ಅಧ್ವೈತ ದರ್ಶನ ಸಾಧ್ಯವೆ?

ಅಧ್ವೈತ ಸಂಶೋಧನೆಯು  ಜ್ಞಾನಯೋಗದಿಂದ ಸಾಧ್ಯವಾದಂತೆ ಕರ್ಮ ಯೋಗದಿಂದ ಕಷ್ಟವಿದೆ. ಇದಕ್ಕೆ ಶ್ರೀ ಶಂಕರ ಭಗವತ್ಪಾದರು  ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು. ಯೋಗವಿಲ...

Saturday, July 11, 2026

ಜೀವನಾನುಭವ

ಸತ್ಯದ ಹಿಂದೆ ಹೋದಷ್ಟೂ ಮಿಥ್ಯಕ್ಕೆ ಜಯ ಕಾಣುತ್ತಿದ್ದರೂ ಎಲ್ಲೋ ಒಂದು ಕಡೆ ಸತ್ಯವೇ ದೇವರು ಎನ್ನುವ  ಕೂಗು ಇತ್ತು. ಇದು ಅಂತರಂಗದ ಕೂಗಾಗಿತ್ತು ಎಂದು ಅರಿವಿಗೆ ಬರುವ ಹೊತ್ತಿಗೆ ಮಿಥ್ಯೆ ಎನ್ನುವ ಸಂಸಾರದೊಳಗೆ‌ ಬಂದಾಗಿತ್ತು. ಆ ಸಂಸಾರದಲ್ಲಿ ದ್ದು ಸತ್ಯದೆಡೆಗೆ  ಹೋಗೋದಕ್ಕೆ  ಹಣ ಅಧಿಕಾರ ಸ್ಥಾನ ಅಗತ್ಯ ಎನ್ನುವ ಭೌತಿಕ ಜಗತ್ತಿನಲ್ಲಿದ್ದು ಸತ್ಯದ ಹುಡುಕಾಟ ಒಳಗೇ ನಡೆದಿತ್ತು ಜೊತೆಗೆ ಸಂಸಾರದ ಸತ್ಯಾಸತ್ಯತೆಯನ್ನು ಅನುಭವಿಸುತ್ತಾ ಹೋದಾಗಲೇ 34 ವರ್ಷ ಕಳೆದಿತ್ತು. ಅಷ್ಟರಲ್ಲಿ ಮನೆ ಮಕ್ಕಳ ಜವಾಬ್ದಾರಿ  ಹೊತ್ತು ಹೋಗೋದು ಅನಿವಾರ್ಯ ಆಗಿತ್ತು. ಆದರೆ ಸತ್ಯ ತಿಳಿಯದೆ ಸಂಸಾರದಲ್ಲಿರುವುದಕ್ಕೂ ತಿಳಿದು ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ತಿಳಿದ ಮೇಲೆ ಕಷ್ಟ ಅದಕ್ಕೆ ಇರಬೇಕು ಗಂಡಸರು ಸಂಸಾರ ಬಿಟ್ಟು ಸಂನ್ಯಾಸಕ್ಕೆ ಹೋಗೋದು.
ಇದನ್ನು ಪುರಾಣಗಳಲ್ಲಿಯೇ ತಿಳಿಯುತ್ತೇವೆ. ಆದರೆ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಹೊರಟವರಿಗೆ ಮುಕ್ತಿ ಸಿಗದೆನ್ನುವ ಸತ್ಯವರಿತವರಷ್ಟೆ ಸಂಸಾರ ಸಾಗರದಲ್ಲಿದ್ದೇ ಮುಕ್ತಿ ಮಾರ್ಗ ಹಿಡಿದಿರುವರು. ಸಂನ್ಯಾಸವೆಂದರೆ  ಎಲ್ಲವನ್ನೂ ಬಿಟ್ಟು ನಡೆಯೋದಾಗಿತ್ತು. ಈಗ ರಾಜಕೀಯ ಬಿಡದೆ ಎಲ್ಲಾ ಬಿಡುವರು.
