ಜೀವನ್ಮುಕ್ತಿ ರಾಜಕೀಯದಲ್ಲಿಲ್ಲ.

ಮಾನವ ಎಷ್ಟು ರಾಜಕೀಯವನ್ನು ಒಳಗೆಳೆದುಕೊಂಡು  ಹೋರಾಟ ನಡೆಸಿದರೂ  ಜೀವನ್ಮುಕ್ತಿ ಸಿಗೋದಿಲ್ಲ. ಕಾರಣ ರಾಜಕೀಯ ಹೊರಗಿದೆ. ಜೀವ ಒಳಗಿದೆ. ಜೀವಾತ್ಮನನ್ನು ಪರಮಾತ...

Sunday, June 1, 2025

ಲೇಖನಿ ಲೇಖಕ ಲೇಖನ

ಲೇಖಕನಿಗೂ ಲೇಖನಿಗೂ ಒಟ್ಟಿಗಿರುವಾಗ ಯಾವುದೇ ಅಂತರವಿರದು. ಯಾವಾಗ ಲೇಖನ ಪೂರ್ಣ ವಾಗುವುದೋ ಆಗ ಇಬ್ಬರೂ ಬೇರೆ ಬೇರೆ.ಕೈಯಲ್ಲಿ ಹಿಡಿದ ಲೇಖನಿ ಒಳಗಿದ್ದು ಬರೆಸೋ ಲೇಖಕನ ಶಕ್ತಿಯನ್ನು  ಲೇಖನ  ಹೊರಹಾಕುತ್ತದೆ. 
ಇವರಿಬ್ಬರ ನಡುವಿರುವ ಮಾನವ ಲೇಖನವನ್ನು ಹೇಗೆ ಬಳಸಿಕೊಳ್ಳುವನೆಂಬುದರ ಮೇಲೇ ನಿಂತಿದೆ ಜೀವನ.
 ಹಿಂದೆ ಎಷ್ಟೋ ಸಾಹಿತಿಗಳು ಬಡತನದಲ್ಲಿದ್ದರು.‌ಈಗ ಅವರ  ಸಾಹಿತ್ಯ ದೊಡ್ಡ ಸಂಪತ್ತಾಗಿದೆ. ಅಂದರೆ ಲೇಖನಿಯೂ ಲೇಖಕನೂ  ಬಳಸದೆ  ಇರುವ ಆಸ್ತಿಯನ್ನು  ಹೊರಹಾಕಿದವ ಪಡೆದ ನಂತರ ಓದುಗನೂ ಲಾಭ ಪಡೆದ. ಇಲ್ಲಿ  ಜ್ಞಾನವನ್ನು ಅಳೆಯುವ  ಹಾಗಿಲ್ಲ. ಆದರೂ  ಅದರ‌ಬೆಲೆ ಅರಿವಿಗೆ ಬರುವ ಹೊತ್ತಿಗೆ ಮಾನವನಿರೋದಿಲ್ಲ. ಇದ್ದಾಗಲೇ  ಅರಿವಿದ್ದರೆ  ಬೆಲೆ  ಕೊಡೋರಿಗೆ  ಗೌರವ. ಇದ್ದಾಗ ಕೊಡದ ಗೌರವ ಹೋದ‌ಮೇಲೆ  ಕೊಟ್ಟರೆ ನಾಟಕವಾಗುತ್ತದೆ.
ಆದರೂ ಚೈತನ್ಯಶಕ್ತಿ ಅಮರ. ಯಾರು ಎಷ್ಟು ಹಣಪಡೆದು ಮೇಲಕ್ಕೆ ಏರಿದರೂ  ಸತ್ಯವಿಲ್ಲದಿದ್ದರೆ  ಒಮ್ಮೆ ಧರೆಗಿಳಿದು‌ಬರಬೇಕು ಎನ್ನುವ ಕಾರಣದಿಂದ. ಮಹಾತ್ಮರು ಸತ್ಯ ಬಿಡದೆ  ಮೇಲಕ್ಕೆ ಏರಿದ್ದಾರೆ. ಈಗಲೂ  ಸತ್ಯವಿದೆ‌  ಆದರೆ ಅದನ್ನು ಹೊರಗೆ ಹುಡುಕುವುದೇ  ಲೇಖನಗಳ ಕೆಲಸವಾಗುತ್ತದೆ. ಕಣ್ಣಿಗೆ ಕಾಣುವ ಸತ್ಯ ತಾತ್ಕಾಲಿಕ ವಷ್ಟೆ.ಕಾಣದ ಸತ್ಯ ಬಹಳಷ್ಟಿದೆ.
ರವಿ ಕಾಣದ್ದನ್ನು ಕವಿ ಕಂಡ ಎಂದಂತೆ. ಅವರವರ ಭಾವಕ್ಕೆ ಭಕುತಿಗೆ  ತಕ್ಕಂತೆ ಸತ್ಯದರ್ಶನ. ಆದರೆ ಇರೋದೊಂದೆ ಸತ್ಯ. ಮೇರುಸತ್ಯ.

No comments:

Post a Comment