ತಪ್ಪು ಮಾಡದ ವ್ಯಕ್ತಿ ಈ ಜಗತ್ತಿನಲ್ಲಿ ಇಲ್ಲ.ಅದರಲ್ಲಿ ದೇವಾಸುರರಿಬ್ಬರೂ ಇದ್ದಾರೆ.ದೇವತೆಗಳು ಮಾಡಿದ್ದನ್ನು ಅಸುರರು ಮಾಡಿದರೆ ತಪ್ಪು ಎಂದರೆ ಒಪ್ಪಲಾಗದು.
ಆದರೆ ಭೂಮಿಯಲ್ಲಿ ಜ್ಞಾನದಿಂದ ನಡೆಯುವುದಕ್ಕೂ ಅಜ್ಞಾನದಲ್ಲಿ ನಡೆಯುವುದಕ್ಕೂ ಹಣವೇ ಮಾಧ್ಯಮವಾದಾಗ ಹಣಗಳಿಸಲು ಅಸತ್ಯ ಅನ್ಯಾಯ ಅಧರ್ಮ ಬೆಳೆಯುತ್ತ ಕೊನೆಗೆ ತಪ್ಪು ತಪ್ಪಾಗಿ ಅರ್ಥ ಮಾಡಿಕೊಂಡು ಒಬ್ಬರನ್ನೊಬ್ಬರು ದ್ವೇಷ. ಮಾಡಿಕೊಂಡು ಮುಂದೆ ಹೋದಾಗ ಅ ದೇ ಇತಿಹಾಸ ಪುರಾಣ ಕಥೆಗಳಾಗಿ ಹರಡುತ್ತದೆ. ಆದರೆ ಅದರಿಂದ ನಾವೇನು ತಿಳಿಯಬೇಕು ಬೇಡ ಎನ್ನುವ ವಿಚಾರದಲ್ಲಿ ನಾವು ಚಿಂತನೆ ನಡೆಸಿದರೆ ಎಲ್ಲಾ ತಪ್ಪಾಗಿರೋದಿಲ್ಲ ಸರಿಯೂ ಇರದು. ಒಟ್ಟಿನಲ್ಲಿ ಜೀವನ ನಡೆಸಲು ಬೇಕಾಗಿರುವ ಸತ್ಯಜ್ಞಾನದೆಡೆಗೆ ಹೊರಟಾಗ ತಪ್ಪು ಹೊರಗೆ ಕಾಣುತ್ತದೆ. ಅಸತ್ಯದೆಡೆಗೆ ಹೊರಟಾಗ ತಪ್ಪು ಒಳಗೇ ಬೆಳೆಯುತ್ತದೆ.
ಒಳಗಿನ ತಪ್ಪು ಬೇರೆಯವರಿಗೆ ಕಂಡಾಗ ಹೇಳುವರು. ಹೇಳಬಾರದೆಂದರೆ ಇನ್ನಷ್ಟು ತಪ್ಪಾಗುತ್ತದೆ. ಹಿಂದೆ ಗುರುಹಿರಿಯರು ಕಿರಿಯರು ತಪ್ಪು ದಾರಿ ಹಿಡಿದಾಗ ತಡೆದು ನಿಲ್ಲಿಸಿ ಬುದ್ದಿಕಲಿಸುತ್ತಿದ್ದರು.ಈಗ ಕಿರಿಯರೆ ಹಿರಿಯರಿಗೆ ಬುದ್ದಿ ಕಲಿಸುವಷ್ಟು ವಿದ್ಯಾವಂತರಾಗಿರುವರು ಆದರೆ ಜ್ಞಾನದ ಕೊರತೆಯಲ್ಲಿ ತಪ್ಪು ದಾರಿ ಹಿಡಿದರೂ ಹಣಸಂಪಾದನೆ ಇರುವುದರಿಂದ ಅದನ್ನು ಹಿರಿಯರೂ ಒಪ್ಪಿ ಸಹಕಾರ ಕೊಡುವುದರಿಂದ ದಾರಿತಪ್ಪಿಸುವ ಕೆಲಸ ಹೆಚ್ಚು.
