ಸೃಷ ಶಾಸ್ತ್ರ ದ ಹಿಂದೆ ಒಂದು ವಿಜ್ಞಾನ ಅಡಗಿರುತ್ತದೆ.ಆ ವಿಜ್ಞಾನದಿಂದ ಮನಸ್ಸಿಗೆ ಶಾಂತಿ ಆತ್ಮಕ್ಕೆ ತೃಪ್ತಿ ಸಿಗುವುದೆಂದರೆ ಶಾಸ್ತ್ರ ಕ್ಕೆಬೆಲೆ. ಇಲ್ಲವೆಂದರೆ ಅಪ್ಪ ನೆಟ್ಟ ಆಲದ ಮರವೆಂದು ನೇಣುಹಾಕಿಕೊಂಡರೆ ವ್ಯರ್ಥ ವಷ್ಟೆ. ಶಾಸ್ತ್ರ ಮರೆತಷ್ಟೂ ಶಸ್ತ್ರ ಪ್ರಯೋಗ ಆಗುತ್ತದೆ. ಆದರೆ ಶಾಸ್ತ್ರ ಅರ್ಥ ವಾಗದಿದ್ದರೂ ಶಸ್ತ್ರ ಹಿಡಿದು ಹೋರಾಡೋರೂ ಬೆಳೆಯಬಹುದು. ಅದಕ್ಕಾಗಿ ಶಾಸ್ತ್ರ ಸಮ್ಮತವಾದ ಕರ್ಮಗಳ ಮೂಲಕವೇ ಶಾಸ್ತ್ರೀಯ ಸ್ಥಾನ ಮಾನ ಸಿಗೋದು.
ಇದು ಧರ್ಮ ,ಭಾಷೆ, ಸಂಸ್ಕೃತಿ ದೇಶ,ದೇಹದಿಂದ ಮನಸ್ಸಿನ ಜೊತೆಗೆ ಆತ್ಮಕ್ಕೂ ಶಾಂತಿ ಕೊಡಬೇಕಾದರೆ ಶಾಸ್ತ್ರ ಜ್ಞಾನ ಅಗತ್ಯವಿದೆ.
ಭಾರತೀಯ ಶಾಸ್ತ್ರ ಜ್ಞಾನ ಶಾಸ್ತ್ರೀಯ ಸಂಗೀತ,ನೃತ್ಯ....ಎಲ್ಲಾ ಕಲೆಯೂ ಜನರನ್ನು ಒಂದು ಮಾಡುವ ಗುರಿಯೆಡೆಗೆ ಅಂದರೆ ತತ್ವಜ್ಞಾನದೆಡೆಗೆನಡೆಸಿ ವಿಶ್ವವನ್ನು ಒಂದು ಕುಟುಂಬ ಎಂದಿದೆ.
ಪಾಶ್ಚಾತ್ಯರ ಪ್ರವೇಶದಿಂದ ಒಳಗಿದ್ದ ತತ್ವ ಹಿಂದುಳಿದು ಹೊರಗಿನ ತಂತ್ರ ಮುಂದೆ ನಡೆದು ಈಗಲೂ ತಂತ್ರಕ್ಕೆ ಸ್ಥಾನಮಾನ ಇದರಿಂದ ಸ್ವತಂತ್ರ ಜ್ಞಾನಕ್ಕೆ ಪೆಟ್ಟು. ಕೃಷ್ಣನನ್ನು ಜಗದ್ಗುರು ಎಂದಿದೆ. ಜಗತ್ತಿಗೇ ಜ್ಞಾನದ ಬೆಳಕನ್ನು ಕೊಡುವ ಭಾರತ ವಿಶ್ವಗುರು ಸ್ಥಾನಮಾನ ಪಡೆದಿದೆ ಎಂದಾಗ ನಾವೀಗ ಶಸ್ತ್ರ ಹಿಡಿದು ಹೊರಗೆ ಹೊರಡಲು ಕಾರಣವೇನಾಗಿದೆ? ಶಾಸ್ತ್ರ ವಿದ್ಯೆಗಿಂತ ಶಸ್ತ್ರ ವಿದ್ಯೆಗೇ ಹೆಚ್ಚು ಮಹತ್ವ ಕೊಟ್ಟಿರೋದು ಎಂದರೆ ತಪ್ಪಾಗುವುದೆ?
