ಸಮಾಜಕಲ್ಯಾಣ ಎತ್ತ ಸಾಗಿದೆ?

ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದಿ ಶಂಕರಾಚಾರ್ಯರ‌ ನಿಂದನೆಯ ವಿಚಾರಗಳಿಂದ   ಜನಸಾಮಾನ್ಯರಲ್ಲಿ ಏಳುವ‌ಪ್ರಶ್ನೆ ಹೀಗೂ ಉಂಟೆ? ಇಂತವರೂ ಇದ್ದಾರೆಯೆ?  ಈ ಜಗತ್ತಿನ...

Tuesday, June 2, 2026

ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ?

ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟಿ ಸ್ಥಿತಿ ಲಯ ಕಾರ್ಯ ನಡೆಯುವುದೆನ್ನುವುದು ಧ್ವೈತ. 
ಈ  ನಾನು ನೀನು ಅವನು ಅವಳುಗಳ  ನಡುವಿರುವ ಮಾನವನ‌ ಮನಸ್ಸು  ಎಲ್ಲವನ್ನೂ ನಡೆಸಿರೋದು ಸತ್ಯ. ಕಾರಣ ಮನಸ್ಸಿನಂತೆ‌ ಮಾನವನಿರುವನು.ಹಾಗೆಯೇ ಇನ್ನೂ ಅಸಂಖ್ಯಾತ ಜೀವರಾಶಿಗಳೂ ಅವುಗಳ‌ ಮನಸ್ಸಿನಂತೆ ನಡೆಯುತ್ತವೆ.
ವ್ಯತ್ಯಾಸವಿಷ್ಟೆ ಮಾನವನಿಗೆ‌ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಆತ್ಮಜ್ಞಾನವಿದೆ.ಪ್ರಾಣಿ ಪಕ್ಷಿಗಳಿಗಿಲ್ಲ ಇವು ಪ್ರಕೃತಿಗೆ ತಕ್ಕಂತೆ ಬದಲಾಗುತ್ತವೆ. ಅಂದರೆ‌ಪ್ರಕೃತಿಯನರಿತು ನಡೆಯೋ ಶಕ್ತಿ ಮಾನವನಿಗಿದ್ದರೂ ಪ್ರಕೃತಿ ವಿರುದ್ದ‌ನಡೆದಾಗಲೇ ವಿಕೃತ ಬುದ್ದಿವಂತಿಕೆಯಾಗುತ್ತದೆ. ಮಹಾಶಕ್ತಿಯ ಮುಂದೆ ಮಾನವನ ಆಟ ತಾತ್ಕಾಲಿಕ ವಷ್ಟೆ.ಜಗನ್ಮಾತೆಯನರಿತು‌ನಡೆದರೆ ಜಗಧೀಶ್ವರನ ದರ್ಶನವೂ ಆಗಬಹುದು. ಇಲ್ಲಿ  ಪ್ರಕೃತಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡು ಜಗತ್ತನ್ನು ಆಳುವುದರಲ್ಲಿ ಯೋಗವಿದ್ದರೆ  ಸರಿ.ಭೋಗವೇ ಪ್ರಧಾನವಾಗಿದ್ದರೆ ರೋಗದ ಅಂತ್ಯ. 
ಆರೋಗ್ಯ ಎಂದರೆ ಆರು ಯೋಗ್ಯವಾಗಿರೋದು.
ಯಾವಾಗಿದು‌ಮತಗಳ ಅಂತರದಿಂದ ಮನಸ್ಸು ಹಾಳಾಗುತ್ತಾ ಹೋಯಿತೋ ರೋಗದೆಡೆಗೆ ನಡೆಯಿತು. ಈಗ‌ ನಾವು ಸೇವಿಸುವ‌ಗಾಳಿ, ನೀರು, ಆಹಾರ ಶಿಕ್ಷಣವೇ ಕಲಬೆರಕೆ  ಆಗಿರುವಾಗ ಸ್ವಚ್ಚ  ಮನಸ್ಸು ಇರುವುದಾದರೂ ಎಲ್ಲಿ?
ಹೊರಗೆ ನಡೆದಷ್ಟೂ  ರಾಜಕೀಯ. ಒಳಗಿಳಿದರೆ ರಾಜಯೋಗ.
ಒಟ್ಟಿನಲ್ಲಿ ಮಧ್ಯವರ್ತಿ ‌ಮಾನವನಿಗೆ  ಈ ಕಡೆ ಸತ್ಯ ಇನ್ನೊಂದು ಕಡೆ ಮಿಥ್ಯ ಬಿಟ್ಟು  ನಡೆಯಲಾಗದ  ಅತಂತ್ರ ಸ್ಥಿತಿಯಲ್ಲಿ ಪರಮಾತ್ಮನ ಕಾಣಲು‌ಪರದೇಶದವರೆಗೂ‌ಹೋದರೂ ಕಾಣಲಿಲ್ಲ
ಅವನಿರೋದು  ನಮ್ಮ ಅಂತರಾತ್ಮದಲ್ಲಿ ಎಂದಾಗ ಒಳಗೆ ಹುಡುಕಿಕೊಳ್ಳುವ ಯೋಗಶಿಕ್ಷಣ, ಯೋಗ್ಯ ಗುರು ಪಡೆಯಲೂ ಯೋಗ್ಯತೆ‌ಬೇಕಿದೆ. ಕಲಿಗಾಲದ ಕಲಿಕೆಯೇ ಹೊರಮುಖವಾದಾಗ
ಒಳಮುಖದ ಪರಿಚಯ ಮಾಡಿಸೋದು ಯಾರು?
ಧಾರ್ಮಿಕ ಕ್ಷೇತ್ರ ಶಿಕ್ಷಣದ ಮೂಲಕ ತಮ್ಮ ಜ್ಞಾನಿಗಳನ್ನು ಶಿಕ್ಷಕರನ್ನಾಗಿಸಿ  ಭಕ್ತರ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಅಧಿಕಾರವಿರಲಿಲ್ಲವೆ? ಅಥವಾ ರಾಜಕೀಯವೇ‌ಮುಖ್ಯವಾಯಿತೆ? 
ಆಗೋದನ್ನು ತಡೆಯಲಾಗಿಲ್ಲ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಮುಂದೆ ಆಗೋದಕ್ಕೆ ನಮ್ಮ ಸಹಕಾರವೇ ಕಾರಣವಾಗಿರುತ್ತದೆ.ಅದು ಒಳ್ಳೆಯದೋ ಕೆಟ್ಟದ್ದೋ ಇದು ನಮ್ಮ ಜ್ಞಾನದ ಮೇಲೆ ನಿಂತಿದೆ. ಶಿಕ್ಷಣವೇ ಇದರ‌ ಮೂಲಾಧಾರವಾಗಿರುತ್ತದೆ. 

