ಆತ್ಮನಿರ್ಭರ ಭಾರತದ ಕನಸಿನಲ್ಲಿ ವೈಜ್ಞಾನಿಕ ಸಂಶೋಧನೆಗಳ ಮೂಲಕ ಭಾರತವನ್ನು ಸ್ಮಾರ್ಟ್ ಮಾಡಲು ವಿದೇಶಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಆದರೆ ಇದರೊಂದಿಗೆ ಕೈ ಜೋಡಿಸಿರುವ ವಿದೇಶಿಗಳ ಧರ್ಮ ಸಂಸ್ಕೃತಿ ಭಾಷೆ ವ್ಯವಹಾರಿಕ ಜ್ಞಾನವು ಶಿಕ್ಷಣಕ್ಷೇತ್ರವನ್ನು ಆಳೋದನ್ನು ಯಾರು ತಡೆಯಬಹುದು? ಹೊರಗೆ ತಳುಕುಬಳುಕಿನಜೀವನ ಒಳಗಿನ ಹುಳುಕನ್ನು ಸರಿಪಡಿಸಬಹುದೆ?
ಸ್ವಚ್ಚ ಭಾರತಕ್ಕೆ ಹೊರಗೆ ಕಸಗುಡಿಸುವುದಕ್ಕೆ ಕೋಟ್ಯಂತರ ಹಣ ಬಳಸಿದರೂ ಮನುಷ್ಯನೊಳಗಿರುವ ಅಶುದ್ದತೆಯ ವಿಷಯಾಸಕ್ತಿಯನ್ನು ದೂರ ಮಾಡುವ ಸಂಸ್ಕಾರದ ಶಿಕ್ಷಣ ಕೊಡುವುದಕ್ಕೆ ಹಣ ಬೇಕೆ ಸತ್ಯಜ್ಞಾನವೇ?
ಯಾರೋ ಹೊರಗಿನಿಂದ ಬಂದವರಿಗೆ ಮಾಡುವ ಅತಿಥಿ ಸತ್ಕಾರ ನಮ್ಮವರನ್ನೇ ದೂರ ಮಾಡದಿದ್ದರೆ ಸಾಕು.
ಒಳಗಿದ್ದ ಗೃಹಿಣಿಯರಿಗೆ ಕೊಡದ ಗೌರವ ಹೊರಗಿನ ಮಹಿಳೆಗೆನೀಡಿದರೆ ಮನೆಯಿಂದ ಹೊರಬರುವ ಮಹಿಳೆಯರು ಸ್ವತಂತ್ರವಾಗಿ ದೂರವಿರುವರು.ಆದರೆ ಇದು ಭ್ರಮೆಯಷ್ಟೆ. ಎಷ್ಟು ಹೊರಬಂದರೂ ಒಳಗಿರುವ ಸತ್ಯ ಸತ್ವ ತತ್ವಕ್ಕೆ ವಿರುದ್ದ ನಿಂತರೆ ತಂತ್ರದಡಿ ಜೀವಅತಂತ್ರಸ್ಥಿತಿಗೆ ತಲುಪಿದಾಗ ಯಾರೂ ಇರೋದಿಲ್ಲ. ಒಟ್ಟಿನಲ್ಲಿ ವ್ಯವಹಾರ ಇರಲಿ ಅದರೊಳಗೆ ಧರ್ಮ ವಿರಲಿ. ನಮ್ಮತನ ನಮ್ಮವರನ್ನೇಬಿಟ್ಟು ಹೊರಗಿನವರೊಂದಿಗೆ ಸಂಬಂಧ ಬೆಳೆಸಿದರೆ ಅಂತರವೇ ಹೆಚ್ಚಾಗಿ ಅಂತರದಲ್ಲಿ ಅವಾಂತರ ಆಗೋದು ಸಹಜ.
ಬದಲಾವಣೆ ಜಗದನಿಯಮ ಎಂದಂತೆ ಭೂಮಿ ತಿರುಗೋದನ್ನು ತಡೆಯಲಾಗದು.ಮೇಲಿದ್ದವರು ಕೆಳಗಿರುವರು.ಕೆಳಗಿದ್ದವರು ಮೇಲಿರುವರು. ಹಾಗಾದರೆ ಯಾರು ಮೇಲು ಕೀಳು? ಪ್ರತಿಯೊಂದು ಜನ್ಮದಲ್ಲಿ ಮಾಡಿದ ಋಣ ಅಥವಾ ಸಾಲ ತೀರಿಸಲು ಭೂಮಿ ಒಂದು ಮಾಧ್ಯಮವಷ್ಟೆ.
