ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, June 14, 2025

ಜೀವನರಥದ ಸಾರಥಿ ಯಾರು?

ಜೀವನವೆನ್ನುವ ರಥವನ್ನು ನಡೆಸುವುದು  ಮೇಲಿರುವ ಭಗವಂತನ ಕೆಲಸವೆನ್ನುವುದರ ಹಿಂದೆ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲವೂ ಅಡಗಿದೆ. ಆದರೆ ಈವರೆಗೆ ಯಾರೂ ಒಬ್ಬ ಭಗವಂತನಿಗೆ ರಥ ಓಡಿಸು ಎಂದು ಸುಮ್ಮನೆ ಕುಳಿತು ಕೊಂಡಿಲ್ಲ. ಕಾರಣ ನಮ್ಮ ಈ ದೈಹಿಕ ಶರೀರದೊಳಗಿರುವ ಅನೇಕ ಶಕ್ತಿ ತಮ್ಮ ಕೆಲಸ ತಾವು ಮಾಡಲು ತಯಾರಿದ್ದಾರೆಂದ ಮೇಲೆ ಕೆಲಸ ಕೊಡದಿದ್ದರೆ ಶಕ್ತಿಹೀನವಾಗಿ ರಥ ನಡೆಯೋದಿಲ್ಲ. ಹಾಗೆ ರಥವನ್ನು ನಡೆಸೋ ಸಾರಥಿಯೂ ಹತ್ತಿರವಾಗೋದಿಲ್ಲ. ಎಲ್ಲಾ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೂ ಮೂಲ ಶಕ್ತಿಯಕಡೆಗೆ ರಥ ಓಡಿಸೋದು ಕಷ್ಟವೆ. ಒಟ್ಟಿನಲ್ಲಿ ಎಲ್ಲರ ಸಹಕಾರದಿಂದ ನಡೆಯೋದಕ್ಕೂ ನೇರವಾಗಿ  ಒಬ್ಬಂಟಿಯಾಗಿ  ರಥವನ್ನು ನಡೆಸೋದಕ್ಕೂ  ವ್ಯತ್ಯಾಸವಿದೆ. ಒಬ್ಬಂಟಿಯಾಗಿರುವ ರಥ ಯಾರೊಂದಿಗೂ ಯುದ್ದಕ್ಕೆ ಇಳಿಯೋದಿಲ್ಲ. ಯಾವಾಗ  ಇನ್ನೊಬ್ಬರ ಸಹಕಾರವಿರುವುದೋ ಆಗ  ಹೋರಾಟ ಹಾರಾಟ ಮಾರಾಟ ಹೆಚ್ಚಾಗಿ ಓಡಾಟದಲ್ಲಿ ರಥದ ಬಳಕೆ ದುರ್ಭಳಕೆ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ದೇಹದೊಳಗಿರುವ ಆತ್ಮನ ದರ್ಶನ ವಾಗದೆ ಓಡಿದಷ್ಟೂಜೀವಕ್ಕೆ  ಸುಸ್ತು. ಅದೇ  ನಡೆ ನುಡಿಯಲ್ಲಿ  ಸರಳ ಸ್ವಚ್ಚ ಶುದ್ದ ಸತ್ಯ ಸತ್ವ ತತ್ವವಿದ್ದಾಗ ರಥವು  ಪರಮಾತ್ಮನ ವಶವಾಗುತ್ತಾ  ನಿರಾತಂಕವಾಗಿ ಮುಂದೆ ಸಾಗುತ್ತದೆ.
ಅದಕ್ಕೆ ಮಹಾತ್ಮರಾದವರು ಒಳಗಿರುವ  ಜೀವಾತ್ಮನಿಗೆ ಪರಮಾತ್ಮನ ರಥದಲ್ಲಿ ಕುಳ್ಳಿರಿಸಲು ಸತತ ಪ್ರಯತ್ನಗಳನ್ನು ನಡೆಸುತ್ತಾ  ಮುಂದೆ ಸಾಗಿದ್ದಾರೆ.
ನಮ್ಮೊಳಗೆ ಇರುವ ಸಾರಥಿ ಯಾರು? ಯಾರ ಸಾರಥ್ಯದಲ್ಲಿ ನಮ್ಮ ಜೀವನ ರಥ ನಡೆಯುತ್ತಿದೆ. ಸಾರಥಿ ಎತ್ತ ಕಡೆ ನಡೆಸಿರುವನು.ಸಾರಥಿಯ ಗುರಿ ಯಾವುದು? ಎಲ್ಲವೂ ನಮ್ಮ ಜ್ಞಾನದ ಮೇಲೇ ನಿಂತಿರುವಾಗ  ಸತ್ಯ ತಿಳಿಯುವವರೆಗೆ  ಜೀವಕ್ಕೆ  ಸಾರಥಿಯ ಪರಿಚಯ ಆಗದು.
ಸಾರಥಿಯ ಪರಿಚಯವಾದಾಗ ಸತ್ಯ  ಬಿಡದೆ ನಡೆಯಬಹುದು. ಸತ್ಯದಲ್ಲಿ ‌ನಡೆದವರಿಗೆ ಸಮಾಜದಲ್ಲಿ ಬೆಲೆ ಸಿಗದು. ಹಾಗಂತ  ಸಮಾಜವು‌ಬದಲಾಗುತ್ತಲೇ ಇರೋವಾಗ
ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳದೆ ಬೇರೆಯವರನ್ನು ಬದಲಾಯಿಸಲಾಗದು. 
ಆಗೋದೆಲ್ಲಾ ಒಳ್ಳೆಯದಕ್ಕೆ. ಆಗೋದನ್ನು ತಡೆಯಲಾಗದು
ಆಗಿರೋದರ ಹಿಂದೆ ನಿಂತಿರುವ ಸಾರಥಿಯ ಬಗ್ಗೆ ಅರಿವಿದ್ದರೆ    ಜೀವನದ ರಥ ಸರಿಯಾದ ಮಾರ್ಗದಲ್ಲಿ ನಡೆಯುವುದು.
ಭಗವಂತನೆ  ಮುಂದೆ ಕುಳಿತು ಅರ್ಜುನನ ರಥವನ್ನು ನಡೆಸಿ ಧರ್ಮ ಕ್ಕೆ ಜಯ  ಸಿಗುವಂತೆ ಮಾಡಿದ ಕುರುಕ್ಷೇತ್ರ ಯುದ್ದ
ಇಂದಿಗೂ ಗೋಜಲಾಗಿರೋದಕ್ಕೆ ಕಾರಣ ಮಾನವ ತನ್ನ ಒಳಗೇ ಇದ್ದು ನಡೆಸೋ  ಆ ಸಾರಥಿಯನ್ನು ಸರಿಯಾಗಿ ನಡೆಯಲು ಬಿಡದೆ ಹೊರಗಿನವರ ಸಾರಥ್ಯದಲ್ಲಿ  ತಮ್ಮ ಜೀವನ  ನಡೆಸಿರೋದಾಗಿದೆ. ಇದನ್ನು ಜ್ಞಾನ ಎನ್ನಬೇಕೋ ವಿಜ್ಞಾನ ಎನ್ನಬೇಕೋ ಅಜ್ಞಾನ ಎನ್ನಬೇಕೋ ನಮಗೆ ಬಿಟ್ಟ ವಿಚಾರವಾಗಿದೆ. ನಾವೆಲ್ಲರೂ 'ಭಾ ರತ'ದ ನಿವಾಸಿಗಳು.
ಭಾ ರಥದಲ್ಲಿ ಕುಳಿತಿರುವೆವೋ ಎನ್ನುವ ಪ್ರಶ್ನೆ ಮಾಡಿಕೊಳ್ಳಲು  ಸಮಯವಿಲ್ಲದೆ  ಹೊರಗೆ ಓಡುತ್ತಿದ್ದರೆ ಸಾರಥಿಗೇನು ಕೆಲಸ? ನಾನೇ  ನನ್ನ ರಥ ನಡೆಸುತ್ತೇನೆಂದು ಎರಡೂ ಕಡೆ  ಓಡಿಸಿದರೆ  ಮುಂದೆ ಹೋಗದೆ ಹಿಂದೂ ಬರದೆ ಮಧ್ಯದಲ್ಲಿ  ರಥ ನಿಂತು  ಅತಂತ್ರಸ್ಥಿತಿಗೆ ತಲುಪುತ್ತದೆ.
ಎರಡೂ ಕಡೆಯಿಂದ ಶತ್ರುಗಳು ಬಂದಾಗ ಸೋಲುವುದು ಸಹಜ. ಹೀಗೇ ಅರಿಷಡ್ವರ್ಗವೆನ್ನುವ ಶತ್ರುಗಳು ಮಿತಿಮೀರಿ ದೇಹವನ್ನು ಆಕ್ರಮಣಮಾಡಿದಾಗ ಒಳಗಿರುವ ದೈವಶಕ್ತಿ ಮೌನವಾಗಿ ನೋಡೋದೇ ಸರಿ. ಜೀವಾತ್ಮ ಇರೋವಾಗಷ್ಟೆ ದೇಹವೆನ್ನುವ ರಥಕ್ಕೆ  ಸಾರಥಿಯ ಕೆಲಸ ಹೋದ ಮೇಲೆ ?

