" ತಾರತಮ್ಯ...! "
ಎಂಥಾ ವಿಪರ್ಯಾಸ ನೋಡಿ ಮಾರಾಯ್ರೇ....
ಎಲ್ಲಾ ಅಮ್ಮಂದಿರಿಗೂ ತನ್ನ ಮಗ
ಶ್ರೀ ಕೃಷ್ಣನಂತೆ ಸದಾ ಚೇಷ್ಠೇ, ತಂಟೆ
ಲೀಲೆ, ಅಮೋದ ಪ್ರಮೋದಗಳಿಂದ
ನಲಿದಾಡುತ್ತಿರಲಿ ಅಂತ ಬಯಸ್ತಾರೆ
ಅದೇ...ಆ ಮಗುವಿನ ಅಪ್ಪ ...
ಎಂದೆಂದೂ ಮರ್ಯಾದ ಪುರುಷೋತ್ತಮ
ಶ್ರೀ ರಾಮಚಂದ್ರನ ತರಹ ಮಾತ್ರ
ಇರಲೆಂದು ಆಶಿಸುತ್ತಾರೆ.
ತ್ರೇತಾಯುಗದ ಶ್ರೀ ರಾಮನೇ ದ್ವಾಪರದಲ್ಲಿ ಶ್ರೀ ಕೃಷ್ಣನಾಗಿ ಅವತಾರವೆತ್ತಿದ ಎನ್ನುವ ಅದ್ವೈತ ಶ್ರೀ ರಾಮಾವತಾರವೇ ಬೇರೆ ಶ್ರೀ ಕೃಷ್ಣಾವತಾರವೇ ಬೇರೆ ಎನ್ನುವ ಧ್ವೈತ. ಎಲ್ಲವೂ ವಿಷ್ಣುವಿನ ರೂಪವೇ ಎನ್ನುವ ವಿಶಿಷ್ಟಾದ್ವೈತ ಎಲ್ಲದರಲ್ಲೂ ಇರೋನು ಒಬ್ಬನೇ ಆದರೆ ನಾಮ ರೂಪ ಅವತಾರಗಳು ಬೇರೆ ಬೇರೆ.
ಶ್ರೀ ರಾಮನಂತಹ ಮರ್ಯಾದ ಪುರುಷೋತ್ತಮ ಇಲ್ಲ. ಹೀಗಿರುವಾಗ ಶ್ರೀ ರಾಮರಾಜ್ಯ ಸ್ಥಾಪನೆಗೆ ಪುರುಷರು ಮರ್ಯಾದೆಯಿಂದ ಇರಬೇಕು. ಯಾವಾಗ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನಪಡುವರೋ ಆಗ ಮರ್ಯಾದೆ ಬಿಟ್ಟು ಹೊರಬರುವವರು ಹೆಚ್ಚಾಗಿ ಕಾಣುವರು. ಅಂದರೆ ಮಾನವ ನೋಡುವುದು ಹೊರಗಿನ ಮರ್ಯಾದೆಯನ್ನು. ನನಗೆ ಮರ್ಯಾದೆ ಕೊಡಬೇಕೆಂಬ ಆಸೆಯಲ್ಲಿ ನಾಟಕ ನಡೆಸುತ್ತಾ ಜನರ ಮುಂದೆ ಮರ್ಯಾದಸ್ಥನಂತೆ ಬದುಕುವ ಎಷ್ಟೋ ಮಂದಿಗೆ ಒಳಗಿದ್ದ ಮರ್ಯಾದ ಪುರುಷೋತ್ತಮನ ದರ್ಶನ ಆಗಿರದು. ಇದು ಸ್ತ್ರೀ ಗೂ ಅನ್ವಯಿಸುತ್ತದೆ. ಶ್ರೀ ರಾಮನ ಕಾಲದಲ್ಲಿದ್ದ ಧರ್ಮ ಸತ್ಯ ನ್ಯಾಯ ನೀತಿ ಸಂಸ್ಕೃತಿ ದ್ವಾಪರದಲ್ಲಿರಲಿಲ್ಲ.ಅಸುರ ಶಕ್ತಿ ಬೆಳೆದಿತ್ತು..ನಂತರದ ಕಲಿಯುಗದಲ್ಲಿ ಕೇವಲ ರಾಜಕೀಯವೇ ಎಲ್ಲಾ ಕ್ಷೇತ್ರ ಆಳುತ್ತಿದೆ ಎಂದರೆ ರಾವಣ ಜರಾಸಂಧ ಕೀಚಕ ಯಮ..ರ ಪಾತ್ರಧಾರಿಗಳು ಮಕ್ಕಳು ಮಹಿಳೆಯರನ್ನು ಹೇಗೆ ಕಾಣುವರು?
