ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ? ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟ...

Tuesday, May 26, 2026

ಸ್ಪರ್ಧೆ ಯಾರೊಂದಿಗೆ ನಡೆಸಬೇಕಿತ್ತು? ಹೇಗೆ?

ಬದಲಾವಣೆ ಹೇಗಿರಬೇಕಿತ್ತು ?ಹೇಗಾಗುತ್ತಿದೆ?

ಸ್ಪರ್ಧೆ ನಡೆಸೋದಾದರೆ ಆಧ್ಯಾತ್ಮಿಕವಾಗಿ ನಡೆಸಿದರೆ ಮಹಾತ್ಮರನ್ನು ಅರಿಯಬಹುದು ದೈವತ್ವದಲ್ಲಿ ನಡೆಯಬಹುದು ಪರಮಾತ್ಮನಲ್ಲಿ ಸೇರಲೂಬಹುದು. ಈಗಿನ ಸ್ಪರ್ಧೆ  ಕೆಳಮಟ್ಟದೆಡೆಗೆ  ನಡೆದಿರೋದು ‌ದುರಂತವಷ್ಟೆ.
ಮಹಿಳೆ ಮಕ್ಕಳನ್ನು  ಹೊರಗೆ ದುಡಿಸಿಕೊಂಡು ಸಾಧಿಸುವುದೇನಿದೆ?

ನಿಮ್ಮ ನಿಮ್ಮ ಮನೆಯ ಮನದ ಸಮಸ್ಯೆಗೆ ಕಾರಣವೇ ಅಜ್ಞಾನ. ಎಂದರೆ ಸತ್ಯದ ತಿಳುವಳಿಕೆಯಿಲ್ಲದ   ಜೀವನದಲ್ಲಿ ಹೊರಜಗತ್ತಿನ ದಾಸರಾದಷ್ಟೂ ಸಮಸ್ಯೆ ಒಳಗೇ ಬೆಳೆಯುತ್ತಾ ನಮ್ಮತನ ನಮವರ ನಡುವೆ ಅಂತರ ಸೃಷ್ಟಿ ಯಾಗಿ ಅತಂತ್ರಸ್ಥಿತಿಗೆ ಜೀವನ ತಲುಪಿದಾಗ ಹಿಂದಿರುಗೋದು ಕಷ್ಟ ಮುಂದೆ ನಡೆದರೂ ನಷ್ಟ ತಪ್ಪೋದಿಲ್ಲ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿದೆಯೆ? ಪರಮಾತ್ಮನಿರೋದೆಲ್ಲಿ ಎಂದರೆ ಆತ್ಮಾವಲೋಕನ ದಲ್ಲಿ .ವಿಪರ್ಯಾಸವೆಂದರೆ ಆತ್ಮದ ಅರಿವೇ ಇಲ್ಲದವರಿಗೆ ದೇವರು ಕಾಣೋದಿಲ್ಲ. ದೆವ್ವಗಳ ಸಾಮ್ರಾಜ್ಯ ದಲ್ಲಿ ಅತೃಪ್ತಿ ಕಾಡುತ್ತದೆ. ಈಗಂತೂ  ಸಾವಿರದ ದೇವರ ಹೆಸರಿನಲ್ಲಿ  ಸಾಯುವ  ಮಾನವರೆ ದೇವರಾಗಿರೋದು  ದೊಡ್ಡ ದುರಂತ. ಹಾಗಂತ ಮಾನವನ ದೈವಗುಣ ಬೆಳೆಸುವ ಶಿಕ್ಷಣ ಕೊಟ್ಟರೆ  ಪರಿಹಾರವಿದೆ ಆದರೆ ಅದರಲ್ಲಿ ರಾಜಕೀಯ ‌ಬೆರೆಸಿ ಆಳೋರೆ ಅಸುರರಾಗಿರುವಾಗ ಎಲ್ಲಿರುವುದು ಸತ್ಯ ಧರ್ಮ?
ಕಲಿಗಾಲ ಕಲಿಕೆಯ‌ಕಾಲ ಕಲಿಕೆಯಲ್ಲಿ ಸತ್ವ  ಸತ್ಯ ತತ್ವ ಇರಬೇಕಷ್ಟೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕಾಲವಾಗುತ್ತಿದೆ  ಇದು ತಂತ್ರದ ಫಲ.ಕರ್ಮಕ್ಕೆ ತಕ್ಕಂತೆ ಫಲವಿದೆ.
ಬದಲಾವಣೆ ಜಗದ ನಿಯಮ. ಜಗತ್ತನ್ನು ಆಳಲು ಹೊರಟವರೂ ಆಳಾಗಿ ಜನ್ಮ ಪಡೆಯಲೇಬೇಕೆನ್ನುವ ಸತ್ಯದ ಅರಿವಿದ್ದರೆ  ಉತ್ತಮ ಜೀವನ ಇದ್ದಲ್ಲೇ‌ ನಡೆಸಬಹುದು. ಹೊರದೃಷ್ಟಿ ಒಳದೃಷ್ಟಿ ಯ ನಡುವೆ ಅಂತರ ಬೆಳೆದಾಗಲೇ ಸೃಷ್ಟಿ ಯ ನಿಗೂಡ ರಹಸ್ಯ ಅರಿಯದೆ ಜೀವ ಹೋಗುತ್ತದೆನ್ನುವುದು  ಸನಾತನಧರ್ಮ. ಆಳವಾಗಿರುವ ಸತ್ಯ‌ ಮೇಲ್ಮಟ್ಟದ  ಸತ್ಯದ ನಡುವಿನ ಅರ್ಧಸತ್ಯದ ವ್ಯವಹಾರದಲ್ಲಿ ಹಣದ‌ಲಾಭವಾಗುತ್ತಾ ಜ್ಞಾನದ‌ ನಷ್ಟ ಅನುಭವಿಸೋನೇ ಮಾನವ.  ಭಗವದ್ಗೀತೆ  ಪ್ರಸಾರ ಮಾಡೋದು ಸುಲಭವಾದರೂ ಅದರಲ್ಲಿನ ಯೋಗವನರಿತು‌  ನಡೆಯೋದು‌ ಕಷ್ಟ. ಅದಕ್ಕೆ ಶಿಕ್ಷಣದಿಂದ ತೆಗೆದು ಹಾಕುವ ಪ್ರಯತ್ನ ಆಗಿ ಮಕ್ಕಳ ಜ್ಞಾನ ಕುಸಿದರೂ ಸರಿ ನಾವು ಆಳಬೇಕೆನ್ನುವ ರಾಜಕೀಯ ಮುಗಿಲುಮುಟ್ಟಿರೋದು. ಏನೇ ಆದರೂ ಮಾನವನ‌ ಬುದ್ದಿವಂತಿಕೆ ಬೆಳೆದರೂ‌ ಸತ್ಯಜ್ಞಾನವಿಲ್ಲದ‌ಮಿಥ್ಯಜ್ಞಾನದಿಂದ ಭೂಮಿಯ ಋಣ ತೀರಿಸಲಾಗದೆನ್ನುವುದು ಆಧ್ಯಾತ್ಮಿಕ ವಿಜ್ಞಾನ. ಭೌತವಿಜ್ಞಾನ ‌ ಕಣ್ಣಿಗೆ ಕಾಣುತ್ತದೆ ಆಧ್ಯಾತ್ಮಿಕ ವಿಜ್ಞಾನ ಅನುಭವಿಸಿಯೇ‌ ಕಾಣಬೇಕು. 
ಬದಲಾವಣೆ ಅಂತರಂಗದ ಶುದ್ದಿಯ‌ಕಡೆಗಿರಬೇಕಿತ್ತು.
ದೇವರನ್ನು ಹೊರಗಿಟ್ಟು ಒಳಗೆ ಅಸುರರಿಗೆ ಸ್ಥಾನಮಾನ ಸನ್ಮಾನ ನಡೆದರೆ  ಬೆಳೆಯೋದು ಯಾರು?
ನಮ್ಮೊಳಗೇ ಅಡಗಿರುವ ಈ ಅಹಂ ಕಾರ ಸ್ವಾರ್ಥ ಪೂರ್ಣ ರಾಜಕೀಯತೆಗೆ ನಾವೇ ಬಲಿಯಾದರೆ ಕಾರಣರು ಯಾರು?
ಹೊರಗಿನಿಂದ  ಪಡೆದಷ್ಟೂ ಸಾಲ.
ಒಳಗಿರೋದನ್ನು  ಕೊಟ್ಟಷ್ಟೂ  ಸಾಲಮನ್ನಾ ಆದರೆ  ಇದು ಸತ್ವ ಸತ್ಯ ತತ್ವದಲ್ಲಿದ್ದರಷ್ಟೆ  ಆತ್ಮಕ್ಕೆ ತೃಪ್ತಿ ಮುಕ್ತಿ ಎನ್ನುವುದು ಆಧ್ಯಾತ್ಮ. ವಿರುದ್ದವಿದ್ದರೆ ಭೌತಿಕ ಪ್ರಗತಿಯಾದರೂ‌  ಮಾನವನ ದುರ್ಗತಿ  ಮನುಷ್ಯತ್ವದ ಅವನತಿ ಅಸುರರ‌ ಪ್ರಗತಿಯಾಗಿ ಅಧೋಗತಿ.ಇಷ್ಟೇ‌ಜೀವನ
ಯಾವ‌ಪಕ್ಷ ಬಂದರೇನು‌ ಜನರ ಅಜ್ಞಾನ  ಹೋಗುವುದೆ? ಅಜ್ಞಾನಿಗಳನ್ನು ಆಳೋದು ಪ್ರಗತಿಯೆ? ಇರುವ‌ಒಂದು ಭೂಮಿ ದೇಶವನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಮತ್ತದೇ‌ ಸರಪಳಿಯಲ್ಲಿಯೇ ಜನ್ಮವಾಗುತ್ತದೆ. ಒಟ್ಟಿನಲ್ಲಿ ಜೀವನದ ಗುರಿ ಆತ್ಮಸಂಶೋಧನೆಯಿಂದ ಆತ್ಮಜ್ಞಾನದಿಂದ  ಜೀವನ್ಮುಕ್ತಿ ಪಡೆಯೋದೆಂದರೆ  ಇಲ್ಲಿ ಯಾರಿಗೆ‌ಮುಕ್ತಿ ಸಿಗುತ್ತಿದೆ  ದೇವರು ಇರೋದೆಲ್ಲಿ? ಪರಮಾತ್ಮನ ಸೇವೆ ಆಗುತ್ತಿದೆಯೆ?   ಜನ ಯಾರ ದಾಸರಾಗಿದ್ದಾರೆ? ಶರಣಾಗೋದೆಂದರೆ ಏನು?
ಸತ್ಯವಿಲ್ಲದ ಧರ್ಮ ಕುಂಟುತ್ತಿದೆ ಧರ್ಮ ವಿಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತಲೇ ಇದೆ.‌ಕಲಿಯುಗದ ಪ್ರಭಾವೋ ಕಲಿಕೆಯ ದುರಂತವೋ  ಇದರ‌ಬಗ್ಗೆ ಚರ್ಚೆ ಮಾಡದ ಮಧ್ಯವರ್ತಿಗಳು ‌ಮನರಂಜನೆಯೊಳಗೇ ಆತ್ಮವಂಚಕರಾಗಿ  ಮರೆದರೆ ಅದಕ್ಕೆ ತಕ್ಕಂತೆ  ಫಲ ಜನರ ಕಣ್ಣಿಗೆ ‌ಕಾಣುತ್ತಿದೆ  ಇದಕ್ಕೆ ಸರ್ಕಾರ ಕಾರಣವೆಂದರೆ ತಪ್ಪು ನಮ್ಮದೇ .ಕಾರಣ ನಮ್ಮದೇ ಸ ಹಕಾರ ಇಷ್ಟು ‌ಬೆಳೆಯಲು ಕಾರಣ. ಇದರ ಫಲ ಸರ್ಕಾರ ಅನುಭವಿಸೋದಿಲ್ಲ. ಅದು ಬದಲಾಗುತ್ತಲೇ ಇರುತ್ತದೆ. ಸಾಲದ ಹೊರೆ ಹೋಗೋದಷ್ಟೆ  ಜನರ ಜೀವನವಾಗಿದೆ. ಮಕ್ಕಳು ‌ಮೊಮ್ಮಕ್ಕಳಿಗಾಗುವಷ್ಟು ಆಸ್ತಿ‌ಮಾಡಿದರೆ ತೃಪ್ತಿ ಸಿಗೋದಿಲ್ಲ. ಎಂದರೆ ನಮ್ಮನ್ನು ಅತೃಪ್ತ ಆತ್ಮ ಆಳುತ್ತಿದೆ ಎಂದರ್ಥ. ಇದನ್ನು ದೆವ್ವ ಭೂತ‌ ಪಿಶಾಚಿ ಎಂದು‌ಹೆಸರಿಟ್ಟು ಕರೆದಿರುವರಷ್ಟೆ.ಯಾವ ಜನ್ಮದ‌ ಆಸೆಯೋ ಈ ಜನ್ಮದಲ್ಲಿ  ಸೇರಿಕೊಂಡು ಕುಣಿಸುತ್ತಿದೆ. ಕುಣಿದಷ್ಟೂ ನೋಡೋರಿಗೆ ‌ಮನರಂಜನೆಯಷ್ಟೆ ಆದರೆ ದೇಹಕ್ಕೆ ಸುಸ್ತು ಆರೋಗ್ಯ ಹಾಳು ನೆಮ್ಮದಿಯಿಲ್ಲದ ಬದುಕು ಹೀಗೇ ಎಷ್ಟೋ  ಜೀವಾತ್ಮನಿಗೆ  ಪರಮಾತ್ಮನ ಸತ್ಯದ ಪರಿಚಯ ಮಾಡಿಸದ ಶಿಕ್ಷಣ  ಶಿಕ್ಷೆಯಾಗಿ ಕಾಡುತ್ತಿದೆ. ಅದನ್ನು ಪ್ರಗತಿ ಎನ್ನುವ ಅಜ್ಞಾನಿಗಳಿಗೆ ಇದು ಒಂದು ವ್ಯವಹಾರವಾಗಿ  ಭ್ರಷ್ಟ ದುಷ್ಟರನ್ನು ಬೆಳೆಸೋದೆ ಕಾಯಕ.
ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರ,ಧಾರ್ಮಿಕ/ಕ್ಷೇತ್ರ, ಸಾಹಿತ್ಯ ಕ್ಷೇತ್ರ ಯಾವಾಗ ರಾಜಕೀಯದೆಡೆಗೆ  ನಡೆದವೋ ಆಗಲೇ ಆರ್ಥಿಕತೆಯು ಬೆಳೆದು  ಸಮಾಜದಲ್ಲಿ  ಜನಸಂಖ್ಯೆ ಬೆಳೆದರೂ ಸುಜ್ಞಾನ ಸತ್ಯಜ್ಞಾನ ಹಿಂದುಳಿಯುತ್ತಾ‌ ಹಿಂದುಳಿದವರ ಹೆಸರಿನಲ್ಲಿ  ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಂಡು ತಿನ್ನುವವರು  ಜನರನ್ನು ದುರ್ಭಳಕೆ ಮಾಡಿಕೊಂಡರೂ ಕೇಳುವ ಸ್ವಾತಂತ್ರ್ಯ ಕಳೆದುಕೊಂಡಿರೋದು ಭಾರತದಂತಹ  ದೇಶಕ್ಕೆ ಆಗಿರುವ‌ ಮಹಾನಷ್ಟ.
ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಿಗೆ ದೇಶೀಯ ಶಿಕ್ಷಣ ನೀಡುವುದು ಧರ್ಮ. ಈಗ ವಿದೇಶಿ ಶಿಕ್ಷಣವೇ ತಮ್ಮ ಸಾಮ್ರಾಜ್ಯಸ್ಥಾಪನೆ ಮಾಡಲು  ವಿದೇಶಿಗರಿಗೆ  ರಾಜಕಾರಣಿಗಳೇ ಸ್ವಾಗತಿಸಿರೋದು ಯಾವ ಪ್ರಗತಿ?
ಮೂಲ ಸರಿಪಡಿಸದೆ ರೆಂಬೆಗಳನ್ನು ಬೆಳೆಸಿದರೆ  ಬದಲಾವಣೆ ಸಾಧ್ಯವೆ?
ತತ್ವವಿಲ್ಲದ ತಂತ್ರ ಯಂತ್ರಮಾನವರನ್ನು ಸೃಷ್ಟಿ ಮಾಡುವ ಸ್ವತಂತ್ರ ಪಡೆದಾಗ ಜೀವವಿರುವ ಮಾನವನ‌ಗತಿ ಅಧೋಗತಿ. ಇವೆಲ್ಲವೂ ಸಾಮಾನ್ಯ ಜ್ಞಾನದ  ಕೆಳಮಟ್ಟದ ವಿಷಯವೆಂದು  ನಿರ್ಲಕ್ಷ್ಯ ಮಾಡಿದಷ್ಟೂ  ಭೂಮಿಯ ಮೇಲಿನ ಸಾಲ ತೀರದು. ಸಾಲ ತೀರದಿದ್ದರೆ‌ಮತ್ತದೇ ಜನನ‌ಮರಣದ ನಡುವೆ ಬರಲೇಬೇಕು.ಕಷ್ಟಪಟ್ಟು ಸಾಲ ತೀರಿಸುವ ಪರಮಾತ್ಮನ ಸೇವೆ ಮಾಡಲೇಬೇಕು. ಇದು ಯೋಗ‌ಮಾರ್ಗದಲ್ಲಿ ನಡೆಯಲು ಯೋಗಶಿಕ್ಷಣ ಯೋಗ್ಯ ಶಿಕ್ಷಣ ಬೇಕು.
ಈ ವಿಚಾರದ ಬಗ್ಗೆ ಎಷ್ಟೋ ಗುರುಹಿರಿಯರಿಗೆ  ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ  ಹಾಗು‌ಮಠ ಮಾನ್ಯರಿಗೆ  ಅರಿವಿದ್ದರೂ  ಅದರಲ್ಲಿ ರಾಜಕೀಯ ತೂರಿಸಿಕೊಂಡು ವ್ಯವಹಾರವೇ ಮುಖ್ಯ ಎಂದಿರುವಾಗ ಬದಲಾವಣೆ ಕಷ್ಟವಿದೆ.
ದೇಶದ ತುಂಬಾ ದೇವಸ್ಥಾನ ವಿದ್ದರೂ ಜನರಲ್ಲಿ ದೈವತ್ವದ ಗುಣಜ್ಞಾನವಿಲ್ಲದಿದ್ದರೆ ಮಕ್ಕಳು ಮಹಿಳೆಯರನ್ನು ಹೊರಗೆಳೆದು ಆಳುವರಷ್ಟೆ. ಇಡೀ ವಿಶ್ವ ಆಳುವ ವಿಶ್ವೇಶ್ವರನ ಜೊತೆಗೆ  ಈಶ್ವರಿಯೂ   ಇರಬಹುದು. ಈಶ್ವರನ ಧ್ಯಾನ ದಿಂದ ‌ಜ್ಞಾನದೇವತೆ ಒಲಿಯಬಹುದು. ಮನುಷ್ಯನ ಅಜ್ಞಾನಕ್ಕೆ ಮಹಿಳೆ ಒಲಿದರೆ  ಹಣ ಮಾತ್ರ ಸಿಗಬಹುದಷ್ಟೆ. ಹಣದಿಂದ ಹೆಣವನ್ನು  ಮಾರುವಷ್ಟು  ವ್ಯವಹಾರಜ್ಞಾನದಲ್ಲಿ  ದೇವರು ಕಾಣೋದಿಲ್ಲ.‌ಇದು ಅಸುರಿತನ.
ಜೀವ ಶಾಶ್ವತವಿರದು ಆತ್ಮ ಶಾಶ್ವತವೆನ್ನುವುದೇ ಸತ್ಯಜ್ಞಾನ.

ಬದಲಾವಣೆ ಮನೆಯೊಳಗೆ ಮನಸ್ಸಿನೊಳಗೇ  ಆಗಲು ಯೋಗ ಮಾರ್ಗ ಅಗತ್ಯವಿದೆ. ಯೋಗಿಗಳ ದೇಶವನ್ನು ಭೋಗಕ್ಕೆ  ಬಳಸಿದರೆ ರೋಗದ ಗೂಡಾಗುವುದು ಸಹಜ.
ಇದಕ್ಕೆ ಸರ್ಕಾರ ಹೈಟೆಕ್ ಆಸ್ಪತ್ರೆ ಗಳನ್ನು  ಪ್ರಾರಂಭಿಸಿದರೆ ಅದರೊಳಗೆ ಹೈಟೆಕ್  ವೈಧ್ಯರು  ದುಡಿಯಬಹುದು. ಆದರೆ ಸಾವನ್ನು ತಡೆಯಲಾಗದು. ಇದಕ್ಕೆ  ಮಾನವನಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಮೊದಲೇ ನೀಡಿ ಆತ್ಮರಕ್ಷಣೆಯತ್ತ‌ನಡೆಸಿದ್ದರೆ ಎಲ್ಲರಲ್ಲಿಯೂ ಅಡಗಿರುವ ಒಬ್ಬನೇ ಪರಮಾತ್ಮನ ಅರಿತು ಹೊಂದಿ ಬಾಳುವ  ಮನುಷ್ಯರಾಗಬಹುದಲ್ಲವೆ? 
ಎಷ್ಟು ಇದ್ದರೂ ಸಾಲದು ಎಂದರೆ ಸಾಲವೇ ಅದು.ಅದು ಆತ್ಮತೃಪ್ತಿ ಕೊಡದು ಎನ್ನುವುದೆ ಆಧ್ಯಾತ್ಮ ಸತ್ಯ.
ನಾವಿರೋದೆಲ್ಲಿ? ಭೂಮಿ ಮೇಲೋ ಆಕಾಶದಲ್ಲೋ? ಮಾನವನಿಗೆ ಸಾಮಾನ್ಯ ಜ್ಞಾನ ಅಗತ್ಯವಿದೆ..
ಅಲ್ಲಿರುವುದು ನಮ್ಮನೆ ಇಲ್ಲಿ ‌ಬಂದೆ ಸುಮ್ಮನೆ. ಸುಮ್ಮನಿರಲಾಗದೆ ಮನೆ ಕಟ್ಟುವುದೆ‌  ಸಾಧನೆಯಾಗುತ್ತಿದೆ..ಮನೆ ಇರಲಿ ಅದು ದೇಗುಲವಾಗಿರಲಿ. ದೆವ್ವಗಳ ತಾಣವಾಗದಿರಲಿ.

Thursday, May 21, 2026

ಆತ್ಮನಿರ್ಭರ ಎತ್ತ ಸಾಗುತ್ತಿದೆ ?

ಆತ್ಮನಿರ್ಭರ ಸಾಧ್ಯವೆ?

ಸೂಕ್ಮವಾಗಿ ಗಮನಿಸಿದರೆ ಇಂದಿನ ರಾಜಕೀಯ ವ್ಯವಸ್ಥೆ ಹಿಂದೂ ಮುಸ್ಲಿಂ ನಡುವೆ ಅಂತರ ಬೆಳೆಸುವ ಮಧ್ಯವರ್ತಿಗಳ ಒಪ್ಪಂದ ದೆಡೆಗೆ  ನಡೆಯುತ್ತಿದ್ದರೂ ಇದನ್ನು ಪ್ರಗತಿ ಎಂದು ಸಾಲದೆಡೆಗೆ  ಹೊರಟಿರೋದು  ದುರಂತವೆಂದರೆ  ಮಾನವರಿಗೆ  ಅರ್ಥ ಆಗಬಹುದೆ?

