ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, December 19, 2025

ಜಗದಾದಿಜ: ಜಗತ್+ಆದಿ+ ಜ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ | ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ॥೧೬॥
ಇಂದಿನ ನಾಮ -

೧೪೭. ಜಗದಾದಿಜಃ ಜಗತ್ತಿನಲ್ಲಿ ಮೊತ್ತಮೊದಲು ಬಂದವನು.

ವಿವರಣೆ : ಜಗತ್+ಆದಿ+ಜ - ಹೀಗೆ ಮೂರು ಶಬ್ದಗಳು ಸೇರಿ ಒಂದು ನಾಮ ಆದದ್ದು. ಈ ಲೋಕಕ್ಕೆ ಮೊದಲು ಬಂದವನು ಎಂದರ್ಥ .ಶೇಷನ ಮೇಲೆಯೋ, ವಟಪತ್ರದ ಮೇಲೆಯೋ ರಾತ್ರಿಯಲ್ಲಿ ಅಂದರೆ ಪ್ರಲಯಕಾಲದಲ್ಲಿ ಮಲಗಿದವನು ನೀನು. ಬೆಳಗಾಗುತ್ತ ಬಂತು. ಸೃಷ್ಟಿ ಮಾಡಬೇಕೆಂದು ತೋರಿತು. ಎಲ್ಲರನ್ನು ಎಬ್ಬಿಸೋಣ ಅಂತ ತೋರಿತು. ಮಲಗಿದವರನ್ನು ಎಬ್ಬಿಸುವ ಕೆಲಸ ದೇವರದ್ದೇ. ಅದಕ್ಕಾಗಿಯೇ ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ ಹಾಕುವುದು. ಮಲಗಿದವರೆಲ್ಲ ಏಳಲಿ ಎಂದು. ಮೊದಲು ಕೃಷ್ಣ ದೇವರು ಏಳುವುದು. ಅದರಿಂದಾಗಿ ಅಕ್ಕಪಕ್ಕದವರೆಲ್ಲ ಏಳಲಿಕ್ಕೆ ಪ್ರಾರಂಭಿಸುವರು.

ಹೀಗೆ ಸೃಷ್ಟಿಯ ಸುಪ್ರಭಾತದಲ್ಲಿ ಎಲ್ಲರನ್ನೂ ಎಬ್ಬಿಸುವುದಕ್ಕಾಗಿ ದೇವರು ಮೊದಲು ತಾನು ಎದ್ದು ಬಂದ. ಹಾಗೆ ಎದ್ದು ಬಂದ ರೂಪವೇ "ಪುರುಷ'. ನಾರಾಯಣರೂಪದಿಂದ ಮಲಗಿದ ಪರಮಾತ್ಮ ಪುರುಷರೂಪದಿಂದ ಎದ್ದು ಬರುವನು. ಜಗತ್ತಿನ ಸೃಷ್ಟಿಗೆ ಅಡಿ ಇಡುವಾಗ ಮೊದಲು ಬರುವವನು ಭಗವಂತ. ಎಲ್ಲರಿಗಿಂತ ಹಿರಿಯ, ಮೊದಲಿಗ ಎಂಬುದು ಒಟ್ಟು ಅಭಿಪ್ರಾಯ. ಚತುರ್ಮುಖನಿಗಿಂತಲೂ ಮೊದಲು ಬಂದವನು. ಆದುದರಿಂದ ದೇವರು ಯಾರಿಂದ ಬಂದ? ಎಂಬ ಪ್ರಶ್ನೆಗೆ ಅವಕಾಶ ಇಲ್ಲ. ಯಾರೂ ಇಲ್ಲದಿದ್ದಾಗ ತನ್ನಿಂದಲೇ ಹೊರಬಂದವನು ಅವನು.

