ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Tuesday, June 3, 2025

ಋಣಮುಕ್ತರಾಗೋದು ಸಾಧ್ಯವೆ?

ಮೇಲಿನ ಲೋಕಕ್ಕೆ ಹೋಗೋ ಮೊದಲು ನಿನ್ನ ಕೆಳಗಿನ ಲೆಕ್ಕ ಚುಕ್ತಾ ಆಗಬೇಕು. ಇದು ಅಧ್ಯಾತ್ಮ
ಆದರೆ ಇಂದು ಲೆಕ್ಕಾಚಾರವೇ  ಮುಗಿಯದ ವ್ಯವಹಾರಕ್ಕೆ  ಅಂಟಿಕೊಂಡು  ಜೀವನವೇ ದುಸ್ತರವಾದರೂ ಸರಿ ನಾನು ಬಿಡೋದಿಲ್ಲ ಎನ್ನುವ ಹಠ ಹೆಚ್ಚಾಗುತ್ತಾ‌ಮಠ ಮಠಗಳು ವ್ಯವಹಾರದಲ್ಲಿ  ಹೊರಗೆ ಬೆಳೆಯುತ್ತಿದೆ. ಎಂದರೆ ಭೂಮಿ ಋಣ ತೀರಿಸಲು  ಹಠಯೋಗಿ  ಲೆಕ್ಕಚುಕ್ತ ಮಾಡಬೇಕು.
ದೇವರು ,ಧರ್ಮ, ದೇಶದಲ್ಲಿ  ಯಾವುದು ಮೊದಲು ಎಂದರೆ ಹಲವರು ದೇವರೆಂದರೆ ಕೆಲವರು ಧರ್ಮ ಎನ್ನುವರು ಇನ್ನೂ ಕೆಲವರು ದೇಶವೇ ಮೊದಲು ಎನ್ನುವರು. ಹೀಗಾದರೆ ಅವರವರ ದೇವರ ಋಣ ಧರ್ಮದ ಋಣ ದೇಶದ ಋಣ ತೀರಿಸಲು  ಸತ್ಯಜ್ಞಾನ ಬೇಡವೆ?
ಹೊರಗಿನ ವ್ಯವಹಾರಕ್ಕೆ ಸತ್ಯವೂ ಬೇಡ ಧರ್ಮ ವೂ ಬೇಡ. ಹಣ ಒಂದೇ ಮುಖ್ಯ. ಆದರೆ ಸತ್ಯ ಧರ್ಮ ಇಲ್ಲದಿರುವ ಕರ್ಮದಿಂದ ಋಣ ತೀರದು. 
ಮೇಲ್ಮಟ್ಟದ ಚಿಂತನೆ ನಡೆಸೋರು  ತನ್ನ ಕಾಲುಬುಡದ ಸತ್ಯ ಗಮನಿಸೋದಿಲ್ಲ. ಹೀಗಾಗಿ ತಾವು‌ಮೇಲಕ್ಕೆ ಮೊದಲು ಹೋಗಬೇಕೆಂದು  ಕಾಲಕೆಳಗಿರುವವರನ್ನು ತುಳಿದರೆ  ಪರಮಾತ್ಮನೆಡೆಗೆ  ಹೋಗಬಹುದೆ?
ಎಷ್ಟು ‌ಮಂತ್ರ ತಂತ್ರ ಯಂತ್ರ ಬಳಸಿದರೂ  ಸ್ವತಂತ್ರ ಜ್ಞಾನಕ್ಕೆ ದಕ್ಕೆಯಾದರೆ ಜೀವನ ಅತಂತ್ರವೆ ಆಗಿರುತ್ತದೆ.
