ಜೀವನದಲ್ಲಿ ಸ್ವತಂತ್ರ ವಾಗಿ ಸತ್ಯಾನ್ವೇಷಣೆ ಮಾಡೋದು ಕಷ್ಟ.ಸತ್ಯವನ್ನು ಒಳಗೆ ಅನುಭವಿಸಲೂ ಕಷ್ಟ. ಹೊರಗೆ ನೋಡಲೂ ಕಷ್ಟ. ಕಾಣದ ಸತ್ಯ ಕಾಣುವ ಸತ್ಯಕ್ಕಿಂತ ಬಹಳ ಆಳ ಅಗಲ ಎತ್ತರ ಇರುವುದರಿಂದ ಸತ್ಯ ಮರೀಚಿಕೆಯಂತಿರುತ್ತದೆ. ಎಲ್ಲೋ ಒಮ್ಮೆ ಅನುಭವಕ್ಕೆ ಬಂದರೂ ಹಿಡಿದಿಡಲಾಗದು. ಹೀಗಾಗಿ ಎಷ್ಟೋ ಮಹಾತ್ಮರು ಸಾದುಪುರುಷರು ಸತ್ಯವನ್ನು ತೋರಿಸಲಾಗದೆ ಮುಂದೆ ಹೋಗಿರುವರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದು ಪ್ರಶ್ನೆ ಮಾಡೋದೇ ತಪ್ಪೆ?
ತಪ್ಪು ಪ್ರಶ್ನೆ ಮಾಡೋದರಲ್ಲಿಲ್ಲ ತೋರಿಸಲಾಗದ್ದನ್ನು ನೋಡಿದೆ ಎನ್ನುವುದು ತಪ್ಪು. ಅನುಭವಿಸಿರೋದನ್ನು ಹೇಳಬಹುದಷ್ಟೆ ಆದರೆ ಅಂತಹ ಅನುಭವ ಎಲ್ಲರಿಗೂ ಆಗಲೇಬೇಕು ಆಗುತ್ತದೆ ಎನ್ನಲಾಗದು.
ದೇವರ ವಿಷಯದಲ್ಲೂ ಇದೇ ನಡೆದಿದೆ. ದೈವತ್ವಕ್ಕೆ ಇತಿಮಿತಿಗಳಿಲ್ಲ ಇದು ಯಾವ ರೂಪದಲ್ಲಿ ಯಾರಲ್ಲಾದರೂ ಇರಬಹುದು. ಹಾಗಂತ ಅವರೆ ದೇವರು ಎನ್ನಲಾಗದು.
ವ್ಯಕ್ತಿಗಿಂತ ಶಕ್ತಿ ದೊಡ್ಡದು. ಆ ಶಕ್ತಿ ದೈವೀಕ ,ಅಸುರಿ ಮಾನವೀಯ ಗುಣಗಳನ್ನು ಹೊಂದಿರುವಾಗ ಅವರವರ ಕಾಯಕ ನಡೆ ನುಡಿಯಲ್ಲಿ ಕಂಡರೂ ಅದೂ ಯಾವ ರೂಪ ತಾಳಬಹುದೆನ್ನುವ ಸ್ಪಷ್ಟವಿರದು. ಕೊನೆಯುಸಿರಿರುವರೆಗೂ ಮಾನಸಿಕ ಬದಲಾವಣೆ ಮನುಷ್ಯನಿಗಾಗುತ್ತದೆ.
ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸಾತ್ವಿಕ ಗುಣದಿಂದ ದೈವತ್ವಕ್ಕೆ ಏರಬಹುದು.ತಾಮಸಿಕ ಗುಣದಿಂದ ಅಸುರರಾಗಬಹುದು .
ಹಾಗಾಗಿ ಇರುವ ಒಂದು ಸತ್ಯವ ಹಿಡಿದವರು ದೇವರೆಡೆಗೆ ನಡೆದರೆ ಅರ್ಧ ಸತ್ಯ ಮಾನವನನ್ನು ಎರಡೂ ಕಡೆ ಎಳೆಯಿತು.ಅಸತ್ಯವಂತೂ ತೀರಾ ಕೆಳಮಟ್ಟದವರೆಗೆಳೆದು ಅಜ್ಞಾನ ಬೆಳೆಸಿತು.ಹೀಗಾಗಿ ಸತ್ಯವೇ ದೇವರೆಂದರು. ಅದು ಆತ್ಮವಿಶ್ವಾಸ ಆತ್ಮಜ್ಞಾನ ಆತ್ಮಾವಲೋಕನ ದೆಡೆಗೆ ನಡೆಸಿ ಆಧ್ಯಾತ್ಮ ಸಾಧನೆಯಾಯಿತು. ಆಧ್ಯಾತ್ಮ ಸಾಧನೆ ಅಂತರಂಗದ ಶುದ್ದಿಯಿಂದಾದರೆ ಆಧ್ಯಾತ್ಮ ವಿಜ್ಞಾನ.
ಭೂಮಿಯ ಮೇಲಿದ್ದೇ ಆಕಾಶಕಾಯ ಗ್ರಹ ನಕ್ಷತ್ರಗಳ ಚಲನ ವಲನಗಳನ್ನು ತಿಳಿಸೋದಕ್ಕೆ ಆತ್ಮಜ್ಞಾನಿಗಳಿಗೆಮಹರ್ಷಿಗಳಿಗೆ
ಸಾಧ್ಯವಾಗಿದೆ ಎಂದರೆ ಒಳಗಿರುವ ಆತ್ಮವೇ ದೇವರು. ಇದು ಅಸುರರೊಳಗಿದ್ದರೂ ಸರಿ ಸುರರಲ್ಲಿದ್ದರೂ ಸರಿ ಪರಮಾತ್ಮನೊಬ್ಬನೆ ಎಲ್ಲರನ್ನೂ ನಡೆಸೋದೆನ್ನುವುದೇ ಅಧ್ವೈತ. ಅಣು ರೇಣು ತೃಷಕಾಷ್ಟ ಪರಿಪೂರ್ಣ ಗೋವಿಂದ. ಎಂದರೆ ಅಣುಗಾತ್ರದ ಈ ಜೀವಾತ್ಮ ನಿಗೆ ಮೋಕ್ಷ ಸಿಗಲು ಗೋವಿಂದನ ನೆನೆದರಾಯಿತು. ಇದಕ್ಕೆ ಮೋಹದ ಕ್ಷಯವಾಗಬೇಕಿದೆ.
ಸ್ಮರಣೆಯೊಂದೇ ಸಾಲದೆ ಗೋವಿಂದನಾ....ನಾಮ ಒಂದೇ ಸಾಲದೇ.. ಎಂದು ದಾಸಶ್ರೇಷ್ಟರು ಹೇಳಿರುವರು.
No comments:
Post a Comment