ಅಧ್ವೈತ ದರ್ಶನ ಸಾಧ್ಯವೆ?

ಅಧ್ವೈತ ಸಂಶೋಧನೆಯು  ಜ್ಞಾನಯೋಗದಿಂದ ಸಾಧ್ಯವಾದಂತೆ ಕರ್ಮ ಯೋಗದಿಂದ ಕಷ್ಟವಿದೆ. ಇದಕ್ಕೆ ಶ್ರೀ ಶಂಕರ ಭಗವತ್ಪಾದರು  ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು. ಯೋಗವಿಲ...

Saturday, July 11, 2026

ಅಧ್ವೈತ ದರ್ಶನ ಸಾಧ್ಯವೆ?

ಅಧ್ವೈತ ಸಂಶೋಧನೆಯು  ಜ್ಞಾನಯೋಗದಿಂದ ಸಾಧ್ಯವಾದಂತೆ ಕರ್ಮ ಯೋಗದಿಂದ ಕಷ್ಟವಿದೆ.
ಇದಕ್ಕೆ ಶ್ರೀ ಶಂಕರ ಭಗವತ್ಪಾದರು  ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು. ಯೋಗವಿಲ್ಲದೆ  ಯೋಗಿಯಾಗಲಾರ. ಸಂನ್ಯಾಸಿಯಾದರೂ ಆಗಬಹುದು ಯೋಗಿಯಾಗೋದು ಕಷ್ಟ. ಸಂನ್ಯಾಸವೆಂದರೆ ಎಲ್ಲಾ ತೊರೆದು ಕಾವಿ ಧರಿಸೋದಷ್ಟೆ ಎನ್ನುವ  ಜನರ ಮುಂದೆ  ಯೋಗಿ ಕಾಣೋದಿಲ್ಲ. ಒಟ್ಟಾರೆ  ಅಧ್ವೈತ ಸಂಶೋಧನೆಓದಿನಿಂದ ಬರುವುದಿಲ್ಲ ಅನುಭವಸಾರದಿಂದ  ಅರಿಯುವುದಾಗಿದೆ.
ಭಾಗವತ ಪುರಾಣ ಭಗವಂತನ ವರ್ಣನೆ  ಮಾಡುತ್ತದೆ. ಅದರೊಳಗಿನ ಎಲ್ಲವೂ  ಅಧ್ವೈತ ದಂತೆ  ಕಂಡರೂ ಧ್ವೈತವೇ ಆಗಿರುತ್ತದೆ. ಕಾರಣ ಅಲ್ಲಿ ರಾಜಕೀಯತೆ ಎದ್ದು ಕಾಣುತ್ತದೆ.
ಆದರೆ ಭಗವಂತನೇ  ಹೇಳಿರುವ ಭಗವದ್ಗೀತೆ ಯಲ್ಲಿ ಯೋಗವಿದೆ. ಯಾವಾಗ ಭಗವದ್ಗೀತೆಯ  ಯೋಗದಿಂದ ಮಾನವ ಜೀವನದ ಸತ್ಯಾಸತ್ಯತೆಯನ್ನು  ಅನುಭವಿಸುತ್ತಾ ಸಾಗುವನೋ ಅಲ್ಲಿ ಮಹಾತ್ಮರ ದರ್ಶನ ಸಾಧ್ಯ. ಪರಮಾತ್ಮನ ಜೀವಾತ್ಮ ಸೇರಲು  ನಡೆಸೋ  ಧಾರ್ಮಿಕ ಕಾರ್ಯದಲ್ಲಿ ರಾಜಕೀಯ ಬೆರೆತಾಗ. ಭೋಗಕ್ಕೆ ತಿರುಗುತ್ತದೆ. ರಾಜಕೀಯದಲ್ಲಿ ಧರ್ಮ ವಿದ್ದರೆ  ಆತ್ಮನಿರ್ಭರವಾಗುತ್ತದೆ.
 ಇದನ್ನು ಕಲಿಕೆಯ ಹಂತದಲ್ಲಿಯೇ  ತಿಳಿಸಿ ಬೆಳೆಸುವುದು ಗುರುಹಿರಿಯರ ಧರ್ಮ ಕರ್ಮ. ಕಲಿಕೆಯೇ ಅಂತರ ಬೆಳೆಸಿದರೆ ಅಜ್ಞಾನವಾಗಿರುತ್ತದೆ. 
ಕೃಷ್ಣನೊಬ್ಬನೆ ಜಗದ್ಗುರು ಎನ್ನುವುದು ಸುಲಭ. ಆ ಕೃಷ್ಣನೇ ಎಲ್ಲರೊಳಗಿದ್ದು  ಜಗತ್ತನ್ನು ನಡೆಸುತ್ತಿರುವವನೆಂದು ಯಾರು ತಿಳಿಸಿದರೂ ನಾನೇ ಗುರು ಎನ್ನುವ ಅಹಂಕಾರವಿದ್ದರೆ  ಕತ್ತಲ ಜಗತ್ತೇ  ಸೃಷ್ಟಿ ಯಾಗುತ್ತದೆ.
