ಆತ್ಮನಿರ್ಭರ ಸಾಧ್ಯವೆ?
ಸೂಕ್ಮವಾಗಿ ಗಮನಿಸಿದರೆ ಇಂದಿನ ರಾಜಕೀಯ ವ್ಯವಸ್ಥೆ ಹಿಂದೂ ಮುಸ್ಲಿಂ ನಡುವೆ ಅಂತರ ಬೆಳೆಸುವ ಮಧ್ಯವರ್ತಿಗಳ ಒಪ್ಪಂದ ದೆಡೆಗೆ ನಡೆಯುತ್ತಿದ್ದರೂ ಇದನ್ನು ಪ್ರಗತಿ ಎಂದು ಸಾಲದೆಡೆಗೆ ಹೊರಟಿರೋದು ದುರಂತವೆಂದರೆ ಮಾನವರಿಗೆ ಅರ್ಥ ಆಗಬಹುದೆ?
ದೇವರು ದೇಶ ಧರ್ಮ ಭಾಷೆಗಳ ನಡುವೆ ಅಂತರ ಬೆಳೆದಿರೋದೆ ಮೂರನೆಯವರ ಪ್ರವೇಶದಿಂದ. ಆ ಪ್ರವಾಸಿಗರಿಗೆಕೊಡುವ ಗೌರವ ಸ್ವಾಗತ ಆತಿಥ್ಯಗಳು ಅವರನ್ನು ಇನ್ನಷ್ಟು ಮಧ್ಯೆ ನಿಂತು ಅಂತರ ಬೆಳೆಸುವಂತೆ ಮಾಡುತ್ತಾ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ತಮ್ಮ ಮೂಲದವರ ಶಿಕ್ಷಣವೂ ಇಲ್ಲ ಧರ್ಮ/ಕರ್ಮ ವೂ ಇಲ್ಲ ಅವರಲ್ಲಿದ್ದ ಒಗ್ಗಟ್ಟಿನ ತತ್ವಜ್ಞಾನವೂ ಇಲ್ಲ ಆದರೆ ಅವರ ಭೂಮಿ ಆಸ್ತಿ ಹೆಸರು ಹಣ ಹಿಡಿದು ಆಳೋರಿದ್ದಾರೆ. ಆಳೋದಕ್ಕೆ ಬೇಕಾದ ಜ್ಞಾನವಿಲ್ಲದೆ ಅನ್ಯರ ಜ್ಞಾನದೆಡೆಗೆ ನಡೆದರೆ ಇಲ್ಲಿ ಸ್ವತಂತ್ರ ಜ್ಞಾನಕ್ಕೆ ಬೆಲೆಯಿರದು.ಸ್ವತಂತ್ರ ಜ್ಞಾನವಿರದೆ ಬುದ್ದಿಯೂ ಇರದು. ಬುದ್ದಿವಂತಿಕೆ ಪುಸ್ತಕದ ಬದನೆಕಾಯಿಯಾದಾಗ ತಿನ್ನೋದೆ ಜೀವನ. ತಿಂದ ಮೇಲೆ ಬರುವ ರೋಗಕ್ಕೆ ಔಷಧವೂ ಹೊರಗಿನದ್ದೆ ಆಗಿರುತ್ತದೆ. ಹೀಗೇ ಒಳಗಿನ ಶಕ್ತಿ ಮತ್ತು ಹೊರಗಿನ ಶಕ್ತಿಯ ನಡುವೆ ನಿಂತು ಸ್ವಾರ್ಥ ಅಹಂಕಾರದ ರಾಜಕೀಯ ನಡೆಸುವ ಮಧ್ಯವರ್ತಿಗಳಿಗೆ ಸಿಕ್ಕಿದ್ದೇನು? ಎಲ್ಲರಂತೆ ನಾವೂ ಮಾನವರು ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೆ ಹೋದರೆ ಜೀವನಕ್ಕೆ ಅರ್ಥ ಇರದು.
