಣನ ಶಿವಭಕ್ತಿ ಶ್ರೀ ರಾಮಚಂದ್ರನಂತಹ ಧರ್ಮಾತ್ಮನನ್ನೇ ಅಲ್ಲಾಡಿಸುವಂತಿತ್ತು. ಕೊನೆಯಲ್ಲಿ ಶ್ರೀ ರಾಮ ಶಿವನನ್ನು ಪೂಜಿಸಿ ರಾವಣನ ವಧೆ ಮಾಡಬೇಕಾಯಿತೆನ್ನುವುದು ಪುರಾಣ ಸತ್ಯ.
ಸತ್ಯ ದ ಹಿಂದಿನ ಯೋಗವನ್ನು ಅರ್ಥ ಮಾಡಿಕೊಳ್ಳಲು ಜ್ಞಾನಬೇಕಿದೆ. ಅಂದರೆ ದೇವಾನುದೇವತೆಗಳಿಗೂ ಈ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಲು ಜನಬಲ ಅಧಿಕಾರ ಬಲದ ಜೊತೆಗೆ ಜ್ಞಾನದ ಬಲ ಅಗತ್ಯವಿತ್ತು.
ಅಜ್ಞಾನದ ವಶದಲ್ಲಿ ಓಡುತ್ತಿರುವಮನಷ್ಯನಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಯೋಗ ಶಕ್ತಿಯಿಲ್ಲದೆ ಭೋಗದೆಡೆಗೆ ವೈಭವದ ಆಚರಣೆಗಳನ್ನು ಮಾಡಿದರೆ ದೈವತ್ವದೆಡೆಗೆ ಸಾಗಬಹುದೆ?
ಕಲಿಕೆಯಲ್ಲಿ ಭೌತಿಕದ ಸತ್ಯ ತಿಳಿಸಬಹುದು.ಆದರೆ ಆಧ್ಯಾತ್ಮಿಕ ಶಕ್ತಿಯನ್ನು ಗುರುತಿಸದಿದ್ದರೆ ವ್ಯರ್ಥ.
ಇದು ಶ್ರೀ ರಾಮನಂತಹ ಮಹಾತ್ಮನನ್ನು ಧರ್ಮಾತ್ಮನನ್ನು, ಪರಮಾತ್ಮನನ್ನು ಪ್ರಜಾಪಾಲಕನನ್ನು ಮಹಾರಾಜನನ್ನು ಕೇವಲ ಒಬ್ಬ ಮನುಷ್ಯರೂಪದ ವ್ಯಕ್ತಿ ಎಂದು ಕಾಣದೆ ಮಹಾಶಕ್ತಿ ವಿಷ್ಣುವಿನವತಾರ ಪುರುಷ ಪರಮಾತ್ಮನೆಂದು ಕಂಡು ಆರಾಧಿಸಿದ ದಾಸರ ಸಾಲಿನಲ್ಲಿ ನಿಲ್ಲಿಸಬಹುದೆ?
ಪರಮಸತ್ಯ ಧರ್ಮ ಕ್ಕೆ ಶರಣಾದವರು ದಾಸರಾದವರು ಕೇವಲ ಶ್ರೀ ರಾಮ ಜಪದಿಂದಲೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡರೆಂದರೆ ಶ್ರೀ ರಾಮ ವ್ಯಕ್ತಿಯಲ್ಲ ಮಹಾಶಕ್ತಿ.
ಈಗಲೂ ರಾಮನ ಭಕ್ತರ ಶಕ್ತಿ ಯೋಗದಿಂದ ಕೂಡಿದರೆ ರಾಮರಾಜ್ಯವಾಗುತ್ತದೆ. ಯಾವಾಗಿದು ಭೋಗಕ್ಕೆ ಎಳೆಯುವುದೋ ಅದೇ ರಾವಣನೆಡೆಗೆ ನೆಡೆಸುತ್ತದೆ.
ರಾವಣನಂತಹ ಮಹಾಜ್ಞಾನಿ ಈಗಿಲ್ಲ. ಆದರೂ ಅವನನ್ನು ದ್ವೇಷ ಮಾಡುವ ರಾಜಕೀಯವಿದೆ.
ದೇಶವನ್ನು ಸ್ಮಾರ್ಟ್ ಮಾಡಲು ಹಣ ಬೇಕು. ಅದೇ ದೇಶವನ್ನು ಧರ್ಮದಿಂದ ರಕ್ಷಣೆ ಮಾಡಲು ಸತ್ಯಜ್ಞಾನದ ಶಿಕ್ಷಣ ಕೊಡಬೇಕು.
