ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Sunday, June 1, 2025

ವಿದ್ಯೆ ಬುದ್ದಿ ಜ್ಞಾನದೇವತೆ

ವಿದ್ಯಾ ಬುದ್ದಿ ಜ್ಞಾನ‌ಕೊಟ್ಟು ಕರುಣಿಸು ತಾಯಿ ಎಂದು ಬೇಡುವರು. ಇದರಲ್ಲಿ ವಿದ್ಯೆಯಿಂದ‌ಬುದ್ದಿ ಕಲಿತು ಜ್ಞಾನದಿಂದ ಜೀವನ ನಡೆಸುವುದು ಧರ್ಮ. ಹಾಗಾದರೆ ವಿದ್ಯೆ ಧರ್ಮ ಪರವಿರದಿದ್ದರೆ ಎಷ್ಟು ಜ್ಞಾನಗಳಿಸಿದರೂ ಬುದ್ದಿಶಕ್ತಿ  ವ್ಯರ್ಥ. ತಾಯಿಯ ಗರ್ಭದೊಳಗಿರುವಾಗಲೇ  ಗರ್ಭ ಸಂಸ್ಕಾರದ ಮೂಲಕ  ಹುಟ್ಟುವ ಮಗುವನ್ನು ಶುದ್ದಗೊಳಿಸಿ‌ ಹುಟ್ಟಿದ ‌ನಂತರ  ಹೊರಗಿನ ವಿದ್ಯೆ ಕಲಿಸಿದರೆ ಏನು ಬಂತು ಜ್ಞಾನ?
 ಭಾರತೀಯರ ಈ ಸ್ಥಿತಿಗೆ ಕಾರಣವಾಗಿರುವ ಇಂದಿನಶಿಕ್ಷಣ ಪದ್ದತಿಯನ್ನು  ಪೋಷಕರೆ  ಒಪ್ಪಿಕೊಂಡು ಮಕ್ಕಳ ತಲೆಗೆ  ತುಂಬುವ ವಿದ್ಯೆ ಕಲಿಸಲು  ಶಾರದಾಪೀಠಗಳಲ್ಲಿ ಅಕ್ಷರಾಭ್ಯಾಸ  ಮಾಡಿಸುವರು. ನಾವೇನು ಕೇಳುವೆವೋ ಅದನ್ನು ಕೊಡುವುದು ದೇವರ ಕೆಲಸ. ಅದರ ಫಲವನ್ನು ನಾವೇ ಅನುಭವಿಸುವುದೆನ್ನುವುದೂ ಅಷ್ಟೇ ಸತ್ಯ.  ಹಾಗಾದರೆ  ಎಲ್ಲದ್ದಕ್ಕೂ ಕಾರಣವೇ  ನಮ್ಮ ‌ಬೇಡಿಕೆಯಾಗಿದೆ.
ಇದು ಸರ್ಕಾರವಾಗಬಹುದು, ದೇವರಾಗಬಹುದು, ಪೋಷಕರಾಗಬಹುದು, ಶ್ರೀಮಂತ ‌ಬಡವನಾಗಿರಬಹುದು.ಅವರವರ ಜ್ಞಾನಕ್ಕೆ ತಕ್ಕಂತೆ ಬೇಡುವರು. ಎಲ್ಲರಲ್ಲಿಯೂ  ಜ್ಞಾನವಿದೆ. ಆದರೆ ಅದರಲ್ಲಿ ಸತ್ಯ ಮಿಥ್ಯವೂ ಇರುತ್ತದೆ. ಸತ್ಯಜ್ಞಾನಕ್ಕೆ ಸಂಸ್ಕಾರದ ವಿದ್ಯೆ ಬುದ್ದಿ   ಶಿಕ್ಷಣ ಮತ್ತು ಗುರು ಅಗತ್ಯವಿದೆ.
ಎಲ್ಲಿಯವರೆಗೆ  ಅಂತಹ ಗುರು ಸಿಗುವುದಿಲ್ಲವೋ ಅಲ್ಲಿಯವರೆಗೆ  ಸತ್ಯ ಅರಿವಾಗದು. ಗುರು ವ್ಯಕ್ತಿಯಲ್ಲ ಶಕ್ತಿ.
ಇಲ್ಲಿ ಲಿಂಗಬೇಧವಿಲ್ಲ ಧರ್ಮ ಬೇಧ  ಜಾತಿ ಬೇಧ...ಯಾವುದೂ  ಶಕ್ತಿಯಲ್ಲಿರದು. ಆದರೆ ಆಶಕ್ತಿಯನ್ನು ತನ್ನ ವಶದಲ್ಲಿಟ್ಟುಕೊಂಡ ವ್ಯಕ್ತಿಯಲ್ಲಿದ್ದರೆ ಅಧರ್ಮ ವೇ ಬೆಳೆಯುತ್ತದೆ. 
ಒಂದು ಕಲ್ಲನ್ನು ದೇವರೆಂದು ಪೂಜಿಸುವ ಮಾನವನಿಗೆ  ಮಕ್ಕಳಲ್ಲಿ ದೈವತ್ವ ತುಂಬುವ ಶಕ್ತಿಯಿಲ್ಲವೆಂದರೆ  ಏನರ್ಥ.
ಒಟ್ಟಿನಲ್ಲಿ ಕಲಿಯುಗದ ಕಲಿಕೆಯೇ ಅಜ್ಞಾನದೆಡೆಗೆ ಸಾಗಿದರೆ  ಒಳಗೆ ಸೇರಿಸಿಕೊಂಡ ಅಜ್ಞಾನವೇ ಜಗತ್ತನ್ನು ಆಳುತ್ತದೆ.
ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಹೋರಾಟ ಹಾರಾಟ‌ ಮಾರಾಟದೊಳಗಿರುವ ರಾಜಕೀಯ  ಪ್ರೇರಿತ ದ್ವೇಷವನ್ನು ದೇವರು ಕೊಟ್ಟಿರುವುದೆ? ಅಥವಾ ಮಾನವರ ಸೃಷ್ಟಿ ಯೆ?
ಅಸುರರಾದರೂ  ಒಮ್ಮೆ ‌ಬದಲಾಗಬಹುದು.ಮಾನವನನ್ನು ಬದಲಾಯಿಸೋದು ಅಸಾಧ್ಯ.
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಏನು ಕಲಿತೆವೋ ಅದೇ  ನಮಗೆ ಬುದ್ದಿ ಕಲಿಸುತ್ತದೆ. ಅದು ಸತ್ಯಜ್ಞಾನವಾದರೆ ಶಾಂತಿ. ಇಲ್ಲವಾದರೆ ಕ್ರಾಂತಿ.

No comments:

Post a Comment