ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದಿ ಶಂಕರಾಚಾರ್ಯರ ನಿಂದನೆಯ ವಿಚಾರಗಳಿಂದ ಜನಸಾಮಾನ್ಯರಲ್ಲಿ ಏಳುವಪ್ರಶ್ನೆ ಹೀಗೂ ಉಂಟೆ? ಇಂತವರೂ ಇದ್ದಾರೆಯೆ?
ಈ ಜಗತ್ತಿನಲ್ಲಿ ಬಹಳಷ್ಟು ಮಂದಿ ಇರೋದೆ ಹೀಗೆ ಕಾರಣ ಯಾರು ಪ್ರತಿಷ್ಟಿತರಾಗಲು ಬಯಸುವರೋ ಅವರು ಇಂತಹ ಹೇಳಿಕೆಗಳ ಮೂಲಕ ಹೆಸರುಗಳಿಸಲು ಹೋಗಿ ಕುಪ್ರಸಿದ್ದರಾಗುತ್ತಿದ್ದಾರೆ. ಆದರೆ ಇದರಿಂದ ಅನ್ಯ ಧರ್ಮ ದವರಿಗೆ ಇನ್ನಷ್ಟು ಬಲ ಬರುತ್ತದೆನ್ನುವ ಸತ್ಯದ ಅರಿವಿರದಿರೋದೆ ಅಜ್ಞಾನದ ಸಂಕೇತ.
ಭೂಮಿಯ ಮೇಲೆ ಯಾಕೆ ಬಂದೆವು ಎನ್ನುವ ಅರಿವಿಲ್ಲದೆ ತಾನೇ ಭೂರಕ್ಷಕ ಎನ್ನುವ ಅಸುರರಿಂದ ಅಪಪ್ರಚಾರಗಳಾಗುತ್ತದೆ.
ಹಾಗಾದರೆ ನಿಜವಾದ ಅಸುರರು ಎಲ್ಲೋ ಪುರಾಣಗಳಲ್ಲಿಲ್ಲ ನಮ್ಮ ಸುತ್ತಮುತ್ತಲಿದ್ದಾರೆ. ಅವರನ್ನು ಎಷ್ಟು ಏರಿಸುವೆವೋ ಬೆಳೆಯುತ್ತಾ ಹೋಗುವರು.ಆಕಾಶದೆತ್ತರ ಹೋದ ಮೇಲೆ ಮೇಲಿನ ಶಕ್ತಿ ಒಮ್ಮೆ ಕೆಳಗೆ ಜಾಡಿಸಿ ಒದ್ದ ಮೇಲೆ ಮತ್ತದೆ ಭೂಮಿ. ಇದರಲ್ಲಿ ಮಹಿಳೆಯನ್ನು ಬಳಸಿದರೆ ಮುಗಿಯಿತು ಕಥೆ.
ಈ ವಿಚಾರ ಇಲ್ಲಿಯವರೆಗೆ ಬರೋದಕ್ಕೆ ಹರಡುವುದಕ್ಕೆ ನಾವೇ ಕಾರಣ. ಸತ್ಯ ನಮಗೂ ತಿಳಿದಿಲ್ಲ ಅವರಿಗೂ ತಿಳಿದಿಲ್ಲ ಹಾಗಾದರೆ ತಿಳಿದವರ ಮೌನವೇ ಎಲ್ಲದ್ದಕ್ಕೂ ಕಾರಣ. ಹಾಗಂತ ಸತ್ಯ ತೋರಿಸಬಹುದೆ? ಇರೋದೆ ಒಂದು ಸತ್ಯ ಅದು ಅಂತರಂಗದಾಳದಲ್ಲಿದೆ. ಬಹಿರಂಗದಲ್ಲಿ ಕಾಣದು ಇದೇ ಕಾರಣದಿಂದ ಅಧ್ವೈತ ದೊಳಗೆ ಧ್ವೈತ ಸೇರಿಕೊಂಡಿದೆ.
ಆಧ್ಯಾತ್ಮ ಸಂಶೋಧನೆಯು ರಾಜಕೀಯದಿಂದ ಸಾಧ್ಯವಿಲ್ಲ ರಾಜಯೋಗದಿಂದ ಸಾಧ್ಯ ಎನ್ನುವುದು ಸನಾತನ ಧರ್ಮ.
ಭಗವದ್ಗೀತೆ ಯ ಯೋಗವನ್ನು ಅರ್ಥ ಮಾಡಿಕೊಳ್ಳಲು ಅದರಲ್ಲಿ ಇಳಿಯಬೇಕು.ಓದಿದರೆ ಅರ್ಥ ವಾಗದು.ಹಾಗೆ ಅಸುರರೊಳಗೆ ಅಡಗಿರುವ ಸುರರನ್ನು ಕಾಣೋದಕ್ಕೂ ದೈವತ್ವ ಬೇಕು.
ಹಿರಣ್ಯಕಶ್ಯಪುವಿನ ಮಗನಾಗಿ ಪ್ರಹ್ಲಾದ ಜನ್ಮ ಪಡೆದರೂ ಅವನಲ್ಲಿ ದೈವೀಕ ಗುಣಸಂಪತ್ತಿತ್ತು. ಅವನನ್ನು ಅಸುರವಂಶದವನೆಂದರೂ ಸರಿ ದೇವರೆಂದರೂ ಸರಿ.
ಹೀಗೇ ನಮ್ಮೊಳಗೆ ಅಡಗಿರುವ ಎರಡೂ ಗುಣಗಳಿಂದ ನಾವ್ಯಾರು ಎನ್ನುವ ಸತ್ಯದ ಅರಿವು ನಮಗಾಗಬೇಕೇ ಹೊರತು ಬೇರೆಯವರಿಗೆ ಅವರು ಯಾರೆಂದು ತಿಳಿಸುವ ಅಧಿಕಾರವಿಲ್ಲ.
ಪ್ರಚಾರಪ್ರಿಯಕ್ಕಾಗಿವೇದಿಕೆಗಳನ್ನು ದುರ್ಭಳಕೆ ಮಾಡಿಕೊಂಡರೆ
ಅನರ್ಥಗಳಾಗುತ್ತದೆ.
ಒಟ್ಟಿನಲ್ಲಿ ಕಲಿಗಾಲದ ವಿಶೇಷತೆ ಸಜ್ಜನರು ದುರ್ಜನರಂತೆ ಕಂಡರೆ ದುರ್ಜನರು ಸಜ್ಜನರಂತೆ ಮೆರೆಯುತ್ತಿದ್ದಾರೆ. ಇವರನ್ನು ನಡೆಸೋ ಮೇಲಿನ ಶಕ್ತಿ ಯಾರ ಕಣ್ಣಿಗೂ ಕಾಣದೆ ತಟಸ್ಥ ರಾಗಿರೋದಕ್ಕೆ ಕಾರಣ ಎಲ್ಲಾ ನೀವೇ ಮಾಡಿಕೊಂಡಿರುವ ಹಗರಣ ಎನ್ನುವುದಾಗಿದೆ.
ಭಾಗವತ ಪುರಾಣದಿಂದ ಭಗವಂತನನ್ನು ಅರಿತರೆ ಭಗವದ್ಗೀತೆ ಯಿಂದ ನಮ್ಮ ಈ ಸ್ಥಿತಿಗೆ ಕಾರಣ ತಿಳಿಯಬಹುದು. ಆದರೆ ಇದಕ್ಕೆ ಆತ್ಮಾವಲೋಕನ ಅಗತ್ಯವಿದೆ. ಸ್ವತಂತ್ರ ಭಾರತವನ್ನು ಅತಂತ್ರಗೊಳಿಸಿ ಆಳುವ ಅನ್ಯರಿಗೆ ಇಂತಹ ವಿಷಯ ಅಥ೮ ಆಗದು ಆದರೆ ಜನರಲ್ಲಿ ಅಂತರ ಬೆಳೆಸುವುದಕ್ಕೆ ಇನ್ನಷ್ಟು ಸಹಕಾರಿಗಳಾಗಬಹುದು.
