ಮಾನವರು ಯಾರನ್ನೂ ಆಳಲು ಒಡೆಯನಾಗಲು ಬಯಸುವುದು ಸಹಜ ಗುಣ ಆದರೆ ನಮ್ಮನ್ನು ಆಳುತ್ತಿರುವವನೊಬ್ಬ ಮೇಲಿದ್ದಾನೆನ್ನುವ ಅರಿವಿದ್ದರೆ ನಾವು ನಮ್ಮ ಹಿಡಿತದಲ್ಲಿದ್ದು ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಳ್ಳೆಯ ಹಾಗು ಕೆಟ್ಟ ಶಕ್ತಿಗಳೆರಡೂ ಒಳಗೇ ಇದ್ದು ಜೀವವನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದ್ದರೂ ಒಮ್ಮೆ ಜೀವ ದೇಹ ಬಿಟ್ಟು ಹೋಗೋದೇ ಎನ್ನುವ ಅರಿವಿದ್ದರೆ ನಮ್ಮನ್ನು ನಾವರಿತು ಒಳ್ಳೆಯದಕ್ಕೆ ಸಹಾಯ ಮಾಡಿಕೊಂಡು ಯಾರನ್ನೂ ಆಳದೆ ಸ್ವತಂತ್ರ ಜೀವನ ನಡೆಸಬಹುದು. ಇದಕ್ಕೆ ಯೋಗ ಅಗತ್ಯವಿದೆ.
ಪರಮಾತ್ಮನ ಸತ್ಯವರಿಯದೆ ಜೀವಾತ್ಮನಿಗೆ ಯೋಗ ಸಿಗದು. ಒಟ್ಟಿನಲ್ಲಿ ತನ್ನವರನ್ನೇ ತನ್ನತನವನ್ನೇ ಮರೆತು ಹೊರಗೆ ಆಳುವೆನೆಂದರೆ ಅದು ಅಜ್ಞಾನವಾಗುತ್ತದೆ. ಅದಕ್ಕೆ ತಕ್ಕಂತೆ ಅಸುರಿಗುಣವೂ ಸೇರುತ್ತದೆ.ಇದರಿಂದಾಗಿ ಅಧರ್ಮ ಅನ್ಯಾಯ ಅಸತ್ಯಗಳು ಹೆಚ್ಚಾದರೆ ತಾನೇ ಆಳಾಗಿರುವ ಸತ್ಯ ತಿಳಿಯದೆ ಜೀವ ಹೋಗುತ್ತದೆ.
ಯಾರನ್ನೇ ಆಗಲಿ ಅತಿಯಾಗಿ ಆಳಲೂಬಾರದು ಆಳಿಸಿಕೊಂಡಿರಲೂಬಾರದು.ಭೂಮಿಮೇಲೆ ನಿಂತು ಭೂಮಿಯೇ ನನ್ನದು ಎಂದರೆ ಹೇಗೋ ಹಾಗೆಯೇ ಸ್ತ್ರೀ ಶಕ್ತಿಯ ಸಹಾಯ ಪಡೆದು ಸ್ತ್ರೀ ಯನ್ನೇ ದುರ್ಭಳಕೆ ಮಾಡಿಕೊಂಡು ಆಳುವುದು ಅಜ್ಞಾನ. ನಮ್ಮ ಸ್ವಂತ ಬುದ್ದಿ ಜ್ಞಾನ ಕೇವಲ ಸ್ವಲ್ಪ ಆದರೂ ನಮ್ಮ ಜೀವಕ್ಕೆ ಅದೇ ಅನ್ನ ಕೊಡಬಹುದು. ಇದನ್ನು ಬಿಟ್ಟು ಅನ್ಯರ ಬುದ್ದಿ ಜ್ಞಾನವನ್ನು ನನ್ನದೆಂದರೆ ನನ್ನ ಆಳುತ್ತಿರುವುದೇ ಅನ್ಯರು ನಾನು ಹೇಗೆ ಸ್ವತಂತ್ರ? ಇತ್ತೀಚಿನ ದಿನಗಳಲ್ಲಿ ಯುವಶಕ್ತಿ ಹೊರಗಿನ ರಾಜಕೀಯದಲ್ಲಿ ಅನ್ಯರ ವ್ಯವಹಾರದಲ್ಲಿ ಮುಳುಗಿ ಹಣಗಳಿಸಿ ತನ್ನ ಸಂಸಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಹೆಚ್ಚಾಗಿದೆ. ಕಾರಣ ತನ್ನ ನಂಬಿ ಬಂದಿರುವ ಪತ್ನಿಯನ್ನು ಮತ್ತು ನನ್ನ ಸಾಕಿಸಲಹಿದ ಪೋಷಕರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಿರುವುದು. ಹಣದಿಂದ ಯಾವುದೇ ಆತ್ಮಾವಲೋಕನ ಆಗೋದಿಲ್ಲ. ಹಣವನ್ನು ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇವೆ ಮಾಡುವ ಮೂಲಕ ಜ್ಞಾನ ಬರುತ್ತದೆ. ಹಾಗಾದರೆಲಕ್ಮಿ ಎಂದರೆ ಹಣ ಮಾತ್ರವೆ?
