ಎಲ್ಲವನ್ನೂ ಹೊಂದಿಕೊಂಡು ಹೊದ್ದುಕೊಂಡು ಮಲಗೋದು ಸುಲಭ.ಆದರೆ ನಡೆಯೋದು ಕಷ್ಟ. ಹಿಂದೂ ಸನಾತನ ಧರ್ಮ ಹೇಳಿರೋದು ನಿನ್ನ ಧರ್ಮ ನಿನ್ನ ಕರ್ಮಕ್ಕೆ ತಕ್ಕಂತೆ ಹೊಂದಿಕೊಂಡಿರು ಅಂತ ಇಂದು ಅನ್ಯರ ಧರ್ಮ ಕರ್ಮಕ್ಕೆ ಹೊಂದಿಕೊಂಡು ನಾವಂದುಕೊಂಡಂತೆ ಆಗುವುದೆನ್ನುವ ಭ್ರಮೆಯಲ್ಲಿ ಮುಂದೆ ನಡೆದಂತೆಲ್ಲಾ ಸತ್ಯ ದರ್ಶನ ವಾಗುತ್ತಿದೆ.ಇಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನವೇ ಹಿಂದುಳಿದಾಗ ಅಂದುಕೊಂಡಿದ್ದೆ ಬೇರೆ ಆಗಿರೋದೆ ಬೇರೆ.
ಮಕ್ಕಳು ನಮ್ಮವರೆಂದು ಅಂದುಕೊಂಡು ಬೆಳೆಸಿ ದೊಡ್ವರಾದ ಮೇಲೆ ಅವರು ನಮ್ಮವರಾಗೇ ಉಳಿಯದಿದ್ದರೆ ಕಾರಣ ಶಿಕ್ಷಣವಾಗಿರುತ್ತದೆ. ಅನ್ಯರ ಶಿಕ್ಷಣ, ವ್ಯವಹಾರ,ಸಾಲ ,ಬಂಡವಾಳದ ಪ್ರತಿಫಲ ಅನ್ಯರ ಆಳಾಗಿ ಸೇವೆ ಮಾಡೋದಷ್ಟೆ.
ಇದನ್ನು ತಿಳಿಯಲು ಪುರಾಣ ಇತಿಹಾಸ ಕೆದಕಿದರೂ ಸಿಗದು.
ಕಾರಣ ಅಂದು ಎಲ್ಲರಲ್ಲಿಯೂ ಒಂದೇ ರೀತಿಯ ಶಿಕ್ಷಣ ಇರದಿದ್ದರೂ ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ನಡೆದಿತ್ತು. ಆತ್ಮಾವಲೋಕನ ದಿಂದ ಆಧ್ಯಾತ್ಮಿಕ ಚಿಂತನೆ ವಾದ ವಿವಾದ ಚರ್ಚೆಗಳಾಗುತ್ತಿತ್ತು.ಈಗ ಭೌತಿಕದ ವಿಜ್ಞಾನದ ಹಿಂದೆ ನಡೆದು ಹಿಂದಿನವರ ಜ್ಞಾನವಿಲ್ಲ ಆದರೆ ಸಾಕಷ್ಟು ಹೊರಗಿನವರ ಹಣವಿದೆ. ಹೊರಗಿನ ಹಣ ಸಾಲವಾಗಿದೆ.ಸಾಲ ತೀರಿಸದಿದ್ದರೆ ನಾವಂದುಕೊಂಡಂತೆ ಆಗದು. ಸಾಲ ತೀರಿಸಲು ಅನ್ಯರ ಮಾತನ್ನು ಕೇಳುತ್ತಾ ಹೊಂದಿಕೊಂಡು ಬಾಳಬೇಕು. ಹಾಗಾದರೆ ನಮ್ಮ ಮಾತು ನಾವೇ ಕೇಳದ ಸ್ಥಿತಿಗೆ ಬಂದರೆ ಆತ್ಮಾವಲೋಕನ ಅಸಾಧ್ಯ.
