🌹 *ಸ್ಪೂರ್ತಿ ಕಿರಣ* 🌹
*ಜಗತ್ತಿನ ಭಾಗ್ಯವಂತ ವ್ಯಕ್ತಿ ಯಾರೆಂದರೆ.ಅವನ ಹತ್ತಿರ ಆಹಾರ ಜೊತೆ ಹಸಿವು ಇರಬೇಕು.ಹಾಸಿಗೆ ಜೊತೆ ನಿದ್ರೆ ಇರಬೇಕು.ಹಣದ ಜೊತೆ ಧರ್ಮ ಇರಬೇಕು.ಜೀವನದಲ್ಲಿ ಶಾಂತವಾಗಿರಬೇಕೆಂದರೆ ಮರೆಯಲಾಗದ ವ್ಯಕ್ತಿಗಳನ್ನು ಕ್ಷಮಿಸಿಬಿಡಬೇಕು,ಕ್ಷಮಿಸಲಾಗದ ವ್ಯಕ್ತಿಗಳನ್ನು ಮರೆತುಬಿಡಬೇಕು*.*
ಭಾಗ್ಯ ಹೊರಗಿನ ಸರ್ಕಾರದಿಂದ ಸೇರೋದೇ ಬೇರೆ ಒಳಗಿನ ಸರ್ಕಾರದಿಂದ ಸೇರೋದೆ ಬೇರೆ. ಒಂದು ಭೌತಿಕದೆಡೆಗೆ ನಡೆಸಿದರೆ ಇನ್ನೊಂದು ಅಧ್ಯಾತ್ಮದೆಡೆಗೆ ನಡೆಸುತ್ತದೆ.ಒಂದು ಸಾಲ ಬೆಳೆಸಿದರೆ ಇನ್ನೊಂದು ಸಾಲದಿಂದ ಬಿಡುಗಡೆಗೊಳಿಸುತ್ತದೆ.ಇಲ್ಲಿ ಸರ್ಕಾರ ಎಂದರೆ ಸಹಕಾರ ಎಂದರ್ಥದಲ್ಲಿ ಮಾನವನಿಗೆ ಬೇಕಾಗಿದ್ದೆಲ್ಲ ಸುಲಭವಾಗಿ ಹೊರಗೆ ಹಾಗು ಒಳಗೆ ಕೊಡುವವರು ಇದ್ದಾಗ ಸ್ವಾರ್ಥ ಅಹಂಕಾರ ಬೆಳೆದು ಅತಿಆಸೆಯ ದಾಸರಾಗಿ ಸಾಲದ. ಶೂಲದಲ್ಲಿ ಜೀವಾತ್ಮನರಳುವುದು ಸಹಜ.ಸಾಲ ತೀರಿಸದೆ ನಿದ್ರೆ ಬರದು.ನಿದ್ರೆ ಬರದೆ ಆಹಾರ ಸೇವಿಸಿದರೆ ಜೀರ್ಣ ವಾಗದು. ಜೀರ್ಣವಾಗದೆ ಆರೋಗ್ಯ ವೃದ್ದಿಯಾಗದು. ಆರೋಗ್ಯ ಭಾಗ್ಯವೇ ಎಲ್ಲದಕ್ಕಿಂತ ಶ್ರೇಷ್ಠ. ಆದರೆ ಇದನ್ನು ಹೊರಗಿನ ಔಷಧದಿಂದ ಸರಿಪಡಿಸಲು ಸಾಕಷ್ಟು ಹಣ ಬೇಕು. ಇದನ್ನು ಅಧ್ಯಾತ್ಮದ ಯೋಗದಿಂದ ಗಳಿಸಲು ಸುಜ್ಞಾನ ಅಗತ್ಯವಿದೆ. ಸುಜ್ಞಾನದಿಂದ ಗಳಿಸಿದ ಹಣವನ್ನು ದಾನಧರ್ಮ ಕ್ಕೆ ಬಳಸಲು ಉತ್ತಮ ಸರ್ಕಾರದ ಅಗತ್ಯವಿದೆ. ಮನೆಯೊಳಗೆ ಹೊರಗೆ ಇಂತಹ ಸರ್ಕಾರವಿದ್ದರೆ ಸುಖನಿದ್ರೆ ಸಾಧ್ಯ.
