ಸ್ವಚ್ಚ ಬಿಳಿ ವಸ್ತ್ರ ದಲ್ಲಿ ಕುಳಿತಿರುವ ಸರಸ್ವತಿ ಜ್ಞಾನದ ಅಧಿದೇವತೆ. ಸುಜ್ಞಾನದಿಂದ ಆತ್ಮೋನ್ನತಿ ಎಂದು ಮಹರ್ಷಿಗಳು ದೇವಿ ಸರಸ್ವತಿಯನ್ನು ಒಲಿಸಿಕೊಳ್ಳಲು ಮುಕ್ತಿ ಪಥ ಹಿಡಿದರು. ಕಲ್ಲಿನಮೇಲೆ ಕುಳಿತಿರುವ ಸಂಕೇತ ಸ್ಥಿರ ಶಾಶ್ವತ ಎನ್ನುವ ಅರ್ಥ ಕೊಡುತ್ತದೆ. ಜ್ಞಾನದ ನಂತರವೇ ಹಣಸಂಪಾದನೆ ಮಾಡಿ ಋಣ. ಕಳೆಯುವ ಸತ್ಕರ್ಮ ದಾನ ಧರ್ಮ ಗಳಿಂದ ಸನಾತನ ಹಿಂದೂ ಬೆಳೆದಿರೋದು.ಈಗಲೂ ಜ್ಞಾನವಿದೆ ಆದರೆ ಅದರಲ್ಲಿ ಸತ್ಯದ ಕೊರತೆಯ ಜೊತೆಗೆ ಧರ್ಮ ದ ಕೊರತೆಯೂ ಹೆಚ್ಚಾಗಿದ್ದು ಆಡಂಬರದ ಜೀವನದಲ್ಲಿ ಕಷ್ಟ ನಷ್ಟಗಳಾದಾಗ ದಾನ ಧರ್ಮ ಪೂಜೆ ಇನ್ನಿತರ ಕಾರ್ಯಕ್ಕೆ ಹಣ ನೀಡಲಾಗುತ್ತದೆ. ಇದರಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ತಡೆದರೂ ಮತ್ತೆ ಮತ್ತೆ ಬಂದಾಗ ಮಾನವನಿಗೆ ದೇವರೆ ಇಲ್ಲ ಎನ್ನುವ ಮಟ್ಟಿಗೆ ಅನುಮಾನವೂ ಬೆಳೆಯುತ್ತದೆ. ಆದರೆ ಒಂದು ವಿಚಾರ ಮಾನವಕಾರಣಮಾತ್ರದವನಷ್ಟೆ. ಯಾವಾಗ ಭ್ರಷ್ಟರ ಹಣದಲ್ಲಿ ದಾನವರು ಬೆಳೆಯುವರೋ ಆಗ ಸಮಸ್ಯೆ ಒಳಗೆ ಹೊರಗೆ ಬೆಳೆಯುತ್ತಾ ಹೋಗುತ್ತದೆ. ಕಾರಣವಿಷ್ಟೆ ನಮ್ಮ ಪ್ರಾರಭ್ದ ಕರ್ಮ ವನ್ನು ಹಣದಿಂದ ತೀರಿಸುವುದಕ್ಕೂ ಸುಜ್ಞಾನ ಅಗತ್ಯವಿದೆ.ಸುಜ್ಞಾನ ದಲ್ಲಿ ಸತ್ಯ ಧರ್ಮ ಅಗತ್ಯವಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಸುಜ್ಞಾನ ಎಂದು ವಿಜ್ಞಾನ ಶಿಕ್ಷಣ ನೀಡುವರು. ಹೊರಗಿನ ಸತ್ಯ ಕ್ಷಣಿಕವಾದ್ದರಿಂದ ಅಸತ್ಯ ಬೆಳೆದು ಅಧರ್ಮ ಕ್ಕೆ ಸಹಕಾರ ಸಿಕ್ಕಾಗ ಸಮಸ್ಯೆ ಯ ಜೊತೆಗೆ ಅಜ್ಞಾನವೂ ಬೆಳೆಯುತ್ತದೆ. ಶಿಕ್ಷಣವೇ ಇದರ ಮೂಲ.
ಲಕ್ಮಿ ಗೆ ಅಲಂಕಾರ ಮಾಡೋದು ಸರಿ ಕಾರಣ ಅವಳಲ್ಲಿ ಅದು ತುಂಬಿಕೊಂಡಿರುತ್ತದೆ. ಅದೇ ಸರಸ್ವತಿಗೆ ಮಾಡಿದರೆ ಜನರು ನೋಡೋದು ಅಲಂಕಾರವಷ್ಟೆ. ಒಳಗಿರುವ ಜ್ಞಾನ ಕಾಣೋದಿಲ್ಲ. ದೇವತೆಗಳಿಗೂ ಅವರದೇ ಆದ ವಿಶೇಷ ಶಕ್ತಿ ಇದ್ದಾಗ ಆ ಶಕ್ತಿಗೆ ತಕ್ಕಂತೆ ನಮ್ಮ ಆಚಾರ ವಿಚಾರ ಪ್ರಚಾರ ಹಾಗೂ ಆಹಾರ ವಿಹಾರವೂ ಅಗತ್ಯವೆನಿಸುತ್ತದೆ.ಇಲ್ಲದಿದ್ದರೆ ಆ ಶಕ್ತಿಗೆ ನಮ್ಮ ಬೇಡಿಕೆ ತಲುಪುವುದೇ ಇಲ್ಲ. ತಲುಪದಿದ್ದರೆ ಬೇಡಿಕೆ ಈಡೇರುವುದಿಲ್ಲ.ಈಡೇರದಿದ್ದರೆ ದೇವರೆ ಇಲ್ಲ ಎನ್ನುವುದು ಯಾರ ತಪ್ಪು?
ನಮ್ಮ ಕೈ ಬೆರಳೇ ಒಂದೇ ಸಮನಾಗಿರೋದಿಲ್ಲ.ಇನ್ನು ಅಗೋಚರ ಶಕ್ತಿ ಒಂದೇ ಸಮನಾಗಿರಬಹುದೆ?
ನಾಸ್ತಿಕ ಆಸ್ತಿಕ ಎಂದರೆ ದೇವರನ್ನು ನಂಬದಿರೋರು ನಂಬುವವರು ಎನ್ನುವ ಬದಲು ಆಸ್ತಿ ಮಾಡದವರು ಆಸ್ತಿ ಮಾಡುವವರು ಎಂದರೆ ಈಗ ಸರಿಯಾಗಬಹುದು. ಅವರವರ ದೇವರನ್ನು ನಂಬಿ ನಡೆದವರೂ ಆಸ್ತಿ ಕರೆ.
ಆದರೆ ಯಾರು ದೇವರಲ್ಲಿ ಆಸ್ತಿಗಾಗಿ ಮೊರೆಹೋಗದೆ ಮಹಾತ್ಮರಾದರೂ ಅವರು ಜ್ಞಾನವನೇ ಆಸ್ತಿ ಯಾಗಿ ಬಿಟ್ಟು ಹೋಗಿರುವರು. ಇದೇ ವಿಶೇಷ ಶಕ್ತಿ.ವಿಶೇಷಜ್ಞಾನ. ಅಧ್ಯಾತ್ಮ ವಿಜ್ಞಾನ
No comments:
Post a Comment