ದೇವರು ದೇಶ ಧರ್ಮ  ಭಾಷೆಗಳ ನಡುವೆ ಅಂತರ ಬೆಳೆದಿರೋದೆ ಮೂರನೆಯವರ ಪ್ರವೇಶದಿಂದ. ಆ ಪ್ರವಾಸಿಗರಿಗೆ‌ಕೊಡುವ ಗೌರವ ಸ್ವಾಗತ ಆತಿಥ್ಯಗಳು ಅವರನ್ನು ಇನ್ನಷ್ಟು ಮಧ್ಯೆ ನಿಂತು ಅಂತರ ಬೆಳೆಸುವಂತೆ ಮಾಡುತ್ತಾ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ತಮ್ಮ ಮೂಲದವರ ಶಿಕ್ಷಣವೂ ಇಲ್ಲ ಧರ್ಮ/ಕರ್ಮ ವೂ ಇಲ್ಲ ಅವರಲ್ಲಿದ್ದ ಒಗ್ಗಟ್ಟಿನ ತತ್ವಜ್ಞಾನವೂ ಇಲ್ಲ ಆದರೆ ಅವರ ಭೂಮಿ ಆಸ್ತಿ ಹೆಸರು ಹಣ ಹಿಡಿದು ಆಳೋರಿದ್ದಾರೆ. ಆಳೋದಕ್ಕೆ ‌ಬೇಕಾದ ಜ್ಞಾನವಿಲ್ಲದೆ  ಅನ್ಯರ ಜ್ಞಾನದೆಡೆಗೆ ನಡೆದರೆ ಇಲ್ಲಿ ಸ್ವತಂತ್ರ ಜ್ಞಾನಕ್ಕೆ ಬೆಲೆಯಿರದು.ಸ್ವತಂತ್ರ ಜ್ಞಾನವಿರದೆ ಬುದ್ದಿಯೂ ಇರದು. ಬುದ್ದಿವಂತಿಕೆ ಪುಸ್ತಕದ ಬದನೆಕಾಯಿಯಾದಾಗ ತಿನ್ನೋದೆ ಜೀವನ. ತಿಂದ ಮೇಲೆ ಬರುವ ರೋಗಕ್ಕೆ ಔಷಧವೂ ಹೊರಗಿನದ್ದೆ ಆಗಿರುತ್ತದೆ. ಹೀಗೇ  ಒಳಗಿನ ಶಕ್ತಿ ‌ಮತ್ತು ಹೊರಗಿನ ಶಕ್ತಿಯ ನಡುವೆ ನಿಂತು ಸ್ವಾರ್ಥ ಅಹಂಕಾರದ  ರಾಜಕೀಯ ನಡೆಸುವ ಮಧ್ಯವರ್ತಿಗಳಿಗೆ ಸಿಕ್ಕಿದ್ದೇನು?  ಎಲ್ಲರಂತೆ  ನಾವೂ ಮಾನವರು ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೆ ಹೋದರೆ  ಜೀವನಕ್ಕೆ ಅರ್ಥ ಇರದು.
ಭೌತಶಾಸ್ತ್ರ  ರಸಾಯನಶಾಸ್ತ್ರ  ಜೀವಶಾಸ್ತ್ರ ಸಂಖ್ಯಾಶಾಸ್ತ್ರ ಅರ್ಥ ಶಾಸ್ತ್ರ ಕ್ಕೆ  ಇಳಿದಾಗ ಆಧ್ಯಾತ್ಮಿಕ ಶಾಸ್ತ್ರ ಅರ್ಥ ವಾಗದೆ  ಶಸ್ತ್ರ ಹಿಡಿಯೋರೆ  ಹೆಚ್ಚಾಗುವರು. ಕ್ಷತ್ರಿಯ ಧರ್ಮ ರಾಜರ ಕಾಲಕ್ಕೆ  ಇತ್ತು.ಈಗ ಕ್ಷತ್ರಿಯರು ಯಾರು? ರಾಜಕಾರಣಿಗಳು ಶತ್ರುಗಳನ್ನೇ  ದೇಶದೊಳಗೆ  ವ್ಯವಹಾರಕ್ಕೆ ಕರೆಸಿಕೊಂಡರೆ ದೇಶ ಕಾಯುವ ಸೈನಿಕರಿಗೆ ಸ್ವಾತಂತ್ರ್ಯ ಇರುವುದೆ?
ಒಪ್ಪಂದಗಳು ಮೊದಲು ಒಳಗಿನ ಸಂಬಂಧ ದೊಳಗಾಗುತ್ತಿತ್ತು.
ಯಾವಾಗಿದು ಹೊರಗಿನವರೊಂದಿಗೆ ಬೆಳೆಯುತ್ತಾ ಹೋಯಿತೋ ಅಂತರ ಬೆಳೆಯಿತು. ಈಗ ಹಣವಿದ್ದರಷ್ಟೆ ಸಂಬಂಧ ಕ್ಕೆ ಬೆಲೆ ಎನ್ನುವ ಸ್ಥಿತಿಗೆ ಬಂದು ಗುಣಜ್ಞಾನವನ್ನು ನೋಡುವ ದೃಷ್ಟಿ ಮಾನವನಿಗೆ  ಕುಸಿದಿದೆ .ಇದರಿಂದ ಹೆಣ್ಣಿನ ಗುಣಕ್ಕೆ ಬೆಲೆಯಿಲ್ಲ‌ ಹಣಗಳಿಸಿದರಷ್ಟೆ ಬೆಲೆ ಇದರಿಂದ ಮಹಿಳಾ ಶಕ್ತಿ ಮನೆಯಿಂದ ಹೊರಬರುತ್ತಿದೆ. ಹೊರಬಂದವರು ಒಳಗಿನ ಸತ್ಯ ತಿಳಿಯದೆ  ಹೊರಗಿನವರಿಗೇ ತಲೆಬಾಗಿದಷ್ಟೂ  ದುರ್ಭಳಕೆ ಹೆಚ್ಚುವುದು.
ಯುವಪೀಳಿಗೆಯಂತೂ ದಾರಿತಪ್ಪಿದ ಹಳಿಗಳಾಗುತ್ತಿದ್ದರೂ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದವರಿಗೆ ಧರ್ಮ ಪಾಠ ಕಲಿಸಲು  ಸಾಧ್ಯವೆ? 
ಇಬ್ಬರ ಜಗಳದಲ್ಲಿ ‌ಮೂರನೆಯವರಿಗೆ ಲಾಭ ಎನ್ನುವ ಹಾಗೆ ಹಣದಿಂದ ಲಾಭವಾದರೂ ಕಷ್ಟ ನಷ್ಟ ತಪ್ಪದು. ಬುದ್ದಿ ಕಲಿತರೆ ಜ್ಞಾನ ಬರುವುದೆ? ಬುದ್ದಿವಂತರೆಲ್ಲ ಜ್ಞಾನಿಗಳಾಗೋದಿಲ್ಲ. ಬುದ್ದಿ ನಮ್ಮ ಸ್ವಂತ ಶಕ್ತಿಯಿಂದ ಕಲಿಯಬೇಕು. ಇದಕ್ಕಾಗಿ ಸ್ವಂತಿಕೆ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ  ಎಲ್ಲಿ ಅಮ್ಮ ಎನ್ನುವವರೆ ಬೆಳೆಯೋದು.ಕಾಲುಬುಡವಿರುವ ಭೂ ತಾಯಿ, ಹೆತ್ತ ತಾಯಿ, ಭಾರತಾಂಬೆ, ಕನ್ನಡಮ್ಮನನ್ನು ಕಾಣಲು ಮಧ್ಯವರ್ತಿಗಳ ಅಗತ್ಯವಿದೆಯೆ? 
ಇದರಲ್ಲಿ ಅಡಗಿರುವ ಆಧ್ಯಾತ್ಮಿಕ ಸತ್ಯ ಭೌತಿಕ ಸತ್ಯದ ನಡುವಿರುವ ಸಾಮಾನ್ಯ ಸತ್ಯ ಅರ್ಥ ಆದರೆ ನಮಗೆ ನಾವೇ ಮೋಸಹೋಗಿರುವ ಸತ್ಯವೂ ಕಾಣಬಹುದು.ರಾಜಕೀಯದೃಷ್ಟಿ ಇದ್ದವರಿಗೆ ಅರ್ಥ ಆಗೋದಿಲ್ಲ. 

ಹೊರಗೆ ತಳುಕುಬಳುಕು ಒಳಗೆ ಹುಳುಕಿರುವಾಗ ಅಳುಕು ಇದ್ದೇ ಇರುತ್ತದೆ. ಭಯ ಭಕ್ತಿ ಎನ್ನುವ ಯೋಗಶಕ್ತಿ ಇಲ್ಲದಿದ್ದರೆ ಹೀಗೇ ಆಗುತ್ತದೆ. ಎಷ್ಟು ಹೊರಗಿನವರೊಂದಿಗೆ ಸಂಬಂಧ ಜೋಡಿಸಿದರೂ ಒಳಗಿನವರ ಸಂಬಂಧ ಹದಗೆಡುತ್ತಿದ್ದರೆ ಉಪಯೋಗವಾಗದು. ಅದನ್ನು  ಬಿಟ್ಟು  ಸ್ವಂತ ಬುದ್ದಿ ಜ್ಞಾನದಿಂದ ಆತ್ಮರಕ್ಷಣೆಯೆಡೆಗೆ ಹೊರಡೋದೆ ಉತ್ತಮ.
ಸಾಲ ಮಾಡಿಕೆಟ್ಟ ಸಾಲವೇ ಶೂಲ ಎನ್ನುವುದನ್ನು ಈಗಿನ ಜನ ಅರಿಯದೆ  ಸರ್ಕಾರದ ಹಿಂದೆ ‌ನಿಂತು ಬೇಡೋದು ವಿದೇಶಿಗಳ ಹಿಂದೆ ನಡೆಯೋದು  ಮೂಲ ಮರೆತು ಕುಣಿಯೋದು ಕಲಿಯೋದರಲ್ಲಿಯೇ ಕಾಲಹರಣ ಮಾಡಿದರೆ  ಕಾಲರಾಯ ಬರೋದನ್ನು ತಪ್ಪಿಸಲಾಗದು. ಇದನ್ನು ತಡೆಯೋದಕ್ಕೂ ಸಾಕಷ್ಟು ಸಂಶೋಧನೆಗಳಾಗುತ್ತಿದೆ.‌ಪುರಾಣ‌ಕಾಲದಿಂದಲೂ ಎಷ್ಟೋ ಅಸುರರು ವರ ಬೇಡಿದ್ದು ಸಾಯಬಾರದೆಂದಾಗಿತ್ತು ಆದರೆ ಅದನ್ನು ಪಡೆಯಲಾಗದ‌ಮೇಲೆ ಬುದ್ದಿವಂತಿಕೆಯಿಂದ ಸಾವನ್ನು ಮುಂದೆ ಹಾಕುವ ಪ್ರಯೋಗವಾಯಿತೇ ಹೊರತು  ಸಾವಿನ ಹಿಂದಿರುವ ಶಿವನನ್ನು ಕಾಣಲಾಗಿಲ್ಲ. ಹೀಗಿರುವಾಗ ಯಾರದ್ದೋ ಅಂಗಾಂಗಗಳನ್ನು ಜೋಡಿಸಿಕೊಂಡು ಬದುಕಿದರೂ ಒಳಗಿನ ಜ್ಞಾನ  ಬೆಳೆಸದಿದ್ದರೆ  ವ್ಯರ್ಥ ಜೀವನ. ಎಲ್ಲಾ ಸತ್ತವರೆ ಎನ್ನುವ ಸತ್ಯವರಿತರೂ ನಮ್ಮ ದೇಹದೊಳಗಿರುವ ಆತ್ಮಕ್ಕೆ ತೃಪ್ತಿ ಸಿಗುವ ಕರ್ಮ  ನಮ್ಮಿಂದ  ನಡೆಸಬೇಕಾದವರೆ  ಪರಮಾತ್ಮ. ಕೆಲವರಿಗೆ ಮೊದಲೇ ಅಧಿಕಾರ ಸ್ಥಾನ ಜ್ಞಾನ ಕೊಟ್ಟರೆ ಕೆಲವರಿಗೆ ಜೀವನದ ಮಧ್ಯದಲ್ಲಿ  ಸಿಗಬಹುದು ಕೆಲವರಿಗೆ ಕೊನೆಗಾಲದಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಮುಂದಿನ‌ಜನ್ಮದವರೆಗೂ ಕಾಯಬೇಕಾಗಬಹುದು.
ಒಟ್ಟಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುವ  ಅವಕಾಶ ವಿದ್ದರೂ  ಅ ದರ ಹಿಂದೆ ರಾಜಕೀಯ ಪಿತೂರಿಗಳದ್ದೆ ಸಾಮ್ರಾಜ್ಯ ವಾದಾಗ  ಯಾರೂ ಮುಂದೆ ಹೋಗಲಾಗದು. ಇದನ್ನರಿತು ಮಧ್ಯವರ್ತಿಗಳು  ಮುಂದೆ ನಡೆದರೆ  ಆಧ್ಯಾತ್ಮ ಪ್ರಗತಿಯಾಗಬಹುದು. ಹಿಂದೆ ತಳ್ಳಿದರೆ ಪಾತಾಳಕ್ಕೆ ಇಳಿಯಬಹುದು. ಎಲ್ಲಿ ಹೋದರೂ ಭೂಮಿ ಸಾಕ್ಷಿಯಾಗಿರುತ್ತದೆ.
ಅದಕ್ಕೆ ತಿಳಿಸಿರೋದು ಸ್ತ್ರೀ ಋಣ ತೀರಿಸೋದು ಕಷ್ಟ ಎಂದು.
ಹಾಗಂತ  ಭೂಮಿಗೆ ಬರದೆ ಋಣ ಕಳೆಯದು. ಇದು ಸೇವೆಯಾಗಿ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಿದವರಿಗೆ  ಸಾಧ್ಯವಾಗಿದೆ ಎಂದರೆ ಅವರು ಹೊರಗಿನ ಸಾಲದಿಂದ ದೂರವಿದ್ದು ರಾಜಕೀಯದಿಂದ ದೂರವಿದ್ದರು ಎನ್ನುತ್ತದೆ  ಆಧ್ಯಾತ್ಮ.  
ಕಟ್ಟಕಡೆಯ ಪ್ರಶ್ನೆ ಆತ್ಮನಿರ್ಭರ ಸಾಧ್ಯವೆ? 
ಭಗವತಿ
ಬೆಂಗಳೂರು

Wednesday, May 20, 2026

ಉಚಿತದ ಹಿಂದಿರುವ ಸಾಲ ಖಚಿತವಾಗಿದೆ

ಭೂಮಿಯಲ್ಲಿ ಯಾವುದೂ ಉಚಿತವಾಗಿರದು.‌ಪ್ರಕೃತಿಯೇನೋ  ಎಲ್ಲವನ್ನೂ ಉಚಿತವಾಗಿ ಕೊಡುತ್ತಿದೆ.ಆದರೆ ಅದನ್ನು ಆಳುವ ಮಾನವನು ಅದಕ್ಕೆ ಬೆಲೆ ಕಟ್ಟಿ ಪಂಚಭೂತಗಳನ್ನು  ಮರೆತು ನಡೆದಿರೋದರಿಂದ. ಸಾಲ ಮಿತಿಮೀರಿದೆ.
ಭೂ ಸಾಲ ತೀರಿಸಲು ‌ಬೇಕಾದ ಸತ್ಕರ್ಮ ಸ್ವಧರ್ಮ ಸದಾಚಾರ ಸರಳ ಜೀವನ ಸ್ವಾಭಿಮಾನ  ಸ್ವತಂತ್ರ ಬುದ್ದಿ ಇಂದಿನ ಜನರಲ್ಲಿ ಮರೆಯಾಗಲು ಕಾರಣವೇ ಅತಿಯಾದ ವ್ಯಾಪಾರೀಕರಣ.
 ಹೆಣ್ಣು ಹೊನ್ನು ಮಣ್ಣಿನ ಋಣ ತೀರದೆ ಆತ್ಮಕ್ಕೆ ತೃಪ್ತಿ ಶಾಂತಿ ಸಿಗದು ಎನ್ನುವ ಆಧ್ಯಾತ್ಮಿಕ  ಜಗತ್ತಿನಲ್ಲಿಯೇ  ಈ ವ್ಯವಹಾರ  ಅತಿಯಾದಾಗ  ಏನೂ ಅರಿಯದವರ ವ್ಯವಹಾರ ಹೇಗಿರಬಹುದು? ಇಲ್ಲಿ ಬೆಲೆ ಕಟ್ಟಬೇಕಾಗಿರೋದಕ್ಕೆ ಬೆಲೆ ಕಟ್ಟದೆ  ಅನಗತ್ಯವಾಗಿದ್ದಕ್ಕೆ ಬೆಲೆಕೊಟ್ಟು ಸಾಲ ಹೆಚ್ಚಿಸಿಕೊಂಡರೆ  ಅದಕ್ಕೆ ತಕ್ಕಂತೆ  ಜನ್ಮಗಳಾಗುತ್ತವೆ.
ದೇವರಿಗೆ ಬೆಲೆ ಕಟ್ಟಬಹುದೆ? ದೈವತ್ವದ ಶಿಕ್ಷಣಕ್ಕೆ ಬೆಲೆ ಕಟ್ಟಬಹುದೆ 
ಒಟ್ಟಿನಲ್ಲಿ ಯಾವುದೂ ಉಚಿತವಾಗಿ ಸಿಗದು. ನಮ್ಮ ಪಾಲಿಗೆ ಬಂದಿರುವುದನ್ನು  ಜ್ಞಾನದಿಂದ  ಬೆಲೆಕೊಟ್ಟು  ಸದ್ಬಳಕೆ ಮಾಡಿಕೊಂಡರೆ  ಧಾರ್ಮಿಕ ವ್ಯವಹಾರ ಇಲ್ಲ ಎಂದರೆ ಭೌತಿಕ ವ್ಯವಹಾರ. ಭೌತಿಕದಲ್ಲಿ ಸತ್ಯ ಧರ್ಮ ಕ್ಕೆ ಬೆಲೆಯಿರದು. ಇದರಿಂದ ಋಣ ಅಥವಾ ಸಾಲ ತೀರದು. ಹೀಗಾಗಿ ಮಾನವ ವ್ಯವಹಾರಕ್ಕೆ ಇಳಿದಾಗ  ಎಚ್ಚರಿಕೆಯಿಂದ  ಯಾರಿಗೆ ಯಾವುದಕ್ಕೆ ಯಾಕೆ ಎಷ್ಟು ಬೆಲೆಕೊಡಬೇಕೆಂಬ ಅರಿವಿದ್ದರೆ ಉತ್ತಮ ಪ್ರಗತಿ
ಋಣ ಮತ್ತು ಕರ್ಮಕ್ಕೆ ತಕ್ಕಂತೆ  ಜನನ ಜೀವನ ಮರಣಗಳು ಭೂಮಿಯಲ್ಲಾಗುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಲಾಭ ಕಡಿಮೆ ಲಾಭ, ಹೆಚ್ಚು ನಷ್ಟ ಕಡಿಮೆ‌ನಷ್ಟ ಇದು‌ ಮಾನವನ‌ ಲೆಕ್ಕಾಚಾರ.

ಭೂ ಋಣ ತೀರಿಸುವ‌ ಸತ್ಕರ್ಮದಿಂದ  ಧರ್ಮ ರಕ್ಷಣೆ.‌ಇದರಿಂದ ಪುಣ್ಯ ಪ್ರಾಪ್ತಿ, ಪುಣ್ಯದಿಂದ ಸದ್ಗತಿ. 

ಬಡವರಿಗೆ‌  ಉಚಿತ ಕೊಡಬಹುದು ಆದರೆ  ಯಾವ ರೀತಿಯಲ್ಲಿ ಬಡವರಾಗಿದ್ದಾರೆಂದು ಖಚಿತಪಡಿಸಿಕೊಂಡರೆ ಸರಿ.
ಜ್ಞಾನದಲ್ಲೋ‌ ಹಣದಲ್ಲೋ? ಜ್ಞಾನದ ಶ್ರೀಮಂತರ ಜ್ಞಾನ ಪಡೆದು ಹಣ ಕೊಟ್ಟರೆ ಧರ್ಮ. ಹಾಗೆ ಹಣ ಪಡೆದು‌ ಜ್ಞಾನ ದಾಸೋಹ ಆದರೆ ಧರ್ಮ. ಜ್ಞಾನದಲ್ಲಿ ಸತ್ಯ ಮಿಥ್ಯವಿದೆ. ಇದರ ಬಗ್ಗೆ ಯೂ  ಅರಿವಿರಬೇಕು.ಒಟ್ಟಿನಲ್ಲಿ ಕೊಟ್ಟು ತೆಗೆದುಕೊಳ್ಳುವ‌ ವ್ಯವಹಾರ ಜೀವನದಲ್ಲಿದೆ. ಜೀವನವೇ ವ್ಯವಹಾರವಾದಾಗ ಪಡೆಯೋದೇ ಹೆಚ್ಚಾಗುತ್ತದೆ. ಅಸತ್ಯ ಅಧರ್ಮ ಅನ್ಯಾಯಗಳಿಗೆ‌ಬೆಲೆ ಕಟ್ಟುತ್ತಾ‌ಹೋದಷ್ಟೂ ಭ್ರಷ್ಟಾಚಾರ.  ಲೆಕ್ಕಾಚಾರ ದ ಪ್ರಕಾರ ಪುಣ್ಯ ಕೂಡಬೇಕು, ಪಾಪ ಕಳೆಯಬೇಕು, 
ಹೆಚ್ಚು ಲಾಭವಾದರೆ ಹಿಂದೆ ನಷ್ಟವಿದೆ.

ಯಾವುದಕ್ಕಾದರೂ ಬೆಲೆ ಕಟ್ಟಬೇಕೆಂಬುದು ಇದರರ್ಥ. ಆದರೆ ಬೆಲೆ ಯಾರಿಗೆ ಎಷ್ಟು ಯಾಕೆ ಕಟ್ಟಬೇಕೆಂಬ ಜ್ಞಾನವೂ ವೇದಗಳಿಂದಲೇ ತಿಳಿಸುವುದು ಅಗತ್ಯವಿದೆ. ಇಂದಿನವರೆಗೂ ವರದಕ್ಷಿಣೆಯ ಅರ್ಥ ತಿಳಿಯದವರಿದ್ದಾರೆ. ವರಹ ದಕ್ಷಿಣೆ ಎನ್ನುವುದನ್ನೇ ಸ್ವಾರ್ಥಕ್ಕೆ ತಿರುಚಿಕೊಂಡು ವರದಕ್ಷಿಣೆ ಲಕ್ಷ ಕೋಟಿ ಕೊಟ್ಟಿರುವರಿದ್ದಾರೆ. ಧಾರ್ಮಿಕ  ವಿಚಾರದಲ್ಲಿ ಹಣಕ್ಕಿಂತ ‌ಮೊದಲು ಜ್ಞಾನದ ಅರಿವಿರುವಿದ್ದವರು ದಕ್ಷಿಣೆ ಸರಿಯಾಗಿ ಕೊಡುವರು.
ಕನ್ಯಾದಾನ‌ ಪದದ ಮೂಲ ಕನ್ಯಾ ಆದಾನ. ಹೀಗೇ ಎಷ್ಟೋ ಮೂಲ ಅರ್ಥ ತಿಳಿಯದೆ  ಆಚಾರ ವಿಚಾರ‌ಪ್ರಚಾರ ಬೆಳೆದು‌ಜನರು ಅಜ್ಞಾನದಲ್ಲಿ ‌ಕಣ್ಣಿಗೆ ಕಣೋ ಸತ್ಯವಷ್ಟೆ ಧರ್ಮ ಎನ್ನುವರು.  ಅದರಲ್ಲೂ  ಶಂಖದಿಂದ‌ಬಂದರಷ್ಟೆ ತೀರ್ಥ.
ಎಷ್ಟೋ ತೀರ್ಥ/ಕ್ಷೇತ್ರ  ಪ್ರವಾಸಿ ಕೇಂದ್ರವಾಗಿ  ವ್ಯಾಪಾರಕ್ಕೆ ತಿರುಗಿದೆಯಲ್ಲ  ‌ನಿಮ್ಮ ಅಭಿಪ್ರಾಯ ತಿಳಿಸಿ

Tuesday, May 19, 2026

ಸ್ವಾತಂತ್ರ್ಯ ಎಲ್ಲಿದೆ ಒಳಗೋ ಹೊರಗೋ?

