ಪ್ರತಿಯೊಂದು ಸ್ಪರ್ಧೆಯಲ್ಲಿ ಸೋಲು ಗೆಲುವಿರುತ್ತದೆ. ಸೋತವರು ಗೆದ್ದವರನ್ನು ಅನುಸರಿಸುತ್ತಾರೆ.ಆದರೆ ಸೋತವರನ್ನು ಗೆದ್ದವರು ಅನುಸರಿಸುವುದಿಲ್ಲ.ಇದು ಕೇವಲ ಭೌತಿಕದ ಸ್ಪರ್ಧೆಯಷ್ಟೆ. ಅಧ್ಯಾತ್ಮ ದಲ್ಲಿ ಸೋಲೇ ಗೆಲುವಿನ ಮೆಟ್ಟಿಲು . ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆಗೆ ಯಾರೂ ಇರೋದಿಲ್ಲ ಆದರೆ ಅದೇ ಅವನನ್ನು ಗೆಲುವಿನತ್ತ ನಡೆಸುತ್ತದೆ.ಗೆದ್ದವನೊಂದಿಗೆ ಜನರಿದ್ದರೂ ಅವನು ಇನ್ನೊಮ್ಮೆ ಸೋಲಲೇ ಬೇಕು. ಜೀವನವಿಡೀ ಗೆದ್ದವರಿಲ್ಲ ಹಾಗೆ ಸೋತವರಿಲ್ಲ. ಕಾಲಚಕ್ರ ತಿರಯಗುತ್ತಲೇ ಇರುತ್ತದೆ.
ದುಷ್ಟರು ಒಳ್ಳೆಯವರಾಗಬಹುದು.ಒಳ್ಳೆಯವರು ದುಷ್ಟರಾಗಬಹುದು.ಯಾವುದೂ ಶಾಶ್ವತವಲ್ಲ.ಹೀಗಾಗಿ ಭಗವದ್ಗೀತೆ ಯಲ್ಲಿ ಸ್ಥಿತಪ್ರಜ್ಞಾವಂತರಾಗಲು ತಿಳಿಸಿರೊದು.
ಒಮ್ಮೆ ನಾವು ಗೆದ್ದರೆ ಜನ ಹತ್ತಿರವಿರುವರು ಸೋತಾಗ ದೂರ ಹೋಗುವರೆಂದರೆ ನಮ್ಮ ಸ್ಥಿತಿಗೆ ತಕ್ಕಂತೆ ಜನಬಲ ಹಣಬಲ ಅಧಿಕಾರಬಲ. ಯಾವಾಗಿದು ಪರಿಸ್ಥಿತಿ ಮೀರಿ ಹೋಗುವುದೋ ಎಲ್ಲಾ ಬಲವೂ ಕುಸಿಯುತ್ತದೆ. ಹೀಗಾಗಿ ಯಾವುದಕ್ಕೂ ಅಂಟಿಕೊಳ್ಳದೆ ಇದ್ದೂ ಇಲ್ಲದಂತಿರಬೇಕು ಎಂದರು.
ಈಗಿನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವೇ ಸ್ಪರ್ಧೆಯ ಕೇಂದ್ರಬಿಂದು. ಯಾರಿಗೆ ಯಾವಾಗ ಯಾಕೆ ಸ್ಪರ್ಧೆ ನಡೆಸಬೇಕು ಯಾವ ಸ್ಪರ್ಧೆ ಯಾರೊಂದಿಗೆ ಎಷ್ಟು ನಡೆಸಬೇಕೆಂಬ ಅರಿವಿಲ್ಲದೆ ಸ್ಪರ್ಧೆಗಿಳಿದರೆ ಗೊತ್ತಿಲ್ಲದೆ ಜೀವನದ ಅತ್ಯುತ್ತಮ ಸಮಯವನ್ನು ಕಳೆದುಕೊಂಡವರೆ ಹೆಚ್ಚು. ಕೊನೆಯಲ್ಲಿ ವಯಸ್ಸು ಮೀರಿ ಆಯಸ್ಸು ಇಲ್ಲದೆ ಸೋತಮುಖಹಾಕಿಕೊಂಡರೆ ಉಪಯೋಗವಿಲ್ಲ.
