ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, August 18, 2025

ಸರ್ವ: ವಿಷ್ಣು ಸಹಸ್ರನಾಮ



ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಸರ್ವ: ಶರ್ವ: ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ | ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ ||೪ 

. ಸರ್ವ: - ಲೋಕದಲ್ಲಿ ಏನನ್ನು ನೋಡುತ್ತೇವೋ, ಏನನ್ನು ಕೇಳುತ್ತೇವೋ ಅವೆಲ್ಲವನ್ನೂ ಹೊಂದಿರುವವನು.

ವಿವರಣೆ : 'ಸರ್ವಂ ಸಮಾಪ್ನೋಷಿ ತತೋSಸಿ ಸರ್ವ'- ಲೋಕದಲ್ಲಿ ಏನನ್ನು ನೋಡುವೆಯೋ, ಏನನ್ನು ಕೇಳುವೆಯೋ ಅವೆಲ್ಲವನ್ನೂ ನೀನು ಹೊಂದಿರುವಿ. ಆದುದರಿಂದ ನೀನು ಸರ್ವ ಎಂದು ಅರ್ಜುನ ಕೃಷ್ಣನಲ್ಲಿ ನಿವೇದಿಸಿಕೊಂಡಿರುವನು.

'ವ್ಯಾಸೋಚ್ಛಿಷ್ಟಂ ಜಗತ್ ಸರ್ವಂ'- ಎಂದು ಒಂದು ಮಾತಿದೆ. ಜಗತ್ತಿನಲ್ಲಿ ಏನೇನಿದೆಯೋ ಅವೆಲ್ಲ ಶ್ರೀವೇದವ್ಯಾಸರ ವಾಹ್ಮಯದ ಉಚ್ಚಿಷ್ಟ, ಎಂಜಲು. ಅದರಂತೆ ಜಗತ್ತಿನಲ್ಲಿ ಯಾವ ಯಾವ ವಸ್ತುವಿನಲ್ಲಿ ಏನೇನು ಗುಣಗಳಿವೆಯೋ ಅದೇ ಗುಣಗಳನ್ನಲ್ಲದಿದ್ದರೂ, ಅಂತಹ ಗುಣಗಳನ್ನು ಪರಮಾತ್ಮ ಹೊಂದಿರುವನು. ಒಂದು ವಸ್ತು ನಷ್ಟವಾದಾಗ ಅದರಲ್ಲಿಯ ಗುಣಗಳನ್ನು ಪರಮಾತ್ಮನು ಸ್ವೀಕರಿಸುವನು, ಹೀಗೆ ಎಲ್ಲವನ್ನೂ ಹೊಂದಿರುವುದರಿಂದ ಸರ್ವ ಎನಿಸುವನು.
ಸರ್ವ ಶಕ್ತಿ ಸರ್ವಾತ್ಮ, ಸರ್ವೇಶ್ವರ, ಸರ್ವಸ್ವ ವನ್ನು ಆವರಿಸುವ ಪರಮಾತ್ಮನೊಬ್ಬನೆ ಆಗಿರುವನೆಂಬುದಾಗಿದೆ.
ಇಲ್ಲಿ ನಾನು ಬೇರೆ ನೀನೇ ಬೇರೆ ಎನ್ನುವುದು ಭ್ರಮೆಯಷ್ಟೆ.ಮಾಯೆಯ ವಶದಲ್ಲಿ ಜೀವನಿಗೆ ಎಲ್ಲಾ ನಾನೇ ಮಾಡುತ್ತಿರುವುದೆನ್ನುವಂತೆ ಅನುಭವವಾದರೂ ಆ ಮಾಯೆಯೂ ಪರಮಾತ್ಮನ ರೂಪವೇ ಆಗಿರುತ್ತದೆ ನ್ನಬಹುದು.ಅದಕ್ಕೆ ನಾನೆಂಬುದಿಲ್ಲ ಜಗತ್ ಮಿಥ್ಯ ಎನ್ನುವುದು ಅಧ್ವೈತ.




