ಮೂಢರು ಕಲ್ಲಿಗೆ ಪೂಜಿಸಿ ಆರಾಧಿಸಿಮೂಡನಂಬಿಕೆ ಬೆಳೆಸಿರುವವರು ಭಾರತೀಯರು ವಿಶ್ವದ ಎರಡನೇ ಸ್ಥಾನದ ಹಿಂದುಳಿದವರು ಎನ್ನುವ ಅರ್ಥ ಬರುವ ಪೋಸ್ಟ್ ಹಾಕಿದ್ದಕ್ಕೆ ಸರಿಯಾದ ಉತ್ತರ ಕೊಟ್ಟಿರುವರು. ಇದನ್ನು ಓದಿದಾಗ ಅನಿಸಿದ್ದು ಹೀಗೆ.ನಿಮಗೇನು ಅನಿಸುತ್ತದೆಂದು ತಿಳಿಸಿ.
ಯಾರೋ ಹೇಳಿದ್ದನ್ನು ತಕ್ಷಣ ಕೇಳುವ ನಮಗೆ ನಮ್ಮ ಅಂತರಾತ್ಮದ ಕೂಗು ಕೇಳಿಸಬೇಕಿದೆ. ಅದಕ್ಕೆ ಆತ್ಮಜ್ಞಾನದೆಡೆಗೆ ಸಾಗಬೇಕಿದೆ.
ಕಾಣದ ದೇವರನ್ನು ಕಾಣೋದಕ್ಕೆ ಜ್ಞಾನವಿರಬೇಕಷ್ಟೆ.
ನಿರಾಕಾರದಿಂದ ಸಾಕಾರದೆಡೆಗೆ ನಡೆದು ಬಂದ ದೇವತಾರಾಧನೆಯಿಂದ ಮಾನವ ತನ್ನ ಜೀವನ ನಡೆಸಿರೋದು ಪುರಾಣ ಸತ್ಯ.
ರಾಮಾಯಣ ಮಹಾಭಾರತ ಯುದ್ದವೂ ಧರ್ಮ ರಕ್ಷಣೆಗಾಗಿ ನಡೆದಿರೋದನ್ನು ಸಾಬೀತು ಪಡಿಸೋದು ಕಷ್ಟ. ಕಾರಣ ಯಾವಾಗ ಮಾನವನಲ್ಲಿ ಅಜ್ಞಾನ ಹೆಚ್ಚುವುದೋ ನಾನೇ ದೇವರು ನನ್ನಿಂದಲೇಜಗತ್ತು ನಾನೇ ರಾಜ ಎನ್ನುವ ಅಹಂಕಾರ ಅತಿಯಾದ ಸ್ವಾರ್ಥ ಮನೆಮಾಡಿ ಆಳುತ್ತದೆ.
ಆಳುವಾಗ ಹಿಂದಿರುವ ಅಸಂಖ್ಯಾತ ಶಕ್ತಿಯನ್ನು ಗುರುತಿಸುವುದು ಕಷ್ಟ.ಹೀಗಾಗಿ ಆ ಹಿಂದಿನ ಶಕ್ತಿಯನ್ನು ಆಳಾಗಿ ಕಾಣುವುದರಿಂದ ಇನ್ನಷ್ಟು ಅಧರ್ಮ ಅಸತ್ಯ ಅನ್ಯಾಯ ಬೆಳೆಸುತ್ತದೆ.
ಇರಲಿ ಹಿಂದಿನಿಂದಲೂ ಈ ಭೂಮಿಯಲ್ಲಿ ದೇವಾಸುರರು ಇದ್ದರು ಈಗಲೂ ಇರುವರು. ಅವರ ಮಧ್ಯೆ ಕಾರಣಮಾತ್ರದ ಮಾನವರೂ ಇರುವರು. ಯಾವಾಗ ಮಧ್ಯವರ್ತಿ ಮಾನವ ದೈವತ್ವ ಬಿಟ್ಟು ಅಸುರರೆಡೆಗೆ ನಡೆಯುವರೋ ಭೂಮಿ ಅಸುರರ ವಶವಾಗುತ್ತದೆ.