ಸ್ವಾತಂತ್ರ್ಯ ಸಿಗೋದು ಅಂತರದಿಂದಲೋ ಸಮಾನತೆಯಿಂದಲೋ? ಇಲ್ಲಿ ಸಮಾನತೆಯ‌ವಿಚಾರ ಬಂದರೆ ಪರಮಾತ್ಮ‌ಜೀವಾತ್ಮರ  ವಾದ ವಿವಾದದ  ಮತಗಳಲ್ಲಿ ಅಂತರ ಬರುತ್ತದೆ. ಇವುಗಳ‌ನಂತರದಲ್ಲಿ ಸಂಸಾರ ಮತ್ತು ಸನ್ಯಾಸಿಗಳ‌ನಡುವೆ ಅಂತರ ಬೆಳೆಯುತ್ತದೆ. ಹೀಗೇ ಮುಂದೆ ಹೋದಂತೆಲ್ಲ ಮೂಲ ಮರೆತು  ಅಂತರವೇ  ಹೆಚ್ಚಾಗುತ್ತಾ‌ ಮಧ್ಯದಲ್ಲಿ   ನಿಂತು‌ನಡೆಸೋ ರಾಜಕೀಯ ಶಕ್ತಿಗಳು ಬೆಳೆದು  ಈ ಕಡೆ  ಸಮಾನತೆಯ ಮಂತ್ರ  ಇನ್ನೊಂದು ‌ಕಡೆ ಅಂತರಗಳ ತಂತ್ರಕ್ಕೆ ಜನರೊಳಗಿದ್ದ ಸ್ವತಂತ್ರ ‌ಬುದ್ದಿ‌ಜ್ಞಾನವನ್ನು  ಹಿಂದುಳಿಸಿ ಹಿಂದುಳಿದವರ  ಸಂಖ್ಯೆ‌ಬೆಳೆಯುತ್ತದೆ. ಈಗ ಸ್ವಾತಂತ್ರ್ಯ  ಪದಕ್ಕೆ ಅರ್ಥ ತಿಳಿಯಿತೆ ? ಎಷ್ಟು ಹೊರಗೆ ಹೋದರೂ ಸ್ವಾತಂತ್ರ್ಯ ಸಿಗದು.
 ಈಗ ಹೊರಗಿರೋದು ಸ್ವೇಚ್ಚಾಚಾರ.  ಅದಕ್ಕಾಗಿ ಹಣ ಅಧಿಕಾರ ಹೆಸರು ದುರ್ಭಳಕೆ ಆದರೂ  ಅವರಿಗೆ ಸ್ವಾತಂತ್ರ್ಯ ವಿದೆ.
ಆ ಸ್ವಾತಂತ್ರ್ಯ ಕೊಟ್ಟವರು ಎಲ್ಲಿರುವರು? ಹಿಂದುಳಿದರೆ‌  ಅಥವಾ ‌ಮುಂದುವರಿದರೆ? ಯಾವುದರಲ್ಲಿ ಹಿಂದುಳಿದರು ಎಂದರೆ ತತ್ವಜ್ಞಾನದಲ್ಲಿ‌ ಮುಂದುವರಿದವರು ತಂತ್ರಜ್ಞಾನಿಗಳಾಗಿ ಹೊರಗೆ‌ಹೋಗಿರುವರು. ಇವರಿಬ್ಬರ. ಮಧ್ಯೆ ‌ನಿಂತು ಪ್ರಚಾರ ಮಾಡುವವರ‌  ಕುತಂತ್ರದಿಂದ. ಅಂತರ ಹೆಚ್ಚಾಗಿ  ಮಾನವನ ದೈವಗುಣ ಅಸುರಗುಣದೆಡೆಗೆ‌  ಹೋಗಿದೆ. 
ಒಟ್ಟಿನಲ್ಲಿ  ದ್ವೇಷ ಯಾವತ್ತೂ ಶಾಂತಿ ಕೊಡದು.
ದ್ವೇಷಕ್ಕೆ ‌ಕಾರಣವೇ  ಅತೃಪ್ತ ಆತ್ಮಗಳಾಗಿ ವೆ
ಆತ್ಮ ಕಣ್ಣಿಗೆ ಕಾಣದಿದ್ದರೂ ಅತೃಪ್ತರನ್ನು  ನೋಡಿದಾಗ  ತಿಳಿಯಬಹುದು ಆ ದೇಹದಲ್ಲಿ ಅತೃಪ್ತಿ ಹೆಚ್ಚಾಗಿದೆ ಎಂದು.
ಎಷ್ಟು ದೊಡ್ಡ ಮನೆ ಒಳ್ಳೆಯ ಸಂಸಾರ ,ಅತ್ಯುತ್ತಮ ‌ ಕೆಲಸ ಇದ್ದರೆ ಪುಣ್ಯವಂತರೆನ್ನುವರು. ಇವು ಯೋಗದ ಮೂಲಕವೇ ಸಿಗಬೇಕೆಂದರೆ ಅದಕ್ಕೆ ಪೂರಕ ಶಿಕ್ಷಣವಿರಬೇಕಿತ್ತು.ಶಿಕ್ಷಣದಲ್ಲಿಯೇ ತೃಪ್ತಿ ‌ಕಾಣದ ಮಕ್ಕಳಿಗೆ  ತೃಪ್ತಿ ಸಿಗೋದು  ಸಾಧ್ಯವೆ?
ಎಲ್ಲದ್ದಕ್ಕೂ ಕಾರಣ ರಾಜಕೀಯ ವ್ಯವಸ್ಥೆ. ಇದು ಧಾರ್ಮಿಕ ಶಿಕ್ಷಣ ,ಸಾಹಿತ್ಯ, ಸಂಗೀತ ಕಲಾಕ್ಷೇತ್ರವನ್ನೂ ಬಿಡದೆ  ಆಳುತ್ತಿದ್ದರೂ  ಈವರೆಗೆ ಇದೇ ಸತ್ಯ ಶುದಗದವೆಂದರಿತು ಹಿಂದೆ ‌ನಿಂತು ಸಹಕಾರ ಕೊಟ್ಟವರು ಈಗ‌ಹಿಂದಿರುಗಲಾಗದೆ  ಅದನ್ನು ‌ಮತ್ತಷ್ಟು‌ಬೆಳೆಸಿ‌ಜನರಿಗೆ ಮೋಸ‌ಮಾಡಿದರೆ  ಪಾಪದ ಫಲ ಕೊಡುವ ಮೇಲಿನ‌ ನ್ಯಾಯಾಧೀಶನಿಂದ .ಬಿಡಿಸಿಕೊಳ್ಳಲು ಕಷ್ಟಪಡಲೇಬೇಕಲ್ಲವೆ?  ಅವತಾರ ಪುರುಷ  ಸ್ತ್ರೀ ಯರನ್ನೂ‌ ಬಿಡದ ಕರ್ಮ  ಹುಲುಮಾನವನನ್ನು ಬಿಡುವುದೆ?
ಎಲ್ಲಾ ತಿಳಿದರೂ  ಕೆಲಸದಲ್ಲಿ ತಪ್ಪಾಗಬಹುದು. ಆದರೆ ತಪ್ಪು ಮಾಡಿದ ಮೇಲೂ ಅದೇ ದಾರಿಯಲ್ಲಿ‌ನಡೆಯುವುದರಿಂದ ಸತಿ ಆಗಬಹುದೆ? 
ಕಂಬಾರ ನಿಗೆ ಒಂದು ವರುಷ ದೊಣ್ಣೆಗೆ ಒಂದೇ ‌ನಿಮಿಷ ಎಂದಂತೆ
ನಾವೆಷ್ಟು  ಉತ್ತಮದಾರಿಯಲ್ಲಿ‌  ನಡೆಯಲು  ಬಿಟ್ಟು  ಮಕ್ಕಳು ದೊಡ್ಡವರಾದಂತೆ  ದಾರಿತಪ್ಪಿಸುವವರೊಂದಿಗೆ  ಬಿಟ್ಟರೆ ವ್ಯರ್ಥ. ಇದು ಹೊರಗಿರುವ ರಾಜಕೀಯ ಶಕ್ತಿಯಾಗಿದೆ.‌

ಸತ್ಯದಿಂದ ರಾಜಕೀಯ ನಡೆಸಲಾಗದು ಎನ್ನುವುದೂ ಸತ್ಯವೇ ಆದರೂ  ರಾಜಕೀಯದಲ್ಲಿ ಸತ್ಯ ಹುಡುಕೋದನ್ನು ಬಿಡೋದಿಲ್ಲ

Monday, May 18, 2026

ಸ್ವಾತಂತ್ರ್ಯ ಯಾರಿಗೆ ಹೇಗೆ ಸಿಕ್ಕಿದೆ?

ಇತಿಹಾಸದ  ಸತ್ಯಘಟನೆಗಳಲ್ಲಿ ಸ್ವಾತಂತ್ರ್ಯ ಹೋರಾಟವು ಇಂದಿಗೂ  ಪ್ರಚಾರದಲ್ಲಿದೆ ಆದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯದವರು ಇದನ್ನು ಪ್ರಸಾರ ಮಾಡುತ್ತಾ  ಸ್ವೇಚ್ಚಾಚಾರಕ್ಕೆ ಇಳಿದಿರೋದನ್ನು ನೋಡಿದಾಗ  ಆತ್ಮದುರ್ಭಲತೆ ಎದ್ದು ಕಾಣುತ್ತದೆ. ಅಂದಿನ ‌ದೇಶಭಕ್ತಿ ಯೋಗದಿಂದ ಕೂಡಿದ್ದರೆ ಈಗಿನ ದೇಶ ಭಕ್ತರು ಭೋಗದ ಜೀವನದಲ್ಲಿರೋದನ್ನು  ಜನ ಕಂಡೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆಂದರೆ  ಅಜ್ಞಾನ ಎನ್ನಬೇಕೋ  ಕಲಿಗಾಲ ಎನ್ನಬೇಕೋ ವಿಜ್ಞಾನ ಎನ್ನಬೇಕೋ?
ಅಜ್ಞಾನ ‌ಬೆಳೆದಿರೋದೆ ಕಲಿಕೆಯಿಂದ  ಆ ಕಲಿಕೆಯು  ಹೊರಸತ್ಯವನ್ನಷ್ಟೆ  ಅರ್ಥ ಮಾಡಿಸುತ್ತಾ ಒಳಗಿದ್ದ ಸತ್ಯವನ್ನು ಹಿಂದುಳಿಸಿ ಆಳುತ್ತಿದೆ. ಇದರಿಂದಾಗಿ  ದೇಶ ವಿದೇಶವಾಗುತ್ತಿದೆ. ಹೊರಗಿನ ಶಿಕ್ಷಣದಿಂದ  ದೇಶ ಮುಂದೆ ನಡೆದಿರಬಹುದಷ್ಟೆ ಆದರೆ ಯೋಗಶಕ್ತಿ‌ ಹಿಂದುಳಿದಷ್ಟೂ  ಮಾನವನಿಗೆ  ಮಹಾತ್ಮರ ನಡೆ ನುಡಿಯಲ್ಲಿದ್ದ ಭಕ್ತಿ ಕಾಣಿಸದು. ಜ್ಞಾನವೇ ಇಲ್ಲದೆ ಭಕ್ತಿ ಬರುವುದೆ?
ಭಕ್ತಿ ಆಂತರಿಕ ಶಕ್ತಿಯಾಗಿದೆ. ಇದನ್ನು ಯಾರೋ ಹೊರಗಿನವರು ಒಳಗೆ ತುಂಬಿಸಲಾಗದು. ದೇಶಭಕ್ತರ ದೇವರಭಕ್ತರ ಹೆಸರಿನಲ್ಲಿ  ಹಣ ಅಧಿಕಾರ ಸ್ಥಾನ ಪಡೆದು ಭೋಗದ  ಜೀವನ ನಡೆಸಬಹುದು. ಆದರೆ ಅವರ ಅನುಭವಜ್ಞಾನ ಸಿಗೋದಿಲ್ಲ.  ಇದೀಗ  ಬೇಲಿಯೇ ಎದ್ದು ಹೊಲ ಮೇಯುತ್ತಿರುವುದರ ಹಿಂದೆ  ಅಜ್ಞಾನ ಆವರಿಸಿದೆ. ಇಲ್ಲಿ ಅಜ್ಞಾನ ಎಂದರೆ ತಿಳುವಳಿಕೆಯಿಲ್ಲ ಎಂದರ್ಥ ವಾಗದು.‌ಪುರಾಣ ಇತಿಹಾಸದ ವಿಷಯಗಳನ್ನು ಓದಿ ಕೇಳಿ ನೋಡಿ  ತಿಳಿಯುವ. ಸ್ವಾತಂತ್ರ್ಯ ನಮಗಿದೆ. ಆದರೆ ಅದರಂತೆ  ನಡೆಯೋ ಸ್ವಾತಂತ್ರ್ಯ ಇಲ್ಲದ  ಕಾರಣದಿಂದ   ಕ್ರಾಂತಿ ನಡೆದಿದೆ. ಇದನ್ನು ಶಾಂತಿಯಿಂದ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸ್ವಾತಂತ್ರ್ಯ ಹರಣಕ್ಕೆ ಕಾರಣವೇ ನಮ್ಮದೇ ಸಹಕಾರ ಕಾರಣವಾಗಿದೆ. ಸರ್ಕಾರಗಳು ನಡೆದಿರೋದೆ ಜನಬಲ ಹಣಬಲ  ಅಧಿಕಾರ ಬಲದಿಂದ. ‌ಇದು ದೇಶವನ್ನು ಸ್ವಾತಂತ್ರ್ಯ ಗೊಳಿಸುತ್ತಿದೆಯೇ ಅಥವಾ  ಅತಂತ್ರಸ್ಥಿತಿಗೆ ತಂದಿದೆಯೆ? 
ವಿದೇಶದಲ್ಲಿ ಇದ್ದವರು  ಭಾರತ ಹೀಗಿರಬೇಕೆಂದು ತೀರ್ಮಾನ  ಮಾಡಿದರೆ  ಬೆಲೆಕೊಡುವ ನಾವು ನಮ್ಮವರ  ದೇಶಭಕ್ತಿಯನ್ನು ನಿರ್ಲಕ್ಷ್ಯ ಮಾಡಿಕೊಂಡು  ವಿದೇಶಿಗರ ಲಕ್ಷಕ್ಕೆ ತಲೆಬಾಗೋದನ್ನು ದೇಶಭಕ್ತಿ ಎನ್ನಬಹುದೆ?
ಮಕ್ಕಳು ಮಹಿಳೆಯರು ದುಡಿದು ಸಂಸಾರ ನಡೆಸೋ ಸ್ಥಿತಿಗೆ ಬಂದಿರೋದೆ  ದೊಡ್ಡ  ಪ್ರಗತಿ ಎನ್ನಬಹುದೆ? 
ಭಾರತದಂತಹ ‌ಮಹಾದೇಶ ನಡೆಸೋದೆ‌ಕಷ್ಟ. ಅದರಲ್ಲೂ ಇಲ್ಲಿನ  ಮೂಲ ಧರ್ಮ ಕರ್ಮ ವನರಿತು  ಜೀವನ ಸಾಗಿಸೋದು ಇನ್ನೂ ಕಷ್ಟ. ಇದಕ್ಕೆ ಬದಲಾಗಿ ಅನ್ಯರ  ಸಹಕಾರ ಸಹಾಯ ಪಡೆದು  ದೇಶದ ಮೂಲ ಧರ್ಮ ಬಿಟ್ಟು ಹೊರಗೆ ಹೋದರೆ ಅದೇ  ಮುಂದೆ  ಸಮಸ್ಯೆ ಗೆ ಕಾರಣವಾಗುತ್ತದೆನ್ನುವುದು ಈಗ ಸತ್ಯವಾಗಿ ಕಾಡುತ್ತಿದೆ.
ಅನ್ಯರ ವಶದಲ್ಲಿ ಲಕ್ಷ ಗಳಿಸಿದರೂ ನಮ್ಮವರನ್ನೇ ನಿರ್ಲಕ್ಷ್ಯ ಮಾಡಿದರೆ  ಸಾಲ  ಕಾಡದೆಬಿಡದು. ಇದೊಂದು ಅಗೋಚರ ಶಕ್ತಿ. ಜೀವನದ ಗುರಿ ಸಾಲ ತೀರಿಸುವುದಾಗಿದೆ ಎಂದಾಗ ಯಾರ ಸಾಲಯಾರು ತೀರಿಸಬೇಕೆನ್ನುವ ಅರಿವಿದ್ದರೆ ಹತ್ತಿರದ ಸಾಲ ತೀರಿಸುತ್ತಲೇ ಎತ್ತರಕ್ಕೆ ಏರಬಹುದು.
ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡು ಭೌತಿಕದಲ್ಲಿ  ಬಾಳುವುದು  ಜೀವನ. ಇಲ್ಲಿ ಪೈಪೋಟಿ ಜಗಳ ತಾರತಮ್ಯ ಅಂತರದ ದ್ವೇಷ ಭಿನ್ನಾಭಿಪ್ರಾಯ ಗಳಿಂದ. ಮನಸ್ಸು ಹದಗೆಟ್ಟು  ಹೊರಗೆ ಸುತ್ತಿದರೆ ಒಳಗಿದ್ದ ಸತ್ಯವೂ ಅರ್ಥ ವಾಗದೆ ಧರ್ಮ ಸೂಕ್ಮವನರಿಯದೆಯೇ ವ್ಯವಹಾರದಲ್ಲಿ ಮಾನವ‌ಮುಳುಗಿ ಲಾಭ‌ನಷ್ಟಗಳ ಲೆಕ್ಕಾಚಾರವಷ್ಟೆ ಕಾಣುತ್ತದೆ. ಅದರ ಹಿಂದೆ ಇರುವ ಪಾಪ ಪುಣ್ಯಗಳ ಬಗ್ಗೆ  ಅರಿವಿದ್ದರೆ ಉತ್ತಮ ವ್ಯವಹಾರದಲ್ಲೂ ಧರ್ಮವಿರುತ್ತದೆ.

ದೇಶವನ್ನು ವಿದೇಶ ಮಾಡೋದಕ್ಕೆ  ಹಣ ಬೇಕು. ವಿದೇಶಿಗರನ್ನು ಸ್ವದೇಶಿ ಮಾಡೋದಕ್ಕೆ  ಜ್ಞಾನ ಬೇಕು.
ಪರರೆಲ್ಲಾ ನಮ್ಮವರಾದರೆ ಸ್ವರ್ಗ
ನಮ್ಮವರೆ ಪರಕೀಯರಂತಿದ್ದರೆ ನರಕ.
ಯಾರಿಗೆಗೊತ್ತು ಯಾರಲ್ಲಿ ಯಾವ ದೇಶದ ಧರ್ಮ ಸಂಸ್ಕೃತಿ ಭಾಷೆ ಇದೆಯೋ ಅದೇ ಅವರನ್ನು ನಡೆಸುತ್ತದೆ.ಆದರೆ ಸ್ವಾತಂತ್ರ್ಯ  ಎನ್ನುವ ಪದ  ಪವಿತ್ರವಾಗಿದ್ದರಷ್ಟೆ  ಯೋಗಿಗಳಾಗಿರಬಹುದು.

ವ್ಯಕ್ತಿತ್ವ ವಿಕಸನ ತತ್ವಜ್ಞಾನದಿಂದಾಗಬೇಕು

ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ವಾಗಬೇಕೇ ಹೊರತು ವ್ಯಕ್ತಿ ಬೆಳೆಯೋದಷ್ಟೆ ಅಲ್ಲ. ತತ್ವಜ್ಞಾನದಿಂದ ವ್ಯಕ್ತಿತ್ವ. ತಂತ್ರದಿಂದ ವ್ಯಕ್ತಿ ಬೆಳೆಯುವನು.
 ಸಾತ್ವಿಕ ಶಿಕ್ಷಣದ ಮೂಲ ಗುರಿ  ಸತ್ಯಾನ್ವೇಷಣೆ. ಆಧ್ಯಾತ್ಮ ಮತ್ತು ಭೌತಿಕ ಸತ್ಯದ ನಡುವಿರುವ ಮಾನವನಿಗೆ  ನಾನ್ಯಾರು ಎನ್ನುವ ಸತ್ಯದ ಪರಿಚಯವಾದ ನಂತರವೇ  ಮಹಾತ್ಮರಾಗೋದಕ್ಕೆ ಸಾಧ್ಯ. 
ಅಂತರಂಗದ ಸಂಸ್ಕಾರದ ನಂತರವೇ ಬಹಿರಂಗದ ಶುದ್ದಿ ಸಾಧ್ಯ.
ಬಸವಣ್ಣನವರು  ಕಲಬೇಡ ಕೊಲಬೇಡ...ಬೇಡವಾಗಿದ್ದನ್ನು ಬಿಟ್ಟು ಬೇಕಾದ್ದನ್ನಷ್ಟೆ ತಲೆಗೆ ತುಂಬಿದರೆ ಅದೇ ಸ್ವಚ್ಚ ಶಿಕ್ಷಣವಾಗುತ್ತದೆ.
ಒಟ್ಟಿನಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗೋದಕ್ಕೆ ಕಾರಣವೇ  ಮಾನವನ  ಅಲ್ಪ ಜ್ಞಾನ ಎನ್ನಬಹುದು. ಮಕ್ಕಳಿಗೆ  ಕಲಿಸುವ ವಿಷಯಗಳು ಅಮೃತವಾಗಿದ್ದರೆ ಅಮೃತಪುತ್ರರು ವಿಷತುಂಬಿದ ದ್ವೇಷದ ವಿಷಯವಾದಷ್ಟೂ ವಿಷಜಂತುಗಳು. ಕೋಟ್ಯಾಂತರ ಜೀವರಾಶಿಗಳಲ್ಲಿ
ಮಾನವನಿಗೆ ಮಾತ್ರ ಈ ಆತ್ಮಜ್ಞಾನದೆಡೆಗೆ ಸಾಗುವ ಅವಕಾಶವಿರೋದು. ಇದರ ಮೂಲವೇ ಶಿಕ್ಷಣವಾಗಿದೆ. ಶಿಕ್ಷೆ ನೀಡುವ ಕ್ಷಣ ಶಿಕ್ಷಣ ಎಂದರೆ ಯಾವುದಕ್ಕೆ ಶಿಕ್ಷೆ ನೀಡಬೇಕು ಎಂದರೆ ತನ್ನ ಆತ್ಮಶುದ್ದಿಯತ್ತ ನಡೆಯಲು  ಮಗುವಿನಲ್ಲಿನ  ಹಲವು ದೋಷಗಳನ್ನು ತಿದ್ದಲು ಸ್ವಲ್ಪ ಮಟ್ಟಿಗೆ ಶಿಕ್ಷೆ ಅಗತ್ಯವಿದೆ. 
ಬುದ್ದಿವಂತನಿಗೆ ಮಾತನ‌ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವರು. ಹಿಂದೆ
ಮಾತಿನಿಂದ ಕಲಿಯದಿದ್ದರೆ ದೊಣ್ಣೆ ಯ ಪ್ರಯೋಗವಾಗುತ್ತಿತ್ತು. 
ಆದರೆ ಇಂದಿನ ಶಿಕ್ಚಣದ ವಿಷಯಗಳೇ ಆತ್ಮತತ್ವಕ್ಕೆ ವಿರುದ್ದವಾಗಿ ಭೌತಿಕದೆಡೆಗೆ ನಡೆದಿದೆ. ಇದನ್ನು ಕಲಿಯದಿದ್ದರೆ  ಶಿಕ್ಷೆ ನೀಡುತ್ತಿರುವುದರಿಂದ ಮಕ್ಕಳು ಇನ್ನಷ್ಟು ಅಜ್ಞಾನದೆಡೆಗೆ ಸಾಗಿದ್ದಾರೆ.
ಅಜ್ಞಾನ ಎಂದರೆ ತಿಳುವಳಿಕೆ ಇಲ್ಲದಿರೋದೆಂದರ್ಥ ವಲ್ಲ.ಇಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನದ ತಿಳುವಳಿಕೆಯಿಲ್ಲದಿರೋದೆಂದರ್ಥ.
ಯಾರೋ ಹೇಳಿದ್ದು ಕೇಳಿದ್ದು ಬರೆದದ್ದು ನುಡಿದದ್ದು  ತಿಳಿಯುವುದಷ್ಟೆ ಶಿಕ್ಷಣವಾಗದು. ಅದು ಇಂದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವೆ ಸಾಧ್ಯವೆ ಎಷ್ಟು ಅಗತ್ಯವಿದೆ ಎನ್ನುವ  ಬಗ್ಗೆ  ನಮ್ಮ ದೇ  ಪ್ರಯತ್ನಗಳು  ನಮ್ಮ ಆತ್ಮಕ್ಕೆ   ಸತ್ಯಕ್ಕೆ ಧರ್ಮಕ್ಕೆ ಚ್ಯುತಿಬರದಂತೆ  ನೋಡಿಕೊಳ್ಳುವ ಜ್ಞಾನ ಬೇಕು.
ವಿದ್ಯೆ ಕಲಿತರೆ ಜ್ಞಾನ ಬೆಳೆಯುತ್ತದೆ. ಜ್ಞಾನದಿಂದ  ವಿನಯವಂತಿಕೆ  ಬೆಳೆಯುತ್ತದೆ.ವಿನಯವು  ವಿಶಾಲ ಮನೋಭಾವನೆಗೆ   ಸಹಕರಿಸುತ್ತದೆ
ವಿಶಾಲವಾಗಿ ಹರಡಿರುವ ಈ ಇಡೀ ಬ್ರಹ್ಮಾಂಡವನ್ನು  ಅರ್ಥ ಮಾಡಿಕೊಳ್ಳಲು  ಆಧ್ಯಾತ್ಮ ದಿಂದಷ್ಟೆ ಸಾಧ್ಯವೆನ್ನುವುದೆ ನಮ್ಮ ಹಿಂದಿನ ಶಿಕ್ಷಣದ ಗುರಿ. ಕಾಲಾನಂತರದಲ್ಲಾದ  ಅಂತರಗಳ‌ಪ್ರಭಾವದಿಂದಾಗಿ ಎಷ್ಟೋ ಮೂಲ ಸತ್ಯ  ಹೊರಬರದೆ ಅರ್ಧ ಸತ್ಯದ ರಾಜಕೀಯ ವಿಚಾರಗಳು  ಪಠ್ಯ ಪುಸ್ತಕದಲ್ಲಿ  ಸೇರಿ ಮಕ್ಕಳು  ಸಣ್ಣ ವಯಸ್ಸಿನಲ್ಲಿಯೇ  ರಾಜಕೀಯ ಪ್ರವೇಶಮಾಡುವಂತೆ  ಮಾಡಿದಾಗ  ರಾಜಯೋಗ ಹಿಂದುಳಿಯುತ್ತದೆ.
ವಿವೇಕಾನಂದರ ನಿನ್ನ ಯ ಗುರಿಯು ಆತ್ಮದರುಶನ....
ಈಗಿಲ್ಲ.

