ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Tuesday, June 10, 2025

ರಾಜಯೋಗ ತನ್ನ ತಾನು ಆಳಿಕೊಳ್ಳುವ ಅರಿತು ನಡೆಯುವ ಯೋಗ

ರಾಜಯೋಗವೆಂದರೆ ತನ್ನ ತಾನರಿತು ತನ್ನ ತಾನು ಆಳಿಕೊಳ್ಳುವುದಾಗಿತ್ತು.ತನ್ನ ಭುಜಬಲದಿಂದ ಕ್ಷಾತ್ರಧರ್ಮ  ಹಾಗು ಸತ್ಯದ ಮಾರ್ಗದಲ್ಲಿ ನಡೆದಾಗಲೇ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಕೃತಿ ಪುರುಷರ ಸಮಾನತೆಯನರಿತು ನಡೆದವರು ಯೋಗಿಗಳಾದರು. ಪ್ರಕೃತಿಯನ್ನು ತನ್ನಾಧೀನದಲ್ಲಿಟ್ಟುಕೊಳ್ಳಲು ಮಾನವರು ಮನಸ್ಸಿಗೆ ಬಂದಂತೆ  ಪ್ರಕೃತಿಯನ್ನು  ಬಳಸಿ ತಾತ್ಕಾಲಿಕ ವಾಗಿ ಪ್ರಕೃತಿಯಿಂದ ಪಡುವ ಸುಖದ ಹಿಂದೆ ಸಾಕಷ್ಟು ದು:ಖವೂ ಇರುವುದೆನ್ನುವ ಜ್ಞಾನವಿದ್ದರೆ ಇತಿಮಿತಿಯಲ್ಲಿ ಜೀವನ ನಡೆಸಬಹುದು. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ ಮಾನವನಲ್ಲಿದ್ದರೆ  ನಿಜವಾದ  ಜೀವನದ ರಹಸ್ಯವನರಿತು ತನ್ನ ಹಿಂದಿನ ಋಣ ತೀರಿಸುವ ಕರ್ಮ ದಲ್ಲಿ ಸ್ವತಂತ್ರ ವಾಗಿ ನಡೆಯುವ ಆತ್ಮಜ್ಞಾನದೆಡೆಗೆ ಸಾಗಬಹುದು.
ಯಾವಾಗ ಪ್ರಕೃತಿ ಮತ್ತು ಸ್ತ್ರೀ ಯ ದುರ್ಭಳಕೆ ಆಗುವುದೋ ಋಣ ಸಂದಾಯವಾಗದೆ ಮತ್ತೆ ಜನನ ಮರಣದ ಸರಪಳಿಗೆ ಸಿಲುಕುತ್ತಾ ಜೀವಾತ್ಮನು ಸಾಗುವನು.
ಭೂ ಋಣ ತೀರಿಸಲು ಭೂ ಸೇವೆ ಅಗತ್ಯ. ತಾಯಿ ಸೇವೆ ಅಗತ್ಯ. ತಾಯಿಯನ್ನೇ ಆಳಿ ಅಳಿಸಿದರೆ  ನಾರಿ ಮಾರಿಯಾಗುವುದು ಸಹಜ. 
ಮಾನವನಿಗೆ  ಮಾನವನೇ ಶತ್ರು ಎಂದಂತೆ ಅವನ ಅಜ್ಞಾನದ ಅವನ ಅಹಂಕಾರ ಸ್ವಾರ್ಥ ವು ಮಿತಿಮೀರಿದಾಗ ತನ್ನ ತಾನರಿಯದೆ  ಹೋಗುವನು. ಒಟ್ಟಿನಲ್ಲಿ ಮಹಾತ್ಮರು ತಮ್ಮ ಆತ್ಮಾನುಸಾರ ನಡೆಯುವಾಗ ಪ್ರಕೃತಿ ಪುರುಷರ ಸಹಕಾರ ಅಗತ್ಯವಾಗಿದೆ. ಜೀವ ಇಲ್ಲದೆ ಜೀವನವಿಲ್ಲ. ಜೀವನದಲ್ಲಿ ಜ್ಞಾನ ಸದ್ಬಳಕೆಯಾದರೆ ಸುಗಮ.  ಇಲ್ಲವಾದರೆ ಅಜ್ಞಾನದಲ್ಲಿ ಜೀವ ನಿರ್ಗಮ.
