ಮಕ್ಕಳೇ ಬೇಡ ಎನ್ನುವವರ ಸಂಖ್ಯೆಬೆಳೆಯುತ್ತಿದೆ.ಇದ್ದ ಮಕ್ಕಳು ದೂರದ ದೇಶಕ್ಕೆ ಓಡುತ್ತಿದ್ದಾರೆ.ಹತ್ತಿರವಿದ್ದವರಿಗೆ ಪೋಷಕರಲ್ಲಿ ಭಯ ಭಕ್ತಿ ಗೌರವವಿಲ್ಲದೆನಡೆಸಿಕೊಂಡರೆ ಇನ್ನೂ ಕೆಲವು ಮಕ್ಕಳು ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಗೆ ಶರಣಾಗುತ್ತಿದ್ದಾರೆಂದರೆ ಭಾರತ ಎತ್ತ ಸಾಗುತ್ತಿದೆ?
ಇದಕ್ಕೆ ಕಾರಣವೇನು? ಕಾರಣಕರ್ತರು ಯಾರು? ಎಲ್ಲಾ ಪ್ರಶ್ನೆಗೆ ಉತ್ತರ ಒಂದೇ ಅಜ್ಞಾನ.
ಅಜ್ಞಾನವೆಂಬ ಅಂಧಕಾರದಲ್ಲಿರುವ ಎಷ್ಟೂ ಜೀವಾತ್ಮರುಗಳು ಪರಮಾತ್ಮನ ಅರಿವಿಲ್ಲದೆಯೇ ಅಂತ್ಯ ಕಾಣುತ್ತಿರೋದು ಭಾರತದಂತಹ ಜ್ಞಾನದ ದೇಶಕ್ಕೆ ಅವಮಾನ. ಮಕ್ಕಳು ಹೊರಗೆ ಸಾಧನೆ ಮಾಡಿದರೆ ಪ್ರೋತ್ಸಾಹ ಕೊಡುವ ಪೋಷಕರಿಗೆ ಮಕ್ಕಳ ಒಳಗಿರುವ ಜ್ಞಾನದ ಅರಿವಿಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಲಕ್ಷಾಂತರ ಹಣಗಳಿಸುವ ಕನಸು ಕಾಣುವರು. ಪ್ರತಿಭೆ ಎಂದರೆ ತೋರುಗಾಣಿಕೆಯಾಗಿರುವ ಇಂದು ತಮ್ಮ ಪ್ರತಿಷ್ಟೆಗಾಗಿ ಮಕ್ಕಳ ನ್ನು ಯಾರದ್ದೋ ಹಿಂದೆ ಬಿಟ್ಟು ನಡೆಯುವಾಗ ಮಕ್ಕಳ ವಯಸ್ಸು ಮನಸ್ಸು ಎರಡೂ ಒಂದೇ ಇರದು.
ಪ್ರಭುದ್ದ ವಿಚಾರಗಳನ್ನು ತಿಳಿಸುವಾಗ ಅವರೊಳಗೆ ಆಗುವ ಮಾನಸಿಕ ಬದಲಾವಣೆಗೂ ದೈಹಿಕ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ. ಇದರಿಂದ ನೋಡಲು ಮಾತ್ರ ಮಕ್ಕಳು ಇವರ ದೃಷ್ಟಿ ಕೋನ ಪ್ರಭುದ್ದವಾಗಿದ್ದರೆ ಹೆಚ್ಚು ಹೆಚ್ಚು ಅಪರಾಧಕ್ಕೆ ಇಳಿಯುವರು.
ವೈಜ್ಞಾನಿಕ ದೃಷ್ಟಿಯಿಂದ ಅಳೆಯುವ ಜಗತ್ತಿನಲ್ಲಿ ನಿಜವಾಗಿಯೂ ಮಕ್ಕಳು ದೊಡ್ಡವರೆ ಸಣ್ಣವರೆ?