ಶ್ರೀ ಕೃಷ್ಣ ರಾಧೆಯ ಪವಿತ್ರವಾದ ಸಂಬಂಧ ವೇಷಹಾಕಿಕೊಂಡರೆ ಅರ್ಥ ವಾಗದು. ಹಾಗೆಯೇ ಭಾರತಮಾತೆಯ ವೇಷ ಹಾಕಿಕೊಂಡರೆ ಭಾರತೀಯ ಮಹಿಳೆ ಆಗೋದಿಲ್ಲ. ಮಕ್ಕಳಿಗೆ ಕೊಡುವ ಶಿಕ್ಷಣವೇ ಅನ್ಯರ ವಶ ಆಗಿರುವಾಗ ಪುರಾಣಗಳು ವಾದ ವಿವಾದ, ಚರ್ಚೆ ಜೊತೆಗೆ ಅಪಾರ್ಥಗಳಿಂದ ಅಧರ್ಮಕ್ಕೆ ಮತ್ತಷ್ಟು ಶಕ್ತಿಬಂದರೆ ಇದು ಮುಂದಿನ ಪೀಳಿಗೆಗೆ ವರದಾನವೋ ಶಾಪವೋ.
ಹಿಂದೆ ಮಕ್ಕಳನ್ನು ಬೆಳೆಸುವ ರೀತಿ ದೈವೀಕತೆಯತ್ತ ನಡೆದಿತ್ತು.ಈಗ ಭೌತಿಕದೆಡೆಗೆ ನಾಟಕದ ಜಗತ್ತಿನೆಡೆಗೆ ನಡೆದಿದೆ. ಇದರಿಂದಾಗಿ ಶ್ರೀ ಕೃಷ್ಣನ ತುಂಟಾಟ ಕಳ್ಳತನ ತಂತ್ರವು ಹೊರಜಗತ್ತಿನಲ್ಲಿ ಮನರಂಜನೆಯಾದರೆ ಒಳಜಗತ್ತಿನಲ್ಲಿ ಆತ್ಮವಂಚನೆಗೆ ಕಾರಣವಾಗಿದೆ.
ಕೃಷ್ಣ ಬೇರೆಯಲ್ಲ ಕ್ರೈಸ್ತರು ಬೇರೆಯಲ್ಲ.ರಾಮ ಬೇರೆಯಲ್ಲ ರಹೀಮ ಬೇರೆಯಲ್ಲ ಎನ್ನುವುದು ಸಾಮಾನ್ಯವಾಗಿ ಒಳಗಿನ ಸತ್ವ ಸತ್ಯ ತತ್ವ ಅರಿಯದೆ ಮಾನವ ಮುಂದೆ ಮುಂದೆ ಹೋಗಿ ಮೂಲದಿಂದ ಬೇರೆಯಾದಷ್ಟೂ ಅತಂತ್ರಸ್ಥಿತಿಗೆ ಜೀವಾತ್ಮನಪಯಣ ಕೆಳಮುಖವಾಗಿರುತ್ತದೆ.
ಎಲ್ಲದ್ದಕ್ಕೂ ಕಾರಣ ಸ್ತ್ರೀ ಸಹಕಾರ ಎನ್ನುವಂತೆ ಸ್ತ್ರೀ ಜ್ಞಾನ ಉತ್ತಮವಿದ್ದರೆ ಬೇಧವಿರದು. ಅಂದರೆ ಶ್ರೀ ರಾಮನಂತಹ ಪುರುಷನಂತೆ ಶ್ರೀ ಕೃಷ್ಣನಂತಹ ಮಹಾಪುರುಷ ಇದ್ದರೂ ಒಂದು ತತ್ವ ಇನ್ನೊಂದು ತಂತ್ರ ಎರಡೂ ಸೇರಿ ಮಹಾತ್ಮ ಆಗಬಹುದು. ಧರ್ಮ ರಕ್ಷಣೆಗಾಗಿ ಶ್ರೀ ರಾಮನನಡೆ ಶ್ರೀ ಕೃಷ್ನ ನುಡಿಯನ್ನು ಅರ್ಥ ಮಾಡಿಕೊಳ್ಳಲು ಸ್ತ್ರೀ ಶಕ್ತಿಯ ಜ್ಞಾನ ಅಂತರ್ಮುಖವಾಗಿ ಬಹಿರಂಗದೆಡೆಗೆ ನೋಟ ಹರಿಸಿದರೆ ವಾಸ್ತವದಲ್ಲಿ ತನಗೆ ತಾನೇ ಮೋಸ ಹೋಗುತ್ತಿರುವ ಸತ್ಯ ತಿಳಿಯಬಹುದು. ಜನನಿ ಇಲ್ಲದ ಜನ್ಮವಿಲ್ಲ. ದೈವೀಕ ಶಕ್ತಿ ಕೇವಲ ಹೊರಗಿನ ಆಡಂಬರವಾಗದೆ ರಾಜಕೀಯದಿಂದ ದೂರವಿದ್ದು ನೋಡಿದರೆ ಎಲ್ಲರಲ್ಲಿಯೂ ಅಡಗಿರುವ ಸತ್ಯ ಅರ್ಥ ವಾದರೂ ಎಲ್ಲರನ್ನೂ ನಡೆಸುತ್ತಿರುವ ಅಸುರ ಶಕ್ತಿ ಇದನ್ನು ತಡೆಯುತ್ತದೆ. ಇದಕ್ಕೆ ಕಾರಣ ನಮ್ಮದೇ ಸಹಕಾರ.