ಸುಖನಿದ್ರೆ ಎಂದು ಸಾವಿಗೆ ಹೇಳುವರು.
ಯಾರಿಗೆ ಕೊನೆಗಾಲದಲ್ಲಿ ಸುಖ ನಿದ್ರೆ,ನೆಮ್ಮದಿ ಆತ್ಮತೃಪ್ತಿ ಇರುವುದೋ ಅದೇನಿಜವಾದ ಸ್ವರ್ಗ ಎನ್ನುವುದು ಅಧ್ಯಾತ್ಮ ಸತ್ಯ. ಇದು ಕರ್ಮ ಫಲದ ಲೆಕ್ಕಾಚಾರವಾಗಿರುತ್ತದೆ. ಯಾರಿಗೂ ಈ ಲೆಕ್ಕಾಚಾರ ಸಂಪೂರ್ಣ ಅರ್ಥ ವಾಗದು. ಪರಮಾತ್ಮನ ವಶದಲ್ಲಿರುವ ಜೀವಾತ್ಮನಿಗೆ ಪಾಪ ಪುಣ್ಯ ಲಾಭನಷ್ಟಗಳ ಸುಳಿಯಲ್ಲಿ ಸುಖ ದು:ಖಗಳ ನಡುವೆ ಜೀವನ ನಡೆಸೋದನ್ನು ಯಾವುದೇ ಸರ್ಕಾರ ತಡೆಯಲಾಗದು ಎನ್ನುವುದು ಪೂರ್ಣ ಸತ್ಯ. ನಾನು ಹೋಗುವ ವರೆಗೆ ಲೆಕ್ಕಾಚಾರ ಮುಗಿಯದು. ಆದ್ದರಿಂದ ಸಾಧ್ಯವಾದಷ್ಟು ಲೆಕ್ಕಾಚಾರದಿಂದ ದೂರವಿದ್ದು ಪಾಲಿಗೆ ಬಂದದ್ದು ಪಂಚಾಮೃತವೆಂದು ಸೇವಿಸಿದರೆ ಉತ್ತಮ ನಿದ್ರೆ.ಇದೇ ಜೀವನ್ಮುಕ್ತಿಯ ಮಾರ್ಗ ಎಂದಿರುವರು ಮಹಾತ್ಮರಾದವರು. ಆದರೆ ಮಾಯಾವಶದಲ್ಲಿರುವ ಜೀವನಿಗೆ ಪರಮಾತ್ಮನ ದರ್ಶ ನವಾಗದೆ ಭೂಮಿಯಲ್ಲಿ ಮಲಗಿನಿದ್ರೆ ಮಾಡೋದೇ ಸುಖವಾದಾಗ ಮಲಗುವ ಮೊದಲು ಪರಮಾತ್ಮನ ಸ್ಮರಣೆ ಮಾಡುವ ಭಾಗ್ಯವಿದ್ದರೆ ಅದೇ ಯೋಗವಾಗಬಹುದು. ಬೇಡೋನು ದೀನ ಸ್ಮರಿಸೋನೇ ಜಾಣ. ಯಾರನ್ನು ಬೇಡಿದರೂ ಸಾಲವೇ.
ಸಾಲವೇ ಅದು.
