ಇತ್ತೀಚೆಗೆ ಕೆಲವರು ವಿಷ್ಣು ಸಹಸ್ರನಾಮ, ಲಲಿತಸಹಸ್ರನಾಮ, ಇನ್ನೂ ಅನೇಕ ದೇವತೆಗಳ ಸಹಸ್ರನಾಮದ ಹೆಸರನ್ನು ಇಡುತ್ತಿರುವುದು ಶುಭಸೂಚನೆಯೆ ಆಗಿದೆ.ಆದರೆ, ಮಕ್ಕಳಿಗೆ ಕೊಡುವ ಶಿಕ್ಷಣವೇ ಸರಿಯಿಲ್ಲವಾದರೆ ದೇವರಾದರೂ ಏನು ಮಾಡಲು ಸಾಧ್ಯ? ಅಸುರರ ಹೆಸರಿನಲ್ಲಿ ಸುರರ ಜಪವಾದಂತಾಗುತ್ತದೆ.ಹೆಸರಿನಲ್ಲೇನಿದೆ ? ಹೆಸರಿನಲ್ಲೇ ಎಲ್ಲಾ ಇರೋದು.ಹಿಂದಿನ ಕಾಲದಲ್ಲಿ ದೇವತೆಗಳ ಹೆಸರಿಟ್ಟು ಕೊನೆಪಕ್ಷ ಮಕ್ಕಳನ್ನು ಕರೆಯುವಾಗ ದೇವರ ಹೆಸರು ಬಾಯಲ್ಲಿ ಬರುವುದೆನ್ನುವ ಉದ್ದೇಶವಿತ್ತು. ಆದರೆ ಇಂದಿನ ಮಕ್ಕಳು ಮಾಡುವತಪ್ಪು ಹೆಚ್ಚಾದಂತೆ ದೇವರ ಹೆಸರನ್ನು ಇಟ್ಟವರು ಬೈದರೂ ತಪ್ಪಾಗುತ್ತದೆ ಅಂತಹ ಶಿಕ್ಷಣ ಕೊಟ್ಟು ತಮ್ಮ ತಪ್ಪಿಗೆ ತಾವೇ ಬೆಲೆ ಕಟ್ಟಬೇಕಾಗುತ್ತಿದೆ ಎಂದರೆ ತಪ್ಪಿಲ್ಲ.
ಹೆಸರುಮಾಡೋದಕ್ಕಾಗಿಯೇ ಅಡ್ಡದಾರಿ ಹಿಡಿದವರು ಬೆಳೆದು ನಿಂತು ನಿಜವಾಗಿಯೂ ಒಳ್ಳೆಯ ದಾರಿಯಲ್ಲಿ ನಡೆದವರ ಹೆಸರು ಕೆಡಿಸುವವರೂ ಇದ್ದಾರೆಂದರೆ ಕಲಿಕೆಯಲ್ಲಿ ದೋಷವಿದೆ. ಕಲಿಯುಗದ ಪ್ರಭಾವದಿಂದಾಗಿ ಅಸುರರ ವಶದಲ್ಲಿ ಸುರರು ಇದ್ದು ತಮ್ಮ ಹೆಸರಿಗಾಗಿ ಜನರನ್ನು ಅಸುರರಿಗೆ ಒಪ್ಪಿಸುವುದು ಅಧರ್ಮ. ಹೀಗಾಗಿ ಹಿಂದೂ ಸನಾತನ ಧರ್ಮ ದೈವತ್ವಕ್ಕಾಗಿ ಬೆಲೆಕೊಟ್ಟಿದೆ. ಜೀವಾತ್ಮನಿಗೆ ಇಡುವ ಹೆಸರು ಪರಮಾತ್ಮನ ಒಂದು ಸಣ್ಣ ಬಿಂದುವಷ್ಟೆ. ಹೀಗಿರುವಾಗ ಪರಮಾತ್ಮನೆಡೆಗೆ ಆ ಹೆಸರು ನಡೆದಾಗ ಜೀವನ ಸಾರ್ಥಕ ಎನ್ನುವರು.
ಪ್ರತಿಯೊಂದು ಜೀವಿಗೂ ಹೆಸರಿದೆ ಅದು ಮಾನವನೇ ಇಟ್ಟ ಹೆಸರಾಗಿದೆ. ದೇವನೊಬ್ಬನೆ ನಾಮ ಹಲವು, ದೇಶ ಒಂದೇ ಪ್ರಜೆಗಳು ಹಲವರು, ಈ ಹಲವು ದೈವತ್ವದೆಡೆಗೆ ನಡೆದರೆ ಶಾಂತಿ ಸಮೃದ್ದಿ ಸಂತೋಷ ಆತ್ಮತೃಪ್ತಿ ಜೀವನ್ಮುಕ್ತಿ.
