ಯಾರೊಳಗೆ ಯಾರಿರೋದು?
ಪ್ರಶ್ನೆಗೆ ಉತ್ತರ ಎಲ್ಲಾ ಅವರೊಳಗೆ ಹೊರಗೆ ಹುಡುಕಿಕೊಂಡರೆ ನಾವು ಯಾರ ಅಧೀನದಲ್ಲಿದ್ದೇವೆನ್ನುವ ಸತ್ಯದರ್ಶನ ವಾಗುತ್ತದೆ.
ಅಧ್ಯಾತ್ಮಿಕ ಚಿಂತಕಿಯಾಗಿ ನಾನು ಕಂಡಿರುವ ಸತ್ಯದಲ್ಲಿ ಪರಮಾತ್ಮನೊಳಗೆ ಜೀವಾತ್ಮನಿದ್ದರೂ ಜೀವಾತ್ಮನಾದ ಮಾನವ ಪರಮಾತ್ಮನನ್ನೇ ತನ್ನ ವಶದಲ್ಲಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿ ಅಧರ್ಮ ಬೆಳೆದಿದೆ.ಇಲ್ಲಿ ಆತ್ಮಕ್ಕೆ ಲಿಂಗಬೇಧ ಜಾತಿಬೇಧ ಪಕ್ಷಬೇಧವಿಲ್ಲ ಆದರೂ ಧರ್ಮದ ಪ್ರಕಾರ ಎಲ್ಲಾ ಒಂದಾಗೋದಕ್ಕಾಗಿಯೇ ಎಲ್ಲಾ ಅವತಾರವನ್ನು ತಾಳಿ ಧರ್ಮ ರಕ್ಷಣೆ ಮಾಡಿದ ಪರಮಾತ್ಮನ ಪುರಾಣ ಕಥೆಗಳಿವೆ. ಪುರಾಣ ಕಥೆಗಳಲ್ಲಿ ನಾವಿದ್ದೇವೆ ಆದರೆ ಅದರ ತತ್ವಗಳು ನಮ್ಮಲ್ಲಿಲ್ಲ. ಎಲ್ಲಾ ಮಹಾತ್ಮರುಗಳನ್ನು ಗೌರವಿಸಿ ಪೂಜಿಸಿದರೂ ನಮ್ಮ ಮಹಾತ್ಮನ ಅರಿವಾಗಿಲ್ಲ.ಅಂದರೆ ಮಹಾತ್ಮನಾಗೋದಕ್ಕೆ ಬೇಕಾದ ತತ್ವಜ್ಞಾನದ ಕೊರತೆಯೇ ನಾವು ಯಾರೊಳಗಿದ್ದೇವೆ? ನಾವ್ಯಾರು? ನಾನ್ಯಾರು ಪ್ರಶ್ನೆ ಮಾಡಿಕೊಳ್ಳದಂತೆ ಮಾಡಿರುವಾಗ ಹೊರಗಿನಿಂದ ಬಂದವರು ನಮ್ಮನ್ನು ಸುಲಭವಾಗಿ ವಶಪಡಿಸಿಕೊಂಡು ಆಳಬಹುದು. ಹಿಂದಿನ ಕಾಲದಿಂದಲೂ ನಡೆದು ಬಂದಿರುವ ರಾಜಕೀಯ ದ್ವೇಷವು ಮನೆಮನೆಯೊಳಗೆ ಹರಡಿರುವಾಗ ಆ ದ್ವೇಷ ಒಳಗಿನ ಕಿಡಿಯೇ ಅಥವಾ ಹೊರಗಿನ ಕಿಡಿಯೇ ಎಂದು ಪರೀಕ್ಷೆ ಮಾಡಿಕೊಂಡರೆ ಒಳಗಿನದಾದರೆ ಒಳಗಿದ್ದೇ ಆರಿಸುವ ಪ್ರಯತ್ನ ನಡೆಸಬಹುದು.ಹೊರಗಿನದ್ದಾಗಿದ್ದರೆ ಅದರಿಂದ ದೂರವಿದ್ದರೆ ನಂದಿಹೋಗುತ್ತದೆ.