ಸತ್ಯವೇ ದೇವರೆಂದರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ ತೋರಿಸಲಾಗದು.ಕಾರಣ ಒಳಗೇ ಅಡಗಿರುವ ಸತ್ಯವನ್ನು ಸದ್ಬಳಕೆ ಮಾಡಿಕೊಳ್ಳಲು ಅಂತರಂಗದ ಶುದ್ದಿ ಅಗತ್ಯವಿದೆ. ಅಂತರ ಬೆಳೆಸಿರುವ ಈ ರಾಜಕೀಯದ ಅಗತ್ಯವಿಲ್ಲ.
ಇರಲಿ ಈಗಲೂ ನಮ್ಮಲ್ಲಿ ರಾಮನಿದ್ದಾನೆ ರಾವಣನೂ ಇರುವನು. ನಮ್ಮ ಜೀವನಕ್ಕೆ ಶಾಂತಿ ಬೇಕೆಂದರೆ ರಾಮನ ತತ್ವದೆಡೆಗೆ ಸಾಗಬೇಕು.
ಅಂದಿನ ರಾಜಪ್ರಭುತ್ವದ ಪ್ರಕಾರ ರಾಜನಂತೆ ಪ್ರಜೆ.
ಈಗಿನಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಂತೆ ರಾಜಕಾರಣಿಗಳಿದ್ದಾರೆ.
ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹಾಕುತ್ತಾ ವಾದ ವಿವಾದಗಳಿಗೆ ಸಹಕರಿಸುತ್ತಾ ಮಧ್ಯವರ್ತಿಗಳು ಅಂತರವನ್ನು ಬೆಳೆಸಿ ಜನರ ಹಣವನ್ನು ಸಮಯವನ್ನು ಜ್ಞಾನವನ್ನು ನಿರ್ಲಕ್ಷ್ಯ ಮಾಡಿರುವ ಶಿಕ್ಷಣವನ್ನು ಬೆಳೆಸುತ್ತಾ ಲಕ್ಷ ಕೋಟಿ ಗಳಿಸಿದ್ದರೂ ನಿಜವಾದ ಶಾಂತಿ ಸಿಗಲಿಲ್ಲ ಎಂದರೆ ನಮ್ಮ ಲಕ್ಷ್ಯ ಹಣದತ್ತ ಜ್ಞಾನದತ್ತವಿಲ್ಲ ಎಂದರ್ಥ.
ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲಕರಾಗಲಿ, ಪ್ರಜಾಪರಿಪಾಲಕರಾಗಲಿ ತ್ರೇತಾಯುಗದ ನಂತರ ಬಂದಿಲ್ಲ.ಶ್ರೀ ಕೃಷ್ಣಾವತಾರವೇ ಬೇರೆ ರೀತಿಯಲ್ಲಿ ತ್ತು. ಆದರೆ ಕಾಲಮಾನಕ್ಕೆ ತಕ್ಕಂತೆ ಕೆಲವು ಬದಲಾದರೂ ಸತ್ಯ ಒಂದೇ. ಧರ್ಮ ಅದರೊಂದಿಗೆ ನಡೆಯಬೇಕೆನ್ನುವುದೇ ಸನಾತನ ಧರ್ಮ ತಿಳಿಸುವುದು.
ಯಾರೋ ಒಬ್ಬರಿಂದ ರಾಮರಾಜ್ಯವಾಗದು.ಅದರಲ್ಲೂ ಇಂದಿನ ಪ್ರಜಾಪ್ರಭುತ್ವ ದಲ್ಲಿ ಪ್ರಜಾಶಕ್ತಿಯು ರಾಮನ ರಾಜಯೋಗದೆಡೆಗೆ ನಡೆದಾಗಷ್ಟೆ ಯೋಗವಾಗುತ್ತದೆ. ಎಷ್ಟು ಹೊರಗೆಳೆದು ಅಲಂಕಾರ ಮಾಡಿದರೂ ಸಾಲದು.ಸಾಲವೇ ಅದಾಗಿರುತ್ತದೆ.
ಹಣದಿಂದ ರಾಮನ್ನು ಕಂಡವರಿಗೆ ಹಣವೇ ಸರ್ವಸ್ವ.
ಅದೇ ರೀತಿಯಲ್ಲಿ ಸುಜ್ಞಾನದಿಂದ ರಾಮಧ್ಯಾನ ಮಾಡುತ್ತಾ ಭಕ್ತರಾದವರಿಗೆ ಜ್ಞಾನೋದಯವಾಗಿದೆ ಎಂದರೆ ಶ್ರೀ ರಾಮ ಇರೋದೆಲ್ಲಿ?