ಭೌತಶಾಸ್ತ್ರ ರಸಾಯನಶಾಸ್ತ್ರ ಜೀವಶಾಸ್ತ್ರ ಸಂಖ್ಯಾಶಾಸ್ತ್ರ ಅರ್ಥ ಶಾಸ್ತ್ರ ಕ್ಕೆ ಇಳಿದಾಗ ಆಧ್ಯಾತ್ಮಿಕ ಶಾಸ್ತ್ರ ಅರ್ಥ ವಾಗದೆ ಶಸ್ತ್ರ ಹಿಡಿಯೋರೆ ಹೆಚ್ಚಾಗುವರು. ಕ್ಷತ್ರಿಯ ಧರ್ಮ ರಾಜರ ಕಾಲಕ್ಕೆ ಇತ್ತು.ಈಗ ಕ್ಷತ್ರಿಯರು ಯಾರು? ರಾಜಕಾರಣಿಗಳು ಶತ್ರುಗಳನ್ನೇ ದೇಶದೊಳಗೆ ವ್ಯವಹಾರಕ್ಕೆ ಕರೆಸಿಕೊಂಡರೆ ದೇಶ ಕಾಯುವ ಸೈನಿಕರಿಗೆ ಸ್ವಾತಂತ್ರ್ಯ ಇರುವುದೆ?
ಒಪ್ಪಂದಗಳು ಮೊದಲು ಒಳಗಿನ ಸಂಬಂಧ ದೊಳಗಾಗುತ್ತಿತ್ತು.
ಯಾವಾಗಿದು ಹೊರಗಿನವರೊಂದಿಗೆ ಬೆಳೆಯುತ್ತಾ ಹೋಯಿತೋ ಅಂತರ ಬೆಳೆಯಿತು. ಈಗ ಹಣವಿದ್ದರಷ್ಟೆ ಸಂಬಂಧ ಕ್ಕೆ ಬೆಲೆ ಎನ್ನುವ ಸ್ಥಿತಿಗೆ ಬಂದು ಗುಣಜ್ಞಾನವನ್ನು ನೋಡುವ ದೃಷ್ಟಿ ಮಾನವನಿಗೆ ಕುಸಿದಿದೆ .ಇದರಿಂದ ಹೆಣ್ಣಿನ ಗುಣಕ್ಕೆ ಬೆಲೆಯಿಲ್ಲ ಹಣಗಳಿಸಿದರಷ್ಟೆ ಬೆಲೆ ಇದರಿಂದ ಮಹಿಳಾ ಶಕ್ತಿ ಮನೆಯಿಂದ ಹೊರಬರುತ್ತಿದೆ. ಹೊರಬಂದವರು ಒಳಗಿನ ಸತ್ಯ ತಿಳಿಯದೆ ಹೊರಗಿನವರಿಗೇ ತಲೆಬಾಗಿದಷ್ಟೂ ದುರ್ಭಳಕೆ ಹೆಚ್ಚುವುದು.
ಯುವಪೀಳಿಗೆಯಂತೂ ದಾರಿತಪ್ಪಿದ ಹಳಿಗಳಾಗುತ್ತಿದ್ದರೂ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದವರಿಗೆ ಧರ್ಮ ಪಾಠ ಕಲಿಸಲು ಸಾಧ್ಯವೆ?