ವಿವೇಕಾನಂದರಾಗೋದು ಹೇಗೆ?

:ವಿವೇಕವಾಣಿ : ಯಾವುದೇ ಮಹಾತ್ಕಾರ್ಯ ದಿಢೀರೆಂದು ಆಗಲಾರದು. ಸದಾ ಆಲೋಚನೆಗಳಿಂದಲೇ ಸತ್ಕಾರ್ಯಗಳಾಗುವುವು. ನೀನು ಸದಾ ಉದಾತ್ತ ವಿಚಾರಗಳನ್ನೇ ಗ್ರಹಿಸುವಲ್ಲಿ ಅವುಗಳನ್ನೇ ಅನುದಿನವೂ , ಅನುಕ್ಷಣವೂ ಮೆಲುಕು ಹಾಕುತ್ತಿದ್ದಲ್ಲಿ ಖಂಡಿತವಾಗಿಯೂ ಮಹಾತ್ಕಾರ್ಯದ ಸಾಮರ್ಥ್ಯ ನಿನ್ನಲ್ಲಿಯೂ ಪುಟಿದೇಳುತ್ತದೆ. ಇದಕ್ಕೆ ಮೂಲವೇ ಶಿಕ್ಷಣದಲ್ಲಿ ವಿವೇಕಯುಕ್ತ ವಿಚಾರಗಳನ್ನು ತುಂಬುವುದಾಗಿತ್ತು.‌
ಭಾರತದ ಈ ಸ್ಥಿತಿಗೆ ಕಾರಣವೇ ಈ ಶಿಕ್ಷಣದ ವಿಷಯಗಳಾಗಿವೆ. ಅದನ್ನು ಸರಿಪಡಿಸದೆ ಜನರನ್ನು ಆಳಲು ಹೊರಟವರಿಗೆ ವಿವೇಕವಂತರೆನ್ನಬಹುದೆ?

ವಿವೇಕವೆಂದರೆ‌ ವಿಚಾರವನ್ನು ವೇದ ಶಾಸ್ತ್ರ ಪುರಾಣದ ಆಧಾರದಲ್ಲಿ ಅರ್ಥ ಮಾಡಿಕೊಂಡು ಸತ್ಯ ಕಂಡುಕೊಳ್ಳುವುದು.

ವಿಷಯಗಳಿಂದ  ನಮ್ಮ ಈ ಜೀವನದ ವೇದನೆಗಳಿಗೆ‌  ಕಾರಣ ತಿಳಿದು  ನಡೆಯುವುದಾಗಿದೆ.
ಇವೆಲ್ಲವೂ  ಆಂತರಿಕ ಶುದ್ದಿಯಿಂದ ಆಗುವುದರಿಂದ ವಿವೇಕಾನಂದರಾಗಬಹುದು. 
ಶಿಕ್ಷಣದಿಂದ. ಇದು ಪ್ರಾರಂಭವಾದಾಗಲೇ ನಮ್ಮೆಲ್ಲರ ವೇದನೆ  ಕಡಿಮೆಯಾಗಲು ಸಾಧ್ಯ.ಅವರವರ ಆತ್ಮಚಿಂತನೆ  ಆತ್ಮಾವಲೋಕನ ಆತ್ಮಪರಿಶೀಲನೆಯೊಳಗಡಗಿದೆ ವಿವೇಕ.

Saturday, May 16, 2026

ಸರಳ ಜೀವನ ಸಾಧ್ಯವೆ?

ಸರಳ ಜೀವನ ಸಾಧ್ಯವೆ?

 ಪರಾವಲಂಬನೆಯ ಜೀವನ ಮೊದಲು ಸುಲಭವೆನಿಸಿದರೂ ಕೊನೆಯಲ್ಲಿ ಅದೇ ನರಕ ತೋರಿಸುತ್ತದೆ.ಹಾಗಂತ ಮಾನವ ಸಂಘ ಜೀವಿಯಾದ್ದರಿಂದ ಏಕಾಂಗಿಯಾಗಿ ಜೀವಿಸೋದಕ್ಕೆ ಕಷ್ಟ.ಹೀಗಾಗಿ  ಸುಜ್ಞಾನದಿಂದ ಜೀವನದ ಸತ್ಯಾಸತ್ಯತೆಯನರಿಯುತ್ತಾ  ಎಲ್ಲರೊಳಗೊಂದಾಗಿ ಸರಳ ಜೀವನ ನಡೆಸುವುದು ಅಗತ್ಯವಿದೆ. ಸರಳವಾಗಿ ಬದುಕೋದೆ ಕಷ್ಟ ಎನ್ನುವ ಜನರ ಮದ್ಯೆ  ಬದುಕೋದೂ ಕಷ್ಟವೆ. 
ಏನೇ ಇರಲಿ ನಮ್ಮ ‌ಇಷ್ಟ ಕಷ್ಟಗಳ ನಡುವೆ ಬರುವ ಸುಖ ದು:ಖದ ಹಿಂದೆ  ನಮ್ಮ  ಸಾಲ ತೀರುತ್ತಿದೆಯೆ ಅಥವಾ ಬೆಳೆಯುತ್ತಿದೆಯೆ ಎನ್ನುವ  ಚಿಂತನೆ ನಡೆಸಿದರೆ  ಉತ್ತಮ.
ದೇಶವೇ ಸಾಲದ ಹೊಳೆಯಲ್ಲಿದೆ. ದೇಶದೊಳಗಿರುವ ಪ್ರಜೆಗಳಲ್ಲಿ ಸಾಕಷ್ಟು ಆಸ್ತಿ ಅಂತಸ್ತು  ಅಧಿಕಾರ ಸ್ಥಾನವಿದೆ. ಆದರೆ ಅದು ಅನ್ಯರ ಜ್ಞಾನ, ಶಿಕ್ಷಣ, ವ್ಯವಹಾರ,ಸಾಲ,ಬಂಡವಾಳದ ಮೂಲದಿಂದ  ಬಂದಿದ್ದರೆ  ಅದರಿಂದ ಹೊರಬರೋದು ಕಷ್ಟವಿದೆ. ಈಗಲೂ ದೇಶದಲ್ಲಿ ಜ್ಞಾನದ ಆಸ್ತಿ ಸಾಮಾನ್ಯರೊಳಗಿದ್ದರೂ ಅದಕ್ಕೆ ಪೂರಕವಾದ ಶಿಕ್ಷಣ ಗುರು ಸಿಗದಿದ್ದರೆ ಋಣ ತೀರಿಸಲಾಗದೆ ಜೀವ ಹೋಗುತ್ತದೆ. ಆತ್ಮನಿರ್ಭರ ಭಾರತ ಆಧ್ಯಾತ್ಮಿಕ ಪ್ರಗತಿಯಿಂದ. ಆದಾಗಲೇ  ಜನಜೀವನದಲ್ಲಿ ಬದಲಾವಣೆ ಒಳಗಿನಿಂದ ಸಾಧ್ಯ. ಇದಕ್ಕೆ ಉಳಿತಾಯ ಅಗತ್ಯವಿದೆ. ಯಾವುದನ್ನು ಉಳಿಸಬೇಕು ? ನಮ್ಮ ಸ್ವಂತ ಬುದ್ದಿ ಜ್ಞಾನದಿಂದ  ಧರ್ಮ ಸತ್ಯವನರಿತವರ ಋಣ ತೀರಿದೆ ಎಂದರೆ ಮಾನವನ ಸಮಸ್ಯೆಯ ಮೂಲವೇ ಋಣ ಅಥವಾ ಸಾಲ.
ಇದನ್ನು ಸತ್ಕರ್ಮ, ಸ್ವಧರ್ಮ, ಸದಾಚಾರ, ಸ್ವಾಭಿಮಾನ  ಸ್ವಾವಲಂಬನೆ ಯಿಂದಷ್ಟೆ  ತೀರಿಸಬಹುದೆನ್ನುವುದು ಆಧ್ಯಾತ್ಮ ವಿಜ್ಞಾನ. ಇದಕ್ಕೆ ವಿರುದ್ದವಿರುವ ಭೌತವಿಜ್ಞಾನ ಇಂದು ಮಾನವನನ್ನು ಆಕಾಶದೆತ್ತರ ಹಾರಿಸಿದರೂ ಭೂಮಿಯ ಮೇಲೆ ಹೇಗೆ ಬದುಕಬೇಕೆಂಬ ಸಾಮಾನ್ಯ ಜ್ಞಾನದಿಂದ ದೂರ‌ಮಾಡಿರೋದಕ್ಕೆ ಜನ ಹೊರಗಿನ ಹೋರಾಟ ಹಾರಾಟ ಮಾರಾಟಕ್ಕೆ ಕೊಡುವ ಸಹಕಾರ ಒಳಗಿರುವ ಸತ್ಯ ಧರ್ಮ ಸರಳ ಜೀವನಕ್ಕೆ ಕೊಡಲಾಗದೆ  ಮನಸ್ಸು ಓಡುತ್ತಿದೆ.
ಓಡುತ್ತಿರುವ  ಮನಸ್ಸಿನ ನಿಗ್ರಹ ಯೋಗದಿಂದ ಸಾಧ್ಯ.ಯೋಗ ಎಂದರೆ ಸೇರುವುದಾದರೆ‌ ಯಾರನ್ನು ಯಾರು ಸೇರಬೇಕು? ಜೀವಾತ್ಮ ಪರಮಾತ್ಮನ ಸೋರುವ ಯೋಗ ಕಣ್ಣಿಗೆ ಕಾಣದು. ಹೀಗಾಗಿ  ಅಂತರಾತ್ಮನ‌ ಮರೆತು  ಅಂತರ‌ಬೆಳೆಸಿಕೊಂಡು ಅಂತರಾಷ್ಟ್ರೀಯ ಒಪ್ಪಂದಗಳು ಹೆಚ್ಚಾಗಿವೆ. ನಮ್ಮವರನ್ನೇ ಅರ್ಥ ಮಾಡಿಕೊಳ್ಳದೆ ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಎಲ್ಲರಲ್ಲಿಯೂ ಇದ್ದು ನಡೆಸೋ ಶಕ್ತಿ ಒಂದೇ ಆಗಿದ್ದರೂ ಎಲ್ಲರ ಋಣ ಒಂದೇ ರೀತಿಯಲ್ಲಿ ಇರದು.ಅವರವರ ಋಣ ತೀರಿಸಿಕೊಳ್ಳಲು ಸ್ವಪ್ರಯತ್ನ, ಸ್ವಂತ ಬುದ್ದಿ ಜ್ಞಾನದ ಜೊತೆಗೆ ಸರಳ ಜೀವನ ಅಗತ್ಯವಿದೆ. ಎಷ್ಟು ಹೊರಗಿನಿಂದ ತಂದು ಹಾಕಿದರೂ ಋಣವೇ ಆಗಿರುವಾಗ ಅದನ್ನು ತೀರಿಸಲು  ಸೇವೆ‌
ಮಾಡಬೇಕು.  ಅನ್ಯರ ಋಣ ತೀರಿಸಲು ಅನ್ಯರ ಸೇವೆ.
ಪರಮಾತ್ಮನ ಋಣ ತೀರಿಸಲು ಪರಮಾತ್ಮನ ಸೇವೆ. ಇದು ಎಲ್ಲರಲ್ಲಿಯೂ  ಪರಮಾತ್ಮನ ‌ಕಾಣುವ ಆಧ್ಯಾತ್ಮಿಕ ಶಕ್ತಿಯಿಂದ  ಮಾಡಬೇಕಾದರೆ ನಿಸ್ವಾರ್ಥ ನಿರಹಂಕಾರದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ  ಕೆಲಸ ಮಾಡಬೇಕೆಂದರೆ  ಸಾಧ್ಯವೆ? 
ಸಾಲ ಮಾಡೋದು ಸುಲಭ ಆದರೆ ಅದನ್ನು ತೀರಿಸುವುದು ಸುಲಭವಿರದು. ಸಾಲವೇ ಶೂಲ  ಸರ್ಕಾರವೇ ಇದರ ಮೂಲ.
ಇಲ್ಲಿ ಸಹಕಾರವಿಲ್ಲದೆ ಸರ್ಕಾರ ನಡೆಯದು. ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟರೆ ಅವರು ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವರಷ್ಟೆ. ಆದರೆ ಶಿಷ್ಟರಿಗೆ ಸಹಕರಿಸಿದ್ದರೆ  ಸಾಲದ ಅರ್ಥ ತಿಳಿಸುತ್ತಾ  ಹಾಸಿಗೆ ಇದ್ದಷ್ಟು  ಕಾಲು ಚಾಚು ಎನ್ನುವರು. ಹಿಂದಿನ ಮಹಾತ್ಮರಿಗೂ ಈಗಿನ‌ಮಹಾಜನತೆಗೂ ಇರುವ. ವ್ಯತ್ಯಾಸವಿಷ್ಟೆ  ಹಿಂದೆ ದೇಶದ ಋಣ ತೀರಿಸುವ ದೇಶ ಸೇವೆ ಸುಜ್ಞಾನದಿಂದ ನಡೆದಿತ್ತು. ಈ ಗ ದೇಶವನ್ನು ಲೂಟಿ ಹೊಡೆಯುವ  ಭ್ರಷ್ಟರ ಸೇವೆ ಜನರೆ ಮಾಡುತ್ತಿದ್ದಾರೆ.
ಇದರಿಂದ ಸಿಕ್ಕಿದ್ದು ಸಾಲದ ಹೊರೆಯಷ್ಟೆ. ಇದನ್ನು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ವಿದೇಶಿಗರ ಅಡಿಯಾಳಾಗಿ ದುಡಿದು ತೀರಿಸಿದರೂ  ಮುಗಿಯದು. ಕಾರಣವಿಷ್ಟೆ ಜ್ಞಾನವೇ ನಮ್ಮದಲ್ಲದ ಮೇಲೆ  ನಮ್ಮಮೂಲದ ಧರ್ಮ ಕರ್ಮ ಅರ್ಥ ಆಗದು. ಧರ್ಮ ಕ್ಕೆ ತಕ್ಕಂತೆ ಕರ್ಮ ಇರದಿದ್ದರೆ ಆತ್ಮಕ್ಕೆ ತೃಪ್ತಿ ಸಿಗದು. ಆತ್ಮಕ್ಕೆ ತೃಪ್ತಿ ಸಿಗದಿದ್ದರೆ ಜೀವನ್ಮುಕ್ತಿಯಾಗದು.
ಒಳಗೇ ಅಡಗಿದ್ದ  ಆತ್ಮಜ್ಞಾನವ ಬಿಟ್ಟು ಹೊರಗಿನವರ ವಿಶೇಷ ಜ್ಞಾನದಿಂದ ತಾತ್ಕಾಲಿಕ ಸುಖ ಸಿಗಬಹುದು.ಅದೇ ದು:ಖಕ್ಕೆ ಕಾರಣವಾಗುತ್ತದೆ. ಹಿಂದಿನವರಂತೆ ನಾವಿಲ್ಲ. ನಮ್ಮಂತೆ ನಮ್ಮ ಮಕ್ಕಳಿರೋದಿಲ್ಲ. ಆದರೂ ಬದಲಾವಣೆ ಹಿಂದಿನ  ಅನುಭವದ ಮೇಲಿರುತ್ತದೆ. ಬದಲಾವಣೆ ಜಗದ ನಿಯಮ. ಸಾಲ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಸಾಲದ ಹೊರೆ ಹಾಕುವುದು  ಪ್ರಗತಿಯೆ ?
ಜೀವನ ಸುಲಭವಲ್ಲ ಅದನ್ನು ನಾವೇ ಸರಳಗೊಳಿಸಿಕೊಳ್ಳಬೇಕು.ಕೆಲವನ್ನು  ಸ್ವೀಕರಿಸಿ ಕೆಲವನ್ನು ತ್ಯಜಿಸಬೇಕು. ಸತ್ಯಜ್ಞಾನವನ್ನು ಸ್ವೀಕರಿಸುತ್ತಾ ಹೋದರೆ‌ ಮಿಥ್ಯಜ್ಞಾನದಿಂದ ಹೊರಬರಬಹುದು. ಮಿಥ್ಯಜ್ಞಾನದೆಡೆಗೆ ಹೋದರೆ ಸತ್ಯ ಬಿಟ್ಟು ನಡೆಯಬೇಕು.ಸತ್ಯವೇ ದೇವರಾದರೆ  ಯಾರನ್ನು ಬಿಡಬೇಕು? ದೈವತ್ವದೆಡೆಗೆ  ಹೊರಟಾಗ ಕಷ್ಟಗಳೆ ಹೆಚ್ಚು. ಕಾರಣ ಅದಕ್ಕೆ ಸಹಕಾರವಿರದು. ಕಣ್ಣಿಗೆ ಕಾಣದ ಶಕ್ತಿ ವ್ಯಕ್ತಿಯನ್ನು ಬೆಳೆಸುತ್ತದೆ. ಅದರಲ್ಲಿ ದೇವರು ಮಾನವರು ಅಸುರರು  ಇದ್ದೇ ಇರುವರು. ಯಾವಶಕ್ತಿಗೆ ಹೆಚ್ಚು ಸಹಕಾರ ಸಿಗುವುದೋ ಅವರು ಭೂಮಿ ಆಳುವರಷ್ಟೆ. ಇದು ಸರ್ವಕಾಲಿಕ ಸತ್ಯ. 
ಈಗ‌ ನಮ್ಮನ್ನು ಆಳುತ್ತಿರುವವರು ಯಾರು? ಮಾನವನೊಳಗೇ ಅಡಗಿರುವ ಈ‌ ಮೂರೂ ಶಕ್ತಿ ಯೇ ಜೀವನದ ಸ್ಥಿತಿಗತಿಗೆ  ಮೂಲ ಕಾರಣ. ಸತ್ವ‌ ರಜಸ್ಸು ತಮಸ್ಸಿನ ಶಿಕ್ಷಣ, ಆಹಾರವೇ  ದೇಹವನ್ನು ದೇಶವನ್ನು ವಿಶ್ವವನ್ನು  ಆವರಿಸಿರುವಾಗ  ನಮ್ಮ ಶಕ್ತಿ ಅದರ ಒಂದು ಸಣ್ಣ ಬಿಂದುವಷ್ಟೆ. ಆ ಬಿಂದುವನರಿತರೆ  ನಾವ್ಯಾರ ಕೈಗೊಂಬೆ ಎನ್ನುವ ಸತ್ಯದರ್ಶನ ಸಾಧ್ಯವಿದೆ. ಆದರದು ಬಹಳ ಕಷ್ಟ.
ಒಳಹೊಕ್ಕಿ ನೋಡುವ ಶಕ್ತಿ  ಇರಬೇಕು.ಇದನ್ನು ಆತ್ಮಾವಲೋಕನ, ಆತ್ಮಸಂಶೋಧನೆ, ಆತ್ಮವಿಶ್ವಾಸ, ಆತ್ಮಸಾಕ್ಷಾತ್ಕಾರ ಆಧ್ಯಾತ್ಮ ಸಾಧನೆ ಎಂದಿರುವರು. 
ಯಾವುದೇ ತತ್ವದ ಸಂಶೋಧನೆ ಹೊರಗಿನಿಂದ ಮಾಡಲಾಗದು.ಮಾಡಿದರೆ ಅದರಲ್ಲಿ ತಂತ್ರ ಬೆರೆತು ಹೋಗುತ್ತದೆ. ತಂತ್ರ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೆಲವರಿಗಷ್ಟೆ ಸ್ವತಂತ್ರ ಜೀವನ  ಸಿಗಬಹುದು. ಒಟ್ಟಿನಲ್ಲಿ  ಜೀವನ‌ಎಂದರೆ ಜೀವಿಗಳ ವನ. ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಷ್ಟಪಡದೆ ಜೀವನ ನಡೆಸಿದರೆ ಜೀವನವಾಗಿರದು. ಭೂ ಋಣ ತೀರಿಸಲು  ಕಷ್ಟಪಟ್ಟು  ಜ್ಞಾನದಲ್ಲಿ ‌ನಡೆಯಲೇಬೇಕು. ಸತ್ಯವೋ  ಮಿಥ್ಯವೋ ಇದರಿಂದಾಗಿ  ಅಧರ್ಮ  ಬೆಳೆಯದಿದ್ದರೆ ಉತ್ತಮ ಸ್ಥಿತಿಗೆ ತಲುಪಬಹುದು. 
ಸೃಷ್ಟಿ ಉತ್ತಮವಿದ್ದರೆ ಸ್ಥಿತಿಯೂ ಉತ್ತಮವಿರುತ್ತದೆ.‌ಹಾಗೆ ಲಯವನ್ನು ಉತ್ತಮವಾಗಿ ಸ್ವೀಕರಿಸುವ  ಮಹಾತ್ಮರಾಗುತ್ತಾರೆ. ಇದು ವಿಶ್ವಗುರು ಭಾರತದ ಸಂದೇಶ.ಇದರ‌ ಮೂಲ ಸಾತ್ವಿಕ ಶಿಕ್ಷಣವಾಗಿತ್ತು.ಈಗ ಹೇಗಿದೆ?
 ಭಗವತಿ 
ಬೆಂಗಳೂರು

Tuesday, May 12, 2026

ದೇವರಿರೋದೆಲ್ಲಿ?

: ಹಿರಣ್ಯ ಕಶ್ಯಪುವನ್ನು ಸಂಹಾರ ಮಾಡಲು‌ದೇವತೆಗಳು ಅವನ‌ ಮಗನನ್ನೇ ಬಳಸಿಕೊಂಡು ಗೆದ್ದರು , ಕಂಸನ ವಧೆ ಶ್ರೀ ಕೃಷ್ಣನಿಂದ ಎಂದು ತಿಳಿದವನಿಗೆ  ನಾರದರು  ಕಂಸನ ಪಾಪದ ಕೊಡ ತುಂಬಿಸಲು ದೇವಕಿಯ ಏಳೂ ಮಕ್ಕಳನ್ನು ಕಂಸ ಕೊಲ್ಲುವಂತೆ ಮಾಡಿದರು. ಅಂದರೆ ಯಾವುದೇ ನಕಾರಾತ್ಮಕ ಶಕ್ತಿಯನ್ನು ಅಷ್ಟು ಸುಲಭವಾಗಿ ತಡೆಯಲಾಗದು. ಅದು ವಿಪರೀತ ಬೆಳೆದಾಗಷ್ಟೆ  ಅದರ ಅಂತ್ಯವಾಗೋದು.
ಈಗಲೂ ಹಾಗೆಯೆ ಭೂಮಿಯ ಮೇಲಿರುವ ಮಾನವನಿಗೆ ಭೂಮಿಯಿಲ್ಲದೆ ನಾನಿಲ್ಲ ಎನ್ನುವ ಸಾಮಾನ್ಯ ಜ್ಞಾನವಿಲ್ಲದೆ ಭೂಮಿಯನ್ನು  ಹೆಣ್ಣು ಹೊನ್ನು ‌ಮಣ್ಣನ್ನು ದುರ್ಭಳಕೆ ಮಾಡಿಕೊಂಡರೂ ಅವರು ಬೆಳೆಯುತ್ತಿರೋದಕ್ಕೆ ಕಾರಣ ಮಧ್ಯವರ್ತಿಗಳ ಸಹಕಾರವಾಗಿದೆ. ಈ ಕಡೆ  ಸತ್ಯ ಇನ್ನೊಂದು ಕಡೆ ಮಿಥ್ಯ  ನಡುವೆ ಅರ್ಧಸತ್ಯದ ರಾಜಕೀಯ ದಲ್ಲಿ ಗೆದ್ದವರು ಯಾರು? ಸೋತವರೆಲ್ಲಿ? 
ಕಣ್ಣಿಗೆ ಕಾಣುವ ಭ್ರಷ್ಟ ದುಷ್ಟರಿಗೆ  ಮತದಾನ ಮಾಡುವ ಜನರ ಅಜ್ಞಾನಕ್ಕೆ  ಸರಿಯಾದ ಜ್ಞಾನದ ಶಿಕ್ಷಣವೇ ಕೊಡದೆ ದೇವರನ್ನು ದೇವಸ್ಥಾನವನ್ನು  ಬೆಳೆಸಿದರೆ  ಆ ದೇವರನ್ನೂ ಸೇರಿಸಿ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಅಸುರರಿದ್ದಾರೆ. ಇದು ಹಿಂದೆ ಯೂ ನಡೆದಿತ್ತು. ಈಗಲೂ ನಡೆಯುತ್ತಿದೆ ಮುಂದೆಯೂ ನಡೆಯಬಹುದು. ನಡೆಸುತ್ತಿರುವವರು ಯಾರು? ನಾವ್ಯಾರು? ದೇವರೆ,ಮಾನವರೆ ಅಸುರರೆ? ನಮ್ಮ ಸಹಕಾರವಿಲ್ಲದೆ  ಯಾವುದು ನಡೆದಿದೆ? ಪ್ರಜಾಪ್ರಭುತ್ವದ  ಅರ್ಥ ತಿಳಿಯದೆ ರಾಜರನ್ನು ಬೆಳೆಸಿದರೆ ಅಧರ್ಮ ವಲ್ಲವೆ? 
ಅಸುರರೊಳಗೆ ಸುರರು  ಇರುವಾಗ ನಮ್ಮೊಳಗೆ ಇರೋದು ಯಾರು?

