ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, January 22, 2026

ಭಯದ ನಿವಾರಣೆ ಸಾಧ್ಯವೆ?

ಭಯ ಭಕ್ತಿ ಇರಬೇಕು .ಆದರೆ ಯಾವುದಕ್ಕೆ ಯಾರಲ್ಲಿ ಎನ್ನುವ ಅರಿವಿರಬೇಕು. ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ  ಎಲ್ಲರಲ್ಲಿಯೂ ತಿಳುವಳಿಕೆಯಿದೆ. ಕೆಲವರಿಗೆ ಹೊರಜಗತ್ತಿನ ಅರಿವು ಹೆಚ್ಚಾದರೆ ಕೆಲವರಿಗೆ ಒಳಜಗತ್ತಿನ ಅರಿವಿರುತ್ತದೆ. ಇವೆರಡರ ನಡುವೆ ನಮ್ಮ ಜೀವನ ಸಾಗುತ್ತಿದೆ.
ಯಾವಾಗಿದರ ಅಂತರ ಬೆಳೆದು ಮಧ್ಯವರ್ತಿಗಳ ಅರಿವಿನ ರಾಜಕೀಯಕ್ಕೆ ಜೀವನ ಬಲಿಪಶುವಾಗುವುದೆನ್ನುವುದರ ಅರಿವಿರದು. ಹೀಗಾಗಿ ಭಯೋತ್ಪಾದನೆ  ಹೆಚ್ಚಿಸುವವರು ಹೆಚ್ಚಾಗಿ ಮಧ್ಯವರ್ತಿಗಳೇ ಆಗಿರುವರು.
ಮಗು ಜನ್ಮತ: ಉತ್ತಮ  ಗುಣ ಹೊಂದಿದ್ದರೂ ಅದನ್ನು ಬೆಳೆಸುವ ಪೋಷಕರಲ್ಲಿ ಅಂತಹ ಗುಣ ಬೆಳೆಸುವ ಅಥವಾ ಗುರುತಿಸುವ ಜ್ಞಾನವಿಲ್ಲವಾದರೆ ಮಕ್ಕಳಿಗೆ ಭೂತ ದೆವ್ವ ಗಳ ನೆಪದಲ್ಲಿ  ತಮ್ಮೆಡೆ ಸೆಳೆದುಕೊಂಡು  ಸ್ವತಂತ್ರ ಬುದ್ಧಿಯಿಂದ  ಬೆಳೆಯದಂತೆ ಮಾಡುವುದೇ ಹೆಚ್ಚು. ಕಷ್ಟ ನಷ್ಟ ಬಂದಾಗ  ಸಹನೆಯಿಂದ  ಧೈರ್ಯದಿಂದ ಮುಂದೆ ಹೋಗುವುದಕ್ಕೂ ಆಗದೆ  ಸುಮ್ಮನಿರಲೂ ಆಗದೆ ಹೊರಗಿನ ಜಗತ್ತಿನಲ್ಲಿ ಬೇಡುವ ಸ್ಥಿತಿ ಬರುತ್ತದೆಂದರೆ ಇಲ್ಲಿ  ಭಯ ಒಳಗೇ ಇದ್ದು  ಒಳಗಿನ  ಶಕ್ತಿಯನ್ನು ಕಾಣದಂತೆ  ಮಾಡುತ್ತದೆ. ಕಷ್ಟದಿಂದ  ಬಿಡುಗಡೆ ಪಡೆಯಲು ಹೊರಗೆ ಬಂದವರಿಗೆ ಹಿಂದಿರುಗಿ ಹೋಗದಂತೆ ಭಯಪಡಿಸುತ್ತದೆ. 