ಪ್ರಜಾಪ್ರಭುತ್ವದ ಪ್ರಕಾರ ಎಲ್ಲಾ  ಪ್ರಜೆಗಳ ಸಹಕಾರದಿಂದ ನಡೆಯುತ್ತದೆ. ಪ್ರಜೆಗಳ ಮೂಲಕವೇ ಪರಮಾತ್ಮ ದೇಶ ವಿಶ್ವ ನಡೆಸೋದಾಗಿದೆ ಎಂದರೆ ಪರಮಾತ್ಮನ ಅರಿವು ಪ್ರಜೆಗಳಿಗೆ ಇದ್ದರೆ  ಪರಮಾತ್ಮನೆಡೆಗೆ  ಸಾಗುವರಷ್ಟೆ.ಆ ಅರಿವನ್ನೇ ಕೊಡದೆ ಆಳಿದರೆ ಆಳಾಗಿಯೇ ಇರುವರು. ಅರಸ ತನ್ನ ತಾನರಿತು ನಡೆಯೋದಕ್ಕೆ ಧಾರ್ಮಿಕ ಪ್ರಜ್ಞೆ ಅಗತ್ಯವಿದೆ. ಅವನಿಗೇ ಧರ್ಮ ಶಿಕ್ಷಣ ಕೊಡದೆ ದೇಶ ಒಪ್ಪಿಸಿದರೆ ಪ್ರಜೆಗಳ  ಗತಿ ಅಧೋಗತಿ.
ವಾಸ್ತವದಲ್ಲಿ  ನಾವೆಲ್ಲರೂ ದೇಶದ ಒಳಗಿರುವ ಸಾಮಾನ್ಯ ಪ್ರಜೆಗಳಷ್ಟೆ.ನಮ್ಮಲ್ಲಿ ದೇಶಭಕ್ತಿ ಇದೆಯೆ? ದೇಶೀಯ ಶಿಕ್ಷಣ ಇದೆಯೆ? ನಮ್ಮ ಸಂಸಾರ ನಮ್ಮ ಸ್ವಂತ ಬುದ್ದಿ ಜ್ಞಾನ ವಿದ್ಯೆ ಯಿಂದ ನಡೆದಿದೆಯೆ?  ಈ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ.ಎಲ್ಲಾ ವಿದೇಶಿಮಯ ವಿದೇಶಿ ಬಂಡವಾಳ ,ಸಾಲ, ವ್ಯವಹಾರಕ್ಕೆ  ಇಳಿದಿರುವಾಗ ದೇವರು ನಮ್ಮವರಾಗಿರಬಹುದೆ?

ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೋರಾಟ ನಡೆಸಿದ ಮಹಾತ್ಮರ  ತಪ್ಪನ್ನು ಎತ್ತಿ ಹಿಡಿಯುತ್ತಾ ರಾಜಕೀಯ ನಡೆಸುವ ಎಷ್ಟೋ  ರಾಜಕಾರಣಿಗಳಿಗೆ ಹಣ ಅಧಿಕಾರ ಸ್ಥಾನ ಸನ್ಮಾನ ಮಾಡುವ  ನಾವು ದೇಶಭಕ್ತರಾಗಲು ಕಷ್ಟವಿದೆ.
ಕಾರಣವಿಷ್ಟೆ  ಹಣ ಸಿಕ್ಕರೆ ಏನನ್ನಾದರೂ ಕೊಂಡುಕೊಳ್ಳಬಹುದೆನ್ನುವ ಅಜ್ಞಾನ ನಮ್ಮೊಳಗಿದೆ. ಜ್ಞಾನ ಎನ್ನುವ ಎರಡಕ್ಷರ  ವಿಜ್ಞಾನವಾಗಿದೆ. ಅದರಲ್ಲಿ ಸತ್ಯವೇ ಇಲ್ಲ ಧರ್ಮ ವೂ ಇಲ್ಲ. ಹಾಗಾದರೆ ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿದಂತೆ  ನಾವೆಲ್ಲರೂ ಮೊದಲೇ  ಸತ್ತವರೆ ಆಗಿದ್ದೇವೆ.
ಇನ್ನು ಹೊರಗಿನವರು ಬಂದು ಸಾಯಿಸುತ್ತಿರೋದು  ನಮ್ಮ ಸತ್ಯವನ್ನಷ್ಟೆ. ಸತ್ಯ ಸಾಯುವುದೆ? ಅದನ್ನು ಬಿಟ್ಟು ಹೋದರೆ ಹಿಂದುಳಿಯುತ್ತದಷ್ಟೆ ತಿಳಿದು ನಡೆದರೆ ಸಮಾಧಾನ ಸಿಗುತ್ತದೆ.