ಭಾರತದ ಹಿಂದಿನ ಕಾಲದಲ್ಲಿದ್ದ ಶಿಕ್ಷಣದಲ್ಲಿ ಮಕ್ಕಳ ಜ್ಞಾನಶಕ್ತಿ ಗುರುತಿಸುವುದರ ಮೂಲಕ ಉತ್ತಮ ವಿದ್ಯೆ ಕಲಿಸಿ ಸ್ವಾವಲಂಬನೆ ಸರಳ ಸತ್ಯ ಧರ್ಮದೆಡೆಗೆ ನಡೆಸುವಷ್ಟು ಜ್ಞಾನಿಗಳನ್ನು ಲೋಕಕ್ಕೆ ನೀಡಿದ್ದರು. ಈಗ ಅಜ್ಞಾನಿಗಳನ್ನು ಹೊತ್ತು ನಡೆಯುತ್ತಿದೆ ದೇಶ.
ಪೋಷಕರೆಂದರೆ ಕೇವಲ ಒಂದು ಮಗುವಿನ ಪೋಷಣೆ ಮಾಡೋದಲ್ಲ. ಇತರ ಮಕ್ಕಳ ನ್ನೂ ದೇಶದ ಸಮಾಜದ ಆಸ್ತಿ ಆಗಿಸುವಷ್ಟು ಜ್ಞಾನವನ್ನು ಕೊಟ್ಟು ಬೆಳೆಸೋದೆ ಗುರುವಿನ ಲಕ್ಷಣವಾಗಿತ್ತು. ಈಗ ಶಿಕ್ಷಣವೇ ಧಾರ್ಮಿಕ ವರ್ಗದವರಿಂದ ಬೇರೆ ಆಗಿದ್ದು ಸ್ವಯಂ ಧಾರ್ಮಿಕ ವರ್ಗ ವೂ ಹೊರಗಿನ ಶಿಕ್ಷಣ ದೆಡೆಗೆ ನಡೆಯುವಂತಾಗಿರೋದು ದುರಂತ.
ಎಷ್ಟು ವರ್ಷ ಬದುಕಿದ್ದೇವೆನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಪ್ರಶ್ನೆಯಾಗಬೇಕಿದೆ.
ಯಾರದ್ದೋ ಹಣ ಅಧಿಕಾರ ಸ್ಥಾನ ಹೆಸರು ಹಿಡಿದು ನಾವು ಹಿಂದೆ ಹೋಗುವಾಗ ಅವರ ಜ್ಞಾನ ಮುಖ್ಯವಾಗಿರುತ್ತದೆ. ಇದು ನಮ್ಮ ಹಿಂದಿನವರ ಜೊತೆಗೆ ನನ್ನ ಜೊತೆಗೆ ಸೇರುವುದೆ ಇಲ್ಲವೆ ಎನ್ನುವ ಸತ್ಯವರಿಯುವುದು ಅಗತ್ಯವಿದೆ. ಇದನ್ನು ಯೋಗ ಎಂದರು.
ಈಗನಮ್ಮ ಮಕ್ಕಳಿಗೆ ಕಲಿಸಿದ ವಿದ್ಯೆ ನಮಗಿರಲಿಲ್ಲ.
ನಾವು ಕಲಿತ ವಿದ್ಯೆ ನಮ್ಮ ಪೋಷಕರಿಗಿರಲಿಲ್ಲ.ಪೋಷಕರು ಕಲಿತ ವಿದ್ಯೆ ಅವರ ಗುರು ಹಿರಿಯರಿಗಿರಲಿಲ್ಲ ಎಂದರೆ ರಕ್ತ ಸಂಬಂಧ ಒಂದೇ ಇದ್ದರೂ ಜ್ಞಾನ ಸಂಬಂಧ ಬೇರೆ ಆದಾಗ ಆತ್ಮಹತ್ಯೆಯೇ ಸರಿ.