ಇಂದಿನ ಹೆಚ್ಚಿನ  ಯುವಪೀಳಿಗೆಗೆ ತಮ್ಮ ಭವಿಷ್ಯದ ಭಯ ಕಾಡುತ್ತದೆ. ಕೆಲಸ ಸಿಗುವುದೋ ಇಲ್ಲವೋ ಸಿಕ್ಕರೂ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಷ್ಟು  ಸಂಪಾದನೆ ಆಗಬಹುದೆ? ಆದರೂ  ಮುಂದೆ ‌ಮದುವೆಯ ನಂತರದಲ್ಲಿ ಸಂಸಾರ ನಡೆಸಲು ಸಾಧ್ಯವೆ? ಮಕ್ಕಳ ಖರ್ಚು ವೆಚ್ಚ ಎಲ್ಲಾ ಒಬ್ಬರ ದುಡಿಮೆಯಿಂದ ಕಷ್ಟ...ಹೀಗೇ  ಭವಿಷ್ಯವನ್ನು ಕೇವಲ ಭೌತಿಕದಲ್ಲಿದ್ದೇ ಚಿಂತನೆ ನಡೆಸುವುದರಿಂದ ಭಯ ಹೆಚ್ಚಾಗುತ್ತಾ ಹೋಗುತ್ತದೆ.ಹಾಗೇ ಸಮಸ್ಯೆಗಳೂ ಎದುರಾಗುತ್ತದೆ. ಹಿಂದೆ ಒಂದು ಕುಟುಂಬದಲ್ಲಿ ಹಲವು ಸದಸ್ಯರಿದ್ದರೂ  ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ದುಡಿದು ಜೀವನ‌ನಡೆಸುತ್ತಿದ್ದರು.ಈಗ ಒಂದೇ ಮಗುವನ್ನು ಸಾಕಿ ಸಲಹಲು ಹೊರಗಿನವರ ಸಹಕಾರದ ಜೊತೆಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆದರೂ ಊಟಕ್ಕೆ ಸಮಯವಿಲ್ಲ ಬಟ್ಟೆಗೆ ಗತಿಯಿಲ್ಲ ಎಂದರೆ  ಸಾಲದ ಪ್ರಭಾವ.ಅಜ್ಞಾನದಲ್ಲಿ  ಹೊರಗಿನ ಜಗತ್ತಿಗೆ ದಾಸರಾದಷ್ಟೂ ಒಳಗಿನ ಜಗತ್ತಿನ ದಾಸರ ಪರಿಚಯವಾಗದೆ ಆಸೆ ಬೆಳೆಯುತ್ತದೆ. ಆಸೆಯೇ ದು:ಖಕ್ಕೆ ಕಾರಣ ಎನ್ನುವ ಬದಲು ಅತಿಆಸೆಯೇ  ದುರಾಸೆಯೇ ದು:ಖಕ್ಕೆ ಕಾರಣವೆನ್ನಬಹುದು.

ಇದಕ್ಕೆ ಬದಲಾಗಿ ನಮ್ಮ ಜೀವನದ ಗುರಿ ಏನು ಯಾಕೆ ಭೂಮಿಗೆ ಬಂದೆವು? ಏನು ಮಾಡಿದರೆ ನಮ್ಮ ಋಣ ತೀರುವುದು.ಯಾವುದು ಸತ್ಯ ಮಿಥ್ಯ? ಎಲ್ಲಿಂದ ಎಲ್ಲಿಗೆ ಹೋಗಬೇಕು? ದೈವತ್ವ ಎಂದರೇನು? ದೇವರಿರೋದೆಲ್ಲಿ? ಧರ್ಮ ಯಾವುದು? ಅಧರ್ಮ ಎಲ್ಲಿದೆ? ..ಈ ರೀತಿಯಲ್ಲಿ ಆಧ್ಯಾತ್ಮಿಕದ ಜಗತ್ತಿನೆಡೆಗೆ ನಡೆದವರ ಭಯ ಕಡಿಮೆಯಾಗಿ ಗುರುಹಿರಿಯರಲ್ಲಿ ಭಯ ಭಕ್ತಿ ಯೋಗದಿಂದ ಬೆಳೆದಾಗ  ಒಳ ಮನಸ್ಸು ಜಾಗೃತವಾಗುತ್ತಾ  ಜೀವಭಯ ಬಿಟ್ಟು ಧರ್ಮ ಸತ್ಯದ ರಕ್ಷಣೆಗಾಗಿ  ಮುನ್ನುಗ್ಗುವ ಮಹಾತ್ಮರಾಗುವರು.