ಈವರೆಗೆ ನಡೆದಿರುವ ಸಾಕಷ್ಟು ಹೋರಾಟ ಹಾರಾಟ ಮಾರಾಟದಿಂದ ದೇಶದೊಳಗೆ ಶಾಂತಿ ನೆಲೆಸಿತೆ ಅಥವಾ ನಮ್ಮನೆಯೊಳಗೆ ಶಾಂತಿ ನೆಲೆಸಿತೆ? ಶಾಂತಿಗಾಗಿ ಧರ್ಮ ಯುದ್ದವಾಗಿದ್ದರೂ ನಂತರದ ದಿನಗಳಲ್ಲಿ ಹೋದ ಜೀವ ಮತ್ತೆ ಜನ್ಮಪಡೆದು ಕ್ರಾಂತಿಯೇ ಬೆಳೆದಿದೆ. ತಾತ್ಕಾಲಿಕ ಪರಿಹಾರ ಯುದ್ದ ಹೋರಾಟ ಹಾರಾಟ ಮಾರಾಟವೆಂದರೆ ನಾವು ಒಪ್ಪೋದಿಲ್ಲ ಕಾರಣ ಅದು ಕೆಲವರಿಗೆ ಸುಖವೆನಿಸಿದರೆ ಹಲವರಿಗೆ ದು:ಖ ಅಸಮಾಧಾನ ಅಸಂತೋಷ ಅಜ್ಞಾನವನ್ನೇ ಬೆಳೆಸಿದೆ. ಹೀಗಿರುವಾಗ ಶಾಂತಿಯಿಂದ ಸತ್ಯ ಹಾಗು ಧರ್ಮ ವನರಿತವರು ಇದರಿಂದ ದೂರವಾಗುತ್ತಾ ಮಹಾತ್ಮರಾಗಿ ಮರೆಯಾದರು. ಆ ಮರೆಯಾದವರ ಹೆಸರಿನಲ್ಲಿ ರಾಜಕೀಯ ನಡೆಸಿದರೆ ನಾವು ಮಹಾತ್ಮರಾಗಬಹುದೆ? ಸಾಧ್ಯವಿಲ್ಲ ಕಾರಣ ಆತ್ಮ ಒಳಗಿನ ಶಕ್ತಿ ಅವರಂತೆ ನಡೆಯುವ ದಾರಿ ಇದ್ದರೆ ಮಾತ್ರ ಅವರ ಹಿಂದೆ ನಡೆಯಬಹುದು. ಅವರು ರಾಜಯೋಗದ ದಾರಿಯಲ್ಲಿ ನಡೆದಿರುವಾಗ ನಾವು ರಾಜಕೀಯದೆಡೆಗೆ ನಡೆದರೆ ವಿರುದ್ದ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಿ ಎಲ್ಲರಲ್ಲಿಯೂ ಮಹಾತ್ಮರಿದ್ದರೂ ಎಲ್ಲಾ ಗುರುತಿಸುವ ಶಕ್ತಿ ಪಡೆದಿಲ್ಲವೆಂದಾಗ ಮಹಾತ್ಮರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಂತಲ್ಲವೆ?
ಶ್ರೀ ರಾಮ ಶ್ರೀ ಕೃಷ್ಣನ ಕಾಲದಿಂದಲೂ ಈ ರಾಜಕೀಯ ವಿದೆ.
