ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, August 3, 2025

ಗುರು ಹಿರಿಯರಲ್ಲಿ ಭಕ್ತಿ ಭಯ ಅಗತ್ಯವಿದೆ

ಇದರ ಅನುಭವ ನಮಗೆ ಸಾಕಷ್ಟು ಆಗಿರುತ್ತದೆ. ಆದರೆ ಅದರ ಹಿಂದೆ ಇರುವ ಶಕ್ತಿಯ ಕಾಳಜಿ ಬಗ್ಗೆ ಗಮನವಿರದು.
ಮಕ್ಕಳಿಗೆ ಕೇಳಿದ್ದೆಲ್ಲಾ ಕೊಡಿಸುವ ಈಗಿನ ಕಾಲಕ್ಕೂ ಏನು ಕೇಳದೆ ಕೊಟ್ಟಿದ್ದನ್ನು ಪಡೆದು ನಡೆದ ಅಂದಿನ ಕಾಲಕ್ಕೂ ಅಂತರವಿದೆ. ಅಂದಿನ‌ಕೂಡುಕುಟುಂಬದಲ್ಲಿ ಇದ್ದದರಲ್ಲಿ ಹಂಚಿ ಬಾಳುವ ಜ್ಞಾನಕ್ಕೂ  ಒಬ್ಬರೆ ಎಲ್ಲವನ್ನೂ ಅನುಭವಿಸಬೇಕೆನ್ನುವ ಇಂದಿನ ಮಕ್ಕಳಿಗೂ ಅಂತರವಿದೆ.
ಅಂದಿನ‌ಹಿಂದೂಗಳಲ್ಲಿದ್ದ ತತ್ವಶಾಸ್ತ್ರ ಕ್ಕೂ ಈಗಿನವರ ತತ್ವಶಾಸ್ತ್ರ ಕ್ಕೂ ಅಂತರವಿದೆ. ಅಂದಿನ ಶಿಕ್ಷಣಕ್ಕೂ‌ಇಂದಿನ ಶಿಕ್ಷಣಕ್ಕೂ ಅಂತರವಿದೆ.ಅಂದಿನ‌ಗುರುವಿಗೂ ಈಗಿನ ಗುರುವಿಗೂ ಅಂತರವಿದೆ. ಅಂದಿನ ಸಂಸಾರಕ್ಕೂ ಈಗಿನ ಸಂಸಾರಕ್ಕೂ ಅಂತರವಿದೆ. ಎಲ್ಲಾ ಅಂತರಗಳ‌ಮಧ್ಯೆ ರಾಜಕೀಯವಿದ್ದು ಮಧ್ಯವರ್ತಿ ಮಾನವ ನಿಂತು  ಅರ್ಧ ಸತ್ಯದ ವ್ಯವಹಾರಕ್ಕೆ ಇಳಿದು ತನ್ನ ಸ್ವಾರ್ಥ ಚಿಂತನೆಯಲ್ಲಿ ತನ್ನ ಆತ್ಮಕ್ಕೆ ತಾನೇ ಮೋಸಹೋಗೋದು ಸಾಮಾನ್ಯ ವಿಚಾರವಾಗುತ್ತಿದೆ. 
ನಿಜವಾಗಿಯೂ  ಇಲ್ಲಿ ಮೋಸ ಮಾಡಿದವರು ಯಾರು? ಹೋದವರು ಯಾರು? ಮಾನವರೆ ಎಂದಾಗ  ನಮ್ಮ ಮನಸ್ಸಿನ ಸಮಸ್ಯೆಗೆ  ಕಾರಣ ಅಜ್ಞಾನ ವಾಗಿದೆ.
ಸತ್ಯ ಕಠೋರವಾಗಲು ಕಾರಣ ಅದನ್ನು ‌ನಿರ್ಲಕ್ಯ ಮಾಡಿ ಲಕ್ಷ ಲಕ್ಷ ಹಣಸಂಪಾದನೆ ಮಾಡಿರೋದಷ್ಟೆ. ಲಕ್ಷಕೊಟ್ಟರೂ ಸತ್ಯ  ಬೆಳೆಯದು  ಕಾರಣ ಸತ್ಯ ಇರೋದು ಒಂದೇ. ಅದು ಹಣದಿಂದ  ಬದಲಾಗೋದಿಲ್ಲ. ಅದರೆಡೆಗೆ ಹೋಗೋದೆ ಜೀವನ ಎನ್ನುತ್ತದೆ ಅಧ್ಯಾತ್ಮ. ಕಲಿಕೆಯೇ ಅಸತ್ಯದೆಡೆಗೆ ನಡೆಸಿದರೆ ಕಲಿಗಾಲವಾಗುತ್ತದೆ. 

ಲೇಖನಗಳಲ್ಲಿ ಸತ್ಯವಿರುವುದರಿಂದ ಇದು ಇನ್ನೂ ಹಿಂದುಳಿದಿರೋದು. ಸತ್ಯ ಯಾವತ್ತೂ ಕಹಿ. ಆದರೆ ಅದು ದೇವರು ಎನ್ನುವ ಕಾರಣಕ್ಕಾಗಿ  ತಿಳಿಯುವುದು ಅಗತ್ಯವಿದೆ.
ಸಂಪೂರ್ಣ ಸತ್ಯ ಒಂದೇ ಜನ್ಮದಲ್ಲಿ ತಿಳಿಯಲಾಗದು.‌ಆದರೆ ಈ ಜನ್ಮದ ಗುರಿಯನ್ನು ತಿಳಿದು ನಡೆಯಲು ಸತ್ಯ ಅಗತ್ಯವಿದೆ.
ಕವಲೊಡೆದ ದಾರಿ ಒಮ್ಮೆ ಮೂಲ ಸೇರಬೇಕು. ಓಡುವ ನದಿ ಸಾಗರವ ಸೇರಿದಂತೆ.. ಈಗ ನದಿಯನ್ನು ದಾರಿತಪ್ಪಿಸುವ ಕೆಲಸ ರಾಜಕೀಯದೊಳಗಿದೆ ಎಂದರೆ  ಅನರ್ಥ .
ಪ್ರಕೃತಿಯನ್ನು  ಆಳೋದಕ್ಕೆ ಹೋಗಬಾರದಷ್ಟೆ.

No comments:

Post a Comment