ಯಾವಾಗಲೂ ಅಷ್ಟೇ ಯಾವುದೂ ಅತಿಯಾಗಬಾರದು. ಶಾಸ್ತ್ರ ನಮ್ಮ ಮನಸ್ಸಿಗೆ ಹಿಡಿಸದಿದ್ದರೂ ಶಸ್ತ್ರ ಕ್ರಿಯೆ ಆಗುತ್ತದೆ. ಒತ್ತಡ ಒತ್ತಾಯದ ಯಾವುದೂ ಕೆಲಸವಾದರೂ ಮನಸ್ಸನ್ನು ಹದಗೆಡಿಸುತ್ತದೆ.ಹದಗೆಟ್ಟ ಮನಸ್ಸು ಶಸ್ತ್ರ ಹಿಡಿಯುವಷ್ಟು ಬೆಳೆಯುತ್ತದೆ. ಇದನ್ನು ತಡೆಯಲು ಶಾಸ್ತ್ರ ದ ಹಿಂದಿನ ವಿಜ್ಞಾನ ಅರ್ಥ ಮಾಡಿಕೊಂಡು ಮಾಡಿಸೋದು ಅಗತ್ಯ. ಯಾರೋ ಯಾವುದೋ ಕಾಲದಲ್ಲಿ ತಮ್ಮ ಮನಸ್ಸಿಗೆ ಶಾಂತಿ ಸಿಗಲು ಮಾಡಿರುವ ಶಾಸ್ತ್ರ ಕ್ಕಿಂತ ಜ್ಞಾನಿಗಳಾದವರು ಮನುಕುಲದ ಒಳಿತಿಗಾಗಿ ಆತ್ಮಶಾಂತಿಗಾಗಿ ಮಾಡಿರುವ ಶಾಸ್ತ್ರ ಬಹಳ ಅಗತ್ಯ. ಮೂಲ ಬಿಟ್ಟು ರೆಂಬೆಕೊಂಬೆಗಳನ್ನು ನೆಚ್ಚಿಕೊಂಡರೆ ಕಷ್ಟವಿದೆ. ನಷ್ಟವೂ ಇದೆ. ಒಟ್ಟಿನಲ್ಲಿ ಶಾಸ್ತ್ರ ಸಂಪ್ರದಾಯ ಆಚಾರ ವಿಚಾರಪ್ರಚಾರಗಳು ಹೊರಗೆ ಬೆಳೆಸುವಮೊದಲು ಒಳಗಿದ್ದು ಅದರ ವಿಚಾರ ಅರ್ಥ ಮಾಡಿಕೊಂಡರೆ ಉತ್ತಮ ಶಾಂತಿ ಸಮಾಧಾನ ತೃಪ್ತಿ ಸಿಗುತ್ತದೆ ಎನ್ನುವುದು ಸನಾತನ ಧರ್ಮ.
ಮೂಲಾಧಾರವನರಿತು ಸಹಸ್ರಾರದವರೆಗೆ ಏರುವುದು ಶಾಸ್ತ್ರ. ಮೂಲವನ್ನೇಮರೆತು ಎತ್ತರಕ್ಕೆ ಹಾರುವುದರಿಂದ ಶಸ್ತ್ರ ಕ್ರಿಯೆ ಹೆಚ್ಚುವುದು. ನಿಧಾನವೇ ಪ್ರಧಾನ. ಅವಸರವೇ ಅಪಘಾತಕ್ಕೆ ಕಾರಣ. ಇದು ಕಲಿಕೆಯ ಪ್ರಭಾವ. ತಲೆಗೆ ಕೊಡುವ ಕೆಲಸ ಹೃದಯಕ್ಕೆ ಭಾರವಾಗಬಾರದು. ಹೃದಯವಂತಿಕೆ ಬೆಳೆಸಬೇಕಿದೆ ಎನ್ನುವುದು ಸನಾತನ ಮಾನವ ಧರ್ಮ.
No comments:
Post a Comment