ರಾಮನ ಕಾಲದಲ್ಲಿ ತತ್ವವಿದ್ದರೆ ಕೃಷ್ಣನ ಕಾಲದಲ್ಲಿ ತಂತ್ರಪ್ರಯೋಗವಾಯಿತು. ಕಾರಣ ದುಷ್ಟರನ್ನು ಸದೆಬಡಿಯಲು ತಂತ್ರ ಅನಿವಾರ್ಯ ವಾಯಿತೆಂದರೆ ಸ್ವಲ್ಪ ಮಟ್ಟಿಗೆ ಅಸತ್ಯ ಸೇರಿಕೊಂಡಿತು ಆದರೆ ಧರ್ಮ ಯುದ್ದ ನಡೆಯಿತು. ಈಗ ಕಲಿಗಾಲ ಇಲ್ಲಿ ತತ್ವದ ಹೆಸರಿನಲ್ಲಿ ತಂತ್ರವಾಗಿ ನಂತರ ಯಂತ್ರದಂತೆ ಜನರನ್ನು ಬಳಸಿಕೊಂಡು ತನ್ನ ಸ್ವತಂತ್ರ ಜ್ಞಾನದ ಜೊತೆಗೆ ಜನರ ಸ್ವತಂತ್ರ ಜ್ಞಾನವೂ ಹಿಂದುಳಿದು ಹಿಂದುಳಿದವರನ್ನು ಆಳುವವರೆ ಹೆಚ್ಚಾಗಿದ್ದಾರೆ. ಸ್ವತಂತ್ರ ಭಾರತಕ್ಕಾಗಿ ತಮ್ಮ ಜೀವ ಪ್ರಾಣವನ್ನು ಬಲಿಕೊಟ್ಟ ವೀರರ ದೇಶದಲ್ಲಿ ಅಜ್ಞಾನವನ್ನು ತಲೆಗೆ ತುಂಬಿಕೊಂಡು ಯಾರೋ ಹೇಳಿದ್ದನ್ನು ಕೇಳಿ,ನೋಡಿ,ಕೂಗಿಕೊಂಡು ಯುವಕಯುವತಿಯರು ಮನೆಯಿಂದ ಹೊರಬಂದು ಹೋರಾಟ ಮಾಡಿದರೆ ಎಲ್ಲಿರುವುದು ಜೀವ? ಒಳಗೋ ಹೊರಗೋ? ಒಟ್ಟಿನಲ್ಲಿ ಜೀವಾತ್ಮನು ಪರಮಾತ್ಮನ ಒಳಗಿದ್ದರೂ ನಾನೇ ಪರಮಾತ್ಮ ಎನ್ನುವ ಅಸುರ ಶಕ್ತಿಯ ಅಡಿಯಾಳಾಗಿ ಜೀವ ಹೋಗುತ್ತಿದೆ ಎಂದರೆ ಆತ್ಮಜ್ಞಾನದ ಕೊರತೆ ಇದಕ್ಕೆ ಕಾರಣವೆನ್ನಬಹುದಷ್ಟೆ.
ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಣೆ ಮಾಡಿದ್ದರೂ ಕೊನೆಗೆ ಸೀತೆಯನ್ನೂ ಬಿಟ್ಟು ರಾಜಧರ್ಮದ ಪರ ನಿಲ್ಲಬೇಕಾಯಿತು.ಅಂದಾಗ ಕ್ಷತ್ರಿಯನಾಗಿರುವಾಗಿನ ಧರ್ಮ ವೇ ಬೇರೆ,ಮಾನವನಾಗಿ ಸ್ವತಂತ್ರವಾಗಿ ರುವಾಗಿನ ಧರ್ಮ ವೇ ಬೇರೆ. ಹಾಗೆ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದು ದೇಶದೊಳಗೆ ಇರೋವಾಗ ದೇಶಕ್ಕಾಗಿ ನಾನೇನು ಮಾಡಬಹುದೆನ್ನುವ ಚಿಂತನೆ ಬರಲು ನಿಜವಾದ ದೇಶಭಕ್ತರಿಗಷ್ಟೆ ಸಾಧ್ಯ.ಭಕ್ತಿ ಒಳಗಿನ ಶಕ್ತಿ.ಹಾಗೆಯೇ ದೇವರ ಭಕ್ತರು ದೈವತ್ವ ಪಡೆಯುವುದಕ್ಕಾಗಿ ನಾನೇನು ಸೇವೆ ಮಾಡಬಹುದೆನ್ನುವ ಚಿಂತನೆ ನಡೆಸಿದ್ದರೆ ನಮ್ಮಲ್ಲಿ ಸಾಕಷ್ಟು ಚೈತನ್ಯಶಕ್ತಿ ವೃದ್ದಿಯಾಗಿ ಅದೇ ದೇಶವನ್ನು ಉಳಿಸುತ್ತಿತ್ತು.
ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣವೇ ರಾಜಕೀಯದ ವಶದಲ್ಲಿದೆ. ಯಾರದ್ದೋ ವಿಚಾರವನ್ನು ಯಾರೋ ಹೇಗೋ ಅರ್ಥ ಮಾಡಿಕೊಂಡು ಸಣ್ಣ ಮಕ್ಕಳ ಮುಗ್ದ ಮನಸ್ಸಿಗೆ ಒತ್ತಾಯದಿಂದ ತುಂಬುವ ಕೆಲಸಕ್ಕೆ ಪೋಷಕರ ಸಹಕಾರವಿದೆ. ಆದರೆ ನಮ್ಮ ಮಕ್ಕಳ ಸ್ವತಂತ್ರ ಬುದ್ದಿಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಯ ದುರ್ಭಳಕೆ ಆದಾಗ ಅದರ ಪರಿಣಾಮವನ್ನು ಮುಂದೆ ತಾವೇ ಅನುಭವಿಸುವಾಗ ಸರ್ಕಾರ ಸರಿಯಿಲ್ಲ ಶಿಕ್ಷಣಸರಿಯಿಲ್ಲ ಸಮಾಜಸರಿಯಿಲ್ಲ ಶಿಕ್ಷಕರು ಸರಿಯಿಲ್ಲ ದೇಶವೇ ಸರಿಯಿಲ್ಲ ಎಂದು ಕೂಗುವವರ ಹಿಂದೆ ನಿಂತರೆ ನಾವು ಸರಿಯಾಗಲು ಸಾಧ್ಯವೆ?
ವಿಚಾರಗಳು ಅಧ್ಯಾತ್ಮಿಕ ವಾಗಿದ್ದರೂ ಭೌತಿಕದಲ್ಲಿ ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದೆ.ಭೌತವಿಜ್ಞಾನ ಕಣ್ಣಿಗೆ ಕಾಣೋವರೆಗೂ ನಂಬೋದಿಲ್ಲ ಹಾಗಾಗಿ ಇಲ್ಲಿಯವರೆಗೆ ಬೆಳೆಸಿರುವ ನಾವು ಈಗ ನಂಬಲೇಬೇಕಿದೆ.
ದೇಶದೊಳಗೆ ನಾವಿರೋದೇ ನಮ್ಮೊಳಗೇ ದೇಶವಿದೆಯೆ?
ಸತ್ಯ ನಮ್ಮೊಳಗಿದೆಯೇ ಅಥವಾ ನಾವೇ ಸತ್ಯವಂತರೆ
ದೇವರೊಳಗೆ ನಾವಿರೋದೇ ಅಥವಾ ನಾವೇ ದೇವರೆ ?
ಭೂಮಿಯ ಮೇಲಿರುವುದೋ ಜೀವ? ಒಳಗಿರುವುದೋ?
ಎರಡೂ ಸತ್ಯವೇ ಆದರೂ ಭೂಮಿಗೆ ಬಂದಿರುವ ಜೀವಾತ್ಮನಲ್ಲಿ ದೇಶಭಕ್ತಿ ದೈವತ್ವ ಸತ್ಯ ಒಳಗೇ ಇಲ್ಲದೆ ಎಲ್ಲೋ ಹೊರಗೆ ಹುಡುಕುವ ಕೆಲಸದಲ್ಲಿ ನಾವಿರೋವಾಗ ಹುಡುಕಾಟದಲ್ಲಿ ಜೀವನ ಮುಗಿದುಹೋದರೆ ಯಾರೊಳಗೆ
ಏನಿತ್ತೋ ಅದೇ ಮತ್ತೆ ಮತ್ತೆ ಬೆಳೆಯುತ್ತದೆ.