ಮಕ್ಕಳಿಗಾಗಿ ಆಸ್ತಿ ಮಾಡುವುದರ ಹಿಂದೆ ಪೋಷಕರು ನಡೆದು ಮಕ್ಕಳೂ ಇಲ್ಲ ಸಾಲವೂ ತೀರದೆ ಸಮಸ್ಯೆ ಬೆಳೆದಿದೆ. ಇದಕ್ಕೆ ಬದಲು ಹಣವನ್ನು ದಾನಧರ್ಮ ಕಾರ್ಯಕ್ಕೆ ಬಳಸುತ್ತಾ ಮಕ್ಕಳ ಶಿಕ್ಷಣದಲ್ಲಿ ಸಂಸ್ಕಾರ ಕೊಟ್ಟರೆ ಮಕ್ಕಳೇ ಆಸ್ತಿ ಆಗುವರು.
ಹಿಂದಿನ ಮಹಾತ್ಮರುಗಳಲ್ಲಿ ಹಣವಿರಲಿಲ್ಲ ಜ್ಞಾನವಿತ್ತು.
ಈಗ ಹಣವಿದೆ ಸತ್ಯಜ್ಞಾನದ ಕೊರತೆಯಿಂದ ಜನರನ್ನು ಹೊರಗೆಳೆಯುವ ರಾಜಕೀಯತೆ ಬೆಳೆದಿದೆ.
ಶಕ್ತಿಗಿಂತ ವ್ಯಕ್ತಿಪೂಜೆಯೇ ಹೆಚ್ಚಾಗಿದೆ.ಪ್ರಜಾಪ್ರಭುತ್ವದಲ್ಲಿ ಯಾರ ಶಕ್ತಿಯಿಂದ ದೇಶನಡೆಯಬೇಕಿತ್ತು? ನಡೆದಿದೆ?
ಮೂಲವನರಿತು ರೆಂಬೆಕೊಂಬೆಗಳು ಬೆಳೆದಾಗ ಬೇರು ಗಟ್ಟಿ.ಇಲ್ಲದಿದ್ದರೆ ಟೊಳ್ಳಾಗಿ ಮುರಿದುಬೀಳುತ್ತದೆ.
ಪ್ರಕೃತಿಯನರಿತು ನಡೆಯೋದರಿಂದ ಆತ್ಮರಕ್ಷಣೆ.ವಿರುದ್ದ ನಡೆದಷ್ಟೂ ಆತ್ಮಹತ್ಯೆಗಳಾಗುತ್ತದೆ. ಮನಸ್ಸಿನ ವಿಕೃತ ಬುದ್ದಿವಂತಿಕೆ ಮಕ್ಕಳನ್ನು ಹಾಳುಮಾಡುತ್ತಿದೆ ಇದನ್ನು ಸಾಧನೆ ಎಂದರೆ ಅಜ್ಞಾನ ವಷ್ಟೆ.
ನಾವೆಷ್ಟು ಡಿಗ್ರಿ ಪಡೆದರೂ ಸ್ವಂತ ಬುದ್ದಿ ಜ್ಞಾನ ಇಲ್ಲದಿದ್ದರೆ ಪರರ ವಶದಲ್ಲಿ ಜೀವನ. ಪರಮಾತ್ಮನ ಸೇರುವ ಯೋಗವೇ ಬೇರೆ ಪರದೇಶ ಸೇರುವ ಯೋಗವೇ ಬೇರೆ.
ಪೋಷಕರು ಮಕ್ಕಳು ವಿದೇಶಕ್ಕೆ ಹೋದರೆ ಪ್ರಗತಿ ಎನ್ನುವ ಭ್ರಮೆಯಲ್ಲಿ ಬೆಳೆಸಿ ತಮ್ಮ ಕೊನೆಗಾಲದಲ್ಲಿ ವೃದ್ದಾಶ್ರಮ ಸೇರುವ ಸ್ಥಿತಿಗೆ ಬಂದರೆ ಅದಕ್ಕೆ ಸರ್ಕಾರ ಕಾರಣವಲ್ಲ.
ಸರ್ಕಾರ ಎಂದರೆ ಸಹಕಾರವಷ್ಟೆ.
ನಾವು ಮಕ್ಕಳಿಗೆ ಹೇಗೆ ಸಹಕರಿಸುವೆವೋ ಯಾವುದಕ್ಕೆ ಸಹಾಯ ಮಾಡುವೆವೋ ಯಾವ ಶಿಕ್ಷಣ ಕೊಡುವೆವೋ ಹಾಗೇ ಬೆಳೆಯುತ್ತಾರೆ.