ಈವರೆಗಿನ ಲೇಖನಗಳು ನಮ್ಮ ದಿನನಿತ್ಯದ ಅನುಭವಕ್ಕೆ ಬರುವ ವಿಷಯಗಳಾಗಿದ್ದರೂ  ಅದನ್ನು ಪುರಾಣ ಇತಿಹಾಸ ದೆಡೆಗೆ ಹೋಲಿಸಿದರೆ ಅಲ್ಲಿಯೂ ಇದೇ ರೀತಿಯಲ್ಲಿ  ಸಮಾಜವಿತ್ತು.
ಆದರೆ ಒಂದು ವ್ಯತ್ಯಾಸವಿದೆ ಅಂದಿನ ವರ್ಣ ಇಂದಿನ ಜಾತಿ ಆಗಿದೆ. ಮಾನವನಿಗೊಂದು ಜಾತಿ ಕಟ್ಟಿ ಸಂಸಾರದೊಳಗಿಟ್ಟು  ಹೋರಾಟ ಹಾರಾಟ ಮಾರಾಟದಲ್ಲಿ  ಮನರಂಜನೆಯೋ ಆತ್ಮವಂಚನೆಯೋ ಒಟ್ಟಿನಲ್ಲಿ  ಜೀವನ  ನಡೆಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಸ್ವಯಂ ಆತ್ಮಾವಲೋಕನವಾಗಬೇಕು.
ಎಷ್ಟು ಹೊರಗಿನಿಂದ ಪಡೆದರೂ ಸಾಲದು ಎಂದರೆ ಸಾಲವೇ ಅದು. ಅದನ್ನು ತೀರಿಸದೆ ವಿಧಿಯಿಲ್ಲ.ವಿಧಿನಿಯಮ ಮೀರಿ ನಡೆದರೆ  ಜೀವನಸಾರ್ಥಕವಲ್ಲ. 
ಸನಾತನಧರ್ಮದ ಆಳ ಅಗಲಗಳನ್ನು ಹೊರಗಿನ ಆಚರಣೆಯಿಂದ ಅಳೆಯಲಾಗದು. ಒಳಗಿನ ಆಚಾರ ವಿಚಾರ ಶುದ್ದವಿದ್ದರೆ ಸ್ವಲ್ಪ ಅರ್ಥ ವಾಗಬಹುದು. ಆದರೆ ಅದನ್ನು ಲಿಂಗ ಬೇಧ ಮತ ಭೇಧ ಜಾತಿ ಭೇದ ಧರ್ಮ ಬೇಧ ಮಾಡಿಕೊಂಡರೆ
ಅನರ್ಥಗಳಾಗುತ್ತದೆ.
ಯಾರನ್ನು ಯಾರು ಆಳಬೇಕಿತ್ತು ಆಳುತ್ತಿರೋದು? ಪ್ರಜಾಪ್ರಭುತ್ವದ  ದೇಶದಲ್ಲಿ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?
ಆಂಗ್ಲರನ್ನು ಓಡಿಸಿದರೂ ಆಂಗ್ಲಮಾಧ್ಯಮಗಳದ್ದೇ ಸಾಮ್ರಾಜ್ಯ.
ಭಾಷೆ  ಶುದ್ದವಿರದೆ  ಜ್ಞಾನ ಬರುವುದೆ? ಜ್ಞಾನ ಶುದ್ದವಿರದೆ ವಿಜ್ಞಾನ ಬೆಳೆದರೆ ಮಾನವ ಮಹಾತ್ಮನಾಗುವನೆ? 
ಎಲ್ಲದಕ್ಕೂ ಇತಿಮಿತಗಳಿವೆ. ಮಕ್ಕಳನ್ನು ಪ್ರಭುದ್ದರಾಗಿಸಿದರೆ ಬುದ್ದ ನಾಗುವರೆ? ಬುದ್ದಿವಂತರ ಸಂಖ್ಯೆ ಬೆಳೆದರೂ ಜ್ಞಾನಿಗಳ ಸಂಖ್ಯೆ ಕುಸಿದಿದೆ ಎಂದರೆ ನಾವು ಕೊಡುತ್ತಿರುವ ಶಿಕ್ಷಣವೇ ಅಜ್ಞಾನವಾದಾಗ ಸತ್ಯ ಎಲ್ಲಿರುತ್ತದೆ?