ಎಲ್ಲರಲ್ಲಿಯೂ ನಿಂತು ನಡೆಸೋ ಪರಮಾತ್ಮನಿಗೆ ಎಲ್ಲಾ ಒಂದೇ. ಎಲ್ಲರೂ ಸತ್ತವರೆ ಆದರೂ  ತಮ್ಮ ತಮ್ಮ ಹಿಂದಿನ ಋಣಕ್ಕನುಸಾರ ಭೂಮಿಗೆ ಬರೋದನ್ನು ತಡೆಯಲಾಗದು.
ಯಾರಿಂದ ಏನಾಗಬೇಕೋ ಅದು ಆಗೇ ತೀರುತ್ತದೆ. 
ದೇವತೆಗಳು ಮಾನವರು ಅಸುರರು  ಮೂವರೂ  ಭೂಮಿ ಆಳಲು ಹೊರಟರೆ  ಭೂಮಿಯ ಋಣ ತೀರುವುದೆ? ಅದಕ್ಕೆ ಧರ್ಮ ಮತ್ತು ಸತ್ಯವೇ ಮೂಲಾಧಾರವಾಗಿತ್ತು. ಅದನ್ನರಿತು‌ ನಡೆದವರಿಗೆ ಮುಕ್ತಿ ಸಿಕ್ಕಿದೆ. 

ದೇವರನ್ನು  ತೋರಿಸಿದವರಿಲ್ಲ ನೋಡಿದವರಿದ್ದಾರೆ ಅರಿತವರಿದ್ದಾರೆ ಅರ್ಥ ಮಾಡಿಸಿದವರಿದ್ದಾರೆ ಹಾಗಾದರೆ  ಕಣ್ಣಿಗೆ ಕಾಣದ ಆ ಶಕ್ತಿ ಯಾವುದು ಆತ್ಮವಾಗಿದೆ.  ಇದು ಒಳಗೇ ಅಡಗಿರುವಾಗ ಹೊರಗಿನಿಂದ ತೋರಿಸಲಾಗದು.ತೋರಿಸಿದರೂ ಸ್ಪಷ್ಟವಾಗಿ  ನೋಡಲಾಗದು. ಚಿತ್ರದ ಹಿಂದಿನ ಶಕ್ತಿ ಕಾಣುವುದೆ?
ಅಂತರಂಗ ಶುದ್ದವಾದರೆ‌  ಮಾತ್ರ  ಸತ್ಯದರ್ಶನ. ಸತ್ಯವೇ ದೇವರು. ಸತ್ಯವೇ‌ ನುಡಿಯದೆ ಧರ್ಮ ರಕ್ಷಣೆಗಿಳಿದರೆ  ಅನರ್ಥ ಗಳಾಗುತ್ತದೆ. 
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ. ಸತ್ಯಹರಿಶ್ಚಂದ್ರನಂತಿರಲಾಗದು  ಎಂದು ಸತ್ಯವನ್ನೇ ಬಿಟ್ಟರೆ ಹರಿ ಕಾಣುವನೆ?

Monday, May 11, 2026

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಗಳ ಅಂತರವು ಮಾನವನ ಜೀವನವೇ ಅತಂತ್ರಸ್ಥಿತಿಗೆ ತರುತ್ತಿದೆ. ಇದರಿಂದ ಯಾರಿಗೂ ಲಾಭವಾಗಿಲ್ಲ ಎನ್ನುವ ಸತ್ಯವನ್ನು ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಳ್ಳಲು ಆತ್ಮಜ್ಞಾನದಿಂದ ಮಾತ್ರ ಸಾಧ್ಯ.
ಮತಾಂತರ ದಲ್ಲೂ ತಾತ್ವಿಕ  ಮತ್ತು ತಾಂತ್ರಿಕ ಎಂಬ ಎರಡು ರೀತಿಯಿದೆ.
ತತ್ವಗಳ ಪ್ರಕಾರ ಅಂತರ‌ಬೆಳೆದಾಗ ಧರ್ಮ ಒಡೆಯುತ್ತದೆ
ತಂತ್ರದ ಮೂಲಕ ಅಂತರ ಬೆಳೆದಾಗ ಮನಸ್ಸೇ‌ಒಡೆಯುತ್ತದೆ.

ಇರೋದೆಂದೆ ಧರ್ಮ ಸತ್ಯ ಜಾತಿ  ಪರಮಾತ್ಮ ದೇವರು ಎನ್ನುವ ಸತ್ಯದೆಡೆಗೆ ಹೋಗಲು ತತ್ವದೊಳಗಿರುವ ಏಕತ್ವವನ್ನು  ಅರಿತು ನಡೆಯಬೇಕು. ಅದರಲ್ಲಿ ‌ ಬಹುತ್ವ ಬಂದಾಗಲೇ  ಹಲವು  ರೀತಿಯಲ್ಲಿ ವಾದ ವಿವಾದ ಗಳಾಗುತ್ತಾ  ಮೇರುಸತ್ಯ ಬಿಟ್ಟು  ಕೆಳಗಿಳಿಯೋದು ಆತ್ಮ.
ಆತ್ಮಕ್ಕೆ ಸಾವಿಲ್ಲ  ಆದರೆ  ಜೀವಾತ್ಮನಿಗೆ  ಮುಕ್ತಿ ಸಿಗೋದಕ್ಕೆ  ಆತ್ಮಜ್ಞಾನ ಅಗತ್ಯವಿದೆ.

ಕಲಿಯುಗದ ಪ್ರಭಾವದಿಂದಾಗಿ ಇಂದಿನ ವೈಜ್ಞಾನಿಕ ಚಿಂತನೆಗಳು  ಆಕಾಶದೆತ್ತರ  ಬೆಳೆದಿದೆ ಭೂಮಿಯ‌ಮೇಲೆ ನಿಂತು  ಜೀವನ ನಡೆಸುತ್ತಿದ್ದೇವೆನ್ನುವ ಸಾಮಾನ್ಯ ಪ್ರಜ್ಞೆ  ಇಲ್ಲದೆ ಭೂಮಿಯನ್ನು  ದುರ್ಭಳಕೆ ಮಾಡುವಷ್ಟು ತಂತ್ರವೂ ಇದೆ.
ತಂತ್ರವಿರಲಿ ಆದರೆ ಅದರಿಂದ ಸ್ವತಂತ್ರ ಬುದ್ದಿ ಜ್ಞಾನ‌ಬೆಳೆದರೆ  ಅದೇ ನಿಜವಾದ ಧರ್ಮದೆಡೆಗೆ‌ನಡೆಸುತ್ತದೆ.
ಅಧ್ವೈತ   ಧ್ವೈತ  ವಿಶಿಷ್ಟಾದ್ವೈತ ಎಲ್ಲಾ ಭೂಮಿಯಲ್ಲಿದೆ. ಆದರೆ ಮೂರೂ‌ಬೇರೆ ಬೇರೆ  ದಾರಿಯಲ್ಲಿ ‌ನಡೆದರೂ ಭೂಮಿ ಒಂದೇ ಆಗಿರುತ್ತದೆ. ಈ ಒಂದನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
 ಪುರಾಣ ಇತಿಹಾಸ‌ಕಾಲದಿಂದಲೂ ಮನುಕುಲವಿರೋದು ಇದೇ ಭೂಮಿಯಲ್ಲಿಯೇ ಎನ್ನುವ ಸತ್ಯ ತಿಳಿಸುವ ಅಗತ್ಯವಿಲ್ಲ. ಆದರೆ ಅರಿತು ನಡೆಯದವರಿಗೆ  ಭೂಮಿಯೇ ಆಸರೆ  ನೀಡೋದನ್ನು ಬಿಟ್ಟಿಲ್ಲ. ಈ ಭೂಮಿ ಎನ್ನುವ ಮಾಧ್ಯಮದಲ್ಲಿ  ಮಾಡಬಾರದ ಕರ್ಮ  ಮಾಡಿದರೆ ಅದಕ್ಕೆ ತಕ್ಕಂತೆ ಫಲವನ್ನು ಅನುಭವಿಸಲು ಭೂಮಿಗೇ‌ಬರಬೇಕು.
ಅಂತರಗಳ ಹಿಂದಿನ ಅರ್ಧ ಸತ್ಯದಿಂದ  ಈ ಕಡೆ ದೇವರು ಇನ್ನೊಂದು ಕಡೆ ಅಸುರರು ನಿಂತು ಎಳೆದಾಡುತ್ತಿರುವ ಸತ್ಯ ತಿಳಿದರೆ  ನಾವೆಲ್ಲರೂ ಇದ್ದೂ ಸತ್ತಂತೆ. ಶ್ರೀ ಕೃಷ್ಣ ‌ಪರಮಾತ್ಮ ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಅರ್ಜುನನ ವಿಷಾಧವನ್ನು ಹೋಗಲಾಡಿಸಲು ತಿಳಿಸಿರುವ ಸತ್ಯ ಇದೇ ಆಗಿದೆ. ಇಡೀ ಬ್ರಹ್ಮಾಂಡವನ್ನು  ತನ್ನೊಳಗಿಟ್ಟುಕೊಂಡಿರುವ
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮ ರು  ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಣುಗಳಂತೆ. ಆದರೆ ಮಾನವ‌ಜನ್ಮದಲ್ಲಿರುವ ಸ್ವಾತಂತ್ರ್ಯ ಎಂದರೆ ಆತ್ಮತತ್ವನರಿತು ನಡೆಯುವುದರಿಂದ  ಸದ್ಗತಿ  ಮುಕ್ತಿ ಮೋಕ್ಷ ದ ಸ್ಥಿತಿ. 
ಮುಕ್ತಿ ಒಂದು ತಾತ್ಕಾಲಿಕ ಬಿಡುಗಡೆ ಯಾದರೆ ಮೋಕ್ಷ ಶಾಶ್ವತ ಬಿಡುಗಡೆ ಯಾಗಿರುತ್ತದೆ.
ಮೋಕ್ಷ  ಯಾರಲ್ಲಿ ಮೋಹದ ಕ್ಷಯವಾಗಿರುವುದೋ ಅವರಿಗಷ್ಟೆ ಸಿಗುತ್ತದೆಂದರೆ ವಾಸ್ತವದಲ್ಲಿ  ನಮ್ಮಲ್ಲಿರುವ ಅತಿಯಾದ ಮೋಹವೇ ಕಾಮ ಕ್ರೋಧ ಲೋಭ ಮಧ ಮತ್ಸರಗಳನ್ನು  ಬೆಳೆಸುತ್ತಿದೆ  ಹಾಗಾದರೆ  ತತ್ವಜ್ಞಾನ ದ ಅಂತರವೇ ತಂತ್ರಜ್ಞಾನದ ಅಂತರಕ್ಕೆ ಕಾರಣವಾಯಿತೆ?
ತತ್ವವಿಲ್ಲದೆ  ತಂತ್ರ‌ಬೆಳೆಯಿತೆ?
ಭೂಮಿಯ ಮೇಲಿರುವ  ಮಂತ್ರ ತಂತ್ರ ಯಂತ್ರಗಳು ಸ್ವತಂತ್ರ ವೆ?
ಇವಿಲ್ಲದೆ  ಮಾನವರು‌ ಬದುಕಬಲ್ಲರೆ?  ಹಿಂದೆ  ಎಷ್ಟೋ ತಪಸ್ವಿಗಳು ಸ್ವತಂತ್ರವಾಗಿ  ಕಾಡಿನಲ್ಲಿದ್ದು ಮೋಕ್ಷ ಸಾಧಕರಾದರು ಎಂದರೆ ಈಗ ಅಸಾಧ್ಯ.
ಎಲ್ಲವೂ ಮನುಕುಲದ ಒಳಿತಿಗಾಗಿ ಮಾನವನ ಸುಖ ಜೀವನಕ್ಕಾಗಿ ಸಂಸಾರ ನಡೆಸುವುದಕ್ಕಾಗಿ ಪರಮಾತ್ಮನು ಕೊಟ್ಟಿರುವಾಗ  ಅದನ್ನು ಬೇರೆಯಾಗಿಸಲಾಗದು. ಬೇರೆ ಮಾಡಿದಷ್ಟೂ ಅಂತರದಲ್ಲಿ  ಮಾನವನ ಸ್ಥಿತಿ ಅತಂತ್ರ ವೆ.

ವಾಸ್ತವದಲ್ಲಿ  ನಮ್ಮ ಮುಂದಿರುವ‌ಮೂರು ಮತಗಳ ಅಂತರವು ಅಜ್ಞಾನವನ್ನು ‌ಬೆಳೆಸುತ್ತಾ‌ಜನರನ್ನು ಆಳಲು ಹೊರಟು  ತಾವೇ ಆಳಾಗಿರುವ ಸತ್ಯದಿಂದ ದೂರವಾದರೂ ಇದನ್ನು ಧರ್ಮ ಎನ್ನುವ  ರಾಜಕೀಯ ಮನೆ‌ಮನೆಯಲ್ಲಿದೆ.
ಇದರಿಂದ ಸಂಸಾರ ಒಡೆದು ಹೊರಬರುತ್ತಿವೆ. ಹೊರಗಿದ್ದವರು  ಒಳಹೊಕ್ಕಿ ಇನ್ನಷ್ಟು ಕುತಂತ್ರದಿಂದ  ಮನೆ ಆಳುತ್ತಿದ್ದರೂ  ನಮ್ಮ ಅಜ್ಞಾನ ನಮಗೆ ಅರಿವಾಗದೆ ಅದನ್ನು ಪ್ರಗತಿ ಎಂದು  ವಾದ ಮಾಡುವವರಿದ್ದಾರೆ.
ಸ್ವತಂತ್ರ ಜೀವನ ಎಂದರೆ ಮೂಲ ಬಿಟ್ಟು  ಯಾರದ್ದೋ ಅಡಿ ಇರೋದಲ್ಲ. ಮೂಲವರಿತು  ನಡೆಯೋದಷ್ಡೆ. ಮೂಲದ ಶಿಕ್ಷಣವೇ  ಕೊಡದೆ ತಂತ್ರದಿಂದ  ಹೊರಗೆಳೆದು ಯಂತ್ರದಂತೆ ದುಡಿಸಿಕೊಂಡರೆ  ಸ್ವೇಚ್ಚಾಚಾರವಾಗುತ್ತದೆ.‌ಯಂತ್ರಗಳಲ್ಲಿಯೂ  ಸಾತ್ವಿಕ ರಾಜಸಿಕ ತಾಮಸಿಕ ಗುಣಗಳಿವೆ. ಆಹಾರ ವಿಹಾರ ಶಿಕ್ಷಣ  ಯಾವ ಗುಣಮಟ್ಟವನ್ನು  ಅನುಸರಿಸುವುದೋ ಹಾಗೆ  ಮಾನವನ  ಜೀವನ ನಡೆಯುತ್ತಿರುತ್ತದೆ.
ಸತ್ವಗುಣಕ್ಕೆ ತಾಮಸಿಕ ಗುಣ ವಿರುದ್ದ. ಇವೆರಡರ ಮಧ್ಯೆ ಇರುವ ರಾಜಸಿಕ ಗುಣವೇ ಅಂತರ ಸೃಷ್ಟಿ ಮಾಡುತ್ತಿರುವಾಗ  ಇದರಿಂದ ದೂರವಿದ್ದವರಿಗಷ್ಟೆ ತತ್ವದರ್ಶನ ಆಗಿದೆ. 
ರಾಜಪ್ರಭುತ್ವದ   ಭಾರತೀಯ ಶಿಕ್ಷಣವು ಸತ್ವಯುತವಾಗಿತ್ತು.ಯಾವಾಗಿದು ಅನ್ಯರ ಮಧ್ಯ ಪ್ರವೇಶದಿಂದ ರಾಜಕೀಯಕ್ಕೆಳೆದು ಆಳಲು ಪ್ರಾರಂಭಿಸಿತೋ
ಆಗಲೇ  ತಾಮಸ ಜೀವನ  ಹೆಚ್ಚಾಯಿತು. ಸ್ವತಂತ್ರ ಬುದ್ದಿ ಜ್ಞಾನ ಇಲ್ಲದೆ ಹೊರ ಬಂದರೆ  ತಂತ್ರದಿಂದ ಆಳುವರು ಕೊನೆಗೆ ಅದೇ ಜೀವನವು ಅತಂತ್ರಸ್ಥಿತಿಗೆ ತಲುಪಿಸುತ್ತಾ ಅಜ್ಞಾನಕ್ಕೆ ತಿರುಗುತ್ತದೆ.
ನಿಮ್ಮ ನಿಮ್ಮ ಮನವ,ತನುವ ಸಂತೈಸಿಕೊಳ್ಳಿ ಎಂದಿರುವ ಮಹಾತ್ಮರಾದವರು  ಈ ರೀತಿಯ ತಂತ್ರಕ್ಕೆ ಒಳಗಾಗದೆ ಅಂತರಂಗದೆಡೆಗೆ ನಡೆದರು. ಅವರನ್ನು ಬಡವರೆನ್ನಬಹುದೆ ಶ್ರೀಮಂತ ರೆ?

ಅಜ್ಞಾನ ಎಂದರೆ ತಿಳುವಳಿಕೆಯಿಲ್ಲದವರೆಂದರ್ಥ ವಲ್ಲ. ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ. ಭೂಮಿ ವಿಶಾಲವಾಗಿದೆ ಎಂದು ಮನಸ್ಸಿಗೆ ಬಂದಂತೆ ಬಳಸುವುದೆ ಅಜ್ಞಾನದ ಲಕ್ಷಣ. ಇದಕ್ಕೆ ತಕ್ಕಂತೆ ಬೆಲೆಕಟ್ಟಬೇಕು. ಬೆಲೆ ಎಂದರೆ ಹಣವಲ್ಲ ಋಣದ ಲೆಕ್ಕಾಚಾರವಾಗಿದೆ. ಇದನ್ನು ತತ್ವಜ್ಞಾನದಿಂದ  ಅರಿತು  ನಡೆದರೆ ಮಾತ್ರ ಸಾಧ್ಯ. ಅದರಲ್ಲಿ ಅಂತರ ಬೆಳೆಸಿಕೊಂಡರೆ  ಅಸುರರ ಸಾಮ್ರಾಜ್ಯ ವಾಗುತ್ತದೆ.
ಅಸುರರು  ನೋಡೋದು ಹೆಣ್ಣು ಹೊನ್ನು ಮಣ್ಣು ಮಾತ್ರ.
ಈಗ ನಮ್ಮನ್ನು ಆಳುತ್ತಿರೋರು ಯಾರು? ನಮ್ಮೊಳಗೆ ನಿಂತು ನಡೆಸೋ ಪರಮಾತ್ಮನೇ ಪರಕೀಯರೆ?
ಆತ್ಮಾವಲೋಕನ ದಿಂದಷ್ಟೆ ಆತ್ಮನಿರ್ಭರ ಭಾರತ ಸಾಧ್ಯ.
ಸರಳ ಜೀವನ ನಡೆಸಲು ರಾಜಕೀಯ ಶಕ್ತಿ ಬೇಕೆ?
ಅಧ್ವೈತ ದೊಳಗೆ ಧ್ವೈತ ದ ರಾಜಕೀಯವಿದ್ದರೆ  ಬೇರೆ ಹೇಗೆ?
ಪ್ರಜಾಪ್ರಭುತ್ವದ  ದೇಶದಲ್ಲಿ  ಪ್ರಜೆಗಳಾದವರು ದೇಶರಕ್ಷಣೆ ಮಾಡಬೇಕೆ ಅಥವಾ ದೇಶವೇ ಪ್ರಜೆಗಳನ್ನು ರಕ್ಷಣೆ ಮಾಡಬೇಕೆ?. ಆತ್ಮರಕ್ಷಣೆಗಾಗಿ  ಜೀವ ಪ್ರಾಣ ಬಿಟ್ಟಿರುವ  ದೇಶಭಕ್ತರಲ್ಲಿ   ಮತ ಜಾತಿ ಧರ್ಮದ ಅಂತರವಿತ್ತೆ?
ಈಗಿದೆ ಎಂದರೆ  ನಾವು ದೇಶಭಕ್ತರಾಗಬಹುದೆ? ದೇವರು ಇರೋದೆಲ್ಲಿ ಹೊರಗೋ ಒಳಗೋ? ದೈವತ್ವದ. ಶಿಕ್ಷಣ ಕೊಡಲು ಸರ್ಕಾರ ಬೇಕೆ? ಒಟ್ಟಿನಲ್ಲಿ ನಮ್ಮ ಈ ಅಂತರಕ್ಕೆ ಕಾರಣವೇ ಅತಿಯಾದ ಸ್ವಾರ್ಥ ಅಹಂಕಾರ ದ  ಅಜ್ಞಾನ.
ಮಾನವನ‌ಹಿತ ಶತ್ರುಗಳೇ ಒಳಗಿರುವ ಸ್ವಾರ್ಥ ಅಹಂಕಾರ ಎನ್ನುವರು. ಈ ಶತ್ರುಗಳು ತತ್ವದೆಡೆಗೆ ನಡೆಸದೆ ತಂತ್ರದೆಡೆಗೆ ಹೊರಗೆ  ನಡೆಸಿ ಆಳುತ್ತವೆ  ಹೀಗಿರುವಾಗ ಹೊರಗಿನ ಶತ್ರು
ಒಳಗಿನ ಶತ್ರುಗಳು ಒಂದಾಗಿ  ವಿಶ್ವ ವೇ ನಮ್ಮದು ಎಂದರೆ ಸತ್ಯವಿರದು. ಸೃಷ್ಟಿ ಸ್ಥಿತಿ ಲಯಗಳನ್ನು  ತಡೆದವರಿಲ್ಲ.‌ಇದರಲ್ಲಿ ಅಂತರವೂ ಇರಲಿಲ್ಲ. ಆದರೂ ಮಾನವ ಬ್ರಹ್ಮ ವಿಷ್ಣು ಮಹೇಶ್ವರರ ನಡುವೆ ಅಂತರ ಸೃಷ್ಟಿ ಮಾಡಿಕೊಂಡು ಜನರನ್ನು ಆಳುತ್ತಿರೋದರಿಂದ ಅಂತರದಲ್ಲಿ  ಮಧ್ಯವರ್ತಿಗಳು  ನಿಂತು ಆಳುತ್ತಿರುವುದಾಗಿದೆ. ಆಳುವವರೂ ಆಳಾಗಿ‌ ಜನಿಸಲೇಬೇಕು.ವಿಧಿನಿಯಮ ಮೀರಿ  ಯಾರೂ ನಡೆಯಲಾಗದು.
ನಮ್ಮನ್ನು ನಾವು ಆಳಿಕೊಳ್ಳಲು ಕಷ್ಟಪಡುವ ನಮಗೆ ಅನ್ಯರನ್ನು ಅಸತ್ಯ ಅಧರ್ಮ ಅನ್ಯಾಯದಿಂದ ಆಳಲು ಹೊರಟವರ ವಿನಾಶ ನಿಶ್ಚಿತ. 

Friday, May 8, 2026

ಬ್ರಹ್ಮಜ್ಞಾನ= ಬ್ರಾಹ್ಮಣ?