ಹೀಗೇ ಒಳಗೆ ಅಂದುಕೊಂಡಂತೆ ಹೊರಗಿರಲು ಕಷ್ಟವಾದಾಗ. ಆತ್ಮಹತ್ಯೆ ಗಳಾಗುತ್ತವೆ.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಪೋಷಕರು ಸ್ವಲ್ಪ ಬೈದರೂ ಶಿಕ್ಷೆ ನೀಡಿದರೂ ಆತ್ಮಹತ್ಯೆಗೆ ಪ್ರಯತ್ನ ನಡೆಸುವರೆಂದರೆ ಎಷ್ಟು ಅಜ್ಞಾನ ಆವರಿಸಿದೆ ಎಂದು ತಿಳಿಯಬಹುದು.
ಇದಕ್ಕೆ ಕಾರಣವೇ ಅತಿಯಾದ ಪರಾವಲಂಬನೆ, ಸುಖ, ವೈಭೋಗ, ಸೋಮಾರಿತನ ಎನ್ನಬಹುದು.ಇದರಿಂದ ಸತ್ಯಜ್ಞಾನ ಸಿಗದ ಕಾರಣ ಭೌತಿಕದಲ್ಲಿ ನಾನಂದುಕೊಂಡದ್ದು ಸಾಧಿಸಲು ಯಾವ ಮಾರ್ಗ ವಾದರೂ ಸರಿ ಎಂದು ಹಿಂದೆ ಮುಂದೆ ಅರಿಯದೆ ಯುವಪೀಳಿಗೆ ನಡೆದಿರೋದು. ಇದರ ಪರಿಣಾಮ ಭ್ರಷ್ಟಾಚಾರ. ಒಟ್ಟಿನಲ್ಲಿ ಶಿಷ್ಟಾಚಾರದಲ್ಲಿರಬೇಕೆಂಬ ಆಸೆ ಒಳಗಿದ್ದರೂ ಎಲ್ಲರನ್ನೂ ಹೊಂದಿಕೊಂಡಿರಬೇಕೆನ್ನುವ ಸಮಾಜದ ಮಧ್ಯೆ ಸಂಸಾರ ನಡೆಸೋದು ಕಷ್ಟ. ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರವೇ ಭ್ರಷ್ಟಾಚಾರಕ್ಕೆ ಸಹಕರಿಸಿದರೆ ಸಾಮಾನ್ಯರ ಗತಿ ಅಧೋಗತಿ.
ಬೇಲಿಯೇ ಎದ್ದು ಹೊಲಮೇಯ್ದರೆ ಯಾರನ್ನು ಹೊಂದಿಕೊಂಡು ಬಾಳಬೇಕು.ಸ್ವಂತ ಬುದ್ದಿ ಜ್ಞಾನವಿಲ್ಲದಿದ್ದರೆ ಬದುಕಿಯೂ ವ್ಯರ್ಥ ಎನ್ನುವುದು ಸನಾತನ ಧರ್ಮ.
ಎಲ್ಲಿಯವರೆಗೆ ವಾಸ್ತವ ಅರ್ಥ ಆಗದೆ ಪುರಾಣ ಇತಿಹಾಸದ ರಾಜಕೀಯ ಪ್ರಚಾರವಿರುವುದೋ ಪ್ರಜಾಪ್ರಭುತ್ವ ದಾರಿತಪ್ಪಿ ನಡೆಯುತ್ತಿರುತ್ತದೆ. ಇಲ್ಲಿ ಪ್ರಜೆಗಳ ಸಾಮಾನ್ಯ ಜ್ಞಾನ ಬಿಟ್ಟು ಹೊರಗಿನವರ ವಿಜ್ಞಾನವೇ ದೇಶ ಆಳುತ್ತಿದೆ ಅಂದರೆ ಯಾರನ್ನು ಯಾರು ಹೊಂದಿಕೊಂಡು ನಡೆದಿರೋದು?
ಒಟ್ಟಿನಲ್ಲಿ ಹಣವಿದ್ದರೆ ಹೆಣಕ್ಕೂ ಬೆಲೆ ಎಂದು ಹೂತಿರುವ ಬುರುಡೆ ಹಿಡಿದು ಕಾಲಹರಣ ಮಾಡೋದಕ್ಕೆ ಕೊಡುವ ಸಹಕಾರ ನಿಜವಾದ ಸತ್ಯ ಧರ್ಮ ತಿಳಿಸುವವರಿಗಿಲ್ಲದೆ ಹೊದ್ದು ಮಲಗೋ ಜನಕ್ಕೆ ಸೋಮಾರಿತನ ಬರೋದು ಸಹಜ.ಸೋ 'ಮಾರಿ' ಬಂದಾಗ ಹೊಂದಿಕೊಂಡಿರಬೇಕು.
