ಅಪ್ಪಂದಿರ ದಿನಾಚರಣೆ
ವಿಶ್ವ ಅಮ್ಮಂದಿರ ದಿನಾಚರಣೆ ಅಪ್ಪಂದಿರ ದಿನಾಚರಣೆ ಪ್ರತಿವರ್ಷ ಎಲ್ಲಾ ಆಚರಣೆಯಂತೆ ನಡೆದು ಬಂದಿದೆ. ಭಾರತದಂತಹ ಕುಟುಂಬ ವ್ಯವಸ್ಥೆ ಯಲ್ಲಿ ಇದರ ಅಗತ್ಯವಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಇದು ಅಗತ್ಯವೆನಿಸುತ್ತದೆ. ಕೂಡು ಕುಟುಂಬ ಮರೆಯಾಗುತ್ತ ಮಕ್ಕಳು ಪೋಷಕರ ನಡುವೆ ಅಂತರ ಬೆಳೆದಂತೆಲ್ಲಾ ವಿದೇಶಿಗಳ ಆಚರಣೆಯೂ ಜಾರಿಗೆಬರುತ್ತವೆ. ಇಲ್ಲಿ ಒಂದು ದಿನ ನೆನಪಿಸಿಕೊಳ್ಳಲು ಅವರೇನು ದೂರದವರಲ್ಲ. ಹೀಗೇ ದೇವಾನುದೇವತೆಗಳನ್ನು ಪ್ರತಿದಿನ ನೆನಪಿಸಿಕೊಳ್ಳುವಂತೆ ಪೋಷಕರನ್ನು ಮಕ್ಕಳು ನೆನಪಿಸಿಕೊಳ್ಳಲು ಕಷ್ಟ. ಕಾರಣ ದೊಡ್ಡವರಾದ ಮೇಲೆ ಮಕ್ಕಳ ಮನಸ್ಸು ಹೊರಗಿನ ಜಗತ್ತಿನಲ್ಲಿ ಹರಿದಾಡುವಾಗ ಒಳಜಗತ್ತಿನ ಸತ್ಯದ ಅರಿವಿರದು.
ಏನೇ ಇರಲಿ ತಾಯಿ ತಂದೆಯರಾಗಿ ತಮ್ಮ ಧರ್ಮ ಕರ್ಮ ಕ್ಕೆ ತಕ್ಕಂತೆ ಸಂಸಾರ ನಡೆಸುತ್ತಾ ಮಕ್ಕಳನ್ನು ಒಂದು ಘಟ್ಟಕ್ಕೆ ತರುವುದು ದೊಡ್ಡ ಸಾಧನೆ ಎನ್ನುವ ಕಾಲದಲ್ಲಿದ್ದೇವೆ. ಹಿಂದಿನ ಕಾಲದಲ್ಲಿ ಅನೇಕಮಕ್ಕಳನ್ನು ಸಾಕಿಸಲಹಿ ಸ್ವತಂತ್ರ ಜೀವನನಡೆಸಲು ಸಹಕಾರ ಕೊಟ್ಟು ತಮ್ಮ ನ್ನು ಗೌರವದಿಂದ ಕಾಣುವಂತಹ ಜ್ಞಾನವುಳ್ಳ ಮಕ್ಕಳಿಗೆ ಈ ಒಂದು ದಿನದ ಆಚರಣೆಯ ಅಗತ್ಯವಿರಲಿಲ್ಲ. ಈಗಮಕ್ಕಳು ಮೊಮ್ಮಕ್ಕಳವರೆಗೂ ತಾವೇ ಜವಾಬ್ದಾರಿ ಹೊತ್ತು ಅವರ ಹಿಂದೆ ಹೋಗುವ ಹಿರಿಯರಿಗೆ ಕಿರಿಯರು ಗೌರವಿಸೋದಿಲ್ಲ.ಕಾರಣವಿಷ್ಟೆ ಜ್ಞಾನದ ಕೊರತೆ. ಭಕ್ತಿ ಭಯವಿಲ್ಲದ ಶಿಕ್ಷಣ ನೀಡಿ ದೈಹಿಕಶಕ್ತಿ ಬಂದಾಗ ಇದೇ ಆಗೋದು ವ್ಯಕ್ತಿಯ ಕಥೆ. ಏನಂತೀರ?