ಭಾರತ ವಿಶ್ವಕ್ಕೆ ಗುರು.‌ವಿಶ್ವದ ಎಲ್ಲಾ ಗುರು ಒಂದೆ ಎನ್ನುವ ಹಂತಕ್ಕೆ ತಲುಪುವುದು ಕಷ್ಟ. ಕ್ಷೇತ್ರ
ಕ್ಷೇತ್ರಜ್ಞ ಯೋಗದ ಪ್ರಕಾರ ಮನೆಯೊಳಗೆ ಮನೆಯೊಡೆಯ ಇದ್ದಾನೋ  ಇಲ್ಲವೋ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಎಲ್ಲರಲ್ಲಿಯೂ ಅವನಿದ್ದರೂ ಎಲ್ಲರೂ ಅವನೊಳಗಿಲ್ಲ.ಅಂದರೆ‌ಮನಸ್ಸು ಹೊರಗಿರುವಾಗ ಒಳಗಿರುವ ಅವನು ಬೇರೆಯಾಗಿರುತ್ತಾನೆ. ಬೇರೆಯಾಗಿ ಕಂಡಾಗ  ಅಂತರ ಬೆಳೆಯುತ್ತದೆ.ಅಂತರದಿಂದ ಅವಾಂತರದ ಸೃಷ್ಟಿ ಯಾಗುತ್ತದೆ.ಅದಕ್ಕೆ ತಕ್ಕಂತೆ ಸ್ಥಿತಿ‌ಮತ್ತು ಲಯವೂ ನಡೆಯುತ್ತದೆ.

Monday, June 1, 2026

ಸತ್ಯವೇ ದೇವರಾದರೆ ಸತ್ಯ ಎಲ್ಲಿದೆ?