ಭೂಮಿಗೆ ಬರೋದೆ ಸಾಲ ತೀರಿಸಲು.ಇನ್ನಷ್ಟು ಸಾಲದ ಹೊರೆ ತಲೆಮೇಲೆ ಹೊತ್ತರೆ ಆತ್ಮಹತ್ಯೆಗಳಾಗುತ್ತದೆ.
ಸಣ್ಣ ಮಕ್ಕಳ ಜ್ಞಾನ ಗುರುತಿಸಿ ಶಿಕ್ಷಣ ನೀಡುವ ಗುರುವಿಲ್ಲದೆ ಮೊದಲಗುರುವಾದ ತಾಯಿಯೇ ಹೊರಗೆದುಡಿದು ಸಂಪಾದನೆ ಮಾಡುವ ಪರಿಸ್ಥಿತಿಗೆ ಭಾರತ ಬಂದಿರೋದೆ  ದುರಂತ.
ಎಷ್ಟೋ ಮಹಿಳೆಯರಿಗೆ  ಹಣದ ಅಗತ್ಯವಿಲ್ಲದಿದ್ದರೂ ಸಮಯ ಕಳೆಯಲು  ಹೊರಗೆಕೆಲಸ ಮಾಡಿದರೆ  ಕೆಲವರಿಗೆ ಅಗತ್ಯವಿದ್ದರೂ ಕೆಲಸ ಸಿಗದೆ  ಪರದಾಡುತ್ತಿದ್ದಾರೆ. ಹಾಗಾದರೆ ಗಂಡುಮಕ್ಕಳ ಗತಿ ಏನಾಗಬೇಡ?
ಪುರುಷ ಎಂದರೆ ಆತ್ಮ ಎಂದರ್ಥದಲ್ಲಿ ಯಾವ ಜನ್ಮದ ಋಣ ಕಳೆಯಲು ಈ ಜನ್ಮದಲ್ಲಿ  ಆಳಾಗಿ ಸೇವೆ ಸಲ್ಲಿಸಿರುವರೋ ಪರಮಾತ್ಮನಿಗೇ ಗೊತ್ತು. ಹಿಂದಿನ ಮಹಾತ್ಮರಂತೆ ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವಷ್ಟು  ಸುಜ್ಞಾನ ಇಂದಿನವರಿಗಿಲ್ಲ. ಓದಿ ತಿಳಿದರೆ ಸಾಕು ನೇರವಾಗಿ ಪೀಠಕ್ಕೆ ಅಧಿಕಾರಕ್ಕೆ ಏರಬಹುದು. ಸುಲಭವಾಗಿ ಸಿಗೋದರಲ್ಲಿ ಸತ್ಯವಿರದು ಧರ್ಮ ವೂ ಇರದು.
ಕೆಲವರಷ್ಟೆ ಉತ್ತಮ ಅನುಷ್ಟಾನದಲ್ಲಿದ್ದು ಧಾರ್ಮಿಕ ಸೇವೆಯಲ್ಲಿ ಇದ್ದರೆ ಹಲವರಿಗೆ  ಸರ್ಕಾರದ ಹಿಂದೆ ನಿಂತು  ಬೇಡೋದೆ ಕೆಲಸ.
ಅದಕ್ಕೆ ಸರಿಯಾಗಿ ಜನಬಲ .ತಾವೇ ಸಾಲದಲ್ಲಿರುವಾಗ ತನ್ನ ನಂಬಿದವರ ಸಾಲ ತೀರಿಸಬಹುದೆ?
ಹಾಗೆಯೇ ದೇಶದ ಸಾಲತೀರಿಸಲು  ನಮ್ಮ ಸ್ವಂತ ಬುದ್ದಿ ಜ್ಞಾನದಿಂದ ಗಳಿಸಿದ ಹಣದ ಸದ್ಬಳಕೆಯಾಗಬೇಕೆ ವಿನ:  ಭ್ರಷ್ಟ ದುಷ್ಟರ ಅನ್ಯರ ಕೆಳಗೆ ಸೇವೆ‌ಮಾಡಿಗಳಿಸಿದ ಹಣವನ್ನು ದೇವರಿಗೆ ಕೊಟ್ಟರೆ ಸತ್ವವಿರದು ಸತ್ಯವಿರದು ತತ್ವವೂ ಇರದು.
