ಜೀವನದಲ್ಲಿ ಸೋಲು ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಮಾನವನ ಸೋಲು ದೇವಾಸುರರುಗಳ ಗೆಲುವಾಗಬಹುದು ಸೋಲು ಆಗಬಹುದು.ಮಾನವ ಕೇವಲ ಕಾರಣಮಾತ್ರದವನಷ್ಟೆ. ಇದನ್ನು ಅದ್ವೈತ ದಲ್ಲಿ ನಾನೆಂಬುದಿಲ್ಲ ಎಂದರೆ ದ್ವೈತದಲ್ಲಿ ನಾನು ಕಾರಣಮಾತ್ರ.
ಹಾಗಾದರೆ ನಾನ್ಯಾರು? ಪ್ರಶ್ನೆ ಹುಟ್ಟಿದ್ದು ಒಳಗಿಂದಲೆ ಹೊರಗಿಂದಲೆ?
ಎಲ್ಲಾ ನಾನೇ ಎನ್ನುವ ಪರಮಾತ್ಮನ ಸತ್ಯವನರಿತವರು ಎಲ್ಲರಲ್ಲಿಯೂ ನಿಂತುನಡೆಸೋಪರಮಾತ್ಮನ ಕಂಡು ಸೋಲು ಗೆಲುವುಗಳನ್ನು ಮೀರಿ ನಡೆದರು.
ಒಟ್ಟಿನಲ್ಲಿ ನಮ್ಮ ನಡೆ ನುಡಿಯ ಅಂತರಗಳಲ್ಲಿ ಸಾಕಷ್ಟು ಏರು ಪೇರುಗಳಾಗುತ್ತಲೇ ಹೋಗುತ್ತದೆ. ಏರಿದವರು ಇಳಿಯಲೇಬೇಕು ಆಗ ಇಳಿದವರು ಏರುವುದು ಸಹಜ.
ಸೋತವರು ಗೆದ್ದವರಿಗಿಂತ ಸಣ್ಣವರಲ್ಲ.ಗೆದ್ದವರು ಸೋತವರಿಗಿಂತ ದೊಡ್ಡವರಾಗಲ್ಲ. ಯಾವಾಗ ಸೋಲನ್ನು ಒಪ್ಪಿ ಮುಂದೆ ಮುಂದೆ ಸರಿಯಾದ ದಾರಿಯಲ್ಲಿ ನಡೆಯಲು ಕಲಿಯುವರೋ ಆಗಲೇ ಗೆಲುವು.ತಪ್ಪು ಮಾಡೋದು ಸಹಜ.ತಪ್ಪನ್ನು ತಿದ್ದಿ ನಡೆಯೋದೆ ಸಾಹಸ.
ಸಾಹಸ ಕಾರ್ಯದ ಮಧ್ಯೆ ಸಾಕಷ್ಟು ಅಸಹಕಾರ ಅಸಹ್ಯಕರ ಅಸಮಾನತೆ ,ಅಸತ್ಯಗಳು ಎದುರಾಗುತ್ತವೆ. ಆದರೆ ಅದನ್ನು ದಾಟಿಕೊಂಡು ಹೋಗುವವರು ವಿರಳ. ಅಂತಹವರು ಅಧ್ಯಾತ್ಮಿಕ ಸಾಧಕರೂ ಆಗಿರುವರು.ಭೌತಿಕದಲ್ಲಿಯೂ ಸಾಧಕರಾಗಿರುವರು.ಇವರಿಬ್ಬರ ನಡುವೆ ನಿಂತು ಅಡೆತಡೆಗಳನ್ನು ಸೃಷ್ಟಿ ಮಾಡುವ ಮಾನವರೂ ಈ ಕಡೆ ಸತ್ಯ ಇನ್ನೊಂದು ಕಡೆ ಅಸತ್ಯವನ್ನು ಹಿಡಿದು ನಿಲ್ಲುವರು.
ಯಾವುದೂ ಅತಿಯಾಗದಂತೆ ತಡೆಯುವವರು ಇವರೆ ಆಗಿರುವರು.
No comments:
Post a Comment