ಅದಕ್ಕೆ ಇದನ್ನು ಕಲಿಗಾಲವೆಂದರು. ಹೊರಗಿನ ಅಜ್ಞಾನವನ್ನು ಒಳಗೆಳೆದುಕೊಂಡ ಮಾನವನಿಗೆ ಮಹಾತ್ಮರ ಪರಿಚಯವಾಗದೆ ಜೀವ ಹೋದರೆ ಅಸುರರ ವಶವಾಗುತ್ತಾನೆ.
ಹಿಂದೂ ಧರ್ಮದಲ್ಲಿ ಜನ್ಮಪಡೆದು ಹಿಂದೂಸ್ತಾನಿ ಎಂದವರು ಹಿಂದೂ ದೇಶ ತೊರೆದರೆ ಹಿಂದೂಗಳ ಸಂಖ್ಯೆ ಕುಸಿಯಿತು.
ಹಾಗಂತ ವಿಶ್ವದಾದ್ಯಂತ ಹರಡಿರುವ ಹಿಂದೂಗಳಲ್ಲಿ ಎಲ್ಲಾ ಹಿಂದುತ್ವದಲ್ಲಿರಲಾಗಿಲ್ಲವೆಂದರೆ ತಪ್ಪು ಮೂಲವನ್ನು ಬಿಟ್ಟು ನಡೆದಿರೋದಷ್ಟೆ.ಇದರ ಫಲ ಅವರು ಅನುಭವಿಸಲೇಬೇಕಾದಾಗ ಇದಕ್ಕೆ ಕಾರಣ ಸರ್ಕಾರ ವಲ್ಲ ದೇವರೂ ಅಲ್ಲ. ಹಾಗಂತ ನಮ್ಮ ದೇಶದೊಳಗೆ ಇದ್ದವರಿಗೆ ಸರಿಯಾದ ಧರ್ಮ ಜ್ಞಾನವಿದ್ದರೆ ದೇಶದ ಉದ್ದಾರ ಸಾಧ್ಯವಿತ್ತು. ನಮಗೆ ಎಲ್ಲಾ ಉಚಿತವಾಗಿ ಸರ್ಕಾರ ಕೊಟ್ಟರೆ ನಮ್ಮ ಕರ್ಮಕ್ಕೆ ಬೆಲೆಯಿರುವುದೆ? ಧರ್ಮದಿಂದ ಸಂಪಾದನೆ ಮಾಡೋದರಿಂದಲೇ ಋಣ ತೀರಿಸಲು ಸಾಧ್ಯ.ಇದು ಯಾವ ಮತವಾದರೂ ಸರಿ ನಾನಿರುವ ನೆಲ ಜಲದ ಋಣ ತೀರಿಸಲು ಧರ್ಮ ಮಾರ್ಗ ವಿರಬೇಕೆನ್ನುತ್ತದೆ ಅಧ್ಯಾತ್ಮ. ಪರರನ್ನು ಶೋಷಣೆ ಮಾಡಿ ನಾನು ಸುಖವಾಗಿರಲು ಅಸಾಧ್ಯ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತವರು ಸಾಮಾನ್ಯ ಜ್ಞಾನವನ್ನು ತಿರಸ್ಕಾರದಿಂದ ನೋಡುತ್ತಾ ಸಾಮಾನ್ಯರ ಸಹಕಾರದಲ್ಲಿಯೇ ಅಸಮಾನ್ಯರಾಗಿ ಬೆಳೆದರೂ ಸಾಲದ ಹೊರೆ ತನ್ನ ಮೇಲೇ ಏರಿಸಿಕೊಂಡಿರುವಾಗ ಬೇರೆಯವರ ಸಾಲ ತೀರಿಸಲಾಗದು.ಅದೂ ಪರಮಾತ್ಮನ ಸಾಲವಂತೂ