ಹೀಗಿರುವಾಗ , ಮಕ್ಕಳು ಸರಿಯಿಲ್ಲ ಎನ್ನುವುದರ ಬದಲು ನಮ್ಮ ಚಿಂತನೆಗಳೇ ಸರಿಯಿಲ್ಲ ಎಂದು ಒಪ್ಪಿ ನಡೆದರೆ ಮುಂದೆ ಆಗುವ ಅನಾಹುತದಿಂದ ಪಾರಾಗಬಹುದು.
ಸಂಬಂಧ ಯೋಗದಿಂದ ಬೆಳೆಯುವುದು ಪರಮಾತ್ಮನ ಇಚ್ಚೆ
ಭೋಗಕ್ಕಾಗಿ ಬೆಳೆಸುವುದು ಜೀವಾತ್ಮನ ಇಚ್ಚೆ.
ಭೌತವಿಜ್ಞಾನ ಭೋಗದೆಡೆಗೆ ನಡೆಸಿ ಅಧ್ಯಾತ್ಮ ವಿಜ್ಞಾನ ದಿಂದ ದೂರ ನಡೆಸಿದಷ್ಟೂ ಆತ್ಮಹತ್ಯೆಯಂತಹ ರೋಗವಿರುತ್ತದೆ.
ರೋಗ ಬಂದಾಗ ಅನುಭವಿಸೋದು ಜೀವವೇ . ಇದಕ್ಕಾಗಿ ಈಗಲಾದರೂ ಭಾರತೀಯರು ತಮ್ಮ ಸ್ವಾರ್ಥ ಅಹಂಕಾರದ ರಾಜಕೀಯ ದುರುದ್ದೇಶ ಬಿಟ್ಟು ದೇಶದ ಹಿತಕ್ಕಾಗಿ ಆತ್ಮರಕ್ಷಣೆಗಾಗಿ ತಮ್ಮ ಮಕ್ಕಳನ್ನು ಸತ್ಯದ ಧರ್ಮದ ಹಾದಿಗೆ ನಡೆಸಲು ಸಾಧ್ಯವಾದರೆ ಅದೇ ಪುಣ್ಯದ ಕೆಲಸ.
ದೇಶ ಸೇವೆಯೇ ಈಶ ಸೇವೆ,ಜನರ ಸೇವೆಯೇ ಜನಾರ್ದನನನ ಸೇವೆ...ಕಾಯಕವೇ ಕೈಲಾಸ ಎಲ್ಲಾ ಯೋಗಿಗಳ ಮಾತಾಗಿದೆ. ಭಗವದ್ಗೀತೆ ಪಠಣ ಸ್ಫರ್ಧೆ ಯಾಗದೆ ಅದರಲ್ಲಿನ ತತ್ವಗುಣ ಯೋಗ ಮಾರ್ಗ ಅರ್ಥ ಮಾಡಿಸುವ ಶಿಕ್ಷಣವಾದರೆ ಬದಲಾವಣೆ ಸಾಧ್ಯ.
ಒಟ್ಟಿನಲ್ಲಿ ಇತ್ತೀಚೆಗೆ ಎಲ್ಲರಿಗೂ ತಪ್ಪು ನಡೆದಿರೋದು ತಿಳಿದಿದೆ.ಆದರೆ ಬೇರೆಯವರ ತಪ್ಪು ಎತ್ತಿ ಹಿಡಿಯೋದೆ ಕೆಲಸವಾಗಿ ಮಕ್ಕಳ ತಪ್ಪು ಕಾಣುತ್ತಿಲ್ಲ. ಜೊತೆಗೆ ತಮ್ಮ ಹಿಂದೆ ಬರುತ್ತಿರುವವರನ್ನು ಆಳೋದೇ ಕೆಲಸವಾಗಿ ಹಣ ಅಧಿಕಾರ ಸ್ಥಾನ ಸನ್ಮಾನಗಳು ದೇಹಕ್ಕೆ ಸಿಗುತ್ತಿದೆ ದೇಶಕ್ಕಲ್ಲ.ದೇಶ ವಿದೇಶಿಗಳ ಬಂಡವಾಳ ಸಾಲ ವ್ಯವಹಾರ ಶಿಕ್ಷಣದ ಜೊತೆಗೆ ಅವರದೇ ಧರ್ಮ ಸಂಸ್ಕೃತಿ ಯನ್ನು ಮಕ್ಕಳಿಗೆ ನೀಡಿದರೆ ನಾವ್ಯಾರು ವಿದೇಶಿಗಳೆ? ಸ್ವದೇಶಿಗಳೆ?
ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹೊರಗಿಲ್ಲ. ನಾವ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಭಾರತೀಯರಾಗುತ್ತದೆ.ನಿಜವಾಗಿಯೂ ನಮ್ಮಲ್ಲಿ ಭಾರತೀಯ ಜ್ಞಾನವಿದೆಯೆ? ನಮ್ಮ ನಡೆ ನುಡಿಯಲ್ಲಿ ಸ್ವದೇಶವಿದೆಯೆ? ನಮ್ಮ ಮಕ್ಕಳಲ್ಲಿ ಇದೆಯೆ? ಇಲ್ಲ ಎಂದರೆ ನಮಗೆ ದೇಶದೊಳಗೆ ಜೀವಿಸುವ ಯೋಗ್ಯತೆ ಇಲ್ಲ. ಇದು ನಮಗೆಲ್ಲರಿಗೂ ಅನ್ವಯಿಸುತ್ತದೆ. ಕಾರಣ ನಮಗೆ ದೇಶದ ನೆಲ ಜಲ ಅಧಿಕಾರ ಎಲ್ಲಾ ಬೇಕು.ಅದರ ಮೂಲ ಶಿಕ್ಷಣ ಜ್ಞಾನ ಸಂಸ್ಕೃತಿ ಯ ಅರಿವಿಲ್ಲದಿದ್ದರೆ ವ್ಯರ್ಥ ಜೀವನ.
ಇದನ್ನು ಆತ್ಮಹತ್ಯೆ ಎನ್ನಬಹುದೆ? ಆತ್ಮಕ್ಕೆ ಮರಣವಿಲ್ಲ ಆದರೆ ಹತ್ಯೆ ಎಂದರೆ ಅದರ ಅರಿವಿಲ್ಲದೆ ಜೀವ ನಡೆಯೋದು.
ಎಷ್ಟೋ ಮಕ್ಕಳು ಯೋಗಿಗಳಾಗುವ ಜ್ಞಾನ ಪಡೆದರೂ ಗುರುತಿಸದ ಶಿಕ್ಷಣ ಕೊಟ್ಟು ಅಧರ್ಮ ಬೆಳೆದಿದೆ. ಇದಕ್ಕೆ ಸಹಕರಿಸಿದ ಎಷ್ಟೋ ಜನರು ಶ್ರೀಮಂತ ರಾಗಿ ಶ್ರೀಮಂತ ದೇಶದ ಪ್ರಜೆಗಳಾಗಿದ್ದಾರೆ.ಆದರೆ ಒಳಗಿರುವ ಪರಿಶುದ್ದ ಹೃದಯದ ಬಗ್ಗೆ ಅರಿವಿರದಿದ್ದರೆ ಆತ್ಮಕ್ಕೆ ತೃಪ್ತಿ ಸಿಗದು.