ವ್ಯತ್ಯಾಸವಿಷ್ಟೆ ಇಬ್ಬರೂ ನೋಡಲು ಮಾನವರೆ ಆದರೂ ಒಳಗಿನ ಸತ್ವ ರಜಸ್ಸು ತಮಸ್ಸಿನ ಗುಣಜ್ಞಾನದಲ್ಲಿ ಬೇರೆ ಬೇರೆ.
ಹೀಗಾಗಿ ಭೂಮಿಯನ್ನು ಹೇಗೆನೋಡುವರೋ ಬಳಸುವರೋ ಆಳುವರೋ ಎನ್ನುವುದರಮೇಲೇ ಜೀವನ ನಿಂತಿದೆ. ಭೂಮಿಯ ಋಣ ತೀರಿಸುವುದು ಹಿಂದೂ ಧರ್ಮದ ಮುಖ್ಯ ಗುರಿ ಆದರೆ ಅದಕ್ಕಾಗಿ ದೈವತ್ವದ ಗುಣ ಅಗತ್ಯವಿದೆ. ದೇವರಿಗೂ ಋಣ ತೀರಿಸಲು ಕಷ್ಟ.ಹೀಗಾಗಿ ಅಂತಹ ಮಹಾತ್ಮರಿಗೆ ದೇವತೆಗಳ ಸಹಕಾರವಿರುತ್ತದೆ.
ಋಣ ಬೆಳೆಸುವ ಅಸುರರ ಹಿಂದೆ ನಡೆದಷ್ಟೂ ಭೂಮಿಯ ದುರ್ಭಳಕೆ ಹೆಚ್ಚಾಗುತ್ತದೆ. ಇದೇ ಕಾರಣದಿಂದ ಸನಾತನ ಧರ್ಮ ದಲ್ಲಿ ಚರಾಚರದಲ್ಲಿ ಅಡಗಿರುವ ಆ ಪರಮಶಕ್ತಿಯನ್ನು ಪರಮಾತ್ಮನನ್ನು ಕಾಣುವುದಕ್ಕೆ ಕಲ್ಲು ಮಣ್ಣಿನಲ್ಲಿ ಪ್ರಕೃತಿ ಪೂಜೆಯಲ್ಲಿ ಆತ್ಮಜ್ಞಾನದೆಡೆಗೆ ನಡೆಯುವ ಕಾರ್ಯಕ್ರಮ ನಡೆಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಸ್ವಾರ್ಥ ಸುಖಕ್ಕಾಗಿ ಪ್ರಕೃತಿ ದುರ್ಭಳಕೆ ಮಾಡಿಕೊಂಡು ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಅಸುರರೂಬ ಬೆಳೆದಿರೋದು ದುರಂತವೇ ಆಗಿದೆ.
ಹತ್ತಿರದ ಸಂಬಂಧ ಬಿಟ್ಟು ದೂರದಬೆಟ್ಟ ನುಣ್ಣಗೆ ಎಂದಂತೆ ಮನಸ್ಸು ಹೊರನಡೆದು ಒಳಮನಸ್ಸು ಅಶುದ್ದವಾದಾಗ ಆತ್ಮಶುದ್ದಿಗೆ ಯೋಗ ಅ ಅಗತ್ಯವಿದೆ. ಯಾವುದೂ ಅತಿಯಾಗದಂತೆ ಎಚ್ಚರಿಕೆಯಿಂದ ಬಳಸಿದರೆ ಉತ್ತಮ ಫಲ.