ಮಿತಿಮೀರಿದೆ ಎನ್ನಬಹುದು.ಇದರಿಂದ ಬಿಡುಗಡೆ ಪಡೆಯಲು ಸತ್ಯ ಧರ್ಮದೊಳಗಿದ್ದು ಸೇವೆ ಮಾಡಲೇಬೇಕು. ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನ ಸಂದೇಶವಾಗಿದೆ ಎಂದರೆ ಇಂದಿನ ಸೇವೆ ಯಾವ ರೀತಿಯಲ್ಲಿ ಯಾರ ಹಣದಲ್ಲಿ ಯಾವ ಮಾರ್ಗದಲ್ಲಿ ನಡೆಯುತ್ತಿದೆ ? ಸಾಲಮನ್ನಾ ಮಾಡುವ ಸರ್ಕಾರದ ಹಣವೇ ಜನರ ಋಣ. ಇದನ್ನು ತೀರಿಸಲು ಇನ್ನೊಂದು ಜನ್ಮ. ಒಟ್ಟಿನಲ್ಲಿ ಪರಮಾತ್ಮನ ಋಣ ಕಣ್ಣಿಗೆ ಕಾಣದ ಕಾರಣ ಮಿತಿಮೀರಿದ ಸಾಲದಲ್ಲಿ ಶ್ರೀಮಂತ ರು ಬೆಳೆದು ಬಡವರನ್ನು ಆಳಿದರೆ ಅಧರ್ಮ. ದೇಶದ ಒಳಗೆ ಹೊರಗೆ ಆವರಿಸಿರುವ ಎಲ್ಲಾ ದೇವಾನುದೇವತೆಗಳೇ ಇದಕ್ಕೆ ಸಾಕ್ಷಿಯಾಗಿರುವಾಗ ನಮ್ಮ ಆತ್ಮಸಾಕ್ಷಿಗೆ ವಿರುದ್ದ ಎಷ್ಟೇ ಮುಂದೆ ಹೊರಗೆ ನಡೆದರೂ ಧರ್ಮ ರಕ್ಷಣೆಯಾಗದು. ಸಾಧ್ಯವಾದಷ್ಟು ನಮ್ಮ ಮನೆಯೊಳಗೆ ಮನಸ್ಸಿನೊಳಗೇ ತುಂಬಿರುವ ಅನಗತ್ಯ ಅನಾವಶ್ಯಕ ವಿಷಯ ವಸ್ತು ಒಡವೆ ಆಸ್ತಿಯನ್ನು ದಾನ ಧರ್ಮದ ಮೂಲಕ ಹೊರ ಹಾಕುವ ಪ್ರಯತ್ನ ನಡೆಸಿದರೆ ಮನಸ್ಸು ಸ್ವಚ್ಚ ಮನೆಯೂ ಸ್ವಚ್ಚ ಮಂದಿರ ಮಠವೂ ಸ್ವಚ್ಚವಾಗುತ್ತಾ ದೇಶದ ಸಾಲ ತೀರಿಸಿದರೆ ಹೊರಗಿನ ಋಣ ಸಂದಾಯವಾಗಿ ದೇಶದ ತುಂಬಾ ತುಂಬುತ್ತಿರುವ ಪರಕೀಯರ ವ್ಯವಹಾರ ಶಿಕ್ಷಣ ಬಂಡವಾಳ ಸಾಲಕ್ಕೆ ಸ್ಥಾನಮಾನವೇ ಇರದು. ಇಷ್ಟು ವರ್ಷದಿಂದಲೂ ದೇಶ ಆಳಿರುವವರು ಅಜ್ಞಾನದಲ್ಲಿ ಜನರನ್ನು ಸಾಲದೆಡೆಗೆ ಎಳೆದಿದ್ದಾರೆ. ಆ ಸಾಲ ತೀರಿಸಲು ಇರುವ ಮಾರ್ಗ ಒಳಗೆ ಹುಡುಕಿದರೂ ಸಿಗದಂತೆ ಹೊರಗಿನವರು ಬಂದು ಕುಳಿತಿರೋದು ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದವರಿಗೆ ನಾವೆಲ್ಲಿ ಎಡವಿದ್ದೇವೆಂಬ ಅರಿವಿಲ್ಲದೆ ಅದನ್ನೇ ಮತ್ತೆ ಬೆಳೆಸಿದರೆ ನಮ್ಮ ಜೀವ ಭ್ರಷ್ಟಾಚಾರದ ಲ್ಲಿದೆ ಎಂದರ್ಥ.