ಒಂದು ದೇವರಿಗೆ ಹಲವಾರುಗುಡಿಗೋಪುರ ಕಟ್ಟಬಹುದು. ಆದರೆ ಆ ಒಂದು ದೇವರನ್ನು  ಹಲವಾರುಗುಡಿಯಲ್ಲಿ ನೋಡುವದೃಷ್ಟಿ  ಜ್ಞಾನಯೋಗದಿಂದ ಬರಬೇಕು. ಎಲ್ಲರ ಕರ್ಮ ಅಥವಾ ಕೆಲಸವೂ ಪರಮಾತ್ಮನ ಸೇವೆಯೇ ಎನ್ನುವ ಅರಿವು ಇದ್ದರೆ ಕರ್ಮಯೋಗಿ. ಹೀಗೇ ತನ್ನ ತಾನರಿತು ತನ್ನಾತ್ಮರಕ್ಷಣೆಗಾಗಿ  ನಡೆಸೋ ಯೋಗಿಯ ಚಿಂತನೆಯು ಸಂನ್ಯಾಸಿಗೂ ಬರದು.
ಕಾರಣ ಸಂನ್ಯಾಸಿ  ಹೊರಗಿನಿಂದ  ಎಲ್ಲಾ ತೊರೆದಿದ್ದರೂ ಒಳಗೆ  ಪರಮಾತ್ಮನ  ಅರಿತುನಡೆಯೋದರಲ್ಲಿ ಸೋಲಬಹುದು.
ಸಂನ್ಯಾಸಿ  ಆಗೋದಕ್ಕೆ  ಸುಲಭ ಯೋಗಿ ಆಗೋದು ಕಷ್ಟ.
ಯೋಗಿ ಪರಮಾತ್ಮನಿಗೆ ಶರಣಾದಾಗಲೇ ಏಕತ್ವ ಅಧ್ವೈತಿ ಎನಿಸಿಕೊಳ್ಳಬಹುದು.
ಯಾರು ಹೇಳಬೇಕು? ಯಾರೋ ಹೇಳಬೇಕೆಂದು  ಯೋಗಿ ಆಗೋದರಲ್ಲಿ ಅರ್ಥ ವಿರದು. ಹಾಗೆ  ಸಂನ್ಯಾಸಿಯೂ ಯಾವುದೋ ಆಸೆಯಲ್ಲಿದ್ದರೆ  ಮೋಕ್ಷವಿರದು.
ಎಲ್ಲಾ ಸಣ್ಣ ಪುಟ್ಟ ದೊಡ್ಡ ದೊಡ್ಡ ದೇವತೆಗಳ ಜೊತೆಗೆ ಅಸುರರೂ  ಪರಮಾತ್ಮನ ಅಧೀನವಿರೋವಾಗ  ಆ ಒಬ್ಬನ ಅರಿತು ನಡೆಯಲು  ಸ್ವತಂತ್ರ ಜ್ಞಾನವಿರಬೇಕು. ಯಾರಿಗೋ ಆದ ಅನುಭವವಾಗಲಿ ಯಾರೋ  ನಂಬಿದ ವ್ಯಕ್ತಿ ಶಕ್ತಿಯಾಗಲಿ ನಮ್ಮನ್ನು  ಪರಮಾತ್ಮನೆಡೆಗೆ  ನಡೆಸುವ  ಪ್ರಯತ್ನ ಮಾಡಬಹುದು. ಆದರೆ ಸ್ವಯಂ ಪ್ರಯತ್ನದಿಂದ ಸದಾಚಾರ ಸತ್ಯ ಸ್ವತಂತ್ರವಾಗಿ  ಜ್ಞಾನಪಡೆದ ಜ್ಞಾನಯೋಗಿಯನ್ನು ಪರಮಾತ್ಮನೇ ನಿಂತು ನಡೆಸುವಾಗ ಅವನಲ್ಲಿ  ನಾನೆಂಬ ಅಹಂ ಇರದು.ನಾನೆಂಬುದಿಲ್ಲ ಎನ್ನುವ ಸತ್ಯದ ಅನುಭವವೇ ಅಧ್ವೈತ.
ನಾನೇ ಎಲ್ಲಾ ಎನ್ನುವ ಅಹಂಕಾರ ದಿಂದ ಸರ್ವ ನಾಶ .

ಸಂಸಾರದೊಳಗಿದ್ದು ಯೋಗಿಯಂತೆ ಬದುಕುವವರಿದ್ದಾರೆ.
ಸಂನ್ಯಾಸ ಸ್ವೀಕರಿಸಿಯೂ ಸಂಸಾರಿಗಳ  ಹಂಗಿನಲ್ಲಿದ್ದವರೂ ಇದ್ದಾರೆ. ಯೋಗಿಗಳನ್ನು ಗುರುತಿಸೋರಿಲ್ಲ  ಸಂನ್ಯಾಸಿಗಳನ್ನು ಗುರುತಿಸುವವರೆ ಎಲ್ಲಾ  ಇದರಿಂದ ಭಗವದ್ಗೀತೆಯ ಯೋಗ  ಜನರಿಗೆ ಅರ್ಥ ವಾಗದೆ  ಹೋಗುತ್ತಿದೆ ಜೀವನ..ಜೀವಿಗಳ ವನ.