ನನಗೆ ಸಣ್ಣ ವಯಸ್ಸಿನಿಂದಲೇ ಸತ್ಯ ಯಾವುದು ಸತ್ಯವೇ ದೇವರೆಂದಾಗ ಸತ್ಯ ಯಾಕೆ ಹೇಳಬಾರದು. ಹೀಗೇ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತಿತ್ತು. ದೊಡ್ಡವರು ಸುಳ್ಳು‌ಹೇಳಬಹುದು ಸಣ್ಣವರು ಯಾಕೆ ಹೇಳಬಾರದು  ಎನ್ನುವ ವಿಚಾರದಲ್ಲಿ ಸಾಕಷ್ಟು ಬಾರಿ ಪ್ರಶ್ನೆ ಮಾಡಿ ಬೈಸಿಕೊಂಡಿದ್ದೆನಾದರೂ  ಎಲ್ಲೋ ಒಳಗೆ ಒಂದು ಕಡೆ ಸುಳ್ಳು ಹೇಳಬಾರದೆನ್ನುವ ಕೂಗಿಗೆ ಸ್ಪಂಧಿಸಿ ಮುಂದೆ ನಡೆದು ಸತ್ಯ ದ‌ ಹುಡುಕಾಟದಲ್ಲಿ  ವರ್ಷ ಕಳೆದೇ ಹೋಗಿತ್ತು. ಕೊನೆಗೂ ಸತ್ಯ ಸಿಕ್ಕಿದ್ದು ಒಳಗೆ ಹೊರತು ಹೊರಗಲ್ಲ. ಹೊರಗಿರೋದು ಸುಳ್ಳು
ಆದರೂ   ಮಾನವ ಜೀವನ ನಡೆಸೋದಕ್ಕೆ  ಧರ್ಮ ರಕ್ಷಣೆ ಮಾಡೋದಕ್ಕೆ ಸತ್ಯಕ್ಕೆ ತೇಪೆ ಹಾಕುವ ಸುಳ್ಳು ಹೊರಬರುತ್ತಲೇ ಇರುತ್ತದೆ. ಹಾಗಂತ ಜೀವ  ಸತ್ಯ ವನ್ನು ಗೆದ್ದು  ಹೋಗೋದಿಲ್ಲ.
ಶ್ರೀ ಶಂಕರಾಚಾರ್ಯರು  ತಿಳಿಸಿರುವ‌ಬ್ರಹ್ಮನ್ ಸತ್ಯ ಜಗತ್‌ಮಿಥ್ಯ.
ಕಣ್ಣಿಗೆ ಕಾಣದ ಬ್ರಹ್ಮ ಸತ್ಯವಾದರೂ ಕಾಣುವ‌ ಜಗತ್ ಮಿಥ್ಯ.
ಈ ಮಿಥ್ಯದಲ್ಲಿ ಸತ್ಯವನ್ನು ಅರಸಿದರೆ ಬದಲಾಗುತ್ತಲೇ ಇರುತ್ತದೆ.
ಇದು ಮನುಕುಲಕ್ಕೆ  ಅರ್ಥ ಮಾಡಿಸಿದರೂ ಅನುಭವಕ್ಕೆ ಬರಲು ಸತ್ಯದ ದಾರಿ ಹಿಡಿಯಲೇಬೇಕೆನ್ನುತ್ತದೆ ಆಧ್ಯಾತ್ಮ.
ಎಷ್ಟು ದೇವರನ್ನು ಸೃಷ್ಟಿ ಮಾಡಿದರೂ ಒಬ್ಬನೇ ದೇವರು.ಎಷ್ಟು ಅಸತ್ಯ‌ ಹರಡಿದರೂ ಮೂಲ ಸತ್ಯ ಬದಲಾಗದು.ಭ್ರಮೆಯಲ್ಲಿ  ಮಾಯೆಯಲ್ಲಿ  ಜೀವವಿರುವಾಗ ಸತ್ಯದ ಅರಿವಾಗದು. ಅದರಿಂದ ಹೊರಬರೋದೇ ಸಂಸಾರದಿಂದ ಹೊರಬಂದಂತೆ.
ಸಂಸಾರ ತೊರೆದು ಕಾಡಿಗೆ ಹೋದವರಿಗೂ ಸತ್ಯ ಕಾಣದು.
ಸಂಸಾರದಲ್ಲಿದ್ದು ಸತ್ಯವೇ ದೇವರು ಎಂದುಕೊಂಡವರಿಗೆ ದೇವರ ದರ್ಶನ ವಾಗಿದೆ. ಸತ್ಯಹರಿಶ್ಚಂದ್ರನಂತಿರಲಾಗದು. ಆದರೆ ಹರಿಯ ಸ್ಮರಣೆಯಲ್ಲಿರಬಹುದು.  
ಏನಾದರಾಗು ಮೊದಲು ಮಾನವನಾಗು. ಮಾನವನೊಳಗೇ ಅಡಗಿರುವ ಈ ಸತ್ಯ ಮಿಥ್ಯದ ವಿಜ್ಞಾನ  ಜೀವನಕ್ಕೆ ಆಧಾರ.
ಮೂಲಾಧಾರ‌  ಸತ್ಯದಲ್ಲಿದ್ದರೆ  ಸಹಸ್ರಾರ ಚಕ್ರದವರೆಗೂ ಸತ್ಯ ಬೆಳೆಯಬಹುದು.ಮೂಲಾಧಾರವೇ ಮಿಥ್ಯದೊಳಗಿದ್ದರೆ  ಸಾವಿರ ವರ್ಷ ವಾದರೂ ಸತ್ಯ  ಅರ್ಥ ವಾಗದು.