ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Monday, June 2, 2025

ಭಾಷೆ ಎಂದರೆ ಮಾಧ್ಯಮ

ಭಾಷೆ ಎನ್ನುವುದು ಒಂದು ಮಾದ್ಯಮ. ಈ ಮಾದ್ಯಮ ಕಲಬೆರೆಕೆಯಾದಷ್ಟೂ ಸಮಸ್ಯೆ. ಒಟ್ಟಿನಲ್ಲಿ  ಮಾತು ಬೆಳ್ಳಿ ಮೌನ ಬಂಗಾರವೆಂದರು. ಬೆಳ್ಳಗಿರೋದೆಲ್ಲ ಹಾಲಲ್ಲ ಬೆಳ್ಳಿಯೂ ಆಗಿರೋದಿಲ್ಲ. ಹೀಗಿರುವಾಗ ಮೌನ ವಾಗಿ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಜೀವನ.
ಎಷ್ಟು ಮಾತಿನಿಂದ ಒಲಿಸಿಕೊಂಡರೂ  ಓಲೈಕೆ  ಭಾಷೆಯನ್ನು ರಕ್ಷಣೆ ಮಾಡುವುದಾದರೆ ಸರಿ. ಅನ್ಯ ಭಾಷೆ   ಅವರವರ ಸಂಪತ್ತು. ಅದೇ ನಮಗೆ ಆಪತ್ತನ್ನು ತಂದರೆ  ವ್ಯರ್ಥ. ನಮ್ಮ ಭಾರತೀಯರ ಒಂದು ದೋಷವೇನೆಂದರೆ  ನಮ್ಮ ಅಧಿಕಾರ ಹೆಸರು ಸ್ಥಾನಮಾನ ಉಳಿಸಿಕೊಳ್ಳಲು ‌ ಅನ್ಯರನ್ನು ಸ್ವಾಗತಿಸಿ ಅತಿಥಿ ಸತ್ಕಾರ ಮಾಡುತ್ತಾ ಕೊನೆಗೆ ತಮ್ಮ ಭಾಷೆ ಬಿಟ್ಟು ಹೋಗಿರುವುದಾಗಿದೆ.ಈಗಲೂ ಅದೇ ರೀತಿಯಲ್ಲಿ ಹೋರಾಟ ಹಾರಾಟ‌ ಮಾರಾಟ ಹೊರಗೆ ನಡೆದಿದೆ.ಒಳಗಿನ ಭಾಷೆ  ಹಿಂದುಳಿದಿದೆ. ಇದಕ್ಕೆ ಹಿಂದೂಗಳ ಸಹಕಾರವೇ ಕಾರಣವಾಗಿದೆ. 
ಭಾಷೆ ಎಂದರೆ ಮಾತು ಆಗಬಹುದು. ಯಾರೊಂದಿಗೆ ಮಾತನಾಡಬೇಕು ಯಾವ ಭಾಷೆ ಕಲಿಯಬೇಕು ಹೇಗೆ ಬಳಸಬೇಕು‌ ಎನ್ನುವ ಜ್ಞಾನ ಭಾಷೆಯಿಂದ ಸಿಗಬೇಕು.
ಮೌನವಾಗಿರುವಾಗಲೂ ಒಳಗೆ ಭಾಷೆ ಮಾತನಾಡುತ್ತದೆ.
ಆದರೆ ಇದು ನಮಗಷ್ಟೆ ಕೇಳುತ್ತದೆ. ಸತ್ಯವಿದ್ದರೆ ಭಾಷೆ ಉಳಿಯುತ್ತದೆ. ಅಸತ್ಯವಿದ್ದರೆ ಭಾಷೆ ಹಿಂದುಳಿಯುತ್ತದೆ.
ಒಟ್ಟಿನಲ್ಲಿ ಒಳಗಿದ್ದು ಭಾಷೆ ರಕ್ಷಣೆ ಮಾಡಿದಂತೆ ಧರ್ಮ ಸಂಸ್ಕೃತಿಯನ್ನು  ಒಳಗೇ ಬೆಳೆಸಿದರೆ  ಸಮಸ್ಯೆ ಇರದು.