ಜಗತ್ತನ್ನು ಕಾಯುವ ಜಗಧೀಶ್ವರನ ಜೊತೆಗೆ ಜಗಧೀಶ್ವರಿಯ ಸಹಕಾರವಿರೋದನ್ನು  ಮಾನವ ಪ್ರತಿಕ್ಷಣ ಅರ್ಥ ಮಾಡಿಕೊಳ್ಳಲು ಕಷ್ಟ. ಕಾರಣ  ಭೌತಿಕಾಸಕ್ತಿ ಮೋಹ ಮಾಯೆಯ ವಶದಲ್ಲಿರುವ ಮನಸ್ಸಿಗೆ  ಹಿಡಿತ ಸಿಗೋದು ಯೋಗದಿಂದ ಮಾತ್ರ ಸಾಧ್ಯ. ಭೋಗ ಹತ್ತಿರವಿರುವಾಗ ಯೋಗದೆಡೆಗೆ ಮನಸ್ಸು ಹೋಗದ ಕಾರಣದಿಂದ ಸಂನ್ಯಾಸಿಗಳಾದವರು  ಸಂಸಾರದಿಂದ ದೂರವಿದ್ದು ಬ್ರಹ್ಮಸತ್ಯವನರಿತರು.
ಇಡೀ ಬ್ರಹ್ಮಾಂಡ ನಡೆದಿರೋದೇ ಬ್ರಹ್ಮಸತ್ಯದಲ್ಲಿ. ಸೃಷ್ಟಿ ಗೆ ಕಾರಣವೇ ಭೂ ತಾಯಿ.ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿರುವ ಜೀವಾತ್ಮರಿಗೆ  ಮೇಲಿರುವ  ಮೇರುಸತ್ಯವು ಯೋಗದಿಂದ ಸಿಗುವುದರಿಂದ  ಪರಮಾತ್ಮನಿಗೆ ಪರಮಸತ್ಯ ಧರ್ಮ ಕ್ಕೆ ಶರಣಾಗಿ ದಾಸರಾಗಿ ಮುಂದೆ ನಡೆದವರಿಗೆ  ಯಾವುದೇ  ಅಂತರ  ಬೇಧ ಕಾಣದೆ  ಜೀವನ್ಮುಕ್ತರಾಗಿದ್ದಾರೆ.  ಕಲಿಯುಗದ ಕಲಿಕೆ ಹೊರಮುಖವಾಗಿರುವುದರಿಂದ  ಒಳಮುಖದಲ್ಲಿರುವ ಮೂಲ ಸತ್ಯ ಕಣ್ಣಿಗೆ ಕಾಣದು.ಹೀಗಾಗಿ ಅಧ್ಯಾತ್ಮ ಸಂಶೋಧನೆಗೆ  ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಲು ಆತ್ಮಜ್ಞಾನವೇ ಮೂಲಾಧಾರ. ಇದು ನಮ್ಮ ಭಾರತೀಯ ಶಿಕ್ಷಣವಾಗಿದೆ. ರಾಜಯೋಗದ ಯೋಗದಿಂದ  ಪ್ರಕೃತಿಯ ರಹಸ್ಯವರಿಯಬಹುದು.ಇದನ್ನು ವಿವೇಕಾನಂದರು ಶಿಕ್ಷಣದ ಮೂಲಕ  ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ  ಭಾರತದೇಶದ ಪವಿತ್ರತೆ ತಿಳಿಸಿದ್ದರು. ಇದಕ್ಕೆ ಶಾಂತಿಯುತ ಮನಸ್ಸು ಅಗತ್ಯ.ಶಾಂತಿ ಒಳಗಿನಿಂದ ಬೆಳೆಸಿಕೊಳ್ಳಲು ಧ್ಯಾನಯೋಗ  ಅಗತ್ಯ. ಧ್ಯಾನ ಪರಮಾತ್ಮನೆಡೆಗೆ ಹೋಗಲು  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯೇ ಕರ್ಮ ಯೋಗ. ಕಾಯಕವೇ ಕೈಲಾಸವೆಂದರು,ಜನರ ಸೇವೆಯೇ ಜನಾರ್ಧನನನ ಸೇವೆ ಎಂದರು.ದೇಶ ಸೇವೆಯೇ ಈಶ ಸೇವೆ ಎಂದರು. ಇದು ಯೋಗಿಗಳಿಂದ ಸಾಧ್ಯವೆಂದರು.
ಸ್ಥಿತಪ್ರಜ್ಞಾವಂತರಾಗೋದಕ್ಕೆ ಸ್ಥಿತಿಗೆ ಕಾರಣ ತಿಳಿಯುವುದು ಅಗತ್ಯವೆಂದರು.