ಇಲ್ಲಿ ಎಲ್ಲಾ ಜೀವಾತ್ಮರೂ ಪರಮಾತ್ಮನ ಅಧೀನರೆ. ನಮ್ಮ ಜನ್ಮ ಎಲ್ಲಿ ಆಗಿದೆಯೋ ಅದರ ಮೂಲ ಧರ್ಮ ಕರ್ಮ ಅರಿತು ಸಾಲ ತೀರಿಸುವ ಸೇವೆಯಲ್ಲಿ ಮಾನವ ತೊಡಗಿಸಿಕೊಂಡು ಮನೆಲಕ್ಮಿಯರನ್ನು ಗೌರವಿಸಿ ಸ್ತ್ರೀ ಋಣ ತಾಯಿ ಋಣ ಭೂಮಿ ಋಣ ತೀರಿಸಲು ಸುಜ್ಞಾನ ಅಗತ್ಯವಿದೆ. ವಿಜ್ಞಾನ ಭೌತಿಕದಲ್ಲಿ ಸಾಕಷ್ಟು ಮುಂದೆ ನಡೆದರೂ ಅಧ್ಯಾತ್ಮ ಜ್ಞಾನದ ಕೊರತೆಯಿಂದ ಈಗಲೂ ಹೊರಗಿನವರ ದಾಸರಾಗಿ ಹಣ ಮಾಡೋದೇ ಸರ್ವಸ್ವ ಮಾಡಿಕೊಂಡರೆ ಅಧೋಗತಿ.
ಕಳ್ಳ ಕಳ್ಳತನ ಮಾಡಿದರೆ ವೃತ್ತಿ ಧರ್ಮ ವಾಗುತ್ತದೆ.
ಅದೇ ಪೋಲಿಸ್ ಕಳ್ಳತನಕ್ಕೆ ಸಹಕರಿಸಿ ಹಣ ಮಾಡಿದರೆ ಅಧರ್ಮಕ್ಕೆ ತಕ್ಕಂತೆ ಫಲ.ಹಾಗೆ ಶಿಕ್ಷಕರು ಗುರು ಹಿರಿಯರು
ತಮ್ಮ ತಮ್ಮ ಋಣಭಾರವನ್ನು ತೀರಿಸಿಕೊಳ್ಳಲು ಸ್ವಧರ್ಮ ಸತ್ಕರ್ಮ ಸುಜ್ಞಾನದ ಶಿಕ್ಷಣ ನೀಡುವುದೇ ಆಗಿತ್ತು. ಇದು ದೇಶದೊಳಗೆ ನಡೆಸೋ ಬದಲು ವಿದೇಶದೊಳಗೆ ಹೋಗಿ ಹಣಮಾಡಿದರೆ ಭಾರತೀಯರಾಗುವರೆ? ಒಟ್ಟಿನಲ್ಲಿ ಜೀವನ ನಡೆಸಲು ಹಣ ಬೇಕು.ಅದಕ್ಕೆ ಮೊದಲು ಜೀವಾತ್ಮನ ಋಣ ತೀರಿಸುವ ಸತ್ಯಜ್ಞಾನ ಅಗತ್ಯವಿದೆ.ಇದನ್ನು ಅಧ್ಯಾತ್ಮ ಸಂಶೋಧನೆಯಿಂದ ಮಾಡಬೇಕಿದೆ. ಅಧ್ಯಾತ್ಮ ಕಣ್ಣಿಗೆ ಕಾಣದು.ಅರಿವಿಗೆ ಬರದೆ ಸತ್ಯ ಅರ್ಥ ವಾಗದು. ಅರಿವೇ ಹೊರಗಿನದ್ದಾದರೆ ಸತ್ಯವೂ ಹೊರಗಷ್ಟೆ ಕಾಣೋದು.ಹೊರಗಿನ ಸತ್ಯ ಅರ್ಧ ಸತ್ಯವಾಗಿ ಅತಂತ್ರಗೊಳಿಸಿದರೆ ಆಳೋದು ಹೊರಗಿನವರೆ ಆಗಿರುವರು.
ಇಲ್ಲಿ ರಾಜಯೋಗದ ಶಿಕ್ಷಣದಲ್ಲಿ ಆತ್ಮನಿರ್ಭರ ಆಗಬಹುದು.
ರಾಜಕೀಯಕ್ಕೆ ಇಳಿದಷ್ಟೂ ಆತ್ಮದುರ್ಭಲವೇ. ಪ್ರಜೆಗಳ ಜ್ಞಾನಕ್ಕೆ ತಕ್ಕಂತೆ ಪ್ರಜಾಪ್ರಭುತ್ವ. ಪ್ರಜೆಗಳ ಸಹಕಾರಕ್ಕೆ ತಕ್ಕಂತೆ ಸರ್ಕಾರ. ಪೋಷಕರಂತೆ ಮಕ್ಕಳ ಭವಿಷ್ಯ ನಿರ್ಧಾರ. ಗುರುವಿನಂತೆ ಶಿಷ್ಯ. ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ.
