ಜ್ಞಾನದಿಂದ ಬ್ರಾಹ್ಮಣನಾಗೋದಕ್ಕೆ ಹಣದ ಅಗತ್ಯವಿರಲಿಲ್ಲ.ಸತ್ಯ ಧರ್ಮ ದ ಜ್ಞಾನವೇ ಅವರ ಬಂಡವಾಳವಾಗಿತ್ತು. ಆದರೆ ಸಮಾಜ ಅವರನ್ನು ಬಡವ ಎಂದು ಅಂದು ಕಾಣುತ್ತಿರಲಿಲ್ಲ ಕಾರಣ ಅವರು ಗುರು ಹಾಗು ಶಿಕ್ಷಕರಾಗಿ ಗೌರವದಿಂದ. ಜೀವನ ನಡೆಸಿದ್ದರು.
ಡಿ ವಿ.ಜಿ.ದ ರಾ ಬೇಂದ್ರೆ .ಇನ್ನಿತರ ಮಹಾಸಾಹಿತಿಗಳು ಹಣಕ್ಕಾಗಿ ಸಾಹಿತ್ಯ ರಚನೆ ಮಾಡಿರಲಿಲ್ಲ.ಅವರ ಒಳಗಿನ ಜ್ಞಾನದಿಂದ ಸಾಹಿತ್ಯ ಹೊರಬಂದಿತ್ತು. ಇದರಿಂದ ಸಮಾಜ ಸುಧಾರಣೆ ಮಾಡುವಷ್ಟು ಅಧಿಕಾರ ಹಣವಿರದಕಾರಣ ಇಂದಿಗೂ ಸಾಹಿತ್ಯ ತನ್ನ ದಾರಿ ತಪ್ಪಿ ನಡೆದಿದೆ. ಹಾಗೆ ಶಿಕ್ಷಣ ಹಾಗು ಧರ್ಮ ವೂ ದಾರಿತಪ್ಪಿದೆ. ಇದಕ್ಕೆ ಕಾರಣ ಅಜ್ಞಾನ.
ಬಡ ಬ್ರಾಹ್ಮಣಬಡ ರೈತ,ಬಡ ಸೈನಿಕ, ಬಡ ಶಿಕ್ಷಕ....
ಹೀಗೇಬಡಬಡಿಸುತ್ತಾ ತಮ್ಮ ಸ್ವಾರ್ಥ ಕ್ಕೆ ಬಡವರನ್ನುಬಳಸಿಕೊಂಡವರು ಇಂದಿಗೂ ಶ್ರೀಮಂತ ಅಜ್ಞಾನಿಗಳಾಗಿರುವರು. ಅವರ ಹಣಕ್ಕಾಗಿ ಜನ ಬೇಡುವರು.
ಒಳಗಿದ್ದ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಕೊಡದೆ ಆಳೋದು ಅಧರ್ಮ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಜ್ಞಾನ ದುರ್ಭಳಕೆ ಮಾಡಿಕೊಂಡು ಆಳೂ ಅರಸನಾಗುತ್ತಿರುವುದು ದುರಂತ.
ಒಬ್ಬ ರೈತನಿಗೆ ನಾಲ್ಕು ಮಕ್ಕಳಿರುವರು.ಅದರಲ್ಲಿ ಮೊದಲನೆಯವನಿಗೆ ಓದುಬರಹದಲ್ಲಿ ಆಸಕ್ತಿ ಇರದೆ ಭೂ ಸೇವೆ ಮಾಡಿಕೊಂಡು ತಂದೆಯೊಂದಿಗೆ ಕೆಲಸ ಮಾಡುವನು.
ಎರಡನೆಯವ. ತನ್ನ ಪಾಲಿಗೆ ಬಂದ ಭೂಮಿ ಮಾರಿ ರಾಜಕೀಯಕ್ಕೆ ಇಳಿದು ಆಳುವನು, ಮೂರನೆಯವ ಭೂಮಿಯ ಹಣದಲ್ಲಿ ವ್ಯಾಪಾರ ನಡೆಸಿದರೆ ನಾಲ್ಕನೆಯವ
ಹಣದಿಂದ ವೈಧ್ಯಕೀಯ ಶಿಕ್ಷಣ ಪಡೆದು ವೈಧ್ಯನಾದ.