ಅಂದಿನ‌ಮಹಾಭಾರತ ಯುದ್ದವಾಗಲಿ ರಾಮಾಯಣವಾಗಲಿ  ಸ್ಥಿತಿಯನ್ನು  ಸರಿಪಡಿಸಲು ಸ್ವಯಂ ಪರಮಾತ್ಮನೇ  ಭೂಮಿಯಲ್ಲಿ ಅವತರಿಸಿ ನಡೆಸಿರುವ ಲಯ ಕಾರ್ಯ. ಪ್ರತಿಯೊಂದು ಸಮಸ್ಯೆಯ ಮೂಲವೇ ಮನಸ್ಸು.ಆ ಮನಸ್ಸನ್ನು  ಹಿಡಿದಿಡುವುದೇ  ಯೋಗ. ಆ ಉಸಿರೇ  ಪ್ರಕೃತಿಯ ಕೊಡುಗೆ. ಇದಿಲ್ಲದೆ ಜೀವವಿಲ್ಲ.
ಜೀವವಿಲ್ಲದೆ ಜೀವನವಿಲ್ಲ. ಜೀವಿಗಳ ವನ...ಪ್ರತಿಯೊಂದು ಜೀವಿಯೂ ಪ್ರಕೃತಿಯ ಅಧೀನವೇ ಆದರೆ ಪ್ರಕೃತಿ ಪರಮಾತ್ಮನ ಅಧೀನ. ಪುರುಷನ ಅಧೀನ.ಇಲ್ಲಿ ಪುರುಷ ಎಂದರೆ ಆತ್ಮನಾಗಿದ್ದಾನೆ. ಇದಕ್ಕೆ ಯಾವುದೇ ಜಾತಿ ಧರ್ಮ ಪಕ್ಷ, ಲಿಂಗ ಬೇಧವಿಲ್ಲ. ಪ್ರತಿಯೊಬ್ಬರೂ ಪರಮಾತ್ಮನ  ಶಕ್ತಿಯ ಒಂದು ಬಿಂದುಗಳಾದರೂ ಯಾರು ಪರಮಾತ್ಮನ ಅರ್ಥ ಮಾಡಿಕೊಳ್ಳುವರೋ  ಅವರು ಅವನನ್ನೇ ಸೇರಿ ಮುಕ್ತರಾಗುವರೆಂದಿರುವರು.
ಪುರುಷೋತ್ತಮಯೋಗದಲ್ಲಿ ಎಲ್ಲಾ ಜೀವಾತ್ಮರಿಗೂ ಮೀರಿದ ಉತ್ತಮ ಪುರುಷನೇ  ನಾನು ಎಂದು ಶ್ರೀ ಕೃಷ್ಣ ತಿಳಿಸಿರುವುದರ ಹಿಂದೆ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲವೂ ನನ್ನೊಳಗೇ ಇದೆ ಎಂದರ್ಥ ವಾಗುತ್ತದೆ.
ಭಿನ್ನತೆಯಿಂದ  ಅಂತರ ಬೆಳೆಯುತ್ತ  ದ್ವೇಷ ವೂ ಬೆಳೆದು ಕೊನೆಯಲ್ಲಿ  ಅತಂತ್ರಸ್ಥಿತಿಗೆ ಆತ್ಮ ತಲುಪುತ್ತದೆ .ಇದನ್ನು ಸರಿಪಡಿಸಲು  ಮಾನವನಿಗೆ ಕಷ್ಟ. ಹೀಗಾಗಿ ಮಹಾತ್ಮರು ಧರೆಗಿಳಿದು ಲೋಕಕಲ್ಯಾಣಕ್ಕಾಗಿ  ತಮ್ಮ ಜೀವನ ನಡೆಸುವರು. ಇಂದಿಗೂ  ಎಷ್ಟೋ ಶ್ರಮ ಜೀವಿಗಳು ತಮ್ಮ ಸ್ವತಂತ್ರ ಜ್ಞಾನದಿಂದ  ಪರಮಾತ್ಮನ ಸೇವೆಯಲ್ಲಿರುವರು. ಯಾವಾಗ ಅವರನ್ನು ಬಡವರೆಂದು ಹಣ ಕೊಟ್ಟು ಸಾಲಕ್ಕೆ ಎಳೆಯುವರೋ  ಅದೇ ದೊಡ್ಡ ಸಮಸ್ಯೆ ಯಾಗುವುದು.