🚩🔯🌸🌄⚛🌅🌸

*ಸಂಸಾರಜಸುಖಾಸಕ್ತಂ*
*ಬ್ರಹ್ಮಜ್ಞೋಸ್ಮೀತಿ ವಾದಿನಮ್ |*
*ಕರ್ಮಬ್ರಹ್ಮೋಭಯಭ್ರಷ್ಟಂ*
*ಸಂತ್ಯಜೇದಂತ್ಯಜಂ ಯಥಾ ||*
(ಗರುಡಪುರಾಣ)

"ನಾನು ಬ್ರಹ್ಮಜ್ಞಾನಿ"ಯೆಂದು ಹೇಳಿಕೊಳ್ಳುತ್ತ ಸಂಸಾರಸುಖದಲ್ಲಿ ಆಸಕ್ತನಾದವನು ಕರ್ಮ ಮತ್ತು ಬ್ರಹ್ಮ ಇವೆರಡನ್ನೂ ಅರಿಯದ ಭ್ರಷ್ಟ. ಅವನನ್ನು ನೀಚನೆಂದು ವರ್ಜಿಸಬೇಕು.
ಜನ್ಮದಿಂದ ಯಾರೂ ಬ್ರಹ್ಮನನ್ನು  ಅರಿಯುವುದಿಲ್ಲ. ಜ್ಞಾನದಿಂದ  ಅರಿಯಬಲ್ಲ.ಯಾವುದೇ ವ್ಯಕ್ತಿಯ ಕುರಿತು  ವಿಷಯವನ್ನು  ತಿಳಿಯುವುದರಿಂದ ಏನೂ ಅರ್ಥ ವಾಗದು. ಅಂತಹ ವ್ಯಕ್ತಿತ್ವ  ನಮ್ಮೊಳಗೆ ಇದ್ದಾಗಷ್ಟೆ ಅರಿವಿಗೆ ಬರುತ್ತದೆ. ಪ್ರತಿಯೊಂದು ವ್ಯಕ್ತಿಯೂ  ಬೇರೆ ಬೇರೆ ಇದ್ದರೂ ಒಳಗಿನ ಶಕ್ತಿಯ ಮುಂದೆ ಎಲ್ಲಾ ಒಂದೇ ಎನ್ನುವ ತತ್ವಜ್ಞಾನವನ್ನು ತಂತ್ರವಾಗಿಸಿದರೆ  ಸತ್ಯವಿರದು. ಸ್ವತಂತ್ರ  ನಮ್ಮ ಆತ್ಮಜ್ಞಾನದಿಂದ ಬೆಳೆದರೆ  ಬ್ರಹ್ಮಾಂಡದ ಒಂದು ಅಣುವಿನಲ್ಲಿರುವ ಜ್ಞಾನ  ನಮ್ಮೊಳಗೆ ಇಲ್ಲವಲ್ಲ ಎನ್ನುವ ಸತ್ಯವರಿತು ಅಹಂಕಾರ ಅಳಿಯುತ್ತದೆ.

ಬ್ರಾಹ್ಮಣರು ರಾಜಕೀಯ‌ನಡೆಸಬಾರದೆ? ನಡೆಸೋದರಿಂದ ಏನಾಗುತ್ತದೆ?
ಬ್ರಾಹ್ಮಣ ಎನ್ನುವ ವರ್ಣದ ಪ್ರಕಾರ ಬ್ರಾಹ್ಮಣರು ರಾಜಕೀಯಕ್ಕೆ ಇಳಿಯುವುದರಿಂದ‌ ಕಷ್ಟ ನಷ್ಟಗಳಾಗುತ್ತದೆ.ಆದರೆ ಇಂದು ಜಾತಿಯಾಗಿರುವಾಗ ಹಲವಾರು ಬ್ರಾಹ್ಮಣರ ಸಂಘಗಳಿವೆ  ಆ ಸಂಘಟಣೆಯ ಮೂಲ ಗುರಿ ಧರ್ಮ ರಕ್ಷಣೆಯಾಗಿದ್ದರೆ  ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆ ಯನ್ನು ಸರಿಪಡಿಸುವುದಕ್ಕೆ ರಾಜಕೀಯ ಪ್ರವೇಶ ಮಾಡುವುದು ಅಗತ್ಯವಿದೆ.ಆದರೆ  ತತ್ವಜ್ಞಾನದ ಅರಿವಿಲ್ಲದವರು ಇಳಿದರೆ ಇನ್ನಷ್ಟು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ಅಧಿಕಾರ ನಡೆಸುವಂತಾಗಬಹುದು.
ಆಳೋದನ್ನು ರಾಜಕೀಯ ಎನ್ನುವರು.ಆಳಾಗಿ ದುಡಿಯೋದನ್ನು ಸೇವೆ ಎನ್ನುವರು.ಇಲ್ಲಿ ಯಾರ ಸೇವೆ ಯಾರು ಮಾಡಬೇಕೆಂಬುದರ ಅರಿವಿರೋದು ಅಗತ್ಯವಿದೆ.
ಪರಮಾತ್ಮನ ಸೇವೆ ಎಂದರೆ ಪರಮಾತ್ಮ ಎಲ್ಲೆಡೆಯೂ ಇರುವನು.‌ಧಾರ್ಮಿಕ ಸೇವೆ ಎಂದರೆ ಧರ್ಮ ಎಲ್ಲಿದೆ ಎನ್ನುವ ಅರಿವಿರಬೇಕು.
ನಿಜವಾಗಿಯೂ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆಯೆ? ಪ್ರಶ್ನೆಗೆ ಉತ್ತರ ಸಿಗೋದೆ‌ ಕಷ್ಟ.
ಪ್ರಜೆಗಳೇ‌ ದೇಶವನ್ನು ಆಳೋದಾದರೆ ಧರ್ಮ ಸತ್ಯ ಇದ್ದರೆ  ಆತ್ಮನಿರ್ಭರ. ಅಸತ್ಯ ಅಧರ್ಮ ವೇ‌ ಮರೆದರೆ ಆತ್ಮದುರ್ಭಲ.
ಇಲ್ಲಿ ಆತ್ಮ ಎಂದಾಕ್ಷಣ  ಎಲ್ಲರಲ್ಲಿಯೂ ಅಡಗಿರುವ ಆ ಶಕ್ತಿಯ ಅರಿವಿರೋದು ಬ್ರಾಹ್ಮಣರಿಗೆ ಹೀಗಾಗಿ  ಆಳುವುದು ಕಷ್ಟ. ಪರಮಾತ್ಮ ಒಬ್ಬನೇ ಎನ್ನುವ ತತ್ವದರ್ಶನ ಆದ ಮೇಲೆ ಸಂನ್ಯಾಸಿಯಾಗಿರುವರೆಂದರೆ  ಸಂನ್ಯಾಸ ಧರ್ಮ ರಾಜಕೀಯದಿಂದ ದೂರವಿರೋದು. ಈಗಿದು  ಕೆಲವರ ಹೈಟೆಕ್ ಜೀವನದತ್ತ ಸಾಗುತ್ತಿರೋದು ಕಣ್ಣಿಗೆ ಕಾಣುತ್ತಿದೆ ಎಂದರೆ ನಮ್ಮ ಸಹಕಾರವೇ ಸರಿಯಿರಲಿಲ್ಲವೆಂದರ್ಥ.
ಬ್ರಾಹ್ಮಣರಲ್ಲಿಯೂ  ಕ್ಷತ್ರಿಯರು,ವ್ಯೈಶ್ಯರು,ಶೂದ್ರರಿರುವರು.
ಧರ್ಮ ಕರ್ಮ ಕ್ಕನುಸಾರವಾಗಿ ವರ್ಣ ವಿಂಗಡಣೆಯಾಗಿತ್ತು.
ಮೇಲ್ವರ್ಗ ಎಂದರೆ ಹಣದಿಂದ ಅಳೆಯುತ್ತಿರಲಿಲ್ಲ  ಜ್ಞಾನದಿಂದ ಅಳೆಯುತ್ತಿದ್ದರು. ಬ್ರಹ್ಮಜ್ಞಾನಿಗಳಾಗೋದೆಂದರೆ ಸೃಷ್ಟಿ ಯನರಿತು ಧರ್ಮ ಸತ್ಯದೆಡೆಗೆ ನಡೆಯುವುದು.ಪರಮಾತ್ಮನ ಸೇವೆಯಲ್ಲಿ ತೊಡಗುವುದು.
ಲೋಕಕಲ್ಯಾಣಕ್ಕಾಗಿ  ಜೀವನ ನಡೆಸೋರಲ್ಲಿ ಸ್ವಯಂ ಭಗವಂತನೇ  ಇರುವುದರಿಂದ ಅಹಂ ಬ್ರಹ್ಮಾಸ್ಮಿ ಎಂದರು.ಇಲ್ಲಿ ‌ನಾನೆಂಬ ಅಹಂ ‌ಭಾವವಿರದಿದ್ದರೆ ಅದೇ ಅಧ್ವೈತ ವಾಗುತ್ತದೆ.
ಕಲಿಗಾಲದಲ್ಲಿ  ಶೂದ್ರರೆ ಹೆಚ್ಚಾಗಿರೋದು. ಇಲ್ಲಿ ಎಲ್ಲಾ ಸೇವಕರೆ ಆದರೂ ಹಣವಿದ್ದರೆ  ರಾಜ ಇಲ್ಲದಿದ್ದರೆ ಸೇವಕ ಎನ್ನುವ ಅಜ್ಞಾನ ಹೆಚ್ಚಾಗಿ ಹಣಕ್ಕಾಗಿ ಸುಜ್ಞಾನವನ್ನು ಬಿಟ್ಟು ಹೊರಬಂದವರಿಗೆ ಬ್ರಹ್ಮತತ್ವ ಕಾಣಿಸೋದಿಲ್ಲವಾದ್ದರಿಂದ ಹಿಂದಿನ ರಾಜರ ಕಾಲದಲ್ಲಿ ಬ್ರಾಹ್ಮಣರು ರಾಜಕೀಯದಿಂದ ದೂರವಿದ್ದು ಕ್ಷತ್ರಿಯ ರಿಗೆ  ಉಪದೇಶ ನೀಡುತ್ತಾ ಶಿಕ್ಷಣದ ಮೂಲಕ ಲೋಕಸೇವಾ ಕಾರ್ಯ ದಲ್ಲಿದ್ದರು. ಆದರೆ ಕಾಲಾಂತರದಲ್ಲಾದ‌ ಬದಲಾವಣೆ ವರ್ಣ ಹೋಗಿ ಜಾತಿ ಬೆಳೆಯಿತು. ಜ್ಞಾನ ಅಜ್ಞಾನದೆಡೆಗೆ ಸಾಗುತ್ತಾ  ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಆದರೆ ಒಳಗಿದ್ದ ಆತ್ಮಜ್ಞಾನ ಎಲ್ಲಿದೆ?
ಆತ್ಮಜ್ಞಾನದಿಂದ  ಆತ್ಮನಿರ್ಭರ ಆಗುವುದಾದರೆ ಅದಕ್ಕೆ ಪೂರಕ ಶಿಕ್ಷಣ ಕೊಡಬೇಕಾದವರು ಯಾರು? ನಮ್ಮನ್ನು ನಾವೇ ಆಳಿಕೊಳ್ಳುವ ಸ್ವಾತಂತ್ರ್ಯ ವಿದ್ದರೂ ಜ್ಞಾನವಿಲ್ಲದೆ  ಅನ್ಯರನ್ನು ಆಳೋದರಿಂದ ಯಾವುದೇ ಧರ್ಮ ರಕ್ಷಣೆ ಆಗದು.ಇದು ಸರ್ವ ಕಾಲಿಕ ಸತ್ಯವಾಗಿದೆ.
ಎಷ್ಟೋ ಮಹಾರಾಜರು ಈ ಭರತ ಭೂಮಿಯನ್ನು ಆಳಿದ್ದಾರೆ.ಆದರೆ ಅವರಲ್ಲಿದ್ದ ಕ್ಷಾತ್ರ ಗುಣಜ್ಞಾನ ಇಂದಿನ ರಾಜಕಾರಣಿಗಳಲ್ಲಿ ಇದೆಯೆ?
ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ದೇಶ ಆಳಲು ಬಿಟ್ಟವರು ಯಾರು? ಎಲ್ಲದ್ದಕ್ಕೂ ನಮ್ಮ ಅಜ್ಞಾನ ಕಾರಣವಾದಾಗ ಅದನ್ನು  ಸರಿಪಡಿಸದ ಹೊರತು  ನಮ್ಮ ಬ್ರಹ್ಮತತ್ವಕ್ಕೆ ಬೆಲೆಯಿರದು.
ಧಾರ್ಮಿಕ ಕ್ಷೇತ್ರ ನಡೆದಿರೋದೆ ಪ್ರಜೆಗಳ ಹಣದಿಂದ. ಅವರ ಮಕ್ಕಳಿಗೆ ಸುಜ್ಞಾನ ನೀಡುವುದು ಧರ್ಮ. ಆದರೆ ಧಾರ್ಮಿಕ ಕ್ಷೇತ್ರ,ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರಗಳು ಒಂದರ‌ಮುಖ ಇನ್ನೊಂದು ನೋಡದೆ ರಾಜಕೀಯ ಕ್ಷೇತ್ರವನ್ನು  ಅನುಸರಿಸಿದರೆ  ಏನರ್ಥ?
ಬೇಲಿಯೇ ಸರಿಯಿಲ್ಲದಿದ್ದರೆ ಹೊಲ‌ಮೇಯುವವರನ್ನು ಯಾರು ತಡೆಯಬಹುದು? ಎಲ್ಲದ್ದಕ್ಕೂ ಮೂಲ ಸರಿಯಿದ್ದರೆ ರೆಂಬೆಕೊಂಬೆಗಳು ಗಟ್ಟಿಯಾಗುತ್ತದೆ. ಮೂಲವೇ  ಗಟ್ಟಿಯಿರದೆ  ಯಾವುದೂ ನೆಟ್ಟಗಿರದು. ಇಲ್ಲಿ  ಬ್ರಾಹ್ಮಣ ಎಂದರೆ ವ್ಯಕ್ತಿಯಾಗಿರೋದಿಲ್ಲ.ನಮ್ಮಲ್ಲಿನ ಆತ್ಮಜ್ಞಾನದ ಶಕ್ತಿ.
ಆಧ್ಯಾತ್ಮ ಎಂದರೆ ಆದಿ ಆತ್ಮ.ಮೊದಲು ಆತ್ಮಾವಲೋಕನ ನಂತರ ವಿಜ್ಞಾನ. ಈಗ ಶಿಕ್ಷಣವೇ ಮೊದಲು ವಿಜ್ಞಾನ ವಾಗಿ ಹೊರಜಗತ್ತಿನೆಡೆಗೆ ಸಾಗುತ್ತಿದೆ. ಎಷ್ಟು ಎತ್ತರಕ್ಕೆ ಏರಿದರೂ ನಿರಾಕಾರ ಬ್ರಹ್ಮನ ಕಾಣೋದಿಲ್ಲ. ಇದಕ್ಕಾಗಿ ಆಳವಾಗಿರುವ ಸತ್ಯ ಧರ್ಮ ದೊಳಗೆ ಹೊಕ್ಕಿ ನೋಡುವ‌ ಶಕ್ತಿ ನಮಗಿದ್ದರೆ ರಾಜಕೀಯದಿಂದ ದೂರವಿದ್ದವರಿಗೆ ಇದರ ಅರಿವಾಗಿರೋದು ಅರ್ಥ ವಾಗುತ್ತದೆ.
ಕೆಲವರು ನಾವು ರಾಜಕೀಯದಿಂದ ದೂರವಿದ್ದೇವೆ ಎಂದು ಜನರ ಮಧ್ಯೆ ನಿಂತು ಪ್ರಚಾರ ಮಾಡುವರು.ಆದರೆ ಜನ ರಾಜಕೀಯದ ಹಿಂದೆ ನಡೆದು ಹಣಗಳಿಸಿ  ಕೊಡುತ್ತಿರುವಾಗ ರಾಜಕೀಯದಿಂದ ದೂರವಿರೋದು ಅಸತ್ಯವಾಗುತ್ತದೆ. ಹಣವಿಲ್ಲದೆ ಯಾರೂ ಜೀವನ‌ನಡೆಸಲಾಗದು. ಆದರೆ ಇದು ಸ್ವಂತ ಪರಿಶ್ರಮದಿಂದ ಗಳಿಸಿ ಸುಜ್ಞಾನದಿಂದ ಬಳಸಿದರೆ ಧರ್ಮ ವಾಗುತ್ತದೆ. ಭ್ರಷ್ಟ ದುಷ್ಟರಿಗೆ ಆಶೀರ್ವಾದ ಮಾಡಿದರೆ  ಅವರು ಬೆಳೆಯುವುದಿಲ್ಲವೆ?
ಮಹಿಳೆ ಮಕ್ಕಳ ಹಣವನ್ನೂ ಬಿಡದೆ  ಸಂಸಾರ ನಡೆಸುವವರಿಗೆ ಏನೆನ್ನಬೇಕೋ? ಒಟ್ಟಿನಲ್ಲಿ ಹೊರಗಿನ ಆಸೆ ಆಕಾಂಕ್ಷೆಗಳನ್ನು  ತೀರಿಸಿಕೊಳ್ಳಲು ಬ್ರಹ್ಮತತ್ವವನ್ನು ದುರ್ಭಳಕೆ ಮಾಡಿಕೊಂಡಷ್ಟೂ  ಆತ್ಮದುರ್ಭಲ ವಾಗುತ್ತದೆ.
ದೇವನೊಬ್ಬನೇ ‌ನಾಮ‌ಹಲವು ಹಾಗೆ ದೇಶ ಒಂದೇ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಆ ಒಂದೇ ಶಕ್ತಿಯನ್ನು ಅಂತರಂಗ ಶುದ್ದಿಯಿಂದ ಕಾಣಬಹುದು. ಅಂತರ ಬೆಳೆಸಿಕೊಂಡು ಆಳುತ್ತಾ ಹೋದರೆ  ಅತಂತ್ರ ಜೀವನವಾಗನಡೆದಾಗಲೇ
ವಾಸ್ತವ ಸತ್ಯ ಕಣ್ಣಿಗೆ ಕಾಣುತ್ತದೆ ಹಿಂದಿನ ಸತ್ಯ ಮುಂದಿನ ಸತ್ಯ ಕಾಣೋದಿಲ್ಲ. ವಾಸ್ತವವರಿತು  ಸತ್ಯ ತಿಳಿದು  ನಡೆದಾಗಲೇ ಮುಂದಿನ ಭವಿಷ್ಯ ಉತ್ತಮವಿರುತ್ತದೆ.‌ ಕೇವಲ ಹಿಂದಿನದ್ದೇ ಪ್ರಚಾರ ಮಾಡಿದರೂ ಕಷ್ಟ ಭವಿಷ್ಯ ಹೇಳುತ್ತಾ ಕುಳಿತರೂ ನಷ್ಟ.
ಬ್ರಾಹ್ಮಣ ಎನ್ನುವ ಪದವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಹೋದರೆ ಜೀವನ್ಮುಕ್ತಿ ಸಿಗದು. ಬ್ರಾಹ್ಮಣ ದೇವರ ಸಮಾನ ದೈವತ್ವದೆಡೆಗೆ ಹೋದವರು ಬ್ರಹ್ಮತತ್ವವನರಿತರು. ಇಲ್ಲಿ ಜಾತಿ ಇರಲಿಲ್ಲ. ಸಾತ್ವಿಕ ಧರ್ಮ ಕರ್ಮ

Sunday, May 3, 2026

ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ. ಬಡತನವೆನ್ನುವುದು  ಶಾಪವೋ ವರವೋ ಎಂದರೆ ಜ್ಞಾನವಿದ್ದವರಿಗೆ ಇದು ವರ.ಅಜ್ಞಾನಿಗಳಿಗರ ಶಾಪ. ಆ ಶಾಪದಿಂದ ಮುಕ್ತಿ ಕೊಡುವುದು ಗುರು.ಜ್ಞಾನದ ಶಿಕ್ಷಣ‌ನೀಡಿ ಸ್ವತಂತ್ರ ವಾಗಿ ಜೀವನ‌ನಡೆಸುವಂತೆ ಮಾಡುವುದೇ ಗುರು. 
ಹೀಗಾಗಿ  ಮಾನವ ಮಹಾತ್ಮನಾಗಬೇಕಾದರೆ ಕಷ್ಟಪಟ್ಟು ಆತ್ಮ ಪರಮಾತ್ಮನೆಡೆಗೆ ಸಾಗಬೇಕಿದೆ.ಅಂತರಂಗಶುದ್ದಿಯ ನಂತರವೇ ಬಹಿರಂಗ ಶುದ್ದಿ ಸಾಧ್ಯ.
ಇದಕ್ಕೆ ಮೊದಲ ಗುರುವಾಗಿರುವ ತಾಯಿಯ ಸುಜ್ಞಾನವೇ‌ಮಕ್ಕಳ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡಲು ಸಾಧ್ಯ.ಯಾವಾಗ ತಾಯಿಯಲ್ಲಿಯೇ ಅಜ್ಞಾನವಿರುವುದೋ ಹೊರಗಿನ ಗುರುಗಳ ಆಶ್ರಯ ಅಗತ್ಯವಾಗುತ್ತದೆ. ಹೊರಗಿನ ಗುರುವೂ  ಹೊರಗಿನ ರಾಜಕೀಯದೊಳಗಿದ್ದರೆ ಗುರಿ ತಲುಪಲಾಗದು. ಒಟ್ಟಿನಲ್ಲಿ  ಹಣದಿಂದ ಗುರುವನ್ನು ಗುರುತಿಸೋದೆ ಅಜ್ಞಾನ.

ವಿಶ್ವರೂಪ ದರ್ಶನದಲ್ಲಿ ನಾವು ದೇವನೊಬ್ಬನೆ ನಾಮಹಲವು ಎನ್ನುವುದನ್ನು ಅರಿಯಬಹುದಷ್ಟೆ.ಅದೇ ವಾಸ್ತವಕ್ಕೆ ಬಂದರೆ ದೇಶ ಒಂದೇ ಪ್ರಜೆಗಳು ಹಲವು,  ದೇಶ ಒಂದೆಧರ್ಮ  ಹಲವು, ದೇಶ ಒಂದೇ ಶಿಕ್ಷಣ ಹಲವು ದೇವರೊಂದೆ ದೇವಸ್ಥಾನ ಹಲವು, ದೇಶ ಒಂದೇ ಪಕ್ಷ ಹಲವು...ಕೊನೆಯ ಪಕ್ಷಪಾತ ಎಲ್ಲಾ ಹಲವುಗಳಲ್ಲಿ ರಾಜಕೀಯವಾಗಿ ಬೆಳೆಸಿಕೊಂಡು ಹೊರಬಂದಾಗ ರಾಜಯೋಗದ ಅರಿವಿಲ್ಲದೆ ಜೀವನ ರಾಜಕೀಯದ ವಶವಾಗಿ ಛಿದ್ರ ಛಿದ್ರವಾಗುತ್ತದೆ.
ಇದನ್ನು ಒಂದು ಮಾಡೋದೆ ತತ್ವಜ್ಞಾನದ ಉದ್ದೇಶ ವಾಗಿತ್ತು.ಈಗಿದು ತಂತ್ರದೆಡೆಗೆ ನಡೆಯುತ್ತಾ ಅತಂತ್ರಸ್ಥಿತಿಗೆ ಮನುಕುಲವನ್ನು  ನಡೆಸುತ್ತಿದೆ ಎಂದರೆ ಇದಕ್ಕೆ ಸಹಕಾರ ನೀಡಿರುವ ನಮ್ಮ ಅಜ್ಞಾನವೇ ಕಾರಣ.ಅಜ್ಞಾನಕ್ಕೆ ವೈಜ್ಞಾನಿಕ ಶಿಕ್ಷಣದ ಅರ್ಧ ಸತ್ಯವೇ ಕಾರಣ. ಅಸತ್ಯದೊಳಗೆ ಸತ್ಯವಿತ್ತು. ಅಧರ್ಮದೊಳಗೇ ಧರ್ಮ ಸಿಲುಕಿತ್ತು, ಅಜ್ಞಾನವನ್ನು ಜ್ಞಾನವೆಂದು ನಂಬಿಸಲಾಗಿತ್ತು. ವಿದೇಶದೊಳಗೇ ದೇಶವನ್ನು  ಹೊರಗಿನವರು ಬೆಳೆಸುತ್ತಾ ಮೂಲವನರಿಯದೆ ಗುರುವನ್ನು ಹೊರಗಿನಿಂದ  ಹುಡುಕಿ ಹೊರಟವರಿಗೆ ಒಳಗಿದ್ದ ಗುರುವಿನ ಅರಿವಿಲ್ಲದೆ  ಅಂತರ ಬೆಳೆಯಿತು.ಇದೇ ಧರ್ಮಾಂತರ, ಜಾತ್ಯಾಂತರ, ಮತಾಂತರ, ಪಕ್ಷಾಂತರವಾಗಿ ದೇಶಾಂತರ ಹೋದರೆ ಪ್ರಗತಿ ಎನ್ನುವ  ರಾಜಕೀಯಶಕ್ತಿಯ ಹಿಂದೆ ಹೊರಟರೆ ಅಧೋಗತಿ ಎನ್ನುವುದು ವಾಸ್ತವದಲ್ಲಿ ಸರಿಯಾಗಿ ಕಾಣುತ್ತಿದೆ. ಆದರೂ ಅದೇ ಗುರು ಅದೇ ಶಿಕ್ಷಣ ಅದೇ ರಾಜಕೀಯ  ಜನ್ಮಜನ್ಮಾಂತರಕ್ಕೆ ಕಾರಣವಾಗಿದೆ.ಕಲಿಯುಗ ಕಲಿಕೆ ಒಳಗಿನ ಗುರುವಿನತ್ತ ಸಾಗಿದಾಗಲೇ ಗುರಿ ತಲುಪಬಹುದು. ಏನಂತೀರ?

