ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರಿಗೆ ವಿಶೇಷ ವ್ಯಕ್ತಿಗಳಿಗೆ ವಿಜ್ಞಾನಕ್ಕೆ ನೀಡುತ್ತಾ ನಮ್ಮನ್ನು ನಾವರಿತು ನಡೆಯಲಾಗದಿರುವುದೇ ಕಾರಣ.
ಇಂದಿಗೂ ಮಕ್ಕಳು ಮಹಿಳೆಯರಲ್ಲಿ ಅಡಗಿರುವ ಈ ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಸಹಕಾರ ಸ್ವಾತಂತ್ರ್ಯ ವಿಲ್ಲ. ಮನೆಯೊಳಗಿನ ಗೃಹಿಣಿಯ ಸಾತ್ವಿಕತೆಗೆ ಬೆಲೆಕೊಡದವರು ಹೊರಗಿನ ಮಹಿಳೆಯರಿಗೆ ಬೆಲೆಕೊಡುವರು ಎಂದರೆ ಆತ್ಮಕ್ಕೆ ಬೆಲೆಯಿಲ್ಲ ಹಣಕ್ಕಿದೆ.
ಇಲ್ಲಿ ಭೂಮಿಯನ್ನು ಆಳೋದಕ್ಕಾಗಿಯೇ ಹರಸಾಹಸ ಮಾಡುವ ರಾಜಕೀಯವಿದೆ.ಆದರೆ ಭೂಮಿಗೆ ಬಂದ ಉದ್ದೇಶದ ಜ್ಞಾನವಿಲ್ಲದವರ ಹಿಂದೆ ನಡೆದವರೆ ಹೆಚ್ಚಾಗಿ ಭೂ ಭಾರ ಹೆಚ್ಚಾಗಿದೆ. ಭೂ ಕಂಪನದಿಂದ ಎಷ್ಟೋ ಜೀವ ಹೋಗುತ್ತದೆಂದರೆ ಭೂಮಿಯನ್ನು ಕಾಣುವ ದೃಷ್ಟಿ ಬದಲಾಗಬೇಕಿದೆ. ಭೂಮಿ ಒಂದು ಮಾಧ್ಯಮವಷ್ಟೆ.ಇದು ಮನುಕುಲಕ್ಕೆ ಆಶ್ರಯ ಕೊಟ್ಡಿರುವಾಗ ಅದರೊಂದಿಗೆ ಸಹಕರಿಸುತ್ತಿರುವ ಎಲ್ಲಾ ದೈವೀಕ ಶಕ್ತಿಯನ್ನು ಆರಾಧಿಸುವುದು ಅಗತ್ಯವಿದೆ. ಆದರೆ ಆರಾಧನೆಯು ಸ್ವಾರ್ಥ ಅಹಂಕಾರದೆಡೆಗೆ ಸಾಗಿದರೆ ಭೂಕಂಪ,ಪ್ರಕೃತಿ ವಿಕೋಪಕ್ಕೆ ಜೀವಬಲಿಯಾಗುತ್ತದೆ. ಹೀಗಾಗಿ ಇರೋದೊಂದೆ ಭೂಮಿಯಲ್ಲಿ ಜೀವನದ ಸತ್ಯಾಸತ್ಯತೆಯನರಿಯಲು ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.
ಒಂದೆಡೆ ದೈವಶಕ್ತಿ ಇನ್ನೊಂದು ಕಡೆ ಭೋಗದೆಡೆಗೆ ಸೆಳೆಯುವ ಅಸುರ ಶಕ್ತಿಯ ನಡುವಿರುವ ಮಾನವನಿಗೆ ತನ್ನ ಶಕ್ತಿಯ ಸದ್ಬಳಕೆಯಾಗುವುದೋ ದುರ್ಭಳಕೆ ಆಗುವುದೋ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ ಇತಿಮಿತಿಯಲ್ಲಿ ಎರಡೂ ಶಕ್ತಿಯನರಿತು ಜೀವನ ನಡೆಸಬಹುದು. ಯಾವುದೇ ಇರಲಿ ಅತಿಯಾದರೆ ಗತಿಗೇಡು.ಅತಿಯಾದ ಆತ್ಮವಿಶ್ವಾಸ ವೂ ದಾರಿತಪ್ಪಿಸಬಹುದು. ಅಹಂಕಾರವೂ ಪಾತಾಳಕ್ಕಿಳಿಸಬಹುದು. ಇದನ್ನರಿತ ಮಾನವ ಪ್ರತಿ ಹೆಜ್ಜೆ ಮುಂದೆ ಇಟ್ಟಾಗ ಹಿಂದಿನ ಹೆಜ್ಜೆಯ ಗುರುತನ್ನು ನೆನಪಿಟ್ಟುಕೊಂಡರೆ ಹಿಂದಿರುಗಿ ಬರಬಹುದು. ಹಿಂದೂಗಳ ಈ ಸ್ಥಿತಿಗೆ ಅಪಾರ್ಥ ಮಾಡಿಕೊಂಡು ಮುಂದೆ ಓಡಿರೋರು ಕಾರಣ. ಓಡಿದವರೂ ಒಮ್ಮೆ ನಿಂತು ಆತ್ಮಾವಲೋಕನ ಮಾಡಿಕೊಂಡಿರಬಹುದು.ಆದರೆ ಕಾಲ ಮಿಂಚಿ ಹೋದಾಗ ಚಿಂತಿಸಿ ಫಲವಿಲ್ಲ. ಇದೀಗ ನಮಗೆ ಪುರಾಣ ಇತಿಹಾಸದ ಕಥೆ ಹೇಳುತ್ತದೆ. ಧರ್ಮ ಅಧರ್ಮದ ಹೋರಾಟದಲ್ಲಿ ಮೊದಲು ಅಧರ್ಮದ ಬಲ ಹೆಚ್ಚಾಗಿ ಕಂಡರೂ ಕೊನೆಯಲ್ಲಿ ಗೆಲುವು ಧರ್ಮದ್ದೇ ಆಗಿರುವಾಗ ಈಗಲೂ ಸಾಮಾನ್ಯರಿಗೆ ಧರ್ಮ ದ ಹಾದಿಯಲ್ಲಿ ನಡೆಯಲು ಸಹಕರಿಸಿದರೆ ಉತ್ತಮ.