ಸಾಮಾನ್ಯಜ್ಞಾನದಿಂದ ಅರ್ಥ ವಾಗುವ ಸರಳ ಸತ್ಯವನ್ನು ಮಕ್ಕಳಿಗೆ ಶಿಕ್ಷಣದಲ್ಲಿ ತಿಳಿಸದೆ ಬೆಳೆಸಿದ ಪರಿಣಾಮ ಇಂದು ತಾನೇ ದೇವರು ರಾಜ ಎನ್ನುವ ಮಂದಿ ಮನಸ್ಸಿಗೆ ಬಂದದ್ದೇ ಸತ್ಯ ಎನ್ನುವ ಪ್ರಚಾರಕರಾಗಿರೋದಕ್ಕೆ ಅಧರ್ಮ ಎದ್ದು ನಿಂತಿದೆ.
ಸತ್ಯವಿಲ್ಲದ ಧರ್ಮ ಒಂದು ಕಡೆ ನಿಲ್ಲದು. ಧರ್ಮ ವಿಲ್ಲದ ಸತ್ಯ ಕುರುಡುಜಗತ್ತನ್ನು ಆಳುವುದು.
ಶಂಕರರು ತಿಳಿಸಿದಂತೆ ಬ್ರಹ್ಮನ್ ಸತ್ಯ ಜಗತ್ ಮಿಥ್ಯ..
ನಿಜವಾದ ಮತಾಂತರವಾಗಿರೋದೆ ಸನಾತನಿಗಳೆನಿಸಿಕೊಂಡಿರುವ ಅಧ್ವೈತ ಧ್ವೈತ ವಿಶಿಷ್ಟಾದ್ವೈತ ದೊಳಗಿನ ಸತ್ಯವರಿಯದೆ ನಡೆಸಿದ ಮಧ್ಯವರ್ತಿಗಳಿಂದ ಎಂದರೆ ತಪ್ಪಾಗುವುದೆ?
ಎಂತೆಂತಹ ಮಹಾಜ್ಞಾನಿಗಳಿಂದ ಧರ್ಮ ರಕ್ಷಣೆ ಆಗಿದ್ದ ಭಾರತ ಇಂದು ಅಂತರದ ದ್ವೇಷ ಭಿನ್ನಾಭಿಪ್ರಾಯಗಳಿಂದ ಕೂಡಿದ ವಾದ ವಿವಾದ ಪ್ರಚಾರಗಳಿಂದ ಇರುವ ಅಲ್ಪ ಸ್ವಲ್ಪ ನೆಮ್ಮದಿ ಸುಖವನ್ನು ಕಳೆದುಕೊಂಡು ಹೋಗುವವರ ಸಂಖ್ಯೆ ಬೆಳೆಸುತ್ತಿದೆ.ಇದಕ್ಕೆ ಕಾರಣವೇ ತತ್ವದ ಹೆಸರಿನಲ್ಲಿ ಮಧ್ಯೆ ಸೇರಿಕೊಂಡು ರಾಜಕೀಯ ನಡೆಸಿರುವ
ತಂತ್ರಜ್ಞಾನಿಗಳು.
ಇಂದು ಯಾವುದನ್ನು ತಿಳಿಸಬೇಕೋ ಅದನ್ನು ಶಿಕ್ಷಣದಲ್ಲಿ ತಿಳಿಸಿ ಬೆಳೆಸದೆ ದೊಡ್ಡವರಾದಮೇಲೆ ಅವರು ಹೇಳಿದ್ದೇ ವೇದ ವಾಕ್ಯ ಎನ್ನುವ ರೀತಿಯಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುವವರ ಹಿಂದೆ ಮಕ್ಕಳು ಮಹಿಳೆಯರು ಹೊರಟಿದ್ದಾರೆಂದರೆ ಮನೆಯ ವಾತಾವರಣ ಹೇಗಿರಬಹುದು? ದೇವರನ್ನು ಹೊರಗೆ ಬೆಳೆಸೊರು ದೈವತ್ವದ ಶಿಕ್ಷಣ ಕೊಡದೆ ಆಳೋದೆ ರಾಜಕೀಯ ವಾಗಿ ಅನ್ಯ ಧರ್ಮದವರಿಗೆ ಅವಕಾಶ ಮಾಡಿಕೊಟ್ಟು ಮಕ್ಕಳ ಜೊತೆಗೆ ಮಹಿಳೆಯರೂ ಹೊರಗೆ ಬಂದು ದುಡಿದರೂ ಸಾಲದು ಎನ್ನುವಂತಾಗಿದೆ. ಸಾಲವೇ ಅದಾಗಿದೆ.
