ಪರಮಾತ್ಮನಿಗೆ ಜೀವಾತ್ಮಮೀಸಲಾಗಿದ್ದರೆ ಜೀವನ್ ಮುಕ್ತಿ ಎಂದಿರುವ ಸನಾತನಧರ್ಮ ಇಂದು ಹಿಂದುಳಿಯಲು ಕಾರಣವೇ ಹೊರಗಿನಿಂದ ಮಾನವ ಬೆಳೆಸಿಕೊಂಡಿರುವ
ಜಾತಿ ಮೀಸಲಾತಿ. ಯಾರಾದರೂ ಕೊನೆಗಾಲದಲ್ಲಿ ನನಗೆ ತೃಪ್ತಿ ಸಿಕ್ಕಿದೆ ಎಂದವರಿದ್ದಾರೆಯೆ? ಆತ್ಮಕ್ಕೆ ತೃಪ್ತಿ ಕೊಡದ ಸಾಲ ಸೌಲಭ್ಯ ಗಳಾಗಲಿ ಉಚಿತ ಭಾಗ್ಯಗಳಾಗಲಿ ಮಾನವನ ಹೊರಗಿನ ಆಸೆಯನ್ನು ಬೆಳೆಸುವಾಗ ಆಸೆಯೇ ದು:ಖಕ್ಕೆ ಕಾರಣವೆನ್ನುವುದು ಸತ್ಯವಾಗಿರುತ್ತದೆ.
ಆಸೆ ಇರಲಿ ಅತಿಆಸೆ ಇರಬಾರದು. ಒಂದು ಸಂಸಾರ ಸಾಕಲು ಒಬ್ಬರಿಗೆ ಸರ್ಕಾರದ ಕೆಲಸ ಸಿಕ್ಕರೆ ಸಾಕು. ಎಲ್ಲರಿಗೂ ಬೇಕು ಎಂದರೆ ಅದರಲ್ಲಿ ಧರ್ಮ ವಿರಬೇಕು. ಸರ್ಕಾರದ ಸೇವೆ ದೇವರ ಸೇವೆಯಾಗಬೇಕು. ಸೇವೆಯಿಂದ ಪರಮಾತ್ಮನ ಋಣ ತೀರಿಸಲು ಸಾಧ್ಯ.
ಅರ್ಹರಿಗೆ ಕೆಲಸವಿಲ್ಲದೆ ಅನರ್ಹ ರಿಗೆ ಕೆಲಸ ಕೊಟ್ಟರೆ ಸೇವೆ ಮಾಡೋದಕ್ಕೆ ಜ್ಞಾನಬೇಡವೆ? ಕೆಲಸ ಮಾಡದೆ ಹಣಪಡೆದರೆ ಸಾಲವಾಗುತ್ತದೆ. ಸಾಲ ತೀರಿಸದಿದ್ದರೆ ಕಷ್ಟ ನಷ್ಟಗಳು ರೋಗಗಳು ಹೆಚ್ಚುವುದು. ದುಡಿದಹಣವೆಲ್ಲವೂ ದುರ್ಭಳಕೆ ಆದರೆ ಮನಸ್ಸಿಗೆ ಶಾಂತಿ ಸಿಗದು. ಶಾಂತಿಯಿಲ್ಲದ ಮನುಷ್ಯನಿಗೆ ಪರಮಾತ್ಮನೆಡೆಗೆ ಹೋಗಲಾಗದು. ಹೀಗೇ ಒಂದರ ಹಿಂದೆ ಒಂದು ಸೇರಿದರೆ ಹಿಂದೆ ಬರೋದು ಕಷ್ಟ.
ಸರ್ಕಾರದ ಸಾಲ ಜನರ ಸಾಲ ಎರಡೂ ಒಂದೇ. ಜನರ ಸಾಲ ತೀರಿಸಲು ಸರ್ಕಾರದ ಕೆಲಸವನ್ನು ನಿಸ್ವಾರ್ಥ ನಿರಹಂಕಾರದಿಂದ ಧರ್ಮ ಸತ್ಯದಿಂದ ಮಾಡಬೇಕು. ಹಿಂದಿನ ಮಹಾತ್ಮರು ದೇಶಭಕ್ತರು ಈ ರೀತಿಯಲ್ಲಿ ದೇಶಕಟ್ಟುವ ಸೇವೆಯಲ್ಲಿದ್ದರು. ಈಗ ದೇಶಭ್ರಷ್ಟರ ಸೇವೆಗೆ ಜನ ನಿಂತಿರುವರೆಂದರೆ ಅಜ್ಞಾನವಷ್ಟೆ. ಸತ್ಯದ ಅರಿವಿಲ್ಲದೆ ಸಾಲದ ಅರಿವಿಲ್ಲದೆ ಹೊರಗೆ ಬಂದವರಿಗೆ ಕಾಣೋದು ಹಣಮಾತ್ರ. ಅದರ ಹಿಂದಿನ ಋಣಭಾರ ಅವರ ಮಕ್ಕಳು ಮೊಮ್ಮಕ್ಕಳವರೆಗೂ ಹೊತ್ತು ನಡೆಯಲೇಬೇಕೆನ್ನುವುದು ಅಧ್ಯಾತ್ಮ ಸತ್ಯ. ಇದರ ಬಗ್ಗೆ ಧಾರ್ಮಿಕ ಚಿಂತಕರೂ ಗುರುಗಳಾದವರು ಸರಿಯಾಗಿ ತಿಳಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದರೆ ಇಂದು ಈಮೀಸಲಾತಿಪರಮಾತ್ಮನ ಅರಿಯುವುದಕ್ಕೆ ಸಾಧ್ಯವಾಗುತ್ತಿತ್ತು. ದುರಂತ ವೆಂದರೆ ಸರ್ಕಾರದ ಹಿಂದೆ ಜಾತಿ ಹಿಡಿದು ನಡೆದಿರೋದು. ಧರ್ಮ ಕರ್ಮಕ್ಕೆ ವಿರುದ್ದ ಸಾಲ ಮಾಡಿರೋದು. ಒಟ್ಟಿನಲ್ಲಿ ಕಲಿಯುವ ಕಾಲ ಕಲಿಗಾಲ. ಅವರವರ ಸಾಲಕ್ಕೆ ಅವರವರೆ ಹೊಣೆಗಾರರಾದಾಗ ತೀರಿಸದೆ ಜೀವಕ್ಕೆ ಶಾಂತಿಯಿರದು.ಶಾಂತಿಸಿಗದೆ ಮುಕ್ತಿಯೂ ಸಿಗದು.
No comments:
Post a Comment