ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, August 4, 2025

ದೇಶವನ್ನು ವಿದೇಶ ಮಾಡೋದು ಪ್ರಗತಿಯೆ?


ನಾವು ಸತ್ಯವನ್ನು ಬದಲಾಯಿಸಲಾರೆವು,ಆದರೆ ಸತ್ಯ ನಮ್ಮನ್ನು ಬದಲಿಸಬಲ್ಲದು.ಸತ್ಯದೊಂದಿಗೆ ಇದ್ದು ಬದುಕು ಬದಲಾಯಿಸಿಕೊಳ್ಳಬೇಕಿದೆ. 
ದೇಶವನ್ನು ವಿದೇಶ ಮಾಡಲು ಹೊರಟವರಿಗೆ ಈಗ ಸತ್ಯದ ಅರಿವಾಗಿರಬಹುದು. ಎಷ್ಟೇ ಆದರೂ ಹೊರಗಿನವರು ನಮ್ಮವರಾಗರು, ನಮ್ಮವರೆ ಹೊರಗಿನವರಾದಾಗ  ಕಷ್ಟ ಯಾರಿಗೆ? 

ದೇಶ‌ ಮೊದಲೋ ವಿದೇಶವೋ?
ಯಾವ ದೇಶದ ಶಿಕ್ಷಣ  ಮೊದಲಿರುವುದೋ ಆ ದೇಶ   ಮುಂದಿರುವುದು.ಇಷ್ಟು ತಿಳಿದರೆ ಸಾಕು ಮಾನವ ತನ್ನ ಜನ್ಮ ಭೂಮಿಯ ರಕ್ಷಣೆಗೆ  ತಾನು ಯಾವ ಶಿಕ್ಷಣ ಜ್ಞಾನ ಪಡೆದು  ಮುಂದುವರಿಯಬೇಕೆಂಬ ಸಾಮಾನ್ಯಜ್ಞಾನಕ್ಕೆ ತಲೆಬಾಗಬಹುದು.
ಹಿಂದಿನಿಂದಲೂ  ದೇಶ ಮೊದಲು ಎನ್ನುವ ಕೂಗಿನಲ್ಲಿ ದೇಶಭಕ್ತರು  ಮುಂದೆ ಬಂದಿರುವರು. ಈಗ‌ ವಿದೇಶಗಳಿಗೆ‌ ಮೊದಲು ಹೋಗುವವರ ಸಂಖ್ಯೆ ಬೆಳೆದಿದೆ. ದೇಶದಲ್ಲಿ ಹತ್ತಿರದ ಎಷ್ಟೋ ಪ್ರವಾಸಿತಾಣಗಳಲ್ಲಿ ವಿದೇಶಿಗರು  ಬರುವರು ಆದರೆ ನಮ್ಮ ‌ಮಕ್ಕಳಿಗೇ ಅದರ ಪರಿಚಯವಿಲ್ಲದೆ‌ ವಿದೇಶದ ಪರಿಚಯ ಮಾಡಿಸುವವರೂ ಇದ್ದಾರೆಂದರೆ ವಿದೇಶಿ ವ್ಯಾಮೋಹ, ವ್ಯವಹಾರ, ಶಿಕ್ಷಣ,ಧರ್ಮ  ಸಂಸ್ಕೃತಿ ಗೆ ಮರುಮಾತನಾಡದೆ‌ ಮಾರು ಹೋದ  ನಮ್ಮ ಶಿಕ್ಷಣದಲ್ಲೇ  ವಿದೇಶವನ್ನು  ಮಕ್ಕಳಿಗೆ ತೋರಿಸುವ ಪ್ರಯತ್ನದಲ್ಲಿ  ಗೆದ್ದವರು ಯಾರು? ಸೋತವರು ಯಾರು?
ಈಗ  ದೇಶದ ಸಾಲ ತೀರಿಸಲು‌ ವಿದೇಶಿವ್ಯವಹಾರಕ್ಕೆ ಕೈ ಜೋಡಿಸಿ  ನಮ್ಮವರನೇ  ಅವರ ಕೈ ಕೆಳಗೆ ದುಡಿಸಿದರೂ  ಪ್ರಗತಿ ಎನ್ನುವ ಭ್ರಮೆಯಲ್ಲಿ  ನಮ್ಮ ‌ಮೂಲದ  ಧರ್ಮ ಕರ್ಮ ಹಿಂದುಳಿದು  ಮಕ್ಕಳು ‌ಮೊಮ್ಮಕ್ಕಳವರೆಗೆ ಆಸ್ತಿ ಮಾಡಿದ್ದರೂ  ಅವರು‌ ಜೊತೆಗೆ ಇರಲಾಗದ ಪರಿಸ್ಥಿತಿ ಯಲ್ಲಿ  ದೇಶದಲ್ಲಿ ವೃದ್ದಾಶ್ರಮ ಅನಾಥರ ಶ್ರಮ  ಅಬಲಾಶ್ರಮ ಬಿಕ್ಷುಕಾಶ್ರಮಗಳು ತಲೆ ಎತ್ತಿದೆ. ಎಂದರೆ  ನಿಜವಾದ ಋಷಿಗಳ ಆಶ್ರಮದಿಂದ  ದೇಶಭಕ್ತಿ  ಇದ್ದ ಭಾರತ  ಇಂದಿನ ಪೀಳಿಗೆಗೆ ಸಾಲದ ಹೊರೆ ಏರಿಸಿ  ಪೋಷಕರನ್ನು ಆಶ್ರಮಕ್ಕೆ  ಸೇರಿಸಿ ವಿದೇಶದಲ್ಲಿ  ನೆಲೆಸುವಂತಾಗಿರಲು  ಕಾರಣವೇ  ಅನಾವಶ್ಯಕ  ಅಜ್ಞಾನದ ವಿಷಯವನ್ನು  ತಲೆಗೆ ತುಂಬಿದ ಶಿಕ್ಷಣಕ್ಕೆ ನೀಡಿದ ಸಹಕಾರ.

