ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, December 5, 2025

ತತ್ವಜ್ಞಾನದಿಂದ ಏಕತೆ

ಯಾವುದೇ ರಾಜಕೀಯ ವ್ಯಕ್ತಿ ತತ್ವದ ಪರ ನಿಲ್ಲೋದು ಕಷ್ಟ. ತತ್ವ ಎಂದರೆ ಒಂದು‌ಮಾಡೋದು. ಅದರಲ್ಲಿ ನಮ್ಮ ದೇಶದ  ಮೂರು ಮತಗಳನ್ನು ಒಂದು ಮಾಡೋದೆಂದರೆ  ದೊಡ್ಡ ಸಾಧನೆಯೇ . ಶ್ರೀ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನವೆಂದು ಆಚರಿಸಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿ  ಬಹಳ ಸಂತೋಷ ಕೊಡುತ್ತದೆ.
ಇದರ‌ಮಧ್ಯೆ ಉಳಿದ ದ್ವೈತ ವಿಶಿಷ್ಟಾದ್ವೈತ ದವರೂ‌ ಇದನ್ನು ಅಷ್ಟೇ  ಸಂತೋಷದಿಂದ. ಒಪ್ಪಿಕೊಳ್ಳಬಹುದೆ?
ದೇಶ ಒಂದೇ ಧರ್ಮ ಒಂದೇ, ದೇವನೊಬ್ಬನೆ, ಪರಮಾತ್ಮನೊಬ್ಬನೆ ಎನ್ನುವ ಅದ್ವೈತ ಸಿದ್ದಾಂತವು ಈಗಿನ ಭಾರತ ಸ್ವೀಕರಿಸಿದರೆ  ನಾವೆಲ್ಲರೂ ಒಂದೇ ಎನ್ನುವ ಸತ್ಯಕ್ಕೆ ಜಯ.
ಆದರೆ  ಮಧ್ಯವರ್ತಿಗಳು ‌ಬಿಡುವರೆ? ಈ ವಿಚಾರ ಹಿಡಿದು ಚರ್ಚೆ  ಮಾಡಬಹುದು ಆದರೆ ವಾದ ವಿವಾದವಾಗಬಾರದಷ್ಟೆ. ವಾದ ಇದ್ದರೆ ವಿವಾದವೂ ಇರುತ್ತದೆ. ವಿರೋಧ‌ಯಾಕೆ ಎಂದರೆ ನನ್ನ  ಅನಿಸಿಕೆ ಬೇರೆ .ಅನಿಸಿಕೆ ಅನುಭವ ಅನುಭವದಿಂದ ‌ಒಗ್ಗಟ್ಟು  ಬೆಳೆದರೆ ಸರಿ.ಇಲ್ಲವೆಂದರೆ  ಇನ್ನಷ್ಟು ಸಮಸ್ಯೆ. ಇಲ್ಲಿ ತತ್ವವು ಒಂದು ಮಾಡೋದಾದರೆ  ಬೇರೆ ಬೇರೆ ಎನ್ನುವುದರಲ್ಲಿ ಅರ್ಥ ಇರದು.
ಹೀಗಾಗಿ ಜ್ಞಾನದಲ್ಲಿ ಎಲ್ಲರೂ  ಒಂದೇ ಎನ್ನುವ ಹಾಗಿಲ್ಲ ಆದರೆ ನಮ್ಮ ಜ್ಞಾನದಿಂದ ಒಂದು ದೇಶವನ್ನು ಉಳಿಸಬಹುದು ಎನ್ನುವ  ವಿಚಾರದಲ್ಲಿ  ಎಲ್ಲಾ ಒಂದಾಗಿ ತತ್ವವನರಿತು ಪರಮಾತ್ಮನೆಡೆಗೆ ಸಾಗುವುದು ಉತ್ತಮ.
ಈವರೆಗೆ ಯಾವುದೇ ರಾಜಕಾರಣಿಗಳಾಗಲಿ ಧಾರ್ಮಿಕ ವರ್ಗವನ್ನು  ಸಂತೈಸುವ  ಕೆಲಸ ಮಾಡಲಾಗಿಲ್ಲದಿರೋದೆ  ನಮ್ಮ ದೇಶ ಅನ್ಯರ ವಶದಲ್ಲಿ ಸಿಲುಕಲು ಕಾರಣವಾಗಿದೆ.
ರಾಜಕೀಯ ಎಂದರೆ ಜನರನ್ನು ಆಳೋದಷ್ಟೆ ಅಲ್ಲ.ಜನರ ಜ್ಞಾನವನ್ನು  ಸದ್ಬಳಕೆ ಮಾಡಿಕೊಂಡು  ಜೀವನ ನಡೆಸಲು ಸಹಕರಿಸುವುದೇ ಸರ್ಕಾರದ  ಗುರಿಯಾಗಬೇಕಿತ್ತು. ಆದರೆ ಧಾರ್ಮಿಕ ವಿಚಾರ ಬಂದಾಗ ನಮ್ಮ ಧರ್ಮ ಅವರ ಧರ್ಮ ಎನ್ನುವ ಅಂತರದಲ್ಲಿ ಸಾಕಷ್ಟು ಅಧರ್ಮ ಗಳೇ ಜನರನ್ನು ಆಳುತ್ತಾ‌  ತತ್ವವಿಲ್ಲದ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ  ಈಗ ದೇಶ ನಿಂತಿರೋದಕ್ಕೆ  ಮೂಲ ಕಾರಣವಾದ ನಮ್ಮ ಶಿಕ್ಷಣ ವ್ಯವಸ್ಥೆ  ಇಂದಿಗೂ‌ಮಕ್ಕಳಿಗೆ ಜಾತಿ ಮತ,ಪಕ್ಷದ ರಾಜಕೀಯ ವಿಚಾರ ತಿಳಿಸುವ ಪ್ರಯತ್ನದಲ್ಲಿದೆ. ಇದರಿಂದಾಗಿ  ಅಂತರ ಬೆಳೆದಿದೆ. ಮಕ್ಕಳ ಜ್ಞಾನವನ್ನು ಗುರುತಿಸಿ ಅದಕ್ಕೆ ಸರಿಯಾದ ಶಿಕ್ಷಣ. ನೀಡಿದಾಗ ಸುಜ್ಞಾನ ವಾಗುತ್ತದೆ. ನಂತರ ವಿಜ್ಞಾನ ಜಗತ್ತನ್ನು  ಅರಿತು ಬಾಳಬಹುದು.
ಇದು ಸುಲಭವೆ ಎಂದರೆ ಹೊರನೋಟಕ್ಕೆ  ರಾಜಕೀಯದಿಂದ. ಬದಲಾವಣೆ  ಮಾಡಬಹುದೆನಿಸಿದರೂ  ಪ್ರಜೆಗಳ ಒಳಗಿನ ಅಜ್ಞಾನ  ಇದನ್ನು  ಒಪ್ಪಿಕೊಂಡಿರಲು ಕಷ್ಟ.
ಏನೇ ಆದರೂ ಅದು ನಮ್ಮ ಅಂತರಂಗದ ಶುದ್ದಿಗೆ ಪೂರಕ ಇದ್ದರೆ  ಅದರಿಂದ ಆತ್ಮಜ್ಞಾನ ವೃದ್ದಿಯಾಗಿ  ಆತ್ಮರಕ್ಷಣೆಯ ಹಾದಿ ಹಿಡಿದಾಗ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನ ಸಾಧ್ಯ. ನಾನೆಂಬುದಿಲ್ಲ ಎನ್ನುವ ಅದ್ವೈತ ವನ್ನು ನಾನು ತಿಳಿಯುತ್ತೇನೆಂದರೆ  ನಾನಿರುವಾಗ ಪರಮಾತ್ಮ ಕಾಣುವನೆ? ನನಗೆ ಪರಮಾತ್ಮನ ಸತ್ಯ ಅರ್ಥ ಆಗಿದೆ ಎಂದರೆ ಅನ್ಯರಿಗೆ ಅರ್ಥ ಮಾಡಿಸುವ ಶಕ್ತಿ ನನಗಿದೆಯೆ? ಶಕ್ತಿ ಇದ್ದರೂ ಅಧಿಕಾರವಿದೆಯೆ? ಅಧಿಕಾರ ಕೊಡುವುದಕ್ಕೂ ಜನರಲ್ಲಿ ಜ್ಞಾನವಿರಬೇಕು. ಹೀಗೇ ಒಬ್ಬರ ಹಿಂದೆ ಒಬ್ಬರು ಹೋಗಬೇಕಾದರೆ  ತತ್ವವು  ಅಗತ್ಯವಿದೆ. ‌ತಂತ್ರದಿಂದ ಜನರನ್ನು  ಒಂದು ಮಾಡಿದರೂ ತಾತ್ಕಾಲಿಕ ವಷ್ಟೆ.
ಏನೇ ಇರಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ನಮ್ಮನ್ನು ನಮ್ಮವರನ್ನು ಉಳಿಸಿ ಬೆಳೆಸಲು ಈಗ ಎಲ್ಲಾ ತತ್ವ ಸಿದ್ದಾಂತಗಳ. ಹಿಂದಿರುವ ಸತ್ಯ ಒಂದೇ ಪರಮಾತ್ಮ ಒಬ್ಬನೇ
ಎಂದಂತೆ  ನಮಗೆ  ದೇಶ ಒಂದೇ  ಆಗಿರುವುದು ಸತ್ಯವೇ ಆಗಿದೆ.
ಎಲ್ಲಾ ದೇಶದವರನ್ನು ಒಳಗೆ ಕರೆದು ಒಳಗಿದ್ದವರಿಗೆ ಕೆಲಸವಿಲ್ಲದೆ ಹೊರಗೆ ಕಳಿಸಿದರೆ  ಅವರವರ ಮೂಲ ಧರ್ಮ ಕರ್ಮಕ್ಕೆ  ಸ್ಥಾನವಿರುವುದೆ? ಇಲ್ಲದಿದ್ದರೂ  ಒಳಗಿದ್ದೇ ಸಾಧ್ಯವಾದಷ್ಟು  ಅನುಸರಿಸಲು ಉತ್ತಮ ಶಿಕ್ಷಣ ನೀಡುವುದು ಧರ್ಮ. ಭಾರತೀಯರು‌ವಿದೇಶಗಳಲ್ಲಿದ್ದು ನಾವು ಭಾರತೀಯರು ಎಂದರೆ ಅರ್ಧ ಸತ್ಯ. ನಮ್ಮಲ್ಲಿ ಭಾರತೀಯ ತತ್ವಜ್ಞಾನವಿದ್ದರೆ ಅದನ್ನು ಭಾರತದೊಳಗಿದ್ದು‌ಬೆಳೆಸಿದರೆ ಅದ್ವೈತ.  ಹೇಳೋದೊಂದು ಮಾಡೋದೊಂದು ಎಂದಾಗ ಕೇವಲ ತೋರುಗಾಣಿಕೆ.
ತೋರುಗಾಣಿಕೆಯು ತಂತ್ರವಾಗಿದ್ದರೆ ಸ್ವತಂತ್ರ ಜ್ಞಾನವಿರದು.