ಭೂಮಿಯನ್ನು ನಡೆಸೋದು ಪರಮಾತ್ಮ.ಮನುಕುಲವನ್ನು ನಡೆಸೋದು ಭೂ ತಾಯಿ. ಹಾಗಾದರೆ ಭೂಮಿಯ ರಥ ನಡೆಸೋದು  ಪರಮಾತ್ಮನ ಶಕ್ತಿಯಾದರೂ  ಭೂಮಿಯಲ್ಲಿ ಜನ್ಮ ಪಡೆಯುವ ಮಾನವನ ರಥದ ಮೂಲ ಭೂಮಿ. ಭೂಮಿಯನ್ನೇ ಬಿಟ್ಟು ಆಕಾಶದೆತ್ತರ ಹಾರೋದೇ ಜೀವನ ಆದರೆ  ಮೇಲಿನ ರಥ  ತಯಾರಾಗಿರುತ್ತದೆ. ಎಲ್ಲವೂ ನಮ್ಮ ಇಚ್ಚೆಯಂತೆ ನಡೆಯೋದಿಲ್ಲ ಆದರೂ ಎಲ್ಲಾ ನಮ್ಮ ಇಚ್ಚೆಯಂತೆ ನಡೆಯಬೇಕೆಂಬ ಆಸೆಯಲ್ಲಿಯೇ ಬದುಕೋದು
ಬಿಡೋದಿಲ್ಲ. ಇದನ್ನು ಮಾಯೆ ಎಂದರು. ಎಲ್ಲಾ ಒಮ್ಮೆ ಮಾಯವಾಗೋರೆ  ಎಂದಾಗ  ರಥವೂ ಮಾಯವಾಗುತ್ತದೆ. ನಡೆಸೋ ಸಾರಥಿ ಮಾತ್ರ  ಯಾವಾಗಲೂ ಮಾಯೆಯ ರೂಪದಲ್ಲಿರುತ್ತಾನೆ.

No comments:

Post a Comment