ಯಾರೋ ದೊಡ್ಡದಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಾರೆಂದರೆ ಜನಬಲ ಹಣಬಲ ವೆಲ್ಲವೂ ಸಾಮಾನ್ಯರದ್ದೇ ಆಗಿರುತ್ತದೆ. ಹೆಸರು ಸ್ಥಾನ ಪದವಿ ಪಟ್ಟ ಮಾತ್ರ ಆಯೋಜಕರದ್ದು ಎಂದಾಗ ಅಪರೋಕ್ಷವಾಗಿ ಪರೋಕ್ಷವಾಗಿ ಸಹಕರಿಸಿರುವ ಜನರನ್ನು ಕಾಣುವ ದೃಷ್ಟಿ ಹೇಗಿರಬೇಕು? ಪ್ರಜಾಪ್ರಭುತ್ವದ. ಪ್ರಜಾಶಕ್ತಿಯನ್ನು ಸಾತ್ವಿಕವಾಗಿ ನೋಡೋದಕ್ಕೂ ನಮ್ಮಲ್ಲಿ ಸತ್ವಗುಣವಿರಬೇಕು. ರಾಜಕೀಯದೆಡೆಗೆ ಎಳೆದು ಮಹಿಳೆ ಮಕ್ಕಳನ್ನು ಹೊರಗೆ ತರುವುದರಿಂದ ಜನಸಂಖ್ಯೆ ಕಂಡರೂ ಭಕ್ತರ ಸಂಖ್ಯೆ ಇರದು. ಇದೇ ಕಾರ್ಯಕ್ರಮ ಮನೆಯೊಳಗೆ ಮಾಡುವ ಶಕ್ತಿ ಸಹಕಾರವಿದ್ದರೆ ಎಲ್ಲರಮನೆಯೂ ದೇವಾಲಯವೇ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ದಾಸೋಹವಿದ್ದರೆ ಆತ್ಮನಿರ್ಭರ. ಕೇವಲ ಹೊಟ್ಟೆ ತುಂಬಿಸುವ ಕ್ಷಣಿಕ ಸುಖದ ಅನ್ನದಾಸೋಹ ಎಲ್ಲಾ ಕ್ಷೇತ್ರ ಮಾಡುತ್ತದೆ. ಆದರೆ ಜ್ಞಾನದಾಸೋಹಕ್ಕೆ ಸಾಮಾನ್ಯ ಜ್ಞಾನ ಅಗತ್ಯವಿದೆ.
ಆಗಿಹೋಗಿದ್ದನ್ನು ಕೆದಕಿ ಗಾಯ ಮಾಡಿ ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ನಮ್ಮ ಸಹಕಾರ ಎಷ್ಟಿತ್ತು ಯಾಕಿತ್ತು ಎಂಬ ಪ್ರಶ್ನೆ ಮಾಡಿಕೊಳ್ಳಲು ನಮಗೆ ಸಮಯವಿಲ್ಲ ಎಂದಾಗಲೇ ಪರರು ನಮ್ಮನ್ನು ಆಳೋದು.
ಇಲ್ಲಿ ಪರಕೀಯರಿಗೆ ಕೊಡುವ ಗೌರವ ಸ ಹಕಾರ ನಮ್ಮವರಿಗಿಲ್ಲ. ಎಂದರೆ ಹಣದಿಂದ ಪರರು ಕಾಣುವರು.ನಮ್ಮವರ ಗುಣಜ್ಞಾನ ಕಾಣದೆ ಆಳುವವರು ನಮ್ಮವರೆನಿಸಿಕೊಂಡವರೆ. ಇದರಿಂದಾಗಿ ಮೂಲವೇ ಅರ್ಥ ಆಗದೆ ರೆಂಬೆಕೊಂಬೆಗಳನ್ನು ಹಿಡಿದು ಜೋತಾಡಿದರೆ ಒಮ್ಮೆ ಕೆಳಗೆ ಬಿದ್ದು ಹೋಗೋದು ಸಾಮಾನ್ಯಜ್ಞಾನ.ಇರೋವಾಗಲೇ ಮೂಲವನರಿತರೆ ವಾಸ್ತವದಲ್ಲಿ ಎಷ್ಟು ಬೇಕೋ ಅಷ್ಟು ನಮ್ಮಲ್ಲಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇದೆ. ಆದರೂ ಅದನ್ನು ಬಿಟ್ಟು ಹೊರಬಂದರೆ ಅಧೋಗತಿ.ಎಲ್ಲಾ ಋಣದ ಲೆಕ್ಕಾಚಾರ
ಋಣ ನಮ್ಮವರದ್ದೋ ಅನ್ಯರದ್ದೋ? ಶಿಕ್ಷಣವೇ ಅನ್ಯರದ್ದಾದರೆ ನಮ್ಮ ಜ್ಞಾನ ಬೆಳೆಯುವುದೆ?
No comments:
Post a Comment