ಯಾರೋ ನೀವು ಮಾಡುತ್ತಿರುವುದು ತಪ್ಪು ಎಂದಾಗ. ಅವರ ಸ್ಥಳದಲ್ಲಿ ನಿಂತು ಅವರಿಗೆ ಇದರ ಅರಿವಾಗದಿರುವುದಕ್ಕೆ ಹೇಳಿದ್ದಾರೆಂದು ಸುಮ್ಮನಿದ್ದರೆ ನಮ್ಮ ಒಳ್ಳೆಯ ಕಾರ್ಯಕ್ಕೆ ತಡೆಬರದು. ಅದು ಬಿಟ್ಟು ವಿರೋಧಿಸಿ ದ್ವೇಷಮಾಡಿ ಹೋರಾಟ ಮಾಡಿ,ಜಗಳ ಎಬ್ಬಿಸಿ ಕೂಗಾಡಿದರೆ ಕೆಡೋದು ಸಂಸಾರವೆ ಜೊತೆಗೆ ಸಮಾಜದ ಶಾಂತಿಯೂ ಕೆಡುತ್ತದೆ.ಇದನ್ನು ಗುರಿಯಾಗಿಸಿಕೊಂಡಿರುವವರಿಗೆ ಸರಿಯಾದ ಅವಕಾಶ ನೀಡಿದ ಪಾಪಕ್ಕೆ ಗುರಿಯಾಗೋದು ಯಾರು?
ಒಟ್ಟಿನಲ್ಲಿ ನಾಯಿ ಬೊಗಳಿದರೆ ದೇವಲೋಕಹಾಳಾಗದು.ಹಾಳಾಗೋದಕ್ಕೆ ಕಾರಣ ಇನ್ನಷ್ಟು ನಾಯಿಗಳನ್ನು ಛೂ ಬಿಡೋದು. ಇಂದಿಗೂ ಸನಾತನ ಧರ್ಮದ ಸತ್ವ ಶುದ್ದವಾಗಿದ್ದರೂ ಆಚಾರ ವಿಚಾರಪ್ರಚಾರದ ಅಂತರಗಳು ಅಶುದ್ದತೆಗೆ ಸಹಕಾರ ಕೊಡುತ್ತಿವೆ. ಇದನ್ನು ಪ್ರಶ್ನೆ ಮಾಡಿದವರನ್ನು ತುಚ್ಚವಾಗಿ ಕಾಣುತ್ತಿದೆ. ದೇವರನ್ನು ಹೊರಗೆ ಬೆಳೆಸಿದಷ್ಟು ದೈವತ್ವದ ಗುಣಜ್ಞಾನ ಒಳಗಿನಿಂದ ಶಿಕ್ಷಣದಮೂಲಕ ಬೆಳೆಸಿದ್ದರೆ ಭೂಮಿಯಲ್ಲಿ ದೇವತೆಗಳು ಇರುತ್ತಿದ್ದರು. ಈಗ ದೇವರು ಇರೋದೆಲ್ಲಿ? ಅಸುರರು ಯಾರು? ನಾವ್ಯಾರು?
ಹಿಂದೂಗಳು ದೇವರನ್ನು ಎಲ್ಲಾ ರೂಪದಲ್ಲಿ ಕಾಣಬಹುದು
ಆದರೆ ವಿಕೃತ ರೂಪದಲ್ಲಿ ಕಾಣೋದಿಲ್ಲ.ಪ್ರಕೃತಿ ರೂಪದಲ್ಲಿ ಕಾಣುವರು. ವಿಕೃತವಾಗಿ ಚಿಂತನೆ ನಡೆಸೋರನ್ನು ಅಸುರರೆನ್ನುವರು. ಈ ಭೂಮಿಯಲ್ಲಿ ದೇವರಿದ್ದಂತೆ ಅಸುರರೂ ಇರುವರೆಂಬುದು ಸ್ಪಷ್ಟವಾಗಿದೆ. ಹೀಗಾಗಿ ಮಾತನಾಡದ ಕಲ್ಲು ಮಣ್ಣುಗಳಲ್ಲಿ ದೇವರನ್ನು ನೋಡುವುದು ಉತ್ತಮ...ಇದರಿಂದ ಮನುಷ್ಯತ್ವ ಹಾಳಾಗಬಾರದಷ್ಟೆ.
No comments:
Post a Comment