ಈಗಲಾದರೂ ಹಿಂದೂಗಳು ಸನಾತನಧರ್ಮದ ಪಾಠ ಕಲಿಯಬಹುದೆ? ಅಥವಾ ರಾಜಕೀಯದ ವಶದಲ್ಲೇ ಸಾಯಬೇಕೆ?
ಪ್ರಶಸ್ತಿ ಪದಕ ಸನ್ಮಾನ ಸಮಾವೇಶಗಳ ಮಧ್ಯೆ ಧರ್ಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ದೇಶೀಯ ಶಿಕ್ಷಣದ ಕೊರತೆಯಿಂದ ವಿದೇಶಿ ರೀತಿ ನೀತಿ ಸಂಸ್ಕೃತಿ ಗಳು ಬೆಳೆದವು. ವಿದೇಶಿ ಎನ್ನುವ ಬದಲಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಎಂದರು. ಪಶ್ಚಿಮ ದಿಕ್ಕನ್ನು ಮುಳುಗಡೆಯ ದಿಕ್ಕು ಎನ್ನುವರು.ಅಂದರೆ ಸನಾತನ ಧರ್ಮದ ಪ್ರಕಾರ ಸೂರ್ಯಾಸ್ತ ಪಶ್ಚಿಮದಲ್ಲಿ ಆಗುವುದರಿಂದ ಭಾರತಕ್ಕೆ ಇದು ಮುಳುಗಡೆಯ ದಿಕ್ಕು. ಭೂಮಿಯ ಇನ್ನರ್ದ ಭಾಗದಲ್ಲಿ ಬೆಳಕಿದ್ದು ಅಲ್ಲಿ ಸೂರ್ಯ ಬೆಳಗುತ್ತಿರುವುದರಿಂದ ಇಡೀ ಭೂ ಮಂಡಲದಲ್ಲಿ ಕತ್ತಲುಬೆಳಕಿನ ಆಟವಿರುತ್ತದೆ.ಮಾನವ ಮಾತ್ರ ತನ್ನ ಕಣ್ಣಿಗೆ ಕಂಡದ್ದೆ ಸತ್ಯವೆಂದರಿತು ನಡೆಯುವುದು ಭ್ರಮೆ ಯಷ್ಟೆ.
ಇಲ್ಲಿ ವಾಸ್ತವದಲ್ಲಿ ಎಲ್ಲರೂ ಮಾನವರೆ .ಅದರಲ್ಲಿ ಹೆಸರು ಎಲ್ಲರಿಗೂ ಇದೆ.ಆ ಹೆಸರಿನಲ್ಲಿ ಯಾವ ಕೆಲಸ ಮಾಡುವರೋ ಅದೇ ಅವರನ್ನು ಮೇಲೆ ಕೆಳಗೆ ಆಡಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಹೊರದೇಶದವರು ಪ್ರಶಸ್ತಿ ಕೊಟ್ಟರೆ ದೊಡ್ಡ ಸಾಧನೆ.ನಮ್ಮವರಿಂದ ಪ್ರಶಸ್ತಿ ಪಡೆಯುವುದು ಕಷ್ಟ.ಕಾರಣ ನಮ್ಮವರೆ ನಮಗೆ ಶತ್ರುಗಳು. ಹಿಂದೂಗಳಿಗೆ ಹಿಂದೂಗಳ ಏಳಿಗೆ ಸಹಿಸಲ್ಲ ಅಂದರೆ ನಮ್ಮ ಒಳಗಿನ ಬುದ್ದಿ ಸರಿಯಿಲ್ಲವೆಂದರ್ಥ. ಹಾಗೆ ಅನ್ಯರಲ್ಲಿಯೂ ಇದೆ. ಇದು ನಮ್ಮ ಆತ್ಮವಂಚನೆಯೇ ಆಗಿದ್ದರೂ ಅದನ್ನು ಬೆಳೆಸಿಕೊಂಡಾಗ ಪರಮಾತ್ಮ ಅನ್ಯರ ರೂಪದಲ್ಲಿ ಮಧ್ಯೆ ನಿಂತು ಅವರಿಂದಲೇ ಬುದ್ದಿ ಕಲಿಸುವ ಕೆಲಸ ಮಾಡಿಸುವನು.
