*ಸ್ಪೂರ್ತಿ ಕಿರಣ*
*ಒಳ್ಳೆಯ ಮುಖಗಳ ಪರಿಚಯ ಎಷ್ಟಾದರೂ ಸಿಗಬಹುದು*,
*ಆದರೆ*....
*ಒಳ್ಳೆಯ ಮನಸ್ಸಿರುವವರ ಪರಿಚಯ ಸಿಗುವುದು ನಮ್ಮ ಅದೃಷ್ಟದಿಂದ ಮಾತ್ರ.ಅಸಫಲ ಎನ್ನುವುದು ಒಂದು ಸವಾಲಿದ್ದಂತೆ*. *ಸ್ವೀಕರಿಸಿ,ಎಲ್ಲಿ ಎಡವಿದೆವೆಂದು ಯೋಚಿಸಿ ಸುಧಾರಣೆ ಮಾಡಿಕೊಂಡು ಮುನ್ನಡೆಯಬೇಕು*.
*ಮತ್ತೆ ಮತ್ತೆ ಪ್ರಯತ್ನ ಮಾಡುವವರಿಗೆ ಎಂದಿಗೂ ಸೋಲಿರುವುದಿಲ್ಲ.**...
ಮುಖನೋಡಿ ಮಣೆ ಹಾಕುವುದು ತಪ್ಪು ಎನ್ನುವರು.ಹಾಗೆ ಮನಸ್ಸನ್ನು ನೋಡಿ ಮಣೆ ಹಾಕೋದು ಕಷ್ಟವಿದೆ. ಯಾರಿಗೂ ಯಾರ ಮನಸ್ಸೂ ಪೂರ್ಣ ಅರ್ಥ ವಾಗದು. ಮನಸ್ಸಿನ ಮೂಲೆ ಮೂಲೆಯಲ್ಲಿರುವ ಒಳ್ಳೆಯ ಕೆಟ್ಟ ಗುಣಗಳು ಮಾತನಾಡುವಾಗ ಇಣುಕಿ ಹೋಗುತ್ತವೆ. ಆದರೆ ಮನುಷ್ಯ ಎಂದ ಮೇಲೆ ಇವು ಇದ್ದೇ ಇರುತ್ತದೆನ್ನುವುದು ಸತ್ಯ. ಒಳ್ಳೆಯದನ್ನು ನೋಡುವ ಶಕ್ತಿಯಿದ್ದರೆ ಒಳ್ಳೆಯದು ಬೆಳೆಯುತ್ತದೆ. ಕೆಟ್ಟದ್ದನ್ನು ನೋಡುವವರಿಗೆ ಕೆಟ್ಟದ್ದೇ ಕಾಣುತ್ತದೆ.
ಹಾಗಾದರೆ ಒಳ್ಳೆಯದು ಯಾವುದು?
ಸತ್ಯ ಹೇಳುವುದು ಒಳ್ಳೆಯದಾದರೆ ಸತ್ಯ ಯಾವುದು? ಹೀಗೇ ಹಲವು ದಿಕ್ಕುಗಳಿಗೆ ಹಲವು ಸತ್ಯಧರ್ಮ ಹೊರಗೆ ಬೆಳೆದಿವೆ.
ಆದರೆ ಎಲ್ಲರಲ್ಲಿಯೂ ಅಡಗಿರುವ ಒಂದೇ ಸತ್ಯಕ್ಕೆ ಒಂದೇ ದಿಕ್ಕು. ಹೀಗಾಗಿ ಆ ಒಂದೇ ದಿಕ್ಕಿನೆಡೆಗೆ ನಡೆಯುವಾಗ ಕೆಟ್ಟವರು ಒಳ್ಳೆಯವರು ಅಡ್ಡಬರಬಹುದು. ಅಡ್ಡ ಬಂದಾಗ ನಿಂತು ನಮ್ಮಲ್ಲಿ ಏನಾದರೂ ತಪ್ಪಾಗಿದೆಯೆ ಎಂದು ಪ್ರಶ್ನೆ ಮಾಡಿಕೊಳ್ಳಲು ಸಮಯಸಿಕ್ಕಿದೆ ಎನ್ನುವ. ತಾಳ್ಮೆ ನಮಗಿದ್ದರೆ ಇಲ್ಲಿ ಎಲ್ಲಾ ಒಳ್ಳೆಯವರೆ ಆಗಿರುವರು.