ಅತಿಯಾದ ಆಸ್ತಿಯನ್ನು  ನಮ್ಮವರಿಗೆ  ಬಿಟ್ಟು  ಋಣ ತೀರಿಸಬಹುದು. ಹಿಂದೂಗಳ ಆಸ್ತಿ ಅನ್ಯರ ವಶವಾದರೂ ಸರಿ  ನಮ್ಮವರಿಗೆ ಕೊಡೋದಿಲ್ಲ ಎನ್ನುವ ದ್ವೇಷ ಮರೆತರೆ  ಭಾರತದ ಶ್ರೀಮಂತಿಕೆ ನಮ್ಮ ಜ್ಞಾನದಲ್ಲಿದೆ. .ಎಷ್ಟು ಆಸ್ತಿ ಮಾಡಿದರೂ ಸಾಲವೇ ಅದು. ಅದರಿಂದ ಹೊರಬರದೆ ಜೀವಮ್ಮುಕ್ತಿ ಸಿಗದು ಇದು ಅಧ್ಯಾತ್ಮ ಸತ್ಯ.ಕೊನೆಪಕ್ಷ ತನ್ನ ಜೀವಕ್ಕೆ ಸಾಕಾದಷ್ಟು ಮಾಡಿಕೊಂಡು ಇತರರ ಜೀವನಕ್ಕೆ  ಸಮಸ್ಯೆಯಾಗದಿದ್ದರೆ ಉತ್ತಮ. ಎಷ್ಟೋ  ಹಿಂದೂಗಳು  ಆಸ್ತಿ ಇದ್ದರೂ ವಿದೇಶದಲ್ಲಿರುವರು. ದೇಶಭಕ್ತಿ ಇದ್ದರೆ  ಹಿಂದಿರುಗಬಹುದು. ಇಲ್ಲವಾದರೆ  ದೇಶಕ್ಕೆ ಆಸ್ತಿ  ಬರೆದುಕೊಡಬಹುದು. ಒಟ್ಟಿನಲ್ಲಿ ಅತಿಯಾದ ಅಜ್ಞಾನಕ್ಕೆ ಮದ್ದಿಲ್ಲ. 
ಇಷ್ಟಕ್ಕೂ  ನಾವು ಕಲಿತಿರುವ ವಿದ್ಯೆ  ದೇಶಕ್ಕೆ ಲಾಭ ತಂದಿತೆ ವಿದೇಶಕ್ಕೋ? ತಂತ್ರಜ್ಞಾನದ ಯುಗದಲ್ಲಿ ಮಾನವನನ್ನು  ಮಾನವನೇ ತಂತ್ರದಿಂದ ಆಳೋದು ಸಾಮಾನ್ಯ. ಆಳೋನು ಯಾರು? ಆಳು ಯಾರು? ಅರಸನೆಲ್ಲಿ? 
ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಜ್ಞಾನವೇ ಹೊರಗಿನವರದ್ದಾದರೆ ಆಳೋದು ಹೊರಗಿನವರೆ ಆಗುವರು.
ನಮ್ಮವರನ್ನೇ ದ್ವೇಷ ಮಾಡುತ್ತಾ ಅಂತರ ಬೆಳೆಸಿದ ಅನ್ಯರಿಗೆ  ಈಗ  ದೇಶ ಆಳೋದೆ  ಗುರಿ. ಇದನ್ನು ವಿರೋಧಿಸಿ ಹೊರಗೆ ಹೋರಾಟ‌ನಡೆಸುವವರೊಮ್ಮೆ  ತಮ್ಮೊಳಗೆ ಯಾರ ಜ್ಞಾನವಿದೆ ಸಾಲವಿದೆ‌ ಎಂದು ತಿಳಿದರೆ  ಹೋರಾಟದಿಂದ ಉಪಯೋಗವಿಲ್ಲ. 