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವ ಹಾಗೆ ಹಣದಿಂದ ಲಾಭವಾದರೂ ಕಷ್ಟ ನಷ್ಟ ತಪ್ಪದು. ಬುದ್ದಿ ಕಲಿತರೆ ಜ್ಞಾನ ಬರುವುದೆ? ಬುದ್ದಿವಂತರೆಲ್ಲ ಜ್ಞಾನಿಗಳಾಗೋದಿಲ್ಲ. ಬುದ್ದಿ ನಮ್ಮ ಸ್ವಂತ ಶಕ್ತಿಯಿಂದ ಕಲಿಯಬೇಕು. ಇದಕ್ಕಾಗಿ ಸ್ವಂತಿಕೆ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ ಎಲ್ಲಿ ಅಮ್ಮ ಎನ್ನುವವರೆ ಬೆಳೆಯೋದು.ಕಾಲುಬುಡವಿರುವ ಭೂ ತಾಯಿ, ಹೆತ್ತ ತಾಯಿ, ಭಾರತಾಂಬೆ, ಕನ್ನಡಮ್ಮನನ್ನು ಕಾಣಲು ಮಧ್ಯವರ್ತಿಗಳ ಅಗತ್ಯವಿದೆಯೆ?
ಇದರಲ್ಲಿ ಅಡಗಿರುವ ಆಧ್ಯಾತ್ಮಿಕ ಸತ್ಯ ಭೌತಿಕ ಸತ್ಯದ ನಡುವಿರುವ ಸಾಮಾನ್ಯ ಸತ್ಯ ಅರ್ಥ ಆದರೆ ನಮಗೆ ನಾವೇ ಮೋಸಹೋಗಿರುವ ಸತ್ಯವೂ ಕಾಣಬಹುದು.ರಾಜಕೀಯದೃಷ್ಟಿ ಇದ್ದವರಿಗೆ ಅರ್ಥ ಆಗೋದಿಲ್ಲ.
ಹೊರಗೆ ತಳುಕುಬಳುಕು ಒಳಗೆ ಹುಳುಕಿರುವಾಗ ಅಳುಕು ಇದ್ದೇ ಇರುತ್ತದೆ. ಭಯ ಭಕ್ತಿ ಎನ್ನುವ ಯೋಗಶಕ್ತಿ ಇಲ್ಲದಿದ್ದರೆ ಹೀಗೇ ಆಗುತ್ತದೆ. ಎಷ್ಟು ಹೊರಗಿನವರೊಂದಿಗೆ ಸಂಬಂಧ ಜೋಡಿಸಿದರೂ ಒಳಗಿನವರ ಸಂಬಂಧ ಹದಗೆಡುತ್ತಿದ್ದರೆ ಉಪಯೋಗವಾಗದು. ಅದನ್ನು ಬಿಟ್ಟು ಸ್ವಂತ ಬುದ್ದಿ ಜ್ಞಾನದಿಂದ ಆತ್ಮರಕ್ಷಣೆಯೆಡೆಗೆ ಹೊರಡೋದೆ ಉತ್ತಮ.
ಸಾಲ ಮಾಡಿಕೆಟ್ಟ ಸಾಲವೇ ಶೂಲ ಎನ್ನುವುದನ್ನು ಈಗಿನ ಜನ ಅರಿಯದೆ ಸರ್ಕಾರದ ಹಿಂದೆ ನಿಂತು ಬೇಡೋದು ವಿದೇಶಿಗಳ ಹಿಂದೆ ನಡೆಯೋದು ಮೂಲ ಮರೆತು ಕುಣಿಯೋದು ಕಲಿಯೋದರಲ್ಲಿಯೇ ಕಾಲಹರಣ ಮಾಡಿದರೆ ಕಾಲರಾಯ ಬರೋದನ್ನು ತಪ್ಪಿಸಲಾಗದು. ಇದನ್ನು ತಡೆಯೋದಕ್ಕೂ ಸಾಕಷ್ಟು ಸಂಶೋಧನೆಗಳಾಗುತ್ತಿದೆ.