ತತ್ವ ದರ್ಶನಕ್ಕೂ ತತ್ವ ಪ್ರದರ್ಶನಕ್ಕೂ ವ್ಯತ್ಯಾಸವಿದೆ. ತತ್ವದರ್ಶನ ಆದ ಮೇಲೆ ಪ್ರದರ್ಶನ ಇಷ್ಟವಾಗದು. ಪ್ರದರ್ಶನವೇ ಮುಖ್ಯವಾದವರಿಗೆ ತತ್ವದರ್ಶನ ಆಗಿರದು. ಒಗ್ಗಟ್ಟು ಹೊರಗಿನ ಪ್ರದರ್ಶನವಾದಾಗ ಸಾಕಷ್ಟು ಅಪ್ರದಕ್ಷಿಣೆ ಮಾಡೋರನ್ನು ಸರಿಪಡಿಸೋದರಲ್ಲಿಯೇ ಕಾಲಹೋಗುತ್ತದೆ. ಕೊನೆಗೆ ನಾವೇ ಅಪ್ರದಕ್ಷಿಣೆಯ ಕಡೆಗೆ ಹೋಗಿರೋದೂ ತಿಳಿಯದೆ ನಿಂತಿರುತ್ತೇವೆ.
ಯಾರಿಗೆ ದರ್ಶನ ಮಾಡಿಸಬೇಕು? ಎಂದರೆ ಒಳಗಿನ ಶಕ್ತಿಯ ದರ್ಶನ ಆಗೋದಕ್ಕೆ ಮಾಡಿಸಬೇಕಿದೆ. ಯಾವಾಗ ಒಳಗಿನ ಶಕ್ತಿಯ ಅರಿವಿಲ್ಲದೆ ಹೊರಗಿನವರಿಗೆ ಪ್ರದಕ್ಷಿಣೆ ಹೆಚ್ಚಾಗುವುದೋ ಆಗ ಹೊರಗಿನವರ ಸುತ್ತಲಿರುವ ಶಕ್ತಿಯೇ ಮತ್ತಷ್ಟು ಸುತ್ತುವಂತೆ ಮಾಡಿಕೊಂಡಿರುತ್ತದೆ.ಏನೇ ಇರಲಿ ಉತ್ತಮರ ಪ್ರದಕ್ಷಿಣೆಯಿಂದ ಉತ್ತಮ ಕಾರ್ಯ ನಡೆಯುತ್ತದೆ.
ಅಧಮರನ್ನು ಪ್ರದಕ್ಷಿಣೆ ಮಾಡಿದರೆ ಅಧರ್ಮ ವೇ ಬೆಳೆಯೋದು.
ಜೀವನ ಒಂದು ನಾಟಕವೆಂದರು ಜೀವನ ಒಂದು ಆಟ ಎಂದರು...ಹೀಗೇ ನಾಟಕದಲ್ಲಿ ನಟನೆ ಮಾಡೋರ ಹಿಂದೆ ಹೋದವರು ಜೀವನದ ಸತ್ಯ ತಿಳಿದರೆ ಉತ್ತಮ.
ಹಾಗೆಯೇ ಆಟ ಆಡೋರನ್ನು ನೋಡುತ್ತಾ ಕಾಲಕಳೆದವರು ಜೀವನದಲ್ಲಿ ಗೆದ್ದವರಿದ್ದರೆ ಉತ್ತಮ. ಯಾರದ್ದೋ ಆಟಕ್ಕೆ ನಮ್ಮ ಜೀವ ಹೋದರೆ ಅಧೋಗತಿ. ನಾಟಕದಲ್ಲಿ ಪಾತ್ರ ಮಾಡೋರಿಗೆ ಆಟ ಆಡೋರಿಗೆ ಆಡಿಸುವವರಿಗೆ ಹಣದ ಸಮಸ್ಯೆಯಿರದು. ನೋಡೋರಿಗೆ ಹಣದ ಜೊತೆಗೆ ಸಮಯವೂ ವ್ಯರ್ಥ ಜ್ಞಾನವೂ ಇರದು.
ಎಲ್ಲರನ್ನೂ ಒಂದು ಮಾಡುವ ತತ್ವದಲ್ಲಿ ತಂತ್ರ ಬೆರೆಸಿ ಆಳಿದರೆ ಅತಂತ್ರಸ್ಥಿತಿಗೆ ಜೀವನ ತಲುಪಬಹುದು.
ಮಾನವನ ಸ್ವತಂತ್ರ ಜ್ಞಾನದಿಂದ ತತ್ವದರ್ಶನ ಮಾಡಿಕೊಂಡ ಮಹಾತ್ಮರನ್ನು ಪ್ರದರ್ಶನ ಮಾಡಿಸದೆ ಅವರಲ್ಲಿದ್ದ ಸತ್ಯಜ್ಞಾನ ದರ್ಶನವಾದರೆ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನ ಆದಂತೆಯೇ.
ನೇರವಾಗಿ ಸತ್ಯ ತಿಳಿಸಿದರೂ ಅರ್ಥ ವಾಗದಿದ್ದರೆ ಏನೂ ಮಾಡಲಾಗದು. ಹೊರಗಿನಕಲಿಕೆ ಪ್ರದರ್ಶ ನಕ್ಕೆ ಸೀಮಿತವಾದಷ್ಟೂ ಒಳಗಿನ ಕಲಿಕೆ ಹಿಂದುಳಿಯುತ್ತದೆ.
ಆತ್ಮನಿರ್ಭರ ಭಾರತವು ಆತ್ಮದುರ್ಭಲರ ಪ್ರದರ್ಶನ ಮಾಡಿಸದಿದ್ದರೆ ಉತ್ತಮ. ಜೀವನದ ಆಟದಲ್ಲಿ ಗೆದ್ದವರು ಯಾರು? ಸೋತವರು ಯಾರು?
No comments:
Post a Comment