ಎಲ್ಲಾ ತಾತ್ಕಾಲಿಕ ವಷ್ಟೆ. ಶಾಶ್ವತವಿರೋದು  ಋಣ ಮತ್ತು ಕರ್ಮಫಲವಷ್ಟೆ. ಇದನ್ನು ಧಾರ್ಮಿಕವಾಗಿ ಅರಿಯುವುದಕ್ಕೆ ದೇವರನ್ನು ಬೆಳೆಸೋದಲ್ಲ ದೈವತ್ವದ ಗುಣಜ್ಞಾನ‌ ಬೆಳೆಸಿಕೊಂಡು  ಶಿಕ್ಷಣದ‌ಮೂಲಕ ಜನಸಾಮಾನ್ಯರಿಗೆ ತಲುಪಿಸಿದಾಗಲೇ  ನಿಜವಾದ ಧರ್ಮ. ಧರ್ಮ ಹಣದಿಂದ ರಕ್ಷಣೆ ಆಗೋಹಾಗಿದ್ದರೆ ಎಲ್ಲಾ ಉಚಿತ ಕೊಟ್ಟರೂ ಯಾಕೆ ಆಗಿಲ್ಲ?
ಉಚಿತ ಪಡೆದಷ್ಟೂ ಸಾಲ ಖಚಿತ.
ಸಾಲವೇ ಶೂಲವಾದಾಗ ಮೇಲಕ್ಕೆ ಏರೋದು ಅಸಾಧ್ಯ.
ಬಡವರ ಹೆಸರಿನಲ್ಲಿ  ಸಾಕಷ್ಟು   ರಾಜಕೀಯ ವ್ಯವಹಾರ‌
ನಡೆಯುತ್ತದೆ.ಅದಕ್ಕೆ ಬಡವರ ಸಹಕಾರವೂ ಇರುತ್ತದೆ. ಆದರೆ  ಸಾಲ‌ಮಾತ್ರ ಬಡವರ ಪಾಲಿಗೆ ದೇಶದ ತಲೆಗೆ ಕಟ್ಟಿದರೆ  ದೇಶದ ತಲೆಗೇ ಅಪಾಯ.
ಭಗವಂತ ಯಾವ ರೂಪದಲ್ಲಿ ಬಂದು ತಲೆ ತೆಗೆದುಕೊಂಡು ಹೋಗುವನೋ  ತಿಳಿಯದು.‌ಅಂದರೆ ತಲೆ ಜ್ಞಾನದ ಸಂಕೇತ.
ಅದಕ್ಕೆ ತುಂಬುವ ವಿಷಯಗಳು  ಜೀವನವಾಗಿರುತ್ತದೆ.
ಅದರೊಳಗೆ ಭ್ರಷ್ಟ ದುಷ್ಟರ ವಿಷಯ ತುಂಬಿದರೆ  ಸ್ವಚ್ಚ ಮಾಡಲಾಗದು. ಹೀಗಾಗಿ  ಸ್ವಚ್ಚ ಕಾರ್ಯ  ಸ್ವಯಂ ಪರಮಾತ್ಮನೇ ಮಾಡಿದರೂ ಅದರೊಳಗೂ  ಮಾನವನ  ತಪ್ಪು ಲೆಕ್ಕಾಚಾರ. ಪಾಪಪುಣ್ಯ ದ ಲೆಕ್ಕಾಚಾರವನ್ನು ಜ್ಞಾನದಿಂದ ಮಾಡಬೇಕಿತ್ತು.
ಆದರೆ ಇಂದು ಪಾಪ ಮಾಡಿದವರನ್ನು ರಕ್ಷಸಿ ಪುಣ್ಯವಂತರಿಗೆ ಶಿಕ್ಷೆ. ಇದೂ ಒಂದು ಮೇಲಿರುವವನ ಲೆಕ್ಕಾಚಾರವೇ.ಕಾರಣ ಪುಣ್ಯವಂತರನ್ನು ಬೇಗ‌ಮೇಲಕ್ಕೆ ಕರೆಸಿಕೊಳ್ಳಲು ತಯಾರಿ‌ ನಡೆದಿದೆ .