ಭೌತಿಕದಲ್ಲಿ  ಹೊರಗಿನ ದೃಷ್ಟಿಯಿಂದ  ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು  ಅರಿತು ನಡೆಯಲು ಇದನ್ನು ನಮ್ಮ ಇಂದಿನ ಸರ್ಕಾರಗಳಿಗೆ  ಹೋಲಿಸಿದರೆ ಇಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ ಎಲ್ಲಾ ಪ್ರಜೆಗಳ ಸಹಕಾರದಿಂದ ನಡೆದಿದೆ. ಎಲ್ಲಾ ಪಕ್ಷಗಳೂ ಜನ್ಮ ಪಡೆದಿರೋದು ಪ್ರಜೆಗಳ ಸಹಕಾರದಿಂದಲೇ  ಅವರ ಹಣವನ್ನು  ಹಿಂದಿರುಗಿ ಕೊಡುವುದು ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಆದರೆ ಅದು ಧರ್ಮ ಸತ್ಯ ನ್ಯಾಯ ನೀತಿ ಸಂಸ್ಕೃತಿ ಗೆ ವಿರುದ್ದವಿದ್ದರೆ ಭ್ರಷ್ಟಾಚಾರ ವಾಗುತ್ತದೆ. ‌ಭ್ರಷ್ಟಾಚಾರವನ್ನು  ಬೆಳೆಸಿದಷ್ಟೂ  ಅದರ ಫಲವನ್ನು ಪ್ರಜೆಗಳೇ ಅನುಭವಿಸೋದು. ಹಾಗೆಯೇ ಎಲ್ಲಾ  ಪರಮಾತ್ಮನ ಒಳಗಿರುವ ಜೀವಾತ್ಮರೆ ಆದಾಗ ಆ ಸರ್ವ:  
ಲೋಕದಲ್ಲಿ ಏನನ್ನು ನೋಡುತ್ತೇವೋ, ಏನನ್ನು ಕೇಳುತ್ತೇವೋ ಅವೆಲ್ಲವನ್ನೂ ಹೊಂದಿರುವವನು ಒಬ್ಬನೇ ಪರಮಾತ್ಮ. ಇದನ್ನರಿಯದ ಮಾನವ ಸತ್ಯಧರ್ಮ ಬಿಟ್ಟು ವಿರೋಧಿಸಿದರೆ ಸರ್ವ ನಾಶಕ್ಕೆ ಕಾರಣನಾಗುವನು.
ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ ಜ್ಞಾನವಿಲ್ಲದೆ ಬುದ್ದಿ ಓಡಿಸಿದರೆ  ವಿನಾಶವೇ. ಶಾಶ್ವತವಿರದ  ಜೀವಕ್ಕಾಗಿ  ಜೀವನವಿಡೀ ಆತ್ಮವಂಚನೆಯಲ್ಲಿ  ರಾಜಕೀಯ ನಡೆಸಿದರೆ  ಎಲ್ಲರೊಳಗಿದ್ದು ನಡೆಸೋ  ಪರಮಾತ್ಮನ ಅರಿಯಲಾಗದು .