ಎಲ್ಲೆಡೆಯೂ ಹರಡಿರುವ ಶ್ರೀ ರಾಮನನ್ನು ಒಂದೆಡೆ ನಿಲ್ಲಿಸಿ ನೋಡಲು ಧ್ಯಾನದಿಂದ ಮಾತ್ರ ಸಾಧ್ಯ.
ದೇವಸ್ಥಾನದಲ್ಲಿ ವಿಗ್ರಹದ ಮೂಲಕ ದರ್ಶನ ಮಾಡಬಹುದು.
ನಂತರ ಮನೆಗೆ ಬಂದ ಮೇಲೆ ಯಥಾ ಪ್ರಕಾರ ನಮ್ಮ ಮನಸ್ಸು ಹರಿದಾಡುತ್ತದೆ. ಹಾಗಾದರೆ ಮನಸ್ಸಿನಲ್ಲಿಯೇ ರಾಮನನ್ನು ನಿಲ್ಲಿಸಿಕೊಂಡು ದಾಸರಾದವರನ್ನು ರಾಮದಾಸ ಎನ್ನಬಹುದು. ಈಗ ಎಲ್ಲಿರುವರು ?
ಕಣ್ಣಿಗೆ ದಾಸ್ಯತ್ವ ಹೆಚ್ಚಾಗಿ ಕಾಣುತ್ತಿದೆ ಎಂದರೆ ನಮ್ಮ ನಡೆ ರಾಮನ ಕಡೆಗಿಲ್ಲವೆ? ನುಡಿ ಕೃಷ್ಣನ ಕಡೆಗಿಲ್ಲವೆ?
ಪ್ರಚಾರದಲ್ಲಿ ಮಧ್ಯೆ ನಿಂತಿರುವ ಇದನ್ನು ಸರಿಯಾಗಿ ನಡೆದು ನುಡಿದರೆ ರಾಮಕೃಷ್ಣರು ಒಳಗೇ ಕಾಣುವರು. ಅವರ ಕೃಪೆ ಇಂದಿಗೂ ಸನಾತನ ಧರ್ಮ ನಡೆಯಲು ಕಾರಣವಾಗಿದೆ. ಆದರೆ ಇದನ್ನು ಜನಸಾಮಾನ್ರೊಳಗೆ ತತ್ವಜ್ಞಾನದಿಂದ ತುಂಬುವ ಕೆಲಸದಲ್ಲಿ ನಿಧಾನವಾಗಿರುವ ಕಾರಣ ರಾವಣಶಕ್ತಿ ಮಿತಿಮೀರಿದೆ. ಯುದ್ದವಾದರೂ ಧರ್ಮಕ್ಕೆ ಜಯ ಇದು ಶತಸಿದ್ದ.
ಒಟ್ಟಿನಲ್ಲಿ ಇತಿಹಾಸ ಪುರಾಣ ಮರುಕಳಿಸಲು ಕಾರಣ ಅದರ ಪ್ರಚಾರವಾಗಿರುತ್ತದೆ.ಪ್ರಚಾರದಲ್ಲಿ ಯೋಗವಿದ್ದರೆ ಜ್ಞಾನ.ಭೋಗವೇ ಮುಖ್ಯವಾಗಿ ಹಣವೇ ಸರ್ವಸ್ವ ಎಂದರೆ ಕ್ರಾಂತಿ. ಎಲ್ಲಾ ಭಗವಂತನ ಪ್ರೇರಣೆಯೇ ಆಗಿರುವುದರಿಂದ
ನಮ್ಮ ಪಾತ್ರವನ್ನು ಸರಿಯಾಗಿ ತಿಳಿದು ವಹಿಸಿಕೊಂಡು ಮುಂದೆ ನಡೆಯುವುದೇ ವಿಜ್ಞಾನ. ವಿಜ್ಞಾನ ಎಂದರೆ ವಿಶೇಷ ಜ್ಞಾನ. ಇದು ಆಧ್ಯಾತ್ಮ ವಾದರೆ ಆತ್ಮಜ್ಞಾನದಿಂದ ಆತ್ಮಸಂಶೋಧನೆ. ಇಲ್ಲವಾದರೆ ಭೌತ ವಿಜ್ಞಾನದ ಶೋಧನೆ.