ಹಿಂದೆ ಅಸಹಕಾರ ಚಳುವಳಿಯ ಹಿಂದಿನ ಅಧ್ಯಾತ್ಮ ಸತ್ಯ ಈಗ ನಾವರಿತು ನಡೆದಾಗಲೇ ಸಮಸ್ಯೆಗೆ ಪರಿಹಾರವಿದೆ.
ಅಂದರೆ  ನಾವೇ ಅಡಿಯಾಳಾಗಿ ಸಹಕಾರ ಕೊಟ್ಟು  ಅಧಿಕಾರ ಕೊಟ್ಟಿರುವಾಗ  ಅವರನ್ನು  ಕೆಳಗಿಳಿಸಲು  ಕಷ್ಟ.
ಋಣಭಾರ ಕಳೆಯಲು ನಮ್ಮ  ಧರ್ಮ ಕರ್ಮ ವು ಯೋಗದೆಡೆಗೆ  ಸಾಗಬೇಕು. ಹೀಗಾಗಿ ಸ್ವದೇಶಿ ಶಿಕ್ಷಣ ಧರ್ಮ  ಕರ್ಮ ವು  ಯೋಗದ ಮಾರ್ಗ ಹಿಡಿದು ತತ್ವದಿಂದ ಒಗ್ಗಟ್ಟು ಬೆಳೆಸಿಕೊಂಡು  ರಾಜಕೀಯದಿಂದ ‌ದೂರವಿದ್ದು ಸ್ವತಂತ್ರ ವಾಗಿ ದೇಶ ಸೇವೆ ಮಾಡುವವರಿಗೆ  ಸಹಕರಿಸಿದರೆ  ಅಥವಾ ನಾವೂ ಸ್ವತಂತ್ರವಾಗಿ  ನಿಸ್ವಾರ್ಥ ನಿರಹಂಕಾರ ದಿಂದ ಪರಮಾತ್ಮನ ಸೇವೆಯೆಂದರಿತು  ದೇಶ ಸೇವೆ ಮಾಡಿದರೆ  ಇರುವ ಅಲ್ಪ ಸ್ವಲ್ಪ ನೆಮ್ಮದಿ ಉಳಿಯುತ್ತದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾದರೆ ಕಷ್ಟ.
ಒಟ್ಟಿನಲ್ಲಿ ಇಲ್ಲಿ ಸಾಲ ಸಾಲವೇ. ಅದು ದೇಶವನ್ನು ಉಳಿಸುವುದೋ  ಉರಿಸುವುದೋ ಎನ್ನುವ ಜ್ಞಾನವಿದ್ದರೆ ಪರಕೀಯರ ಹಿಂದೆ ಹೋಗೋದನ್ನು ತಡೆಯಬಹುದು.
ಭಾರತೀಯರ ಸಮೃದ್ದವಾದ ಸುಜ್ಞಾನಕ್ಕೂ  ಅನ್ಯರ  ಸಮೃದ್ದವಾದ ವಿಜ್ಞಾನಕ್ಕೂ ನಡುವಿರುವ ಸಾಮಾನ್ಯ ಜ್ಞಾನದ ಬಳಕೆ ಸದ್ಬಳಕೆ ಆದರೆ ನಾವು ಮಾನವರಷ್ಟೆ. ದೇಶದ ಮಾನ ಉಳಿಸಲು  ನಮ್ಮ ಸನ್ಮಾನದಿಂದ  ದೂರವಿರಬೇಕು. ಸನ್ಮಾನ ಅಧ್ಯಾತ್ಮದ   ಪ್ರಕಾರ  ನಡೆದರೆ ಸರಿ. 