ಒಟ್ಟಿನಲ್ಲಿ ಇಲ್ಲಿ ಯಾರನ್ನೂ ಯಾರೂ ಆಳಲಾಗದು.ಪ್ರಕೃತಿಯನ್ನು ಆಳಲು ಹೋಗಿ ಪ್ರಕೃತಿ ವಿಕೋಪ ದಲ್ಲಿ ಜೀವ ಹೋಗಿದೆ. ಇನ್ನು ಎಲ್ಲದರಿಂದ ದೂರವಿದ್ದು  ಎಲ್ಲರನ್ನೂ ನಡೆಸುವ ಪರಮಾತ್ಮನ ಅರಿಯುವುದಕ್ಕೆ  ಕಷ್ಟಪಟ್ಟು ಅಂತರಾತ್ಮನೆಡೆಗೆ ಸಾಗಬೇಕಿದೆ.ಹೊರಗೆ ಬಂದಷ್ಟೂ  ಅಸತ್ಯ ಅನ್ಯಾಯ ಅಧರ್ಮ ವೇ ಕಣ್ಣಿಗೆ ಕಾಣೋದು.
ಅವರವರ ಧರ್ಮ ಕರ್ಮ ದಲ್ಲಿ ಸತ್ಯವಿದ್ದರೆ ಅದೇ ಸೇವೆ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು.ದೇವಾಸುರರ ನಡುವಿರುವ ಮಾನವನಲ್ಲಿ  ಎರಡೂ ಶಕ್ತಿ ಇರುತ್ತದೆ. ಜ್ಞಾನದಿಂದ ವಿಜ್ಞಾನ ಬೆಳೆಯುತ್ತದೆ.ವಿಜ್ಞಾನದ ಒಳಗೇ ಜ್ಞಾನ ಇರುತ್ತದೆ. ಜ್ಞಾನಕ್ಕೆ ಒಳಗೆ ಹುಡುಕಿಕೊಂಡು ಸದ್ಬಳಕೆಯಾದರೆ  ಅಧ್ಯಾತ್ಮ ವಿಜ್ಞಾನ ವಾಗುತ್ತದೆ.  ಮೊದಲೇ ಹೊರಗಿನ ಜ್ಞಾನಕ್ಕೆ ಶರಣಾದರೆ ಒಳಗೇ ಇದ್ದ ಸುಜ್ಞಾನದ ಗತಿ?
ಎರಡೂ ಒಂದೇ ನಾಣ್ಯದ ಎರಡು ಮುಖ.ವ್ಯವಹಾರಕ್ಕೆ ನಾಣ್ಯ ಬಳಸೋದು ಸುಲಭ.ಧರ್ಮದ ಪ್ರಕಾರ ಬಳಸೋದು ಕಷ್ಟ. ಋಣ ಸಂಧಾಯವಾಗದೆ ಜ್ಞಾನ ಬರದು. ಸಾಲ ತೀರದೆ ಜೀವಕ್ಕೆ ಮುಕ್ತಿ ಸಿಗದು. ಹಾಗಾಗಿ ಇತಿಮಿತಿಯಲ್ಲಿ ಹಣಗಳಿಸಿ ಧರ್ಮ ದಾನದ ಮೂಲಕ  ಸದ್ಬಳಕೆ ಮಾಡಿಕೊಳ್ಳಲು ಮಾನವನಿಗೆ  ಸ್ವತಂತ್ರ ಜ್ಞಾನ  ಅಗತ್ಯ.ಎಲ್ಲರಲ್ಲಿಯೂ ಅಡಗಿರುವ ಬ್ರಹ್ಮನ ಅರಿಯುವುದಕ್ಕೆ ಮೂರನೇ ಕಣ್ಣಿನ ಅಗತ್ಯವಿದೆ. ಶಿವನ ಮೂರನೇ ಕಣ್ಣು  ತೆರೆದಾಗ ಲಯ ಆಗುತ್ತದೆ. ಲಯದ ನಂತರ ಮತ್ತದೇ ಸೃಷ್ಟಿ. ಸೃಷ್ಟಿ  ಉತ್ತಮವಾದ ಜ್ಞಾನದಿಂದ ಆಗಲು ಉತ್ತಮ ಶಿಕ್ಷಣ ಅಗತ್ಯವಿದೆ. ಒಟ್ಟಿನಲ್ಲಿ  ನಮ್ಮ ಪ್ರಯತ್ನ ಒಳಗಿನ ಅರಿವನ್ನು ‌ಬೆಳೆಸುತ್ತದೆ. ಅದು ನಮಗೆ ಅನುಭವಜ್ಞಾನ‌ನೀಡುತ್ತಾ ಒಳಗೇ ಆವರಿಸಿರುವ ಎಲ್ಲಾ ದೇವತಾಶಕ್ತಿಯೆಡೆಗೆ  ನಿಧಾನವಾಗಿ ಸಾಗಿದವರಿಗೆ ಮೂಲದ ಪರಮಾತ್ಮ ನ ದರ್ಶನ ವಾಗಿದೆ.