ಹೀಗಾಗಿ ಸಾಧ್ಯವಾದಷ್ಟು  ನಿಮ್ಮ ನಿಮ್ಮ ಅನಗತ್ಯ ಅಸ್ತಿ ಅಂತಸ್ತು ಅಧಿಕಾರ  ಸ್ಥಾನ ಬಿಟ್ಟು  ಮೇಲಕ್ಕೆ ಹೊರಡಲು ತಯಾರಿ ನಡೆಸಿಕೊಂಡರೆ  ಆತ್ಮಕ್ಕೆ ತೃಪ್ತಿ.
ಆತ್ಮಕ್ಕೆ ತೃಪ್ತಿ ಸಿಗಬೇಕಾದರೆ ಋಣಮುಕ್ತರಾಗಬೇಕು.
ಋಣಮುಕ್ತರಾಗಬೇಕೆಂದರೆ  ಪರಮಾತ್ಮನ ಸೇವೆ ಮಾಡಬೇಕು. ಪರಮಾತ್ಮ ಇರೋದೆಲ್ಲಿ ಎಂದರೆ ಸತ್ಯ ಧರ್ಮ ದಲ್ಲಿ.ಸತ್ಯ ಯಾವುದು ಧರ್ಮ ಯಾವುದು ಎಂದಾಗಲೇ ಬರೋದು  ಪ್ರಶ್ನೋತ್ತರ ಸರಮಾಲೆ.
ಆ ಪ್ರಶ್ನೆಗೆ ಸರಿಯಾಗಿ ಉತ್ತರ ಸಿಗದಿದ್ದರೆ ಮತ್ತದೇ ವ್ಯವಹಾರ. ನಿರಂತರವಾಗಿ ನಡೆದಿರುವ ಈ ವ್ಯವಹಾರ ಮಾಧ್ಯಮ  ಕಣ್ಣಿಗೆ ಕಾಣೋದಕ್ಕೆ  ಬೆಲೆಕೊಡುತ್ತದೆ.ಕಾಣದ್ದಕ್ಕೆ  ವಿರೋಧಿಸುವ ಕಾರಣದಿಂದ  ಜನ್ಮ ಜನ್ಮಗಳ ಋಣ ತೀರದೆ  ಎಷ್ಟು ದುಡಿದರೂ ತೃಪ್ತಿ ಯಿಲ್ಲ. ಒಬ್ಬ ಬಡ ಬ್ರಾಹ್ಮಣನಿಗಿರುವ ನೆಮ್ಮದಿ ಶ್ರೀಮಂತ ಬ್ರಾಹ್ಮಣನಿಗಿರದು.
ಬ್ರಾಹ್ಮಣ ಎಂದರೆ ಬ್ರಹ್ಮನ ಅರಿತವ. ಎಲ್ಲರಲ್ಲಿಯೂ ಒಂದು ಜ್ಞಾನಶಕ್ತಿ ಬ್ರಹ್ಮನ ಸೃಷ್ಟಿ ಯಿಂದಲೇ ಸೇರಿದೆ. ಅದನ್ನು  ಹುಡುಕಿಕೊಂಡು  ಅದರಂತೆ ಸ್ವತಂತ್ರ ವಾಗಿ  ನಡೆದರೆ ಆತ್ಮಕ್ಕೆ ತೃಪ್ತಿ. ಯಾವಾಗ  ಇದನ್ನು ಗುರುತಿಸದೆ ಹೊರಗಿನ ಜ್ಞಾನ ಸೇರಿಸಲಾಯಿತೋ  ಒಂದನ್ನೊಂದು  ಸರಿಮಾಡಲಾಗದೆ ಜೀವಕ್ಕೆ ಸಮಸ್ಯೆ ಆಗುವುದು. ಇದೇ ಕಾರಣದಿಂದ ಹಿಂದಿನ ಹಿಂದೂಗಳಲ್ಲಿ  ತತ್ವಜ್ಞಾನವಿದ್ದು‌ ಋಣ ತೀರಿಸಲು  ಸ್ವಂತ ಜ್ಞಾನ ಬಳಸಿಕೊಂಡು ಸರಳಜೀವನದಲ್ಲಿ‌ನೆಮ್ಮದಿಯಿಂದ ಬಾಳುತ್ತಿದ್ದರು.ಯಾವಾಗ ಬಾಳೋದು ಬಿಟ್ಟು ಆಳೋದಕ್ಕೆ ವ್ಯವಹಾರ ಹೆಚ್ಚಾಯಿತೋ ಆಗಲೇ ಸಾಲ ಬೆಳೆಯುತ್ತಾ
