ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, July 1, 2025

ವೇದಕ್ಕೂ ಗಾದೆಗೂ ಅಂತರವಿದೆಯೆ?

"ವೇದ ಸುಳ್ಳಾದರೂ  ಗಾದೆ ಸುಳ್ಳಾಗದು" ಎಂದಿರುವರು. ವೇದಕಾಲದಿಂದಲೂ ಜಗತ್ತು ಬದಲಾಗುತ್ತಲೇ ಇದೆ. ಇದಕ್ಕೆ ಕಾರಣವೇ ಅನುಭವದ ಜ್ಞಾನ. ಇದು ಕೆಟ್ಟದ್ದೋ ಒಳ್ಳೆಯದೋ ಒಟ್ಟಿನಲ್ಲಿ ಜೀವಾತ್ಮನ ಅನುಭವಕ್ಕೆ ‌ಬಂದದ್ದೇ  ಗಾದೆ ಮಾತಾಗುತ್ತಾ ಮುಂದೆ ನಡೆದಿದೆ. ವೇದ ಶಾಸ್ತ್ರ ಪುರಾಣಗಳ ಹಿಂದಿರುವ ಅಧ್ಯಾತ್ಮಿಕ ಸತ್ಯವರಿತವರಿಗೆ ವಿವೇಕ ಹೆಚ್ಚಾಯಿತು. ವಿವೇಕಾನಂದ ವಿಚಾರವನ್ನು  ವೇದನೆಯಿಲ್ಲದೆ ಕಾಣುವ ಆನಂದ. ಹಾಗೆ ವಿಷಯವನ್ನು ವೇದ ಶಾಸ್ತ್ರ ಪುರಾಣಗಳಿಂದ ಅರಿತು  ಕಾಣುವ ಆತ್ಮಾನಂದ ಎಂದರೆ ಸರಿಯಾಗಬಹುದು.
ಕಾಲದ ಪ್ರಭಾವದಿಂದಾಗಿ ಕಲಿಕೆಯ ದಾರಿ ತಪ್ಪಿದೆ. ವಿವೇಕವನ್ನು ಹೊರಗಿನಿಂದ ಬೆಳೆಸುವ. ಪ್ರಯತ್ನ ಸಾಗಿದೆ. ಆದರೆ ಆನಂದ ಯಾರಿಗೆ ಸಿಕ್ಕಿದೆ? ಯಾವುದರಲ್ಲಿ ಸಿಗುತ್ತಿದೆ? ಯಾರು ಕೊಡುತ್ತಿರುವುದು ಎಂದರೆ ತಾತ್ಕಾಲಿಕ ಸಂತೋಷಕ್ಕಾಗಿ ಶಾಶ್ವತವಾದ ವಿವೇಕ ಮರೆತು , ಸಂಸಾರದ ಜವಾಬ್ದಾರಿಯನ್ನು  ಸರ್ಕಾರದ ಮೇಲೆ ಏರಿಸಿ,  ನಿಷ್ಟೆಯಿಲ್ಲದೆ ಪ್ರಾಮಾಣಿಕತೆಯೂ ಇಲ್ಲದೆ  ಹಣದ ಹಿಂದೆ ನಡೆದಷ್ಟೂ ಅವಿವೇಕತನದಿಂದ  ಮಾನವನ ಜೀವನ  ವ್ಯರ್ಥ ವಾದರೂ ಯಾರೂ ಸತ್ಯ ತಿಳಿಸೋದಿಲ್ಲ.ತಿಳಿಸಿದರೂ ಅರ್ಥ ವಾಗದ ಪರಿಸ್ಥಿತಿ. ಒಟ್ಟಿನಲ್ಲಿ ಮೇಲಿರುವ ಶಕ್ತಿಗಿಂತ ಕೆಳಗಿರುವ ಶಕ್ತಿಯ ದಾಸರಾದವರ  ಸಂಖ್ಯೆ ಬೆಳೆದಷ್ಟೂ ಅಸುರಿ ಶಕ್ತಿಯ ಅಧೀನದಲ್ಲಿ  ದೈವಶಕ್ತಿ. ಇದಕ್ಕೆ ಕಾರಣವೇ ಮಧ್ಯವರ್ತಿ ಮಾನವನ ಸಹಕಾರ. ನಮ್ಮ ಒಳ್ಳೆಯ ಶಕ್ತಿಯನ್ನು ಯಾರಿಗೆ ಕೊಡಬೇಕಿದೆ? ಯಾರೊಳಗೆ ಯಾರು  ಇರೋದು? ಕಣ್ಣಿಗೆ ಕಾಣದ ಶಕ್ತಿಯಿಂದ ಏನಾದರೂ ಸಾಧಿಸಬಹುದು.ಆದರೆ ಅದರ ಹಿಂದಿನ ಗುರಿ ಉತ್ತಮವಿದ್ದರೆ ಸದ್ಗತಿ.ಇಲ್ಲದಿದ್ದರೆ ದುರ್ಗತಿ.

No comments:

Post a Comment