ನಿರಾಕಾರದಲ್ಲಿರುವ  ಪರಮಾತ್ಮನ ಕಾಣೋದು  ಎಂದರು ಅವನಲ್ಲಿ ಲೀನವಾಗೋದು ಎಂದರ್ಥ. ಎಲ್ಲರೂ ಅವನೊಳಗೇ ಇದ್ದರೂ ಅವನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಹಾಗೆಯೇ ಒಂದು ದೇಶದೊಳಗೆ ಎಲ್ಲಾ ಇದ್ದರೂ ದೇಶಭಕ್ತಿ ಎಲ್ಲರಲ್ಲಿಯೂ ಇರದ ಕಾರಣದಿಂದ  ಅಸುರಿ ಶಕ್ತಿ ದೇಶವನ್ನು ದುರ್ಭಳಕೆ ಮಾಡಿಕೊಂಡು ಆಳುತ್ತದೆ. ನಮ್ಮ ಸಹಕಾರವಿಲ್ಲದೆ ಏನೂ ನಡೆಯದು. ಯಾವಾಗ  ಅಧರ್ಮ ಅಸತ್ಯ ಅನ್ಯಾಯ ಭ್ರಷ್ಟಾಚಾರ ಕ್ಕೆ ಸಹಕಾರ ಸಿಗುವುದೋ ಅ ಅದೇ ಬೆಳೆದು ನಿಲ್ಲುವುದಷ್ಟೆ. ಇದಕ್ಕೆ ಜೀವಾತ್ಮರೇ ಕಾರಣವಾದಾಗ ಅದರ ಫಲವೂ ಜೀವವೇ ಅನುಭವಿಸಬೇಕೆನ್ನುವುದು ಕರ್ಮ ಸಿದ್ದಾಂತ.
ಸಿದ್ದರು ಕಂಡುಹಿಡಿದದ್ದನ್ನು ಹರಡಿ ಪ್ರಸಿದ್ದರಾಗಬಹುದು.
ವಾಸ್ತವದಲ್ಲಿ ನಾವೆಷ್ಟು ಸತ್ಯ ತಿಳಿಯಲು ಸಿದ್ದರಿದ್ದೇವೆನ್ನುವುದೇ ಮುಖ್ಯವಾಗಿರುತ್ತದೆ.  ತಿಳಿದಷ್ಟು ಸುಲಭವಿಲ್ಲ  ನಡೆಯೋದು. ನಡೆಯುವಾಗ ಎಡವಬಹುದು ಬೀಳಬಹುದು.ಅದನ್ನು ನೋಡಿ ನಗೋರಿಗೇನೂ ಕಡಿಮೆಯಿರದು. ಆದರೆ  ಎದ್ದು ಬಿದ್ದು ಎಡವಿದ ಮೇಲೇ ಸತ್ಯದ ಅರಿವಾಗೋದು. ಒಟ್ಟಿನಲ್ಲಿ  ಕಷ್ಟ ಎಲ್ಲರಿಗೂ ಇದೆ.
ನಮ್ಮ ದಾರಿ ಸರಿಯಿದೆಯೆ ಎನ್ನುವ ಜ್ಞಾನ ಬೇರೆ ಬೇರೆ ಆಗಿದೆ.  ದಾರಿ ಬೇರೆಯಾದರೂ ಸೇರೋದು ಒಂದೇ ಕಡೆ.
ಇಡೀ ವಿಶ್ವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು  ಯೋಗದಿಂದ ಸಾಧ್ಯ. ಆದರೆ ನೋಡಲಾಗದು ಕಾರಣ ಇದು ನಿರಾಕಾರವಾಗಿದೆ. ಸಾಕಾರದಿಂದ ‌ನಿರಾಕಾರದೆಡೆಗೆ ನಡೆದರೆ ಅದ್ವೈತ. ನಿರಾಕಾರದಿಂದ ಸಾಕಾರಕ್ಕೆ ಬಂದರೆ ದ್ವೈತ.
ಎರಡೂ ಒಂದೇ ನಾಣ್ಯದ ಎರಡು ಮುಖ. ಪರಮಾತ್ಮ ಸಾಕಾರರೂಪಿಯೂ ನಿರಾಕಾರ ರೂಪಿಯೂ ಆಗಿ ಎಲ್ಲರಲ್ಲಿ ಅಡಗಿರುವುದು  ಸತ್ಯವೆಂದಾಗ ನಮ್ಮ ಕಣ್ಣಿಗೆ ಕಾಣೋದಿಲ್ಲ.

No comments:

Post a Comment