ಸಂಶೋಧನೆ ಮೊದಲಿದ್ದದ್ದನ್ನೇ ಮತ್ತೆ ಮತ್ತೆ ಶೋಧಿಸಿಕೊಂಡಿರೋದಷ್ಟೆ. ನಮ್ಮ ಅಜ್ಞಾನದೊಳಗಿರುವ ಜ್ಞಾನದೆಡೆಗೆ ನಡೆಯೋದು. ಇದು ಹೊರಗೆ ಮಾಡುವ ಮೊದಲು ಒಳಗೆ ಮಾಡುವುದೇ ಸಂಸ್ಕಾರ. ಆತ್ಮಸಂಸ್ಕಾರ ಆಗದೆ ದೇಹಶುದ್ದಿ ಮಾಡಿದರೂ ತಾತ್ಕಾಲಿಕ ವಷ್ಟೆ.
ಆತ್ಮಶುದ್ದವಾಗಿದ್ದರೂ ಮನಸ್ಸಿನ ಕಲ್ಮಶಗಳು ಮುಚ್ಚಿ ಹಾಕಿರುತ್ತದೆ.
ಹಾಗೆ ದೈವತ್ವದೆಡೆಗೆ ಸಾಗದೆ ದೇವರನ್ನು ಪೂಜಿಸಿದರೂ ದೇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಇದಕ್ಕೆ ಕಾರಣವೇ ಕಲಿಕೆಯಾಗಿದೆ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನವಾಗಬಹುದು.
ದೇವಾಸುರರ ಮಧ್ಯೆ ಇರುವ ಮಾನವನಿಗೆ ಈ ಕಡೆ ಸ ತ್ಯ ಜ್ಞಾನ ಮತ್ತೊಂದು ಕಡೆ ಮಿಥ್ಯಜ್ಞಾನ ಎಳೆದಾಡುತ್ತಲೇ ಇರುತ್ತದೆ. ಯಾವ ಕಡೆ ಹೋಗಬೇಕೆಂಬ ಸಾಮಾನ್ಯ ಜ್ಞಾನ ನಮ್ಮಲ್ಲಿದ್ದರೆ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ. ಇಲ್ಲವೆಂದರೆ ಅತೃಪ್ತ ಆತ್ಮಗಳಾಗಿ ಜೀವನದ ಗುರಿ ಹೋರಾಟ ಹಾರಾಟ ಮಾರಾಟವೇ ಪ್ರಧಾನ ಎನ್ನುತ್ತದೆ.
ಬರೋವಾಗ ಏನು ಹೊತ್ತು ತಂದರೂ ಅದರಿಂದ ಬಿಡುಗಡೆ ಪಡೆಯುವ ಯೋಗ ಶಿಕ್ಷಣ ಅಗತ್ಯವಿದೆ.ಯೋಗವೆಂದರೆ ಸೇರುವುದು.ಸತ್ಯ ಸತ್ಯ ಸೇರಬೇಕು. ಧರ್ಮ ಧರ್ಮ ವನ್ನು ಸೇರಬೇಕು.ವಿರುದ್ದ ಸೇರಿದಷ್ಟೂ ಸಂಕಷ್ಟ ತಪ್ಪಿದ್ದಲ್ಲ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸರಿ.ಕೊಳಚೆಗೆ ಸೇರಿಸಿದರೆ
ಅನರ್ಥ ಗಳಾಗುತ್ತದೆ.
ಪರಮಾತ್ಮಕೊಟ್ಟಿರುವ ಅಲ್ಪಾಯುಷ್ಯವನ್ನು ಅಲ್ಪ ಜ್ಞಾನದಿಂದ ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋ ಸ್ವಾತಂತ್ರ್ಯ ಇಂದಿನಪ್ರಜಾಪ್ರಭುತ್ವದಲ್ಲಿತ್ತು. ಆದರೆ ವಿಪರ್ಯಾಸವೆಂದರೆ ಪ್ರಜೆಗಳ ದಾರಿತಪ್ಪಿಸಿ ಆಳುವವರಿಗೆ ಪ್ರಜೆಗಳ ಸಹಕಾರವಿರುವಾಗ ನಮ್ಮ ಅಜ್ಞಾನಕ್ಕೆ ತಕ್ಕಂತೆ ಫಲ ಕೊಡೋನು ಪರಮಾತ್ಮನೇ ಆಗಿರುವನು. ಏನು ಕೇಳಿದರೂ ಕೊಡುವನು ಆದರೆ ಜ್ಞಾನ ಕೇಳೋರು ವಿರಳ. ಹೀಗಾಗಿ ಅಜ್ಞಾನಿಗಳು ಮಿತಿಮೀರಿ ಬೆಳೆದು ಜನಸಂಖ್ಯೆ ಸ್ಪೋಟ ವಾಗಿ ಯುದ್ದದಲ್ಲಿ ಪೂರ್ಣ ವಾಗುತ್ತಿದೆ.ಪ್ರಕೃತಿ ತನ್ನ ಕೆಲಸ ಮಾಡೋದನ್ನು ಬಿಡದು. ಹಾಗೆ ಸೃಷ್ಟಿ ಸ್ಥಿತಿ ಲಯ ಕಾರ್ಯ. ಭೂಮಿ ತಿರುಗೋದನ್ನು ವಿಜ್ಞಾನಿಗಳು ತಡೆಯಲಾಗದೆಂದರೆ ನಮ್ಮ ಶಕ್ತಿ ಅಲ್ಪ ಎಂದರ್ಥ . ಆದರೂ ಅಲ್ಪ ಸ್ವಲ್ಪ ಬುದ್ದಿ ಜ್ಞಾನದಿಂದ ಸ್ಥಿತಪ್ರಜ್ಞಾವಂತರಾಗಬಹುದು.