ಕೆಟ್ಟದ್ದನ್ನು ಬೆಳೆಸುವುದರಿಂದ ಕೆಟ್ಟದ್ದೆ ಆಗುತ್ತದೆ ಎನ್ನುವರು
ಒಳ್ಳೆಯವರು. ಆದರೆ ಅವರನ್ನು ಕೆಟ್ಟವರು ಎಂದರೆ ಸತ್ಯ ಮುಂದೆ ಅರಿವಿಗೆ ಬರೋದಿಲ್ಲ. ಕೆಲವರಿಗೆ ಅದೇ ಕೆಲಸ ಮಾಡೋದೇ ಒಳ್ಳೆಯದೆನಿಸುತ್ತದೆ. ಸಾಮಾನ್ಯವಾಗಿ ಜನಸೇವೆ ಮಾಡೋದು ದೇವರ ಸೇವೆ ಮಾಡೋದು ಎಲ್ಲಾ ಒಳ್ಳೆಯದೆ ಆದರೆ ಅದಕ್ಕೆ ಹಣಗಳಿಸಲು ಕೆಟ್ಟ ಕೆಲಸಕ್ಕೆ ಸಹಕಾರ ಕೊಡೋದು,ಮಾಡೋದರಿಂದ. ಅದು ಸೇವೆ ಆಗದು. ನೋಡುವವರಿಗಷ್ಟೆ ಒಳ್ಳೆಯವರು.ಒಳಗಿನ ಮನಸ್ಸು ದಾರಿತಪ್ಪಿ ಕೆಟ್ಟಕರ್ಮಕ್ಕೆ ತೊಡಗಿರುವುದನ್ನು ಸ್ವತಃ ಅರಿತು ನಿಸ್ವಾರ್ಥ ನಿರಹಂಕಾರ ಹಾಗು ಸ್ವಚ್ಚ ಮನಸ್ಸಿನಿಂದ ಇದ್ದದ್ದರಲ್ಲಿ ಹಂಚಿ ಜೀವನ ನಡೆಸೋದರಿಂದ ಮೇಲಿನ ಪರಮಾತ್ಮನ ದರ್ಶನ. ಪರಮಾತ್ಮನ ಸೇವೆಗೆ ದಾಸ ಶರಣರು ಸಂತರು ಮಹಾತ್ಮರುಗಳು ಒಳ್ಳೆಯವರಂತೆ ವೇಷ ಧರಿಸದೆ ನೇರವಾದ ನಡೆ ನುಡಿಯಲ್ಲಿ ಸತ್ಯ ದೆಡೆಗೆ ನಡೆದರು. ಆದರೆ ಕಾಣುವ ಜಗತ್ತಿಗೆ ಅವರ ಒಳ್ಳೆಯ ಗುಣ ಜ್ಞಾನ ಕಾಣದೆ ಹೀಯಾಳಿಸಿತ್ತು. ಅವರೊಂದಿಗೆ ಹೊರಟವರಿಗಷ್ಟೆ ಉತ್ತಮ ಗುಣ ಕಂಡಿತ್ತು ಎಂದರೆ ಒಳ್ಳೆಯವರಲ್ಲಿ ಹಣದ. ಕೊರತೆ ಇರುತ್ತದೆ. ಹಣವಿಲ್ಲದೆ ಜನಸೇವೆ ಮಾಡಲಾಗದು.ಜನಸೇವೆ ಮಾಡದವರನ್ನು ಜನ ಹಿಂಬಾಲಿಸದ ಕಾರಣ ಅವರ ಸಂಗ ಸಣ್ಣದಾಗಿದ್ದರೂ ಸ್ವಚ್ಚವಾಗಿರುತ್ತದೆನ್ನಬಹುದು.
ಯುಗಯುಗದಿಂದಲೂ ಇದು ಭೂಮಿಯಲ್ಲಿ ನಡೆದಿದೆ.
ಸತ್ಯಯುಗದಲ್ಲಿ ಸತ್ಯವಂತರು ಒಳ್ಳೆಯವರೆನಿಸಿದರೆ ಮಿಥ್ಯ ಯುಗದ ಕಲಿಯುಗದಲ್ಲಿ ಮಿಥ್ಯವೇ ಒಳ್ಳೆಯದೆಂದು ವಾದ ಮಾಡುವವರು ಒಳ್ಳೆಯವರಾಗಿ ಕಾಣುವರಷ್ಟೆ.
ಯುಗ ಒಂದೇ ರೀತಿಯಲ್ಲಿ ಇರೋದಿಲ್ಲವೆಂದಾಗ ಮನಸ್ಸು ಬದಲಾಗುತ್ತದೆ. ಅದೃಷ್ಟವನ್ನು ಹಣದಿಂದ ಅಳೆಯುವವರಿಗೆ ಹಣವಿದ್ದವರು ಒಳ್ಳೆಯವರು. ಇಲ್ಲದವರಿಗೆ ಸುಜ್ಞಾನವಿದ್ದರೂ ಅದನ್ನು ಒಳ್ಳೆಯದಾಗಿ ಬಳಸಿಕೊಳ್ಳುವ ಅವಕಾಶವಿರದು, ಸಹಕಾರವಿರದು..ಕೆಲವರಿಗಷ್ಟೆ ಇದರ ಅನುಭವವಾಗುವುದು.
ಹಣೆ ಬರಹದಲ್ಲಿ ಅದೃಷ್ಟ ವಿದೆಯೋ ಇಲ್ಲವೋ ಆದರೆ ನಮ್ಮ ನಡೆ ನುಡಿಯಲ್ಲಿ ಸ್ವಚ್ಚತೆಯಿದ್ದರೆ ಒಳ್ಳೆಯದಾಗುವುದು.
No comments:
Post a Comment