ಅಂತರಂಗದಲ್ಲಿನ ಗುರು ಬಹಿರಂಗದ ಗುರುವಿನೊಂದಿಗೆ ಬೆರೆತಾಗಲೇ ಗುರಿತಲುಪಲಾಗುವುದು. ಇದರಲ್ಲಿ ಮೂರು ವರ್ಗದವರಿರುವರು, ದೈವಗುರು,ಮಾನವಗುರು,ಅಸುರಗುರು, ಯಾರಲ್ಲಿ ದೈವಗುಣವಿರುವುದೋ ಅವರು ದೇವಗುರುಗಳನ್ನು ಆಶ್ರಯಿಸುವರು,ಮಾನವೀಯ ಗುಣವಿದ್ದವರು ಮಾನವೀಯತೆಗೆ ಬೆಲೆಕೊಡುವರು,ಅಸುರಗುಣವಿದ್ದವರಲ್ಲಿ ಅಜ್ಞಾನವೇ ಹೆಚ್ಚಾಗಿದ್ದು ಅಸುರಿಶಕ್ತಿಯ ವಶವಾಗಿರುವರು.
ಮಾನವ ಮಧ್ಯವರ್ತಿ. ಮೊದಲು ಮಾನವನಾಗಿ ನಂತರ ದೈವತ್ವದ ಕಡೆಗೆ ಹೊರಡಬೇಕು.ಯಾವಾಗ ಮೊದಲೇ ಹೊರಗಿನ ರಾಜಕೀಯ ಶಕ್ತಿಯೆಡೆಗೆ ನಡೆಯುವನೋ ಅವನಿಗೆ ತಾನೇ ಪರರ ವಶದಲ್ಲಿರುವ ಸತ್ಯ ತಿಳಿಯದೆ ಹೋಗುತ್ತದೆ. ರಾಜಕೀಯದಲ್ಲಿ ಸತ್ಯ ಧರ್ಮ  ಇರದು.
ಗುರು ವ್ಯಕ್ತಿಯಲ್ಲ ಆತ್ಮಶಕ್ತಿಯಾಗಿದೆ. ಕಣ್ಣಿಗೆ ಕಾಣದ ಶಕ್ತಿಯನ್ನು  ಅನುಭವಿಸಿಯೇ ತಿಳಿದು ನಡೆದವರು ಗುರುವಾದರು. ಇದರಲ್ಲಿ ಮೇಲಿನ ದೈವ ಮಧ್ಯೆ ದ ದೇವರು ಕೆಳಗಿನ ದೇವರೆಂದು  ಮಾನವನೇ ಸೃಷ್ಟಿ ಮಾಡಿಕೊಂಡು  ಆಳುತ್ತಿರುವನಷ್ಟೆ. ಅಳುವವರು ಯಾರು? ಪ್ರಜಾಪ್ರಭುತ್ವದಲ್ಲಿ ರಾಜರು ಎಲ್ಲಿರುವರು? ನಾವ್ಯಾರ ಸೇವಕರು? ಪರಮಾತ್ಮನ ಸೇವಕರೆ ಪರಕೀಯರ ಸೇವಕರೆ?
ಪರಕೀಯರ ಸೇವಕರಿಗೆ ಹಣ ಸಿಗುತ್ತದೆ ಜ್ಞಾನ ಮಾರಾಟವಾಗಿರುತ್ತದೆ. ಪರಮಾತ್ಮನ ಸೇವಕರಿಗೆ ಹಣವಿಲ್ಲದೆಯೇ ಜ್ಞಾನೋದಯವಾಗಿರುತ್ತದೆ. ಮಧ್ಯೆ ನಿಂತಿರುವ ಮಾನವನಿಗೆ ಈ ಕಡೆ ಹಣ ಇನ್ನೊಂದು ಕಡೆ ಜ್ಞಾನವಿಜ್ಞಾನ ಕುಣಿಸುತ್ತಿದೆ. ಇದನ್ನರಿತರೆ  ಧರ್ಮ ನಮ್ಮ ಹತ್ತಿರವೇ ಇದ್ದರೂ  ನಾವೇ ನೋಡದೆ ಹೊರಗೆ ನೋಡುತ್ತಿರುವುದು ಸ್ಪಷ್ಟವಾಗಿ ಅರ್ಥ ವಾಗುತ್ತದೆ.
ಸಂನ್ಯಾಸಿಯಾಗಿದ್ದು ತಿಳಿಸುವ ಸತ್ಯ ಸಂಸಾರಿಗಳಿಗೆ ಅರ್ಥ ಆಗದು. ಹಾಗೆ ಸಂಸಾರದೊಳಗಿಳಿದು ಸಂನ್ಯಾಸಿಗಳಂತೆ ಬದುಕಿದರೂ  ಸಮಾಜ ಕೇಳದು. ಅವರವರ ಮನಸ್ಥಿತಿ ಪರಿಸ್ಥಿತಿ  ಜ್ಞಾನದ ಮೇಲೇ ನಿಂತಿದ್ದರೂ ಜ್ಞಾನದ ಶಿಕ್ಷಣ ಕೊಡದೆ ಜನರನ್ನು ಆಳೋದರಿಂದ ಧರ್ಮ ರಕ್ಷಣೆ ಆಗದು. ಜನಬಲ ಹಣಬಲವೆಲ್ಲವೂ ಗುರುವಿನಲ್ಲಿದ್ದರೂ  ಜ್ಞಾನದಾಸೋಹವಾಗದಿದ್ದರೆ ಧರ್ಮ ಉಳಿಯದು.
ಸತ್ತವರಿಗೆ ಹಣ ಕೊಡುವ‌ಬದಲು ಇದ್ದವರಿಗೆ ಜ್ಞಾನಕೊಟ್ಟರೆ  ಉತ್ತಮ ಬದಲಾವಣೆ ಸಾಧ್ಯವಿದೆ. 
ಭಾರತ ವಿಶ್ವಗುರು ಹಿಂದೆ ಆಗಿತ್ತು.ಈಗ ವಿಶ್ವದ ಎಲ್ಲಾ ರೀತಿಯ ಶಿಕ್ಷಣ ದೇಶದಲ್ಲಿದೆ ಆದರೆ  ಜನರಲ್ಲಿ ಅಧ್ಯಾತ್ಮ ಶಿಕ್ಷಣದ ಕೊರತೆಯಿದೆ. ಇದಕ್ಕೆ  ಕಾರಣವೇ  ಒಳಗಿದ್ದ ಗುರುವನ್ನು ಮರೆತು ಹೊರಗೆ ನಡೆದಿರೋದು.
ಮನೆ ಮನೆ ಗುರುಕುಲವಾಗಿತ್ತು.ತಾಯಿಯೇ ಮೊದಲ ಗುರುವಾಗಿದ್ದಳು .ಈಗ ಎಲ್ಲಾ ಹೊರಗೆ ಬೆಳೆದಿದೆ.ಮನೆ ಖಾಲಿಸ್ಥಾನ ವಾಗುತ್ತಿದೆ  ಎಂದರೆ  ಅರಿವಿನಕೊರತೆ ಒಳಗಿದೆ.

ಪುರಾಣ ಇತಿಹಾಸದ ಕಾಲ ಹಿಂದೆ ಧರ್ಮ ಸೂಕ್ಮದ ಜೊತೆಗೆ ಸತ್ಯವಿತ್ತು. ಈಗ ಧರ್ಮ ವೂ ಇಲ್ಲ ಸತ್ಯವೂ ಇಲ್ಲ ಎಲ್ಲಾ ಹೊರಮುಖವಾಗಿ ವ್ಯವಹಾರಕ್ಕೆ ಇಳಿದಿವೆ. ಹಣದಿಂದ  ಗುರುವಾಗಬಹುದೆ? 

ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಕಾಯೋನು ಒಳಗೇ ಅಡಗಿಕುಳಿತಿದ್ದರೂ ಹೊರಗಿನವರ ಹಿಂದೆ ಹೋದರೆ  ಅನರ್ಥ.
ಎಷ್ಟೋ ಬಡವರ ಹಣವನ್ನು  ಯಾರೋ ಶ್ರೀಮಂತ ರಿಗೆ ಹಂಚಿದರೆ  ಅಧರ್ಮ ವಷ್ಟೆ.
ಜ್ಞಾನವನ್ನು ಹಣದಿಂದ ಅಳೆಯುವುದೇ ಅಜ್ಞಾನ. ಸರಸ್ವತಿಯನ್ನು ಲಕ್ಮಿ ಯಂತೆ ವೈಭೋಗದಲ್ಲಿ  ಕಾಣುವುದೇ ಅಜ್ಞಾನ. ಹೊರಗೆ ತಳುಕುಬಳುಕು ಒಳಗೇ ಹುಳುಕು.
 ಯಾತ್ರಾಸ್ಥಳ ವನ್ನು ಪ್ರವಾಸಿತಾಣ ಮಾಡಿ ರಾಜಕೀಯ ನಡೆಸಬಹುದಷ್ಟೆ ಜನರಿಗೆ ಜ್ಞಾನ ಬರೋದಿಲ್ಲ.ಭಕ್ತಿಯೂ ಬರೋದಿಲ್ಲ ಕಾರಣ ವ್ಯವಹಾರದಲ್ಲಿ  ಹಣವೇ ಸರ್ವಸ್ವ. 
ಜೀವನ‌ನಡೆಸಲು ಹೆಣವನ್ನೂ ಮಾರುವ  ವ್ಯವಹಾರ ಕಲಿಕೆಯಲ್ಲಿಯೇ ಅಡಗಿ ಕಲಿಯುಗದ  ಶಿಕ್ಷಣದಾರಿತಪ್ಪಿದ ಹಳಿಯಾಗುತ್ತಿದೆ. ರೈಲು  ಹೊರಗೆ ಓಡಿದರೂ  ಒಳಗಿದ್ದ ಕೊಂಡಿ ಕಳಚಿದರೆ ಅಪಘಾತ ತಪ್ಪಿದ್ದಲ್ಲ. ಹಾಗೆ  ಸಂಸಾರದಲ್ಲಿ  ಒಳಗಿನ ಋಣ ತೀರಿಸದೆ ಹೊರಗೆ ಋಣ ಬೆಳೆದಂತೆಲ್ಲಾ  ಜೀವನ ರಣಾಂಗಣವಾಗುತ್ತದೆ.
ಇದಕ್ಕೆ ಕಾರಣವೇ  ಆ ಋಣ.ಋಣಭಾರ ಹೆಚ್ಚಾದಂತೆ ಆತ್ಮರಕ್ಷಣೆ ಕಷ್ಟ. ಅಂತರದಲ್ಲಿ ಮಧ್ಯವರ್ತಿಗಳು ನಿಂತು ತಮ್ಮ  ಜೀವನದ ಜೊತೆಗೆ ಪರರ ಜೀವನವನ್ನು ಹಾಳು ಮಾಡಿದರೂ ಕೇಳೋರಿಲ್ಲ. ಮಾನವನೊಳಗೆ ಇರುವ‌ ದೇವಾಸುರರ  ಶಕ್ತಿಯನ್ನು  ಗುರುತಿಸಿ ದೈವಶಕ್ತಿಗೆ ಸರಿಯಾದ ಶಿಕ್ಷಣ ಕೊಟ್ಟರೆ  ಮೇಲ್ಮಟ್ಟದ ಅಧ್ಯಾತ್ಮ ಚಿಂತನೆ ಯಿಂದ ಸತ್ಯ ತಿಳಿಯುತ್ತದೆ. ಕೆಳಗಿನವರಿಗೆ ಸಹಕರಿಸಿದಷ್ಟೂ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆದು  ದೇವತೆಗಳನ್ನು ಆಳುವರು.
ಬ್ರಹ್ಮಜ್ಞಾನವನ್ನು ಓದಿ ತಿಳಿಯುವುದೇ  ಬೇರೆ  ಅನುಭವಿಸಿ ತಿಳಿದು ತಿಳಿಸಿ ನಡೆಸೋದೇ ಬೇರೆ. ಸ್ವತಂತ್ರ ಭಾರತದಲ್ಲಿ ಭಾರತೀಯರಿಗೇ ಸ್ವತಂತ್ರ ವಿಲ್ಲವಾದರೆ ಪರಕೀಯರ ವಶದಲ್ಲಿ  ದೇಶವಿದೆ ಎಂದರ್ಥ .ಇದಕ್ಕೆ ಕಾರಣಪ್ರಜಾ ಸಹಕಾರ. ನಿಮ್ಮ ನಿಮ್ಮ ಮನೆಯ ಮನವ ತನುವ ಜೀವದ ಹೊಣೆಗಾರಿಕೆ ನಿಮ್ಮದೇ ಜ್ಞಾನದೊಳಗಿದೆ ಎಂದರು ಮಹಾತ್ಮರು ಗುರುಗಳು.‌ಈಗ‌ಹೇಗಿದೆ ನಮ್ಮ ಜ್ಞಾನ.ಎತ್ತ ಸಾಗಿದೆ‌  ಜ್ಞಾನ,?
ಸಾಮಾನ್ಯಜ್ಞಾನ ವಿಲ್ಲದೆ ವಿಶೇಷಜ್ಞಾನ ಬೆಳೆಸಿದರೆ ಆಗೋದೆ ಹೀಗೆ.
ಭೂ ತತ್ವ ತಿಳಿಯದೆ ಆಕಾಶದೆತ್ತರ ಹಾರಿದರೆ ಆಗೋದೆ ಹೀಗೆ.
ಒಟ್ಟಿನಲ್ಲಿ ಎಲ್ಲರಲ್ಲಿಯೂ ಬ್ರಹ್ಮನಿದ್ದಾನೆ  ಬ್ರಹ್ಮಜ್ಞಾನವೂ ಅಡಗಿದೆ ಆದರೆ ಅದನ್ನು  ಎಲ್ಲಾ ಗುರುಗಳೂ ಬೆಳೆಸಲಾಗಿಲ್ಲ.
ಸ್ವಾಗತಭಾಷಣ ಕೇವಲ ಸ್ವಾರ್ಥ ಕ್ಕೆ ಸೀಮಿತವಾದರೆ ಉಪನ್ಯಾಸ ಅನರ್ಥ ವಾಗಿರುತ್ತದೆ. ಕೊನೆಯ  ವಂದನಾರ್ಪಣೆ ಕಾಟಾಚಾರವಾಗಿ  ಸಾವನ್ನು ಅಪಾರ್ಥ ಮಾಡಿಕೊಂಡು  ವಿಜೃಂಬಿಸುವ  ಅಶಾಂತಿಯೆಡೆಗೆ  ಜನರನ್ನು ಹೊರಗೆಳೆಯಲಾಗುತ್ತದೆ.  ಇದ್ದಾಗ  ಕೊಡದ ಗೌರವ ಸತ್ತ ಹೆಣಕ್ಕೆ ಕೊಟ್ಟರೆ ಆತ್ಮಕ್ಕೆ ತೃಪ್ತಿ ಸಿಗುವುದೆ? ಇನ್ನಷ್ಟು ಋಣ ಹೊತ್ತು  ಹೋಗುತ್ತದೆ ಅಷ್ಟೇ. 
ಇದನ್ನು  ಭಾರತೀಯರು  ಅರ್ಥ ಮಾಡಿಕೊಂಡರೆ ಸಾಕು. ಪರಮಾತ್ಮ  ಎಷ್ಟೋ ನಮಗೆ ಹತ್ತಿರವೇ ಕೊಟ್ಟಿದ್ದರೂ ದೂರದ ಬೆಟ್ಟ ನುಣ್ಣಗೆ ಕಾಣುವುದೆಂದು ದೂರ ಹೋಗಿ ಸಾಯುತ್ತಿರುವವರನ್ನು ತಡೆಯಬಹುದು.
ಸಾವು ನಿಶ್ಚಿತ ಹಾಗೆ ಜನನವೂ ಇದೆ. ಇದರ ನಡುವಿನ ಜೀವನದ ರಹಸ್ಯವನ್ನು ಹಣದಿಂದ ತಿಳಿಯಲಾಗದೆನ್ನುವುದು ಸರ್ವ ಕಾಲಿಕ ಸತ್ಯವಾಗಿದೆ. ಜ್ಞಾನಶಕ್ತಿಯನ್ನು ಯಾರೂ ಕದಿಯಲಾಗದು.ಅದನ್ನು ಹಣದಿಂದ ಖರೀದಿಸಿದರೂ ಸದ್ಬಳಕೆ ಮಾಡಿಕೊಳ್ಳದಿದ್ದರೆ ಅಜ್ಞಾನವೇ ಬೆಳೆಯೋದು.
ಹೀಗಿರುವಾಗ  ಸಾಲ ಮಾಡಿ ಮಕ್ಕಳ ತಲೆಮೇಲೆ ಏರಿಸುವ ಶಿಕ್ಷಣದ ವಿಷಯದಲ್ಲಿ ನಮ್ಮ ಜ್ಞಾನವಿದೆಯೆ? ಇದರ ಬಗ್ಗೆ ಪೋಷಕರೆ  ಒಳಗಿದ್ದು ಆತ್ಮಾವಲೋಕನ ಮಾಡಿಕೊಳ್ಳಲು ಒಳಗಿನ ಗುರುಬಲ ಅಗತ್ಯವಿದೆ. ಒಳಗೆ ಗುರುವಿಲ್ಲವಾದರೆ ಹೊರಗಿನ ಗುರು ಏನೂ ಮಾಡಲಾಗದು.

