ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Tuesday, July 1, 2025

ಶೂರವೀರರಿಗೆ ಸತ್ಯ ಧರ್ಮ ಬೇಡವೆ?

ನಾವೆಷ್ಟೇ ವೀರ ಶೂರರಾಗಿದ್ದರೂ ಭೂಮಿ ಆಳೋದಕ್ಕೆ  ಸತ್ಯಧರ್ಮ ಅಗತ್ಯವಿದೆ. ಹೆಣ್ಣು ಹೊನ್ನು ಮಣ್ಣಿನ ಋಣ ಸಂಧಾಯ ಕಷ್ಟ. ಧರ್ಮಕ್ಕೆ ಜಯ ಸತ್ಯವೇ ದೇವರು ಎಂದು ಎಷ್ಟೋ  ಮಹಾತ್ಮರುಗಳು  ಭೂಮಿಯಲ್ಲಿದ್ದು ಜೀವನ‌ನಡೆಸಿದರು. ಅದರಲ್ಲಿ ವೀರರು ಶೂರರು ಎನ್ನುವ ರಾಜಮಹಾರಾಜರುಗಳಿದ್ದಾರೆ. ಮಹಾಯತಿಗಳು‌ ಮಹರ್ಷಿಗಳು  ಇದ್ದರು, ಮಹಾಪಂಡಿತರು ಜ್ಞಾನಿಗಳಿದ್ದರು.
ಮಹಾ ಕವಿ ಸಾಹಿತಿಗಳಿದ್ದರು.  ಕಾಯಕವೇ ಕೈಲಾಸವೆಂದ ಕರ್ಮ ಯೋಗಿಗಳಿದ್ದರು.
 ಭೂ ಸೇವೆಯಲ್ಲಿ ಎಲ್ಲರಿಗಿಂತ ಹತ್ತಿರವಿದ್ದವರು  ಕರ್ಮ ಯೋಗಿಗಳೆ ಆಗಿದ್ದರು. ಹೀಗಾಗಿ ಭೂಮಿಯ ಋಣ ತೀರಿಸಲು ಸರಳ ಜೀವನದಲ್ಲಿಯೇ ಸಾಧ್ಯವಾಗಿತ್ತು.
ವೈಭೋಗದೆಡೆಗೆ‌ನಡೆದವರಿಗೆ ಭೂಮಿ ಕಾಣದೆ ಆಕಾಶದೆತ್ತರ ಬೆಳೆದರೂ ಕೊನೆಗಾಲದಲ್ಲಿ ಭೂ ತಾಯಿಯ‌ಮಡಿಲಲ್ಲೇ ಸಾಯೋದನ್ನು ತಡೆಯಲಾಗಿಲ್ಲ. 
ಭೂತಾಯಿಯನ್ನು  ಅರಿತು‌ನಡೆಯುವುದು ಕಷ್ಟ. ಕಾರಣ ತಮ್ಮ ಕಾಲುಬುಡ ನೋಡಿಕೊಂಡು ನಡೆಯೋದು ಕಲಿಯಬೇಕಿದೆ. ಇಂದು ನಾವು ಹೊರಗಿನ ಕಸ ಸ್ವಚ್ಚ ಮಾಡಲು ಸಾಕಷ್ಟು  ರಾಜಕೀಯ‌ನಡೆಸುತ್ತಿದ್ದೇವೆ.ಒಳಗೇ ತುಂಬಿರುವ ನಕಾರಾತ್ಮಕ ವಿಷಯಗಳನ್ನು ಹೊತ್ತು ಜೀವನ ನಡೆದಿದೆ ಎಂದರೆ ಸ್ವಚ್ಚತೆ ಎಲ್ಲಿ ಕಾಣುತ್ತದೆ?
 ಮಾನಸಿಕ‌ನೆಮ್ಮದಿಗಾಗಿ ಮನೆ ಬಿಟ್ಟು ಕಾಡಿಗೆ ಹೋಗುತ್ತಿದ್ದ ಅಂದಿನ ಸಂನ್ಯಾಸಿಗೂ  ನಾಡಿನಲ್ಲಿದ್ದೇ ಬಂಗಲೆಗಳಲ್ಲಿ  ಏಕಾಂತವಾಗಿರುವವರಿಗೂ ವ್ಯತ್ಯಾಸವಿದೆ. ಕಾಡಿನಲ್ಲಿ ಕಷ್ಟ ಪಟ್ಟು  ಜೀವಿಸಬೇಕು.ನಾಡಿನಲ್ಲಿ  ಕಷ್ಟಪಡದೆ ಇಷ್ಟದಿಂದ ಜೀವನ ನಡೆಸಬಹುದು. ಆದರೆ ಸಮಾಜದ ಋಣ ತೀರದು,ಭೂ ಋಣ ತೀರದು. ಹೀಗಾಗಿ ಪರಮಾತ್ಮನ ಅರಿಯಲಾಗದು. ಭೂಮಿ ಆ ಪರಮಾತ್ಮನ ಸೊಂಟದ ಭಾಗದ ಒಂದು ಗ್ರಹವಷ್ಟೆ. ಅದರಲ್ಲಿ ‌ಮನುಕುಲದ ವಾಸ. ಆ ವಾಸದಲ್ಲಿ ಸಾಕಷ್ಟು ವಾಸನೆಗಳ ಆಸೆ. ಆಸೆಯೇ ದು;ಖದ ಮೂಲ. ಎಲ್ಲಿಯವರೆಗೆ ಇತರರ ಹಂಗಿನಲ್ಲಿದ್ದು ಸಾಲ ತೀರಿಸದ  ಕರ್ಮ  ಮಾಡುವನೋ ಅಲ್ಲಿಯವರೆಗೆ ಕರ್ಮ ಯೋಗಿಯಾಗಲಾರ. ಕರ್ಮ ವೇ ಮಾಡದ‌ಜ್ಞಾನ ಇದ್ದು ಉಪಯೋಗವಿಲ್ಲ. ಜ್ಞಾನಯೋಗವೆಂದರೆ ಅದು ಒಳಗಿನ ಶಕ್ತಿ. ಮಾನವನಲ್ಲಿ ಮೊದಲೇ ಇರುವ ಜ್ಞಾನ ಅಂದರೆ ತಿಳುವಳಿಕೆಯನ್ನು ಇನ್ನಷ್ಟು ವಿಶೇಷವಾಗಿ ಅರಿತು  ಯೋಗಿ ಆಗಿ ಬಾಳುವವರೆ ಜ್ಞಾನಯೋಗಿ.ಇದು ಸತ್ವತತ್ವ ಸತ್ಯದ ಪರವಾಗಿದ್ದರೆ ಸಾತ್ವಿಕ ಜೀವನದಿಂದ ಋಣ ಕಳೆಯುವುದು.
ರಾಜಸಿಕ ತಾಮಸಿಕತೆಯ ಕಡೆಗೆ ಹೊರಟರೆ  ಭೌತ ವಿಜ್ಞಾನ
ಆಳುವುದು. ಎರಡೂ ಒಂದೇ ನಾಣ್ಯದ ಎರಡು‌ಮುಖ.
ಯಾವ‌ಮುಖ ಗೆಲ್ಲುವುದೋ ಅದು  ನಮ್ಮ ಕರ್ಮದ ಮೇಲಿರುವುದು.
ಜ್ಞಾನದಾಸೋಹ,ಅನ್ನದಾನ, ಇನ್ನಷ್ಟು ಉಚಿತ ದಾನಗಳಿವೆ.
ಉಚಿತವಾಗಿ ಪಡೆದದ್ದನ್ನು  ಸಾಲವೆಂದರಿತು ಅದಕ್ಕೆ ತಕ್ಕಂತೆ ಜಪ ತಪ ಧ್ಯಾನ ಪೂಜೆ ಸೇವಾಕಾರ್ಯ ನಡೆಸಿದಾಗಲೇ ನಿಜವಾದ ಶಾಂತಿ ಒಳಗೆ ಕಾಣಬಹುದು.ಶಾಂತಿ ಹಣದಿಂದ ಗಳಿಸಲಾಗದು.ಜ್ಞಾನದಿಂದ ಗಳಿಸಬೇಕು.
ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ ಬಂದರೂ ಜನರಿಗೆ ಜ್ಞಾನದ ಶಿಕ್ಷಣ ಕೊಡದೆ ಆಳೋದೇ ರಾಜಕೀಯದ ಗುರಿ ಎಂದರೆ ಅಧರ್ಮಕ್ಕೆ ತಕ್ಕಂತೆ ಫಲವೂ ಇದೆ. ಯಾರಿಗೋ ಉಪದೇಶ ಉಪಕಾರ ‌ ಮಾಡೋ‌ಮೊದಲು ನಮ್ಮೊಳಗೇ ಏನಿದೆ ಎನ್ನುವ ಜ್ಞಾನದಿಂದ ಜೀವನ ನಡೆಸಿದವರಿಗೆ ಭೂಮಿಯ ಸತ್ಯ ಸತ್ವ ತತ್ವದ ಅರಿವಾಗುತ್ತದೆ.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದಂತೆ
ಹೆಣ್ಣಿಗೊಂದು  ಕಾಲ   ಗಂಡಿಗೊಂದು ಕಾಲ. ಯಾವಾಗ ಭಾರತ  ವಿದೇಶಿಗಳ ಗುಲಾಮಗಿರಿಯನ್ನು ಪ್ರಗತಿ ಎಂದು ಸ್ವೀಕರಿಸಿತೋ ಅಂದಿನಿಂದಲೂ  ಅವರ ಕೈ ಕೆಳಗೆ ದುಡಿಯುವುದೇ  ಆಗಿದೆ. ಭೂ ತಾಯಿ ಸೇವೆಗೆ ಹೊರಗೆ ಹೋಗುವ ಅಗತ್ಯವಿಲ್ಲ.ಒಳಗಿದ್ದೆ  ಮಾಡಲು ಮನಸ್ಸಿಲ್ಲದ ಮಂದಿ  ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿ ‌ಮೈ ಮರೆತರೆ ಭೂ ತಾಯಿ ಕಾಣಳು.

No comments:

Post a Comment