ಯಾವಾಗಿದು‌ ಬೆಳೆಸದೆ ಅಪಾರ್ಥ ಮಾಡಿಕೊಂಡು ಹೊರಗೆಳೆದು  ವ್ಯವಹಾರಕ್ಕೆ ಬಳಸುವರೋ  ಹಣವಿದ್ದರೂ ಸಮಸ್ಯೆ ಇಲ್ಲದಿದ್ದರೂ ಸಮಸ್ಯೆ. ಭಾಷೆಯಿಂದ ಜ್ಞಾನೋದಯ. ಶಿಕ್ಷಣದಲ್ಲಿಯೇ ಅನ್ಯಭಾಷೆ ಪ್ರಥಮ ಸ್ಥಾನಮಾನ ಪಡೆದಿರುವಾಗ  ಯಾರೋ ಹೊರಗಿನವರು ಬಂದು ಭಾಷೆ ಹಾಳು‌ಮಾಡಿದರೆಂದರೆ ಇದಕ್ಕೆ ಸಹಕಾರ ಕೊಟ್ಟವರು ನಾವೇ ಎನ್ನುವುದು  ಸತ್ಯ. ಹಾಗಾದರೆ ಭಾಷೆ ಯಾರು ತಪ್ಪಿರುವುದು?
"ಕೊಟ್ಟ ಮಾತಿಗೆ ತಪ್ಪಿ‌ನಡೆದರೆ ಮೆಚ್ಚನಾ  ಪರಮಾತ್ಮನು"
ದಾಸರ ವಚನಗಳಲ್ಲಿ  ಶರಣರ ಸಾಹಿತ್ಯವನ್ನು ವೇದ ಶಾಸ್ತ್ರ ಪುರಾಣಗಳನ್ನು  ಅರ್ಥ ಮಾಡಿಕೊಳ್ಳಲು ಮಾತೃಭಾಷೆಯ ಅಗತ್ಯವಿದೆ. ಯಾವಾಗಿದು  ಬೇರೆ ಭಾಷೆಗಳಿಂದ ಬೇರೆ ಬೇರೆ ಅರ್ಥ ಪಡೆದು  ಹೊರಬಂದಿತೋ  ಆಗಲೇ ಅರ್ಧ ಸತ್ಯದ  ಭಾಷಾಂತರದಲ್ಲಿ ಸತ್ಯ ಹಿಂದುಳಿಯಿತು.ಸತ್ಯ ಇಲ್ಲದೆ ಜ್ಞಾನ‌ಬೆಳೆಯಿತು. ಜ್ಞಾನವೇ ಅಜ್ಞಾನವಾದಾಗ  ಮಾನವನಿಗೆ ಭಾಷೆಯ ಮಹತ್ವ  ಅರಿಯದಾಯಿತು. ಎಷ್ಟೋ ಗ್ರಂಥಗಳು ಉಚಿತವಾಗಿ  ಸಿಗಬಹುದು.ಆದರೆ ಅದನ್ನು ನಮ್ಮ ಸ್ವಂತ ಭಾಷೆಯಲ್ಲಿ  ತಿಳಿಸುವವರಾಗಲಿ ತಿಳಿಯುವವರಾಗಲಿ ಸಿಗೋದಿಲ್ಲ.
ಸತ್ಯವೇ ದೇವರೆಂದು  ಎಲ್ಲಾ ಭಾಷೆ ತಿಳಿಸುತ್ತದೆ.ಹಾಗಂತ ಎಲ್ಲಾ ಸತ್ಯ ಹೇಳೋದಿಲ್ಲ. ಹಾಗಾದರೆ ಜ್ಞಾನ ಬರುವುದೆ?
ಸಣ್ಣ ವಿಷಯ ಅರ್ಥ ಆದರೆ ದೊಡ್ಡ ವಿಚಾರ ಅರ್ಥ ಮಾಡಿಕೊಳ್ಳಲು ಸಾಧ್ಯ.ಸಣ್ಣ ವಿಷಯ‌ನಿರ್ಲಕ್ಯ ಮಾಡಿ ದೊಡ್ಡ ವಿಷಯಕ್ಕೆ ಲಕ್ಷ ಹಣ ‌ಕೊಟ್ಟರೆ  ಅಜ್ಞಾನವಲ್ಲವೆ?