ಒಟ್ಟಿನಲ್ಲಿ ಜೀವನದಲ್ಲಿ ಹೋರಾಟ ಇರುತ್ತದೆ. ಹೋರಾಡಲು ದೈರ್ಯ ಅಗತ್ಯವಿದೆ. ಆದರೆ ಅನಾವಶ್ಯಕ ಕೆಳಮಟ್ಟದ ಆಸೆ ತೀರಿಸಿಕೊಳ್ಳುವ ಹೆಣ್ಣು ಹೊನ್ನು ಮಣ್ಣನ್ನು ವಶಪಡಿಸಿಕೊಳ್ಳಲು‌  ನಡೆಸುವ ಹೋರಾಟದಿಂದ  ಪಾರಮಾರ್ಥಿಕ ಸುಖ ಸಿಗದೆ ಜೀವ ಹೋಗುತ್ತದೆ. ಅಂತಹ ಹೋರಾಟ ಕಣ್ಣಿಗೆ ಕಾಣುವುದರಿಂದ ಜನಬಲ ಹಣಬಲ ಅಧಿಕಾರಬಲ ಎಲ್ಲಾ ಸಿಗಬಹುದು ಆದರೆ ಜ್ಞಾನದ ಬಲ ಇಲ್ಲದೆ ಧೈರ್ಯದಿಂದ  ಹೋರಾಟ ನಡೆಸಿದರೂ ಅಧರ್ಮ  ಆಗಿದ್ದರೆ  ವ್ಯರ್ಥ ಪ್ರಯತ್ನವಾಗುತ್ತದೆ.
ಎಲ್ಲರೂ ಒಮ್ಮೆ ಸಾಯೋರೇ ಎಲ್ಲರಲ್ಲಿಯೂ ದೈರ್ಯ ಶೌರ್ಯ ಇದ್ದರೂ ಅದನ್ನು ಯಾವುದಕ್ಕೆ ಬಳಸಬೇಕೆಂಬ ಸುಜ್ಞಾನ ಎಲ್ಲರಲ್ಲಿಯೂ ಇರದು.‌ಹೀಗಾಗಿ ಅಜ್ಞಾನದಲ್ಲಿ ಧೈರ್ಯದಿಂದ  ಹೋರಾಟ ಹಾರಾಟ‌ ಮಾರಾಟ ಮಾಡಿದರೂ  ಕಷ್ಟನಷ್ಟ ತಪ್ಪಿದ್ದಲ್ಲ.

ನಮ್ಮಲ್ಲಿ ಎರಡೂ ರೀತಿಯ ಶಕ್ತಿಗಳಿವೆ. ಒಂದು ದೈವಶಕ್ತಿ ಇನ್ನೊಂದು ಅಸುರಿ ಶಕ್ತಿ.‌ಅಸುರಿಶಕ್ತಿಯ ವಿರುದ್ದ ದೈವೀ ಶಕ್ತಿ ಹೋರಾಡುವಾಗ  ಅಸುರರ ದೈಹಿಕಬಲ ಹೆಚ್ಚಬಹುದು ಸುರರ ಜ್ಞಾನಬಲ ಹೆಚ್ಚಬಹುದು. ಗೆಲ್ಲುವುದು ಜ್ಞಾನಬಲ.
ಕಾರಣವಿಷ್ಟೆ  ಶಾಶ್ವತ ವಾದ ಜ್ಞಾನದಿಂದ ಆತ್ಮಬಲ ಹೆಚ್ಚುವುದು. ಅಜ್ಞಾನದಿಂದ ಕುಸಿಯುತ್ತದೆ. ಹಿಂದಿನ ಯುದ್ದಗಳಲ್ಲಿ  ಇದನ್ನು  ನಾವು ತಿಳಿಯುತ್ತೇವೆ. 
ವಾಸ್ತವದಲ್ಲಿ ನಮ್ಮ ದೇಶದ  ಪ್ರಮುಖ ಪಕ್ಷಗಳು ಒಬ್ಬರಿಗೊಬ್ಬರು ವಿರುದ್ದದ ಹೇಳಿಕೆಗಳನ್ನು ಕೊಟ್ಟುಕೊಂಡು ಜನರಲ್ಲಿಯ  ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿರುವರೋ ಅಥವಾ ಹೆಚ್ಚಿಸುವ‌ಕೆಲಸ ಮಾಡುತ್ತಿರುವರೋ ಎನ್ನುವುದೂ ನಮ್ಮ ಜ್ಞಾನದ ಮೇಲೇ ನಿಂತಿದೆ.ಇಲ್ಲಿ ರಾಜಕೀಯ ಯಾವತ್ತೂ ಹೊರಗೆ ಕಾಣುತ್ತದೆ.