ಅಧ್ಯಾತ್ಮ ಚಿಂತನೆಗಳು ಒಳಗಿನಿಂದ. ಹರಿದುಬರೋದಕ್ಕೆ ಅನುಭವಜ್ಞಾನ ಅಗತ್ಯವಿದೆ. ಯಾರೋ ಹೇಳಿದ್ದಷ್ಟೆ ಸತ್ಯವಿರದು.ಕಾಲ ಚಕ್ರ ಬದಲಾದಂತೆ ಹಲವು ಆಚಾರ ವಿಚಾರಗಳೂ ಬದಲಾಗಿದೆ.ಆದರೆ ಭೂಮಿ ಒಂದೇ. ಸತ್ಯ ಒಂದೇ ಪರಮಾತ್ಮ ಒಬ್ಬನೇ ಜಗನ್ಮಾತೆಯೂ ಒಬ್ಬಳೇದೇಶ ಒಂದೇ ಜನ್ಮ ಹಲವು..ಹೀಗಾಗಿ ಈ ಜನ್ಮದಲ್ಲಿ ಎಲ್ಲಿ ಜನ್ಮವಾಗಿದೆಯೋ ಅದರ ಮೂಲವರಿತು ಋಣ ತೀರಿಸುವ ಸತ್ಕರ್ಮದಲ್ಲಿದ್ದವರಿಗೆ ಇದ್ದಲ್ಲಿಯೇ ಸಂತೃಪ್ತಿ ಸಿಕ್ಕಿತ್ತು.
ಕಲಿಗಾಲದ ಕಲಿಕೆ ಹೊರಮುಖವಾಗಿ ಸಾಕಷ್ಟು ಹೊರಗೆ ಜ್ಞಾನ ಬೆಳೆದಿದೆ.ಒಳಗಿದ್ದ ಸತ್ಯ ಸತ್ತಂತಿದೆ. ಸತ್ಯವೇ ದೇವರು ಎಂದರೆ ಇರೋದೆಲ್ಲಿ?
ಮಕ್ಕಳನ್ನು ದೇವರೆಂದರು.ಕಾರಣವಿಷ್ಟೆ ಸ್ವಚ್ಚ ಹೃದಯ ನಿಸ್ವಾರ್ಥ ನಿರಹಂಕಾರ ದ ಜ್ಞಾನವಾಗಿತ್ತು.ಅಂತಹ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿದರೆ ಮಹಾತ್ಮರಾಗುವರು. ವಿರುದ್ದ ಕೊಟ್ಟು ಶಿಕ್ಷೆ ನೀಡಿದಷ್ಟೂ ವಿರೋಧಿಗಳಾಗಿ
ದೂರವಾಗುವರು. ಒಟ್ಟಿನಲ್ಲಿ ಅಸುರರೊಳಗೆ ಸುರರು, ವಿದೇಶದೊಳಗೆ ದೇಶ, ಅಧರ್ಮದಲ್ಲಿ ಧರ್ಮ, ಅಜ್ಞಾನದಲ್ಲಿ ಜ್ಞಾನ ,ಅಸತ್ಯದೊಳಗೆ ಸತ್ಯ ಅದ್ವೈತ ದೊಳಗೆ ಧ್ವೈತ ಸೇರಿ ನೋಡಲು ಒಂದೇ. ಒಳಗೆ ಬೇರೆ ಬೇರೆಯೇ.ಅಂತರ ಸೃಷ್ಟಿ ಮಾಡೋದು ಸುಲಭದ ಕೆಲಸ.ಒಗ್ಗಟ್ಟು ಮೂಡಿಸೋದೆ ಕಷ್ಟ.
ಪೋಷಕರಿಲ್ಲದೆ ಮಕ್ಕಳ ಜನ್ಮವಾಗದು. ಅವರ ಜ್ಞಾನ ಸ್ವಚ್ಚವಿದ್ದರೆ ಮಕ್ಕಳು ಸ್ವಚ್ಚವಾಗುವರು.
ಹಿರಣ್ಯ ಕಶ್ಯಪ್ ಮಗ ಪ್ರಹ್ಲಾದ ರು ಅಸುರ ವಂಶದವರಾದರೂ ದೇವರಾಗಿರುವರು ಎಂದರೆ ಗರ್ಭದಲ್ಲಿರುವಾಗಲೇ ದೇವತೆಗಳು ಕೊಟ್ಟ ಸಂಸ್ಕಾರದ ಫಲ.
ಹೀಗಾಗಿ ನಮ್ಮ ಸನಾತನ ಧರ್ಮ 16 ಸಂಸ್ಕಾರದಮೂಲಕ ದೇವರನ್ನು ಕಾಣಬಹುದೆಂದಿದೆ.ಇದನ್ನು ಶಿಕ್ಷಣದಿಂದ. ಕೊಡಬೇಕೆ? ಮನೆಯೊಳಗೆ ಕೊಡಬೇಕೆ?