ಒಗ್ಗಟ್ಟಿನಿಂದ ತತ್ವ ಬಿಕ್ಕಟ್ಟಿನಿಂದ ತಂತ್ರ.‌ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ  ತಂತ್ರ ಪ್ರಯೋಗ  ನಡೆಯುವುದು ಸಹಜ.ಆದರೆ ಇದು ಯಾರ ಜೊತೆಗೆ ನಡೆಸಿದ್ದೇವೆನ್ನುವುದರ ಮೇಲೇ ನಿಂತಿದೆ ನಮ್ಮ ಸ್ವತಂತ್ರ.  
ಪರರೆಲ್ಲಾ ನಮ್ಮವರಾದರೆ ಸ್ವರ್ಗ, ನಮ್ಮವರೆ ಪರರಾದರೆ ನರಕ. ಈಗ ಹೇಗಿದೆ? ನಮ್ಮವರನ್ನೇ ಪರರಿಗೆ ಬಿಟ್ಟು ಪರರೂ  ಸೇರಿಕೊಂಡು  ಆಳಿದರೆ  ಸ್ವರ್ಗ ನರಕ ಯಾರಿಗೆ?

ದೊಡ್ಡಣ್ಣನ ಹಿಡಿತದಲ್ಲಿ  ದೇಶ ಸಿಲುಕಿದರೆ   ಕಾರಣರು ಯಾರು? ಭಾರತಾಂಬೆಯ  ಸುಜ್ಞಾನ  ವಿಜ್ಞಾನವನ್ನು ಮೀರಿಸಬಹುದು.ಆದರೆ  ಅದಕ್ಕೆ  ಮಕ್ಕಳಿಗೆ  ಸುಜ್ಞಾನ ದ ಶಿಕ್ಷಣವಿರಬೇಕಿತ್ತು. ಬದಲಾವಣೆ ಶಿಕ್ಷಣದಲ್ಲಿಯೇ ಆಗಬೇಕು.ಸಹಕಾರವೂ ಒಳಗಿನವರೆ ಕೊಡಬೇಕಿದೆ. ಹಣವನ್ನು ಹಂಚಿದಷ್ಟು ಸುಲಭ ವಿಲ್ಲ ಜ್ಞಾನ ಹಂಚುವುದು.
ಅದರಂತೆ ನಡೆಯುವುದು ಅಗತ್ಯವಿದೆ. 
ಯೋಗದಿಂದ ತಿಳಿಯುವುದಕ್ಕೂ ಭೋಗದಿಂದ ತಿಳಿಯುವುದಕ್ಕೂ ಅಂತರವಿದೆ.  ಯೋಗ ಒಳಗಿನ ಶಕ್ತಿ ಭೋಗ ಹೊರಗಿನ ಶಕ್ತಿ. 

ಸ್ವಂತ‌ಭೂಮಿ ವ್ಯವಹಾರ ಜ್ಞಾನ‌ಬಿಟ್ಟು ಪೋಷಕರಿಂದ ಜನ್ಮ ಭೂಮಿಯಿಂದ ದೂರವಾದರೂ ಹಿಂದಿರುಗಿ ಬರೋ ವರೆಗೆ ಆತ್ಮಕ್ಕೆ ತೃಪ್ತಿ ಸಿಗದು ಎನ್ನುವ ಸನಾತನ ಧರ್ಮ. ಇಂದಿಗೂ  ಅರ್ಥ ವಾಗದೆ ಹೊರಗೆ ತಳುಕುಬಳುಕು ಒಳಗೆ ಹುಳುಕಿನ ಮನಸ್ಥಿತಿ ಯವರಿಗೆ  ಈ ಕಡೆ ಅಧ್ಯಾತ್ಮ ಇನ್ನೊಂದು ಕಡೆ ಭೌತಿಕಾಸಕ್ತಿ. ತಕ್ಕಡಿ  ಎರಡೂ ಕಡೆ ಸಮನಾಗಿರದೆ  ಬಾಗುತ್ತಿದೆ. ಇನ್ನೊಂದು ಕಡೆ ಏಳುವವರೆ ಅಧಿಕಾರ ನಡೆಸುತ್ತಿದ್ದಾರೆಂದರೆ  ಅತಿಯಾದ ಸಾಲವೇ ಭಾರ ತಡೆಯಲಾಗದೆ  ಶೂಲವಾಗಿದೆ. ಪರಮಸತ್ಯ ಧರ್ಮಕ್ಕೆ ತಲೆಬಾಗದೆ ಅಸತ್ಯ ಅಧರ್ಮಕ್ಕೆ ತಲೆಬಾಗಿದರೆ  ತಲೆದಂಡ.

No comments:

Post a Comment