ಪರಮಾತ್ಮನಿಗೇನೂ ಬೇಧವಿಲ್ಲ. ಜೀವಾತ್ಮರಿಗೇ ಬೇಧಬಾವ,ಬಡವ ಬಲ್ಲಿದ ಭಿನ್ನಾಭಿಪ್ರಾಯ ದ್ವೇಷದಿಂದ ಸಮಸ್ಯೆಯಾಗುತ್ತಿರೋದು.ಇದನ್ನರಿತ ಮಹಾತ್ಮರುಗಳು ಪರಮಸತ್ಯವರಿತು ರಾಜಕೀಯ ಬಿಟ್ಟು ಸ್ವತಂತ್ರ ಬುದ್ದಿ ಜ್ಞಾನದಿಂದ ಜೀವನ್ಮುಕ್ತರಾಗಿರುವರು.
ಪುರಾಣ ಇತಿಹಾಸ ಕಥೆಗಳಲ್ಲಿಯೂ ಇದನ್ನು ಕಾಣಬಹುದು.
ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವಂತೆ ಈ ದ್ವೇಷದ ಕಿಡಿ ಬೆಂಕಿಯಾಗಿ ಸುಟ್ಟರೂ ಮತ್ತದೇ ರೀತಿಯಲ್ಲಿ ಜನ್ಮ ಪಡೆಯೋದರಿಂದ ಈಗ ಸಾಕಷ್ಟು ಅತೃಪ್ತ ಆತ್ಮಗಳು ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ದೇವರನ್ನೇ ಆಳಲು ಹೊರಟಿವೆ. ಇದನ್ನು ವಿರೋಧಿಸಿದರೂ ಉಪಯೋಗವಿಲ್ಲ.
ಇಲ್ಲಿ ಕಾಣೋದು ಕೇವಲ ಹೆಸರು, ಹಣ ,ಜಾತಿ ,ಧರ್ಮ ವಷ್ಟೆ.
ದೇವರ ಹೆಸರಿನಲ್ಲಿ ಅತ್ಯಾಚಾರ, ಅನಾಚಾರ, ಅನ್ಯಾಯ ನಡೆದರೂ ಹಣದಿಂದ ಮುಚ್ಚಿಹಾಕುವ ಅನ್ಯಾಯಾಧೀಶರಿರುವಾಗ ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಿರುವ ಪರಮಾತ್ಮನಿಗೇ ಬಿಟ್ಟು ನಾವು ಶುದ್ದತೆ ಕಡೆಗೆ ಹೊರಟರೆ ಎಲ್ಲಾ ಸರಿಯಾಗುತ್ತದೆ. ಆದರೆ ನಮ್ಮ ರಾಜಕೀಯ ಶಕ್ತಿಗೆ ಇದು ಸಾಧ್ಯವಿಲ್ಲ. ಜನಬಲ ಹಣಬಲ ಅಧಿಕಾರಬಲದಲ್ಲಿ ಎಷ್ಟು ಅಧರ್ಮ ಅಸತ್ಯ ಅನ್ಯಾಯ ಕ್ಕೆ ಸಹಕಾರ ಸಿಕ್ಕರೂ ಅದನ್ನು ದೇವರೆ ಮಾಡಿಸಿರೋದೆಂದರೆ ತಪ್ಪು. ನಮ್ಮ ಈ ಕೆಟ್ಟ ಕರ್ಮಕ್ಕೆ ದೇವರು ಹೊಣೆಯಾಗೋದಿಲ್ಲ. ಕೆಲವು ಕೆಳಮಟ್ಟದ ಶಕ್ತಿಯನ್ನು ನಾವೇ ಬೆಳೆಸಿರುವಾಗ ಮೇಲಿರುವ ದೈವಶಕ್ತಿಯ ಅರಿವಿಲ್ಲದೆ ಈ ಕಾರ್ಯ ಕೆಳಗೇ ನಡೆಯುತ್ತದೆ. ಇದಕ್ಕೆ ಕಾರಣ ಕೆಳಮಟ್ಟದ ಕಳಪೆ ಶಿಕ್ಷಣದಿಂದ ಪಡೆದ ಜ್ಞಾನ.