ಇದನ್ನು ಕಲಿಗಾಲ ಎಂದಿರೋದು ಇದೇ ಕಾರಣದಿಂದ ಕಾರಣ ಇಲ್ಲಿ ಕಲಿಕೆಯೇ ಹೊರಮುಖವಾಗಿದ್ದು ಒಳಮುಖದಪರಿಚಯವಿಲ್ಲದೆ ದೇವರನ್ನು ಸೃಷ್ಟಿ ಮಾಡುವ ಮಾನವರಿದ್ದರೂ ಮಹಾತ್ಮರಿಲ್ಲ. ಇದರಲ್ಲಿ  ಸತ್ಯವಿದ್ದರೂ ಎಲ್ಲರಿಗೂ ಅರ್ಥ ವಾಗದು. ಕಾರಣ ಸತ್ಯ ಕಣ್ಣಿಗೆ ಕಾಣದು.
ಕಂಡರೂ ತೋರಿಸಲಾಗದು. ಅನುಭವಿಸಿಯೇ ಅರ್ಥ ಮಾಡಿಕೊಳ್ಳಲು ಸತ್ಯದ ಕಡೆಗೆ ಹೋಗಬೇಕಷ್ಟೆ.
ಸತ್ಯಹರಿಶ್ಚಂದ್ರನಂತಿರಲಾಗದು ಆದರೆ ಹರಿಯನ್ನು ಅರಿತು ನಡೆಯಬಹುದು. 
ಇನ್ನೊಬ್ಬರನ್ನು ಅಸತ್ಯ ಅನ್ಯಾಯ ಅಧರ್ಮದಿಂದ ಹರಿದು ಹಾಕುವ ಅಸುರಿಗುಣ  ಮಾನವನಿಗೇ ಉರುಳಾಗಿ ತಿರುಗಿ ಬರುವ ಸತ್ಯವರಿತರೆ ಇದ್ದಲ್ಲಿಯೇ  ಇದ್ದು ನಮ್ಮ ಸುತ್ತಮುತ್ತಲಿನ
ಪರಿಸರವನ್ನು ಸ್ವಚ್ಚವಾಗಿಸಬಹುದಷ್ಟೆ.ಕೊನೆಪಕ್ಷ ಮನೆಯೊಳಗೆ ಸಾಧ್ಯವಾದರೆ ಅದೇ ನಮ್ಮ ಅದೃಷ್ಟ.
ಹತ್ತಿರದವರೆ ನಮಗೆ ಶತ್ರುವಾದರೆ ಏನೂ ಮಾಡದ ಅತಂತ್ರ ಸ್ಥಿತಿ.
ನಮಗೆ ನಾವೇ ಶತ್ರುವಾಗೋದಕ್ಕೆ ಕಾರಣವೇ ಅಜ್ಞಾನ. ಅಜ್ಞಾನಕ್ಕೆ ಕಾರಣ ಶಿಕ್ಷಣದ ವಿಷಯ.ವಿಷಯದಲ್ಲೇ ವಿಷ ತುಂಬಿ ಅಸತ್ಯ ಅಧರ್ಮ ವಿದ್ದರೆ ಅಮೃತಪುತ್ರರು ಕಾಣುವರೆ?
ವಿವೇಕಾನಂದ ಎಂದರೆ ವಿಚಾರವನ್ನು ವೇದ ಪುರಾಣಗಳಿಂದ ಅರಿತು ಕಾಣುವ ಆನಂದ ಎನ್ನಬಹುದು.
ವೇದಪುರಾಣ ಕೇವಲಪ್ರಚಾರಕ್ಕೆ ಸೀಮಿತವಾದರೆ   ಒಳಗಿನ ಆನಂದ  ಸಿಗದು.