ಈ ಸಣ್ಣ ಜೀವ ಉಳಿಸಿಕೊಳ್ಳಲು ಅಧರ್ಮ ಅಸತ್ಯ ಅನ್ಯಾಯ ಅಕರ್ಮ ಅವಿದ್ಯೆ ಗೆ ಶರಣಾದರೆ ಆತ್ಮಹತ್ಯೆ ಯಾಗುತ್ತದೆ. ಇಲ್ಲಿ ಜೀವ ಹೋದರೆ ಸಾವಲ್ಲ ಆತ್ಮಹೋದರೆ ಸಾವು. ಇದ್ದೂ ಸತ್ತಂತೆ ಎಂದರೆ ಅಧ್ಯಾತ್ಮಿಕ ವಾಗಿ ಮಾನವ ಯಾವಾಗ ತನ್ನ ಸ್ವಾರ್ಥ ಸುಖಕ್ಕಾಗಿ ಅಧರ್ಮ ಅಸತ್ಯ ಅನ್ಯಾಯದ ಪರ ನಿಲ್ಲುವನೋ ಆಗವನು ಜೀವಂತ ಶವವಾಗುತ್ತದೆ.ಶಿವನಿಗೆ ಆತ್ಮಜ್ಞಾನವೇ ಮುಖ್ಯ ದೇಹವಲ್ಲ. ಇಷ್ಟು ತಿಳಿದವರು ಈಗ ಚಿಂತನೆ ಮಾಡಿಕೊಂಡರೆ ನಮ್ಮ ಸಹಕಾರದ ಫಲವೇ ದೇಶದ ಈ ಸ್ಥಿತಿಗೆ ಕಾರಣವಾದಾಗ ನಮ್ಮ ಆತ್ಮರಕ್ಷಣೆಗಾಗಿ ಮನೆಯೊಳಗೆ ಇದ್ದವರು ಏನು ಮಾಡಬಹುದು? ಹೊರಗೆ ಬಂದವರು ಹೇಗೆ ನಡೆಯಬೇಕು? ಎಲ್ಲಾ ಮಾಡೋದೂ ನಮ್ಮ ಭವಿಷ್ಯಕ್ಕಾಗಿಯೇ ಎಂದಾಗ ಮಕ್ಕಳ ಭವಿಷ್ಯವನ್ನು ನಾವು ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡು ಶಿಕ್ಷಣ ನೀಡಿದ್ದೇವೆ.ನೀಡುತ್ತಿದ್ದೇವೆ? ನೀಡಬೇಕಿದೆ ಎನ್ನುವ ಬಗ್ಗೆ ಪೋಷಕರೆ ಆತ್ಮಾವಲೋಕನ ಮಾಡಿಕೊಂಡರೆ ನಮಗೆ ವಿಶ್ವರೂಪದರ್ಶನದ ಹಿಂದಿರುವ ಅಧ್ಯಾತ್ಮಿಕ ವಿಜ್ಞಾನವು ಸ್ವಲ್ಪ ಅರ್ಥ ವಾಗುತ್ತಾ ನನ್ನದೇನೂ ನಡೆಯುತ್ತಿಲ್ಲ ನನ್ನ ಮೂಲ ಧರ್ಮ ಕರ್ಮ ದ ಪ್ರಕಾರ ನಡೆಯೋದೇ ಜೀವನ ಎನ್ನುವ ಸತ್ಯಜ್ಞಾನ ಬರಬಹುದು.ಬಂದರೂ ನಡೆಯೋ ದಾರಿ ಇಲ್ಲದವರಿಗೇನೂ ಮಾಡಲಾಗದು.