ಇಷ್ಟಕ್ಕೂ ನಾವ್ಯಾರು? ರಾಮನೆಲ್ಲಿ?
ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ಇತಿಹಾಸದ ಪುಸ್ತಕದಲ್ಲಿ ನರೇಂದ್ರರನ್ನು ಇಂದ್ರನೆಂದು ಸಿದ್ದರಾಮರನ್ನು ರಾಮನೆಂದು, ಶಿವಕುಮಾರರನ್ನು ಶಿವನೆಂದು, ಕುಮಾರಸ್ವಾಮಿಯನ್ನು ಸುಭ್ಮಮಣ್ಯನೆಂದು ಪೂಜಿಸಬಹುದು. ಕಾರಣ ಹಿಂದಿನ ಪುರಾಣ ಇತಿಹಾಸವೂ ತಮ್ಮ ಮನಸ್ಸಿಗೆ ಬಂದಂತೆ ತಿರುಚಲಾಗಿದೆ. ಅದನ್ನು ಓದಿಕೊಂಡು ಬಂದಿರುವ ನಮಗೆ ಸತ್ಯ ತಿಳಿಯದೆ ಹೊರಗೆ ದೇವರನ್ನು ಹುಡುಕುತ್ತಿದ್ದೇವೆ.
ಒಳಗೇ ಇದ್ದ ದೈವತ್ವವನ್ನು ನಮ್ಮವರೆ ಗುರುತಿಸದೆ ತಡೆದರೆ ಹೊರಗಿನವರು ಆಳೋದರಲ್ಲಿ ತಪ್ಪಿಲ್ಲ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ಇಂದಿಗೂ ಕನಸೇ ಆಗಿರೋದಕ್ಕೆ ಕಾರಣವೆಂದರೆ ನಮ್ಮೊಳಗಿನವಿವೇಕ ಜಾಗೃತ ಮಾಡದಿರುವ ಶಿಕ್ಷಣ. ಓದಿ ತಿಳಿದವರು ಪ್ರಸಿದ್ದರಾದರು.
ನಿಜವಾದ ಸಿದ್ದರು ಹಿಂದುಳಿದರು. ಇದಕ್ಕೆ ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗುತ್ತಿದೆ ಎಂದರೂ ಪ್ರಜೆಗಳ ಸಹಕಾರವಿದೆ ಎಂದರ್ಥ. ಹಾಗೆಯೇ ಎಲ್ಲಾ ರಾಜಕಾರಣಿಗಳು ಹಣದಿಂದ ಜನರನ್ನು ಗೆಲ್ಲಬಹುದಷ್ಟೆ. ಜನರ ಜ್ಞಾನದ ಗತಿ ಏನಾಗಬಹುದು ? ಇದರಿಂದ ಕಷ್ಟ ನಷ್ಟ ಯಾರಿಗೆ? ಜನರಿಗೇ ಅಲ್ಲವೆ? ನಮಗೆ ನಾವೇ ಮೋಸ ಹೋದಾಗ ರಾಮನಾದರೂ ಏನು ಮಾಡಬಹುದು? ದೇವರೆಡೆಗೆ ದೈವತ್ವದೆಡೆಗೆ ನಡೆಯದಿದ್ದರೆ ದೇವರು ಏನು ಮಾಡಬಹುದು? ನಮ್ಮಲ್ಲಿ ಅಡಗಿರುವ ರಾಮ ರಾವಣರಲ್ಲಿ ನಮಗೆ ಪ್ರಿಯವಾದವರು ಯಾರು?
No comments:
Post a Comment