ಈ ಕೆಳಗಿನ ಪೋಸ್ಟ್ ನಲ್ಲಿ  ಅಕ್ಷರ ತಪ್ಪಾಗಿದೆ ಹಾಗಂತ ಒಳಗಿನ  ಅರ್ಥ ನಮಗೆ ಅರ್ಥ ವಾಗುತ್ತದೆಂದರೆ ಪರಮಾತ್ಮ ಒಳಗಿದ್ದು ಅರ್ಥ ಮಾಡಿಸುವನೋ ಹೊರಗಿದ್ದು ಅರ್ಥ ಮಾಡಿಸುವನೋ ನಮಗೇ ಬಿಟ್ಟ ವಿಚಾರ.
ಕೆಲವರು ತಪ್ಪನ್ನು ಹೊರಗೆ ಹುಡುಕಿ ಒಳಗಿದ್ದ ಸತ್ಯ ಒಪ್ಪದೆ ನಡೆದರೆ  ಕೆಲವರಿಗೆ ಹೊರಗಿನ ತಪ್ಪು  ಕಾಣದೆ ಒಳಗಿನ ತಪ್ಪು ತಿಳಿದು ಸರಿಯಾಗಿ ನಡೆಯುವರು.ಇಬ್ಬರೂ ಪರಮಾತ್ಮನ ಸಣ್ಣ ಬಿಂದುಗಳೇ ಆಗಿದ್ದರೂ ಹೊರಗಿನ‌ಬಿಂದು ಕೂಡಿಕೊಂಡು  ವಿರೋಧ ವ್ಯಕ್ತಪಡಿಸಿದರೆ ಒಳಗಿನ ಬಿಂದುಗಳು  ಸತ್ಯ ತೋರಿಸಲಾಗದೆ ಹಿಂದುಳಿಯುವರು. ಹಿಂದೂ ಸನಾತನ ಧರ್ಮ  ಹಿಂದುಳಿದಿರಲು ಕಾರಣವೇ ಒಗ್ಗಟ್ಟಿನ ಅಭಾವವೆನ್ನಬಹುದು.
ಏನೇ ಆದರೂ ಒಳಗಿಳಿದವರನ್ನು ಪರಮಾತ್ಮನೇ ನೇರವಾಗಿ ನಡೆಸುವಾಗ  ಹೊರಗುಳಿದವರು ಯಾರೂ ಏನೂ ಮಾಡಲಾಗದು. ಆಳವಾದ ಬೇರನ್ನು ರೆಂಬೆಕೊಂಬೆಗಳನ್ನು ಮುರಿದರೆ  ಕೀಳಬಹುದೆನ್ನುವುದು ಭ್ರಮೆಯಷ್ಟೆ.ಅದಕ್ಕೆ  ಎಷ್ಟೋ  ಆಕ್ರಮಣಗಳು ನಡೆದರೂ ಮತ್ತೆ ಮತ್ತೆ ಚಿಗುರುತ್ತದೆ ಸನಾತನಧರ್ಮ. ಏನಂತೀರ? ಆದರೆ ಚಿಗುರಿಗೆ ಸರಿಯಾದ ಲಾಲನೆ ಪೋಷಣೆ ಸಂಸ್ಕರಣೆ  ಮಾಡದಿದ್ದರೆ ಉಪಯೋಗವಿಲ್ಲ. ಇದು ಹಿಂದುಗಳಿಗೆ ಅರ್ಥ ವಾದರೆ ಉತ್ತಮ.  ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಯೋಗದಿಂದ  ಪರಮಾತ್ಮನ ದರ್ಶನ ವಾಗೋದು.
ಅವತಾರ ಪುರುಷ ಸ್ತ್ರೀ ಯರು  ಕಣ್ಣಿಗೆ ಕಾಣೋದಿಲ್ಲ.ಅವರ ಗುಣಜ್ಞಾನವರಿತು ನಡೆದರೆ  ಕಾಣುವರು ಎಂದರೆ ಒಳಗಿನ ಸರ್ವಾಂಗೀಣ ಪ್ರಗತಿ ಆರೋಗ್ಯವಾಗಿರಬೇಕಿದೆ.ಇದನ್ನು ಶಿಕ್ಷಣದಿಂದ  ಮಾಡಬೇಕಿತ್ತು. ಯಾರನ್ನೂ ಕಾರಣಕರ್ತ  ಎನ್ನುವ ಬದಲು‌ನಾನೇ ಎಲ್ಲದಕ್ಕೂ ಕಾರಣ ನನ್ನ ಸಹಕಾರವೇ ಕಾರಣವೆಂದು ಪ್ರಜೆಗಳಿಗೆ ಅರ್ಥ ವಾದರೆ  ಆತ್ಮರಕ್ಷಣೆಗಾಗಿ  ಪ್ರಯತ್ನ ಪಡಬಹುದು. ಹಣದಿಂದ ಕಷ್ಟ. ರಾಜಕೀಯದಿಂದ ನಷ್ಟ.  ಒಬ್ಬರನ್ನು ಇಳಿಸಿ ಇನ್ನೊಬ್ಬರು  ಅಧಿಕಾರ ಪಡೆದರೂ  ಮತದಾನ ಮಾಡುವ ಪ್ರಜೆಗಳ ಅಜ್ಞಾನ. ಹೋಗದಿದ್ದರೆ  ಯಾರ ಉದ್ದಾರವಾಗುತ್ತದೆ. ಎಲ್ಲಾ ನಾಟಕಮಯ. ಪಾತ್ರಧಾರಿಗಳಲ್ಲಿ  ನಿಂತು ಆಡಿಸುವವ ಒಬ್ಬನೇ  ಆದಾಗ  ಯಾರ ತಪ್ಪು ಸರಿ ತೀರ್ಮಾನಕ್ಕೆ ಬರಲು ಸಾಧ್ಯವೆ? ಆತ್ಮಸಾಕ್ಷಿಗೆ ವಿರುದ್ದ ನಡೆದಷ್ಟೂ ಸಂಕಷ್ಟವೆ. 