ಪುರಾಣಕಾಲದಿಂದಲೂ ಎಷ್ಟೋ ಅಸುರರು ವರ ಬೇಡಿದ್ದು ಸಾಯಬಾರದೆಂದಾಗಿತ್ತು ಆದರೆ ಅದನ್ನು ಪಡೆಯಲಾಗದಮೇಲೆ ಬುದ್ದಿವಂತಿಕೆಯಿಂದ ಸಾವನ್ನು ಮುಂದೆ ಹಾಕುವ ಪ್ರಯೋಗವಾಯಿತೇ ಹೊರತು ಸಾವಿನ ಹಿಂದಿರುವ ಶಿವನನ್ನು ಕಾಣಲಾಗಿಲ್ಲ. ಹೀಗಿರುವಾಗ ಯಾರದ್ದೋ ಅಂಗಾಂಗಗಳನ್ನು ಜೋಡಿಸಿಕೊಂಡು ಬದುಕಿದರೂ ಒಳಗಿನ ಜ್ಞಾನ ಬೆಳೆಸದಿದ್ದರೆ ವ್ಯರ್ಥ ಜೀವನ. ಎಲ್ಲಾ ಸತ್ತವರೆ ಎನ್ನುವ ಸತ್ಯವರಿತರೂ ನಮ್ಮ ದೇಹದೊಳಗಿರುವ ಆತ್ಮಕ್ಕೆ ತೃಪ್ತಿ ಸಿಗುವ ಕರ್ಮ ನಮ್ಮಿಂದ ನಡೆಸಬೇಕಾದವರೆ ಪರಮಾತ್ಮ. ಕೆಲವರಿಗೆ ಮೊದಲೇ ಅಧಿಕಾರ ಸ್ಥಾನ ಜ್ಞಾನ ಕೊಟ್ಟರೆ ಕೆಲವರಿಗೆ ಜೀವನದ ಮಧ್ಯದಲ್ಲಿ ಸಿಗಬಹುದು ಕೆಲವರಿಗೆ ಕೊನೆಗಾಲದಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಮುಂದಿನಜನ್ಮದವರೆಗೂ ಕಾಯಬೇಕಾಗಬಹುದು.
ಒಟ್ಟಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುವ ಅವಕಾಶ ವಿದ್ದರೂ ಅ ದರ ಹಿಂದೆ ರಾಜಕೀಯ ಪಿತೂರಿಗಳದ್ದೆ ಸಾಮ್ರಾಜ್ಯ ವಾದಾಗ ಯಾರೂ ಮುಂದೆ ಹೋಗಲಾಗದು. ಇದನ್ನರಿತು ಮಧ್ಯವರ್ತಿಗಳು ಮುಂದೆ ನಡೆದರೆ ಆಧ್ಯಾತ್ಮ ಪ್ರಗತಿಯಾಗಬಹುದು. ಹಿಂದೆ ತಳ್ಳಿದರೆ ಪಾತಾಳಕ್ಕೆ ಇಳಿಯಬಹುದು. ಎಲ್ಲಿ ಹೋದರೂ ಭೂಮಿ ಸಾಕ್ಷಿಯಾಗಿರುತ್ತದೆ.
ಅದಕ್ಕೆ ತಿಳಿಸಿರೋದು ಸ್ತ್ರೀ ಋಣ ತೀರಿಸೋದು ಕಷ್ಟ ಎಂದು.
ಹಾಗಂತ ಭೂಮಿಗೆ ಬರದೆ ಋಣ ಕಳೆಯದು. ಇದು ಸೇವೆಯಾಗಿ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಿದವರಿಗೆ ಸಾಧ್ಯವಾಗಿದೆ ಎಂದರೆ ಅವರು ಹೊರಗಿನ ಸಾಲದಿಂದ ದೂರವಿದ್ದು ರಾಜಕೀಯದಿಂದ ದೂರವಿದ್ದರು ಎನ್ನುತ್ತದೆ ಆಧ್ಯಾತ್ಮ.
ಕಟ್ಟಕಡೆಯ ಪ್ರಶ್ನೆ ಆತ್ಮನಿರ್ಭರ ಸಾಧ್ಯವೆ?
ಭಗವತಿ
ಬೆಂಗಳೂರು
No comments:
Post a Comment