ಅಸುರತ್ವದೆಡೆಗೆ ಹೊರಟರೆ ಅತೃಪ್ತಿ,ಅಶಾಂತಿ,ಅಸಮಧಾನ, ಕ್ರಾಂತಿಕಾರಕ ಜೀವನ. ಕ್ರಾಂತಿ ಮಾಡುವವರಿಗೆ ಹೆಚ್ಚಿನ ಸಹಕಾರ ಕೊಟ್ಟರೆ ಶಾಂತಿ ಕಳೆದುಕೊಂಡಂತೆ.ಹಾಗೆ ಸತ್ಯ ಧರ್ಮದಲ್ಲಿ ನಡೆದವರನ್ನು ನಿರ್ಲಕ್ಷ್ಯ ಮಾಡಿ ಹೊರಗೆ ನಡೆದಷ್ಟೂ ಲಕ್ಷ ಲಕ್ಷ ಹಣವಿದ್ದರೂ ಹೆಸರು ಮಾಡಿ ಉಪಯೋಗವಿಲ್ಲ. ಜನ ಹಣ,ಅಧಿಕಾರವಿರೋವರೆಗೆ ಹೆಸರಿನ ಹಿಂದೆ ನಿಲ್ಲುವರು.ಹೋದಮೇಲೆ ದೂರತಳ್ಳುವರು. ಆದರೆ ಪರಮಾತ್ಮನ ಹೆಸರಿನ ಹಿಂದೆ ನಡೆದವರನ್ನು ಪರಮಾತ್ಮ ರಕ್ಷಣೆ ಮಾಡಿರೋದನ್ನು ನಮ್ಮ ಪುರಾಣ ತಿಳಿಸಿದೆ. ಒಟ್ಟಿನಲ್ಲಿ ಹೆಸರಿಗಾಗಿ ನಡೆಸೋ ಹೋರಾಟ ಹಾರಾಟ ಮಾರಾಟದಲ್ಲಿ ಸತ್ಯ ಧರ್ಮ ವಿದ್ದರೆ ದೈವರಕ್ಷಣೆ.ಇಲ್ಲವಾದರೆ ಅಸುರರ ಶಿಕ್ಷೆ ಅನುಭವಿಸಬೇಕು.
ದೈವಶಕ್ತಿ ಒಳಗಿರುವುದರಿಂದ ಒಳಗೇ ಕಂಡುಕೊಂಡವರು ಮಹಾತ್ಮರಾದರು. ಈಗ ಮಹಾತ್ಮರ ಹೆಸರಿನಲ್ಲಿ ತಮ್ಮ ಹೆಸರು ಬೆಳೆಸಿಕೊಂಡು ಅಸುರರಿಗೆ ಮಣೆ ಹಾಕಿದರೆ ಏನರ್ಥ? ಅನರ್ಥಕ್ಕೆ ಕಾರಣವಾಗದಂತೆ ಹೆಸರನ್ನು ಬಳಸುವುದು ಅಗತ್ಯವಾಗಿದೆ. ಮಕ್ಕಳ ಜ್ಞಾನ ಗುರುತಿಸಿ ಶಿಕ್ಷಣ ನೀಡಿದಾಗ ಹೆಸರುವಾಸಿಯಾಗುವರು.ಅದೇ ಮಕ್ಕಳು ಯಾರದ್ದೋ ಜ್ಞಾನವನ್ನು ಅರ್ಧ ತಿಳಿದು ಹೊರನಡೆದು ಹೆಸರಿಗಾಗಿ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೂ ಹೆಸರುಗಳಿಸಬಹುದು ಆದರೆ ಇದು ಶಾಶ್ವತವಿರದು.ಶಾಂತಿ ತೃಪ್ತಿ ಸಿಗದು. ಪ್ರಾಣಿಪಕ್ಷಿ ಜೀವಜಂತುಗಳಿಗೂ ಹೆಸರಿದೆ ಆದರೆ ಅದರ ಮೇಲೆ ಅವುಗಳ ಜೀವನವಿಲ್ಲ.ಮಾನವನಿಗಷ್ಟೆ
ಇದು ಅಗತ್ಯವಾಗಿದೆ.ತಮ್ಮ ಹೆಸರನ್ನು ಉಳಿಸಿಕೊಳ್ಳಲು ಇತರರ ಹೆಸರನ್ನು ಬಳಸುವಾಗ ಎಚ್ಚರವಿರಬೇಕು. ಸುಪ್ರಸಿದ್ದ, ಪ್ರಸಿದ್ದ, ಕುಪ್ರಸಿದ್ದವಾಗೋದು ಹೆಸರಿನಿಂದಲೇ ಆದರೆ ಅದಕ್ಕೆ ಬೇರೆ ಬೇರೆ ಮಾರ್ಗವೂ ಇದೆ. ಶಾಶ್ವತ ವಾದ ಹೆಸರು ಪರಮಾತ್ಮನ ಒಳಗಿದೆ.