ವ್ಯಕ್ತಿಗಳಮೂಲಕವೇ ಶಕ್ತಿ ತನ್ನ ಕೆಲಸ ಮಾಡಿಸೋದು. ತನ್ನ ದೈಹಿಕಸುಖಕ್ಕೆ ಸ್ಪಂದಿಸುವವರು ಒಳ್ಳೆಯವರೆನಿಸಿ ಅಧ್ಯಾತ್ಮ ಸುಖವನ್ನು ನಿರ್ಲಕ್ಯ ಮಾಡಿದರೆ ಕೊನೆಯಲ್ಲಿ ದೈಹಿಕ ಸುಖವೂ ಇರದು ಅಧ್ಯಾತ್ಮ ಸುಖವೂ ಇರದು. ಯಾರನ್ನು ದ್ವೇಷ ಮಾಡಿದರೂ ಪರಮಾತ್ಮನ ಅರಿವಾಗದು.ಹೀಗಾಗಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಲ್ಲರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ನಾವು ಹೇಗೆ ಬಳಸಿಕೊಳ್ಳುವೆವೋ ಹಾಗೆ ಬೆಳೆಯುತ್ತದೆ. ಇದರಿಂದ ಸಾಲಮನ್ನಾ ಆಗುವುದೆ? ಅಥವಾ ಬೆಳೆಯುವುದೆ ಎನ್ನುವ ಅರಿವಿದ್ದರೆ ಅದೇ ಜ್ಞಾನದ ಲಕ್ಷಣವಾಗುತ್ತದೆ. ಕಷ್ಟ ನಷ್ಟ ಲಾಭನಷ್ಟ ಎಲ್ಲಾ ವ್ಯವಹಾರಿಕವಾದರೆ ಧರ್ಮ ಕುಸಿಯುತ್ತದೆ. ಧರ್ಮ ಕುಸಿದಾಗ ಸತ್ಯ ಅರ್ಥ ವಾಗದೆ ಜೀವಹೋಗುತ್ತದೆ .ಜೀವವೇ ಹೋದಮೇಲೆ ಆಸ್ತಿ ಹಣ ಅಧಿಕಾರ ಎಲ್ಲಾ ಪರರ ಪಾಲಾಗುತ್ತದೆ. ಹಾಗಾಗಿ ಜ್ಞಾನವನ್ನು ಆಸ್ತಿ ಮಾಡಿಕೊಂಡವರು ಹೊರಗಿನ ಸರ್ಕಾರ ಒಳಗಿನ ಸರ್ಕಾರಕ್ಕೆ ಒತ್ತುಕೊಡದೆ ಸ್ವತಂತ್ರ ವಾಗಿ ಆತ್ಮರಕ್ಷಣೆಯ ಕಡೆಗೆ ನಡೆದರು.
ಈಗ ಕಾಲ ಬದಲಾಗಿದೆ ಜನಬಲ ಹಣಬಲ ಅಧಿಕಾರ ಬಲ ಒಳಗೆ ಹೊರಗೆ ಓಡುತ್ತಿದೆ. ಓಡುತ್ತಿರುವವರ ಹಿಂದೆ ಮನಸ್ಸೂ ಓಡುತ್ತಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಯೋಗ ಜನಕಲಿಯುತ್ತಿದ್ದಾರೆಂದರೆ ಮಾನವನಿಗೆ ಬದಲಾವಣೆ ಒಳಗೇ ಆದಾಗ ನಿಜವಾದ ಸುಖದ ಅರಿವಾಗುತ್ತದೆ. ಹೀಗಾಗಿಹಿಂದಿನವರು ಹಿಂದೂಗಳಾಗಿಯೇ ಸನಾತನ ಧರ್ಮದ ಸೂಕ್ಮ ಸತ್ಯವನರಿತು ಅವರವರಮನೆ ಮನಸ್ಸನ್ನು ಸ್ವತಂತ್ರ ವಾಗಿರುವ ಆತ್ಮಜ್ಞಾನದ ಶಿಕ್ಷಣ ಪಡೆದು ಅಧ್ಯಾತ್ಮ ಸಂಶೋಧನೆಯಿಂದ ದೇಹವನ್ನು ದೇಶವನ್ನು ವಿಶ್ವ ಗುರು ಸ್ಥಾನಕ್ಕೆ ತಂದಿದ್ದರು.ಈಗ ಹೊರಗೆ ನಡೆದರೆ ಸತ್ಯ ಅರಿವಿಗೆ ಬರುವುದೆ? ಒಟ್ಟಿನಲ್ಲಿ ದಾರಿ ಒಳಗಿದೆ. ನಿದ್ರೆ ಊಟ ಮಾಡಲು ಪುರುಸೊತ್ತಿಲ್ಲದೆ ಹಣಸಂಪಾದನೆಯತ್ತ ನಡೆದ ಮಾನವನಿಗೆ ತನಗೆ ತಾನೇ ಶತ್ರುವಾಗಿರುವ ಸತ್ಯದ ಅರಿವಿಲ್ಲದೆ ಹೊರಗಿನವರನ್ನು ಎಲ್ಲದ್ದಕ್ಕೂ ಕಾರಣವೆಂದು ಹೋರಾಟಕ್ಕೆ ಇಳಿದರೆ ಜ್ಞಾನ ಬರೋದಿಲ್ಲ.
No comments:
Post a Comment