ಮಹಾವಿಷ್ಣುವಿನ ಹೃದಯವನ್ನು ಗೆದ್ದಿರುವ ಲಕ್ಮಿಗೆ ಹೃದಯವಂತಿಕೆ ಅಗತ್ಯವಿದೆ. ಎಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಗೌರವವಿರುವುದೋ ಅಲ್ಲಿ ಜ್ಞಾನ ಲಕ್ಮಿಯ ವಾಸವಿರುತ್ತದೆ. ಜ್ಞಾನದ ನಂತರವೇ ಹಣದ ಸದ್ಬಳಕೆ ಹೀಗಾಗಿ ಯಾರನ್ನೂ ಆಳೋದಕ್ಕೆ ಹಣವನ್ನು ವ್ಯರ್ಥ ಮಾಡುವಬದಲಾಗಿ ತನ್ನನ್ನು ಆಳಿಕೊಳ್ಳಲು ಪರಮಾತ್ಮನ ಸೇವಾಕಾರ್ಯಕ್ಕೆ ಹಣ ಬಳಸಿದರೆ ನಿಜವಾದ ಅರಸನಂತೆ ಬದುಕಬಹುದು.
ಹಿಂದಿನ ಕಾಲದಲ್ಲಿದ್ದ ಪತಿವ್ರತೆಯರಾಗಲಿ ಧರ್ಮ ಪತ್ನಿಯರಾಗಲಿ ಪತಿಯಲ್ಲಿ ದೈವತ್ವವನ್ನು ಗುರುತಿಸುವಷ್ಟು ಜ್ಞಾನ ಪಡೆದಿದ್ದರು. ಈಗ ಪತಿಯೇ ದಾರಿತಪ್ಪಿದ ಹಳಿಯಾಗಿದ್ದು ಕೇವಲ ಆಸ್ತಿ ಅಂತಸ್ತು ಸೌಂದರ್ಯ ದಿಂದ ಸ್ತ್ರೀ ಯನ್ನು ಅಳೆದು ಆಳಲು ಹೋದರೆ ಅಧರ್ಮ ವಾಗುತ್ತದೆ. ಸ್ತ್ರೀ ಶಕ್ತಿಯನ್ನು ಯಾವತ್ತೂ ಅಜ್ಞಾನದಿಂದ ಕಡೆಗಣಿಸದೆ ಅವಳ ಜ್ಞಾನವನ್ನು ಗೌರವಿಸುವುದರಿಂದ ಮುಂದೆ ಬರುವ ಆಪತ್ತಿನಿಂದ ಪಾರಾಗಬಹುದು.