ಸ್ತ್ರೀ ಯರ ಜ್ಞಾನ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿ ಇಂದಿಗೂ ಸ್ತ್ರೀ ಸತ್ಯ ತಿಳಿಸಿದರೆ ಅಲಕ್ಷ್ಯ. ರಾಜಕೀಯಕ್ಕೆ ಬಳಸಿಕೊಂಡು ಅನ್ಯರನ್ನು ಆಳೋದೇ ಗುರಿಯಾದರೆ ಒಳಗಿದ್ದ ಧರ್ಮ ಕ್ಕೆ ಸಂಕಟ. ಈ ಧರ್ಮ ಸಂಕಟವನ್ನು ಹಣದಿಂದ ತಡೆಯಬಹುದೆ? ಧಾರ್ಮಿಕ , ಶೈಕ್ಷಣಿಕ,ರಾಜಕೀಯ, ಆರ್ಥಿಕ, ಸಾಹಿತ್ಯ ಕ್ಷೇತ್ರಗಳು ಸಮಾಜವನ್ನು ಆಳೋದಕ್ಕೆ ಹೊರಟು ಸಂಸಾರ ತೊರೆದವರು ಸಂಸಾರಿಗಳ ಹಣದಲ್ಲಿ ಜೀವನ ನಡೆಸುವುದು ಅನಿವಾರ್ಯ. ಕಾರಣ ಅಂದಿನ ವಾನಪ್ರಸ್ತ ಇಂದು ಆಶ್ರಮ ಗಳಾಗಿವೆ. ಆಶ್ರಮ ನಡೆದಿರೋದೆ ಜನರ ಹಣದಲ್ಲಿ.ಸರ್ಕಾರ ನಡೆದಿರೋದೆ ಜನರ ಹಣದಲ್ಲಿ ಆಚರಣೆಗಳು ಕಾರ್ಯಕ್ರಮಗಳು ದೇವಸ್ಥಾನಗಳು..ಇನ್ನಿತರ ಸಂಘಗಳು ನಡೆದಿರೋದೆ ಜನಬಲ ಹಣಬಲದಲ್ಲಿ ಎಂದಾಗ ಜನರೊಳಗೆ ಯಾರ ಜ್ಞಾನವಿದೆ. ಸಂಪಾದನೆಯ ಮೂಲ ಯಾವುದಿದೆ? ಹಿಂದಿನವರ ಶಿಕ್ಷಣ ನೀಡಲಾಗಿದೆಯೆ? ಇದ್ದರೆ ಸರಿ.ಇಲ್ಲವೆಂದರೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವಿಲ್ಲದೆ ರಾಜಕೀಯ ಬೆಳೆದಿಲ್ಲ ಎಂದಾಗ ಶ್ರೀ ರಾಮ ಶ್ರೀ ಕೃಷ್ಣ ಇರೋದೆಲ್ಲಿ?
ದೈವೀಕ ಗುಣದ ಶಿಕ್ಷಣ ನೀಡದೆ ವೇಷ ಹಾಕಿದರೆ ನಾಟಕವಷ್ಟೆ. ಇದಕ್ಕಾಗಿ ಹಣ ಸಮಯ ವ್ಯರ್ಥ ವಾಗದಿದ್ದರೆ ಉತ್ತಮ. ಮಕ್ಕಳಿಗೆ ಮನೆಯೊಳಗೆ ಸಂಸ್ಕಾರದ ಶಿಕ್ಷಣ ಕೊಟ್ಟರೆ ದೇವರಂತಾಗುವರು. ಹೊರಗೆ ದೇವರ ವೇಷ ಒಳಗೆ ಅಸುರಗುಣವಿದ್ದರೆ ವ್ಯರ್ಥ.
ನಾಟಕದಲ್ಲಿ ನಾಟಕ ಮಾಡಿ ಸಾಧಕರಾಗೋದಕ್ಕೆ ಜನಬಲ ಹಣಬಲ ಅಧಿಕಾರ ಬಲ ಇದೆ. ಆದರೆ ದೈವಬಲ ಇದೆಯೆ? ಅಸುರಬಲವೇ ಎನ್ನುವುದು ಪ್ರಶ್ನೆ ಯಾಗುತ್ತಿದೆ. ಎತ್ತ ಸಾಗಿದೆ ಭಾರತ?
ಹಿಂದೂಗಳು ಹಿಂದಿರುಗಬೇಕು. ವಿದೇಶದೆಡೆಗೆ ಮುಂದೆ ನಡೆದಷ್ಟೂ ಖಾಲಿ ಸ್ಥಾನ ತುಂಬಲು ಅನ್ಯರು ಬರೋದನ್ನು ತಡೆಯಲಾಗದು.ಹತ್ತಿರವಿರುವ ಸತ್ಯ ತಿಳಿದರೆ ಸಾಕು.ಪ್ರಚಾರ ಮಾಡಿದಷ್ಟು ಸುಲಭವಿಲ್ಲ ಅನುಷ್ಟಾನಕ್ಕೆ ತರೋದು.
No comments:
Post a Comment