ಹತ್ತಿರವಿರುವ ಜ್ಞಾನದ ಆಸ್ತಿ  ಕಾಣದೆ ಹೊರಗಿನ ಜ್ಞಾನದ ದಾಸರಾಗಿ ಹಿಂದಿನ ಗುರುಹಿರಿಯರ ಋಣ ತೀರಿಸಲಾಗದ ಅಕರ್ಮಕ್ಕೆ ಅಧರ್ಮಕ್ಕೆ  ತಲೆಓಡಿಸುವಂತಹ ತಂತ್ರ ಬೆಳೆದು ಯಾಂತ್ರಿಕ  ಸಂಸಾರವಾಯಿತು.

ಯಂತ್ರವೂ ಮಾತನಾಡುತ್ತದೆ ಆದರೆ  ಇದರಲ್ಲಿ ಸತ್ಯವಿರದು.
ಹಾಗೆ ಮೂರು ಪಂಗಡಗಳಿಗೂ ಮಾತು‌ಬರುತ್ತದೆ. ಸತ್ಯದಲ್ಲಿ ವ್ಯತ್ಯಾಸವಿರುತ್ತದೆ. ಸೃಷ್ಟಿ ಸ್ಥಿತಿ ಲಯ ಇದಕ್ಕೆ ತಕ್ಕಂತೆ ನಡೆಯುತ್ತದೆ. ಇದನ್ನು ಯಾರೂ‌ ಮೀರಿಸಲಾಗದು. ಕೊನೆಪಕ್ಷ ಸೃಷ್ಟಿ ಸರಿಯಾದರೆ  ಬದಲಾವಣೆ ಉತ್ತಮ.ಅದರ ಮೂಲ ಜ್ಞಾನದೆಡೆಗೆ ಹೊರಡಲು  ಸರಿಯಾದ ದಾನಧರ್ಮ ಕಾರ್ಯ ಅಗತ್ಯ. ಇದು ಮನೆಯೊಳಗಿದ್ದೇ  ಮಾಡಿದರೆ ಮನೆಯವರಿಗೂ ಒಳ್ಳೆಯದು. ಹೊರಗೆ ಮಾಡಿದರೂ ಸಮಾಜದ ಋಣ ತೀರುವುದು.ಆದರೆ  ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದ ದಾನ ಧರ್ಮದಿಂದ ಮಾತ್ರ ಮೇಲಿನ ಲೋಕಕ್ಕೆ ಆತ್ಮನ ಪ್ರಯಾಣ ಎನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ.
ಅದಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಸಂಪಾದನೆ ಕಷ್ಟ ತರುತ್ತದೆ.
ಕಷ್ಟ ಬಂದಾಗ  ಅದೇ ಹಣವನ್ನು  ದಾನಧರ್ಮ ಕ್ಕೆ ಕೊಡಬೇಕು. ಕೊಟ್ಟು  ಮತ್ತೆ ಅದೇ ರೀತಿಯಲ್ಲಿ  ನಡೆದರೆ ಮತ್ತದೇ ಕಷ್ಟ ನಷ್ಟ.