ಸ್ತ್ರೀ ಯೂ ಹಾಗೆ ಪತಿಯ ಆಂತರಿಕ ಗುಣಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಸಹಾಯ ಮಾಡಿದರೆ ಧರ್ಮದಿಂದ ಸದ್ಗತಿ. ಯಾವಾಗ ಪತಿಯ ಅಧರ್ಮ ಅನ್ಯಾಯಕ್ಕೆ ಬೆಂಬಲವಾಗಿ ನಿಲ್ಲುವಳೋ ದುರ್ಗತಿ ಅನುಭವಿಸಲೇಬೇಕು. ಇದನ್ನು ಕರ್ಮ ಫಲ ಎನ್ನುವರು. ಕಣ್ಣಿಗೆ ಕಾಣದ ಸತ್ಯವನ್ನು ಅರಿಯಲಾಗದವರಷ್ಟೆ ಈ ಆಳುವ ಅರಸನಾಗುವ ಆಸೆಗೆ ಬಲಿಪಶುವಾಗೋದು.ಹಾಗಾದರೆ ರಾಜಕೀಯವಿಲ್ಲದೆ ಭೂಮಿನಡೆದಿದೆಯೆ? ಭೂಮಿ ನಡೆದಿರೋದೇ ರಾಜಕೀಯದಲ್ಲಿ ಆದರೆ ಅದರಲ್ಲಿ ಸತ್ಯ ಧರ್ಮ ವಿರಬೇಕಿದೆ.
ಇದಕ್ಕೆ ರಾಜರಿಗೆ ಧಾರ್ಮಿಕ ಪ್ರಜ್ಞೆ ಇರಬೇಕು. ಅಂತಹ ಶಿಕ್ಷಣ ಗುರುಹಿರಿಯರು ನೀಡಿರಬೇಕು. ಇಲ್ಲದಿದ್ದರೆ ಸಂಸಾರದಲ್ಲಿ ಕೇವಲ ರಾಜಕೀಯವೇ ಎದ್ದು ಕಾಣುತ್ತದೆ.ತನ್ನ ತಪ್ಪು ಅರ್ಥ ವಾಗದ ಮನಸ್ಸುಗಳಿಂದ ಇನ್ನಷ್ಟು ತಪ್ಪು ನಡೆದಾಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು. ತಪ್ಪು ಮಾಡೋದು ಸಹಜ ಆದರೆ ಅದನ್ನು ಸರಿ ಎಂದು ವಾದಿಸದೆ ಸರಿಪಡಿಸಿಕೊಂಡರೆ ಅದೇ ನಮ್ಮ ಸಾಮ್ರಜ್ಯಸ್ಥಾಪನೆಗೆ ಬಂಡವಾಳವಾಗುತ್ತದೆ.
ಯಾರನ್ನು ಯಾರೋ ಆಳುವುದರಲ್ಲಿ ಅರ್ಥ ವಿರದು. ಒಟ್ಟಿನಲ್ಲಿ ಆಳುವವನು ಆಳಿಸಿಕೊಳ್ಳುವವನು ಒಂದೇ ಭೂಮಿಯನ್ನು ಆಳಬಹುದೆ? ರಾಜಕೀಯ ಎಂದರೆ ಇದೆಯೆ?
ರಾ ರಾವಣ ಜ ಜರಾಸಂಧ ಕೀ ಕೀಚಕ ಯ ಯಮ
ರಾವಣನಂತಹ ಮಹಾಜ್ಞಾನಿ ಶಿವಭಕ್ತ ಒಂದು ಸ್ತ್ರೀ ಯನ್ನು ಅಪಹರಿಸಿದ ಫಲವೇ ಯಮನ ದರ್ಶನಕ್ಕೆ ಕಾರಣವಾಯಿತು. ಹಾಗೆ ಜರಾಸಂಧನೂ ಒಂದು ರಾಕ್ಷಸ ಸ್ತ್ರೀ ಇಂದ ಪುನರ್ಜನ್ಮ ಪಡೆದರೂ ಅಜ್ಞಾನದೆಡೆಗೆ ನಡೆಯುತ್ತಾ ಅಸುರನಾದ ಅಂದರೆ ಅಹಂಕಾರ ದ ಅಮಲಿನಲ್ಲಿಯೇ ಮರಣಿಸಿದ .ಕೀಚಕನೂ ದ್ರೌಪದಿಯನ್ನು ಕೆಣಕಿ ಮರಣ ಹೊಂದಿದ ಎಲ್ಲರಿಗೂ ಕೊನೆಯಲ್ಲಿ ಯಮನ ದರ್ಶ ನವಾಗಿರೋದು ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡಿರುವುದು ಕಾರಣವೆಂದರೆ ಭೂಮಿ ತಾಯಿ, ಹೆತ್ತತಾಯಿ,ಸ್ತ್ರೀ ಶಕ್ತಿಯನ್ನು ಯಾರು ಸರಿಯಾಗಿ ಅರಿತು ಗೌರವಿಸಿ ಸಂಸಾರದ ಜವಾಬ್ದಾರಿ ಹೊತ್ತು ಧರ್ಮದಲ್ಲಿ ನಡೆಯುವರೋ ಅವರಿಗೆ ಸದ್ಗತಿ.