ಮಹಾತ್ಮರ ಹೆಸರಿನಲ್ಲಿ ಭ್ರಷ್ಟರ ರಾಜಕೀಯ ಒಳ್ಳೆಯದಲ್ಲ.
ಮಹಿಳೆ ಮಕ್ಕಳನ್ನು ರಾಜಕೀಯಕ್ಕೆಳೆದು ಹೆಸರು ಮಾಡೋದು ಅಧರ್ಮಕ್ಕೆ ದಾರಿಯಾಗಬಹುದು ಆಗಿದೆ. ಪುರಾಷ ಪುರುಷ ಸ್ತ್ರೀ ಯರಲ್ಲಿದ್ದ ಧಾರ್ಮಿಕ ಶಕ್ತಿ ಈಗಿಲ್ಲ ಕಾರಣ ಅವರ ಹೆಸರಿನಲ್ಲಿ ವ್ಯವಹಾರ ಬೆಳೆದಿದೆ ಹಣ ಅಧಿಕಾರ ಸಿಕ್ಕಿದೆ ಜ್ಞಾನದ ಶಿಕ್ಷಣ ಸಿಗಲಿಲ್ಲವಷ್ಟೆ.ಇದಕ್ಕೆ ಕಾರಣರು ಯಾರು? ನಾವೇ ಪೋಷಕರೆ ಕಾರಣವೆಂದರೂ ತಪ್ಪಾಗಬಹುದು. ಶಿಕ್ಷಣ ವ್ಯವಸ್ಥೆ ಹೆಸರಿಗಾಗಿ ಮಕ್ಕಳನ್ನು ಬಳಸಿರುವುದು ದುರಂತ. ಕೆಲವೆಡೆ ಬದಲಾವಣೆ ಆಗಿದ್ದರೂ ಹೆಚ್ಚಿನ ಕಡೆ ಬದಲಾವಣೆ ಆಗಿಲ್ಲ.ದೇಶದಹೆಸರಿಗೇಮಸಿ ಬಳಿದು ದೇಶದೊಳಗೆ ಹೆಸರು ಮಾಡಿದರೆಉಪಯೋಗವಿಲ್ಲ.
ನಾವು ಇರೋದೆಲ್ಲಿ?
ಪರಮಾತ್ಮನ ಒಳಗಿರೋದು ಸತ್ಯ ಹಾಗೆ ದೇಶ,ರಾಜ್ಯ,
ಗ್ರಾಮ,ಕುಟುಂಬ, ಸಂಸಾರದೊಳಗೇ ಇರುವ ಈ ಹೆಸರನ್ನು ಇಟ್ಟವರು ಯಾರೆಂಬ ಸತ್ಯ ಅರ್ಥ ವಾದರೆ ಅವರ ಹೆಸರಿನ ಹಿಂದೆ ದೈವಶಕ್ತಿ ಇತ್ತೋ ಇಲ್ಲವೋ ತಿಳಿದು ನಡೆಯುವುದಕ್ಕೂ ಜ್ಞಾನದ ಶಿಕ್ಷಣ ಬೇಕು. ನಮ್ಮ ಭಾರತೀಯ ಶಿಕ್ಷಣದಲ್ಲಿ ಆತ್ಮತೃಪ್ತಿ ಸಿಗುತ್ತಿತ್ತು.ಇಂದು ಅತೃಪ್ತರೆ ಹೆಚ್ಚಾಗಿದ್ದಾರೆ ಕಾರಣ ರಾಜಕೀಯವಷ್ಟೆ. ಜನ್ಮ ಜನ್ಮಕ್ಕೂ ಬದಲಾಗುವಹೆಸರಿನ ಹಿಂದಿರುವ ಶಕ್ತಿ ಯಾವುದು? ದೈವಶಕ್ತಿ ಯೋ? ಅಸುರಿ ಶಕ್ತಿಯೋ?
No comments:
Post a Comment