ಒಟ್ಟಿನಲ್ಲಿ ನಾವು ದೇವರಿಗಾಗಲಿ ಜನರಿಗಾಗಲಿ ಸೇವೆ ಮಾಡುವುದರಿಂದ  ನಮ್ಮ ಋಣ ತೀರಬೇಕೆಂದರೆ  ಅದು ಯೋಗದಿಂದ ಇರಬೇಕು. ಅಂದರೆ  ಪರಮಾತ್ಮನಿಗೇ  ಸೇವೆ ಮಾಡುವ ಯೋಗಿಗೆ ಮುಕ್ತಿ ಮೋಕ್ಷ ಎಂದಿರುವರು .

ಹಾಗಾದರೆ  ನಮ್ಮ ಸೇವೆ ಪರಮಾತ್ಮನಿಗೆ ತಲುಪಿದೆಯೆ?
ತಲುಪಿದ್ದರೆ  ನಮಗೇಕೆ ಸಮಸ್ಯೆ ಸಂಕಟ ನೋವು?
ಆತ್ಮಕ್ಕೆ ತೃಪ್ತಿ ಸಿಗುವ ಧರ್ಮ ಕರ್ಮ ದಿಂದ ಋಣ ತೀರುವುದು. ಎಲ್ಲಾ ಕಾಲದಲ್ಲಿಯೂ  ಈ ಜೀವ ಇದ್ದರೂ ಅದರ ಅರಿವಿಲ್ಲದ ಕಾರಣದಿಂದ ಅಜ್ಞಾನದಲ್ಲಿ  ಭೂಮಿಯ ಋಣ ಏರಿಸಿಕೊಂಡು  ಮಾನವ  ಅಸುರರಿಗೆ  ದಾನ ಧರ್ಮ ಮಾಡಿದರೆ  ಇದ್ದವರಿಗೇ ಎಲ್ಲಾ ಸೇರುತ್ತದೆ. ಎಲ್ಲಾ ಸೇರಿದ‌ಮೇಲೆ ಅಧಿಕಾರ ಅಹಂಕಾರ ಸ್ವಾರ್ಥ ವೂ ಬೆಳೆಯುತ್ತದೆ. ಒಳಗೇ ಅಸುರಶಕ್ತಿ ಆಳುತ್ತಿದ್ದರೆ ದೇವರು ಕಾಣೋದಿಲ್ಲ. ದೇವರನ್ನು ದ್ವೇಷ ಮಾಡೋದೇ  ವ್ಯವಹಾರ ಆಗಿರುತ್ತದೆ. ಒಟ್ಟಿನಲ್ಲಿ ಹಣ ಬೇಕು.ಇದು ಸದ್ವಿದ್ಯೆ ಸತ್ಕರ್ಮ ಸ್ವಧರ್ಮ ದಿಂದ  ಗಳಿಸಿದರಷ್ಟೆ  ಮಾನವನಿಗೆ ಸಮಾಧಾನ.
ಎಷ್ಟೋ ಶ್ರೀಮಂತ ರಿಗೆ ಮಕ್ಕಳ ಭಾಗ್ಯವಿಲ್ಲ.ಮಕ್ಕಳಿದ್ದರೂ ಆಸ್ತಿ ಅನುಭವಿಸೋ ಭಾಗ್ಯವಿರದು. ಆಸ್ತಿ ಇದೆಯೆಂದು ದುರ್ಭಳಕೆ ಮಾಡಿದರಂತೂ ಮುಗಿಯಿತು ಕಥೆ. ಹಾಗಾಗಿ ಜ್ಞಾನಿಗಳಾದವರು  ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳ ಜ್ಞಾನವನ್ನು  ಬೆಳೆಸುತ್ತಾ ಅವರನ್ನು ಸಮಾಜದ ದೇಶದ ಆಸ್ತಿ ಆಗಿಸಿದ್ದರು. ಆದರೆ ಕಾಲಾನಂತರದಲ್ಲಿ ಜ್ಞಾನವನ್ನು ಗುರುತಿಸುವ ಶಿಕ್ಷಣವಿಲ್ಲದೆ  ಹೊರಗಿನ ಜ್ಞಾನ ಬೆಳೆಯಿತು.‌ಒಟ್ಟಿನಲ್ಲಿ ಜ್ಞಾನವನ್ನು ಸದ್ಬಳಕೆ ಮಾಡುವುದರಿಂದ  ಉತ್ತಮ  ಜೀವನ ನಡೆಸಬಹುದು. 