ಸಂಸ್ಕಾರದ ವಿಷಯ ಬಂದರೆ ಯಾವುದೋ ಶಾಸ್ತ್ರ ಸಂಪ್ರದಾಯ ಅಡ್ಡ ಬರುತ್ತದೆಂದರೆ ಅದೂ ಕೂಡ ಅವರವರ ಅನುಭವಕ್ಕೆ ತಕ್ಕಂತೆ ಸೃಷ್ಟಿ ಆಗಿದೆ. ಎಲ್ಲರಿಗೂ ಸಮಾನವಾದ ಸತ್ಯ ಒಂದೇ. ಆ ಪರಮಸತ್ಯ ಅರಿಯಲು ಮನಸ್ಸು ಶುದ್ದವಿದ್ದು ಆಹಾರ ವಿಹಾರ ಶಿಕ್ಷಣ ಶುದ್ದವಾಗಬೇಕು.
ಅಸತ್ಯದ ವಿಚಾರಗಳು ಅಶುದ್ದತೆಗೆ ಕಾರಣವೆಂದಾಗ ನಮ್ಮ ಮಕ್ಕಳು ಸತ್ಯವಂತರೆ ? ನಾವೆಷ್ಟು ಸತ್ಯವಂತರು.ಕಷ್ಟವಿದೆ. ಕಷ್ಟಪಟ್ಟರೆ ಸುಖವೂ ಇದೆ. ಮಧ್ಯವರ್ತಿಗಳು ಸಾಕಷ್ಟು ವ್ಯವಹಾರಕ್ಕೆ ಅಸತ್ಯ ಅನ್ಯಾಯ ಅಧರ್ಮ ಕ್ಕೆ ಸಹಕಾರ ಕೊಟ್ಟು ಇಂದು ಮಕ್ಕಳು ಮಹಿಳೆಯರೂ ಹೊರಗೆ ಬರುವಂತಾಗಿದೆ ಇದರಿಂದಾಗಿ ಲಾಭ ಯಾರಿಗೆ? ನಷ್ಟ ಯಾರಿಗೆ?
ದೇವಾಸುರರ ನಡುವಿರುವ ಮಾನವರಿಗೆ ಸರಿಯಾದ ಜ್ಞಾನ ಕೊಡುವವರು ಯಾರು? ಸತ್ಯ ಮಿಥ್ಯದ ನಡುವಿನ ಜೀವನವು ಗೊಂದಲ ಗಲಭೆ ದ್ವೇಷ ಅಸೂಯೆಯ ಕಡೆಗೆ ಹೊರಟರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಯಾರನ್ನು ಯಾರೂ ಬದಲಾಯಿಸಲಾಗದು.ಹುಟ್ಟು ಗುಣ ಸುಟ್ಟರೂ ಹೋಗದು ಎಂದಂತೆ ಹಿಂದಿನ ಕರ್ಮಕ್ಕೆ ತಕ್ಕಂತೆ ಫಲ. ಯಾರಿಗೆ ಗೊತ್ತು ಯಾರೊಳಗೆ ಯಾವ ಮಹಾತ್ಮರು ಇರುವರೋ ಅಸುರರಿರುವರೋ? ಕಲಿಗಾಲದಲ್ಲಿ ಅಸುರರ ಸಂಖ್ಯೆ ಬೆಳೆಯಲು ಕಾರಣ ಮಹಾತ್ಮರುಗಳು ಮುಕ್ತಿ ಪಡೆದಿರೋದು. ಇದನ್ನು ಸರಿಪಡಿಸಲು ಮತ್ತೆ ಮಹಾತ್ಮರು ಜನ್ಮ ತಾಳಲೇಬೇಕು.ಇದು ಮಕ್ಕಳ ಜ್ಞಾನದಲ್ಲಿದೆ.ಸರಿಯಾದ ಸಂಸ್ಕಾರದ ಶಿಕ್ಷಣವೇ ಪರಿಹಾರವಾಗಿದೆ.
No comments:
Post a Comment