ಧರ್ಮ ಯಾವತ್ತೂ ರಕ್ಷಣೆ ನೀಡುತ್ತದೆ. ಧರ್ಮ ತಪ್ಪಿ ನಡೆದರೆ ಶಿಕ್ಷೆ ಆಗುತ್ತದೆ ಎನ್ನುವುದು ಸತ್ಯ ವಾದರೂ ಅದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ತಂತ್ರಪ್ರಯೋಗವಾಗುತ್ತದೆ.ತಂತ್ರ ಯಾವತ್ತೂ ತಾತ್ಕಾಲಿಕ ಎನ್ನುವ ಸತ್ಯವರಿತರೆ ಸ್ವತಂತ್ರ ವಾಗಿ ಸರಿದಾರಿಯಲ್ಲಿ ನಡೆಯಬಹುದು.
ಕಲಿಕೆಯೇ ತಪ್ಪಾದಾಗ ಅದನ್ನು ಸರಿಪಡಿಸಲು ಕಷ್ಟಪಡಬೇಕು.
ಸಂಪಾದನೆಯೇ ಅಧರ್ಮ ದೆಡೆಗೆ ನಡೆದಾಗ ಜ್ಞಾನ ಬರದು.
ಹೀಗೇ ಒಂದನ್ನೊಂದು ವಿರುದ್ದ ಸೇರಿಸಲು ಹೋದರೆ ಘರ್ಷಣೆ ಆಗುತ್ತದೆ. ಯೋಗದ ವಿಚಾರದಲ್ಲಿ ತಪ್ಪು ತಪ್ಪು ಸೇರಿ ಬೆಳೆದಂತೆ ಸರಿಯಾಗಿದ್ದು ಸರಿಯಾದೆಡೆಗೆ ನಡೆದರೆ ಉತ್ತಮ.
ಹೇಗೆ ವೈಜ್ಞಾನಿಕ ಸಂಶೋಧನೆ ಹೊರಗಿನಿಂದ ಬೆಳೆದಿದೆಯೋ ಅಧ್ಯಾತ್ಮದ ಸಂಶೋಧನೆ ಒಳಗಿನಿಂದ ಬೆಳೆಯುವುದಿಲ್ಲ.ಕಾರಣ ಇವೆರಡೂ ವಿರುದ್ದ. ದೃಷ್ಟಿಯಿಂದ ಜನ ನೋಡುತ್ತಾರೆ. ಹೀಗಾಗಿ ಜಗತ್ತಿನಲ್ಲಿ ವಿರೋಧಕ್ಕೆ ಕೊಡುವ ಸಹಕಾರ ಒಪ್ಪಂದಕ್ಕೆ ಸಿಗೋದಿಲ್ಲ.
ಮಾತು ಕೊಟ್ಟ ಮೇಲೆ ಅದರಂತೆ ನಡೆಯಬೇಕು ಎಸ್ ಎನ್ನುವುದು ಸುಲಭ.ಆದರೆ ಕಾಲ ಒಂದೇ ರೀತಿಯಲ್ಲಿ ಇರದು. ತಪ್ಪು ನಡೆಯುವುದು ಸಹಜ ಅದನ್ನು ಸರಿಪಡಿಸುವುದು ಕಷ್ಟವಾದರೂ ಸಾಧ್ಯವಿದೆ.ಎಲ್ಲಾ ಮನಸ್ಸಿನ ಮೇಲಿರುತ್ತದೆ. ಮನಸ್ಸು ಯಾವಾಗ ಬೇಕಾದರೂ ಬದಲಾಗಬಹುದು. ಹೀಗಾಗಿ ಒಮ್ಮೆ ದೈವೀಕ ಶಕ್ತಿ ಗೆದ್ದರೆ ಇನ್ನೊಂದು ಬಾರಿ ಅಸುರಿಶಕ್ತಿ ಗೆಲ್ಲುತ್ತದೆ.
ಇದಕ್ಕೆ ಮಧ್ಯವರ್ತಿ ಮಾನವನ ಸಹಕಾರ ಸಹಾಯವೇ ಕಾರಣ.ಹಾಗಾದರೆ ನಾವ್ಯಾರು? ದೇವರೆ ಅಸುರರೆ ಮಾನವರೆ? ಭೂಮಿಯಲ್ಲಿ ಮನುಕುಲ ಎಷ್ಟೋ ತಪ್ಪು ಮಾಡಿ ಸಾವು ನೋವು ಗೆಲುವುಸೋಲು ಕಂಡಿದ್ದರೂ ಅದರೊಂದಿಗೆ ಬೆರೆತು ತಮ್ಮ ಕೆಲಸ ಮಾಡುತ್ತಿರುವ ಅಗೋಚರ ಶಕ್ತಿ ದೇವರು ಅಸುರರು ಕಣ್ಣಿಗೆ ಕಾಣೋದಿಲ್ಲ. ಇದರಿಂದ ತಪ್ಪು ಯಾರದ್ದು ಸರಿ ಯಾರು ಎನ್ನುವ ವಾದ ವಿವಾದಗಳು ಬೆಳೆಯುತ್ತದೆ.