ನಮ್ಮ ಸಹಕಾರವಿಲ್ಲದೆ ಏನೂನಡೆಯುತ್ತಿಲ್ಲ. ಹಾಗಾದರೆ ನಮ್ಮ ಸಹಕಾರ ಸತ್ಯದಲ್ಲಿದೆಯೆ? ಸತ್ಯವೇ ದೇವರಾದಾಗ ಸತ್ಯವಿಲ್ಲದೆ ದೇವರನ್ನು ಕಾಣಬಹುದೆ? ಕಾಣದ ದೇವರಿಗೆ ದೊಡ್ಡ ನಮಸ್ಕಾರ. ಮಾಡಬಹುದು.ಕಾಣುವ ದೇವರಿಗೆ ನಮಸ್ಕಾರ ಯಾವ ಕಡೆಗೆನಡೆದಿದೆ? ಒಳಗಿದ್ದ ತಂದೆತಾಯಿ ಸಂಬಂಧ ಗಳು ವ್ಯವಹಾರಕ್ಕೆ ಇಳಿದರೆ ಮನೆ ಮನಸ್ಸು ಖಾಲಿಸ್ಥಾನವಾಗುತ್ತದೆ. ಇದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ತುಂಬು ಹೃದಯ,ತುಂಬು ಮನಸ್ಸು,ತುಂಬು ಕುಟುಂಬ ತುಂಬಿದಕೊಡ ಯಾವತ್ತೂ ತುಳುಕುವುದಿಲ್ಲ. ದೇಶವನ್ನು ಹೇಗೆ ಯಾವುದರಿಂದಯಾರನ್ನು ತುಂಬಿಸಿಕೊಂಡು ನಡೆಸಿರೋದು? ವಾಸ್ತವದಲ್ಲಿ ನಿಂತರೆ ನಮ್ಮ ನೆಲ ಜಲದ ಋಣ ತೀರಿಸುತ್ತಿದ್ದೇವೆಯೆ? ಅಥವಾ ಪರರ ಋಣ ಮೈ ಮನೆಯೊಳಗೆ ಸೇರಿಸಿ ಹೊರಗೆ ನಡೆದಿರುವೆವೋ ? ಇಲ್ಲಿ ಯಾರ ಸಾಲವನ್ನು ಯಾರೂ ತೀರಿಸಲಾಗದು. ಋಣ ತೀರಿಸಲು ನಮ್ಮ ಸ್ವತಂತ್ರ ಜ್ಞಾನ ಸದ್ಬಳಕೆ ಮಾಡಬೇಕಿತ್ತು.
ಕಲಿಕೆಯ ದಾರಿ ತಪ್ಪಿದಂತೆ ವ್ಯವಹಾರದಲ್ಲೂ ದಾರಿ ತಪ್ಪುತ್ತದೆ. ಆದರೆ ಮೂಲ ತಿಳಿದು ಹಿಂದಕ್ಕೆ ಬರೋದು ಹಿಂದೂ ಸನಾತನದ ಗುರಿಯಾಗಿದೆ. ಮುಂದೆ ಹೋದಷ್ಟೂ ಅಂತರದಲ್ಲಿ ಮಧ್ಯವರ್ತಿಗಳು ಬೆಳೆಯುವರಷ್ಟೆ .ಹಿಂದೆ ಬರುವ ಮಕ್ಕಳ ಆಧ್ಯಾತ್ಮಿಕ ಪ್ರಗತಿಯಬಗ್ಗೆ ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ವ್ಯವಹಾರಕ್ಕೆ ಇಳಿದಾಗ ಹಣವೇ ಸರ್ವಸ್ವ ವಾಗುತ್ತಾ ಜ್ಞಾನ ಹಿಂದುಳಿದಾಗಲೇ ಹೊರಗಿನವರ ವಶವಾಗೋದು ಜೀವನ. ಇದು ದೇಶಕ್ಕೂ ಅನ್ವಯಿಸುತ್ತದೆ. ಏನಂತೀರ.
ಭಾರತ ಬಿಟ್ಟು ತೊಲಗಿ, ಅಸಹಕಾರ ಚಳುವಳಿ,ಉಪ್ಪಿನ ಸತ್ಯಾಗ್ರಹ...ಇವೆಲ್ಲದರ ಹಿಂದೆ ಅಧ್ಯಾತ್ಮ ಅಡಗಿದೆ.
ಕಣ್ಣಿಗೆ ಕಾಣದ ಅಧ್ಯಾತ್ಮ ಸತ್ಯ ಬಿಟ್ಟು ಕಣ್ಣಿಗೆ ಕಾಣುವ ಭೌತಿಕ ಸತ್ಯ ಹಿಡಿದು ಹೊರಗಿನವರೊಂದಿಗೆ ಗುದ್ದಾಡಿ ದ್ವೇಷ ಹರಡಿದರೆ ಒಳಗಿನ ಸತ್ಯ ಅರ್ಥ ವಾಗದೆ ಜೀವಹೋಗುತ್ತದೆ.
No comments:
Post a Comment