ಅರ್ಧ ಸತ್ಯ ಅಪಾಯ. ಹೀಗಾಗಿ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ಪ್ರಶಸ್ತಿ ಪದವಿ ಅಧಿಕಾರ ಸ್ಥಾನದಿಂದ ಜನಬಲ ಹಣಬಲಗಳಿಸುತ್ತಾ ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆ ತಂದರೆ ವಿನಾಶ ಕಟ್ಟಿಟ್ಟ ಬುತ್ತಿ.
ಯಾರದ್ದೋ ಮಾನವನ ಕಥೆ ಬರೆದು ಜಗತ್ತನ್ನು ಆಳಲು ಹೋಗೋದು ದುರಂತವಷ್ಟೆ. ಇಲ್ಲಿ ಕಥೆಯ ಹಿಂದಿನ ವ್ಯಥೆಯನ್ನು ವೈಭವೀಕರಿಸುವ ದುಷ್ಟಶಕ್ತಿಗಳ ಕೈವಾಡವಿದೆ.
ದೈವೀಕ ಗುಣಸಂಪತ್ತನ್ನು ನಿರ್ಲಕ್ಷ್ಯ ಮಾಡುತ್ತಾ ಅಧರ್ಮಕ್ಕೆ ಸಹಕರಿಸುವ ದುರುದ್ದೇಶವಿದ್ದರೆ ನಾರಿ ಮಾರಿಯಾಗಿ ಕಾಡೋದು ಸಹಜ. ನಾರಿ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಮುಂದಿದೆ ಮಾರಿಹಬ್ಬ. ಒಟ್ಟಿನಲ್ಲಿ ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ ಆ ಪರಮಾತ್ಮನ ಸತ್ಯದ ವಿರುದ್ದ ನಡೆದಷ್ಟೂ ಮನುಕುಲಕ್ಕೆ ಅಪಾಯ.
ಕಲಿಗಾಲದ ಮಹಿಮೆಯೆನ್ನಬೇಕೋ ಅಥವಾ ಕಲಿಕೆಯ ಪ್ರಭಾವವೋ? ಎರಡೂ ಸತ್ಯ.ಆದರೆ ಸತ್ಯವಿಲ್ಲದ ಕಥೆ ಹಿಡಿದು ಅಸತ್ಯದ ಸಾಮ್ರಾಜ್ಯ ನಡೆಸೋದರಿಂದ ಧರ್ಮಕ್ಕೆ ಉಳಿಗಾಲವಿಲ್ಲ.ಹಿಂದೂ ಸ್ತ್ರೀ ಯರ ಜ್ಞಾನ ಗುರುತಿಸದೆ ಅನ್ಯರನ್ನು ಎತ್ತಿ ಹಿಡಿದಷ್ಟೂ ಭಾರತಮಾತೆಗೆ ಅವಮಾನ.
ಸಂಸಾರದಿಂದ ಹೊರಬರೋದು ಧರ್ಮದಿಂದ ಹೊರಬರೋದು ಸಾಧನೆ ಎನ್ನುವ ರೀತಿಯಲ್ಲಿ ಪ್ರಚೋಧನೆ ನೀಡುವುದು ಅಧರ್ಮ. ಅಧರ್ಮಕ್ಕೆ ತಕ್ಕಂತೆ ಫಲವೂ ಇರುತ್ತದೆ. ಈಗಲಾದರೂ ಸನಾತನಧರ್ಮದ ತತ್ವದರ್ಶನ ಆಗೋದಕ್ಕೆ ಹಿಂದೂಗಳಲ್ಲಿ ಒಗ್ಗಟ್ಟು ಮೂಡಿದರೆ ಉತ್ತಮ.
ಆದರೆ ಇದರಲ್ಲಿ ರಾಜಕೀಯ ಬೆರೆಸಿದಷ್ಟೂ ಅಪಾಯವೇ.ಮನಸ್ಸು ಮೈ ಮನೆ ಶುದ್ದಿಪಡಿಸಿಕೊಂಡರೆ ಒಳಗಿನ ಪರಮಾತ್ಮನ ದರ್ಶನ .ಹೊರಗೆ ಬಂದಷ್ಟೂ ಕಲ್ಮಶವೆ. ಸ್ವಚ್ಚ ಭಾರತಕ್ಕೆ ಸ್ವಚ್ಚ ಶುದ್ದ ವಿಚಾರದ ಶಿಕ್ಷಣದ ಅಗತ್ಯವಿದೆ.