ಹಲವು ಸಂಸಾರದಲ್ಲಿ ಗೌರವದಿಂದ ನಡೆಸುಕೊಳ್ಳುವಮಕ್ಕಳಿದ್ದಾರೆ. ಇದು ನಮ್ಮ ಸನಾತನಧರ್ಮದ ಪ್ರಭಾವವಷ್ಟೆ. ನಾವೆಲ್ಲರೂ
ಪರಮಾತ್ಮನ ಮಕ್ಕಳು, ಭಗವಂತನಮಕ್ಕಳು ದೇವರಮಕ್ಕಳು ಎನ್ನುವುದು ಸುಲಭ. ಆದರೆ ಭೂಮಿಯಲ್ಲಿ ಜನ್ಮ ಪಡೆಯಲು ಕಾರಣರಾದ ತಂದೆತಾಯಿಯರನ್ನು ಬಿಟ್ಟು ಯಾರಾದರೂ ದೇವರನ್ನು ನೋಡಲು ಹೋದವರಿಗೆ ದೇವರು ಕಂಡಿರಬಹುದು ಪರಮಾತ್ಮನ ದರ್ಶನವಾಗಿರದು. ಅದರಲ್ಲಿ ತಂದೆತಾಯಿಯರ ಸಹಕಾರವಿಲ್ಲದೆ ವಿರೋಧವಿದ್ದರಂತೂ ಅತಂತ್ರ ಜೀವನ. ಅವರ ಒಪ್ಪಿಗೆ ಇಲ್ಲದೆ ಸಂನ್ಯಾಸ ಸ್ವೀಕರಿಸುವುದೂ ಧರ್ಮಕ್ಕೆ ವಿರುದ್ದ. ಒಟ್ಟಿನಲ್ಲಿ ಜೀವ ಕೊಟ್ಟು ಜೀವನ ನಡೆಸಲು ಬಿಟ್ಟು ಭೂಮಿಯ ಮೇಲಿರುವ ತಂದೆತಾಯಿಯರ ಮಕ್ಕಳು ಆಕಾಶದಲ್ಲಿ ಹೊಳೆಯುವ ನಕ್ಷತ್ರವಾಗೋದು ಕನಸು. ಹೀಗಾಗಿ ನಾಟಕದ ನಕ್ಷತ್ರದೆಡೆಗೆ ಮನೆಯಿಂದ ದೂರ ಹೋಗುತ್ತಿದ್ದರೆ ಸಾಧಕರು ಎನ್ನಿಸಿಕೊಂಡರೆ ಅಧ್ಯಾತ್ಮ ಜಗತ್ತು ಒಪ್ಪುವುದೆ?
ಮಕ್ಕಳಿಲ್ಲದ ಮನೆ ಹಿಂದಿರಲಿಲ್ಲ. ಈಗ ಮಕ್ಕಳಿರದ ಮನೆಯೇ ಹೆಚ್ಚಾಗುತ್ತಿದೆ.. ಕಾರಣ ಮಕ್ಕಳಿಗೆ ಹಣ ತೋರಿಸಿ ಹೊರಗೆ ಬೆಳೆಸಿರೋದು. ಅದೇ ಹಣದಿಂದ ಒಳಗಿರುವ ಜ್ಞಾನಕ್ಕೆ ಉತ್ತಮ ಶಿಕ್ಷಣ ಕೊಟ್ಟು ಸಂಸ್ಕಾರ ನೀಡಿದರೆ ದೇಶದ ನಕ್ಷತ್ರಗಳಾಗುವರು. ಸ್ವಯಂ ಪ್ರೇರಿತ ರಾಗೋದಕ್ಕೆ ಸ್ವತಂತ್ರ ಜ್ಞಾನ ಅಗತ್ಯವಿದೆ. ಇದನ್ನು ತಂದೆ ತಾಯಿಯರು ಗಮನಿಸುವುದು ಬೆಳೆಸುವುದು ಅವರ ಜ್ಞಾನದ ಮೇಲಿದೆ. ಅವರಿಗೇ ಸ್ವತಂತ್ರ ವಿಲ್ಲವಾದಾಗ. ಮಕ್ಕಳು ಎತ್ತ ಸಾಗುವರು?
No comments:
Post a Comment