ರೋಗವನ್ನು ಹಂಚಿಕೊಳ್ಳಲು ಯಾರೂ ತಯಾರಿಲ್ಲವಲ್ಲ.
ಹೊನ್ನು ಹೆಣ್ಣು ಮಣ್ಣಿನ ಋಣ ತೀರಿಸಲು ಬಂದಿರುವ ಈ ಜೀವಾತ್ಮನಿಗೆ ಪರಮಾತ್ಮನ ದರ್ಶನ ಆಗೋದಕ್ಕೆ ಸ್ವಂತ ಬುದ್ದಿ ಜ್ಞಾನವೇ ಆಸ್ತಿ ಯಾಗಿದೆ. ಅದೇ ಅನ್ಯರ ವಶದಲ್ಲಿ ಇದ್ದರೆ ಸ್ವತಂತ್ರ ಯಾರಿಗೆ ಸಿಕ್ಕಿದೆ?
ಪ್ರಕೃತಿ ವಿಕೋಪಕ್ಕೆ ಸಾಕಷ್ಟು ನೆಲಸಮವಾಗಿರುವ ಹೈಟೆಕ್ ತಂತ್ರಗಾರಿಕೆಯ ಹಿಂದೆ ನಡೆದು ದೇಶವನ್ನು ಸಾಲಕ್ಕೆ ಬಿಟ್ಟರೆ ದೇಶಭಕ್ತಿ ಎನ್ನಬೇಕೆ? ಜನಮರುಳೋ ಜಾತ್ರೆಯೂ ಎಂದಂತಿದೆ ಭಾರತೀಯರ ಪರಿಸ್ಥಿತಿ. ಯಾರೋ ಒಬ್ಬ ವ್ಯಕ್ತಿಯನ್ನು ನಂಬಿ ನಮ್ಮ ಹತ್ತಿರದ ಶಕ್ತಿಯನ್ನು ನಂಬದಿದ್ದರೆ ಬಿಡುವಳೆ ಶಕ್ತಿ.
ಭಾರತ ಮಾತೆ ಕನ್ನಡಮ್ಮನ ಹೆಸರಿನಲ್ಲಿ ರಾಜಕೀಯಕ್ಕೆ ಇಳಿಯುವ ಮೊದಲು ಸೇವೆಯ ಅರ್ಥ ತಿಳಿದರೆ ನಮ್ಮ ಸ್ವಂತಿಕೆ ಉಪಯೋಗಕ್ಕೆ ಬರಬಹುದು.
ಭಾರತೀಯ ಮಕ್ಕಳನ್ನು ವಿದೇಶದಲ್ಲಿ ದುಡಿಯಲು ಬಿಟ್ಟು ವಿದೇಶಿಗರನ್ನು ವ್ಯವಹಾರಕ್ಕೆ ಕರೆದು ಕೂರಿಸಿ ಸನ್ಮಾನ ಮಾಡಿದರೆ ಅವರ ಬಂಡವಾಳ,ಸಾಲದಡಿ ನಮ್ಮ ಮಕ್ಕಳು ದುಡಿಯಲೇಬೇಕು. ಸಂಸ್ಕಾರ ಸಂಸ್ಕೃತಿ ಭಾಷೆ ಧರ್ಮದ ಜ್ಞಾನವಿಲ್ಲದವರೊಂದಿಗೆ ಹೊಂದಿಕೊಂಡು ಬಾಳಬೇಕೆಂದರೆ ಅಜ್ಞಾನವಷ್ಟೆ. ಇದರಿಂದ ಆತ್ಮಹತ್ಯೆಗಳು ಹೆಚ್ಚಾಗಿವೆ. ಇದರ ಬಗ್ಗೆ ಚರ್ಚೆ ಮಾಡೋದು ಕಷ್ಟವಿದೆ.ಕಾರಣ ಇದಕ್ಕೆ ಸಹಕಾರ ಕೊಟ್ಟವರೆ ಈಗ ರಾಜರಂತೆ ಆಳುತ್ತಿರುವವರು. ಇದರಿಂದ ಮನುಕುಲಕ್ಕೆ ಕಷ್ಟ ನಷ್ಟ. ಇದಕ್ಕೆ ಕಾರಣವೇ ನಾನೇ ಸರಿ ಎನ್ನುವ ದುರಹಂಕಾರ ಸ್ವಾರ್ಥ ವಾಗಿದೆ. ಇದೊಂದು ಅಸುರಿ ಗುಣವಾದ್ದರಿಂದ ಅಸುರರನ್ನು ಹೊಂದಿಕೊಂಡು ಬಾಳಿದರೆ ಭೂಮಿಯನ್ನು ಆಳೋದು ಅಸುರರೆ. ಕಾಲಹರಣ ಮಾಡದೆ ಆತ್ಮಾವಲೋಕನ ಮಾಡಿಕೊಂಡರೆ ಬದಲಾವಣೆ ಹತ್ತಿರವಿದೆ. ದೂರ ನಡೆದಷ್ಟೂ ಸಂಕಷ್ಟವೇ.