ಈಗ ಇದರಲ್ಲಿ ಯಾರು ಬಡವರು ಶ್ರೀಮಂತ ರು?
ಅಧ್ಯಾತ್ಮ ದ ಪ್ರಕಾರ ಮೊದಲನೆಯವನಿಗೆ ಮುಕ್ತಿ ಹತ್ತಿರವಿದೆ. ಅವನ ಮೂಲ ಧರ್ಮ ಕರ್ಮ ಸರಿಯಾಗಿದೆ.
ಎರಡನೆಯವ ರಾಜಕೀಯದಿಂದ ಹಣಗಳಿಸಿ ದೊಡ್ಡ ವ್ಯಕ್ತಿ ಆದರೂ ಭೂಮಿ ಋಣ ತೀರಿಸಲು ತನ್ನ ಅಧಿಕಾರವನ್ನು ಧರ್ಮ ದಲ್ಲಿ ನಡೆಸಬೇಕು. ಮೂರನೆಯವನೂ ವ್ಯವಹಾರದಲ್ಲಿ ಧರ್ಮ ವಿರಬೇಕು. ಕಲಬೆರೆಕೆ ಅತಿಯಾದ ಲಾಭದ ಆಸೆ,ಮೋಸ ವಂಚನೆ ಇಲ್ಲದೆ ಇರಬೇಕು.
ನಾಲ್ಕನೆಯವ ಕಷ್ಟಪಟ್ಟು ಓದಲು ಭೂಮಿಯ ಹಣ ಬಳಸಿರುವಾಗ ಆಋಣ ತೀರಿಸಲು ಸೇವೆಯಲ್ಲಿ ಶುದ್ದವಿರಬೇಕು. ರೋಗಿಗಳ ಸೇವೆ ಮಾಡೋದರಿಂದ ಋಣ. ತೀರುತ್ತದೆ. ಇವೆಲ್ಲವೂ ಸುಲಭವೆ ಆಗಿದ್ದರೂ ಇಂದಿನ ಕಾಲದಲ್ಲಿ ಅಂತಹ ನಿಸ್ವಾರ್ಥ ಸೇವೆ ಮಾಡುವ ಜನರನ್ನು ಹಿಂದೆ ತಳ್ಳುವವರೆ ಹೆಚ್ಚು. ಕಾರಣವಿಷ್ಟೆ ಜ್ಞಾನ ಎಲ್ಲರಲ್ಲಿಯೂ ಒಂದೇ ಸಮನಾಗಿರದು.
ಆ ಒಂದೇ ಮನೆಯಲ್ಲಿ ಒಬ್ಬೊಬ್ಬರ ಅನುಭವ ಒಂದೊಂದು ದಿಕ್ಕಿನಲ್ಲಿ ಹರಡಿರುತ್ತದೆ.ಆದರೆ ಭೂಮಿಯ ಋಣ ಎಲ್ಲರಮೇಲೂ ಇರುತ್ತದೆ ಜೊತೆಗೆ ಒಂದೇ ತಂದೆತಾಯಿಯ ಮಕ್ಕಳಾಗಿರುವರು. ಹಣದಿಂದ ವ್ಯಕ್ತಿಯನ್ನು ಅಳೆಯುವುದೆ ಅಜ್ಞಾನ.
ಹೀಗಾಗಿ ಜ್ಞಾನಿಗಳಾದವರು ಹಣಕ್ಕಾಗಿ ಸೇವೆ ಮಾಡದೆ ಋಣಮುಕ್ತರಾಗಲು ಸೇವಕರಾದರು. ದಾಸರಾದರು,ಶರಣರಾದರು,ಮಹಾತ್ಮರಾದರು. ಅವರ ಹೆಸರಿನಲ್ಲಿ ಹಣಗಳಿಸಬಹುದು ಆದರೆ ಜ್ಞಾನಕ್ಕೆ ಅವರ ದಾರಿಯಲ್ಲಿ ನಡೆಯಬೇಕು.
ಈಗ ಹೇಗಿದೆ ರಾಮ ರಾಜ್ಯ? ರಾವಣರಾಜ್ಯ ಮಾಡುತ್ತಾ ವೈಭೋಗದೆಡೆಗೆ ಸಾಗಿದವರು ಜ್ಞಾನಿಗಳಾಗುವರು.