ಶ್ರೀ ಶಂಕರಾಚಾರ್ಯರು  ಅಧ್ವೈತ ಸಂಸ್ಥಾಪನಾಚಾರ್ಯರು.
ಅಖಂಡ ಭಾರತವನ್ನು ಧಾರ್ಮಿಕವಾಗಿ ಒಂದು ಮಾಡುವ ಮೂಲಕ ನಾಲ್ಕು ದಿಕ್ಕುಗಳಲ್ಲಿ  ಮಠಸ್ಥಾಪಿಸಿ ಜ್ಞಾನದೇವತೆಯನ್ನು  ಎತ್ತಿ ಹಿಡಿಯುವುದೆಂದರೆ  ಅಂದಿನ ಕಾಲದಲ್ಲಿ ಸುಲಭವಿರಲಿಲ್ಲ  ಇವೆಲ್ಲವೂ ಸ್ವಯಂ ಶಂಕರನೇ  ಆಚಾರ್ಯರ  ರೂಪದಲ್ಲಿ ನಿಂತು  ನಡೆಸಿರೋದೆಂದರೆ  ಇದು ಅದ್ವೈತ ವಾಗುತ್ತದೆ.
ಹಾಗೆಯೇ ಭಗವದ್ಗೀತೆ ಯಲ್ಲಿ  ಶ್ರೀ ಕೃಷ್ಣನ ವಿಶ್ವ ರೂಪ ದರ್ಶನ ವೂ ಅದ್ವೈತ ವನ್ನೇ ತೋರಿಸುತ್ತದೆ. ಒಟ್ಟಿನಲ್ಲಿ ಒಂದು ಧರ್ಮ ರಕ್ಷಣೆಗಾಗಿ  ಭಗವಂತ ಯಾವುದೇ ರೂಪ ತಳೆದು ನಿಲ್ಲಬಹುದೆನ್ನುವಾಗ ಎಲ್ಲರೂ ಎಲ್ಲವೂ ಅವನೇ ಆಗಿರುವಾಗ ತತ್ವವಾಗುತ್ತದೆ. ಅಂತರ ಮತ್ತು ಬೇಧಗಳು ಭಿನ್ನಾಭಿಪ್ರಾಯ ಹೆಚ್ಚಿಸಿದಷ್ಟೂ  ಸಮಸ್ಯೆ ಮಿತಿಮೀರಿ  ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ಆಗದೆ ಅತೃಪ್ತ ಸ್ಥಿತಿಗೆ ತಲುಪಿ ಅತಂತ್ರಸ್ಥಿತಿಗೆ ತಲುಪುತ್ತದೆ.