ಯಾವಾಗ ಅತಿರೇಖಕ್ಕೆ ಏರುವುದೋ ಭೂಮಿಯೇ ತನ್ನ ಕೆಲಸ ತಾನೇ ಮಾಡಿಕೊಂಡು ಮುಕ್ತಾಯ ಹಾಡುವುದು.
ಇದರ. ಪರಿಣಾಮ ಸಾವು ಪ್ರಳಯ ಭೂ ಕಂಪ ರೋಗಗಳ ಮೂಲಕ ಜೀವಹೋಗುವುದಾಗಿದೆ.ಇದರಲ್ಲಿ ತಪ್ಪು ಯಾರದ್ದು? ಸಾವನ್ನು ತಡೆಯಬಹುದೆ?
ಎಷ್ಟೋ ಮಹಾತ್ಮರುಗಳು ಪಾಪಾತ್ಮರು ಪುಣ್ಯಾತ್ಮರು ದೇವತೆಗಳು ಅಸುರರು ಮಾನವರು ಭೂಮಿಯಲ್ಲಿದ್ದೇ ಜೀವನ ನಡೆಸಿರುವಾಗ ಜೀವನದಮುಖ್ಯ ಗುರಿ ತಪ್ಪನ್ನು ತಿದ್ದಿ ನಡೆಯೋದಷ್ಟೆ. ತಪ್ಪು ತಪ್ಪಾಗಿ ನಡೆಯೋ ದಲ್ಲ. ತಿಳಿದವರಿಗೆ ತಿಳಿದವರು ಹೇಳಿದರೂ ತಪ್ಪು. ತಿಳಿಯದವರಿಗೆ ಹೇಳಿದರೂ ತಪ್ಪು ಎಂದರೆ ತಪ್ಪು ಬೆಳೆಯುತ್ತದೆ. ಒಟ್ಟಿನಲ್ಲಿ ತಪ್ಪು ಒಳಗೇ ಬೆಳೆದಾಗ ಮಾನವನ ಅರಿವಿಗೇ ಬರದೆ ಹೋಗುತ್ತದೆ.
ಅರಿವಿಗೆ ಬಂದಾಗ ಸರಿದಾರಿ ಕಾಣುತ್ತದೆ.
ಅದಕ್ಕೆ ಮೌನದಿಂದ ತಪ್ಪು ಸರಿ ತಿಳಿಯುತ್ತ ಕಲಿಯುತ್ತ ನಡೆದವರಿಗೆ ಸರಿದಾರಿಯಲ್ಲಿ ಶಾಂತಿ ಸಿಕ್ಕಿದೆ..ಈಗಂತೂ ನಕಾರಾತ್ಮಕ ಸುದ್ದಿಯೇ ಹರಡಿಕೊಂಡಿದೆ. ಅದನ್ನು ಪ್ರಚಾರ ಮಾಡೋದೇ ಸರಿಎನ್ನುವರು.ಅಂತಹ ಸುದ್ದಿಗೆ ಹೆಚ್ಚಾಗಿ ಹಣ ಅಧಿಕಾರ ಸ್ಥಾನ ಸಿಕ್ಕರಂತೂ ಮುಗಿಯಿತು ಕಥೆ ತಪ್ಪು ಕಣ್ಣಿಗೆ ಕಾಣದೆ ಬೆಳೆಯುತ್ತದೆ. ಅಸತ್ಯ ಅನ್ಯಾಯ ಅಧರ್ಮ ಜೊತೆಗೆ ಬೆಳೆದು ಎಲ್ಲರೂ ತಪ್ಪು ಮಾಡುವರು ಅದರಲ್ಲಿ ನಾನೂ ಒಬ್ಬ ಎನ್ನುವುದು ಸಾಮಾನ್ಯವಿಚಾರವಾಗಿರುತ್ತದೆ.