ಜೀವನಸತ್ಯ ತಿಳಿದು ಸ್ವತಂತ್ರ ವಾಗಿ ಸರಳ ಜೀವನ,ಸತ್ಯ ಧರ್ಮ ದಲ್ಲಿದ್ದವರಿಗೆ ಅವಮಾನ ಮಾಡುವರು.
ಮಾನಾಪಮಾನಗಳಿಗೆ ಅಂಜದೆ ಅಳುಕದೆ ಮುಂದೆ ನಡೆದವರು ಮಹಾತ್ಮರಾಗಿ ಪೂಜನೀಯ ಸ್ಥಾನ ಪಡೆದರು.
ಸಾಗರದ ಅಲೆಗಳು ಅಪ್ಪಳಿಸುತ್ತದೆ ಹಾಗಂತ ಸಾಗರಕ್ಕೆ ಸಮಸ್ಯೆ ಯಿರದು.ಅದರ ಕೆಳಭಾಗ ಶಾಂತವಾಗಿರುತ್ತದೆ.
ಹಾಗೆ ಜೀವನದಲ್ಲಿ ಬರುವ ಅಡೆತಡೆಗಳನ್ನು ದಾಟಿ ಮುಂದೆ ನಡೆಯುವುದೆ ಸಾಧನೆ. ಇದರಲ್ಲಿ ಸತ್ಯ ಧರ್ಮ ಇದ್ದರೆ ನಿಧಾನ. ಅಸತ್ಯ ಅಧರ್ಮ ವಿದ್ದರೆ ನಿಧನ.ಇದ್ದೂ ಸತ್ತಂತೆ ಎನ್ನುವರಲ್ಲ ಇದೇ ಕಾರಣಕ್ಕಾಗಿ. ಸತ್ಯ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ. ಕಷ್ಟಪಟ್ಟರೆ ಸುಖವಿದೆ...
ಬ್ರಾಹ್ಮಣನ ಕಷ್ಟ ಕ್ಷತ್ರಿಯನಿಗೆ ಅರ್ಥ ವಾಗದು,ಕ್ಷತ್ರಿಯನ ಕಷ್ಟ ವೈಶ್ಯನಿಗಾಗಿರದು ಹಾಗೆ ಶೂದ್ರರ ಕಷ್ಟ .
ಇಂದು ಸೇವೆ ಮಾಡೋರೆಲ್ಲರೂ ಶೂದ್ರರೆ. ದೇಶ ಸೇವೆ ಮಾಡೋದು ಪುಣ್ಯ ಸೇವೆ. ಇದು ನಿಸ್ವಾರ್ಥ ನಿರಹಂಕಾರ ದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದವರು ಮಹಾತ್ಮರು.
ಶ್ರೀ ಕೃಷ್ಣ ಸುಧಾಮನಕಥೆ ಗೊತ್ತಲ್ಲ. ಸುಧಾಮನಿಗೆ ಅರಮನೆಯಂತಹ ಮನೆ ಕಟ್ಟಿಕೊಡುತ್ತೇನೆಂದಾಗ ಅವನು ನೀನು ಕಟ್ಟಿಕೊಡುವುದಾದರೆ ನಮ್ಮ ನಗರದಲ್ಲಿರುವ ಎಲ್ಲಾ ಬಡಬ್ರಾಹ್ಮಣರಿಗೆ ಕೊಡು ಇಲ್ಲಾಂದರೆ ನನಗೆಬೇಡ ಎಂದನಂತೆ.ಅಂದರೆ ಜ್ಞಾನಿಗಳಿಗೆ ಬೇಧವಿರದು. ಬೇಡೋದೂ ಇಷ್ಟವಾಗದು. ಕೊಡೋನುಮೇಲಿರುವಾಗ ಯಾರ ಮೂಲಕವಾದರೂ ಕೊಡುವನೆಂಬ ದೃಢ ಆತ್ಮವಿಶ್ವಾಸ ವಾಗಿರುತ್ತದೆ. ಕೊಟ್ಟದ್ದನ್ನು ಸದ್ಬಳಕೆಯಾದರೆ ಉತ್ತಮ ಜೀವನ.
No comments:
Post a Comment