ಈ ವಿಚಾರವನ್ನು ಕಳೆದ 18 ವರ್ಷಗಳಿಂದಲೂ ಲೇಖನಗಳ ಮೂಲಕ ಬರೆದು ಮಠ ಮಂದಿರ ಶಾಲಾಕಾಲೇಜ್ ಸಂಘಗಳವರೆಗೂ ಪತ್ರಿಕೆಯಮೂಲಕ ತಲುಪಿಸುವಾಗ ತಿಳಿದ ವಿಚಾರವಿಷ್ಟೆ.ಇಲ್ಲಿ ಸ್ತ್ರೀ ಗೃಹಿಣಿಯಾಗಿ ಸತ್ಯ ತಿಳಿಸಿದರೆ ನಿರ್ಲಕ್ಷ್ಯ, ಅದೇ ಸ್ತ್ರೀ ದುಡಿದು ಲಕ್ಷ ದೇಣಿಗೆ ಕೊಟ್ಟರೆ ಸನ್ಮಾನ. ಹಣವಿದ್ದರೆ ಜ್ಞಾನದ ಕೊರತೆ,ಜ್ಞಾನವಿದ್ದರೆ ಹಣದ ಕೊರತೆ. ಎಂದರೆ ಎತ್ತ ಸಾಗಿದ್ದಾರೆ ಭಾರತೀಯರು?
ಪಾಶ್ಚಾತ್ಯ ರ ವೈಭೋಗದಲ್ಲಿ ಭಾರತೀಯರ ವೈಭವದ ಆಚರಣೆಯಲ್ಲಿ ದೈವತ್ವದ ಕೊರತೆ ಎದ್ದು ಕಾಣುತ್ತಿದೆ. ಯೋಗವೇ ಇಲ್ಲದಿದ್ದರೆ ಫಲವಿರದು.ಯೋಗವೆಂದರೆ ಸೇರುವುದು. ಸತ್ಯಧರ್ಮ ಜ್ಞಾನವಿಜ್ಞಾನ,ಹರಿಹರ,ಸ್ತ್ರೀ ಪುರುಷರ ಜ್ಞಾನದ ನಡುವೆ ಅಂತರ ಬೆಳೆಸಿದರೆ ಪರಮಾತ್ಮನೊಂದಿಗೆ ಜೀವಾತ್ಮ ಸೇರುವುದು ಹೇಗೆ?
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗವು ಅಧ್ಯಾತ್ಮ ಸಾಧನೆಯಾಗಿದೆ. ಈಗ ಇವು ಭೋಗಕ್ಕೆ ವ್ಯವಹಾರಕ್ಕೆ ಇಳಿದು ಜನರನ್ನು ದುರ್ಭಳಕೆ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಹಣವಿದ್ದರೂ ಸಾಲವೇ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ..ಎಂದರು ಈಗ ಉದ್ಯೋಗಮ್ ಸ್ತ್ರೀ ಲಕ್ಷಣಂ ಎನ್ನುವ ಪರಿಸ್ಥಿತಿ ಭಾರತಕ್ಕೆ ಬಂದಿರೋದಕ್ಕೆ ಅತಿಯಾದ ಸಾಲವೇ ಕಾರಣ. ಆಸ್ತಿ ಜ್ಞಾನದಿಂದ ಮಾಡುವ ಬದಲು ಸಾಲದಿಂದ ಆಸ್ತಿ ಮಾಡಿ ಮಕ್ಕಳು ಮೊಮ್ಮಕ್ಕಳು ಗುರುಹಿರಿಯರ ಜ್ಞಾನ ಬಿಟ್ಟು ನಮ್ಮವರಿಂದ ದೂರವಾಗುತ್ತಾ ಅನ್ಯರ ಕೈ ಕೆಳಗೆ ದುಡಿಯುವಂತಾಗಿರೋದು ಆತ್ಮದುರ್ಭಲತೆಯ ಲಕ್ಷಣ. ಒಟ್ಟಿನಲ್ಲಿ ಎಲ್ಲರೂ ಮಾನವರೆ .ಸಾಲ ತೀರಿಸಲು ಬಂದಿರುವಜೀವಾತ್ಮನ ತಲೆ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿರುವ ಅಜ್ಞಾನಕ್ಕೆ ಮದ್ದು ಸುಜ್ಞಾನದ ಶಿಕ್ಷಣವಾಗಿತ್ತು.ಪೋಷಕರೆ ಅದರ ವಿರುದ್ದ ಇದ್ದರೆ ಮಕ್ಕಳ ಗತಿ ಅಧೋಗತಿ. ಮನೆಯೇ ಗುರುಕುಲವಾಗಿದ್ದ ಕಾಲ ಹೋಗಿ ಹೊರಗೆ ಗುರುಕುಲವಿದ್ದರೂ ಲಕ್ಷ ಕೊಡಬೇಕಿದೆ.