ಯಾವುದೇ‌ ಕಾರಣಕ್ಕೂ ಅದ್ವೈತ ಧ್ವೈತ ವಿಶಿಷ್ಟಾದ್ವೈತ ದಲ್ಲಿ  ಬೇಧವಿರದು. ಮಾನವರಿಗೆ ಅದರ ಅನುಭವ ಆಗದಿದ್ದರೆ ಅದನ್ನು ವಿರೋಧಿಸುವುದರಿಂದ ಜ್ಞಾನ ಬೆಳೆಯದು.
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮರನ್ನು  ಒಂದು ಮಾಡೋದು  ಕಷ್ಟವಿದೆ. ಅದರಲ್ಲಿ ಭಾರತೀಯರು  ತತ್ವಕ್ಕೆ ಬೆಲೆಕೊಡುವುದು ಧರ್ಮ ಎನ್ನುವರು. ತಂತ್ರ ಹೊರಗಿನಿಂದ ‌ಬೆಳೆದಿರಬಹುದಷ್ಟೆ. ಆದರೆ  ಒಳಗಿರುವ ದೈವೀಕ ಶಕ್ತಿ ನಮ್ಮನ್ನು  ದೈವತ್ವದೆಡೆಗೆ ಕರೆದೊಯ್ಯುವ ಸಾಧನ. ಹೀಗಾಗಿ ತತ್ವದಿಂದ ದೇಶೋಧ್ದಾರ ಆತ್ಮೋಧ್ದಾರ ಧರ್ಮದ ಉದ್ದಾರ ಆಗಿರೋದನ್ನು ಪುರಾಣಗಳೇ ತಿಳಿಸಿವೆ.
ಭೂಮಿ  ಆಕಾಶದಲ್ಲಿ ತಿರುಗುತ್ತಿದೆ. ಭೂಮಿಯ‌ಮೇಲೆ‌ಮನುಕುಲ ನಿಂತಿದೆ.ಮಾನವನೊಳಗೆ ದೈವತ್ವ ಅಡಗಿದೆ. ಆ ದೈವತ್ವದೆಡೆಗೆ ಹೋದಾಗ ಪರಮಾತ್ಮನ  ದರ್ಶನ ವಾಗಿದೆ ಎಂದರೆ  ಹೋಗದೆ ಹೊರಗೆ ಉಳಿದರೆ ಅನರ್ಥಕ್ಕೆ ಕಾರಣವಾಗಿದೆ.‌ ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ,ಭಾರತೀಯರು,ಕನ್ನಡಿಗರು...ಹೀಗೇ ಪ್ರಚಾರ ಮಾಡಿದಾಕ್ಷಣ ನಮ್ಮ  ಅಂತರಂಗ ಶುದ್ದಿ ಆಗಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ.ಯಾವಾಗ ನಮ್ಮವರನ್ನೇ ಅಧರ್ಮದಿಂದ ಆಳಲು ಹೊರಟು ಅಜ್ಞಾನದ ಶಿಕ್ಷಣ ಬೆಳೆಯಿತೋ ಅದೇ ಇಂದಿಗೂ  ಭಾರತಮಾತೆಗೆ‌  ನುಂಗಲಾರದ ತುತ್ತಾಗಿದೆ.
ದೇಶಭಕ್ತಿಯಿಲ್ಲದ ದೇವರ ಭಕ್ತರು  ಬೇರೆ ಬೇರೆಯಿರುವರು.ಆದರೂ ಇಡೀ ಜಗತ್ತನ್ನು ತನ್ನೊಳಗೇ ಇಟ್ಟುಕೊಂಡು  ಆಡಿಸುವ ಪರಮಾತ್ಮನಿಗೇನೂ ಸಮಸ್ಯೆ ಯಿರದು. ಪಾಪಪುಣ್ಯಗಳ ಗಂಟನ್ನು ಹೊತ್ತು ಹೋಗೋದು ಜೀವಾತ್ಮನೇ ಅಲ್ಲವೆ?  ಸಾಮಾನ್ಯ ಜ್ಞಾನವಿಲ್ಲದ ಮಾನವನಿಗೆ  ಅವನೊಳಗೇ ಇರುವ ಪರಮಾತ್ಮನ ದರ್ಶನ ಆಗಲಾರದು.

ಬದಲಾವಣೆ  ಜಗದ ನಿಯಮ. ಇದು ತತ್ವದೆಡೆಗೆ ನಡೆದರೆ ಆತ್ಮನಿರ್ಭರ ಭಾರತದ ಕನಸು ನನಸಾಗುತ್ತದೆ.
ನಮೋ ನಮ:

No comments:

Post a Comment