ಹಾಗೆ ವಿಜ್ಞಾನವನ್ನು  ಆಧ್ಯಾತ್ಮಿಕ ಸತ್ಯದಿಂದ ಅರಿತು ನಡೆದಾಗ ಕಾಣುವ ಆನಂದವೇ ವಿವೇಕಾನಂದ. ಇದನ್ನು ಶಿಕ್ಷಣದಿಂದ ನೀಡುವುದೇ ಧರ್ಮ. ಯಾರದ್ದೋ  ಜ್ಞಾನ ಮಕ್ಕಳ ಒಳಗೆ ತುಂಬುವ‌ಮೊದಲು ಮೂಲವನರಿತು ಪೂರಕ ಜ್ಞಾನ ಸೇರಿಸಿದರೆ  ವಿಜ್ಞಾನಿಗಳಾಗುವರು. 
ಯಾವಾಗಿದು  ವಿರುದ್ದ ದಿಕ್ಕಿನಲ್ಲಿರುವುದೋ  ವಿರುದ್ದ ಪರಿಣಾಮ ಎದಿರಿಸಬೇಕಾಗುವುದು ಸಹಜ.ಈಗಿನ ಭಾರತದ ಸ್ಥಿತಿಗೆ ಇದೇ ಕಾರಣವಾಗಿದೆ. ಇದನ್ನು ಸಾಮಾನ್ಯ ಪ್ರಜೆಯಾಗಿದ್ದು  ಇಷ್ಟು ವರ್ಷ ತಿಳಿಸುತ್ತಾ ಬಂದರೂ ನಮಗೆ ಅಧಿಕಾರ ಹಣ ಹೆಸರು ಇಲ್ಲದ ಕಾರಣದಿಂದ  ಹಿಂದುಳಿದರೂ  ಕಣ್ಣಿಗೆ ಕಾಣುವಷ್ಟು ಅವ್ಯವಸ್ಥೆ  ಜನರ ಕಣ್ಣಿಗೆ ಕಾಣುತ್ತಿರುವುದಕ್ಕೆ ನಮ್ಮದೇ ಸಹಕಾರ ಕಾರಣವೆನ್ನುವುದು ಸತ್ಯ.
ಯಾವಾಗ ಸತ್ಯಕ್ಕೆ ಬೆಲೆಕೊಡುವುದಿಲ್ಲವೋ ಸತ್ಯವರಿತು ನಡೆಯುವುದಿಲ್ಲವೋ ಮೊದಲು  ಹಣ ಅಧಿಕಾರ ಸ್ಥಾನ  ಪಡೆದರೂ ಕೊನೆಯಲ್ಲಿ ಅದೇ ಸರಿಯಾದ ಜೀವನ ಪಾಠಕಲಿಸಿ ಹೋಗಿರುತ್ತದೆ.ಅದಕ್ಕೆ ಹೇಳಿರೋದು ಆಗೋದನ್ನುತಡೆಯಲಾಗದು ಆಗಿರೋದಕ್ಕೆ ಕಾರಣ ತಿಳಿದು ನಡೆಯಬಹುದು.  ಇಲ್ಲಿ ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ. ಸತ್ಯ ಮಾತ್ರ ಸ್ಥಿರ ಅದೇ ಪರಮಾತ್ಮನದ್ದಾಗಿದೆ.
ಮಾಡಿದ್ದುಣ್ಣೋ ಮಹಾರಾಯ ಎಂದಂತೆ  ಕಾಲ ಎಲ್ಲಾ ಸರಿಪಡಿಸುತ್ತದೆ.ಕಾಲವೇ ಎಲ್ಲದಕ್ಕೂ ಕಾರಣ.ಕಾಲು ಸರಿಯಿರಲು ತಲೆ ಸರಿಯಿರಬೇಕು.ತಲೆಗೆ ತುಂಬುವ ವಿಷಯವೇ ಕಾಲಿನ‌ನಡಿಗೆಗೆ ಕಾರಣವೆಂದರೆ ಸುಜ್ಞಾನವಿಲ್ಲದ ವಿಜ್ಞಾನದ ಶಿಕ್ಷಣವೇ ಎಲ್ಲದ್ದಕ್ಕೂ ಕಾರಣ.ಆಕಾಶದೆತ್ತರ ಹಾರುವ‌ಮಾನವನಿಗೆ ಭೂಮಿಯ ಮೇಲಿನ ಸತ್ಯ ಸತ್ಬ ತತ್ವದರ್ಶನ ಆಗದಿದ್ದರೆ  ಜೀವನಕ್ಕೆ  ಅರ್ಥ ವಿಲ್ಲ. ಸಾಧನೆ  ಹೊರಮುಖವಾದರೆ ಹೊರಗಿನಿಂದ  ಕಾಣುತ್ತದೆ.ಒಳಮುಖವಾದರೆ  ಒಳಗಿನ ಸತ್ಯ ಅರ್ಥ ವಾಗುತ್ತದೆ.