ಶಿಕ್ಷಣದಲ್ಲಿ ಶಿಕ್ಷೆ ನೀಡಿ ಕಲಿಸುವುದು ಸರಿ. ಆದರೆ ಯಾವ ವಿದ್ಯೆ ಕಲಿಯದಿದ್ದರೆ ಶಿಕ್ಷೆ ನೀಡಬೇಕೆಂಬ ಅರಿವಿದ್ದರೆ ಶಿಕ್ಷಣ ಉತ್ತಮ ಮಾರ್ಗದರ್ಶನದಲ್ಲಿರುತ್ತದೆ. ಇಂದಿನ ತಂತ್ರ. ಶಿಕ್ಷಣ ಹಿಂದಿನ ತತ್ವ ಶಿಕ್ಷಣಕ್ಕೆ ವಿರುದ್ದ ಇದ್ದರೆ ತಪ್ಪು ಒಳಗೇ ಬೆಳೆಯುತ್ತದೆ. ಹೀಗೇ ಎಲ್ಲಾ ವಿಷಯಗಳಿಗೂ ತಪ್ಪು ಸರಿ ಎನ್ನಬಹುದು. ಅಧ್ಯಾತ್ಮ ಸತ್ಯ ಭೌತಿಕ ಸತ್ಯದಿಂದ ದೂರ ಹೋದರೆ ಅಂತರದಲ್ಲಿ ತಪ್ಪು ಕಲ್ಪನೆ ತಪ್ಪು ಪ್ರಚಾರದಲ್ಲಿ ಮಧ್ಯವರ್ತಿಗಳು ಇನ್ನಷ್ಟು ಅಜ್ಞಾನ ಸೃಷ್ಟಿ ಮಾಡಿಕೊಂಡು ಭೂಮಿಯನ್ನು ಆಳುವರಷ್ಟೆ. ಆಳೋದಕ್ಕೆ ನಾವ್ಯಾರು? ಭೂಮಿ ಎನ್ನುವ ಮಾಧ್ಯಮವನ್ನು ನಡೆಸುವಾಗ ಸನ್ಮಾನದ ಜೊತೆಗೆ ಸನ್ಮಾರ್ಗ ಅಗತ್ಯವಿದೆ. ಕೇವಲ ಸನ್ಮಾನಕ್ಕಾಗಿ ಅಸತ್ಯ ಅನ್ಯಾಯ ಅಧರ್ಮಕ್ಕೆ ಮಾನವನಿಂತರೆ ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ಆಗೋದು ಕಷ್ಟ.
ಯಾವಾಗ ಬೇಕಾದರೂ ಬದಲಾಗಬಹುದು.ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಮೇಲಿನವರು ಕೆಳಗಿಳಿಯಬೇಕು.
ಕೆಳಗಿನವರು ಮೇಲೇರಬೇಕು. ಹೀಗಾಗಿ ಚಕ್ರದ ಚಲನೆಯನ್ನು ಯಾರೂ ನಿಲ್ಲಿಸಲಾಗದು. ಪ್ರಕೃತಿಯ ಸಣ್ಣ ಜೀವಶಕ್ತಿ ಹೊಂದಿರುವ ಹುಲುಮಾನವನ ಕಣ್ಣಿಗೆ ಲೋಕವೆಲ್ಲಾ ಹಳದಿ ಕಾಣಲು ಕಾಮಾಲೆರೋಗ ಒಳಗಿರುತ್ತದೆ. ಆ ರೋಗ ವಾಸಿಯಾದರೆ ಎಲ್ಲಾ ಸ್ವಚ್ಚವಾಗಿರುತ್ತದೆ. ಇದಕ್ಕೆ ಔಷಧ ಯೋಗದಲ್ಲಿರುತ್ತದೆ. ಯೋಗಿಯ ಮಾರ್ಗ ಭೋಗಿಗೆ ತಪ್ಪು ಕಾಣುತ್ತದೆ. ಆದರೆ ಯೋಗಿಗೆ ಭೋಗ ಹಿಡಿಸುವುದಿಲ್ಲವಾದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವನು ಇದು ತಪ್ಪು ಎನಿಸುತ್ತದೆ.
ಅದಕ್ಕೆ ಹೇಳಿರೋದು ಯೋಗಿ ಬಯಸಿದ್ದು ಯೋಗಿಗೆ
ಭೋಗಿ ಬಯಸಿದ್ದು ಭೋಗಿಗೆ ಎಂದು.
No comments:
Post a Comment