ಹಿಂದೆ ಅವರವರ ಮೂಲ ಧರ್ಮ ಕರ್ಮವೇ ಆಧಾರವಾಗಿ ಜನಜೀವನ ನೆಮ್ಮದಿ ತೃಪ್ತಿ ಪಡೆದಿತ್ತು. ಈಗ ಕಲಿಕೆ ಹೊರಗಿನವರದ್ದು  ಹಣ ಆಸ್ತಿ ಒಳಗಿನವರದ್ದು  ಹೀಗಾಗಿ ಎರಡೂ ಕಡೆ ಋಣಭಾರ ಹೊತ್ತು ತೀರಿಸಲಾಗದೆ ಜೀವಹೋಗುತ್ತಿದೆ. ಒಂದೇ ವಿಷಯ ಎರಡೂ ಕಡೆ ಇದ್ದರೆ ಸಮಾಧಾನ.‌ವಿರುದ್ದ ಇದ್ದರೆ ಗೊಂದಲವೇ ಹೆಚ್ಚು. ಅದಕ್ಕಾಗಿ ದೇಶದ ಋಣ ತೀರಿಸಲು ದೇಶೀಯ ಜ್ಞಾನ ಅಗತ್ಯವಿದೆ. ವಿದೇಶಿ ಬಂಡವಾಳ, ಸಾಲ,ವ್ಯವಹಾರದಿಂದ  ದೇಶದ ಸಾಲ ತೀರುವುದೆ?  ಒಳಗೆಳೆದುಕೊಂಡ ಮೇಲೆ ಹೊರಗೆ ಕೊಡುವುದು ಬಹಳ ಕಷ್ಟ. 

ಅಪ್ಪ ನೆಟ್ಟ ಆಲದ‌ಮರವೆಂದು‌ ನೇಣು ಹಾಕಿಕೊಳ್ಳುವರೆ? ಅಥವಾ ಆಲದ ಮರದ ನೆರಳಿನಲ್ಲಿ ಜೀವನದ ಶಾಂತಿ ಕಾಣುವರೆ? ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸ್ತಿಯೂ ಪೋಷಕರಿಗೆ ತಕ್ಕ ಶಾಸ್ತಿ ಮಾಡುತ್ತಿದೆ. ಮಕ್ಕಳೇ ದೂರವಾದರೆ ಆಸ್ತಿ  ಯಾರಿಗೆ? ಕೊನೆಪಕ್ಷ ಸಮಾಜದ ಋಣ ತೀರಿಸಲು ಬಳಸುವ ಜ್ಞಾನವಿದ್ದರೆ ಉತ್ತಮ .
ಮಹಾತ್ಮರ ಹೆಸರಿನಲ್ಲಿ  ಕಾರ್ಯಕ್ರಮ ನಡೆಸಿ ಹಣಮಾಡುವ‌ ಮೊದಲು  ಅವರ ಜ್ಞಾನದೊಳಗಿರುವ‌ಹೂರಣ ಅರ್ಥ ಆದರೆ ಋಣ ತೀರಬಹುದು.
ಭ್ರಷ್ಟಾಚಾರ ದಲ್ಲಿ ಎಷ್ಟು ದುಡಿದರೂ ಸಾಲ ತೀರದು.
ಇದು ಕೆಳಗಿನ‌ಲೋಕಕ್ಕೆ  ಜೀವವನ್ನು ಕಳಿಸುತ್ತದೆ. ಕಾಣದ ಲೋಕಗಳ ಅರಿವಿಲ್ಲದೆ ಭೂಮಿ ಮೇಲಿದ್ದರೆ  ಭೂಮಿಯ ಋಣವೇ ಮುಗಿಯದು. 

No comments:

Post a Comment