ಇವೆರಡರ ನಡುವಿರುವ ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.

ತಿಳಿದವರಿಗೆ ಸತ್ಯ ತಿಳಿಸಲಾಗದು.ತಿಳಿಯದವರಿಗೆ  ಸತ್ಯ ಅರ್ಥ ಆಗದು. ಇವೆರಡರ ಮಧ್ಯೆ ನಿಂತವರಿಗೆ ಸತ್ಯ ರುಚಿಸದು. ವ್ಯವಹಾರಕ್ಕೆ ಇಳಿದಾಗ ಸತ್ಯ ದಿಂದ ಲಾಭ ಇರದು . ಹೀಗಾಗಿ ಸತ್ಯವೇ ದೇವರು ಎನ್ನುವವರೂ ಸತ್ಯನುಡಿಯುವುದಿಲ್ಲ. ಹಾಗಾಗಿ ಆತ್ಮಸಾಕ್ಷಿಯಂತೆ ಸ್ವತಂತ್ರ ಜೀವನ ನಡೆಸಿದ ಎಷ್ಟೋ ಸಾಮಾನ್ಯರಿಗೂ ಸತ್ಯದ ಪರಿಚಯವಾಗಿದೆ.ಇದನ್ನು ಹಣದಿಂದ ಅಳೆಯಲಾಗದು.ಅಳೆದರೂ  ಅಗತ್ಯವಾಗುತ್ತದೆ. ಒಟ್ಟಿನಲ್ಲಿ ಸತ್ಯ ಒಂದೇ ದೇವನೊಬ್ಬನೆ, ಭೂಮಿ ಒಂದೇ, ತಾಯಿ ಒಬ್ಬಳೇ ಎನ್ನುವ ಸತ್ಯವನ್ನು  ಅರಿತರೂ ಜನ್ಮ ಜನ್ಮದ ಅಂತರದಲ್ಲಿ  ನಡೆಯೋ  ತಾತ್ಕಾಲಿಕ ಬದಲಾವಣೆಗಳಲ್ಲಿ ಅಸತ್ಯ ಅಧರ್ಮ ವೂ  ಇರುತ್ತದೆ. ವಾಸ್ತವ ದಲ್ಲಿ ಬದುಕೋದಕ್ಕೆ  ಸರಳವೆನಿಸಿದರೂ‌ ಹಿಂದಿನ ಮತ್ತು ಮುಂದಿನ  ಸತ್ಯ ಕಣ್ಣಿಗೆ ಕಾಣದೆ ಗೊಂದಲ ಸೃಷ್ಟಿ ಮಾಡುವ ಮಧ್ಯವರ್ತಿ  ಮಾನವನಿಗೆ ಸತ್ಯ ತಿಳಿಸೋದರಿಂದ ಬದಲಾಗಬಹುದೆ? ಬದಲಾವಣೆ ಒಳಗಿನಿಂದ ಆಗಲು ನಾವೇ ಬದಲಾಗಬೇಕು.ಯಾರನ್ನೋ ಬದಲಾಯಿಸಹೋಗಿ ನಮ್ಮಲ್ಲೇ  ದೋಷ ಹೆಚ್ಚಾದರೆ   ಇರುವ ಸತ್ಯಕ್ಕೆ ಚ್ಯುತಿ ಬರಬಹುದೆನ್ನುವ ಕಾರಣದಿಂದ  ಎಷ್ಟೋ ಜನ ಸತ್ಯದೆಡೆಗೆ ನಡೆಯೋದಿಲ್ಲ.ಇದು ಸಂಸಾರಿಗಳ‌ಕಥೆ.ಸಂನ್ಯಾಸಿಗಳಲ್ಲಿ ಕೆಲವರು ಸಂಸಾರಿಗಳ ಹಿಡಿತದಲ್ಲಿರುವಾಗಲೂ ಸತ್ಯ‌ಹೊರಹಾಕೋದಿಲ್ಲ. ಇದು ಕಲಿಯುಗ.

No comments:

Post a Comment