ಸ್ಪರ್ಧೆ ಯಾವತ್ತೂ ಯೋಗ್ಯವಿಷಯಗಳತ್ತ ನಡೆಸಿದರೆ ಜ್ಞಾನ ಬರುತ್ತದೆ. ಮಕ್ಕಳಿರುವಾಗ ಒಂದು ಸಣ್ಣ ಆಟದ ಸ್ಪರ್ಧೆ ಸಂತೋಷಕೊಡುತ್ತದೆ.ಅದೇ ದೊಡ್ಡವರಾದ ಮೇಲಿರದು.ಅಂದರೆ ನಮ್ಮ ಜ್ಞಾನ ಬೆಳೆಯುವ ಸ್ಪರ್ಧೆಗಳು ಅಧ್ಯಾತ್ಮ ದ ಉನ್ನತಿಗೆ ಸಹಕರಿಸಿದರೆ ಸೋತರೂ ಗೆದ್ದಂತೆ.
ಕಾರಣ ಒಳಗಿಳಿಯೋದು ಕಷ್ಟ. ಈ ಕಷ್ಟದ ಕೆಲಸದಲ್ಲಿ ಕೆಲವರಿಗೆ ಬೇಗ ಗೆಲುವು ಸಿಕ್ಕರೆ ಕೆಲವರಿಗೆ ನಿಧಾನ. ಆದರೆ ನಿಧಾನವೇ ಪ್ರಧಾನವಾಗಿರುವುದು ಅಧ್ಯಾತ್ಮ ಸಾಧನೆ.ಕಾರಣ ಕಾಲ ಬದಲಾದಂತೆಲ್ಲಾ ಹೊಸಹೊಸ ವಿಷಯಗಳು ಬೆಳಕಿಗೆ ಬರುತ್ತದೆ. ಅದು ಸತ್ಯವಾಗಿದ್ದರೆ ಸಮಾಧಾನ.ಹೀಗಾಗಿ ಮೊದಲು ಸೋತರೂ ಕೊನೆಯಲ್ಲಿ ಗೆಲ್ಲೋದು ಸತ್ಯವೇ ಎನ್ನುವುದು ಸನಾತನ ಧರ್ಮ. ಇದನ್ನು ರಾಜಕೀಯದಿಂದ ತಿಳಿಯಲಾಗದು.ರಾಜಕೀಯ ಹೊರಗಿನ ಸತ್ಯ ತಿಳಿಸಿದರೆ ರಾಜಯೋಗ ಒಳಗಿನ ಸತ್ಯದೆಡೆಗೆ ನಡೆಸುತ್ತಾ ತನ್ನ ತಾನರಿಯಲು ಸೋಲಿನ ಪಾಠ ಕಲಿಸುತ್ತಲೇ ಗೆಲುವಿನೆಡೆಗೆ ನಡೆಸುವುದರಿಂದ ಹೆಚ್ಚಿನ ಜನ ಆ ದಾರಿಯಲ್ಲಿ ನಡೆಯಲು ನಿರಾಕರಿಸುವುದರಿಂದ ಸತ್ಯ ಅರ್ಥ ವಾಗದು. ಒಟ್ಟಿನಲ್ಲಿ ಮಹಾತ್ಮರುಗಳಾದವರು ಹೊರಗಿನ ಸ್ಪರ್ಧೆ ಯಿಂದ ದೂರ ಉಳಿದಿದ್ದರು. ಆದರೆ ಅವರನ್ನು ಹೊರಗಿನವರು ಗೆಲ್ಲಲು ತಡೆಒಡ್ಡಿದ್ದರೂ ಪರಮಾತ್ಮನ ಸಾಕ್ಷಾತ್ಕಾರ ಕ್ಕಾಗಿ ಪ್ರಯತ್ನ ನಡೆದಿತ್ತು. ಇದೇ ಇಂದಿಗೂ ಅವರು ಪೂಜನೀಯ ಸ್ಥಾನ ಪಡೆಯಲು ಕಾರಣ.ಕಷ್ಟಪಟ್ಟರೆ ಸುಖವಿದೆ. ಆದರೆ ದಾರಿ ಸರಿಯಿದ್ದರೆ ಆತ್ಮಕ್ಕೆ ಸುಖ.
No comments:
Post a Comment