ಏನೂ ಅರಿಯದವರನ್ನು ಪರಮಾತ್ಮ ಕ್ಷಮಿಸಬಹುದು
ಅರಿತೂ ಏನೂ ಅರಿಯದವರಿಂದ ತಪ್ಪು ಕೆಲಸ ಮಾಡಿಸುವವರೆ ನಿಜವಾದ ಅಸುರರು. ಇದರಲ್ಲಿ ನಮ್ಮ ಸಹಕಾರವಿದ್ದರೆ ನಾವೂ ಅಸುರರೆ ಆಗಿರೋದು.
ಆಸ್ತಿಕರೆಂದರೆ ಆಸ್ತಿ ಮಾಡೋದಲ್ಲ .ಜ್ಞಾನದಿಂದ ಪರಮಾತ್ಮನೆಡೆಗೆ ಸಾಗೋದಾಗಿತ್ತು. ಎತ್ತ ಸಾಗಿದೆ ಭಾರತ?
ನಮ್ಮಂತಹ ಜನಸಾಮಾನ್ಯರಿಗೆ ಅರ್ಥ ವಾಗುವಷ್ಟು ಸಾಮಾನ್ಯ ಜ್ಞಾನ ಮೇಲೇರಿದವರಿಗೆ ಇದ್ದರೆ ಭೂಮಿಯಲ್ಲಿ ಸ್ತ್ರೀ ಶಕ್ತಿಯನ್ನು ಹೇಗೆ ನೋಡಬೇಕು ನಡೆಸಬೇಕು ಎನ್ನುವ ಅರಿವಿರುತ್ತದೆ.
ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂದಂತೆ ಎಲ್ಲಾ ಪರಮಾತ್ಮನಿಗೆ ಬಿಟ್ಟು ನಮ್ಮ ಸ್ವಂತ ಬುದ್ದಿ ಜ್ಞಾನದಿಂದ ಸ್ವತಂತ್ರ ರಾಗಿ ಮುಂದೆ ನಡೆದ ಮಹಾತ್ಮರಲ್ಲೇ ದೋಷಹುಡುಕುವಷ್ಟು ಅಜ್ಞಾನ ಮಿತಿಮೀರಿದೆ ಎನ್ನಬಹುದು. ಜಗನ್ಮಾತೆಯನ್ನು ಸೇರಿದ ಶಂಕರರ ನಿಂದನೆಗೆ ಜಗನ್ಮಾತೆಯೆ ಉತ್ತರ ಕೊಡುವ ಕಾಲಬರುತ್ತದೆ.
ನಾನು ಭಗವತಿ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದು 21 ವರ್ಷಗಳಾಗಿದೆ. ಹಾಗಂತ ನಾನೇ ಭಗವತಿ ಎಂದರೆ ಸರಿಯಾಗುವುದೆ? ಹಾಗೆ ನಮ್ಮಲ್ಲಿ ನಿಂತು ನಡೆಸೋ ಶಕ್ತಿಯ ಬಗ್ಗೆ ನಮಗೇ ಅರಿವಿಲ್ಲದೆ ಅನ್ಯರ ಶಕ್ತಿಯಲ್ಲಿ ದೋಷ ಹುಡುಕುವುದರಿಂದ ಸತ್ಯ ಅರಿವಿಗೆ ಬರದು. ಇದನ್ನು ಎಲ್ಲಾ ಧಾರ್ಮಿಕ ವರ್ಗ ಅರಿತರೆ ಪರಮಾತ್ಮನ ಕಡೆಗೆ ನಡೆದ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಮಟ್ಟಿಗೆ ಸಾಧ್ಯ.
ತತ್ವ ಬಿಟ್ಟು ತಂತ್ರ ಹಿಡಿದರೆ ಅತಂತ್ರ ಜೀವನ .
-ಭಗವತಿ-
ಕಮೆಂಟ್ ಮಾಡಿ ಎಂದುಕೇಳೋದಿಲ್ಲ ಕಾರಣ ಇದೇ ಸತ್ಯ.
No comments:
Post a Comment