ಲಕ್ಷಗಳಿಸಲು ತಂತ್ರದ ದುರ್ಭಳಕೆ ಅದೇ ಅಧರ್ಮಕ್ಕೆ ಕಾರಣ.
ಮನೆಯೊಳಗೆ ಸ್ವತಂತ್ರವಾಗಿ ಜ್ಞಾನದಿಂದ ಬಾಳಿಬದುಕುವ ಶಕ್ತಿ ಮಹಿಳೆಯರಿಗಿದ್ದರೂ ಅವರನ್ನು ಗೌರವದಿಂದ ಕಾಣುವ ಜ್ಞಾನ ಪುರುಷರಿಗಿಲ್ಲದೆ ರಾಜಕೀಯದಿಂದ ಆಳಲು ಹೋದರೆ ಮಹಿಳೆ ಸಂಸಾರ ತೊರೆದು ಹೊರಬಂದು ಹಣ ಹೆಸರು ಸ್ಥಾನ ಸನ್ಮಾನಕ್ಕೆ ತಲೆಬಾಗುವಳು.ಇಲ್ಲಿ ಆತ್ಮಕ್ಕೆ ಲಿಂಗಬೇಧವಿಲ್ಲ. ಅಧ್ಯಾತ್ಮ ಸಾಧನೆಗೆ ಸ್ತ್ರೀ ಯನ್ನು ತಡೆದಷ್ಟೂ ಭೂಮಿಯಲ್ಲಿ ಅಸುರ ಶಕ್ತಿ ಬೆಳೆಯುತ್ತದೆ. ಮೊದಲ ಗುರುವಿಗೇ ಅಜ್ಞಾನ ಆವರಿಸಿದರೆ ಮಕ್ಕಳ ಗತಿ?
ಸಾಮಾನ್ಯ ಜ್ಞಾನವಿಲ್ಲದೆ ಎಷ್ಟು ವಿಶೇಷ ಜ್ಞಾನ ಬೆಳೆಸಿದರೂ ನೀರಿನಲ್ಲಿ ಹೋಮಮಾಡಿದಂತೆಯೇ ಸರಿ. ಭಾರತದ ಈ ಸ್ಥಿತಿಗೆ ಕಾರಣವೇ ಪ್ರಜಾಪ್ರಭುತ್ವದ ಪ್ರಜೆಗಳ ಸಾಮಾನ್ಯ ಜ್ಞಾನ ನಿರ್ಲಕ್ಷ್ಯ ಮಾಡಿಕೊಂಡು ವಿಶೇಷಜ್ಞಾನದಿಂದಲಕ್ಷ ಗಳಿಸುತ್ತಾ ಸತ್ಯಜ್ಞಾನದಿಂದ ದೂರವಾಗಿರೋದು. ಪ್ರಜಾಪ್ರಭುತ್ವ. ಪ್ರಜೆಗಳ ಅಜ್ಞಾನದಿಂದ ನಡೆದರೆ ಅಧೋಗತಿ,ಸುಜ್ಞಾನದೆಡೆಗೆ ನಡೆಸೋದು ಧಾರ್ಮಿಕ ವರ್ಗದ ಪ್ರಗತಿಯಾಗಿತ್ತು.ಈ ವಿಚಾರವನ್ನು ಮಠಾಧೀಶರವರೆಗೂ ತಲುಪಿಸಿದರೂ ಸಾಮಾನ್ಯರೆನ್ನುವ ಕಾರಣದಿಂದ ಈವರೆಗೆ ಪ್ರತಿಕ್ರಿಯೆ ನೀಡದಿರೋದು ಪರಮಾತ್ಮನ ಪ್ರೇರಣೆಯೆ ಆಗಿದ್ದರೂ ಸತ್ಯ ಹೊರಬರೋದು ಅವನ ಪ್ರೇರಣೆಯೆ ಆಗಿದೆ. ಒಟ್ಟಿನಲ್ಲಿ ಇಲ್ಲಿ ಅಧಿಕಾರ ಸ್ಥಾನಕ್ಕೆ ಕೊಡುವ ಗೌರವ ನಿಜವಾದ ಸತ್ಯಕ್ಕೆ ಸಿಗದ ಕಾರಣದಿಂದ ಇಂದು ಚಾಮುಂಡಿ ಅನ್ಯರ ವಶ ಆಗಲು ಹೊರಟಿದ್ದಾಳೆಂದರೆ ತಪ್ಪಲ್ಲ.