ಅಧ್ಯಾತ್ಮ ಮತ್ತು ಭೌತ ವಿಜ್ಞಾನ ವೆರಡೂ ಒಂದೇ ನಾಣ್ಯದ ಎರಡು ಮುಖ. ವ್ಯವಹಾರಕ್ಕೆ  ಇಳಿದಾಗ ಹಣಕ್ಕಾಗಿ ಧರ್ಮ ನಷ್ಟ, ಧರ್ಮಕ್ಕೆ ತಿರುಗಿದಾಗ ಹಣ ನಷ್ಟ.  ಯಾರಿಗೆ ನಷ್ಟ ಎಂದರೆ  ಜೀವಾತ್ಮನಿಗಷ್ಟೆ ಪರಮಾತ್ಮನಿಗಲ್ಲ. ಎಲ್ಲರೊಳಗಿದ್ದರೂ  ಎಲ್ಲರೂ ಅವನನ್ನು ಅರಿಯಲಾಗದು.
ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ.
ಹೆಚ್ಚು ಲಾಭ ಮಾಡಿಕೊಂಡರೆ ನಷ್ಟ ಅನುಭವಿಸುವುದು ಸತ್ಯ. ಅಧರ್ಮ ಅಸತ್ಯಕ್ಕೆ ಬೆಲೆ ಹೆಚ್ಚಾದಂತೆ  ಸತ್ಯ ಧರ್ಮ  ಹಿಂದುಳಿಯುತ್ತದೆ. ಅದೇ ಮುಂದೆ ದೊಡ್ಡ ದೊಡ್ಡ ಸಮಸ್ಯೆಗೆ ಕಾರಣವಾದಾಗ ಮಾನವನೇ ಹಿಂದಿರುಗಿ‌ ಬಂದು ದಾನಧರ್ಮ  ಮಾಡುವನೆಂದರೆ ಕೆರೆಯನೀರನು ಕೆರೆಗೆ ಚೆಲ್ಲಿ ಎಂದಂತೆ . ಇಷ್ಟು ತಿಳಿದವರು  ಯಾವುದೂ ಅತಿಯಾಗದಂತೆ   ಸತ್ಯವರಿತು ಬದುಕುವರು. 

ಸರ್ಕಾರ ಕೊಡುವ ಭಾಗ್ಯಗಳು ಸಾಲ ಸೌಲಭ್ಯಗಳನ್ನು  ಪಡೆದವರು  ಶ್ರೀಮಂತ ನಾದರೂ  ಬಡವರೆ ಆಗಿರುವರು.
ಎಷ್ಟು ಕೊಟ್ಟರೂ ಸಾಲದು ಎಂದರೆ ಸಾಲವೇ ಅದು.
ದೊಡ್ಡ  ಮನೆ ಮಠ ಬಂಗಲೆ ಕಾರುಬಾರು  ನಡೆಸಿದರೂ ತೃಪ್ತಿ ಸಿಗದು ಎಂದರೆ ಪರಮಾತ್ಮನೆಡೆಗೆ ಜೀವಾತ್ಮ ನ ಪಯಣವಾಗಿಲ್ಲವೆಂದರ್ಥ. ಹಿಂದಿನ ಮಹಾತ್ಮರಲ್ಲಿ ಹಣವಿರಲಿಲ್ಲ ಅಧಿಕಾರವೂ ಇರಲಿಲ್ಲ ಆದರೂ ಆತ್ಮತೃಪ್ತಿ ಇತ್ತು. ಈಗ ಎಲ್ಲಾ ಇದೆ ಆತ್ಮಕ್ಕೆ ತೃಪ್ತಿ ಯಿಲ್ಲದೆ ಅತೃಪ್ತರೆ  ರಾಜಕೀಯಕ್ಕೆ ಇಳಿದಿರೋದೆಂದರೆ  ಅವರಿಗೆ ಸಹಕಾರ ಕೊಟ್ಟವರಿಗೂ ಅತೃಪ್ತಿಯೇ ಕಾಡುತ್ತದೆ. ಏನನ್ನೇ ಆಗಲಿ ಹಂಚಿಕೊಂಡಷ್ಟೂ ಬೆಳೆಯುತ್ತದೆ. ಹಾಗೆ  ಇದೂ ಒಂದು.

No comments:

Post a Comment