ಹರಿಹರರಲ್ಲಿ ಬೇಧವಿಲ್ಲ ಎನ್ನುವುದು  ಹರಿ ಬೇರೆ ಹರ ಬೇರೆ ಎನ್ನುವುದು. ಬ್ರಹ್ಮಾಂಡದ ಎಲ್ಲಾ ಆಗುಹೋಗುಗಳಿಗೆ ಪರಮಾತ್ಮನೇ ಕಾರಣವೆನ್ನುವುದು  ಎಲ್ಲದ್ದಕ್ಕೂ ನಾನೇ ಕಾರಣವೆನ್ನುವುದು, ನಾನೇ  ಎಲ್ಲರನ್ನೂ ಆಳುವುದು   ಎನ್ನುವ ಅಹಂಕಾರ  ನಾನೆಂಬುದಿಲ್ಲ ಎನ್ನುವ ನಿರಹಂಕಾರ
ಇವೆಲ್ಲವೂ ಪರಮಾತ್ಮನೇ ಶ್ರೇಷ್ಠ ಎನ್ನುವ ಸತ್ಯದೆಡೆಗೆ ನಡೆದಿದೆಯೆ ಅಥವಾ ನಾನೇ ಸತ್ಯ ಎನ್ನುವ ಕಡೆಗಿದೆಯೆ?
ಇಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹಲವು. ಆದರೆ ನಾನಿಲ್ಲ ದೇವರೆ ಎಲ್ಲಾ ಎನ್ನುವ ಸತ್ಯ ಒಂದೇ. ಹಾಗಾಗಿ ಹಲವರಿಗೆ ಒಳಗಿರುವ ಸತ್ಯದ ಅರಿವಾಗದೆ ಹೊರಗಿನ ಸತ್ಯವೇ ಕಣ್ಣಿಗೆ ಕಾಣುತ್ತಾ ಆಗಿ ಹೋಗಿದ್ದನ್ನು ಕೆದಕಿ ಆಗಬಾರದ್ದನ್ನು ಸ್ವಾಗತಿಸುವ  ಮಟ್ಟಿಗೆ ಅಜ್ಞಾನ ಆವರಿಸಿದೆ. 
ಜಗತ್ತಿನಲ್ಲಿ ಮೊಟ್ಟ ಮೊದಲು ಬಂದವನು ಪರಮಾತ್ಮ ಎಂದಾಗ  ನಾವ್ಯಾರು? ಅವನ ಪ್ರತಿಬಿಂಬ ಎಂದಾಗ  ನನಗಿಂತ ಮೊದಲು ಬಂದವರ ಬಗ್ಗೆ ಅರಿವಿರೋದು ಅಗತ್ಯವಿದೆ. ‌ಕೇವಲ ರಾಜಕೀಯ ದಲ್ಲಿ ಮೈ ಮರೆತರೆ  ಮೂಲ ಸತ್ಯ ಅರಿವಾಗದು. ಹೀಗಾಗಿ ತನ್ನ ತಾನರಿಯದೆ  ಅನ್ಯರನ್ನು  ಒಲಿಸಿಕೊಂಡು ತನ್ನವರನ್ನೇ  ದೂರ ಮಾಡಿಕೊಂಡವರಿಗೆ  ಪರಮಾತ್ಮ ಅರ್ಥ ವಾಗದೆ ಅಂತರ ಬೆಳೆಯಿತು. ಆ ಅಂತರವೇ ಅವಾಂತರ ಸೃಷ್ಟಿ ಮಾಡುತ್ತಾ ಮೂಲ ಬ್ರಹ್ಮನನ್ನು  ಅಪಾರ್ಥ  ಮಾಡಿಕೊಂಡು ಆಳಲು ಸಹಕರಿಸಿತು. ಸಹಕಾರದ ಬಲವೇ  ಅಹಂಕಾರ ಕ್ಕೆ ದಾರಿ ಆಯಿತು.ಆ ಅಹಂಕಾರ ದಿಂದ ಸ್ವಾರ್ಥ  ಸೇರಿಕೊಂಡು ಸ್ವತಂತ್ರ ಜ್ಞಾನ ಮರೆಯಾಯಿತು. ಮರೆಯಾದವರು  ಮತ್ತೆ ಜನ್ಮ ಪಡೆದರೂ  ಗುರುತಿಸುವ. ಜ್ಞಾನವಿಲ್ಲದೆ ಅಜ್ಞಾನ ಬೆಳೆಯಿತು. ಅಜ್ಞಾನ ಎಂದರೆ ಅಸತ್ಯದ ತಿಳುವಳಿಕೆಯಾಗಿದೆ.