Saturday, May 2, 2026

ಅನ್ಯಮತದವರ ಜನಸಂಖ್ಯೆ ಬೆಳೆಯಲು ಕಾರಣ ಸಾಲ

ಯಾಕೆ‌ ಅನ್ಯಧರ್ಮದವರ ಸಂಖ್ಯೆ‌ದೇಶದಲ್ಲಿ ಬೆಳೆಯುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಒಂದೇ  ಸಾಲ.‌ವಿದೇಶಗಳಲ್ಲಿ ಮುಸ್ಲಿಂ  ಕ್ರಿಸ್ಟಿಯನ್  ಹಿಂದೂಗಳಿದ್ದಂತೆ ನಮ್ಮಲ್ಲೂ ಇದ್ದಾರೆ.ಆದರೆ ಇದರ ಮೂಲ ಹಿಂದೂಗಳೇ ಆಗಿದ್ದರೂ ಅವರ ಶಿಕ್ಷಣ ಮಾತ್ರ ಕೊಡದೆ ಆಳಿದವರು ಅನ್ಯರಾದರೂ ಅವರಿಗೆ ಹೆಚ್ಚಿನ ಸಹಕಾರ ಕೊಟ್ಟು ಬೆಳೆಸಿದವರು ನಮ್ಮವರೆ.
ಇದೀಗ ಜನಸಂಖ್ಯೆ ಮಿತಿಮೀರಿದ್ದರೂ ಜ್ಞಾನದಿಂದ ಹಿಂದುಳಿದವರ ಸಂಖ್ಯೆ ಇನ್ನಷ್ಟು ಬೆಳೆದಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ‌ಜಾತ್ರೆ, ಯಾರದ್ದೋ ಶಿಕ್ಷಣ, ಧರ್ಮ ಸಂಸ್ಕೃತಿ,ವ್ಯವಹಾರ,ಬಂಡವಾಳ ತಂದು ನಮ್ಮದು ಎಂದರೆ  ಸರಿಯಾಗುವುದೆ? ಸಾಲವಾಗುತ್ತದೆ.
ಸ್ವಾವಲಂಬನೆ ಸ್ವರ್ಗ ಪರಾವಲಂಬನೆ ನರಕ ಎಂದು‌ಅನುಭವಿಗಳೇ ತಿಳಿಸಿದ್ದರೂ ಈಗಲೂ ನಾವು ವೈಜ್ಞಾನಿಕ ಪ್ರಗತಿಯತ್ತ ಪರಾವಲಂಬನೆಯ ಜೀವನ ನಡೆಸುತ್ತಾ ಒಳಗಿದ್ದ  ಮೂಲ ಜ್ಞಾನಶಕ್ತಿ ಧರ್ಮ ಕರ್ಮಕ್ಕೆ ವಿರುದ್ದ ನಡೆದರೆ  ಜೀವ ಅನ್ಯರ ವಶವಾಗೋದು ಸಹಜ.
ಇನ್ನು ಕುಟುಂಬ ವ್ಯವಸ್ಥೆ ಕಣ್ಣಿಗೆ ಕಾಣುವಂತೆ ಬೇರೆ ಬೇರೆ ಆಗುತ್ತಿದೆ. ಒಗ್ಗಟ್ಟಿನ ಮಂತ್ರ ಪ್ರಚಾರ‌ಮಾಡೋರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಅಂತರದ ರಾಜಕೀಯ  ಇದ್ದಾಗ ಸಾಮಾನ್ಯರ‌ಪಾಡೇನು?
ಆದರೂ ಜನರ ಮುಗ್ದತೆಯನ್ನು  ಕೆಲವರು ಸದ್ಬಳಕೆ ಮಾಡಿಕೊಂಡು  ದೈವೀಕತೆಯತ್ತ ಎಳೆದರೆ ಹಲವರಿಗೆ ದುರ್ಭಳಕೆ ಮಾಡಿಕೊಂಡರೆ ಜನಬಲ ಹಣಬಲ ಅಧಿಕಾರ‌ಬಲ ಎಲ್ಲಾ ಸಿಗುತ್ತಿದೆ. ಇದನ್ನು ಆತ್ಮನಿರ್ಭರ ಎಂದರೆ ತಪ್ಪು. ಒಟ್ಟಿನಲ್ಲಿ ಜನನ‌ಮರಣಗಳ ನಡುವಿನ ‌ಜೀವನದಲ್ಲಿ  ಧರ್ಮ ಯಾವುದು ಸತ್ಯ ಯಾವುದು ದೇವರು ಯಾರು ಅಸುರರು ಯಾರೆಂಬ ಜ್ಞಾನ ನೀಡುವುದು ನಿಜವಾದ ಗುರುಹಿರಿಯರ ಧರ್ಮ ವಾಗಿತ್ತು.
ಇರುವ‌ಮೂರು ಮತಗಳಲ್ಲಿಯ ಅಂತರದಲ್ಲಿ ಯಾವ‌ಮತದ ಜನಸಂಖ್ಯೆ ಹೆಚ್ಚಿದೆ  ಎನ್ನುವ ಬದಲಾಗಿ ಯಾವ ಮತದಿಂದ  ಲೋಕಕಲ್ಯಾಣವಾಗುತ್ತದೆ ಆತ್ಮಜ್ಞಾನ ಸಿಗುತ್ತದೆ ಜೀವನ್ಮುಕ್ತಿ ಪಡೆಯಬಹುದೆನ್ನುವ‌ ಬಗ್ಗೆ  ಜನರಲ್ಲಿ ಚಿಂತನೆ ನಡೆಸುವಷ್ಟು ಸಮಯವಿಲ್ಲದೆ ಮಹಿಳೆ ಮಕ್ಕಳೆನ್ನದೆ ಮನೆಯಿಂದ ಹೊರ ಬಂದು ಹಣ ಮಾಡುವಲ್ಲಿ  ಆಸಕ್ತಿ ಹೊಂದಿರುವುದೆ ಅಜ್ಞಾನ.
ಇಲ್ಲಿ ಹಣವಿಲ್ಲದೆ  ಜೀವನವಿಲ್ಲ.ಆದರೆ ಅದಕ್ಕಿಂತ ಮುಖ್ಯವಾದ ಸುಜ್ಞಾನವಿಲ್ಲದ ಜೀವನ ಜೀವನವೇ ಅಲ್ಲ.
ಎಲ್ಲದರಲ್ಲೂ ಅಲ್ಲನಿರೋದು ಎಂದರೆ ನಕಾರಾತ್ಮಕ ಶಕ್ತಿ ನಮ್ಮಲ್ಲಿದೆ ಎಂದರ್ಥ. ಮುಸ್ಲಿಂ ಬಾಂಧವರ  ಒಗ್ಗಟ್ಟು ಅವರ ಮತಕ್ಕೆ  ಇದ್ದಾಗ ಅಲ್ಲಿ ಅವರ ಪ್ರಗತಿ .ಹಾಗೆ ಕ್ರೈಸ್ತ ಮತವೂ ಒಂದೇ ದೇವರನ್ನು ಹಿಡಿದು  ಪ್ರಾರ್ಥನೆ ಮಾಡುತ್ತದೆ. ಆದರೆ ಹಿಂದೂಗಳು ಅಸಂಖ್ಯಾತ ದೇವತೆಗಳನ್ನು  ನೋಡುವ ದೃಷ್ಟಿ ಬದಲಾದರೆ ನಮ್ಮ ಹತ್ತಿರವೇ ದೇವರಿದ್ದರೂ ನಮಗೆ ಕಾಣದೆ ಹೊರಗೆ ನಡೆದಿರೋದರ ಸತ್ಯ ತಿಳಿಯಬಹುದಷ್ಟೆ.
ಮನೆಮನೆಯಲ್ಲಿ ದೇವರಿದ್ದರೂ ಹೊರಗೆ ಹುಡುಕೋದು.
ಮನಸ್ಸಿನಲ್ಲಿ  ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದರೂ ತಪ್ಪು ದಾರಿಯಲ್ಲಿ ನಡೆಯೋದು
ಮಕ್ಕಳ  ಜ್ಞಾನ ಗುರುತಿಸದೆ  ಅನ್ಯಭಾಷೆಯ ಶಿಕ್ಷಣ ಕೊಟ್ಟು ಬೆಳೆಸೋದು.
ಪರಮಾತ್ಮ ಎಲ್ಲರಲ್ಲಿಯೂ ಇದ್ದಾನೆ ಎಂದು ಭಾಷಣ ಪ್ರವಚನ ಮಾಡುವವರೆ  ಸತ್ಯ ಧರ್ಮ ವರಿಯದೆ ನಡೆಯೋದು.
ಭಾರತ ವಿಶ್ವ ಗುರು ಎಂದು  ಸಾರುವವರೆ ವಿದೇಶಿ ವ್ಯಾಮೋಹಕ್ಕೆ ಒಳಗಾಗಿರೋದು.
ಅನ್ಯರ ಹಣ ಬಂಡವಾಳ ಸಾಲ‌ವ್ಯವಹಾರ ಎಲ್ಲಾ ಬೇಕು ಆದರೆ ಅವರನ್ನು ಅರ್ಥ ಮಾಡಿಕೊಳ್ಳಲು ‌ಕಷ್ಟ. ಕಾರಣ‌ ಒಳಗಿಳಿಸಿದ  ಸುಖವನ್ನು  ಬಿಟ್ಟು  ದು:ಖ ಅನುಭವಿಸೋದು ಕಷ್ಟ.
ಆದರೆ ಜೀವನದಲ್ಲಿ ಸುಖಕ್ಕೆ ತಕ್ಕಂತೆ ದು:ಖವೂ ಬರುವುದನ್ನು ಯಾರೂ ತಡೆಯಲಾಗದು. ‌ತಡೆದರೂ ಅದು ತಾತ್ಕಾಲಿಕ ತಂತ್ರವಾಗಿರಬಹುದು.ಹೀಗಾಗಿ‌ನಮ್ಮ‌ಮಹಾತ್ಮರು ಸ್ವತಂತ್ರ ಬುದ್ದಿ ಜ್ಞಾನದಿಂದ ಪರಮ ಸತ್ಯ ಧರ್ಮ ದೆಡೆಗೆ‌ ಕಷ್ಟಪಟ್ಟು  ನಡೆದರೆಂದರೆ ಹಿಂದೂ ಧರ್ಮ ಉಳಿದಿರೋದು  ನಮ್ಮ ಮಹಾತ್ಮರಿಂದಷ್ಟೆ. ಅವರ ಹೆಸರಿನಲ್ಲಿ ವ್ಯವಹಾರ ನಡೆಸಿದರೆ ಹಣದ ಲಾಭವಾದರೂ‌ಹಣವನ್ನು ಸದ್ಬಳಕೆ ಮಾಡುವ  ಸುಜ್ಞಾನವಿಲ್ಲವಾದರೆ ಅನ್ಯರ ವಶದಲ್ಲಿಯೇ ಜೀವ‌ಇರುತ್ತದೆ.ಹೀಗಾಗಿ ಅನ್ಯಧರ್ಮದಲ್ಲಿ ಮಕ್ಕಳು ಜನಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರೋದು.ಕಾರಣ ಸಾಲ ಅಥವಾ ಋಣ ತೀರಿಸಲು ಅದೇ  ಮತದಲ್ಲಿ ಜನ್ಮ ಪಡೆಯಲೇಬೇಕಲ್ಲವೆ?
ಇನ್ನು ಹಿಂದೂಗಳಲ್ಲಿ  ಸಂಸಾರಕ್ಕೆ ಬರದೆ ಮದುವೆ ಬೇಡ ಮದುವೆ ಆದವರಿಗೆ  ಮಕ್ಕಳು ಬೇಡ  ,ಮಕ್ಕಳಾದವರಿಗೆ  ಶಿಕ್ಷಣ ಕೊಡೋದೆ ದೊಡ್ಡ ಹೊರೆ.ಉಚಿತ ಶಿಕ್ಷಣ ಇದ್ದರೂ ಸರಿಯಾದ  ಶಿಕ್ಷಕರಿರೋದಿಲ್ಲ  ವ್ಯವಸ್ಥೆ ಇರೋದಿಲ್ಲ.
ಖಾಸಗಿ ಶಾಲೆಗಳಂತೂ ಅನ್ಯರ ರಾಜಕೀಯದಲ್ಲಿ  ಮಿತಿಮೀರಿ ಬೆಳೆಯುತ್ತಿದೆ. ಹಿಂದೂ ಮಕ್ಕಳನ್ನು ಹೊರಗೆಳೆಯುವ ಪ್ರಯತ್ನವಾಗುತ್ತಿದ್ದರೂ ಪೋಷಕರು ಮಕ್ಕಳು  ಹೆಸರು ಮಾಡುವರೆನ್ನುವುದು ಕಾಣುತ್ತಿದೆ.ಇದು  ಮುಂದೆ  ಹೋದಂತೆಲ್ಲ  ದೂರಹೋದವರು ಹಿಂದಿರುಗಿ ಬರೋದಿಲ್ಲ. ಹೊರಗೆ ಹೋದವರಿಗೂ ಆಸ್ತಿ ಮಾಡಿಟ್ಟು ಹತ್ತಿರವಿದ್ದವರನ್ನು ಆಳುವವರು ಹೆಚ್ಚಾಗಿದ್ದಾರೆಂದರೆ  ಅಜ್ಞಾನ  ಮಿತಿಮೀರಿದೆ ಎಂದರ್ಥ.
ಇದನ್ನು ಯಾರು ತಡೆಯಬಹುದು? ಮಾಡಿದ ಕರ್ಮಕ್ಕೆ ತಕ್ಕಂತೆ ಫಲ ಸಿಗೋವಾಗ  ಹೊರಗಿನ  ಸರ್ಕಾರ ,ಸಮಾಜ ದೇಶ ಶಿಕ್ಷಣ. ಕಾರಣವೆಂದರೆ ಸರಿಯಾಗದು.ಈಗಲೂ ನಮ್ಮ ‌ಹತ್ತಿರವಿರುವ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿ ಇದೆ.ಅವರಿಗೆ ಕೊಡುವ ಸಂಸ್ಕಾರದ ಮೇಲಿದೆ. ಸಂಸ್ಕೃತಿ ,ಸಂಪ್ರದಾಯ, ಶಾಸ್ತ್ರ ಪುರಾಣ ಇತಿಹಾಸದ ಹಿಂದಿನ. ಆತ್ಮಶುದ್ದಿ  ನಮ್ಮೊಳಗೇ ಆದರೆ  ಸತ್ಯದ ಜೊತೆಗೆ ಧರ್ಮ ರಕ್ಷಣೆ ಸಾಧ್ಯ.
ಯಾವಾಗಿದು ಅಸತ್ಯ ಅಧರ್ಮಕ್ಕೆ ತಲೆಬಾಗಿ ವ್ಯವಹಾರಕ್ಕೆ ಇಳಿಯಿತೋ ಆಗಲೇ  ಅನ್ಯರ ವಶದಲ್ಲಿ ಜೀವ ಸೇರುತ್ತಿದೆ.
ಮೇಲಿರುವ‌ ಪರಮಾತ್ಮನಿಗೆ  ಯಾವುದೇ‌ಮತ ಜಾತಿ ಧರ್ಮ ಅಂಟೋದಿಲ್ಲ. ಯಾವ ಜಾತಿ‌ಮತ ಧರ್ಮದಡಿ ಜನನ ಆಗಿದೆಯೋ ಅದರ ಋಣ ಇದೆಯಂದು ಅರ್ಥ ಮಾಡಿಕೊಂಡು ಅದರ ಮೂಲ ಶಿಕ್ಷಣದೆಡೆಗೆ ಮಕ್ಕಳನ್ನು ‌ಸಾಕಿ ಸಲಹಿದರೆ  ಹಿಂದಿನವರ ಜ್ಞಾನದೆಡೆಗೆ ಒಗ್ಗಟ್ಟಿನಿಂದ ಸಾಗಬಹುದು. ಹೀಗಾಗಿ ನಾವೆಷ್ಟು ಹೊರಗೆ  ಹೋರಾಟ ನಡೆಸಿ  ರಾಜಕೀಯದಿಂದ ಸರಿಪಡಿಸಬಹುದೆಂದರೆ ಇದು ಭ್ರಮೆಯಷ್ಟೆ.
ವೈಚಾರಿಕತೆಯ ಹಿಂದಿನ ವಿಜ್ಞಾನದಲ್ಲಿ ಆತ್ಮಶುದ್ದಿ ಆಗಬೇಕಿತ್ತು. ಆಗಿಲ್ಲ ಎಂದರೆ ಅದರಲ್ಲಿ  ತಂತ್ರವೇ ಹೆಚ್ಚಾಗಿದೆ ಎಂದರ್ಥ. ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ತಮ್ಮ ಸ್ವಾರ್ಥ ಸುಖಕ್ಕಾಗಿ ಬೆಳೆಸಿದ ಸ್ವೇಚ್ಚಾಚಾರದಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಇದು ಅನ್ಯರನ್ನೂ  ಸೇರಿಸಿಕೊಂಡು ಹೊರಗೆ ನಡೆದಾಗಲೇ  ಮಾನವ ಒಳಗಿರುವ ಮಹಾತ್ಮರು ಕಾಣದೆ ಹಣ ಮಾತ್ರ ಕಾಣುತ್ತದೆ. ಹಣದಿಂದ ಹೆಣವನ್ನು ಖರೀದಿಸುವಷ್ಟು‌ವಿಜ್ಞಾನ  ಕಲಿಕೆಯಲ್ಲಿದೆ. ಆದರೆ ಆತ್ಮನನ್ನು ಖರೀದಿಸಲಾಗದು ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಎಷ್ಟು ವರ್ಷ ಬದುಕಿದೆ ಎನ್ನುವ ಬದಲು ಎಷ್ಟು ಆತ್ಮಸಂಶೋಧನೆಯು ಬದುಕಿನಲ್ಲಾಗಿದೆ ಎನ್ನುವುದು ಮುಖ್ಯ.
ಏನೇ ಇರಲಿ  ನನ್ನ ಅನುಭವದ‌ಪ್ರಕಾರ ಇಂದು ಬೇಲಿಯೇ ಸರಿಯಿಲ್ಲದ ಹೊಲದಲ್ಲಿ ಮೇಯುವುದೇ ಸ್ವಾತಂತ್ರ್ಯ ಎಂದು ತಿಳಿದ ಮಾನವರು ಅಸುರರ ವಶದಲ್ಲಿ ಚೆನ್ನಾಗಿ ತಿಂದು ಕೊಬ್ಬಿರೋ ಕುರಿಗಳಾಗಿ ಕೊನೆಯಲ್ಲಿ ಅಸುರರ ಆಹಾರ ಆಗುತ್ತಿದ್ದರೂ  ಹೇಳಿದರೆ ಅರ್ಥ ವಾಗುವ ಜ್ಞಾನವಿಲ್ಲದೆ  ಅನ್ಯರ  ಸಂಖ್ಯೆ ಮಿತಿಮೀರಿದೆ.
ಮನೆಯಲ್ಲಿ ಎಷ್ಟು ಮಕ್ಕಳಿದ್ದಾರೆ ಎನ್ನುವ ಬದಲು ಮಕ್ಕಳಲ್ಲಿ ಯಾರ ಜ್ಞಾನವಿದೆ ಎಂದು ಗುರುತಿಸುವುದು ಪೋಷಕರ ಧರ್ಮ.
ನಮಗೇ ಅಜ್ಞಾನ ವಿರೋವಾಗ‌  ಮಕ್ಕಳ ಸುಜ್ಞಾನ ಕಾಣದು.
ಹೀಗಾಗಿ‌ಮಕ್ಕಳನ್ನು ಆಟದ ಗೊಂಬೆಯಂತೆ ಹೊರಗೆ ಕುಣಿಸಿ ಮನರಂಜನಾ ಮಾದ್ಯಮ ಬೆಳೆದಿದೆ. ಇದು  ಯಾರಿಗೆ ಲಾಭ ನಷ್ಟ ಎನ್ನುವ ಸತ್ಯ  ಅರಿವಿಗೆ ಬರದಿದ್ದರೆ ಜೀವದ ಗತಿ ಅಧೋಗತಿ. ಅದರಲ್ಲೂ ಮಕ್ಕಳ ಭವಿಷ್ಯ  ಅವರ ಆತ್ಮಜ್ಞಾನದ ಮೇಲಿರುವಾಗ  ಅಂತಹ ಶಿಕ್ಷಣದಿಂದ ವಂಚಿತರಾಗಿರುವ ಅಸಂಖ್ಯಾತ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗುವುದು ಖಚಿತ.ಇಲ್ಲಿ ಮುಂದಿನ ದೇಶ ಎಂದರೆ ನಮ್ಮ ದೇಶವಲ್ಲ ಹೊರದೇಶವಾಗಬಹುದು.‌ಯಾರಿಗಾಗಿ  ಈ ಹೋರಾಟ ಹಾರಾಟ‌ ಮಾರಾಟ? 
ಪರಮಾತ್ಮನಿಗೋ? ದೇಶಕ್ಕೋ? ಧರ್ಮ ಕ್ಕೋ? ಸತ್ಯಕ್ಕೋ?
ಮಕ್ಕಳಿಗೋ?  ಯಾವುದೂ  ಇಲ್ಲ. ಪರಕೀಯರ ವಶದಲ್ಲಿದ್ದು ನಮ್ಮವರ ವಿರುದ್ದವೇ ಹೋರಾಟ ನಡೆದಿದೆ ಎಂದರೆ ಜೀವಕ್ಕೆ ತೃಪ್ತಿ ಸಿಗದು. ತೃಪ್ತಿ ಸಿಗದೆ ಜೀವನ್ಮುಕ್ತಿಯಿಲ್ಲ.ಜೀವನ್ಮುಕ್ತಿ ಇಲ್ಲದವರು ಅತೃಪ್ತ ಆತ್ಮಗಳಾಗಿ ಜನನ‌ಮರಣದ  ಬಂಧನದಿಂದ. ಬಿಡಿಸಿಕೊಳ್ಳಲಾಗದು ಎಂದರೆ  ನಾವು ಸ್ವತಂತ್ರರೆ?

ಅಂತರ ಹೆಚ್ಚಾದಷ್ಟೂ  ಶಾಂತಿ ಸಿಗದು. ಇದರಲ್ಲಿ ಮತಾಂತರ ಜಾತ್ಯಾಂತರ, ಧರ್ಮಾಂತರ, ಪಕ್ಷಾಂತರ  ಕೊನೆಗೆ ಉಳಿಯೋದು ದೇಶಾಂತರ. ಈ ಅವಾಂತರಕ್ಕೆ ಅಜ್ಞಾನ ಕಾರಣ.ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.ಇದರಲ್ಲಿ ಅಸತ್ಯ ಅಧರ್ಮ ಅನ್ಯಾಯ ವೆಲ್ಲವೂ ಹಣದಿಂದ ಬೆಳೆಯುತ್ತಿರುತ್ತದೆ. ಅದರ ಹಿಂದೆ ಋಣವೂ ಸೇರಿಕೊಂಡು  ಸಮಸ್ಯೆ ಹೆಚ್ಚುತ್ತಿರುತ್ತದೆ.
ಸಮಸ್ಯೆಗೆ ಪರಿಹಾರ ಒಳಗಿನ ಜ್ಞಾನದಿಂದ ಆದರೆ ಉತ್ತಮ.ಯಾವಾಗಿದು ಹೊರಗೆ ಹರಡುವುದೋ ಇನ್ನಷ್ಟು ಬೆಳೆಯುತ್ತದೆ. ಇದನ್ನು ಯಾರೂ ತಡೆಯಲಾಗದು. ಒಟ್ಟಿನಲ್ಲಿ ಸಮಸ್ಯೆ ಅಜ್ಞಾನದಿಂದ ಬೆಳೆದರೆ ಜ್ಞಾನದ ಮೂಲಕ ಪರಿಹಾರ ಕೊಡಬೇಕು.ಅಜ್ಞಾನದಿಂದ ಪಡೆದಷ್ಟು ಇನ್ನಷ್ಟು ಹೆಚ್ಚುವುದು.
ಇಷ್ಟೇ ಜೀವನ ಸತ್ಯ. ಜೀವ ಎಲ್ಲರಲ್ಲಿಯೂ ಇದೆ.ಆದರೆ ಋಣ ಮತ್ತು ಕರ್ಮದ ಲೆಕ್ಕಾಚಾರ ಬೇರೆಯಾಗಿರುತ್ತದೆ.‌ಇದನ್ನು ಹಿಂದಿನವರು ಧರ್ಮ ಕರ್ಮ ಸತ್ಯವನರಿತು ತತ್ವದಿಂದ  ಬಗೆಹರಿಸಿದ್ದರೆ ಈಗಿನವರು ತಂತ್ರದಿಂದ ಬೆಳೆಸಿರುವರಷ್ಟೆ.
ಸತ್ಯ ಸತ್ವ ತತ್ವವಿಲ್ಲದ  ಜೀವನದಲ್ಲಿ  ಮಂತ್ರ ತಂತ್ರ ಯಂತ್ರಗಳಿಗೆ ಸ್ವಾತಂತ್ರ್ಯ. ಇವುಗಳು  ಮಧ್ಯವರ್ತಿಗಳಷ್ಟೆ.
ಇದು ನಮ್ಮನ್ನು ಸ್ವತಂತ್ರ ಬುದ್ದಿ ಜ್ಞಾನದೆಡೆಗೆ ನಡೆಸಿತೋ ಅಥವಾ ಅತಂತ್ರಸ್ಥಿತಿಗೆ ತಲುಪಿಸಿತೋ  ಪ್ರಶ್ನೆಗೆ ಉತ್ತರ ಆತ್ಮಾವಲೋಕನ ದಲ್ಲಿರುತ್ತದೆ. ಆತ್ಮಕ್ಕೆ ಸಾವಿಲ್ಲ.ಯಾರ ಋಣದಲ್ಲಿರುವುದೋ ಅಲ್ಲಿಯೇ ಮತ್ತೆ ಜೀವಾತ್ಮನ‌ಪಯಣ ನಡೆಯುತ್ತಲೇ ಇರುವುದೆಂದು ಮಹಾತ್ಮರು ತಿಳಿಸಿರುವರು.
ಈಗ ನಾವು ಯಾರ ಋಣದಲ್ಲಿದ್ದೇವೆ? ಯಾರ ಜ್ಞಾನದ ಶಿಕ್ಷಣ ಪಡೆಯುತ್ತಿದ್ದೇವೆ? ಯಾರ ಹಿಂದೆ ನಡೆದಿರೋದು? ದೇವರನ್ನು ಒಳಗೆ ಕಂಡೆವೋ ಹೊರಗೋ? ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ ಎಂದರೆ ಸತ್ಯವೇ ದೇವರಾಗುವರು. ಒಳಗಿನ ಸತ್ಯ ಬಿಟ್ಟು ಹೊರಗೆ ನಡೆದಷ್ಟೂ ಅಂತರದ ಅವಾಂತರ. ಇಲ್ಲಿ ಯಾವ‌ ಮತವೂ ಸ್ವತಂತ್ರ ವಾಗಿಲ್ಲ.ಹೀಗಿರುವಾಗ  ಯಾರನ್ನೂ ನಂಬಿ ಕೆಟ್ಟವರೆ ಎಲ್ಲಾ. ಆಗೋದೆಲ್ಲಾ ಒಳ್ಳೆಯದೆ  ಆದರೂ  ಅದರಿಂದ ಕಲಿಯುವುದೆ ಕಲಿಯುಗ. ಹಿಂದಿರುಗಿ ಮೂಲದೆಡೆಗೆ ಬಂದವರಿಗೆ ನೆಮ್ಮದಿ ಶಾಂತಿ ಸಿಕ್ಕಿದೆ ಎಂದರೆ ದಾರಿ ಇದ್ದವರು ಹಿಂದಿರುಗಬಹುದು. 

ವಿಷಯದಲ್ಲಿನ‌ ವಿಷ ಹರಡದೆ ಅಮೃತ ತತ್ವವರಿತರೆ  ಜ್ಞಾನ.
ಅತಿಥಿಗಳು ದೇವರಾಗಬಹುದು ದೆವ್ವಗಳಾಗಿರಲೂ ಬಹುದು.
ದೇವತೆಗಳಿಗೆ ತೃಪ್ತಿ  ಸಿಗದಿದ್ದರೆ ದೆವ್ವಗಳೇ ಆಗೋದು.ಹಾಗಾದರೆ ದೇವರಿರೋದೆಲ್ಲಿ ತತ್ವಜ್ಞಾನದಲ್ಲಿ  ತಂತ್ರ ಕುತಂತ್ರದಿಂದ ದೆವ್ವಗಳಾಗಿ ಆತ್ಮ ಅಲೆಯುತ್ತವೆ.
ಎಷ್ಟೋ ಜನ್ಮಗಳ ಪಾಪ ಪುಣ್ಯಗಳ ಲೆಕ್ಕಾಚಾರ ಒಂದೇ ಜನ್ಮದಲ್ಲಿ ತೀರಿಸಲಾಗದು. ಆದರೆ ಸತ್ಕರ್ಮ ಸ್ವಧರ್ಮ ಸುಜ್ಞಾನ ಪ್ರತಿ ಜನ್ಮ ದಲ್ಲಿರುವುದು ಅದನ್ನರಿತು ನಡೆಸೋ ಶಿಕ್ಷಣ  ಕೊಡುವುದಷ್ಟೆ ಮಾನವ ಧರ್ಮ. ಏನಂತೀರ?
ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರ ಎಂದಿರುವ ದಾಸಶ್ರೇಷ್ಟರು  ಜ್ಞಾನದಿಂದ ಪರಮಾತ್ಮನ ಕಡೆಗೆ ನಡೆದ ಮಹಾತ್ಮರಾಗಿದ್ದರು.  
ಉತ್ತಿಷ್ಟತಾ ಜಾಗ್ರತ ಮನುಜ..ಗುರಿಯನು ಸೇರುವವರೆಗೂ ನೀ ಅರೆಕ್ಷಣ ನಿಲ್ಲದೆ‌ಮುನ್ನಡೆ ಸಖನೆ". ಸ್ವಾಮಿ ವಿವೇಕಾನಂದ ರ ರಾಜಯೋಗದ ವಿಷಯ ರಾಜಕೀಯವಾಗಿಸಿ ಮಹಿಳೆ ಮಕ್ಕಳನ್ನು  ಹೊರಗೆಳೆದರೆ ಆತ್ಮದುರ್ಭಲ ವಾಗುತ್ತದೆ.
ಸಂನ್ಯಾಸವೆಂದರೆ  ಕಾವಿತೊಟ್ಟು ಸಂಸಾರ ಬಿಟ್ಟಿರೋದಲ್ಲ.
ಸಂಸಾರದ  ಸಮಸ್ಯೆಗೆ ಆಧ್ಯಾತ್ಮಿಕ ಪರಿಹಾರ ಕೊಡುವ ಸತ್ಯಜ್ಞಾನವಿರಬೇಕು. ಸತ್ಯ ಕ್ಕೆ ಸಾವಿಲ್ಲ ಆದರೆ  ಈಗ ಸತ್ತಿರೋದು ಯಾವುದು? ಹಿಂದುಳಿದಿದೆ ಎಂದರೆ ಸತ್ತಿದೆ ಎಂದಲ್ಲ.