ಅವಕಾಶಗಳೆಲ್ಲವೂ ಅನುಭವವನ್ನು ಹೆಚ್ಚಿಸುತ್ತದೆ ಆದರೆ ಎಲ್ಲವನ್ನೂ ಪಡೆಯುವುದು ಕಷ್ಟ. ಸಂಸಾರ ಮತ್ತು ಸಮಾಜದಮಧ್ಯೆ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಾಗದು. ಕಾರಣ ಒಂದೇ ವೇಳೆಯಲ್ಲಿ ಎರಡೂ ಕಡೆ ಕಾರ್ಯಕ್ರಮ ಇದ್ದಾಗ ಒಂದು ಆಯ್ಕೆ ಅನಿವಾರ್ಯ ವಾಗುತ್ತದೆ.
ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಎರಡೂ ಕಡೆಹೋಗಬೇಕು ಇಲ್ಲದಿದ್ದರೆ ತಾಳತಪ್ಪಿದಂತೆ. ಎಷ್ಟೋ ಕಲಾವಿದರು ರಾಜಕಾರಣಿಗಳು ಪ್ರತಿಷ್ಟಿತರ ಕಾರ್ಯಕ್ರಮ ಪ್ರತಿದಿನ ಹೊರಗೆ ಇರುವುದರಿಂದ ಅವರ ಜೀವನ ನಡೆಯುವುದೇ ಹೀಗೆ ಜನಬಲ ಹಣಬಲ ಅಧಿಕಾರ ಬಲದಿಂದ ಆಗ ತಮ್ಮ ಸ್ವಂತ ಜ್ಞಾನ ಬಳಸೋದಕ್ಕೆ ಸಮಯವಿರದು. ಹೀಗಾಗಿ ಅವಕಾಶವನ್ನು ಬಿಡದಂತೆ ಬಿಡುವಿಲ್ಲದ ಸಮಯದಲ್ಲೂ ಬಿಡುವು ಮಾಡಿಕೊಂಡು ತಿರುಗಬೇಕು. ದೇಹಕ್ಕೆ ದಣಿವು ಮನಸ್ಸಿನ ಕಿರಿಕಿರಿ ಸಂಸಾರದ ಸಮಸ್ಯೆ ಯಾವುದೂ ಲೆಕ್ಕಕ್ಕೆ ಬರದು. ಆ ದಾರಿಯಲ್ಲಿ ಉಳಿದವರೂ ನಡೆದರೆ ಗತಿ ಏನು?
ಒಟ್ಟಿನಲ್ಲಿ ಹೊರಗಿನ ಓಡಾಟ ಹೆಚ್ಚಾದಂತೆ ಒಳಗಿನ ಓಡಾಟ ಕಡಿಮೆಯಾಗುತ್ತದೆ. ಒಳಗೇ ಹೋಗಿ ಅರಿವು ಮೂಡಿಸಿದರೆ ಸಂತೃಪ್ತಿ ಸಂತೋಷ ಶಾಂತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ
ನಿನ್ನ ಆತ್ಮಸಂತೋಷಕ್ಕಾಗಿ ನೀನು ಬದುಕೋದನ್ನು ಕಲಿ ಎಂದರು. ಈಗ ಬೇರೆಯವರ ಒತ್ತಾಯ ಒತ್ತಾಸೆ ಒಳಿತಿಗಾಗಿ ದಾರಿತಪ್ಪಿ ನಡೆದು ಬೇರೆಯವರ ಅಡಿಯಾಳಾಗಿ ಕಾರ್ಯಕ್ರಮ ನಡೆಸುತ್ತಾ ಹೊರಗೆ ತಳುಕುಬಳುಕಿನ ಜೀವನ ಒಳಗೆ ಹುಳುಕು ಇದ್ದರೂ ಹುಡುಕಲಾಗದ ಸಂಕಟ. ಇಷ್ಟೇ ಜೀವನ. ಯಾರದ್ದೋ ದೇಹವನ್ನು ದೇಶವನ್ನು ಯಾರೋ ನಡೆಸಿದರೆ ನಮ್ಮದೇನಿರುತ್ತದೆ. ಪರಮಾತ್ಮನ ಹೆಸರಿನಲ್ಲಿ ನಡೆಸೋ ವ್ಯವಹಾರದಲ್ಲಿ ಹಣವಿದ್ದರೂ ಸದ್ಬಳಕೆಯಾದರೆ ಸರಿ ದುರ್ಭಳಕೆ ಆದಷ್ಟೂ ಅಧರ್ಮ ವೇ.