ಯಾವುದು ಸತ್ಯ? ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ? ಸತ್ಯವಿದ್ದರೂ ತಾತ್ಕಾಲಿಕ ವಷ್ಟೆ.ಶಾಶ್ವತವಾಗಿರುವ ಯಾವುದಕ್ಕೂ ಅಂಟಿಕೊಳ್ಳದೆ ಸ್ವತಂತ್ರ ವಾಗಿದ್ದು ಜೀವಕೋಟಿಗಳ ಒಳಗಿರುವ ಆ ಮೂಲ ಪುರುಷ ಪರಮಾತ್ಮನೇ ಮೊಟ್ಟಮೊದಲು ಬಂದವನು.
ಜಗದಾದಿಜ:
ಪರಮಾತ್ಮನ ಒಂದೊಂದು ನಾಮವೂ ಅದ್ವೈತ ಸತ್ಯವನ್ನು ತಿಳಿಸುತ್ತದೆ. ‌ಆದರೆ ಅದು ಕಣ್ಣಿಗೆ ಕಾಣದು ಅನುಭವಕ್ಕೆ ಬರೋದೂ ಕಷ್ಟವಾದ್ದರಿಂದ ಮಾಯೆಯ ವಶದಲ್ಲಿ ಮನುಕುಲ  ಭೂಮಿಯನ್ನು ತನ್ನ ವಶದಲ್ಲಿ ಪಡೆಯಲು ಹೆಣವಾಗುತ್ತಿದ್ದಾನೆಂದರೆ ಭೂಮಿ ಪರಮಾತ್ಮನ ವಶವಿರೋವಾಗ ಹುಲುಮಾನವನಿಗೆ ಸಿಗುವಳೆ?
ಹೃದಯದ ಚಿಕಿತ್ಸೆ ಗೆ ಕೊಡುವ ಹಣವನ್ನು ಹೃದಯವಂತಿಕೆ ಬೆಳೆಸೋ ಶಿಕ್ಷಣಕ್ಕೆ ನೀಡಿದ್ದರೆ  ಭೂಮಿಯ ಋಣ ತೀರಿಸುವ ಸೇವಕನಾಗಿ ಪರಮಾತ್ಮನೆಡೆಗೆ ಸಾಗಬಹುದಿತ್ತು. 
ಕಲಿಕೆಯೇ ಋಣದೆಡೆಗೆ ಸಾಗಿರುವಾಗ  ಆ ಭಾರಹೊತ್ತವನಿಗೆ ಮೇಲಿರುವ  ಮೂಲ ಪುರುಷ ಅರ್ಥ ವಾಗೋದಿಲ್ಲ. 
ಕಾಲುಬುಡ ನೋಡದೆ ಮೇಲಕ್ಕೆ ನೋಡುತ್ತಾ ಓಡಿದರೆ ಎಡವೋದು ಸಹಜ. ಭೂಮಿಯ ಸತ್ಯ ಸತ್ವ ತತ್ವ ಬಿಟ್ಟು ಆಕಾಶದೆತ್ತರ ಹಾರುವ ವಿಜ್ಞಾನದಿಂದ ಆತ್ಮಕ್ಕೆ ತೃಪ್ತಿ ಸಿಗದು.
ಇಷ್ಟೇ ಜೀವನದ ಸತ್ಯ.ಇದನ್ನು  ನಾವೇ ಒಳಗಿದ್ದು ತಿಳಿದು ನಡೆಯಬೇಕಿದೆ. ಹೊರಗೆ ಹೋದರೆ ಅತಂತ್ರ ಜೀವನದಲ್ಲಿ  ಹಿಂದೆ ಬರಲೂ ಕಷ್ಟ ಮುಂದೆ ಹೋದರೂ ನಷ್ಟ.

No comments:

Post a Comment