ಜನರನ್ನು ಭಯಪಡಿಸಿ ಆಳೋದೇ ಬೇರೆ, ಆತ್ಮವಿಶ್ವಾಸ ಹೆಚ್ಚಿಸಿ ಸ್ವಾವಲಂಬನೆ ಕಡೆಗೆ ನಡೆಸೋದೇ ಬೇರೆ.ಆತ್ಮನಿರ್ಭರ ಎಂದರೆ ನಮ್ಮ ಆತ್ಮವಿಶ್ವಾಸ ದಿಂದ ಭಯವಿಲ್ಲದೆ  ದುಡಿದು ಸ್ವತಂತ್ರ ಜೀವನ ನಡೆಸೋದಾದರೆ ನಮ್ಮಲ್ಲಿ  ಯಾರ ಶಿಕ್ಷಣವಿದೆ? ಯಾರ ಕೈಕೆಳಗೆ ದುಡಿಯುತ್ತಿರುವುದು? ದೇಶ ಯಾರ ಕೈಯಲ್ಲಿದೆ? ನಮ್ಮನೆ ಮನಸ್ಸು  ಯಾರಿಂದ ನಡೆದಿದೆ? ಯಾವ ಕಡೆ ನಮ್ಮ ನಡೆ ನುಡಿಯಿದೆ? ಹೀಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಷ್ಟು ಸಮಯ ನಮಗಿದೆಯೆ? ಇದ್ದರೆ ಉತ್ತರವು ನಮ್ಮೊಳಗೇ ಸಿಗುತ್ತದೆ. ನಾವೀಗ ಭಯಪಡುತ್ತಿರುವುದು ನಮ್ಮವರಿಗೋ ಅಥವಾ ಹೊರಗಿನವರಿಗೋ?
ನಮ್ಮವರಿಂದಲೇ  ಭಯ ಎಂದರೆ ಯಾವ. ಕಾರಣಕ್ಕಾಗಿ ಭಯ ಸೃಷ್ಟಿ ಮಾಡಲಾಗಿದೆ? ದೇವರು ಧರ್ಮ. ಜಾತಿ ಪಕ್ಷಗಳ ರಾಜಕೀಯತೆಯಿಂದ  ನಮ್ಮ ಸ್ವಂತ ಬುದ್ದಿ ಜ್ಞಾನ ಬೆಳೆಯಿತೆ?
ಇಲ್ಲವೆ? ಹಾಗಾದರೆ ಭಯದಿಂದ ನಮಗೆ ನಾವೇ ಮೋಸ ಹೋಗಿರುವುದು ಸತ್ಯ.ಸತ್ಯ ಒಂದೇ ಇರೋದು.ಆ ಸತ್ಯದಿಂದ ದೂರವಾಗಿರುವ‌ಜೀವಾತ್ಮನಿಗೆ ಹಿಂದಿರುಗಲು ಭಯ ಎಂದರೆ  ಅಜ್ಞಾನವಾಗುತ್ತದೆ. ಆಗೋದನ್ನು ತಡೆಯಲಾಗಿಲ್ಲ, ಆಗಿದ್ದೆಲ್ಲಾ ಒಳ್ಳೆಯದೇ  ಎಂದಾಗ  ಭಯ ಬಿಟ್ಟು ಒಳ್ಳೆಯ ಕಾರ್ಯಕ್ಕೆ  ಒಗ್ಗಟ್ಟಿನಿಂದ ಮುಂದೆ ನಡೆದು ಸಹಕರಿಸುವಷ್ಟು ಧೈರ್ಯ  ಬೆಳೆಯಬೇಕಿದೆ.
ಸತ್ಯ ಬಿಟ್ಟು ಧರ್ಮ ಬಿಟ್ಟು  ದೂರ ಹೋಗೋದು ಸುಲಭ.ಆದರೆ‌ಹಿಂದಿರುಗೋದು‌ ಬಹಳ ಕಷ್ಟ. ಸುಲಭವಾದಕ್ಕೆ ಸಹಕರಿಸಿ ಕಷ್ಟಕ್ಕೆ ಸಹಕರಿಸದಿದ್ದರೆ  ಅದೇ ಮುಂದೆ ಇನ್ನಷ್ಟು ಕಷ್ಟ ನಷ್ಟಕ್ಕೆ ಕಾರಣವಾಗುತ್ತದೆ. 
