ಅಮ್ಮ ಭೂಮಿ ಅಪ್ಪ ಆಕಾಶ.ಮಕ್ಕಳು ನಕ್ಷತ್ರಗಳು. ನಕ್ಷತ್ರ ಸ್ವಯಂ ಪ್ರಕಾಶಮಾನವಾಗಿ ಬೆಳಗಬೇಕಾದರೆ ಉತ್ತಮ ಸಂಸ್ಕಾರದ ಶಿಕ್ಷಣ ನೀಡುವುದು ಪೋಷಕರ ಧರ್ಮ.
ಅಮ್ಮನ ಜ್ಞಾನ ಅಪ್ಪನ ವಿಜ್ಞಾನದ ನಡುವಿರುವ ಮಕ್ಕಳ ಸಾಮಾನ್ಯಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ವಿಶೇಷವಾಗಿ ಬೆಳೆಸುವಾಗ ಇಬ್ಬರೂ ಜೋಪಾನವಾಗಿರಬೇಕು. ಇಬ್ಬರ ಜ್ಞಾನ ಬಿಟ್ಟು ಮೂರನೆಯವರ ಜ್ಞಾನ ತಲೆಗೆ ತುಂಬುವುದರಿಂದ ಅಜ್ಞಾನ ಆವರಿಸಬಹುದು.
ಇದು ಬಹಳ ಕಷ್ಟದಕೆಲಸ. ಹೀಗಾಗಿ ಇಂದು ಅಮ್ಮನ ಜ್ಞಾನ ಅಪ್ಪನ ವಿಜ್ಞಾನ ಹೊರಜಗತ್ತಿಗೆ ಸೀಮಿತವಾಗಿ ಒಳ ಜಗತ್ತಿನಿಂದ ಜನ್ಮ ಪಡೆದ ಮಕ್ಕಳ ಜ್ಞಾನ ಗುರುತಿಸುವುದರಲ್ಲಿ ಗೆದ್ದವರು ವಿರಳ.
ಹಾಗೇನಾದರೂ ಗೆದ್ದವರಿದ್ದರೆ ಅವರು ಅಧೃಷ್ಟವಂತರೆ ಸರಿ.
ಅಜ್ಜ ಅಪ್ಪ ಮಗ ಮೊಮ್ಮಗನವರೆಗೂ ಆಸ್ತಿ ಸುಲಭವಾಗಿ ಹರಡಬಹುದು.ಆದರೆ ಜ್ಞಾನ ವಿಜ್ಞಾನದ ವಿಚಾರದಲ್ಲಿ ಇದು ಹರಡದೆ ಅನ್ಯರ ಜ್ಞಾನ ಹೊರಗಿನಿಂದ ಸೇರಿದಾಗ ಸಂಬಂಧಕ್ಕೆ ಬೆಲೆ ಕೊಡೋದು ಆಸ್ತಿಯಿಂದ ಮಾತ್ರ.
ಕಲಿಗಾಲದಲ್ಲಿ ಕಾಲ ಸರಿಯಿಲ್ಲ ಎನ್ನುವ ಬದಲು ಕಲಿಕೆಯಲ್ಲಿ ಹೊಂದಾಣಿಕೆಯಿಲ್ಲ ಎಂದಾಗ ಸರಿಪಡಿಸುವ ಪ್ರಯತ್ನ ನಡೆಸಬಹುದು.
ಅಮ್ಮನ ಸೀರೆ ಮಡಿಸಲಾಗದು ಅಪ್ಪನ ದುಡ್ಡು ಎಣಿಸಲಾಗದು ಎನ್ನುವರು. ನಕ್ಷತ್ರಗಳನ್ನು ಎಣಿಸಲಾಗದು ಸರಿ ಮಕ್ಕಳನ್ನು ಸ್ವಯಂ ಪ್ರಕಾಶಮಾನವಾಗಿ ಬೆಳಗುವ ನಕ್ಷತ್ರವಾಗಿ ಬೆಳೆಸಲು ಸ್ವಯಂ ಪ್ರಯತ್ನದ ಜೊತೆಗೆ ಇಬ್ಬರ ಸಹಕಾರ ಅಗತ್ಯವಿದೆ. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನದಿಂದ ವಿಶೇಷ ಜ್ಞಾನದ ಕಡೆಗೆ ಹೋದವರು ಸ್ವಯಂ ಪ್ರಕಾಶಕರಾಗಿದ್ದಾರೆ. ಇದು ಅಮ್ಮನ ಜ್ಞಾನದ ಜೊತೆಗೆ ಅಪ್ಪನ ವಿಜ್ಞಾನ ಕೂಡಿ ಆಧ್ಯಾತ್ಮ ವಾದಾಗ ಅಪ್ಪನ ವ್ಯಕ್ತಿತ್ವದ ಜೊತೆಗೆ ಅಮ್ಮನ ಶಕ್ತಿ ಕೂಡಿ ಭೂಮಿಯಲ್ಲಿ ಮಕ್ಕಳು ಪ್ರಕಾಶಮಾನರಾಗಿ ಮಾನವರಾಗಿರಬಹುದು.
ವಿರುದ್ದವಿದ್ದರೆ ಪ್ರಕಾಶವಿದ್ದರೂ ಅಮಾನವೀಯರಾಗಿ ಬಾಳುವರು. ಆಚರಣೆ ಒಂದು ದಿನ ಸೀಮಿತವಾಗಿರೋದು ಪಾಶ್ಚಾತ್ಯ ಸಂಸ್ಕೃತಿಯಿಂದ ಬೆಳೆದ ಅಂತರ ಕಾರಣ. ಈಗ ಭಾರತದಲ್ಲೂ ಪೋಷಕರ ನಡುವಿನ ಅಂತರದಲ್ಲಿ ಮಕ್ಕಳಿಗೆ ಅಮ್ಮ ಅಪ್ಪ ರ ಹಣಸಂಪಾದನೆ ಕಣ್ಣಿಗೆ ಕಾಣುತ್ತಿದೆ ಎಂದರೆ ಹಣದಿಂದ ಅಮ್ಮ ಅಪ್ಪ ಸಿಗುವರೆ? ಸಾಮಾನ್ಯ ಜ್ಞಾನದ ಕೊರತೆಯಿದೆ.
No comments:
Post a Comment