ಯಾರಿಗೆ ಗೊತ್ತು ಯಾರು ದೇಶ ಆಳೋರು ಹಿಂದು ಮುಸ್ಲಿಂ ಕ್ರೈಸ್ತನಾಗಿ ಹಿಂದಿನಜನ್ಮದಲ್ಲಿದ್ದರೆಂದು. ಅಂದಿನ ಜ್ಞಾನವೇ ಇಂದಿಗೂ ಇರುತ್ತದೆ. ಅದೇ ವಿಜ್ಞಾನ ವ್ಯವಹಾರ ಸಾಲ ಮುಂದೆ ಬರುತ್ತದೆ. ಆದರೆ ಜ್ಞಾನದ ವಿಷಯದಲ್ಲಿ ಅಂತರವಿದ್ದರೂ ಭಾರತೀಯ ಹಿಂದಿನ ತತ್ವಶಿಕ್ಷಣ,ಇಂದಿನ ತಂತ್ರ ಶಿಕ್ಷಣ ಮುಂದಿನ ಯಂತ್ರಮಾನವರನ್ನು ಬೆಳೆಸಬಾರದಲ್ಲವೆ?
ಮಕ್ಕಳು ಯಂತ್ರಕ್ಕೆ ಸಮಾನರೆ? ಸ್ವತಂತ್ರ ಜ್ಞಾನವಿಲ್ಲವೆ?
ಆತ್ಮಾವಲೋಕನ ದಿಂದ ಸ್ವತಂತ್ರ ಮಾನವನಾಗಬಹುದು.
ಮಾನವನ ನಂತರವೇ ಮಹಾತ್ಮರನ್ನು ಅರಿಯಬಹುದು.
ಯಾರದ್ದೋ ಜ್ಞಾನ ಬುದ್ದಿವಿಷಯಗಳನ್ನು ತಲೆಗೆ ತುಂಬುವ ಮೊದಲು ಇದರಿಂದ ಆತ್ಮರಕ್ಷಣೆ ಆಗುವುದೆ ಎನ್ನುವ ಜ್ಞಾನ ಪೋಷಕರಲ್ಲಿದ್ದರೆ ಕ್ಷೇಮ.
ಸತ್ಯವಿರುವ ಪೋಸ್ಟ್ ಹಂಚಿಕೊಳ್ಳಲು ಹಿಂದೆ ಮುಂದೆ ನೋಡುವ ನಾವು ಯಾರನ್ನು ಹೊಂದಿಕೊಂಡು ಬಾಳುತ್ತಿದ್ದೇವೆ? ಪರಮಾತ್ಮನನ್ನೋ ಪರಕೀಯರನ್ನೋ?
ಪರಮಾತ್ಮ ಕಾಣೋದಿಲ್ಲ ಪರಕೀಯರು ಕಾಣುವರು.
ಕಣ್ಣಿಗೆ ಕಾಣೋರು ಶಾಶ್ವತ ವಲ್ಲ. ಇದನ್ನು ಯಾರೂ ವಿರೋಧಿಸುವ ಹಾಗಿಲ್ಲ.ಅದಕ್ಕೆ ಚರ್ಚೆ ಆಗೋದಿಲ್ಲ.
ಅನಾವಶ್ಯಕ ವಿಚಾರಗಳನ್ನು ಮನೆ ಮನೆಗೆ ತಲುಪಿಸೋದೆ ಕರ್ಮ ವಾಗಿ ಕಾಡುತ್ತಿದೆಯಷ್ಟೆ.
No comments:
Post a Comment