ದಕ್ಷಿಣಭಾರತದಲ್ಲಿನ ಆಚರಣೆ ಉತ್ತರದಲ್ಲಿಲ್ಲ. ದಕ್ಷಿಣದ ದಿಕ್ಕು ಯಮನ ದಿಕ್ಕು ಅಂದರೆ ಧರ್ಮ ದ ಕಡೆಗೆ ಹೋಗಲು ಮಾನವ ಪ್ರಯತ್ನ ಪಡಬೇಕು. ಉತ್ತರದಲ್ಲಿ ಶಿವನಿರೋವಾಗ ಅಧರ್ಮಕ್ಕೆ ಸರಿಯಾಗಿ ಪೆಟ್ಟು ಕೊಟ್ಟು ಲಯದ ಕೆಲಸ ನಿರಂತರವಾಗಿ ನಡೆದಿರುತ್ತದೆ.ಹಾಗಾಗಿ ಜನರು ಎಚ್ಚರವಾಗಿರುವರು. ಹಣವಿಲ್ಲದೆ ಜೀವನವಿಲ್ಲ ಹೀಗಾಗಿ ಸತ್ಕರ್ಮದ ಕಾರ್ಯ ಕ್ರಮವನ್ನು ನಡೆಸುವಾಗ ಸ್ವಚ್ಚತೆ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಹೊರಗಿನ ಕಾರ್ಯಕ್ರಮ ಬೆಳೆದು ಮನೆಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮ ನಿಂತಿದೆ. ಪ್ರತಿದಿನ ಪೂಜೆ ಮಾಡುತ್ತಿದ್ದವರು ಬಿಟ್ಟು ಹೊರಗೆ ದುಡಿಯುವ ಸ್ಥಿತಿಗೆ ಬಂದಿದೆ. ಇದರಿಂದಾಗಿ ಮನೆಯೊಳಗೆ ಸಮಸ್ಯೆ ಹೆಚ್ಚಾಗುತ್ತಾ ಜನ ಹೊರಗೆ ಬಂದರೆ ಸಮಸ್ಯೆ ಕಡಿಮೆಯಾಗುವುದೆ? ಭಾರತದಂತಹ ಮಹಾದೇಶ ಮಹಿಳೆಯರ ಸಂಪಾದನೆಗೆ ಒತ್ತು ಕೊಡುತ್ತಿದೆ ಎಂದರೆ ಇಲ್ಲಿ ಧರ್ಮ ಎಲ್ಲಿದೆ? ಅಂದರೆ ಭೂಮಿಯ ಋಣ ತೀರಿಸಲು ಪುರುಷನಿಗೆ ಉದ್ಯೋಗ ಅಗತ್ಯ.ಅದೂ ಉತ್ತಮ ಸಂಪಾದನೆಯಿಂದಷ್ಟೆ ತೀರಿಸಬೇಕಿತ್ತು. ಮನೆಯೊಳಗೆ ಇದ್ದ ಲಕ್ಮಿಯರನ್ನು ಹೊರಗೆ ಕಳಿಸಿದರೆ ಋಣ ತೀರುವುದೆ?
ಅಜ್ಞಾನದ ಕಣ್ಣಿಗೆ ಹಣ ಮಾತ್ರ ಕಾಣೋದು ಋಣವಲ್ಲ. ಹೀಗಾಗಿ ಎಷ್ಟು ಹಣ ಬಂದರೂ ತೃಪ್ತಿ ಸಿಗದೆ ಹೊರಗಿನ ಕಾರ್ಯಕ್ರಮ ನಡೆಯುತ್ತಿದೆ. ಆತ್ಮ ನಿರ್ಭರ ಭಾರತಕ್ಕೆ ಬೇಕಾದ ಅಧ್ಯಯನ ಅಭ್ಯಾಸಬಲ ಹಿಂದಿನ ಕಾಲದ ಸಾತ್ವಿಕ ಶಿಕ್ಷಣದಲ್ಲಿತ್ತು. ಹೀಗಾಗಿ ಮನೆ ಮನೆ ಗುರುಕುಲವಾಗಿ ಕಾರ್ಯಕ್ರಮ ಒಳಗೇ ನಡೆದಿತ್ತು. ಇಂತಹ ಅವಕಾಶದಿಂದ ದೂರವಾಗಿರುವ ನಮಗೆ ಈಗ ಹೊರಗಿನ ಅವಕಾಶಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಆತ್ಮಾವಲೋಕನಕ್ಕೆ ಸಮಯವಿಲ್ಲದ ಮೇಲೆ ಅವಕಾಶ ಸದುಪಯೋಗವಾಗುವುದೆ? ಒಟ್ಟಿನಲ್ಲಿ ಅನುಭವಕ್ಕೆ ಕೊರತೆಯಿಲ್ಲ.ಸಂತೋಷ ತಾತ್ಕಾಲಿಕ ವಾಗಿರುತ್ತದೆ.
ಹೆಂಡತಿಮಕ್ಕಳು ಮನೆಯೊಳಗಿದ್ದರೆ ಸಂತೋಷ. ಅವರು ಹೊರಗೆ ಹೊರಟಷ್ಟೂ ನಷ್ಟ. ಆಸೆಯೆನ್ನುವ ಭೂತ ಒಳಗೆ ಸೇರೋದಕ್ಕೆ ಹೊರಗಿನ ಅವಕಾಶ ಸಹಾಯ ಮಾಡುತ್ತದೆ.
ಆದರೆ ಒಳ್ಳೆಯ ಆಸೆಗೆ ಅವಕಾಶವಿದ್ದರೆ ಬಿಡಬಾರದಷ್ಟೆ.
ನಮ್ಮಿಂದ ಇನ್ನೊಬ್ಬರೂ ಬೆಳೆಯುವರೆಂದರೆ ಸರಿ.ಅದರಲ್ಲಿ ಅಧ್ಯಾತ್ಮದ ಉನ್ನತಿ ಇದ್ದರೆ ಪ್ರಗತಿ ಸದ್ಗತಿ ಪ್ರಾಪ್ತಿ.
ಕೇವಲ ರಾಜಕೀಯ ಪ್ರಗರಿಯಾದರೆ ದುರ್ಗತಿಯಷ್ಟೆ.
ಸಾಮಾನ್ಯವಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರತಿಷ್ಡೆ ಸನ್ಮಾನ ಊಟ ಉಪಚಾರ ದ ಜೊತೆಗೆ ರಾಜಕೀಯ ಇರುತ್ತದೆ. ಹೀಗಾಗಿ ಇದರಿಂದ ನಮ್ಮ ಆತ್ಮರಕ್ಷಣೆ ಆಗುವುದೆ ಇಲ್ಲವೆ ಎನ್ನುವ ಬಗ್ಗೆ ಗಮನವಿದ್ದರೆ ಉತ್ತಮ.
No comments:
Post a Comment