ಹಿಂದೂ ಸ್ತ್ರೀ ಶಕ್ತಿಯರಿಂದ ಎಷ್ಟೋ ಉತ್ತಮ ಪುಸ್ತಕಗಳು ರಚನೆಯಾಗಿದ್ದರೂ ಹಿಂದೂಗಳು ಅದನ್ನು ಬದಿಗಿಟ್ಟು ಹಿಂದುಳಿದರೆ ಅನ್ಯರು ಅವರ ಧರ್ಮ ಬಿಟ್ಟು ಹೋದರೂ ಅವರನ್ನು ಬಿಡದೆ ಮೇಲಕ್ಕೆ ಏರಲು ಬಿಡುವರೆಂದರೆ ನಮ್ಮ ತಪ್ಪು. ನಮಗೆ ನಾವೇ ಶತ್ರುವಾದರೆ ಪರರನ್ನು ಪರಮಾತ್ಮನನ್ನು ಕಾರಣವೆನ್ನಲಾಗದು. ಇಂದಿಗೂ ನಮ್ಮ ಈ ಕುತಂತ್ರ ಬುದ್ದಿವಂತಿಕೆ ಸ್ವತಂತ್ರ ಜ್ಞಾನವನ್ನು ನಷ್ಟ ಮಾಡಿದೆ.
ಯಾರೂ ಶಾಶ್ವತವಲ್ಲ ಎಂದು ತಿಳಿದರೂ ಮಾನವನಿಗೆ ತತ್ವಕ್ಕಿಂತ ತಂತ್ರವೇಮುಖ್ಯವಾಗುತ್ತಿದೆ.ಇದೇಮಾಯೆ.ಎಲ್ಲಾ ಒಮ್ಮೆ ಮಾಯವಾಗೋರೆ.ಈ ಪ್ರಶಸ್ತಿ ಯ ಹಿಂದಿನ ರಾಜಕೀಯ ಶಕ್ತಿಯೂ ಒಮ್ಮೆ ಮಾಯವಾಗೋದೆ ಎಂದಾಗ ಮಾನವ ಯಾವುದರ ಹಿಂದೆ ಓಡುತ್ತಿರುವುದು?
ಸಂಘಟನೆಗಳು ರಾಜಕೀಯ ಬಿಟ್ಟು ಚರ್ಚೆ ನಡೆಸಿದರೆ ಸತ್ಯ ಒಳಗಿದೆ. ಆತ್ಮರಕ್ಷಣೆಗಾಗಿ ಸತ್ಯವೇ ದೇವರಾಗಬೇಕಿದೆ. ಇದು ಜನಸಾಮಾನ್ಯರಿಗೆ ಅರ್ಥ ವಾಗದಂತೆ ರಾಜಕೀಯತೆ ಬೆಳೆದು ಆಳುತ್ತಿದೆ. ಇದರಿಂದ ಮಾನವ ಮಾನವನಿಗೇ ಶತ್ರು.
ತನಗೆ ತಾನೇ ಮೋಸ ಹೋದಾಗ ತಪ್ಪು ಯಾರದ್ದು? ಕರ್ಮಕ್ಕೆ ತಕ್ಕಂತೆ ಫಲ ಇದೇ ಕರ್ಮ ಸಿದ್ದಾಂತ ವಾಗಿದೆ.
No comments:
Post a Comment