ಗುರುತಿಸಲು ಪರಮಾತ್ಮನಿರೋವಾಗ ಚಿಂತೆಯಾಕೆ?ನಮ್ಮ ಆತ್ಮಕ್ಕೆ ತೃಪ್ತಿ ಸಿಗುವ ಸತ್ಕರ್ಮ ಸ್ವಧರ್ಮ  ಬಿಡದೆ ನಡೆಯಬೇಕು
ಆಗಲೇ ಒಳಗಿರುವ ಸ್ವತಂತ್ರ ಜ್ಞಾನ ಸಿಗೋದು.
ಇಂದಿನ ಶಿಕ್ಷಣವೇ ಪ್ರಾಥಮಿಕ ಹಂತದಲ್ಲಿಯೇ ದಾರಿತಪ್ಪಿಸಿ ಆಳಲು ಹೊರಟಿರುವಾಗ ಎಲ್ಲಿಯ ಯೋಗ?ಎಲ್ಲಾ ರಾಜಕೀಯಮಯ..ಎಲ್ಲೋ ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ.
ಬೆಟ್ಟ ಏರೋದಕ್ಕೆ ಕಲ್ಲುಮುಳ್ಳುಗಳು ಬಿಡದಿದ್ದರೆ ಮುಂದೆ ನಡೆಯೋದೆ . ಕಷ್ಟವಾದರೂ ಆ ಅಡತಡೆಗಳಹಿಂದೆ ಪರಮಾತ್ಮನಿದ್ದಾನೆಂಬ ಅರಿವಿದ್ದವರು ಮೇಲೇರಿದ್ದಾರೆ.
ನಾನಿದ್ದೇನೆ ಎನ್ನುವ ಮೂಲಕವೇ ನಾನಿಲ್ಲ ಎನ್ನುವ ಸತ್ಯ ತಿಳಿಯದವರು ಮಹಾಜ್ಞಾನಿಗಳಾಗಿ ಲೋಕರಕ್ಷಕರಾಗಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನ ಅವತಾರವನ್ನು  ಸಂಪೂರ್ಣ ಅವತಾರ ಎನ್ನುವರು. ಸ್ವಯಂ  ಮಹಾವಿಷ್ಣುವಿನ  ಅವತಾರದಲ್ಲಿ‌ಕೃಷ್ಣಾವತಾರದಲ್ಲಿ ಯೋಗ ಭೋಗಗಳು  ಸಮಾನವಾಗಿದೆ. ಯಾವುದಕ್ಕೂ ಅಂಟಿಕೊಳ್ಳದೆ  ಸ್ಥಿತಪ್ರಜ್ಞಾವಂತನಾದವ. ಯೋಗಿ ಎನಿಸುವನೆಂದರೆ  ಕೃಷ್ಣನ  ಅವತಾರದಲ್ಲಿ  ಎಲ್ಲಾ ಇದ್ದುಯಾರೂ ಇಲ್ಲದ ಸ್ಥಿತಿ ಕೊನೆಯಲ್ಲಿ  ಪರಿಸಮಾಪ್ತಿಯಾದರೂ ಅದರಿಂದಲೂ ಮಹಾಸಂದೇಶವಿದೆ. ಸ್ವಯಂ  ಅವತಾರಿಪುರುಷರಿಗೇ  ಭೂಮಿ ಒಂದು ಮಧ್ಯಮ ವಷ್ಟೆ.ಇಲ್ಲಿ ಏನು ನೋಡುವೆವೋ ಕೇಳುವೆವೋ  ತಿಳಿಯುವೆವೋ ಅದರಿಂದ ಮುಂದಿನ ಭವಿಷ್ಯವಿದೆ. ಧರ್ಮ ವಿಲ್ಲದೆ ಸತ್ಯ ನಿಲ್ಲದು ಸತ್ಯವಿಲ್ಲದೆ ಧರ್ಮ ಉಳಿಯದು. ಇವೆರಡರ ಸಮ್ಮಿಲನ
ಆಗೋದು ಕಷ್ಟ. ಹೀಗಾಗಿ ಬದಲಾವಣೆ ನಡೆಯುತ್ತಲೇ ಇರುತ್ತದೆ. ಮನಸ್ಸಿನ ನಿಗ್ರಹ ಯೋಗ ದಿಂದ ಮಾತ್ರ  ಸತ್ಯದರ್ಶನ . ಮಾಯಾ ಮೋಹದಲ್ಲಿ ತೇಲುವ ಮನಸ್ಸಿಗೆ ಮನಸ್ಸೇ ಶತ್ರು ಮಿತ್ರ. 

No comments:

Post a Comment