ಮೂಲದ ಶಕ್ತಿ ಒಂದೇ ಮೂಲ ಪುರುಷ ಒಬ್ಬನೇ ಆದರೂ ಎಷ್ಟೋ ಶಕ್ತಿ ಪುರುಷ ಜನ್ಮ ತಳೆದಿವೆ ಭೂಮಿಯು ಇದಕ್ಕೆ ಮಾಧ್ಯಮವಾಗಿದೆ. ಪುರಾಣ ಇತಿಹಾಸ ದ ಕಥೆಗಳು ಮಾನವನಿಗೆ ಭೂತ ವರ್ತಮಾನ. ಭವಿಷ್ಯವನ್ನು ನಿರ್ಧಾರ ಮಾಡಲು ಸ್ವತಂತ್ರ ಜ್ಞಾನದೆಡೆಗೆನಡೆಯಲು ಕಲಿಸಿವೆ. ಆದರೆ ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ಸ್ವೇಚ್ಚಾಚಾರದೆಡೆಗೆ ನಡೆದವರಿಗೆ ಮೂಲದೆಡೆಗೆ ಸಾಗಲಾಗದೆ ಅದರ ವಿರುದ್ದ ನಡೆದು ಅಂತ್ಯ ಕಾಣದೆ ಅತಂತ್ರಸ್ಥಿತಿಗೆ ಜೀವಾತ್ಮ ತಲುಪಿದ್ದು ಅತೃಪ್ತ ಆತ್ಮಗಳು ತಮ್ಮ ಮನಸ್ಸಿಗೆ ಬಂದದ್ದೇ ಸರಿ ಎನ್ನುವ ಹಠದಲ್ಲಿ ಸ್ಪರ್ಧೆ ನಡೆಸುತ್ತಾ ಹೋರಾಟ ಹಾರಾಟಮಾರಾಟವೇ ಜೀವನವಾಗಿದೆ. ಇದನ್ನು ತಪ್ಪು ಎಂದರೂ ತಪ್ಪು ಸರಿ ಎಂದರೂ ತಪ್ಪು. ತಪ್ಪು ಯಾರದ್ದು? ಜೀವಾತ್ಮನದ್ದೆ? ಪರಮಾತ್ಮನದ್ದೆ?
ಪರಮಾತ್ಮನ ಒಳಗಿರುವ ಜೀವಾತ್ಮರಿಗೆ ತಮ್ಮದೇ ಆದ ಬುದ್ದಿವಂತಿಕೆ ಸಾಮಾನ್ಯ ಜ್ಞಾನವಿದ್ದರೂ ಅದನ್ನು ಸರಿಯಾಗಿ ಗುರುತಿಸಿ ಬಳಸಿಕೊಳ್ಳುವ ಗುರುವಿಲ್ಲದಿದ್ದರೆ ಅದು ಕರ್ಮಫಲ ಎನ್ನುವರು.
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಹಣವಿದೆ.ಇಲ್ಲದವರಿಗೆ ಸರ್ಕಾರಗಳು ಉಚಿತವಾಗಿ ಭಾಗ್ಯ ನೀಡುತ್ತಿದೆ. ಆದರೆ ಸಮಸ್ಯೆ ಮಿತಿಮೀರಿದೆ. ತೃಪ್ತಿ ಸಿಗದೆ ಜೀವ ಹೋಗುತ್ತಿದೆ ಎಂದರೆ ಅಧ್ಯಾತ್ಮ ಚಿಂತನೆ ಇಲ್ಲ. ತನ್ನ ತಾನರಿಯದೆ ಅನ್ಯರನ್ನು ಅರಿತರೆ ಆತ್ಮಕ್ಕೆ ತೃಪ್ತಿ ಸಿಗದು ಎನ್ನುತ್ತದೆ ಸನಾತನ ಧರ್ಮ. ಎಷ್ಟು ಪುರಾಣ ಇತಿಹಾಸ ಕೆದಕಿದರೂ ಸತ್ಯ ಸ್ಪಷ್ಟವಾಗಿ ಅರ್ಥ ವಾಗದಿದ್ದರೆ ವ್ಯರ್ಥ. ಒಂದೇ ಸತ್ಯ ಎನ್ನುವುದು ಸರಿ. ಆ ಒಂದರ ಹಿಂದೆ ನಡೆಯದೆ ದೂರ ಹೋದವರಿಗೆ ಸತ್ಯದ ಅರಿವಿರದು.. ದೂರ ಹೋಗಲು ಕಾರಣವೇ ಹಣಸಂಪಾದನೆ. ಅದು ಸತ್ಯಜ್ಞಾನದ ಜೊತೆಗೆ ಆದಾಗ ಅಂತರ ಬೆಳೆಯದು.
ವಿದೇಶದೊಳಗಿದ್ದು ದೇಶಭಕ್ತಿ ಇದ್ದರೂ ದೇಶದೊಳಗೆ ಇದ್ದು ಭಕ್ತಿಯೋಗ ದ ಅನುಭವವಾದರೆ ಪೂರ್ಣ. ಹೀಗೇ ಎಷ್ಟೋ ಸತ್ಯ ಅರಿವಿಗೆ ಬಂದರೂ ಅನುಭವಿಸುವ ಅವಕಾಶವಿಲ್ಲದೆ ಅಸತ್ಯ ಬೆಳೆದಿದೆ.ಕಾಲಾಂತರ ಎಲ್ಲವೂ ಮಾಡಿಸುತ್ತದೆ.
ಕಾಲಾಯ ತಸ್ಮೈ ನಮ: ಎಂದು ನಡೆಯೋದಷ್ಟೆ ಜೀವಾತ್ಮರಿಗಿರುವ ಮಂತ್ರ.
No comments:
Post a Comment