ಕಲಿಗಾಲದ ಪ್ರಭಾವದಿಂದಾಗಿ ಸತ್ಯವನ್ನು ಸುಳ್ಳೆಂದು ಅದರ ಸುಳ್ಳನ್ನು   ಸತ್ಯವೆಂದು ಸಾಭೀತು ಮಾಡಲು ಧೈರ್ಯದಿಂದ ಮುಂದೆ ಹೋದರು. ಹಿಂದೆ ಇದ್ದವರೂ ಅವರನ್ನು ಅನುಸರಿಸಿ ಕೊನೆಯಲ್ಲಿ  ಕಷ್ಟ ನಷ್ಟವಾದಾಗ ಹಿಂದಿರುಗಲಾಗದೆ  ಇದೇ ಸತ್ಯ ಎಂದು ವಾದ ಮಾಡಿ ಸೋತವರು  ಇನ್ನೊಬ್ಬರ ನ್ನು ಭಯಪಡಿಸಿ  ಆಳಲು ಹೋದರೆ  ಮಂಗ ತಾನು ಕೆಟ್ಟು ವನವೆಲ್ಲಾ ಕೆಡಿಸಿದಂತೆ ಎಂದಾಗುತ್ತದೆ.
ಎಷ್ಟಾದರೂ ಮಂಗನಿಂದಲೇ ‌ ಮಾನವನಾಗಿರುವಾಗ  ನೆಗೆಯುತ್ತಾ ಹೋಗುವುದು ಸಹಜ. ಆ ನಗೆತದಿಂದ  ಹೊಟ್ಟೆ ತುಂಬಿಸಿಕೊಳ್ಳಬಹುದು   ಅದರೊಂದಿಗೆ ರೋಗವೂ ಇರುವ ವಿಷಯಜ್ಞಾನವನರಿತರೆ  ನಿಜವಾದ ಭಕ್ತಿಯೋಗವಾಗುತ್ತದೆ.
ವಾನರ ಸೇನೆಯ ಸಹಾಯದಿಂದ ಶ್ರೀ ರಾಮಚಂದ್ರನು  ಗೆದ್ದನು  ಎಂದರೆ ವಾನರರ  ಸಂಘಟನೆಯು ಧರ್ಮದ ಪರವಾಗಿತ್ತು. ಹೀಗಾಗಿ ಭಯವಿಲ್ಲದೆ  ಅಸುರ ಶಕ್ತಿಯ ವಿರುದ್ದ ಹೋರಾಡಿ ಗೆದ್ದರು. ಈಗಿನ ಸೇವಕರು ಭ್ರಷ್ಟರ ಅಧೀನದಲ್ಲಿದ್ದು  ಭಯದಿಂದ ಜೀವನ‌ ನಡೆಸೋ ಸ್ಥಿತಿಗೆ ಬರಲು ಕಾರಣ ಅಧರ್ಮಕ್ಕೆ ನೀಡಿದ ಸಹಕಾರ. ಸತ್ಯ ಕಠೋರವಾಗಲು ಕಾರಣವೇ ಅದನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಲಕ್ಷ  ಹಣನುಂಗಿರುವ ಭ್ರಷ್ಟಾಚಾರವಾಗಿದೆ. ಭ್ರಷ್ಟ ದುಷ್ಟರನ್ನು    ಅನುಸರಿಸಿದರೆ  ಭಯೋತ್ಪಾದಕರೂ ಬೆಳೆಯುವರು. 
ಏನನ್ನು ಬೆಳೆಸುವೆವೋ ,ಹರಡುವೆವೋ, ಹಂಚುವೆವೋ, ನೋಡಿ ಕೇಳಿ ಹೇಳುವೆವೋ ಅದೇ ಹೊರಗೆ ಒಳಗೆ ತುಂಬಿ ಆಳೋದು. 
ಸಾಧನೆ  ಅಂತರಂಗದ ಶುದ್ದಿಯೆಡೆಗೆ‌ ನಡೆದರೆ ಭಯವಿರದು.
ಬಹಿರಂಗದ ಶುದ್ದಿ  ಭಯದಿಂದ ಮಾಡಲಾಗದು.

No comments:

Post a Comment