ಭೂತ ಭವಿಷ್ಯದ‌ನಡುವಿರುವ ವಾಸ್ತವದಲ್ಲಿ ಭಾಷೆ ಎಷ್ಟು ಬೆಳೆದಿದೆ ಹಾಳಾಗಿದೆ ಎನ್ನುವ ಅರಿವಿದ್ದರೆ ನಮ್ಮ ಭಾಷೆ ನಮ್ಮ ಜ್ಞಾನ ಎರಡೂ ಒಳಗೇ ರಕ್ಷಣೆ ಆಗಬಹುದು. ಅನ್ಯರನ್ನು ಪ್ರಶ್ನೆ ಮಾಡೋ ಮೊದಲು ನಮ್ಮವರನ್ನೇ ಪ್ರಶ್ನೆ ಮಾಡೋದು ಉತ್ತಮ. ಉತ್ತರ ಕೊಡದಿದ್ದರೆ  ಮೌನವಾಗಿ  ಭಾಷೆಯ ಕಡೆ ಇರಬೇಕು.ಅಶಾಂತಿಯಲ್ಲಿ  ಭಾಷೆಯ ಆಳ ಅಗಲ ಅರ್ಥ ಆಗದು. ಪ್ರಶಾಂತವಾಗಿದ್ದರೆ  ಭಾಷೆ  ಯಾವ ರಾಜಕೀಯವಿಲ್ಲದೆ ಸ್ವತಂತ್ರವಾಗಿ ಬೆಳೆಯುತ್ತದೆ. ಮಕ್ಕಳಿಗೆ ಭಾಷೆ ಕಲಿಸುವ ಮೊದಲು ಪೋಷಕರ ಭಾಷೆ ಎಷ್ಟು ಶುದ್ದವಿದೆ ಎನ್ನುವ ಅರಿವಿರಬೇಕು.
ತಪ್ಪು ಎಲ್ಲರಲ್ಲಿಯೂ ಇದೆ. ಅಧಿಕಾರ ಹಣ ಸ್ಥಾನವಿದ್ದರೆ ತಪ್ಪು ಹೊರಗೆ  ಪ್ರಚಾರ ಮಾಡುವರು.ಇದರಿಂದಾಗಿ  ಸಮಸ್ಯೆ  ಬೆಳೆಯುತ್ತದೆ. ಆಚಾರ ವಿಚಾರ ಪ್ರಚಾರ ಮಾಧ್ಯಮಗಳು  ಭಾಷೆಯನ್ನು ವ್ಯವಹಾರಕ್ಕೆ ಬಳಸಿ ಒಳಗಿದ್ದ ಸತ್ಯ ಧರ್ಮ ಸತ್ವ ತತ್ವ ಹಿಂದುಳಿದರೆ  ಪರಮಾತ್ಮ ‌ಮೆಚ್ಚುವುದಿಲ್ಲ.
ವ್ಯಾಮೋಹ  ಅತಿಯಾದರೆ   ಮುಕ್ತಿ ಮೋಕ್ಷವಿಲ್ಲ ಎಂದಿರುವರು ಮಹಾತ್ಮರಾದವರು.
ನಿಮ್ಮ‌ನಿಮ್ಮ ‌ಮನವ ಸಂತೈಸಿಕೊಳ್ಳಿ ನಿಮ್ಮ‌ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ‌ನಿಮ್ಮ ಭಾಷೆಯನ್ನು ಉಳಿಸಿಕೊಳ್ಳಿ ನಿಮ್ಮ ನಿಮ್ಮ ಧರ್ಮ ಕರ್ಮ ಕ್ಕೆ ಋಣಿಯಾಗಿರಿ.ಇರುವ ನೆಲ ಜಲದ ಋಣ ತೀರಿಸುವ ಸತ್ಕರ್ಮದಿಂದ  ಋಣಮುಕ್ತರಾಗೋದಕ್ಕೆ  ಜ್ಞಾನದ ಶಿಕ್ಷಣ ಪಡೆಯಿರಿ. ಆಂತರಿಕ ಶುದ್ದಿಯಾಗದೆ  ಹೊರಬಂದರೆ ರೋಗವೇ ಗತಿ.
ಪ್ರಕೃತಿಯನ್ನು ಆಳೋದಕ್ಕೆ ಹೊರಟವರಿಗೆ ಮುಕ್ತಿ ಸಿಕ್ಕಿದೆಯೆ?
 ಯಾರಿಗೂ ಗೊತ್ತಿಲ್ಲದ ಅನುಭವಕ್ಕೆ ಬರದ ವಿಚಾರವನ್ನು ತಲೆಗೇರಿಸಿದರೆ  ಅನರ್ಥ ವಾಗುತ್ತದೆ. ಅರ್ಥ ವಾಗುವ ಭಾಷೆಯಿಂದ ಜ್ಞಾನ ಬೆಳೆಯುತ್ತದೆ. ಇದಕ್ಕಾಗಿ ಎಷ್ಟೋ ‌ಮಹಾತ್ಮರುಗಳು‌ ಮಾತೃಭಾಷೆಯನ್ನು ಬಿಡದೆ ಜ್ಞಾನಿಗಳಾದರು. 
