ದ್ವೇಷ ಸೇಡು ಕೋಪ ಹಠ ಎಲ್ಲವೂ ಸಾಧನೆಗೆ ಅಡೆತಡೆಗಳನ್ನು ಸೃಷ್ಟಿ ಮಾಡುವುದೆನ್ನುವುದು ಅಧ್ಯಾತ್ಮ ಸತ್ಯ. ಹಾಗಾದರೆ ವಾಸ್ತವದಲ್ಲಿ ಇವೆಲ್ಲವೂ ರಾರಾಜಿಸುತ್ತಿವೆ ಹರಡುತ್ತಿದೆ ಬೆಳೆದುಕುಣಿದು ಕುಣಿಸುತ್ತಿದೆ ಎಂದರೆ ಇದರ ಹಿಂದೆ ಸಾಧನೆ ಆಗಿದೆಯೆ?
ಆದರೂ ಇದನ್ನು ಮಾನವ ಹೆಚ್ಚಾಗಿ ಬಳಸಿಕೊಂಡು ಸಾಧಕ ಎಂದು ಕರೆಸಿಕೊಂಡರೆ ಅಧ್ಯಾತ್ಮ ವಾಗದಷ್ಟೆ.
ಇಲ್ಲಿ ಅಧ್ಯಾತ್ಮ ಸಾಧನೆಗೆ ಇವುಗಳಿಂದ ದೂರವಿರಬೇಕಿದೆ.
ಭೌತಿಕದೆಡೆಗೆ ನಡೆದಷ್ಟೂ ಸ್ಪರ್ಧೆ ಹೆಚ್ಚು. ಯಾರೊಂದಿಗೆ ಸ್ಪರ್ಧೆ ಎಂದರೆ ನಮ್ಮವರೊಂದಿಗೇ ಸ್ಪರ್ಧೆ ನಡೆಸಿಕೊಂಡು ಸೋಲು ಗೆಲುವಿನ ಅಂತರಬೆಳೆಸಿ ಅದರಿಂದ ಜನ್ಮ. ಪಡೆದ ದ್ವೇಷ ಹೊತ್ತು ಸೇಡು ತೀರಿಸಿಕೊಳ್ಳಲು ಮತ್ತೊಂದು ಜನ್ಮದವರೆಗೂ ಕಾಯುವ ಅತೃಪ್ತ ಆತ್ಮಗಳಿಗೆ ಜನ್ಮ ಸಿಗದೆ ಕೋಪಬಂದು ಹಠದಿಂದ. ಯಾರೊಳಗೋ ಸೇರಿಕೊಂಡು ಆಟವಾಡುವಾಗ ಹೊರಗಿನ ಕಣ್ಣಿಗೆ ಸತ್ಯ ಅರ್ಥ ವಾಗದೆ ಇನ್ನಷ್ಟು ಸಮಸ್ಯೆಗಳನ್ನು ಹೊತ್ತು ಜೀವ ಹೋಗುತ್ತದೆ.
ಇದನ್ನು ತಡೆಯುವುದೇ ಅಧ್ಯಾತ್ಮ ಸಾಧನೆಯ ಗುರಿ. ಅಲ್ಲೂ ಅಂತರ ಬೆಳೆದಷ್ಟೂ ಅತಂತ್ರಸ್ಥಿತಿಗೆ ತಲುಪುತ್ತದೆ ಮನುಕುಲ.
ಭೂಮಿ ಇರೋದೆ ಒಂದು. ಅದರಲ್ಲಿ ಮನುಕುಲದ ಸಂಸಾರ ಇದೆ. ಸಂಸಾರದೊಳಗಿದ್ದು ಸಾಧನೆ ಮಾಡೋದೆಂದರೆ ಬಹಳ ಕಷ್ಟ. ಹೀಗಾಗಿ ಅಡ್ಡದಾರಿಹಿಡಿದವರು ಹೆಚ್ಚು.ಎಷ್ಟು ಅಡ್ಡ ಹೋದರೂ ಸೀದಾ ನಡೆಯೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು ಎನ್ನುವ ಸನಾತನ ಧರ್ಮ ವನ್ನು ಅಲ್ಲಗೆಳೆದಷ್ಟೂ ಅಲ್ಲ ಬೆಳೆಯುವುದು. ನಕಾರಾತ್ಮಕ ಶಕ್ತಿ ಬೆಳೆದಷ್ಟೂ ಸಕಾರಾತ್ಮಕ ಶಕ್ತಿಯ ಪರಿಚಯವಾಗದು. ಒಟ್ಟಿನಲ್ಲಿ ಕಣ್ಣಿಗೆ ಕಾಣದ ಅಗೋಚರ ಶಕ್ತಿಗಳ ನಡುವಿನ ಹೋರಾಟದಲ್ಲಿ ಕಣ್ಣಿಗೆ ಕಾಣುವ ಮಾನವನ ಜೀವನ ಮಧ್ಯೆ ಸಿಲುಕಿ ಮಧ್ಯವರ್ತಿ ಮಾನವ ಆಟಕ್ಕುಂಟು ಲೆಕ್ಕಕ್ಕಿಲ್ಲ. ತಾನೇ ತಿಳಿದೋ ತಿಳಿಯದೆಯೋ ಮಾಡುವ ಕರ್ಮ ಕ್ಕೆ ತಕ್ಕಂತೆ ಫಲ ಅನುಭವಿಸೋದನ್ನು ಯಾರೂ ತಡೆಯಲಾಗದು ಎಂದರೆ ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರ ಆಟ ನಡೆದಿದೆ?ಇದರಿಂದಾಗಿ ಬದಲಾವಣೆ ಒಳ್ಳೆಯ ದು ಆಗುವುದೆ ? ಕೆಟ್ಟದ್ದೆ? ಹಣದಿಂದ. ಬದಲಾದರೆ ಕೆಟ್ಟದ್ದೆ ಜ್ಞಾನದಿಂದ ಬದಲಾದರೆ ಒಳ್ಳೆಯದು. ಇದ್ದಾಗಲೇ ಸತ್ಯ ತಿಳಿದು ಸನ್ಮಾರ್ಗ ಹಿಡಿದವರು ಮಹಾತ್ಮರಾಗಿದ್ದಾರೆಂದರೆ ಮಹಾತ್ಮರ ದಾರಿ ರಾಜಕೀಯ ಆಗಿರದೆ ರಾಜಯೋಗವಿತ್ತು.
No comments:
Post a Comment