ದಾರಿಇದ್ದವರು ಅದೃಷ್ಟ ವಂತರಷ್ಟೆ. ಅದೃಷ್ಟ ನಮ್ಮ ನಡೆ ನುಡಿಯ ಮೇಲಿದೆ. ಅದು ಧರ್ಮ ಹಾಗು ಸತ್ಯದಲ್ಲಿದ್ದರೆ ನಾವು ಪರಮಾತ್ಮನೊಳಗೇ ಇರೋದನ್ನು ಕಾಣಬಹುದು ಇದೇ ಮುಕ್ತಿಯ ಮಾರ್ಗ. ಇದನ್ನು ಸಾಧ್ಯವಾದಷ್ಟು ಶೇರ್ ಮಾಡಿ. ಭಾರತೀಯರು ಎಚ್ಚರವಾದರೆ ನಮ್ಮೊಡನೆ ಬರುತ್ತಿರುವ ಪರರಿಗೂ ಜ್ಞಾನ ಬರುವುದು. ಇಲ್ಲಿ ಒಂದೇ ದೇಶದಲ್ಲಿ ಹೊಡೆದಾಟ ಮಾಡಿಕೊಂಡು ಸಾಯೋರು ಹೆಚ್ಚು.ಸಾವು ಎಲ್ಲರಿಗೂ ಇದೆ.ಕೆಲವರಿಗೆ ಜ್ಞಾನದ ನಂತರ ಬಂದರೆ ಹಲವರಿಗೆ ಅಜ್ಞಾನದಲ್ಲಿಯೇ ಜೀವ ಹೋಗುತ್ತಿದೆ. ಹೀಗಾಗಿ ಜನಸಂಖ್ಯೆಮಿತಿಮೀರಿದೆ. ಶಾಂತಿ ಹಿಂದುಳಿದಿದೆ ಕ್ರಾಂತಿಯೇ ಜೀವನವಾಗುತ್ತಿದೆ. ಇದಕ್ಕೆ ಅರ್ಥ ವಿದೆಯೆ? ಅಸುರರೊಳಗೇ ಸುರರು,ವಿದೇಶದೊಳಗೇ ದೇಶ, ಅಜ್ಞಾನದೊಳಗೇ ಜ್ಞಾನ ಅದ್ವೈತ ದೊಳಗೇ ದ್ವೈತ ಕಣ್ಣಿಗೆ ಕಾಣುತ್ತಿದ್ದರೂ ನನ್ನೊಳಗೇ ಅಡಗಿರುವ ಆತ್ಮಸಾಕ್ಷಿ ಬಿಟ್ಟು ಹೊರಬಂದರೆ ನಷ್ಟ ಯಾರಿಗೆ?
ಇದನ್ನು ಓದಿಕೊಂಡು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಎಲ್ಲಾ ನಡೆಯಬೇಕಿತ್ತು ನಡೆಯುತ್ತಿದೆ ನಡೆಯುತ್ತದೆ ನಮ್ಮ ನಡಿಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನದಲ್ಲಿ ಇದೆಯೇ ಇಲ್ಲವೆ ಎನ್ನುವ ಬಗ್ಗೆ ನಿಂತು ಆಲೋಚನೆ ಮಾಡುವ ಸ್ವತಂತ್ರ ನಮಗಿದ್ದರೆ ಸಾಕು ನಾವು ಬದಲಾಗಬಹುದು. ಆಗ ಮಕ್ಕಳೂ ಬದಲಾಗುವರು.ದೇಶವನ್ನು ಬದಲಾವಣೆ ಮಾಡಲು ಕಷ್ಟ ಪ್ರಜೆಗಳೇ ಬದಲಾಗಬಹುದಷ್ಟೆ.
No comments:
Post a Comment