ಸಂಸ್ಕೃತ ಭಾಷೆಯಲ್ಲಿ ಸಾಕಷ್ಟು ಜ್ಞಾನವಿತ್ತು.ಶಿಕ್ಷಣದಿಂದ ದೂರವಾದಂತೆ  ಇಂದು ಅಜ್ಞಾನ ಬೆಳೆದಿದೆ. ಹಾಗಂತ ಸಂಸ್ಕೃತ  ಕಲಿತವರೆಲ್ಲರೂ ಜ್ಞಾನಿಗಳಾಗಿಲ್ಲ.ಕಾರಣ ಭಾಷೆಯ ಗೂಡಾರ್ಥ ವನ್ನು ಅನುಭವಿಸಿಯೇ ಜ್ಞಾನ ಬರೋದು. ರಕ್ತಗತವಾಗಿ ಬಂದಿರುವ ಮಾತೃಭಾಷೆಯಲ್ಲಿ ಮಕ್ಕಳ ಜ್ಞಾನ  ಬೆಳೆಯುತ್ತದೆನ್ನುವ ಕಾರಣದಿಂದ ಮಾತೃಭಾಷೆಯ ಶಿಕ್ಷಣ ಕಡ್ಡಾಯಗೊಳಿಸುವ ಹೋರಾಟ ನಡೆದಿತ್ತು. ಪೋಷಕರೆ ಅರ್ಥ ಮಾಡಿಕೊಳ್ಳಲು ಸೋತರೆ ಮಕ್ಕಳ ಗತಿ ಏನು?ಎಲ್ಲಾ ಕಲಿಕಾ ಮಾಧ್ಯಮದ ಪ್ರಭಾವ.
ಇದನ್ನು ಹೊರಗಿನ‌ಮಾಧ್ಯಮಗಳು ತಮ್ಮ ವ್ಯವಹಾರಕ್ಕೆ ಬಳಸಿ ಜನರನ್ನು ಹೊರಗೆಳೆದರೆ ಮುಗಿಯಿತು ಕಥೆ.

ಎಲ್ಲಾ ಸಮಸ್ಯೆ ಮಧ್ಯವರ್ತಿಗಳು ಮಾದ್ಯಮ ಗಳು ಮಹಿಳೆಯರು,ಮಕ್ಕಳು  ಅರ್ಧ ಸತ್ಯವನರಿತು ಬೆಳೆಸಿದರೆ ಅದರ ಪ್ರತಿಫಲ ಹಾಗೇ ಇರುತ್ತದೆ. ಮೇಲಿರುವ ದೈವಶಕ್ತಿ ಕೆಳಗಿರುವ ಅಸುರಶಕ್ತಿಯ ನಡುವಿರುವ ಮಾನವಶಕ್ತಿಯ ಭಾಷೆ  ಯಾರೂ ಅರ್ಥ ಮಾಡಿಕೊಳ್ಳದಿದ್ದರೆ ಮನುಕುಲಕ್ಕೆ  ಕಷ್ಟ ನಷ್ಟ. ಭಾಷೆ ಇರೋದೆಲ್ಲಿ? ಒಳಗೋ ಹೊರಗೋ?

ನನ್ನ ಲೇಖನಗಳ ಮೊದಲ ಪುಸ್ತಕವೇ "ಮಾತೃಭಾಷಾ ಶಿಕ್ಷಣದ‌ಮಹತ್ವ" ಇವನ್ನು ಹಿಡಿದುಕೊಂಡು ಎಷ್ಟೋ ಸಾಹಿತ್ಯ‌ಕ್ಷೇತ್ರ ಧಾರ್ಮಿಕ ಕ್ಷೇತ್ರ ಸಂಘ ಸಂಸ್ಥೆ ಶಾಲೆ ತಿರುಗಿದರೂ  ಅದನ್ನು ಗಮನಿಸುವಷ್ಟು  ಸಮಯವಿಲ್ಲದೆ ಅಥವಾ  ಸಾಮಾನ್ಯರ ವಿಚಾರವೆಂದು‌ನಿರ್ಲಕ್ಯ ಮಾಡಿ ಈವರೆಗೆ  ಭಾಷೆ ರಕ್ಷಣೆಗಾಗಿ ಹೋರಾಟ ಹಾರಾಟ ಮಾರಾಟ ನಡೆದಿದೆ.  ಇದರಿಂದ ಬೆಳೆದವರು ಯಾರು?

No comments:

Post a Comment