ಶ್ರೀ ರಾಮಚಂದ್ರನಂತೆ ರಾಜನಾಗಿಯೂ ಸಾಮಾನ್ಯ ಪ್ರಜೆಯಂತೆ ರಾಜ್ಯಭಾರ ನಡೆಸೋದು ಕಷ್ಟ. ಕಲಿಯುಗದಲ್ಲಿ ಕಲಿಕೆಯೇ ಹೊರಮುಖ ಆಗಿರುವಾಗ ಅಜ್ಞಾನ.ಎಂದರೆ ಸತ್ಯದ ತಿಳುವಳಿಕೆ ,ಕಲಿಕೆ ಇಲ್ಲದೆ ಭೂಮಿಯನ್ನು ಆಳುವುದಾಗುತ್ತದೆ.ಇದಕ್ಕೆ ಸ್ವಯಂ ಸ್ತ್ರೀ ಶಕ್ತಿಯ ಬೆಂಬಲ ಸಹಕಾರ ಸಿಕ್ಕಿದರೆ ಮುಗಿಯಿತು ಕಥೆ.
ಎಲ್ಲಿಯವರೆಗೆ ಗೃಹಲಕ್ಮಿ ಗೃಹಿಣಿಯಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸನಾತನ ಧರ್ಮ ರಕ್ಷಣೆಯಾಗದು. ಅಂದರೆ ಸ್ತ್ರೀ ಸತ್ಯಜ್ಞಾನಕ್ಕೆ ಮನೆಯೊಳಗೆ ಬೆಲೆಯಿರುವುದಿಲ್ಲವೋ ಅಲ್ಲಿ ಸಂತೋಷ,ನೆಮ್ಮದಿ ತೃಪ್ತಿಇರದು. ಮಿಥ್ಯಜ್ಞಾನ ಇಂದು ಮಿತಿಮೀರಿದ ಪ್ರಭಾವದಿಂದಾಗಿ ಮನೆಯೊಳಗೆ ವಸ್ತುಗಳು ಸೇರಿದೆ ವಾಸ್ತು ಪುರುಷನಿಲ್ಲ.
ಇದು ವಾಸ್ತವ ಸತ್ಯ. ಇದಕ್ಕೆ ಪರಿಹಾರ ಸತ್ಯಜ್ಞಾನದ ಶಿಕ್ಷಣವೇ ಹೊರತು ಇನ್ನಷ್ಟು ಮಿಥ್ಯವನ್ನರಿತು ಮುಂದೆ ನಡೆಯೋದಲ್ಲ. ಒಟ್ಟಿನಲ್ಲಿ ಸತ್ಯವಿಲ್ಲದ ಕಡೆ ಧರ್ಮ ವಿರದು.ಧರ್ಮ ಇರದ ಕಡೆ ಶಾಂತಿಯಿರದು. ಶಾಂತಿಯೇ ಇಲ್ಲದ ಜೀವಾತ್ಮನಿಗೆ ಮುಕ್ತಿ ಸಿಗದು.
ಹಿಡಿತವಿರಲಿ ಆದರೆ ಅದರಲ್ಲಿ ಧರ್ಮವಿರಲಿ. ಇತಿಮಿತಿಯಿರಲಿ. ಅತಿಯಾದರೆ ಗತಿಗೇಡು.
No comments:
Post a Comment